Wednesday, October 15, 2014

Daily Crime Reports 15-10-2014

ದೈನಂದಿನ ಅಪರಾದ ವರದಿ.

ದಿನಾಂಕ 15.10.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

0

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:10-10-2014 ರಂದು  ಪಿರ್ಯಾದಿದಾರರಾದ ಶ್ರೀ ರಾಘವೇಂದ್ರ ರವರು ತನ್ನ ತಂದೆಯಾದ ಶ್ರೀ ಮೋಹನದಾಸ ಪ್ರಾಯ 57 ವರ್ಷ ಎಂಬುವರು ದಿನನಿತ್ಯ ಅಮಲು ಪದಾರ್ಥ ಸೇವಿಸುತ್ತಿದ್ದು ಜಾಸ್ತಿ ಕುಡಿಯಬಾರದಾಗಿ ಬುದ್ದಿ ಹೇಳಿದ್ದು  ದಿನಾಂಕ:11-10-2014 ರಂದು ಶ್ರೀ ಮೋಹನದಾಸರವರು  ಸೋಡಾವನ್ನು ACE GOODSಗೆ ಲೋಡ್ ಮಾಡಿಕೊಂಡು ಕೆಲಸಕ್ಕೆಂದು ಹೋದವರು ಮಲ್ಲಿಕಟ್ಟೆಯ ಕದ್ರಿ ಟೇಂಪೋ ಪಾರ್ಕ, ಜುಗುಲ್ ಟವರಸ್ ಎದುರುಗಡೆಯಿಂದ GOODS ವಾಹನವನ್ನು  ಪಾರ್ಕ್ ಮಾಡಿ ಹೋದವರೂ ವರೆಗೆ ಮನೆಗೂ ಬಾರದೇ, ಸಂಬಂದಿಕರ ಮನೆಗೆ ಹೋಗದೇ ಕಾಣೆಯಾಗಿರುತ್ತಾರೆ.

 

2.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಗುರುದತ್ತ್ ಕಾಮತ್ ರವರು ಮೈಕ್ರೋ ಮ್ಯಾಕ್ಸ್ ಮತ್ತು GiONEE ಎಂಬ ಸಂಸ್ಥೆಯ ಮೊಬೈಲ್ ಡಿಸ್ಟಿಬ್ಯೂಟರ್ ಕೆಲಸ ಮಾಡಿಕೊಂಡಿದ್ದು, ಕಳೆದ ನಾಲ್ಕು ತಿಂಗಳಿನಿಂದ ಬಾಬುಲಾಲ್ ಹಾಗೂ ಅರ್ಜುನ್ ಎಂಬವರ ಬಾಬ್ತು ಮಯೂರು ಎಂಟರ್ ಪ್ರೈಸಸ್ ಸಿಟಿ ಟವರ್ ಒಂದನೇ ಮಹಡಿ ಶಾಫ್ ನಂಬ್ರ 4, ಮೈದಾನ್ ಉತ್ತರ ರೋಡ್ ಮಂಗಳೂರು -1 ಎಂಬ ಹೋಲ್ ಸೇಲ್ ಮೊಬೈಲ್ ಡಿಲರ್ ಗೆ ಫಿರ್ಯಾದಿದಾರರ ಸಂಸ್ಥೆಯ ಮೊಬೈಲ್ ಸೆಟ್ ಗಳನ್ನು ಸಪ್ಲೈ ಮಾಡಿರುತ್ತಾರೆ. ಅವರು ಎರಡು ತಿಂಗಳು ಕಂಪೆನಿಯ ನಿಯಮದಂತೆ ನಗದು ಹಣ ನೀಡಿ ವ್ಯವಹಾರ ನಡೆಸಿದ್ದು, ನಂತರ ಕಳೆದ ಎರಡು ತಿಂಗಳಿನಿಂದ ಸಪ್ಲೈ ಮಾಡಿದ ಮೊಬೈಲ್ ಹಣವನ್ನು ಚೆಕ್ ರೂಪದಲ್ಲಿ ನೀಡಿರುತ್ತಾರೆ.  ಆರೋಪಿಗಳು  ನೀಡಿದ ಎಲ್ಲಾ ಚೆಕ್ ಗಳು ಬೌನ್ಸ್ ಆಗಿದ್ದು, ಫಿರ್ಯಾದಿದಾರರಿಗೆ ಸುಮಾರು 2,38,000/- ರೂ ಹಣ ಬರಬೇಕಾಗಿದ್ದು, ಆರೋಪಿಗಳು ಫಿರ್ಯಾದಿದಾರರಿಗೆ ಮೋಸ ಮಾಡಿ ಅಂಗಡಿ ಬಂದ್ ಮಾಡಿ ತಮ್ಮ 9986860277 ಮತ್ತು 9986860488 ನೇ ನಂಬ್ರದ ಮೊಬೈಲ್ ದೂರವಾಣಿಯ ಸ್ವಿಚ್ಛ ಆಫ್ ಮಾಡಿದ್ದು, ಅಲ್ಲದೇ ಫಿರ್ಯಾದಿದಾರರ ಸ್ನೇಹಿತನಾದ ರಂಜಿತ್ ಮಾಲಕರು ಶ್ರೀ ಎಂಟರ್ ಪ್ರೈಸಸ್,  ರವಿ ಕೆ ಬಿ ಮಾಲಕರು ಎಸ್ಟ್ರಾ ಲೈಫ್ ಸೊಲ್ಯೂಷನ್, ರಾಕೇಶ್ ಶೆಟ್ಟಿ ಮಾಲಕರು ಪದ್ಮಾ ಎಂಟರ್ ಪ್ರೈಸಸ್, ರಿಚಾರ್ಡ್ ರಸ್ಕಿನ್ನಾ ಮಾಲಕರು ಆರ್ವೀಸ್ ಎಜೇನ್ಸಿ ಮತ್ತು ಜೀವನ್ ಮಾಲಕರು ಗ್ರೀನ್ಸ್ ಎಂಟರ್ ಪ್ರೈಸಸ್ ಎಂಬವರಿಗೂ ಕೂಡ ನಂಬಿಕೆ ದ್ರೋಹ ಮಾಡಿ  ಮೋಸ ಮಾಡಿದ್ದು, ಒಟ್ಟು ಸುಮಾರು 40,00,000/- ರೂಪಾಯಿ ಮೋಸ ಮಾಡಿ ಪರಾರಿಯಾಗಿರುತ್ತಾರೆ.

