Friday, December 28, 2012

Daily Crime Incidents for Dec 28, 2012


ದರೋಡೆ ಪ್ರಕರಣ:

ದಕ್ಷಿಣ ಠಾಣೆ;


  • ದಿನಾಂಕ 27-12-12 ರಂದು ಫಿರ್ಯಾದುದಾರರು ಮಂಗಳೂರು ನಗರದ ವಲೆನ್ಸಿಯಾದಲ್ಲಿ ಬಸ್ ಇಳಿದು ಗೋರಿಗುಡ್ಡ 4 ನೇ ಅಡ್ಡ ರಸ್ತೆಯಲ್ಲಿರುವ ತನ್ನ ಮನೆಗೆ ಹೋಗುತ್ತಿರುವಾಗ ಕಪ್ಪು ಬಣ್ಣದ ಮೋಟಾರು ಸೈಕಲ್ನಲ್ಲಿ ಕುಳಿತ್ತಿದ್ದ ಹಿಂಬದಿ ಸವಾರನು ಪ್ರಾಯ ಸುಮಾರು 30 ರಿಂದ 32 ವರ್ಷದ ಒಳಗಿನ ಯುವಕನು ಫಿರ್ಯಾದುದಾರರ ಕುತ್ತಿಗೆಗೆ ಕೈ ಹಾಕಿ  ಸುಮಾರು 4 ಪವನ್ ತೂಕದ ಚಿನ್ನದ ಕರಿಮಣಿ ಸರ ಹಾಗೂ ಸುಮಾರು 3 ಪವನ್ ತೂಕದ ಚಿನ್ನದ ಹವಳದ ಸರ ಅಂದಾಜು ಬೆಲೆ 1,20,000/- ಮೌಲ್ಯದ ಚಿನ್ನಾಭರಣಗಳನ್ನು ಕಿತ್ತುಕೊಂಡು ಬೈಕ್ ಸವಾರನೊಂದಿಗೆ ಪರಾರಿಯಾಗಿರುವುದು ಎಂಬುದಾಗಿ ಶ್ರೀಮತಿ ಭಾರತಿ [27] ಗಂಡ: ಪ್ರದೀಪ್ ಜೆ.ಎಸ್.ಶೇಖರ್ ಕಂಪೌಂಡ್, ಗೋರಿಗುಡ್ಡ, 4ನೇ ಕ್ರಾಸ್, ವೆಲೆನ್ಸಿಯಾ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ ಮೊ.ನಂ.227/12 ಕಲಂ 392 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆೆ ಕೈಗೋಳ್ಳಲಾಗಿದೆ.



ಅವ್ಯಾಚ ಶಬ್ದದಿಂದಬ್ಯೆದು, ಹಲ್ಲೆ ನಡೆಸಿದ ಪ್ರಕರಣ:

ಉಳ್ಳಾಲ ಠಾಣೆ;


