Thursday, October 23, 2014

Daily Crime Reports 23-10-2014

ದೈನಂದಿನ ಅಪರಾದ ವರದಿ.

ದಿನಾಂಕ 23.10.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 21.10.2014 ರಂದು  ರಾತ್ರಿ  22.45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಯೋಗೀಶ್ ರವರು ಮತ್ತು ಅವರ ಸ್ನೇಹಿತ ಮಿಥೇಶ್ ಶೆಟ್ಟಿ ರವರು ಅವರ  ಬಾಬ್ತು ಮೋಟಾರು ಸೈಕಲ್ ನಂಬ್ರ  ಕೆಎ.19.ಈಬಿ.9997ನೇದರಲ್ಲಿ ಮಂಗಳೂರು ನಗರದ  ಸಾರ್ವಜನಿಕ ಡಾಮಾರು ರಸ್ತೆಯಾದ ಕೋಡಿಕಲ್ - ಕೋಡಿಕಲ್ ಕಟ್ಟೆ ರಸ್ತೆಯ ಕೋಡಿಕಲ್ ಕಟ್ಟೆ ಬಳಿ ಇರುವ  ನಿತಿನ್ ಜನರಲ್ ಸ್ಟೋರ್ ಎದುರುಗಡೆ  ಮೋಟಾರು ಸೈಕಲಿನಲ್ಲಿ ಕುಳಿತುಕೊಂಡಿರುವ ಸಮಯ ಆರೋಪಿ ನಂಬ್ರ ಪ್ಲೇಟ್ ಇಲ್ಲದ ಮೋಟಾರು ಸೈಕಲನ್ನು  ಅದರ ಸವಾರ ಕೋಡಿಕಲ್ ಕಟ್ಟೆ ಕಡೆಯಿಂದ ಕೋಡಿಕಲ್ ಕ್ರಾಸ್ ಕಡೆಗೆ ಅತೀವೇಗ ಹಾಗೂ ಅಜಾಗರು ಕತೆಯಿಂದ ಚಲಾಯಿಸಿಕೊಂಡು ಬಂದು  ಮೋಟಾರು ಸೈಕಲಿನಲ್ಲಿ ಕುಳಿತುಕೊಂಡಿದ್ದ ಪಿರ್ಯಾದಿದಾರರ ಗೆಳೆಯ ಮಿಥೇಶ್ ಶೆಟ್ಟಿಯವರ  ಬಲ ಕಾಲಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರು ಸೈಕಲ್ ಸವಾರರರು ರಸ್ತೆಗೆ ಬಿದ್ದಿರುವುದಾಗಿದೆ  ಪರಿಣಾಮ ಪಿರ್ಯಾದಿದಾರರ ಗೆಳೆಯ ಮಿಥೇಶ್ ರವರ ಬಲ ಕಾಲಿನ  ಕೋಲುಕಾಲಿಗೆ ಮೂಳೆ ಮುರಿತದ ಗಾಯವಾಗಿ ಚಿಕಿತ್ಸೆ ಬಗ್ಗೆ ನಗರದ ಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08-10-2014 ರಂದು ಸುಮಾರು 11-30 ಗಂಟೆಗೆ ಮಂಗಳೂರು ನಗರದ ಕ್ಲಾಕ್ ಟವರ್ ಸರ್ಕಲ್ ನಲ್ಲಿ ಕೆಎ-19-ಎಂ.ಸಿ -5352 ನಂಬ್ರದ ಕಾರನ್ನು ಅದರ ಚಾಲಕ ಹಂಪನಕಟ್ಟೆ ಕಡೆಯಿಂದ .ಬಿ. ಶೆಟ್ಟಿ ಕಡೆಗೆ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೆಂಟ್ರಲ್ ಮಾರ್ಕೆಟ್ ಕಡೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಪಿರ್ಯಾದುದಾರರಾದ ಶ್ರೀ ಹ್ಯಾರಿಸ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆಎ-19-.ಡಿ-2836 ನಂಬ್ರದ ಸ್ಕೂಟರ್ ಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರ ಮೂಗಿಗೆ, ಎದೆಗೆ ಹಾಗೂ ಎಡಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಪಿರ್ಯದುದಾರರು ಅಥೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಕಾರಿನ ಚಾಲಕ ಚಿಕಿತ್ಸಾ ವೆಚ್ಚವನ್ನು ನೀಡುವುದಾಗಿ ತಿಳಿಸಿ ನಂತರ ಚಿಕಿತ್ಸಾ ವೆಚ್ಚವನ್ನು ನೀಡದೇ ಇದ್ದುದ್ದರಿಂದ ತಡವಾಗಿ ದೂರು ನೀಡಿದ್ದಾಗಿದೆ.

