Sunday, October 26, 2014

Dacoit along with Omni Car Held

ಪಾಂಡೇಶ್ವರ ಠಾಣಾ ಪೊಲೀಸರಿಂದ ಒಮ್ನಿ ಕಾರು ಸಮೇತ  ದರೋಡೆಕೋರನ ಬಂಧನ

           ಪ್ರಕರಣದ ಸಾರಾಂಶವೇನೆಂದರೆ, ಇದೊಂದು ಹಣಕ್ಕಾಗಿ ಅಪಹರಣ ಮಾಡಿ ದರೋಡೆ ಗೈದ ಪ್ರಕರಣ ಆಗಿದ್ದು, ಕೊಟ್ಟಾಯಂ ಜಿಲ್ಲಾ ಪೊಲೀಸು ಮುಖ್ಯಸ್ಥರಿಂದ ಮಂಗಳೂರು ನಗರ ಪೊಲೀಸು ಆಯುಕ್ತರವರ ಮೂಲಕ ಮಂಗಳೂರು ದಕ್ಷಿಣ ಪೊಲೀಸು ಠಾಣೆಗೆ ಸ್ವೀಕೃತವಾದ ಫಿರ್ಯಾದಿ ಆಗಿರುತ್ತದೆ. ಫಿರ್ಯಾದಿದಾರ ಶ್ರೀ ಸಾಜನ್ ಎನ್. ಬಿನ್ ಅಂಬಾಡಿ ಚಂಪಕ್ಕರ ಅಂಚೆ, ಕಾರುಕಚಲ್ ಕೊಟ್ಟಾಯಂ ಎಂಬವರು ಸಲ್ಲಿಸಿದ್ದ ಫಿರ್ಯಾದಿ ಆಗಿದ್ದು, ಸದ್ರಿ ಫಿರ್ಯಾದಿನಲ್ಲಿ ತಾನು ದಿನಾಂಕಃ 27-08-2014 ರಂದು ರಾತ್ರಿ ಮಂಗಳೂರಿನ ಹತ್ತಿರ ಮಂಗಳೂರು ರೈಲ್ವೇ ಸ್ಟೇಷನ್ ಕಡೆಗೆ ಹೋಗುತ್ತಿದ್ದಾಗ ಒಂದು ಬಿಳಿ ಬಣ್ಣದ ಮಾರುತಿ ಓಮಿನಿ ವ್ಯಾನ್ ವೇಗದಿಂದ ತನ್ನ ಹತ್ತಿರ ಬಂದು ತನ್ನನ್ನು ಬಲತ್ಕಾರದಿಂದ ಎಳೆದು ವ್ಯಾನಿನ ಒಳಗೆ ಹಾಕಿದರು. ವ್ಯಾನ್ ನಲ್ಲಿ ಚಾಲಕ ಸಹಿತ ಐದು ಜನರು ಇದ್ದು ತನಗೆ ಸರಿಯಾಗಿ ಹೊಡೆದು ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದು ಕೊಂಡು ಹೊಗಿ ಅಲ್ಲಿ ತನ್ನ ಕುತ್ತಿಗೆಗೆ  ಚೈನ್ ನಿಂದ ಕಟ್ಟಿ ಚೂರಿಯನ್ನು ತೋರಿಸಿ,   ತನ್ನ ಲ್ಯಾಪ್ ಟಾಪ್,. ಚಾರ್ಜರ್, ಮತ್ತು ಇತರ ಸೊತ್ತುಗಳನ್ನು ತನ್ನ ಬ್ಯಾಗ್ ನಿಂದ ಬಲತ್ಕಾರವಾಗಿ ತೆಗೆದುಕೊಂಡಿರುವುದು ಅಲ್ಲದೇ ತನ್ನ ವಿವಾಹದ ಸಂಕೇತವಾದ ಉಂಗುರವನ್ನು ಕೈಬೆರಳಿನಿಂದ ಕಿತ್ತು ತೆಗೆದು, ಹಣದ ಪರ್ಸನ್ನು ಕೊಡಲು ಕೇಳಿದಾಗ ಕೊಡಲು ನಿರಾಕರಿಸಿರುವುದಾಗಿ ಆಗ ಆರೋಪಿಗಳು ಕುತ್ತಿಗೆಯನ್ನು ಒತ್ತಿ ಹಿಡಿದು ತನ್ನ ಪ್ಯಾಂಟ್ ನ ಹಿಂದಿನ ಕಿಸೆಗೆ ಕೈಹಾಕಿ ಹಣದ ಪರ್ಸನ್ನು ತೆಗೆದು ಅದರಲ್ಲಿ ಇದ್ದ ನಗದು ಹಣ, ICICI ATM ಕಾರ್ಡ್ ತೆಗೆದುಕೊಂಡು ತನಗೆ ಹಿಂಸೆ ಕೊಟ್ಟು ಒತ್ತಾಯದಿಂದ ಅದರ ಪಾಸ್ ವರ್ಡನ್ನು ತನ್ನಿಂದ ಪಡೆದುಕೊಂಡು ಅಪಹರಿಸಿಕೊಂಡು ಹೋಗುವ ದಾರಿಯಲ್ಲಿ ICICI ATM ಕಾರ್ಡ್ ಬಳಸಿ  ATM ನಿಂದ ರಾತ್ರಿ 1 ರಿಂದ 2 ಗಂಟೆಯ ಮಧ್ಯಾವಧಿಯಲ್ಲಿ ಸುಮಾರು ರೂ.27,000-00 ವನ್ನು ನಗದೀಕರಣ ಮಾಡಿ,ದರೋಡೆ ಮಾಡಿರುತ್ತಾರೆ ಎಂಬುದಾಗಿ, ಈ ಬಗ್ಗೆ ಆಪರಾಧಿಗಳನ್ನು ಪತ್ತೆ ಮಾಡಿ ನ್ಯಾಯ ಒದಗಿಸಿಕೊಡಬೇಕು ಎಂದು ಸಲ್ಲಿಸಿದ ದೂರಿನ ಮೇರೆಗೆ ಆರಂಭಿಕ ತನಿಖೆ ನಡೆಸಿ ಘಟನೆ ನಡೆದರುವುದನ್ನು ಖಾತ್ರಿ ಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳ ತಲಾಷೆಯಲ್ಲಿದ್ದಾಗ,

