Friday, October 31, 2014

Daily Crime Reports 31-10-2014

ದೈನಂದಿನ ಅಪರಾದ ವರದಿ.

ದಿನಾಂಕ 31.10.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

2

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-10-2014 ರಂದು ರಾತ್ರಿ ಸುಮಾರು 7.30 ಗಂಟೆಗೆ ಅಪರಿಚಿತ ಟೆನ್ ವ್ಹೀಲ್ ಲಾರಿಯೊಂದನ್ನು ಅದರ ಚಾಲಕ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ಎನ್.ಹೆಚ್.66 ರಲ್ಲಿ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ  ರೀತಿಯಲ್ಲಿ ಚಲಾಯಿಸಿ ಕೊಂಡು ಬಂದು ಕುಳಾಯಿ ಬಳಿ ರಾ.ಹೆ.66 ರಲ್ಲಿ ಮುಂದಿನಿಂದ ಅಂದರೆ ಸುರತ್ಕಲ್ ಕಡೆಗೆ ಹೋಗುತ್ತಿದ್ದ  ಕೆಎ.19,ಎಲ್.2832 ನೇ ನಂಬ್ರದ ದ್ವಿ-ಚಕ್ರ ವಾಹನ ಢಿಕ್ಕಿಪಡಿಸಿದ್ದು ಸಮಯ ಸದ್ರಿ ವಾಹನ ಚಲಿಸಿ ರಸ್ತೆ ದಾಟುತ್ತಿದ್ದ ಅಮುಲ್ ರಾಯ್ (33) ಎಂಬವರಿಗೆ ಢಿಕ್ಕಿಯಾಗಿ  ಬಿದ್ದಾಗ ಲಾರಿಯ ಟೈಯರ್ ಅತನ ಮೇಲೆ ಚಲಿಸಿ ಅತನ ಎಡಗಾಲಿಗೆ ಎದೆಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಮಂಗಳೂರು ವೆನ್ಲಾಕ್  ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 11.45 ಗಂಟೆಗೆ ಮ್ಯತಪಟ್ಟರುವುದಲ್ಲದೇ ದ್ವಿ-ಚಕ್ರ ವಾಹನದ ಸವಾರರು ಕೂಡ ಗಾಯಗೊಂಡು ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಾಗಿರುವುದಾಗಿದೆ ಮತ್ತು ಅಪರಿಚಿತ ಲಾರಿಯನ್ನು ಚಾಲಕ ನಿಲ್ಲಿಸದೇ ಪರಾರಿಯಾಗಿರುವುದಾಗಿದೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 06.10.2014 ರಂದು  ಪಿರ್ಯಾದಿದಾರರಾದ ಶ್ರೀ ಕೆ.ಎಂ.ಕಿಶನ್ ರವರು ಅವರ  ಬಾಬ್ತು ಮೋಟಾರು ಸೈಕಲ್ ನಂಬ್ರ  ಕೆಎ-19-ಇಇ-2122 ನೇದನ್ನು ಮಂಗಳೂರು ನಗರದಲ್ಲಿ ಚಲಾಯಿಸುತ್ತಾ, ಸಮಯ ರಾತ್ರಿ 11:30 ಗಂಟೆಗೆ ಎಂ.ಜಿ ರಸ್ತೆಯ ಕೆನರಾ ಕಾಲೇಜಿನ ಬಳಿ ತಲುಪಿದಾಗ, ಪಿ.ವಿ.ಎಸ್ ಕಡೆಯಿಂದ ಕಾರು ನಂಬ್ರ ಕೆ.-19-ಎಂ.ಸಿ-3288 ನೇದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಮೋಟಾರು ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು,  ಬಲ ಕಾಲಿಗೆ ಮೂಳೆ ಮುರಿತದ ಗಾಯವಾಗಿ ಚಿಕಿತ್ಸೆಯ ಬಗ್ಗೆ ನಗರದ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಸದ್ರಿ ಆರೋಪಿ ಕಾರು ಚಾಲಕನು ಪಿರ್ಯಾದಿದಾರರ ಗಾಯದ ಖರ್ಚುಗಳನ್ನು ನೀಡುವುದಾಗಿ ಭರವಸೆ ನೀಡಿದ್ದು, ಆದರೆ ಇಲ್ಲಿಯವರೆಗೆ ಯಾವುದೇ ನಷ್ಟ ಪರಿಹಾರ ನೀಡಿರುವುದಿಲ್ಲ.

 

3.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿಯಾಧಿದಾರರಾದ ಶ್ರೀ ಧೋಂಡಪ್ಪಾ ಶರಣಪ್ಪ ಭೂಸನಗಿ ರವರು ಹಿಂದೂಸ್ಥಾನ್ ಯುವಿ ಲಿವರ್ ಕಂಪನಿಯಲ್ಲಿ ಅಪರೇಟರ್ಆಗಿ ಕೆಲಸ ಮಾಡುತ್ತಿದ್ದು  ಪ್ರತಿದಿನ ಬೆಳಿಗ್ಗೆ 05:30 ಗಂಟೆಗೆ ಮನೆ ಮನೆಗೆ ಪೇಪರ್ಹಾಕುವ ಕೆಲಸ ಮಾಡುತ್ತಿದ್ದು ಅದರಂತೆ ದಿನಾಂಕ 30-10-2014 ರಂದು ಪೇಪರ್ ಹಾಕುತ್ತಾ ತನಗೆ ಗುರುತು ಪರಿಚಯವಿರುವ ಅಶೋಕನಗರದ ಸೀತಾರಾಮ ಭಟ್ಟರ ಹಾಲಿನ ಅಂಗಡಿಗೆ ಬೆಳಿಗ್ಗೆ ಸುಮಾರು 06:00 ಗಂಟೆ ಸಮಯಕ್ಕೆ ಪೇಪರ್ ಹಾಕಲು ಬಂದಿದ್ದು ಸಮಯ ಮೂವರು ಅಪರಿಚತರು ಬಂದು ಅಂಗಡಿಯಲ್ಲಿದ್ದ ಸೀತಾರಾಮ ಭಟ್ಟರ ಹೆಂಡತಿಯೊಂದಿಗೆ ಸಿಗರೇಟ್ಕೇಳಿದ್ದು ಅವರು ಇಲ್ಲವೆಂದು ಹೇಳಿದಾಗ ತನ್ನಲ್ಲಿ ಸಿಗರೇಟ್ಎಲ್ಲಿ ಸಿಗುತ್ತದೆ ಎಂದು ವಿಚಾರಿಸಿದ್ದು ತಾನು ಉರ್ವ ಮಾರ್ಕೇಟ್ನಲ್ಲಿ ಸಿಗುತ್ತದೆ ಎಂದು ಹೇಳಿದಾಗ ಬಂದ ಅಪರಿಚಿತ ಮೂವರಲ್ಲಿ ಇಬ್ಬರು ಅಲ್ಲಿಯೇ ಇದ್ದ ಹಾಲಿನ ಟ್ರೈಯಿಂದ ತನ್ನ ತಲೆಗೆ ಹಾಗೂ ಬಲ ಕೈಗೆ ಬಲವಾಗಿ ಹೊಡೆದಿದ್ದು ಪರಿಣಾಮ ರಕ್ತಗಾಯವಾಗಿದ್ದು ತಾನು ಚಿಕಿತ್ಸೆಯ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿ ಹೊರ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಮೂವರು ಅಪರಿಚಿತರು ಬೈಕಿನಲ್ಲಿ ಬಂದು ಆದೇ ಬೈಕಿನಲ್ಲಿ ಪರಾರಿಯಾಗಿರುತ್ತಾರೆ.

 

4.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಮಮ್ತಾಜ್ ರವರ ಮಗ 25 ವರ್ಷ ಪ್ರಾಯದ ಟಿಪ್ಪು ಸುಲ್ತಾನ್ ದಿನಾಂಕ. 27-10-14ರಂದು ಮಂಗಳೂರು ಬಂದರ್ನಲ್ಲಿರುವ ತಾಜ್ ಸೈಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾತ ಮದ್ಯಾಹ್ನ ಸೈಕಲ್ ಅಂಗಡಿಯಿಂದ ಊಟಕ್ಕೆಂದು ಹೋದವನು ಮರಳಿ ಸೈಕಲ್ ಅಂಗಡಿ ಬಾರದೇ ಬಳಿಕ ಈತನ ಮನೆಗೂ ಬಾರದೇ ಕಾಣೆಯಾಗಿರುವುದಾಗಿದೆ. ಕಾಣೆಯಾದ ವ್ಯಕ್ತಿಯ ಚಹರೆ ಗುರುತು ಕೆಳಗಿನಂತಿದೆ.1)ಹೆಸರು: ಟಿಪ್ಪು ಸುಲ್ತಾನ್ 2)ಪ್ರಾಯ 25 ವರ್ಷ 3)ವಿದ್ಯಾಭ್ಯಾಸ: 7ನೇ ತರಗತಿ 4)ಎತ್ತರ 5 ಅಡಿ 9 ಇಂಚು 5)ಎಣ್ಣೆಕಪ್ಪು ಮೈಬಣ್ಣ6)ಕಪ್ಪು ಬಣ್ಣದ ಶರ್ಟ್ ಮತ್ತು ಕಾಪಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ 7)ಅರ್ಧ ಇಂಚು ಗುಂಗುರು ತಲೆಕೂದಲು 8)ಹಣೆಯ ಮದ್ಯದಲ್ಲಿ ಕಪ್ಪುಮಚ್ಚೆ ಇರುತ್ತದೆ. 9)ಕಪ್ಪು ಬಣ್ಣದ ಸ್ಪಿಪ್ಪರ್ ಚಪ್ಪಲಿಗಳು 10)ಕಪ್ಪು ಬಣ್ಣದ ಸೋಲೋ ಕಿಂಗ್ ಕಂಪೆನಿಯ ಮೊಬೈಲ್ ನಂ. 9449303022 11)ಕನ್ನಡ, ತುಳು. ಹಿಂದಿ, ತೆಲುಗು  ಮತ್ತು ಬ್ಯಾರಿ ಬಾಷೆ ಮಾತನಾಡುತ್ತಾನೆ.

 

5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28.10.2014 ರಂದು ಸಮಯ ಸುಮಾರು 19.00 ಗಂಟೆಗೆ ಫಿರ್ಯಾದುದಾರರಾದ ಶ್ರೀ ಸಬೀತ್ ಕುಮಾರ್ ರವರು ತನ್ನ ಮೋಟಾರ್ ಸೈಕಲ್ ನಂಬ್ರ KA19-EE-6934 ನೇದರಲ್ಲಿ ಸವಾರರಾಗಿ  ವೆಲೆನ್ಸಿಯಾ ಕಡೆಯಿಂದ ಸೂಟರ್ ಪೇಟೆ ಕಡೆಗೆ ಹೋಗುತ್ತಾ ಬಬ್ಬುಸ್ವಾಮಿ ದ್ವಾರದ ಬಳಿ ತಲುಪಿದಾಗ KA19-AC-7593 ನೇ ಅಟೋ ರಿಕ್ಷಾವನ್ನು ಅದರ ಚಾಲಕ ವೆಲೆನ್ಸಿಯಾ ಕಡೆಯಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಮೋಟರ್ ಸೈಕಲ್ ನ್ನು ಒವರ್ ಟೇಕ್ ಮಾಡಿ ಯಾವುದೇ ಸೂಚನೇ ನೀಡದೇ ಒಮ್ಮೆಲೇ ಎಡಕ್ಕೆ ತಿರುಗಿಸಿದ ಪರಿಣಾಮ ರಿಕ್ಷಾದ ಬಾಡಿಯು ಬೈಕಿನ ಹ್ಯಾಂಡಲ್ ಗೆ ಡಿಕ್ಕಿಯಾಗಿ ಫಿರ್ಯಾದುದಾರರು ಬೈಕು ಸಮೇತ ಕೆಳಗೆ ಬಿದ್ದು ತುಟಿಯ ಬಲಬದಿಗೆ, ಎಡಕಾಲಿನ ಮಣಿಗಂಟಿಗೆ ಗುದ್ದಿದ ಗಾಯವಾಗಿದ್ದು ಗಾಯಾಳು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

6.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30.10.2014 ರಂದು ಬೆಳಿಗ್ಗೆ ಸುಮಾರು 10.40 ಗಂಟೆಗೆ ಮಂಗಳೂರು ನಗರದ ಪಾಂಡೇಶ್ವರ ಕಟ್ಟೆ ಎಂಬಲ್ಲಿ ಫಿರ್ಯಾದುದಾರರಾದ ಶ್ರೀ ಶೇಕ್ ಮೊಹಮ್ಮದ್ ಅಝಮಯಿನ್ ರವರು KL-14-J-12  ನಂಬ್ರದ ಜೈಲೊ ಕಾರಿನಲ್ಲಿ ಸ್ಟೇಟ್ ಬ್ಯಾಂಕ್ ಕಡೆಗೆ ಬರುತ್ತಾ ಹಂಪ್ ನಲ್ಲಿ ವಾಹನವನ್ನು ನಿಧಾನಿಸಿ ಹಂಪ್ ದಾಟಿಸಿ ಸ್ವಲ್ಪ  ಮುಂದೆ ಹೋಗುತ್ತಾ KA19-EC-2638 ನಂಬ್ರದ ಮೋಟಾರ್ ಸೈಕಲ್ ನ್ನು ಆರೋಫಿ ಇಸ್ಮಾಯಿಲ್  ಎಂಬಾತನು ಅಪ್ರಿದ್ ಎಂಬಾತನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು  ಹಾಗೂ KA19-EJ-2776 ನಂಬ್ರದ ಮೋಟಾರ್ ಸೈಕಲ್ ನ್ನು ಪೈಜಾಲ್  ಎಂಬಾತನು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಎರಡೂ ಮೋಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು KA19-EC-2638 ನಂಬ್ರದ ಮೋಟಾರ್ ಸೈಕಲ್ ನ್ನು ಫಿರ್ಯಾದುದಾರರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಎರಡೂ ಮೋಟಾರ್ ಸೈಕಲ್ ರಸ್ತೆಗೆ ಬಿದ್ದು ಮೋಟಾರ್ ಸೈಕಲ್  ಸಹಸವಾರ ಅಪ್ರಿದ್ ಎಂಬುವರಿಗೆ ಎಡಕಾಲಿನ ಮೊಣಗಂಟಿಗೆ ಮತ್ತು ಕುತ್ತಿಗೆಗೆ ಗುದ್ದಿದ ಗಾಯವಾಗಿದ್ದು ಹಾಗೂ KA19-EJ-2776 ನಂಬ್ರದ ಮೋಟಾರ್ ಸೈಕಲ್  ಸವಾರ ಪೈಜಲ್ ನಿಗೆ ಅಲ್ಪ ಸ್ವಲ್ಪ ಗಾಯಾವಾಗಿದ್ದು ,ಗಾಯಾಳುಗಳು ಯುನಿಟಿ ಆಸ್ಪತ್ರೆಯಲ್ಲಿ ದಾಕಾಲಾಗಿ ಚಿಕೆತ್ಸೆಯಲ್ಲಿದ್ದು  ಪಿರ್ಯಾದುದಾರರ ವಾಹನ ಮತ್ತು ಎರಡೂ ಬೈಕುಗಳು ಜಖಂಗೊಂಡಿರುತ್ತದೆ.

 

7.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30-10-2014 ರಂದು ಸಂಜೆ 19-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಸೆಬಾಸ್ಟಿನ್ ಕುಮಾರ್ ಸೋನ್ಸ್ ರವರು ಮಂಗಳೂರು ನಗರದ ಬಲ್ಮಠ ಆಟೋರಿಕ್ಷಾ ಪಾರ್ಕ್ ಬಳಿ ತನ್ನ ಬಾಬ್ತು ಆಟೋ ರಿಕ್ಷಾನಂ: KA 19 D 478 ನೇದನ್ನು ನಿಲ್ಲಸಿದಾಗ ಆಟೋರಿಕ್ಷಾಗಳನ್ನು ಸರತಿ ಸಾಲಿನಲ್ಲಿ ನಿಲ್ಲಿಸುವ ಕೆಲಸದ ವ್ಯಕ್ತಿಯಾದ ವಿನೋದ್ ಎಂಬಾತನು ತನ್ನ ಬಳಿ ಬಂದು ಸಂಜೆ 7-00 ಗಂಟೆ ಸಮಯದ ನಂತರ ಆಟೋ ನಿಲ್ಲಿಸಲು  5 ರೂಪಾಯಿ ನೀಡುವಂತೆ ಕೇಳಿದಾಗ ನಾನು 5 ರೂಪಾಯಿ ಇಲ್ಲವೆಂದು ಹೇಳಿದಕ್ಕೆ  ಆತನು ಪಿರ್ಯಾದಿದಾರರಲ್ಲಿ ಹಣ ಇಲ್ಲದಿದ್ದರೆ  ಆಟೋ ಪಾರ್ಕ್ ಮಾಡಲು ಬಿಡುವುದಿಲ್ಲ. ಎಂದು ಹೇಳಿದಾಗ ನಮ್ಮೊಳಗೆ ಮಾತಿಗೆ ಮಾತು ಬೆಳೆದು ಆತನು ಪಿರ್ಯಾದಿದಾರರಿಗೆ ಕೈಯಿಂದ ಮತ್ತು ಜಲ್ಲಿಕಲ್ಲಿನಿಂದ ಹಲ್ಲೆ ಮಾಡಿ ನಂತರ "ಇಲ್ಲಿಂದ ಗಾಡಿ ತೆಗೆ ಇಲ್ಲದಿದ್ದರೆ ನಾನು ನಿನ್ನನ್ನು ಬಿಡುವುದಿಲ್ಲ" ಎಂದು ಅವಾಚ್ಯ ಶಬ್ದದಿಂದ ಬೈದಿರುತ್ತಾನೆ. ಆರೋಪಿ ವಿನೋದ್ ಎಂಬಾತನು ಕೈಯಿಂದ ಹಾಗೂ ಜಲ್ಲಿಕಲ್ಲಿನಿಂದ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ರಕ್ತಗಾಯವಾಗಿರುತ್ತದೆ.

 

