Monday, December 10, 2012

Daily Crime Incident for December 10, 2012


ಅಪಘಾತ ಪ್ರಕರಣ

ಕೊಣಾಜೆ ಠಾಣೆ; 


  • ದಿನಾಂಕ: 06-12-2012 ರಂದು ಮಧ್ಯಾಹ್ನ 2-00 ಗಂಟೆಗೆ ಮುಡಿಪು ಕಡೆಯಿಂದ ಕೊಣಾಜೆ ಕಡೆಗೆ ಅಬ್ದುಲ್ ರಹಿಮಾನ್ರವರು ಅವರ ಬಾಬ್ತು ಬೈಕು ನಂಬ್ರ ಕೆಎ.19ಇಜಿ. 2301 ರಲ್ಲಿ ಶ್ರೀಮತಿ ಸೌದಾ ಎಂಬವರನ್ನು ಕುಳ್ಳಿರಿಸಿ ಚಲಾಯಿಸಿಕೊಂಡು ಮಂಗಳೂರು ತಾಲೂಕು ಕೊಣಾಜೆ  ಗ್ರಾಮದ ಯುನಿವಸರ್ಿಟಿ ಬಸ್ ಸ್ಟಾಂಡ್ ಎದುರುಗಡಯೆ  ಸ್ಥಳಕ್ಕೆ ತಲುಪುವಾಗ ಅತೀ ವೇಗದಿಂದ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹಾಕಿದಾಗ ಸಹ ಸವಾರಿ ಸೌದಾ ಎಂಬವರು ರಸ್ತೆಗೆ ಬಿದ್ದು ಅವರ ತಲೆಗೆ ತೀವ್ರ ಗಾಯವಾಗಿ ಅವರನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆಯಲ್ಲಿದಾಖಲು ಮಾಡಲಾಗಿದ್ದು ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು. ಆರೋಪಿಯವರು ಪೊಲೀಸರಿಗೆ ಕೂಡಾ ಮಾಹಿತಿಯನ್ನು ನೀಡದೇ ಇದ್ದು ಸೌದಾಳ ಗಂಡ ಮಲೇಶಿಯಾದಲ್ಲಿ ಇರುವುದರಿಂದ, ಕಬೀರ್ (21) ತಂದೆ: ಹಸನ್, ವಾಸ: ಪಾತೂರುಮನೆ, ಪುತ್ತೂರು ಗ್ರಾಮ ಮಂಜೇಶ್ವರ ಕಾಸರಗೋಡು ರವರಿಗೆ  ದೂರವಾಣಿಯಲ್ಲಿ ವಿಚಾರ ತಿಳಿಸಿ ಈ ದಿನ ಅವಳ ಗಂಡ ರಜಾಕ್ ದೂರು ಕೊಡಲು ತಿಳಿಸಿದ ಪ್ರಕಾರ ದೂರನ್ನು ದಾಖಲು ಮಾಡಿ ಈ ಪ್ರಕರಣದಲ್ಲಿನ ಗಾಯಾಳು ಶ್ರೀಮತಿ ಸೌದಾ ಎಂಬವರು ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ತಲೆಗೆ ತೀವ್ರ ಗಾಯದಿಂದ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿಯಾಗಿದೇ ದಿನಾಂಕ 09.12.2012 ರಂದು ಸಂಜೆ 4:25 ಗಂಟೆಗೆ ಮೃತಪಟ್ಟಿರುವುದಾಗಿದೆ. ಆದುದರಿಂದ ಈ ಪ್ರಕರಣದಲ್ಲಿನ ಕಲಂ ಅನ್ನು  ಕಲಂ: 279, 304(ಎ) ಐ.ಪಿ.ಸಿ. ಜೊತೆಗೆ ಕಲಂ: 134(ಎ), 187 ಐ.ಎಂ.ವಿ. ಆಕ್ಟ್ ನಂತೆ ಪರಿವರ್ತನೆ ಮಾಡಿ ವರದಿಯ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಸಂಚಾರ ಪೂರ್ವ ಠಾಣೆ; 


  • ದಿನಾಂಕ 07-12-2012 ರಂದು ಸಮಯ ಸುಮಾರು ರಾತ್ರಿ 20-15 ಗಂಟೆಗೆ  ಫಿರ್ಯಾದಿದಾರರಾದ ಫಲ್ವೀಯಾ, ಮೀನ ಡಿ ಸೋಜ  (30ವರ್ಷ) ತಂದೆ: ದಿ.ಜೋಕಿಂ ಡಿ ಸೋಜ ವಾಸ: ಕುಚ್ಚಿಕಾಡ್ ಹೌಸ್, ಕಲ್ಪನೆ, ಕುಲಶೇಖರ , ಮಂಗಳೂರು. ತಾಯಿ ಸ್ಟೆಲ್ಲಾ ಡಿಸೋಜಾರವರ ಜೊತೆ ಕುಲಶೇಖರ ಚಚರ್್ಗೆ ಹೋಗಿದ್ದ ನಾವು ಕುಲಶೇೆಖರ ಕಲ್ಪನೆಯ ಬಳಿ ರಸ್ತೆ ದಾಟುವಾಗ ಶಕ್ತಿನಗರ ಕ್ರಾಸ್ ಕಡೆಯಿಂದ ಮೋಟಾರು ಸೈಕಲ್ ನಂಬ್ರ- ಏಂ-19-ಇಆ-8452ನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ತಾಯಿಗೆ ಡಿಕ್ಕಿ ಮಾಡಿದ ಪರಿಣಾಮ ಅವರು ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟಿಗೆ ಮತ್ತು ಎಡಕೆನ್ನೆಯ ಬಳಿ ಗುದ್ದಿದ ಗಾಯವಾಗಿ ಕೊಲಾಸೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಫೀರ್ಯಾದಿದಾರರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆಯ  ಅಪರಾದ ಕ್ರಮಾಂಕ 176/2012   ಕಲಂ 279, 337 ಐ.ಪಿ.ಸಿ, ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.