 

3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-10-2014 ರಂದು ಬಾಳ ಗ್ರಾಮದ ಹೆಚ್ ಪಿ ಸಿ ಎಲ್ ಕಂಪನಿಯ ಒಳಗಡೆ ಇರುವ ಸಾಯಿ ದುರ್ಗಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್ ಎಂಬವರು ಸಂಜೆ 16-00 ಗಂಟೆ ಸುಮಾರಿಗೆ ವೆಲ್ಡಿಂಗ್ ಮೆಷಿನ್ ಮುಖಾಂತರ ಪೈಪ್ ಲೈನ್ ಗೆ ವೆಲ್ಡಿಂಗ್ ಮಾಡುತ್ತಿದ್ದಾಗ ಸದ್ರಿ ವೆಲ್ಡಿಂಗ್ ಮೆಷಿನ್ ಮುಖಾಂತರ ಶಾಕ್ ಹೊಡೆದು ದೀಪಕ್ ರವರು ಕೆಳಗೆ ಬಿದ್ದವರನ್ನು ಅಲ್ಲೆ ಇದ್ದ ಪಿರ್ಯಾದಿದಾರರಾದ ಶ್ರೀ ಎಂ. ಜಾಸಿಂ ಅಲಿ ರವರು ಹಾಗೂ ಇತರರು ದೀಪಕ್ ರವರನ್ನು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ದೀಪಕ್ ರವರು ಮೃತ ಪಟ್ಟಿರುವುದಾಗಿ ತಿಳಿಸಿದ್ದು ಘಟನೆಗೆ ಕಂಪನಿಯ ಮಾಲಕ ಗೌರಿಶಂಕರ್ ಹಾಗೂ ಸೈಟ್ ಇನ್ಚಾರ್ಜ್ ಸುರೇಶ್ ರವರು ವೆಲ್ಡಿಂಗ್ ಮೆಷಿನ್ ಗೆ ಪಾಸಾಗುವ ಹಾಗೂ ಅಲ್ಲಿಂದ ಸರಬರಾಜಾಗುವ ವೆಲ್ಡಿಂಗ್ ಮೆಷಿನ್ ಗೆ ಸರಿಯಾದ ಕೇಬಲ್ ವೈರನ್ನು ಜೋಡಣೆ ಮಾಡದೇ ನಿರ್ಲಕ್ಷತನ ತೋರಿದ್ದರಿಂದ ದೀಪಕ್ ರವರು ಕರೆಂಟ್ ಶಾಕ್ ಹೊಡೆದು ಮೃತಪಟ್ಟಿದ್ದು ಘಟನೆಗೆ ಕಾರಣಕರ್ತರಾಗಿರುತ್ತಾರೆ.

