Sunday, December 23, 2012

Daily crime incidents For Dec 23, 2012


ಅಪಘಾತ ಪ್ರಕರಣ:

ಉಳ್ಳಾಲ ಠಾಣೆ;

ದಿನಾಂಕ 21.12.2012 ರಂದು ಫಿರ್ಯಾದಿದಾರರು ತೊಕ್ಕೊಟ್ಟುನಿಂದ ಧರ್ಮನಗರದಲ್ಲಿನ ತನ್ನ ಮಗಳು ಜಯಲಕ್ಷ್ಮಿ ಎಂಬವಳ ಮನಗೆ ನಡೆದುಕೊಂಡು ಹೋಗುತ್ತಿದ್ದು ಸುಮಾರು ಸಂಜೆ 7.00 ಗಂಟೆ ಸಮಯಕ್ಕೆ  ತೊಕ್ಕೊಟ್ಟು ಮಾಯಾ ಬಾರ್ & ರೆಸ್ಟೋರೆಂಟ್ ಹೊಟೇಲು  ಎದರು ತಲುಪಿದಾಗ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಮಿನಿ ಲಾರಿ ನಂಬ್ರ ಕೆಎ 20 ಎ 4431 ನೇಯದನ್ನು ಅದರ ಚಾಲಕ  ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಪಿರ್ಯಾದಿಯ ಎಡಕಾಲಿನ ಮೇಲೆ ಲಾರಿ ಚಲಿಸಿದ ಪರಿಣಾಮ ಎಡಕಾಲು ಜಖಂಗೊಂಡಿದ್ದು, ಅಲ್ಲಿ ಸೇರಿದವರು ನೇತಾಜಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿರುತ್ತಾರೆ. ಆದುದರಿಂದ ಸದ್ರಿ ಮಿನಿಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿದಾರರಾದ ಗಂಗಾದರ (65) ತಂದೆ - ದೂಮ ಬೆಳ್ಚಡ, ಸೂಟರ್ ಪೇಟೆ, ವೆಲೆನ್ಸಿಯಾ, ಮಂಗಳೂರು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 334/2012 ಕಲಂ 279,337  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕೊಲೆ ಪ್ರಕರಣ:

ಬಜಪೆ ಠಾಣೆ;

ದಿನಾಂಕ:22-12-2012ರಂದು 17.30 ಗಂಟೆಯ ಮೊದಲುಯಾರೋ ದುಷ್ಕಮರ್ಿಗಳು ಯಾವುದೋ ಕಾರಣದಿಂದ ಯಾವುದೋ ಸ್ಥಳದಲ್ಲಿ ಒಬ್ಬಅಪರಿಚಿತ ವ್ಯಕ್ತಿಯ ಮುಖಕ್ಕೆ, ಕುತ್ತಿಗೆಗೆ, ಹೊಟ್ಟೆಯ ಭಾಗಕ್ಕೆ ಹಾಗೂ ದೇಹದ ಇತರ ಭಾಗಗಳಿಗೆ ಹರಿತವಾದ ಆಯುಧಗಳಿಂದ ಇರಿದು ಕೊಲೆ ಮಾಡಿ ಮೃತದೇಹವನ್ನು ಮತ್ತುಕೊಲೆಯ ಸಾಕ್ಷಾಧಾರವನ್ನು ಮರೆಮಾಚುವಉದ್ದೇಶದಿಂದ  ಮಂಗಳೂರು ತಾಲೂಕು ಪೆಮರ್ುದೆಗ್ರಾಮದ ಬೊಳ್ಳುಳ್ಳಿ ಮಾರ್ ಮಾರ್ಗದ ಮೂರುಕೋಡಿ ಎಂಬಲ್ಲಿರುವ ಓ ಎಂ ಪಿ ಏಲ್ರವರ ಬಾಬ್ತು ಸ್ಥಳದಲ್ಲಿ ಬೆಳೆದ ಮರಗಿಡಗಳ ಪೊದೆಯಲ್ಲಿ ಬಿಸಾಡಿ ಹೋಗಿರುವುದಾಗಿರುತ್ತಾರೆ ಎಂಬುದಾಗಿ ಶ್ರೀ ಸಮಿವುಲ್ಲಾ, ಪ್ರಾಯ 32 ವರ್ಷ, ತಂದೆ: ಮೆಹಬುಬ್ಖಾನ್, ವಾಸ: ಪಟ್ಟಾಡಿ ಹೌಸ್, ಕೆ ಪಿ ನಗರ, ಬಜಪೆ ಅಂಚೆ ಮತ್ತುಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 249/2012 ಕಲಂ: 302,201 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ


ಹಲ್ಲೆ ನಡೆಸಿ, ಜೀವ ಬೆದರಿಕೆ ಪ್ರಕರಣ:


ದಕ್ಷಿಣ ಠಾಣೆ;

ದಿನಾಂಕ 14-12-2012 ರಂದು ರಾತ್ರಿ 8-15 ಗಂಟೆ ಸಮಯಕ್ಕೆ ಪಿಯರ್ಾದಿದಾರರು ಹಾಗೂ ಅವರ ಹೆಂಡತಿಯವರು ಮಂಗಳೂರು ಸವರ್ಿಸ್ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ತೆರಳುತ್ತಿದ್ದಾಗ, ಆರೋಪಿತರುಗಳಾದ ಗಣೇಶ ಮತ್ತು ಪ್ರಕಾಶ್ @ ಪಕ್ಕು ಎಂಬ ಬಸ್ ಏಜೆಂಟ್ರುಗಳು ಸಮಾನ ಉದ್ದೇಶದಿಂದ ಅಕ್ರಮವಾಗಿ ತಡೆದು ನಿಲ್ಲಿಸಿ ಬೇವಾಸರ್ಿ ಸೂಳೆ ಮಗನೇ, ನೀನು ಭಾರಿ ಹೆಣ್ಣು ಮಕ್ಕಳಿಗೆ ಕೆಲಸ ತೆಗೆಸಿಕೊಡುತ್ತೀಯಾ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮುಖಕ್ಕೆ ಹಾಗೂ ತಲೆಗೆ ಹೊಡೆದು ಕಾಲಿನಿಂದ ತುಳಿದು, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂಬುದಾಗಿ ಜೀವಬೆದರಿಕೆ ಹಾಕಿದ್ದು, ಪಿರ್ಯಾದಿದಾರರು ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಆರೋಪಿಗಳು ಹಲ್ಲೆ ನಡೆಸಿದ ಸಮಯ ಪಿರ್ಯಾದಿದಾರರ ಕಿಸೆಯಲ್ಲಿದ್ದ ರೂಪಾಯಿ  15,400/- ಹಾಗೂ ಚಿನ್ನದ ಚೈನು ಎಲ್ಲಿಯೋ ಬಿದ್ದು ಕಾಣೆಯಾಗಿರುತ್ತದೆ. ಇದರ ನಷ್ಟವನ್ನು ಆರೋಪಿಗಳು ಭರಿಸುವುದಾಗಿ ಹೇಳಿ ಈತನಕ ನಷ್ಟವನ್ನು ಪಾವತಿಸುರಿವುದಲ್ಲ ಎಂಬುದಾಗಿ  ಪಿರ್ಯಾದಿದಾರರಾದ ಶ್ರೀ ನವೀನ್ ಕುಮಾರ್ (30), ತಂದೆ: ನೀಲಯ್ಯ, ವಾಸ: ಮೂಡಲ್ ಬೆಟ್ಟು ಮನೆ, ಅಳಿಯೂರು ಅಂಚೆ, ವಲಪಾಡಿ ಗ್ರಾಮ, ಮೂಡಬಿದ್ರೆ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 223/12 ಕಲಂ 341 323 504 506  ಡಿ/ತಿ 34 ಕಅ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಗಂಡಸು ಕಾಣೆ ಪ್ರಕರಣ:

ದಕ್ಷಿಣ ಠಾಣೆ;

ದಿನಾಂಕ 21-12-2012 ರಂದು ಬೆಳಿಗ್ಗೆ 09-00 ಗಂಟೆಗೆ ಫಿಯರ್ಾದುದಾರರನ್ನು ಅವರ ತಾಯಿ ಮನೆ ಇರುವ ಹೊಯ್ಗೆ ಬಜಾರ್ನ ಮನೆಗೆ ಬಿಟ್ಟು ಗಿರೀಶ್ ಪುತ್ರನ್ರವರು ತಾತ್ಕಲಿಕವಾಗಿ ತಂಗುತ್ತಿದ್ದ ಮಂಗಳೂರು ನಗರದ ಹಂಪನ್ಕಟ್ಟೆಯಲ್ಲಿರುವ ಮೇಘಾ ಲಾಡ್ಜ್ ಹೋದವರು ಈವರೆಗೆ ವಾಪಾಸು ಮನೆಗೆ ಬಂದಿರುವುದಿಲ್ಲ. ಇವರನ್ನು ಪತ್ತೆ ಮಾಡಿಕೊಡುವಂತೆ ಪಿರ್ಯಾದಿದಾರರಾದ ಶ್ರೀಮತಿ ಪ್ರಪುಲ್ಲ (47), ಗಂಡ: ಗಿರೀಶ್ ಪುತ್ರನ್, ವಾಸ: ಹೇಮ ಸನದ, ಸುಭಸ್ ನಗರ, ಹೊಯ್ಗೆ ಬಜಾರ್, ಮಂಗಳೂರು ನೀಡಿದ ದೂರಿಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 224/12 ಕಲಂ ಗಂಡಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ನಿರ್ಲಕ್ಷತನದಿಂದ ಮರಣ ಪ್ರಕರಣ:

ಮಂಗಳೂರು ಗ್ರಾಮಾಂತರ ಠಾಣೆ;

:ದಿನಾಂಕ: 22.12.2012 ರಂದು ಬೆಳಿಗ್ಗೆಯಿಂದ ಮಂಗಳೂರು ನಗರದ ಕಪಿತಾನಿಯೋ ಸೈಮನ್ ಲೇನ್ ಎಂಬಲ್ಲಿ ಕುಡ್ಸೆಂಪ್ ಯೋಜನೆಯಡಿ ಶ್ರೀರಾಮ್ ಇ.ಪಿ.ಸಿ  ಲಿಮಿಟೆಡ್ ಕಂಪೆನಿಯ ಕೆಲಸದವರಾದ ಪಿರ್ಯಾದಿ ವೆಮಕಟೇಶ, ಭಾಸ್ಕರ, ರಾಜು, ಮತ್ತು ಪಿ. ರಮೇಶ ರವರು ಒಳ ಚರಮಡಿಯ ಪೈಪ್ ಜೋಡನೆ ಕೆಲಸವನ್ನು ಮಾಡಿಕೊಂಡಿದ್ದು ಕಂಪೆನಿಯ ಸಯಟ್ ಇಂಜಿನಿಯರ್ ರಘುನಾಥ್ ಶೆಟ್ಟಿ , ಮೆನೇಜರ್ ಬಾಲಸುಬ್ರಹ್ಮಣ್ಯಂ ಮತ್ತು ಜೆ.ಸಿ.ಬಿ ಚಾಲಕ ಸಮೀಮ್ ರವರು ಪಿರ್ಯಾದಿ ಹಾಗೂ ಇತರ ಕೆಲಸದವರಿಗೆ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳದೇ ಈ ದಿನ ಮಧ್ಯಾಹ್ನ 3.00 ಗಮಟೆಗೆ  ದುಡುಕು ಹಾಗೂ ನಿಲಕ್ಷ್ಯತನದಿಂದ  ಕೆಲಸ ಮಾಡಿಸಿದರ ಪರಿಣಾಮಾಲ್ಲದೆ, ಜೆ.ಸಿ.ಬಿ ಯಿಂದ  ಟ್ರಂಚ್ ಅಗೆಯುವ ಸಂದರ್ಬದಲ್ಲಿ ನೀರಿನ ಪೈಪ್ಗೆ ಜೆಸಿಬಿ ತಾಗಿ  ಕುಡಿಯುವ ನೀರಿನ ಪೈಪ್ ಒಡೆದು  ರಬಸದಲ್ಲಿ ಚಿಮ್ಮಿದ ನೀರಿನೊಳಗೆ ರಾಜು ಎಂಬವರು ನೀರು ಹಾಗೂ ಕೆಸರು ಮಣ್ಣಿನಲ್ಲಿ ಸಿಲುಕಿ ಮೃತಪಟ್ಟಿರುತ್ತಾರೆ ಎಂಬುದಾಗಿ ಬಿ. ವೆಂಕಟೇಶ್ ತಂದೆ: ಧವ್ರ್ಮರಾಜ್ ವಾಸ:  ಶ್ರೀರಾಮ್ ಇಪಿಸಿ ಲಿಮಿಟೆಡ್ ಲ್ಯಾನ್ಮಾಕ್ಸ್  2-75/1 ಹ್ರೆಟೇಲ್ ದೇವೇಂದ್ರ ಬಳಿ ಅಡುಮರೋಳಿ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 337/12 ಕಲಂ: 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment