Saturday, December 22, 2012

Daily Crime Incidents for Dec 22, 2012

ಅಪಘಾತ ಪ್ರಕರಣ

ಮಂಗಳೂರು ಸಂಚಾರ ಪೂರ್ವ ಠಾಣೆ :


  • ದಿನಾಂಕ 19-12-2012 ರಂದು ಸಮಯ ಸುಮಾರು 13.15 ಗಂಟೆಗೆ ಪಿರ್ಯಾದಿ ಜೋನ್ ಡಿ ಸೋಜ  (48 ವರ್ಷ) ತಂದೆ- ದಿ.ಅಲ್ಬಟರ್್ ಡಿ ಸೋಜ, ವಾಸ: # 802, ಗ್ರೀನ್ ಹೈಟ್ಸ್ , ಎಸ್.ಎಲ್. ಮಥಾಯಸ್ ರಸ್ತೆ, ಮಂಗಳೂರು ರವರು ಮೊ,ಸೈಕಲ್ ನಂಬ್ರ ಏಂ-04 ಇಂ-37 ನ್ನು ಅಥೇನಾ ಆಸ್ಪತ್ರೆ ಜಂಕ್ಷನ್ ಕಡೆಯಿಂದ ಯುನಿಟಿ ಆಸ್ಪತ್ರೆ ಜಂಕ್ಷನ್ ಕಡೆಗೆ ಫಳ್ನೀರ್ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಪ್ಲಾಟಿನಂ ಥಿಯೇಟರ್ ಬಳಿ ತಲುಪುವಾಗ ಪಿರ್ಯಾದುದಾರರ ಮೊ,ಸೈಕಲ್ನ ಹಿಂದಿನಿಂದ ಕಾರು ನಂಬ್ರ ಏಂ-19 ಒ-6209 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೊ,ಸೈಕಲ್ನ ಹಿಂಭಾಗಕ್ಕೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಎಡಕೈ ಮೊಣಗಂಟಿಗೆ ಗಂಭಿರ ಸ್ವರೂಪ ಗಾಯಗೊಂಡು ಯುನಿಟಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಅಪಘಾತವನ್ನುಂಟು ಮಾಡಿದ ಬಗ್ಗೆ ಅರೋಪಿತರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಿಲ್ಲ ಎಂಬುದಾಗಿ ಜೋನ್ ಡಿ ಸೋಜ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಾ ಅ.ಕ್ರ.185/2012 279 , 338 ಐ.ಪಿ.ಸಿ,& 134 (ಬಿ) ಮೋ.ವಾ. ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸುರತ್ಕಲ್ ಠಾಣೆ :


  • ಪ್ರಬಾಕರನ್ ಪ್ರಾಯ ಃ48 ವರ್ಷ ತಂದೆಃಕೃಷ್ಣನ್ ವಾಸಃ ನಡಿಯಪರಂಬಿಲ್  ತಯವ ಪೋಸ್ಟ್  ಕರುನಾಗಪಳ್ಳಿ  ತಾಲೂಕು   ಕೊಲ್ಲಂ ಜಿಲ್ಲೆ ಕೇರಳ ರಾಜ್ಯ ಹಾಲಿಃ ಕ್ಯಾರಾಪ್ ಅಬ್ರಹಾಂ  ಮ್ಯಾಥ್ಯು ರವರ ಬಾಡಿಗೆ ಮನೆ ಹೊಸಬೆಟ್ಟು ಕುಳಾಯಿ ಮಂಗಳೂರು ತಾಲೂಕು ರವರು ದಿನಾಂಕ 20-12-12 ರಂದು ಒಎಂಪಿಎಲ್ನಲ್ಲಿ ಕಂಟ್ರಾಕ್ಟ್ ಬಾಬ್ತು ಕೆಲಸ ಮುಗಿಸಿ ಸಬ್ಕಂಟ್ರಾಕ್ಟ್ರ್ ಬಿನೋಯ್ರವರ ಜತೆಗೆ ಅವರ ಬಾಬ್ತು ಕೆಎಲ್-29-8135 ನೇ ಮೋಟಾರ್ ಸೈಕಲ್ಲಿನಲ್ಲಿ ಹೊನ್ನಕಟ್ಟೆ ಕಡೆಗೆಹೊರಟು ಕೈಕಂಬ - ಸುರತ್ಕಲ್ ರಸ್ತೆಯಲ್ಲಿ ಬರುತ್ತಾ ಮಂಗಳೂರು ತಾಲೂಕು ಇಡ್ಯಾ ಗ್ರಾಮದ ಕಾನ ಎಂಬಲಿ ್ಲ ಲ್ಯಾನ್ಸ್ವೇ ಬಾರ್ನ ಎದುರು ಬರುತ್ತಿರುವಾಗ ರಾತ್ರಿ 20-30 ಗಂಟೆಗೆ ಸುರತ್ಕಲ್- ಕಡೆಯಿಂದ ಕೈಕಂಬ ಕಡೆಗೆ ಕೆಎ-19-ಇಎಪ್-6561 ನೇ ಮೋಟಾರ್ ಸೈಕಲನ್ನು ಅದರ ಸವಾರ  ವಿಜಯ್ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಮೋಟಾರ್ ಸೈಕಲನ್ನು ತೋಕೂರು ರಸ್ತೆಗೆ ಒಮ್ಮೆಲೇ ತಿರುಗಿಸುತ್ತಾ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ಗೆ ರಬಸವಾಗಿ ಡಿಕ್ಕಿಯಾದ ಪರಿಣಾಮ ಪಿರ್ಯಾದಿ ಹಾಗೂ ಸವಾರರು ರಸ್ತೆಗೆ ಬಿದ್ದು ಅಲ್ಲದೇ ಡಿಕ್ಕಿಪಡಿಸಿದ ಮೋಟಾರ್ಸೈಕಲ್ ಕೂಡಾ ಸವಾರರ ಸಮೇತ ರಸ್ತೆಗೆ ಬಿತ್ತು. ಅದರ ಪರಿಣಾಮ ಪಿರ್ಯಾದಿಗೆ ಎಡಕಣ್ಣಿಗೆ ಹಾಗೂ ಹಣೆಗೆ ಮತ್ತು ಬಿನೋಯ್ರವರಿಗೆ ತಲೆಗೆ ಮತ್ತು ಬಲಕಣ್ಣಿನ ಬಳಿ ಗಾಯವಾಗಿದ್ದು ಅಲ್ಲಿ ಸೇರಿದವರು ಕೂಡಲೇ ಗಾಯಾಳುಗಳನ್ನು ಮುಕ್ಕಾದ ಶ್ರೀನಿವಾಸ ಆಸ್ಪತ್ರೆಗೆ ಕರೆತಂದಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ಆಸ್ಪತ್ರೆಗೆ ನಿನ್ನೆ ದಾಖಲಿಸಿರುವುದಾಗಿದೆ ಎಂಬುದಾಗಿ ಪ್ರಬಾಕರನ್ ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣಾ ಅ.ಕ್ರ.254/2012 ಕಲಂ: 279, 337  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಪಣಂಬೂರು ಠಾಣೆ :