 

4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15/10/2014 ರಿಂದ 21/10/2014 ಮಧ್ಯೆ ಯಾರೋ ಕಳ್ಳರು ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮದ ಎಡಪದವು ಎಂಬಲ್ಲಿರುವ ಪಿರ್ಯಾದಿದಾರರಾದ ಶ್ರೀ ಸುಬ್ರಾಯ ಕಾರಂತ್ ರವರ ಬಾಬ್ತು ಬಾಗಿಲು ಹಾಕಿ ಬೀಗ ಹಾಕಿದ ವಾಸದ ಮನೆಯ ಎದುರಿನ ಬಾಗಿಲಿನ ಚಿಲಕವನ್ನು ಮುರಿದು ಮನೆಯ ಒಳಗೆ ನುಗ್ಗಿ ಮನೆಯ ಒಳಗಡೆ ಹಾಲ್ ನಲ್ಲಿದ್ದ 24 ಇಂಚಿನ ಎಲ್.ಜಿ. ಕಂಪೆನಿಯ ಟಿ.ವಿ., ಹಿತ್ತಾಳೆಯ ಚೆಂಬು, ಫರ್ಫ್ಯೂಮ್ ಬಾಟ್ಲಿಗಳು - 6, ಬಂಗಾರದ ಸಣ್ಣ ಉಂಗುರ ಮತ್ತು ಬಂಗಾರದ ಸಣ್ಣ ಸಣ್ಣ ತುಂಡುಗಳು, ನಗದು ಹಣ ರೂ. 6,000/- ಅಂದರೆ ಒಟ್ಟು ಸುಮಾರು 30,000/- ರೂಪಾಯಿಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಜೊಸೇಫ್ ಲೋಬೋ ರವರ ಮಗ ಜೋಯ್ಸನ್ ಲೋಬೋ ಮತ್ತು  ಅತನ ಸ್ನೇಹಿತ ಚಾಲ್ಸ್ನ್ ಸಿಕ್ವೆರಾ ಸ್ನೇಹಿತರಾಗಿದ್ದು ದಿನಾಂಕ; 19/10/2014 ರಂದು ಸಂಜೆ 06-00 ಗಂಟೆಗೆ ಪಿರ್ಯಾದಿಯ ಅಕ್ಕನ ಮನೆಗೆ ಹೋಗಿ ಬರುತ್ತೆನೆಂದು ಮನೆಯಿಂದ ಹೋದವರು ತನಕ ಮನೆಗೆ ಬಾರದೇ ಸಂಭಂದಿಕರ ಮನೆಯಲ್ಲಿ ವಿಚಾರಿಸಿದಲ್ಲಿ ಪತ್ತೆಯಾಗದೇ ಇರುವುದಾಗಿದೆ. 

ಕಾಣಿಯಾದವರ ಚಹರೆ:

1. ಹೆಸರು: ಜೋಯ್ಸನ್ ಲೋಬೋ ವರ್ಷ 22 ತಂದೆ; ಜೋಸೆಫ ಲೋಬೋ ಗೋಧಿ ಮೈ ಬಣ್ಣ,  ಎತ್ತರ: 5.9,ಬಟ್ಟೆ: ನೀಲಿ ಬಣ್ಣದ ಉದ್ದ ತೋಳಿನ ಕಪ್ಪು ಗೆರೆಗಳಿರುವ ಶರ್ಟ್. ಗ್ರೆ ಬಣ್ಣದ ಪ್ಯಾಂಟ್. ಭಾಷೆ: ತುಳು, ಕನ್ನಡ, ಕೂಂಕಣಿ, ಹಿಂದಿ.

2. ಹೆಸರು: ಚಾಲ್ಸನ್ ಸಿಕ್ವೇರಾ  ಪ್ರಾಯ: 26 ವರ್ಷ ತಂದೆ: ಸಿರಿಲ್ ಸಿಕ್ವೇರಾ ಬಣ್ಣ: ಗೋಧಿ ಮೈ ಬಣ್ನ,  ಎತ್ತರ 5.9, ಬಟ್ಟೆ: ಕೆಂಪು ಬಣ್ಣದ ಬಿಳಿ ಗೆರೆಗಳಿರುವ ಟೀ ಶರ್ಟ್, ನೀಲಿ ಬಣ್ನದ ಜಿನ್ಸ್ ಪ್ಯಾಂಟ್. ಭಾಷೆ: ತುಳು, ಕನ್ನಡ, ಕೂಂಕಣಿ,