ಅಕ್ರಮ ಮನೆ ಪ್ರವೇಶ ಪ್ರಕರಣ

ಮಂಗಳೂರು ದಕ್ಷಿಣ ಠಾಣೆ; 


  • ದಿನಾಂಕ 8-12-12 ರಂದು ರಾತ್ರಿ ಸುಮಾರು 11-15 ಗಂಟೆ ಸಮಯಕ್ಕೆ ಫಿರ್ಯಾದಿ ಜಿ ಅಬ್ಬಾಸ್ ಅಲಿ ಎಂಬವರ ಒಡೆತನದ ಆಲಿಬಾಗ್ ಕಂಪೌಂಡ್ ಬ್ರೆಟ್ಟೋ ಲೇನ್, ಫಳ್ನೀರ್, ಮಂಗಳೂರು ಎಂಬಲ್ಲಿರುವ ಆರ್ಸಿಸಿ ಮನೆಯೊಳಗೆ ಸುಮಾರು 5-6 ಜನ ಅಪರಿಚಿತ ವ್ಯಕ್ತಿಗಳು ಮನೆಯ ಒಳಗಡೆ ಅಕ್ರಮ ಪ್ರವೇಶ ಮಾಡಿ ಮನೆಯ ಕಿಟಕಿ ಗಾಜುಗಳನ್ನು ಹುಡಿ ಮಾಡಿದಲ್ಲದೇ ಬಾಗಿಲನ್ನು ಕೂಡಾ ಗುದ್ದಿ ಜಖಂ ಗೊಳಿಸಿರುತ್ತಾರೆ. ಹಾಗೂ ಮನೆಯ ಒಳಗಡೆ ಬೆಂಕಿ ಹಾಕಿರುತ್ತಾರೆ. ಸದ್ರಿ ಬೆಂಕಿಯನ್ನು ನೆರೆಕರೆಯವರು ಬಂದು ನಂದಿಸಿರುತ್ತಾರೆ. ಇದರಿಂದ ನನಗೆ ಸುಮಾರು ರೂ 25,000/- ನಷ್ಟ ಉಂಟಾಗಿರುತ್ತದೆ ಎಂಬುದಾಗಿ ಶ್ರೀ ಜಿ ಅಬ್ಬಾಸ್ ಆಲಿ (68) ತಂದೆ: ದಿ: ಜಿ.ಎಮ್ ಕುಂಞಿ, ವಾಸ: ಆಲಿಭಾಗ್ ಕಂಪೌಂಡು, ಬ್ರಿಟೋ ಲೇನ್, ಫಳ್ನೀರ್, ಮಂಗಳೂರು ಇವರು ನೀಡಿದ ದೂರಿನಂತೆ ದಕ್ಷಿಣ ಠಾಣೆಯ  ಅಪರಾದ ಕ್ರಮಾಂಕ 218/12 ಕಲಂ 143-147-448-427-436 ಜೊತೆಗೆ 149 ಐಪಿಸಿ ಪ್ರಕಾರ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ 

ಬಜಪೆ ಠಾಣೆ;


  • ದಿನಾಂಕ 27/11/2012 ರಂದು ಮಧ್ಯಾಹ್ನ ಸುಮಾರು 12.00 ಗಂಟೆ ಸಮಯಕ್ಕೆ ಪಿಯರ್ಾದಿದಾರರ ಹೆಂಡತಿ ಶ್ರೀಮತಿ ದಮಯಂತಿ 45 ವರ್ಷ ಎಂಬವರು ಮಂಗಳೂರು ತಾಲೂಕು ಕೊಂಪದವು ಗ್ರಾಮದ ಮಂಜನಕಟ್ಟೆ ಎಂಬಲ್ಲಿ ಹುಲ್ಲು ಕೀಳುತ್ತಿರುವ ಸಮಯ ದಮಯಂತಿಯವರ ಬಲ ಕೈ ಬೆರಳಿಗೆ ಯಾವುದೋ ಒಂದು ವಿಷ ಜಂತು ಕಡಿದಿದ್ದು, ಅದೇ ದಿನ ಅದು ಉಲ್ಬಣಗೊಂಡು ದಮಯಂತಿಗೆ ಸರಿಯಾಗಿ ಮಾತನಾಡಲು ಆಗದೇ ಇದ್ದುದರಿಂದ ಅವರನ್ನು 108 ಆಂಬುಲೆನ್ಸ್ನಲ್ಲಿ ಸಂಜೆ 5.30 ಗಂಟೆಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಬಾಯಿಯಿಂದ ನೊರೆ ಬರುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ದಮಯಂತಿ ಈ ದಿನ ದಿನಾಂಕ 09-12-2012 ರಂದು  04.00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಎಂಬುದಾಗಿ ಫೀರ್ಯಾದಿದಾರರು ನೀಡಿದ ದೂರಿನಂತೆ ಬಜಪೆ ಠಾಣೆಯ  ಅಪರಾದ ಕ್ರಮಾಂಕ 49/2012 ಕಲಂ 174 ಸಿ ಆರ್ ಪಿ ಸಿ.ಐ.ಪಿ.ಸಿ, ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment