Tuesday, October 21, 2014

Daily Crime Reports 21-10-2014

ದೈನಂದಿನ ಅಪರಾದ ವರದಿ.

ದಿನಾಂಕ 21.10.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-10-2014 ರಂದು ರಾತ್ರಿ ಸುಮಾರು 09-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಸವರಾಜ ರವರು ತನ್ನ ಪರಿಚಯದ ಲಕ್ಷ್ಮಣ ಮತ್ತು ರಮೇಶರವರೊಂದಿಗೆ ತನ್ನ ಮನೆಯ ಕಡೆಗೆ ಹೋಗುತ್ತಾ ಮಕರಣ ಮಾರ್ಬಲ್ ಬಳಿ ಹೊಸದಾದ ನೊಂದಣಿ ಸಂಖ್ಯೆಯಾಗಬೇಕಾಗಿರುವ ದ್ವಿಚಕ್ರ ವಾಹನವೊಂದನ್ನು ಅದರ ಸವಾರ ಪ್ರದೀಪ್ ಎಂಬವರು ಮಂಗಳೂರು ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಫಿರ್ಯಾದಿದಾರರಿಗೆ ಡಿಕ್ಕಿಪಡಿಸಿದ ಪರಿಣಾಮ ಎಡಗಾಲಿಗೆ ಮೂಳೆ ಮುರಿತದ ಗಾಯವಾಗಿ ಒಳರೋಗಿಯಾಗಿಯೂ, ವಾಹನ ಸವಾರರಾದ ಪ್ರದೀಪ್ ಮತ್ತು ಸಹಸವಾರರಾದ ಸಾವಂತ ಎಂಬವರಿಗೂ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರು ಜೆ ಆಸ್ಪತ್ರೆಗೆ ಹೊರರೋಗಿಯಾಗಿ ದಾಖಲಾಗಿರುತ್ತಾರೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19-10-2014 ರಂದು ರಾತ್ರಿ ಸುಮಾರು 9:15 ಗಂಟೆಗೆ ಮಂಗಳೂರು ನಗರದ ಮಂಕಿಸ್ಟಾಂಡ್‌‌ 1ನೇ ಕ್ರಾಸ್‌‌ನಲ್ಲಿ ಪಿರ್ಯಾದಿದಾರರಾದ ಶ್ರೀ ಎಬಿನ್ ಕೆ. ಜೋಸೇಫ್ ರವರು ತನ್ನ ಸ್ನೇಹಿತ ಕಿರಣ್ನೊಂದಿಗೆ ಕೆಎಲ್‌‌‌-13-ಎಕ್ಸ್‌‌‌-9304 ನಂಬ್ರದ ಮೋಟಾರು ಸೈಕಲಿನಲ್ಲಿ ವಲೆನ್ಸಿಯಾದಿಂದ ಪಾಂಡೇಶ್ವರದ ಕಡೆಗೆ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ನಿಲ್ಲಿಸಿದ್ದ ಕೆಎ-19--7292 ನಂಬ್ರದ ಆಟೋರಿಕ್ಷಾನ್ನು ಅದರ ಚಾಲಕನು ಯಾವುದೇ ಇಂಡಿಕೇಟರ್ಹಾಕದೇ ಒಮ್ಮೆಲೆ ನಿರ್ಲಕ್ಷತನದಿಂದ ಬಲಕ್ಕೆ ತಿರುಗಿಸಿ ಕಿರಣ್‌‌ರವರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿ ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರ ಬೆನ್ನಿನ ಮೂಳೆಗೆ ನೋವುಂಟಾಗಿದ್ದು, ಹಾಗೂ ಮೋಟಾರು ಸೈಕಲ್ಸವಾರ ಕಿರಣ್ರವರ ಎಡಕೈ ಮೊಣಗಂಟಿನ ಬಳಿ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರು ಮಂಗಳೂರಿನ ಫಾದರ್ಮುಲ್ಲರ್ಸ್ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಕಿರಣ್ರವರು ಫಾದರ್ಮುಲ್ಲರ್ಸ್ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಲತಾ ರವರು ಸ್ವಸಹಾಯ ಮೀಟಿಂಗ್ ಬಗ್ಗೆ ಮಂಗಳೂರು ತಾಲೂಕು ಬೋಳಿಯಾರ್ ಗ್ರಾಮದ ಬೋಳಿಯಾರ್ ಎಂಬಲ್ಲಿಗೆ ತನ್ನ ಮನೆಯಿಂದ ಗಂಡ ಕೃಷ್ಣಪ್ಪ ಅವರು ಅವರ ಬಾಬ್ತು KA 21 H 1076ನೇ ಮೋಟಾರ್ ಸೈಕಲ್  ನಲ್ಲಿ  ಕರೆದುಕೊಂಡು ಬೆಳಿಗ್ಗೆ ಸುಮಾರು 10-00 ಗಂಟೆ ಸಮಯಕ್ಕೆ ಬೋಳಿಯಾರ್ ನಲ್ಲಿ ಬಿಟ್ಟು ನಂತರ ಸಂಜೆ ಬೋಳಿಯಾರ್ ಬರುವುದಾಗಿ ಹೇಳಿ ಮೋಟಾರ್ ಸೈಕಲ್ ನಲ್ಲಿ ಹೊರಟು ಹೋಗಿದ್ದು ಸಂಜೆಯಾದರೂ ಬಾರದೇ ಇದ್ದು ಅವರಿಗೆ ಫೋನು ಕರೆ ಮಾಡಿದಾಗ ಮೊದಲು ಇರಾ ಗ್ರೌಂಡಿನಲ್ಲಿ ಇರುವುದಾಗಿವೂ ನಂತರ ಕರೆ ಮಾಡಿದಾಗ ಮುಡಿಪು ಜಂಕ್ಷನ್ ನಲ್ಲಿರುವುದಾಗಿಯೂ ತಿಳಿಸಿದ್ದು ನಂತ್ರ ತಡರಾತ್ರಿಯಾದರು ಬಾರದೇ ಇದ್ದುದರಿಂದ ಹುಡುಕಲಾಗಿ ಪತ್ತೆಯಾಗದೇ ಇದ್ದು, ಮುಡಿಪು ಸಮೀಪದ ಇರಾ ದ್ಯಾರದ ಬಳಿ ರಾತ್ರಿಮೋಟಾರ್ ಸೈಕಲ್ಲ ಪತ್ತೆಯಾಗಿದ್ದು ಪಿರ್ಯಾದಿದಾರರ ಗಂಡ ಈವರೆಗೆ ಪತ್ತೆಯಾಗಿರುವುದಿಲ್ಲ.