8.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಎಎಸ್ಐ ರುದ್ರಪ್ಪ ರವರು ದಿನಾಂಕ 29/30-10-2014 ರಂದು ರಾತ್ರಿ ಉತ್ತರ ಠಾಣಾ ವ್ಯಾಪ್ತೀಯಲ್ಲಿ ಕರ್ತವ್ಯಕ್ಕೆ ನೇಮಿಸಿದಂತೆ ಠಾಣೆಯಿಂದ ರಾತ್ರಿ ಪಿಸಿ 338ನೇ ರವರನ್ನು ಜೊತೆಯಲ್ಲಿ ಕರೆದುಕೊಂಡು ಹೊರಟು, ಠಾಣಾ ವ್ಯಾಪ್ತೀಯಲ್ಲಿ ರೌಂಡ್ಸ್ ಮಾಡುತ್ತಾ ರಾತ್ರಿ 00.15 ಗಂಟೆಗೆ ವೆಂಕಟರಮಣ ದೇವಸ್ಥಾನದಿಂದಾಗಿ ನವಭಾರತ ಸರ್ಕಲ್ ಪಾಸ್ ಪೋರ್ಟ್ ಆಫೀಸಿನ ಬಳಿ ತಲುಪಿದಾಗ ರಸ್ತೆಯ ಬದಿಯಲ್ಲಿ 2 ಬೈಕ್ ಗಳು ನಿಂತಿದ್ದವು. ಪಿರ್ಯಾದಿದಾರರು ಮತ್ತು ಸಿಬ್ಬಂದಿಯವರು ಅನುಮಾನ ಗೊಂಡು ಸದ್ರಿ ಬೈಕನ್ನು ಚೆಕ್ ಮಾಡುವರೇ ಹೋದಾಗ ಪಾಸ್ ಪೋರ್ಟ್ ಆಫೀಸ್ ಕ್ರಾಸ್ ರಸ್ತೆಯ ಬಳಿ ಸ್ಟ್ರೀಟ್ ಲೈಟಿನ ಬೆಳಕಿನ ಸಹಾಯದಿಂದ 5 ಜನ ವ್ಯಕ್ತಿಗಳು ಏನೋ ಅನುಮಾನಸ್ಪದ ರೀತಿಯಲ್ಲಿ ಇದ್ದುದನ್ನು ಕಂಡು ಅವರ ಬಳಿ ಹೋದಾಗ ಅವರುಗಳು ತಮ್ಮನ್ನು ಕಂಡು ಓಡಲಾರಂಭಿಸಿದವರನ್ನು ಬೆನ್ನಟ್ಟಿ ಒಬ್ಬಾತನನ್ನು ಹಿಡಿದಾಗ ಇತರೇ  ನಾಲ್ವರೂ ವ್ಯಕ್ತಿಗಳು ಅಲ್ಲೇ ಇದ್ದ ಮೋಟಾರು ಸೈಕಲನ್ನು ಸ್ಟಾಟ್ ಮಾಡಿಕೊಂಡು ಪಿವಿಎಸ್ ಕಡೆಗೆ ಹೋಗಿದ್ದು, ನಂತರ ಹಿಡಿದ ವ್ಯಕ್ತಿಯನ್ನು  ವಿಚಾರಿಸಲಾಗಿ ತನ್ನ ಹೆಸರು ವಿಜಯಕುಮಾರ್ ಪ್ರಾಯ 23 ವರ್ಷ ತಂದೆ ಸುರೇಶ @ ಸೂರ್ಯ ವಾಸ ಬೋರುಗುಡ್ಡೆ, 4ನೇ ಮೈಲ್ ಕಾವೂರು ಮಂಗಳೂರು ಎಂದು ತಿಳಿಸಿದ್ದು ಬೈಕಿನಲ್ಲಿ ಓಡಿಹೋದವರ ಹೆಸರು ಕೇಳಲಾಗಿ ಕಾವೂರು ಬೋರು ಗುಡ್ಡೆ ದೀರಜ್, ಹಾಗೂ ದೇರೆ ಬೈಲಿನ ಲೋಹಿ  ಮತ್ತು ಅವರಿಬ್ಬರ  ಸ್ನೇಹಿತರು ಎಂಬುದಾಗಿ ತಿಳಿಸಿದನು. ಅವರ ಹೆಸರು ತಿಳಿದಿರುವುದಿಲ್ಲವಾಗಿ, ಆತನಲ್ಲಿ ಅಪರಾತ್ರಿ ಇರುವಿಕೆಯ ಬಗ್ಗೆ ಕೇಳಿದಾಗ ಆತನು ತಡಬರಿಸುತ್ತಾ ನಾವು ಐವರು ಮಂಗಳಾದೇವಿ ಪರಿಸರದಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿ ವಾಪಾಸ್ಸು ಮನೆಗೆ ಹೋಗುವರೇ ಮಾರ್ಗವಾಗಿ ಬರುತ್ತಾ ಇಲ್ಲಿ ನಾವು ಸಿಗರೇಟ್ ಸೇದಲು ನಿಂತಿರುವುದಾಗಿ ತಿಳಿಸಿದ್ದು, ಮತ್ತೆ ಮತ್ತೆ ವಿಚಾರಿಸಿದಾಗ ಆತನು ಹಾಗೂ ಆತನ ಜೊತೆಯಲ್ಲಿದ್ದ ಸಹಚರರು ಯಾವುದೋ  ಬೇವಾರಂಟು ತಕ್ಷೀರು ಮಾಡುವ ಇರಾದೆಯಿಂದ ಇದ್ದಿರಬಹುದು ಎಂದು ಅನುಮಾನಗೊಂಡು ಆತನ ಅಂಗಶೋದನೆ ಮಾಡಿದಾಗ ಆತನ  ಪ್ಯಾಂಟಿನ ಬಲ ಬದಿಯ ಕಿಸೆಯಲ್ಲಿ ಯಾವುದೋ ಒಂದು ಸೊತ್ತು ಇದ್ದಂತೆ ಕಂಡು ಬಂದಿದ್ದು ಹೊರ ತಗೆದು ನೋಡಿದಾಗ ಪ್ಲಾಸ್ಟಿಕ್  ಕವರಿನಲ್ಲಿ  ಮೆಣಿಸಿನ ಹುಡಿ ಇದ್ದುದು ಕಂಡು ಬಂತು ಅಲ್ಲದೇ  ಆತನ ಶರ್ಟನ್ನು ಮೇಲೆತ್ತಿದಾಗ ನೋಡಿದಾಗ ಪ್ಯಾಂಟಿನ ಹಿಂಬದಿಯಲ್ಲಿ ಸುಮಾರು 2"  ಅಡಿ ಉದ್ದದ ಹರಿತವಾದ ಕಬ್ಬಿಣದ ತಲವಾರು ಇದ್ದು, ಬಗ್ಗೆ ಕೇಳಿದಾಗ ರಾತ್ರಿ ವೇಳೆಯಲ್ಲಿ  ರಸ್ತೆಯಲ್ಲಿ ಹೋಗುವ ವಾಹನಗಳನ್ನು ತಡೆದು ನಿಲ್ಲಿಸಿ ವಾಹನದಲ್ಲಿದ್ದವರ ಸೊತ್ತುಗಳನ್ನು(ನಗದು ಹಣ ಮತ್ತು ಚಿನ್ನಾಭರಣಗಳನ್ನು) ದರೋಡೆ ಮಾಡಲು ಕಾದು ನಿಂತಿರುವುದಾಗಿ ತಿಳಿಸಿದ್ದು, ಪಂಚರ ಸಮಕ್ಷಮದಲ್ಲಿ ಮಹಜರನ್ನು ತಯಾರಿಸಿಕೊಂಡು ಸೋತ್ತುಗಳನ್ನು ಹಾಗೂ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಹಾಜರು ಪಡಿಸಿರುವುದಾಗಿದೆ.