                   ಈ ದಿನ ದಿನಾಂಕ 25-10-2014 ರಂದು 13-15 ಘಂಟೆಗೆ ಮಂಗಳೂರು ನಗರದ ಕೇಂದ್ರ ರೈಲ್ವೇ ನಿಲ್ದಾಣದ ಬಳಿ ವಾಹನ ತಪಾಸಣೆ ನಡೆಸುತಿದ್ದಾಗ ಆರೋಪಿಯು   ಕೆಎ-19-ಎಂ-8806 ನೇ ನಂಬ್ರದ ಮಾರುತಿ ಓಮ್ನಿ ವ್ಯಾನನ್ನು ಚಲಾಯಿಸಿಕೊಂಡು ಬರುತಿದ್ದುದನ್ನು ತಡೆದು ನಿಲ್ಲಿಸಲು ಸೂಚಿಸಿದಾಗ, ನಿಲ್ಲಿಸದೇ ಪರಾರಿಯಾಗಲು ಪ್ರಯತ್ನಿಸಿದವನನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸಿದಾಗ ತನ್ನ ಹೆಸರು ಸಂತೋಷ್ ಕುಮಾರ್ ಡಿಸಿಲ್ವ (19), ತಂದೆ: ಜಗದೀಶ್ ಸಾಲ್ಯಾನ್, ವಾಸ: ಸೈಂಟ್ ಜೋಸೆಫ್ ನಗರ ಕಂಪೌಂಡ್, ನಂದಿಗುಡ್ಡ ಮಂಗಳೂರು. ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡು, ಅದೇ ವಾಹನದಲ್ಲಿ ತಾನು ಮತ್ತು ಇತರ ನಾಲ್ವರು ಸೇರಿ  ಸಾಜನ್ ಎಂಬ ವ್ಯಕ್ತಿಯನ್ನು ಅಪಹರಿಸಿ ನಗ, ನಗದು, ಲ್ಯಾಪ್ ಟಾಪ್ ನ್ನು ದರೋಡೆ ಮಾಡಿರುವುದು ಒಪ್ಪಿಕೊಂಡ ಮೇರೆಗೆ ಈತನನ್ನು ದಸ್ತಗಿರಿ ಮಾಡಿ ವಾಹನವನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹೊರ ರಾಜ್ಯದಿಂದ ನಗರಕ್ಕೆ ಬರುವ ಪ್ರಯಾಣಿಕರನ್ನು ಗುರಿಯಾಗಿರಿಸಿಕೊಂಡು ಇನ್ನಷ್ಟು ಇಂತಹ ಕೃತ್ಯಗಳನ್ನು ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಉಳಿದ ಆರೋಪಿಗಳ ದಸ್ತಗಿರಿಗೆ ತನಿಖೆ ಪ್ರಗತಿಯಲ್ಲಿದೆ.  

 

 

ಆರೋಪಿ ಹಾಗೂ ಸ್ವಾಧೀನಪಡಿಸಿಕೊಂಡ ವಾಹನ

 

 

 

 ಪತ್ತೆ ಕಾರ್ಯಾಚರಣೆ :-

    ಮಾನ್ಯ ಆರ್. ಹಿತೇಂದ್ರ IPS ಪೊಲೀಸ್ ಆಯುಕ್ತರು, ಮಂಗಳೂರು ನಗರ, ಮಾನ್ಯ ಉಪ ಪೊಲೀಸ್ ಆಯುಕ್ತರುಗಳಾದ ಡಾ| ಕೆ. ವಿ. ಜಗಧೀಶ್, ಹಾಗೂವಿಷ್ಣುವರ್ಧನ್, ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪವನ್ ನೆಜ್ಜೂರು, ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ ರವರು ಆರೋಪಿಯನ್ನು ದಸ್ತಗಿರಿ ಮಾಡಿ ಸೊತ್ತುಗಳನ್ನು ಸ್ವಾಧೀನಪಡಿಸಿದ್ದು ಪಾಂಡೇಶ್ವರ ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಅನಂತ ಮುರ್ಡೇಶ್ವರ, ಹಾಗೂ ಸಿಬ್ಬಂದಿಗಳಾದ ಕೇಶವ, ವಿಶ್ವನಾಥ, ಸತ್ಯನಾರಾಯಣ, ಗಂಗಾಧರ, ದಾಮೋದರ, ಶಾಜು ಕೆ ನಾಯರ್, ಜಯಪ್ರಕಾಶ್, ಮಣಿಕಂಠ, ವಿಶ್ವನಾಥ ಬುಡೋಳಿ ರವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು.

 

No comments:

Post a Comment