 

4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-10-2014 ರಂದು ಸಂಜೆ 7-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಸಂದೀಪ್ ರವರು ಅಂಗನವಾಡಿಯ ರಸ್ತೆಯ ಕೆಳಗೆ ಕದ್ರಿ ಟೆಂಪಲ್ ನ್ಯೂ ರೋಡ್ ಬಳಿ ಸ್ನೇಹಿತರಾದ ಅಶ್ವತ್ ಮತ್ತು ಅಶ್ವಿನ್ ರವರ ಜೊತೆ ನಿಂತಕೊಂಡಿದ್ದ  ಸಮಯ ತನ್ನ ಪರಿಚಯದ ಯತಿರಾಜ್, ದೀಪಕ್, ದಿನೇಶ್  ಮತ್ತು ದೀಪು @ ದೀಪಕ್ ಮತ್ತು ಇತರರು ಮೂರು ಬೈಕಿನಲ್ಲಿ ಬಂದು ಪಿರ್ಯಾದಿ ಮತ್ತು ಆತನ ಸ್ನೇಹಿತರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ನೀವು ಬಾರಿ ತಾಗುತ್ತೀರಾ ಎಂದು ಹೇಳಿ ಆರೋಪಿಗಳ ಪೈಕಿ ಯತಿರಾಜ್ ನು ಆತನ ಕೈಯಲ್ಲಿದ್ದ ಹೆಲ್ಮೆಟ್ ನಿಂದ ಪಿರ್ಯಾದಿಯ ಮುಖಕ್ಕೆ ಬಲವಾಗಿ ಹಲ್ಲೆ ನಡೆಸಿದ್ದಲ್ಲದೇ ಉಳಿದ ಆರೋಪಿತರು ಕೈಗಳಿಂದ ತುಟಿಯ ಮೆಲ್ಗಡೆ ಹಲ್ಲುಗಳಿಗೆ ಗುದ್ದಿ ತೀವ್ರತರಹದ ರಕ್ತಗಾಯ ಮಾಡಿದ್ದಲ್ಲದೇ ಪಿರ್ಯಾದಿ ಜೊತೆಗಿದ್ದ ಅಶ್ವತ್ & ಅಶ್ವಿನ್ ರವರಿಗೆ ಕೂಡಾ ಹೆಲ್ಮೇಟ್ ನಿಂದ ಮತ್ತು ಕೈಗಳಿಂದ ಹಲ್ಲೆ ನಡೆಸಿದ್ದು ಪಿರ್ಯಾದಿದಾರನ್ನುದ್ದೇಶಿಸಿ ನಮಗೆ ಬಾರಿ ತಾಗುತ್ತೀರಾ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು ಪೊಲೀಸರಿಗೆ ದೂರು ನೀಡಿದರೆ ನಿಮಗೆ ಒಂದು ವಾರದಲ್ಲಿ ಕೊಲೆ ಮಾಡದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದು, ಘಟನೆಗೆ ಹಿಂದೆ ಪಿರ್ಯಾದಿದಾರರಿಗೂ ಆರೋಪಿಗಳ ಪೈಕಿ ಯತಿರಾಜ್ ಹಾಗೂ ಆತನ ಸ್ನೇಹಿತರ ಜೊತೆಯಲ್ಲಿ ಮಾತಿನ ಜಗಳವಾಗಿದ್ದು ಇದೇ ಕಾರಣದಿಂದ ಆರೋಪಿತರು ಕೃತ್ಯ ಎಸೆಗಿರುವುದಾಗಿದೆ.

 