 

3.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಜಯಂತ್, ಎಎಸ್ಐ, ಮಂಗಳೂರು ದಕ್ಷೀಣ ಠಾಣೆ ರವರು ದಿನಾಂಕ 14-10-2014 ರಂದು ರಾತ್ರಿ  23-00 ಗಂಟೆಯಿಂದ ಠಾಣಾ ಸರಹದ್ದು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ, ಅವರಿಗೆ ದಿನಾಂಕ 15-10-2014 ರಂದು ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ 2ನೇ ಪ್ಲಾಟ್ ಫಾರಂ ಬಳಿ ಸಾರ್ವಜನಿಕ ಸ್ಥಳದಲ್ಲಿ  ಗಲಾಟೆಯಾಗುತ್ತಿದೆ ಎಂಬ ಖಚಿತ ಮಾಹಿತಿಯಂತೆ, ಸದ್ರಿ ಸ್ಥಳಕ್ಕೆ 00-30 ಗಂಟೆಗೆ ಹೋದಾಗ, [1] ಅಬ್ದುಲ್ ರೆಹಮಾನ್, [2] ದಿಲೀಪ್ ಡಿ.ಸೋಜಾ, [3] ರಾಜೇಂದ್ರ, [4] ನಮ್ರತ್ ಮತ್ತು [5] ನವೀನ ಎಂಬವರುಗಳು ಸಾರ್ವಜನಿಕ ಸ್ಥಳದಲ್ಲಿ ಬೈದಾಡಿಕೊಂಡು, ಕೈಯಿಂದ ಹೊಡೆದಾಡಿಕೊಂಡು ಹೊಯ್ ಕೈ ನಡೆಸುತ್ತಿದ್ದವರ ಬಳಿಗೆ ಪಿರ್ಯಾದಿದಾರರು ಹೋಗಿ ಗಲಾಟೆ ಮಾಡದಂತೆ ಅವರಿಗೆ ತಿಳಿಸಿದರೂ ಕೂಡಾ ಅವರುಗಳು ಪುನ: ಪರಸ್ಪರ ಹೊಯ್ ಕೈ ನಡೆಸಿ ಗಲಾಟೆ ಮಾಡುತ್ತಿದ್ದವರನ್ನು ವಿಚಾರಿಸಿ ಅವರ ಹೆಸರು ವಿಳಾಸ ತಿಳಿಯಲಾಗಿ  [1] ಅಬ್ದುಲ್ ರೆಹಮಾನ್ ಪ್ರಾಯ 24 ವರ್ಷ, ತಂದೆ: ಬಿ.ಹೆಚ್.ಬಾವಾ, ವಾಸ: ಸಂತೋಷ್ ನಗರ, ಪೆರ್ಮನ್ನೂರು ಗ್ರಾಮ, ಮಂಗಳೂರು ತಾಲೂಕು [2] ದಿಲೀಪ್ ಡಿ.ಸೋಜಾ  ಪ್ರಾಯ 22 ವರ್ಷ, ತಂದೆ: ಫೆಡ್ರಿಕ್ ಡಿ.ಸೋಜಾ, ವಾಸ: ಬೈಸನ್ ವಿಲ್ಲಾ, ಉಳ್ಳಾಲ ಉಳಿಯಾ, ಉಳ್ಳಾಲ ಗ್ರಾಮ [3] ರಾಜೇಂದ್ರ ಪ್ರಾಯ 39 ವರ್ಷ, ತಂದೆ: ದಿ.ಸುಬ್ಬಯ್ಯ, ವಾಸ: ಸೇವಂತಿ ಗುಡ್ಡೆ ಮನೆ ಪೆರ್ಮನ್ನೂರು ಗ್ರಾಮ ಮಂಗಳೂರು [4] ನಮ್ರತ್ ಪ್ರಾಯ 24 ವರ್ಷ,ತಂದೆ: ಜನಾರ್ಧನ, ವಾಸ: ಭಗವತಿ ನಿಲಯ ಕುಂಪಳ, ಸೋಮೇಶ್ವರ ಗ್ರಾಮ, ಮಂಗಳೂರು  ಹಾಗೂ ತೊಕ್ಕೊಟ್ಟು ವಾಸಿ ನವೀನ  ಎಂಬಾತನು ಸ್ಥಳದಿಂದ ಓಡಿ ಹೋಗಿದ್ದು, ಇವರುಗಳು ಗಲಾಟೆಗೆ ಉಪಯೋಗಿಸಿದ ಕಾರು ನಂಬ್ರ ಕೆಎ 19 ಎಮ್ 1757 ನೇದನ್ನು ಹಾಗೂ ಆರೋಪಿತರುಗಳಾದ,  ಅಬ್ದುಲ್ ರೆಹಮಾನ್, ದಿಲೀಪ್ ಡಿ.ಸೋಜಾ, ರಾಜೇಂದ್ರ, ನಮ್ರತ್ ಇವರುಗಳನ್ನು ವಶಕ್ಕೆ ಪಡೆದು ಕೊಂಡು ಮುಂದಿನ ಕ್ರಮದ ಬಗ್ಗೆ ಠಾಣೆಗೆ ತಂದು ಹಾಜರುಪಡಿಸಿರುವುದಾಗಿದೆ.

 

4.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13.10.2014 ರಂದು ಪಿರ್ಯಾದುದಾರರಾದ ಶ್ರೀ ಪ್ರವೀಣ್ ಕುಮಾರ್ ರವರ ಮಾಲಕತ್ವದ KA-19-AA-1115ನೇ ನಂಬ್ರದ ಬಸ್ಸನ್ನು ಅದರ ಚಾಲಕ ಅನ್ವರ್ ಎಂಬವರು ಮೂಡುಶೆಡ್ಡೆ ಕಡೆಯಿಂದ ತಲಪಾಡಿ ಕಡೆಗೆ ಟ್ರಿಪ್ನ್ನು ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ 09:00 ಗಂಟೆ ಸಮಯಕ್ಕೆ ಕುಲಶೇಖರ ಬಳಿ ತಲುಪುತ್ತಿದ್ದಂತೆ PY-01-BL-5595ನೇ ನಂಬ್ರದ ಕಾರನ್ನು ಸದ್ರಿ ಬಸ್ಸಿಗೆ ಅಡ್ಡ ಇಟ್ಟು ಬಸ್ಸನ್ನು ಮುಂದಕ್ಕೆ ಚಲಿಸದಂತೆ ತಡೆಯೊಡ್ಡಿ, ಕಾರಿನೊಳಗಿದ್ದ ಜೋಸ್ಸಿ ಡಿ'ಸೋಜಾ, ದಿಲ್ರಾಜ್ ಫೆರ್ನಾಂಡೀಸ್ ಮತ್ತು ಇತರರು ಮಾರಕಾಯುಧಗಳೊಂದಿಗೆ ಕಾರಿನಿಂದ ಕೆಳಗಿಳಿದು ಸದ್ರಿ ಬಸ್ರಿನ ಚಾಲಕ ಅನ್ವರ್ ಮತ್ತು ನಿರ್ವಾಹಕ ರಾಕೇಶ್ ಎಂಬವರ ಮೇಲೆ ಹಲ್ಲೆ ಮಾಡಿದುದಲ್ಲದೇ ಪಿರ್ಯಾದುದಾರರನ್ನು ಮತ್ತು ಸದ್ರಿ ಬಸ್ಸಿನ ಮ್ಯಾನೇಜರ್ ರಾಜೇಶ್ ಎಂಬವರನ್ನು ಇನ್ನೆರಡು ದಿನಗಳಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿದೆ.

No comments:

Post a Comment