 

9.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-10-2014 ರಂದು ಪಿರ್ಯಾದಿದಾರರಾದ ಶ್ರೀ ಖಾಲಿದ್ ರವರು ಸಂಜೆ ಸುಮಾರು 6-30 ಗಂಟೆಗೆ ಕಾಟಿಪಳ್ಳದ ಪಾರ್ಟ್ನರ್ ಎಂಬವರ ಮಾಲಕತ್ವದ ಕೆ 19 ಬಿ 3534 ನೇ ಮಹಿಂದ್ರ ಪಿಕ್ ಅಪ್ ವಾಹನವನ್ನು ಕಾಟಿಪಳ್ಳ ಸಂಶುದ್ದೀನ್ ಸರ್ಕಲ್ ಬಳಿಯ ಪ್ರಿನ್ಸ್  ಹೋಟೆಲ್ ಪಕ್ಕದ ಖಾಲಿ ಜಾಗದಲ್ಲಿ ಲಾಕ್ ಮಾಡಿ ನಿಲ್ಲಿಸಿ ಮನೆಗೆ ಹೋಗಿದ್ದು  ದಿನಾಂಕ 30-10-2014 ರಂದು ಬೆಳಿಗ್ಗೆ 05-30 ಗಂಟೆಗೆ ಬಂದು ನೋಡಿದಾಗ  ಪಿಕ್ ಅಪ್ ವಾಹನದ ಸದ್ರಿ ಸ್ಥಳದಲ್ಲಿ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ 125000/- ಆಗಬಹುದು.

