Saturday, October 18, 2014

Daily Crime Reports 18-10-2014

ದೈನಂದಿನ ಅಪರಾದ ವರದಿ.

ದಿನಾಂಕ 18.10.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-10-2014 ರಂದು ಪಿರ್ಯಾದಿದಾರರಾದ ಶ್ರೀ ಗುರು ಪ್ರಸಾದ್ ರವರು  ಕದ್ರಿ ಶೀ ಮಂಜುನಾ ದೇವಸ್ಥಾನದಿಂದ ಕಲಶ  ಸ್ನಾ ಮಾಡಿ ಮನೆ ಕಡೆ ತನ್ನ ಬಾಬ್ತು ಕೆಎ.19 ಇಜೆ-3755  ನೇ ನಂಬ್ರ ದ್ವಿ-ಚಕ್ರ ವಾಹನದಲ್ಲಿ ತನ್ನ  ಮಾವ ಪ್ರಕಾಶ್ ಬಂಗೇರ ರವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ತಾನು ಸವಾರನಾಗಿ ದೇವಾಸ್ಧನದಿಂದ ಹೊರಟು ಎನ್ ಹೆಚ್ 66 ರಲ್ಲಿ ಬರುತ್ತಾ  ಬೆಳಗ್ಗೆ 07.55 ಗಂಟೆಗೆ ಜೋಕಟ್ಟೆ ಕ್ರಾಸ್ ರಸ್ತೆ ಬಳಿಗೆ ತಲುಪಿದಾಗ ತನ್ನ ಎಡ ಬದಿಯಿಂದ ಹೋಗುತ್ತಿದ್ದ ಕೆಎ.31-5382 ನೇ ನಂಬ್ರದ ಲಾರಿಯನ್ನು ಅದರ ಚಾಲಕ ಬಳಿಕ ಹೆಸರು  ತಿಳಿಯಲಾದ ಮಹಮ್ಮದ್ ರಫೀಕ್ ಎಂಬವರು ನಿರ್ಲಕ್ಷತನದಿಂದ ಯಾವುದೇ ಸೂಚನೆ ನೀಡದೇ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಏಕಾಏಕಿ  ಬಲಕ್ಕೆ ತಿರುಗಿಸಿದ ಪರಿಣಾಮ  ದ್ವಿ-ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದು ದ್ವಿ-ಚಕ್ರ ವಾಹನವು ಲಾರಿಯ ಅಡ್ಡಿಗೆ ಸಿಲುಕಿದ್ದು ಫಿರ್ಯಾದಿ ಗೆ ಸಾಮಾನ್ಯ ಸ್ವರೂಪ ಗಾಯಾವಾಗಿದ್ದು ಸಹ ಸವಾರ ಪ್ರಕಾಶ್ ಎಂಬವರಿಗೆ ಗಂಭೀರ ಸ್ವರೂಪ ಗಾಯಾವಾಗಿರುವುದಾಗಿದೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-10-.2014 ರಂದು ಪಿರ್ಯಾದಿದಾರರಾದ ಶ್ರೀ ಮಂಜುನಾಥ್ ರವರು ಮಂಗಳೂರು ನಗರದ ಲಾಲ್ಬಾಗ್ನಲ್ಲಿರುವ ಪಬ್ಬಾಸ್‌‌ ಐಸ್ಕ್ರೀಂ ಪಾರ್ಲರ್ ಹಿಂದುಗಡೆಯ ಫ್ಲಾಟ್ನಿಂದ ತನ್ನ ತಾಯಿಯವರಾದ ಶ್ರೀಮತಿ ಕಸ್ತೂರಿರವರನ್ನು ಕರೆದುಕೊಂಡು ಮನೆಗೆ ಹೋಗುವರೇ ಮುಖ್ಯ ರಸ್ತೆಗೆ ಬಂದು ರಸ್ತೆಯ ಬಲಬದಿಯಲ್ಲಿ ನಡೆದುಕೊಂಡು ಹೋಗುತ್ತಾ, ಸಮಯ ರಾತ್ರಿ ಸಮಯ ಸುಮಾರು 7:30 ಗಂಟೆಗೆ ಕರಾವಳಿ ಉತ್ಸವ ಮೈದಾನದ ಎದುರು ಅಂದರೆ ಲಾಲ್ಬಾಗ್‌-ಲೇಡಿಹಿಲ್ಕಡೆಗೆಹೋಗುವ ರಸ್ತೆಯ ಬಳಿಗೆ ತಲುಪಿದಾಗ, ಲೇಡಿಹಿಲ್ಕಡೆಯಿಂದ ಲಾಲ್ಬಾಗ್ ಕಡೆಗೆ ಮೋಟಾರು ಸೈಕಲ್ ನಂಬ್ರ ಕೆ.-19-.ಜಿ-9297 ನೇದನ್ನು  ಅದರ ಸವಾರನು  ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬದಿಯಲ್ಲಿ ಪಿರ್ಯಾದಿದಾರರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಕಸ್ತೂರಿರವರಿಗೆ  ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು , ತಲೆಯ ಬಲಭಾಗಕ್ಕೆ ಗುದ್ದಿದ ನಮೂನೆಯ ಗಾಯ, ಎಡಕಾಲಿನ ಕಿರುಬೆರಳಿಗೆ ತರಚಿದ ಗಾಯ ಉಂಟಾದವರನ್ನು ಚಿಕಿತ್ಸೆಯ ಬಗ್ಗೆ ನಗರದ .ಜೆ ಆಸ್ಪತ್ರೆಯಲ್ಲಿ ಒಳ-ರೋಗಿಯಾಗಿ ದಾಖಲಿಸಿರುವುದಾಗಿದೆ.