 

6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22/10/2014 ರಂದು ರಾತ್ರಿ  ಸುಮಾರು 19-30 ಗಂಟೆಗೆ ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಪೇಟೆ ಎಂಬಲ್ಲಿ  ಕೆ.. 20 ಬಿ 2089 ನೇ ಮಿಸಿ ಟೆಂಪೊ ಚಾಲಕ ಶೇಖರ ಪೊಜಾರಿ ಎಂಬುವರು ಅಮಲು ಪದಾರ್ಥ ಸೇವಿಸಿ ತನ್ನ ಬಾಬ್ತು ಟೆಂಪೊವನ್ನು  ಅತಿ ವೇಗ ಹಾಗೂ ಅಜಾಗೂರಕತೆಯಿಂದ ಚಲಾಯಿಸಿಕೂಂಡು ಬಂದು ಬಜಪೆ ಪೇಟೆಯಲ್ಲಿರುವ ಬಸ್ ನಿಲ್ದಾಣದ ಮೇಲ್ಛಾವಣಿಗೆ ಡಿಕ್ಕಿ ಮಾಡಿ ಜಖಂಗೂಳಿಸಿರುತ್ತಾರೆ.

 

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಪ್ರಿಯಾ ದೀಕ್ಷಿತ್ರವರಿಗೆ ದಿನಾಂಕ. 13-11-2013 ರಂದು ಮುದಿತ್ದೀಕ್ಷಿತ್ರವರ ಜೊತೆ ಮದುವೆಯಾಗಿದ್ದು, ಫಿರ್ಯಾದಿದಾರರ ಗಂಡ ದೇರಳಕಟ್ಟೆ ನಿಟ್ಟೆ ಯುನಿವರ್ಸಿಟಿಯಲ್ಲಿ ಸಹಾಯಕ ಪ್ರೊಫೆಸರ್ಆಗಿ  ಕೆಲಸ ಮಾಡುತ್ತಿದ್ದು, ಮದುವೆಯಾದ ಕೆಲವು ಸಮಯದ ಬಳಿಕ ಫಿರ್ಯಾದಿದಾರರಿಗೆ ಅವರ ಗಂಡ ಮಾನಸಿಕ ಹಾಗೂ ದೈಹಿಕ ತೊಂದರೆ ಕೊಡುತ್ತಿದ್ದುದರಿಂದ ವಿಚಾರವನ್ನು ಫಿರ್ಯಾದಿದಾರರು ತನ್ನ ಮನೆಯವರಿಗೆ ತಿಳಿಸಿದಂತೆ ಅವರು ಮುದಿತ್ದೀಕ್ಷಿತ್ರವರಿಗೆ ಬುದ್ದಿವಾದ ಹೇಳಿದ್ದರು. ದಿನಾಂಕ. 17-10-2014 ರಂದು ಫಿರ್ಯಾದಿದಾರರು ವಾಸವಾಗಿರುವ ಮುನ್ನೂರು ಗ್ರಾಮದ ಕುತ್ತಾರು ಜಂಕ್ಷನ್ನಲ್ಲಿರುವ ಸಿಲಿಕೋನಿಯ ಅಪಾರ್ಟ್ಮೆಂಟ್ನಲ್ಲಿ ಫಿರ್ಯಾದಿದಾರರಿಗೆ ಅವರ ಗಂಡ ಜಗಳ ಮಾಡಿ ಅವಾಚ್ಯಶಬ್ದಗಳಿಂದ ಬೈದು, ಕೈಯಿಂದ ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದು, ಬಗ್ಗೆ ಫಿರ್ಯಾದಿದಾರರು ತೊಕ್ಕೊಟು ನೇತಾಜಿ ಎಲ್ಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ವಿಚಾರವನ್ನು ಫಿರ್ಯಾದಿದಾರರು ಅವರ ಮನೆಯವರಿಗೆ ತಿಳಿಸಿದಂತೆ ಅವರು ಬಂದಿದ್ದು, ದಿನಾಂಕ. 21-10-2014 ರಂದು ಫಿರ್ಯಾದಿದಾರರ ಗಂಡ ಫಿರ್ಯಾದಿದಾರರ ಮನೆಯವರಿಗೆ ಮತ್ತು ಸಹೋದರಿಗೆ ಅವಾಚ್ಯಶಬ್ದಗಳಿಂದ ಬೈದುದಲ್ಲದೆ ಫಿರ್ಯಾದಿದಾರರ ಸಹೋದರಿಯ ಲಗ್ಗೇಜನ್ನು ಬಿಸಾಡಿರುತ್ತಾರೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21.10.2014 ರಂದು ಪಿರ್ಯಾದುದಾರರಾದ ಶ್ರೀ ಅನಿಲ್ ರೈ ರವರು ಅವರ ಸ್ನೇಹಿತ ಸುದರ್ಶನ ಆಳ್ವ ಎಂಬವರ ಬಾಬ್ತು KA-19-EB-1393ನೇ ನಂಬ್ರದ ಮೋಟಾರ್ ಸೈಕಲ್ಲಿನಲ್ಲಿ ನರ್ಮೇಶ್ ಎಂಬವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ಬಿ.ಸಿ ರೋಡ್ ಕಡೆಗೆ ಸದ್ರಿ ಮೋಟಾರ್ ಸೈಕಲ್ನ್ನು ಸವಾರಿಮಾಡಿಕೊಂಡು ಹೋಗುತ್ತಾ ರಾತ್ರಿ ಸುಮಾರು 8:30 ಗಂಟೆ ಸಮಯಕ್ಕೆ ಅಡ್ಯಾರು ಸಹ್ಯಾದ್ರಿ ಕಾಲೇಜ್ ಮುಂಭಾಗ ತಲುಪಿದಾಗ ಪಿರ್ಯಾದುದಾರರ ಮೋಟಾರ್ ಸೈಕಲ್ಲಿನ ಹಿಂದಿನಿಂದ KA-19-MB-3167ನೇ ನಂಬ್ರದ ಕಾರನ್ನು ಅದರ ಚಾಲಕರು ಅತೀವೆಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎಡಬದಿಯಿಂದ ಪಿರ್ಯಾದುದಾರರ ಮೋಟಾರ್ ಸೈಕಲ್ನ್ನು ಓವರ್ಟೇಕ್ ಮಾಡಿ ಮುಂದೆ ಹೋಗುತ್ತಿದ್ದ ಒಂದು ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಆರೋಪಿ ಕಾರು ಚಾಲಕ ತನ್ನ ಕಾರನ್ನು ಒಮ್ಮೇಲೆ ಬಲಕ್ಕೆ ತಿರುಗಿಸಿ ಪಿರ್ಯಾದುದಾರರ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಹಾಗೂ ಸಹಸವಾರ ಬೈಕ್ ಸಮತ ರಸ್ತೆಗೆ ಬಿದ್ದು, ಪಿರ್ಯಾದುದಾರರ ಎಡ ಭುಜ ಮತ್ತು ಎಡ ಮೊಣಗಂಟಿಗೆ ಗುದ್ದಿದ ಹಾಗೂ ತರಚಿದ ಗಾಯ ಹಾಗು ಸಹಸವಾರ ನರ್ಮೇಶ ರವರ ಎಡಕೈಗೆ ರಕ್ತ ಬರುವ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿ ಸಹಸವಾರ ನರ್ಮೇಶ್ ರವರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಲ್ಲದೇ ಪಿರ್ಯಾದುದಾರರಿಗೆ ಸಣ್ಣಪುಟ್ಟ ತರಚಿದ ಗಾಯಗೊಂಡವರು ಚಿಕಿತ್ಸೆ ಪಡೆದಿರುವುದಿಲ್ಲ.

No comments:

Post a Comment