 

10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-10-2014 ರಂದು ಪಿರ್ಯಾದುದಾರರಾದ ಶ್ರೀಮತಿ ರೇಖಾ ರವರು ಮಂಜೇಶ್ವರ ರೌಲ್ವೆ ನಿಲ್ದಾಣಕ್ಕೆಂದು ತೆರಳುವರೇ ಮನೆಯಿಂದ ಅವರ ಗಂಡನ ಬಾಬ್ತು ಬೈಕು ನಂಬ್ರ ಕೆಎ 19ಇಜಿ 3225 ನೇದರಲ್ಲಿ ಸಹಸವಾರರಾಗಿ ಕುಳಿತು ಮದ್ಯಾಹ್ನ ಸುಮಾರು 13-40 ಗಂಟೆಗೆ ತಲಪಾಡಿಯ ನಿಸರ್ಗ ಬಾರ್ಎಂಬಲ್ಲಿ ತಲುಪುತ್ತಿದ್ದಂತೆ ಕೇರಳ ಕಡೆಯಿಂದ ಬಂದ ಕೆಎಸ್ಆರ್ಟಿಸಿ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಇನ್ನೊಂದು ವಾಹನವನ್ನು ಹಿಂದಕ್ಕೆ ಹಾಕುವರೇ ಒವರ್ಟೇಕ್ಮಾಡಿಕೊಂಡು ಬಂದು ಪಿರ್ಯಾದುದಾರರು ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಬೈಕ್ಸಮೇತ ಕೆಳಗೆ ಬಿದ್ದ ಪರಿಣಾಮ ಅವರ ಬಲಕಾಲಿಗೆ ರಕ್ತಗಾಯವಾಗಿರುತ್ತದೆ ಅಲ್ಲದೆ ಬೈಕ್ ಸವಾರನಿಗೆ ಬಲಕಾಲಿಗೆ, ಬಲಕೈಗೆ ರಕ್ತ ಗಾಯವಾಗಿರುತ್ತದೆ ಪಿರ್ಯಾದುದಾರರ ಬೈಕು ಸಂಪೂರ್ಣ ಜಖಂಗೊಂಡಿರುತ್ತದೆ ಸದ್ರಿ ಬಸ್ನಂಬ್ರ ಕೆಎ-19-ಎಫ್‌-3184 ಆಗಿದ್ದು ಅಪಘಾತಕ್ಕೆ ಬಸ್ಸಿನ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೆ ಕಾರಣವಾಗಿರುತ್ತದೆ.

 

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28.10.2014 ರಂದು ರಾತ್ರಿ 20.00 ಗಂಟೆಗೆ  ಪಿರ್ಯಾದಿದಾರರಾದ ಶ್ರೀ ಉಮಾನಾಥ್ ರವರು ತನ್ನ ಬಾಬ್ತು ಕೆಎ-19-ಇಎಲ್‌‌-3205 ನೇ ಸುಜುಕಿ ಸ್ವಿಸ್‌‌‌ ಮೋಟಾರ್‌‌ ಸೈಕಲ್‌‌ನ್ನು ಎಂದಿನಂತೆ  ತಮ್ಮ ಪಚ್ಚನಾಡಿ ವೈದ್ಯನಾಥನಗರದಲ್ಲಿರುವ ಮನೆಯ ಮುಂಭಾಗ ಆವರಣದಲ್ಲಿ  ನಿಲ್ಲಿಸಿದ್ದು ದಿನಾಂಕ: 29.10.2014 ರಂದು ಬೆಳಿಗ್ಗೆ  7.30 ಗಂಟೆಗೆ ನೋಡುವಾಗ ಮನೆಯ ಮುಂದೆ ನಿಲ್ಲಿಸಿದ್ದ ಸದ್ರಿ ಮೋಟಾರ್‌‌ ಸೈಕಲ್‌‌ ಕಾಣೆಯಾಗಿದ್ದು ಸದ್ರಿ ಮೋಟಾರ್‌‌ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿಯೂ ಕಳವಾದ ಮೋಟಾರ್‌‌ ಸೈಕಲ್‌‌ ಮೌಲ್ಯ ರೂಪಾಯಿ 35000/- ಆಗಬಹುದು.

No comments:

Post a Comment