  •  ದಿನಾಂಕ. 26-12-2012 ರಂದು ಮದ್ಯಾಹ್ನ 12-00 ಗಂಟೆಯಿಂದ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಕೋಟೆಪುರ ಎಂ.ಎಫ್.ಒ ಮೀನಿನ ಕಂಪೆನಿಯಲ್ಲಿ ಫಿರ್ಯಾದಿದಾರರು ಮತ್ತು ಅವರ ತಮ್ಮ ಇಫರ್ಾನ್, ನೆರೆಮನೆಯ ಅಪೀಸ್, ಅರಾಪತ್ ರವರೊಂದಿಗೆ ಮೀನಿನ ಅನ್ಲೋಡಿಂಗ್ ಕೆಲಸ ಮಾಡಿಕೊಂಡಿದ್ದು, ರಾತ್ರಿ ಸುಮಾರು 12-30 ಗಂಟೆಯ ಸಮಯಕ್ಕೆ ಅಲ್ಲಿಗೆ ಕೆಎಲ್-13-ವಿ-3826 ನೇ ಈಚರ್ ಲಾರಿ ಹಾಗೂ ಇತರ ಎರಡು ಲಾರಿಗಳು ಮೀನು ಅನ್ಲೋಡ್ ಮಾಡುವ ಬಗ್ಗೆ ಬಂದಿದ್ದು, ಅದರಂತೆ ಫಿರ್ಯಾದಿದಾರರು ಮತ್ತು ಇತರರು ಮೀನಿನ ಅನ್ಲೋಡ್ ಕೆಲಸವನ್ನು ಪೂರೈಸಿಕೊಂಡು ಅದರ ಬಾಬ್ತು ಕೂಲಿ ಹಣವನ್ನು ಕೊಡುವ ವಿಚಾರದಲ್ಲಿ ಈಚರ್ ಲಾರಿ ಚಾಲಕ ಹಾರಿಸ್ ಮತ್ತು ಅವರ ಅಣ್ಣ-ತಮ್ಮಂದಿರು ತಕರಾರು ಮಾಡಿದಾಗ ಫಿರ್ಯಾದಿದಾರರು ಅವರಲ್ಲಿ ಸಣ್ಣ ವಾಹನಕ್ಕೆ ರೂ. 300/ ಮತ್ತು ದೊಡ್ಡ ಲಾರಿಗೆ ರೂ. 450/ ರಂತೆ ಕೂಲಿ ಹಣ ಕೊಡಬೇಕು ಎಂದು ಹೇಳಿದಾಗ ಆರೋಪಿಗಳು ಅಷ್ಟೊಂದು ಹಣ ಕೊಡುವುದಿಲ್ಲ ಎಂದು ಗಲಾಟೆ ಮಾಡಿ ಮಲಿಯಾಳಿ ಭಾಷೆಯಲ್ಲಿ ಅವಾಚ್ಯಶಬ್ದಗಳಿಂದ ಬೈದು ದೂಡಾಟವಾಗಿ ಹಾರಿಸ್ ರವರು ಕಬ್ಬಿಣದ ಹ್ಯಾಂಗ್ಲರ್ ಪ್ಲೇಟ್ನಿಂದ ಫಿರ್ಯಾದಿದಾರರ ಹಣೆಗೆ ಮತ್ತು ಎಡ ಕಣ್ಣಿನ ಬಳಿಗೆ ಹೊಡೆದು ರಕ್ತಗಾಯ ಉಂಟು ಮಾಡಿದಲ್ಲದೆ, ಉಳಿದವರು ಕೈಯಿಂದ ಹೊಡೆದು ನೋವುಂಟು ಮಾಡಿರುತ್ತಾರೆ. ಆರೋಪಿಗಳ ಹಲ್ಲೆಯಿಂದ ಗಾಯಗೊಂಡ ಫಿರ್ಯಾದಿದಾರರು ತೊಕ್ಕೊಟು ನೇತಾಜಿ ಎಲ್ಲಪ್ಪ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದು ಎಂಬುದಾಗಿ ಅಬ್ದುಲ್ ಜಮಾಲ್ (27) ಮಹಮ್ಮುದ್ ಮೋನು, ಬರಕಾ ಕಂಪೌಂಡು ಕೋಟೆಪುರ ಉಳ್ಳಾಲ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ  ಅಪರಾದ ಕ್ರಮಾಂಕ 336/2012 ಕಲಂ 504 324, ಖ/ಘ 34 ಕಅ ರಂತೆ ಪ್ರಕರಣ ದಾಖಲಿಸಿ ತನಿಖೆೆ ಕೈಗೋಳ್ಳಲಾಗಿದೆ.


ಹುಡುಗ ಕಾಣೆ;