  • ಪಿರ್ಯಾದಿ ಉಮೇಶ ಜಿ ಪುತ್ರನ್ ಪ್ರಾಯ 60 ವರ್ಷ ತಂದೆ: ಗೋವಿಂದ ,  ಕಕರ್ೇರ ನಿವಾಸ ಡೋರ್ ನಂ: 4-40, ಕುಳಾಯಿ ಹೊಸಬೆಟ್ಟು ಸುರತ್ಕಲ್ ಮಂಗಳೂರು ರವರು ಮತ್ತು ಅವರ ಹೆಂಡತಿ ಶ್ರೀಮತಿ ಪದ್ಮಾವತಿ ರವರುಗಳು ಅವರ ಸಂಬಂಧಿಕರ ಮದುವೆಗೆ ಮಂಗಳೂರಿನ ಟಿ ಎಂ ಎ ಪೈ ಕನ್ವರ್ಷನ್ ಹಾಲ್ಗೆ ಹೋಗಲು ಅವರ ಮನೆಯಿಂದ  ಬೆಳಿಗ್ಗೆ ಅವರ ಪರಿಚಯದ ಸಲೀಂ  ಎಂಬವರ ಕೆಎ-19/ಡಿ-3266 ಆಟೋರಿಕ್ಷಾದಲ್ಲಿ  ಪ್ರಯಾಣಿಸುತ್ತಾ ಪಣಂಬೂರು ಎಂ ಸಿ ಎಫ್ ಫ್ಯಾಕ್ಟರಿಯ ಮುಂಭಾಗ  ರಾ ಹೆ-66 ರಲ್ಲಿ  ಬೆಳಿಗ್ಗೆ 11-45 ಗಂಟೆಗೆ  ತಲುಪಿದಾಗ ಹಿಂದಿನಿಂದ  ಆರೋಪಿ ಕೆಎ-19/ಎಂಪಿ-4999 ನೇ ಸ್ಕಾಫರ್ಿಯೋ ವಾಹನವನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ರಿಕ್ಷಾವನ್ನು ಹಿಂದಿಕ್ಕಲು ನುಗ್ಗಿಸಿ ರಿಕ್ಷಾಕ್ಕೆ ಬಲಬದಿಯಿಂದ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಸಾಧಾರಣ ಸ್ವರೂಪದ ಹಾಗೂ ಪಿರ್ಯಾದಿದಾರರ ಹೆಂಡತಿಯ ಬಲಕೈಗೆ ತೋಳಿನ ಮೇಲೆ ಮೂಳೆ ಮುರಿತದ ಗಂಭೀರ ಗಾಯ ಹಾಗೂ ರಿಕ್ಷಾ ಚಾಲಕ ಸಲೀಂರವರಿಗೆ ಸೊಂಟಕ್ಕೆ ಮತ್ತು ಬಲಕೈಗೆ  ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯಗಳಾಗಿ ಚಿಕಿತ್ಸೆಗೆ ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಉಮೇಶ್ ಜಿ ಪುತ್ರನ್ ರವರು ನೀಡಿದ ದೂರಿನಂತೆ ಪಣಂಬೂರು ಠಾಣಾ ಅ.ಕ್ರ. 223/12 ಕಲಂ 279-337-338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



No comments:

Post a Comment