 

3.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-10-2013ರಂದು 16-30 ಗಂಟೆಯಿಂದ 18-00 ಗಂಟೆಯ ಮದ್ಯೆ ಪಿರ್ಯಾದಿದಾರರಾದ ಶ್ರೀ ಸೀತಾರಾಮ ಶೆಟ್ಟಿ ರವರ ಸೊಸೆ ಅಶ್ವಿನಿ ಎಂಬಾಕೆಯ ಬಾಬ್ತು ಮಂಗಳೂರು ನಗರದ ಭಗವತಿನಗರದ ವಿಶಾಲ ನರ್ಸಿಂಗ್ಹೋಮ್ 2ನೇ ಅಡ್ಡರಸ್ತೆಯಲ್ಲಿರುವ ಮನೆ ನಂಬ್ರ 5-12-1118/48 ಅಡಿಗೆ ಮನೆಯ ಬಾಗಿಲಿನ ಚಿಲಕವನ್ನು ಯಾವುದೋ ಆಯುಧದಿಂದ ಬಲಾತ್ಕಾರವಾಗಿ ಮೀಟಿ ತೆರೆದ ಯಾರೋ ಕಳ್ಳರು ಮನೆಯ ಒಳಗಡೆ ಪ್ರವೇಶಿಸಿ ಮನೆಯ ಹಾಲ್ನಲ್ಲಿ ಇರಿಸಿದ್ದ ಸ್ಯಾಮ್ಸಂಗ್ಎಲ್ಇಡಿ 32 ಇಂಚಿನ ಸ್ಮಾರ್ಟ  ಟಿ.ವಿ.ಯನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತಿನ ಮೌಲ್ಯ ರೂ 24000/- ಆಗಿರುತ್ತದೆ.

 

4.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-10-2014 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಗೋಪಾಡ್ಕರ್ ರವರು ಹಾಗೂ ಅವರ ಪತ್ನಿ ಸುಮಂಗಲಾ(46) ರವರು ಸುರತ್ಕಲ್ ಆಸ್ಪತ್ರೆಗೆ ಹೋಗಿದ್ದು ಆಸ್ಪತ್ರೆಯಲ್ಲಿ ಜನಸಂದಣಿ ಇದ್ದುದರಿಂದ ಪಿರ್ಯಾಧಿದಾರರ ಪತ್ನಿಯವರು ಸುರತ್ಕಲನಲ್ಲಿರುವ ಪದ್ಮಾವತಿ ಆಸ್ಪತ್ರೆಗೆ ಹೋಗಿ ಕೃಷ್ಣಾಪುರದಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ ಬರುತ್ತೆನೆಂದು ಹೇಳಿ ಹೋದವರು, ವಾಪಸ್ಸು ಮನೆಗೆ ಬಾರದೆ ಹಾಗೂ ಕೃಷ್ಣಾಪುರದಲ್ಲಿರುವ ತನ್ನ ತಂದೆಯ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ.

 

5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16/10/2014 ರಂದು ಮಂಗಳಾದೆವಿ ಶ್ರಿ ಕ್ಷ್ಮಿ ಜುವೆಲರಿ ಅಂಗಡಿ ಎದುರು  ಪಾರ್ಕ ಮಾಡಿದ್ದ ಕಾರನ್ನು ರಿಟ್ಸ್ ಕಾರು ನಂಬ್ರ KA-19-MA-6653 ನ್ನು ಫಿರ್ಯಾದುದಾರರಾದ ಶ್ರೀ ಇಬ್ರಾಹಿಂ ರವರು ಬಲಗಡೆ ಇಂಡಿಕೇಟರ್ ಹಾಕಿ ಕಾರನ್ನು ರಸ್ತೆಯ ಬಲಭಾಗಕ್ಕೆ ಚಲಾಯಿಸುತ್ತಿರುವ ಸಮಯ ಮದ್ಯಾಹ್ನ 13:00 ಗಂಟೆ ಸಮಯಕ್ಕೆ ಮಾರ್ನಮಿಕಟ್ಟೆ ಕಡೆಯಿಂದ ಬೈಕ್ ನಂಬ್ರ KA-46-J-0102 ನ್ನು ಅದರ ಸವಾರನು ಸಹ ಸವಾರರೊಬ್ಬರನ್ನು ಕುಳ್ಳಿರಿಸಿಕೊಂಢು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಕಾರಿನ ಬಲಬದಿಯ ಹಿಂಬದಿಯ ಟೈರಗೆ ಡಿಕ್ಕಿ ಮಾಡಿದ ಪರಿಣಾಮ ಸವಾರರು ರಸ್ತೆಗೆ ಬಿದ್ದು ಸವಾರನ ಬಲ ಕೋಲು ಕಾಲಿಗೆ ಗುದ್ದಿದ ಗಾಯವಾಗಿದ್ದು ಹಿಂಬದಿ ಸವಾರನಿಗೆ ಯಾವುದೆ ಗಾಯವಾಗಿಲ್ಲ ಗಾಯಾಳು ಅತ್ತಾವರ ಕೆ ಎಂ ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

No comments:

Post a Comment