ದಕ್ಷಿಣ ಠಾಣೆ


  • ದಿನಾಂಕ 24-09-12 ರಂದು ಪಿರ್ಯಾದಿದಾರರು ತನ್ನ ಮಗನಾದ ಮಂಜುನಾಥ (10) ನೊಂದಿಗೆ ಮಂಗಳೂರು ಕೋಟೆಕಾರ್ನ  ಮಾಡೂರಿನಿಂದ ಕೆಲಸಕ್ಕಾಗಿ ಬೆಳಿಗ್ಗೆ 7-00 ಗಂಟೆಗೆ ಮನೆಯಿಂದ ಹೊರಟು ಹಸನಬ್ಬ ಎಂಬವರು  ಮಂಗಳೂರು ಬಂದರ್ ಕಸಾಯಿಗಲ್ಲಿಯಲ್ಲಿ ಕಟ್ಟಡದ ಕೆಲಸವನ್ನು ಮಾಡಿಸುತ್ತಿದ್ದು, ಅಲ್ಲಿಗೆ ಕೂಲಿ ಕೆಲಸಕ್ಕಾಗಿ ಬಸ್ಸಿನಲ್ಲಿ ಮಾಡೂರುನಿಂದ ಸ್ಟೇಟ್ ಬ್ಯಾಂಕ್ಗೆ ಬಂದು ಸ್ಟೇಟ್ಬ್ಯಾಂಕ್ನಲ್ಲಿ ಬಸ್ಸಿನಿಂದ ತನ್ನ ಮಗ ಮಂಜುನಾಥನೊಂದಿಗೆ ಇಳಿದಾಗ ಅಲ್ಲಿ ಪಿರ್ಯಾದಿದಾರರ ತನ್ನ ಪರಿಚಯದ ಗದಗದ ವಾಸಿ ಶ್ರೀಮತಿ ಲಕ್ಷ್ಮಿರವರು ಸಿಕ್ಕಿದ್ದು, ಅವರ ಜೊತೆ ಮಾತನಾಡುತ್ತಿರುವಾಗ ಮಂಜುನಾಥನು ಎಲ್ಲಿಯೋ ತಪ್ಪಿಸಿಕೊಂಡು ಕಾಣೆಯಾಗಿದ್ದು, ಈತನನ್ನು ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈತನಿಗೆ ಮಾತನಾಡಲು ಬರುವುದಿಲ್ಲ. ಈತನನ್ನು ಪತ್ತೆ ಮಾಡಿಕೊಡುವಂತೆ ಫಿರ್ಯಾದಿದಾರರಾದ ಶ್ರೀಮತಿ ಹುಲಿಗಮ್ಮ [27] ಗಂಡ: ದುರ್ಗಪ್ಪ, ವಾಸ: ಮಾಡೂರು, ಕೋಟೆಕಾರು, ಮಂಗಳೂರು ನೀಡಿದ ದೂರಿನಂತೆ ಅಪರಾದ ಕ್ರಮಾಂಕ 228/12 ಕಲಂ ಹುಡುಗ ಕಾಣೆ ಪ್ರಕರಣ ದಾಖಲಿಸಿ ತನಿಖೆೆ ಕೈಗೊಳ್ಳಲಾಗಿದೆ.


ಗಂಡಸು ಕಾಣೆ:

ಉಳ್ಳಾಲ ಠಾಣೆ;


  • ದಿನಾಂಕ. 10-1-2012 ರಂದು ಫಿರ್ಯಾದಿದಾರರ ಗಂಡ ಉದಯಕುಮಾರ್ ರವರು ಅಟೋ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದವರು ತಲಪಾಡಿ ಗ್ರಾಮದ ಟೆಂಪಲ್ ರೋಡ್ನಿಂದ ಕಾಣೆಯಾಗಿದ್ದು, ಅವರ ಪತ್ತೆಗೆ ಇದುವರೆಗೆ ಪ್ರಯತ್ನಿಸಿದರೂ ಕಾಣೆಯಾದ ವ್ಯಕ್ತಿ ಪತ್ತೆಯಾಗದೇ ಇದ್ದುದರಿಂದ ಈತನನ್ನು ಪತ್ತೆ ಮಾಡಿಕೊಡುವಂತೆ ಫಿರ್ಯಾದಿದಾರಾದ ಶೋಭಾ ತಲಪಾಡಿ ಗಂಡ: ಉದಯಕುಮಾರ್ ಕೋಟೆಕಾರ್ ಗ್ರಾಮ ಮಂಗಳೂರು ತಾಲೂಕು  ರವರು ನೀಡಿದ ದೂರಿನಂತೆ ಅಪರಾದ ಕ್ರಮಾಂಕ  337/2012 ಗಂಡಸು ಕಾಣೆ ಪ್ರಕರಣ ದಾಖಲಿಸಿ ತನಿಖೆೆ ಕೈಗೊಳ್ಳಲಾಗಿದೆ.


No comments:

Post a Comment