5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-10-2014 ರಂದು ಪಿರ್ಯಾದಿದಾರರಾದ ಶ್ರೀ ಟಿ.ಡಿ. ನಾಗರಾಜ್, ಪೊಲೀಸ್ ನಿರೀಕ್ಷಕರು, ಮಂಗಳೂರು ಪೂರ್ವ ಪೊಲೀಸ್ ಠಾಣೆ ರವರು ಕರ್ತವ್ಯದಲ್ಲಿರುವಾಗ ಸಮಯ ಸಂಜೆ 19-00 ಗಂಟೆಗೆ ಮಂಗಳೂರು ನಗರದ ಕದ್ರಿ ಸ್ಮಶಾನಗುಡ್ಡೆ ಬಳಿ ಇರುವ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಜುಗಾರಿ ಆಟ ಆಡುತ್ತಿದ್ದಾರೆ ಎಂದು ಬಂದ ಖಚಿತ ವರ್ತಮಾನದಂತೆ ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಸ್ಥಳದಲ್ಲಿ ಟೆಂಟ್ ಹಾಕಿಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಎಂಬ ಜುಗಾರಿ ಆಟವಾಡುತ್ತಿರುವುದನ್ನು ಸ್ವಲ್ಪ ದೂರದಿಂದ ಕಂಡು ಪಂಚರಿಗೆ ವಿಷಯವನ್ನು ತಿಳಿಸಿ ದಾಳಿ ನಡೆಸಿದಾಗ ಸಮವಸ್ತ್ರದಲ್ಲಿದ್ದ ಪಿರ್ಯಾದಿ ಹಾಗೂ ಸಿಬ್ಬಂದಿಗಳನ್ನು ಕಂಡು ಜುಗಾರಿ ಆಟ ಆಡುತ್ತಿದ್ದ ವ್ಯಕ್ತಿಗಳು ಓಡಿ ಪರಾರಿಯಾಗಿದ್ದು, ಸ್ಥಳಪರಿಶಿಲಿಸಿದಾಗ ಮೇಲಕ್ಕೆ ಪ್ಲಾಸ್ಟಿಕ್ ಶೀಟ್ ಅಳವಡಿಸಿದ ಟೆಂಟ್ ಹಾಕಿದ ಸ್ಥಳವಾಗಿದ್ದು, ಒಂದು ಪ್ಲಾಸ್ಟಿಕ್ ಟೇಬಲ್, ಅದರ ಸುತ್ತಲೂ 10 ಪ್ಯಾಸ್ಟಿಕ್ ಚೆಯರ್ ಗಳೂ, ಟೇಬಲ್ ಮೇಲೆ ಒಂದು ಬ್ಲಾಂಕೆಟ್ ಹಾಸಿದ್ದು ಅದರ ಮೇಲೆ ಇಸ್ಪೀಟ್ ಎಲೆಗಳು ಹಾಗೂ ಹಣವು ಬಿದ್ದಿದ್ದು ಪರಿಶೀಲಿಸಲಾಗಿ ಇಸ್ಪೀಟ್ ಎಲೆಗಳು-44 ಹಾಗೂ ನಗದು ರೂ.2,330/- ಇದ್ದು ಇವುಗಳನ್ನು ಮುಂದಿನ ಕ್ರಮಕ್ಕೆ ಸ್ವಾಧಿನಪಡಿಸಿಕೊಂಡಿದ್ದು, ಪರಿಶೀಲಿಸಲಾಗಿ ಸೋನಿ ಕಂಪೆನಿಯ LCD TV-01, (ಅಂದಾಜು ಬೆಲೆ 20,000/-) ಸ್ಟಾಂಡ್ ಪ್ಯಾನ್ ಗಳು-02(ಅಂದಾಜು ಬೆಲೆ 4,000/-)  ಇಸ್ಪೀಟ್ ಎಲೆಗಳ ಬಾಕ್ಸ್ 12 ಪ್ಯಾಕೇಟ್ ಇನ್ನೊಂದು ಮೂಲೆಯಲ್ಲಿ ಇನ್ ವರ್ಟರ್ -01 ಇದಕ್ಕೆ ಜೊಡಿಸಿದ್ದ ಲುಮಿನೋಸ್ ಕಂಪೆನಿಯ ಬ್ಯಾಟರಿ-01(ಅಂದಾಜು ಬೆಲೆ 8,000/-) ಎಲ್ಲಾ ಸೊತ್ತುಗಳನ್ನು ಪಂಚರ ಸಮಕ್ಷಮದಲ್ಲಿ ತಕ್ಷೀರು ಸ್ಥಳದಲ್ಲಿ ಮಹಜರನ್ನು ಬರೆದು ಸೋತ್ತುಗಳ ಸಮೇತ ಠಾಣೆಗೆ ಬಂದು ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಜುಗಾರಿ ಆಟ ಆಡಿ ದಾಳಿ ಸಮಯ ಓಡಿ ಹೋಗಿ ತಲೆಮರೆಸಿಕೊಂಡಿರುವ ಆರೋಪಿಗಳ ಹಾಗೂ ಜುಗಾರಿ ಆಟಕ್ಕೆ ಸಹಕರಿಸಿದ ಆರೋಪಿಗಳ ವಿರುದ್ದ ಕ್ರಮ ಜರುಗಿಸಿರುವುದಾಗಿದೆ.

 

6.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಎಂ.ಪಿ. ದಿನೇಶ್ ರವರು ಸೆಂಟ್ರಲ್ ಟಾಕೀಸ್ ಬಳಿ ಎಂ.ಪಿ. ಸಿಲ್ಕ್ ಎಂಬ ಬಟ್ಟೆ ಅಂಗಡಿಯನ್ನು ಹೊಂದಿದ್ದು, ದಿನಾಂಕ 19-10-2014 ರಂದು 21:00 ಗಂಟೆಗೆ ಅಂಗಡಿಯನ್ನು ಬಂದು ಮಾಡಿ ಹೋಗಿದ್ದು,  ದಿನಾಂಕ 20-10-2014 ರಂದು ಬೆಳಿಗ್ಗೆ 08:00 ಗಂಟೆಗೆ ಅಂಗಡಿ ಬಳಿಗೆ ಬಂದಾಗ ಅಂಗಡಿಯ ಶಟರ್ ಬಾಗಿಲಿನ ಬೀಗ ಮುರಿದಿದ್ದು, ಸೆಂಟ್ರಲ್ ಲಾಕನ್ನು ಜಖಂ ಮಾಡಿರುವುದು ಕಂಡು ಬಂತು. ಬಳಿಕ ಶಟರ್ ಬಾಗಿಲನ್ನು ತೆರದು ಒಳ ಗಡೆ ಹೋಗಿ ನೋಡಲಾಗಿ ಅಂಗಡಿಯ ಕ್ಯಾಶ್ ಕೌಂಟರಿನ ಡ್ರಾವರನ್ನು ಬಲಾತ್ಕಾರವಾಗಿ ತೆರೆದು ಒಳಗಡೆ ಇರಿಸಿದ್ದ ವ್ಯಾಪಾರದ ಹಣ ರೂ. 93,000/- ನಗದು ಹಾಗೂ ಸೋನಿ ಹ್ಯಾಂಡ್ ಕ್ಯಾಮರಾ ಕಳವಾಗಿರುವುದು ಕಂಡು ಬಂದಿರತ್ತದೆ. ಕ್ಯಾಮರದ ಬೆಲೆ ಅಂದಾಜು ರೂ 10, 000/- ಆಗಬಹುದು. ಕಳವಾದ ಒಟ್ಟು ಮೌಲ್ಯ ರೂ. 1,03,000/- ಆಗಬಹುದು.

 

7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-10-2014 ರಂದು ಬೆಳಿಗ್ಗೆ 09:00 ಗಂಟೆಗೆ ಬೆಳುವಾಯಿ ಗ್ರಾಮದ ದೇವಿನಗರ ಎಂಬಲ್ಲಿ ರಸ್ತೆ ಬದಿಯಲ್ಲಿ ನಡೆದುಕೋಂಡು ಹೊಗುತ್ತಿದ್ದ ಪಿರ್ಯಾದಿದಾರರಾದ ಶ್ರೀ ರಾಮಾ ಪೂಜಾರಿ ರವರ ಚಿಕ್ಕಮ್ಮ ಜಲಜಾ ಪುಜಾರ್ತಿ ಎಂಬವರಿಗೆ ಮಾರ್ನಾಡು ಕಡೆಯಿಂದ ಕೆಎ 19 ಇಕೆ 2969 ಮೊಟಾರು ಸೈಕಲ್ ಸವಾರ ರಮೇಶ್ ಆಚಾರಿ ಎಂಬುವನು ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ಜಲಜಾ ಪೂಜಾರ್ತಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಾಯವಾಗಿ ಚಿಕಿತ್ಸೆಯ ಬಗ್ಗೆ ಬೆಳುವಾಯಿ ಗೀತಾ ಕ್ಲಿನಿಕ್ ಗೆ ಕರೆದುಕೊಂಡು ಹೊಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೇ 02:00 ಗಂಟೆಗೆ ಮೃತಪಟ್ಟಿರುವುದಾಗಿದೆ.

No comments:

Post a Comment