Friday, October 17, 2014

Daily Crime Reports 17-10-2014

ದೈನಂದಿನ ಅಪರಾದ ವರದಿ.

ದಿನಾಂಕ 17.10.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

2

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

2

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ  ಶ್ರೀ ಜಿ. ಎಮ್. ಸಲೀಂ ರವರು ದಿನಾಂಕ 15-10-14 ರಂದು ತಾನು ಚಾಲನೆ ಮಾಡುವ 10 ವ್ಹೀಲರ್ ಲಾರಿ ನೊಂದಣಿ ಸಂಖ್ಯೆ ಕೆ 19 ಬಿ 169 ರಲ್ಲಿ  ಉಡುಪಿ ಕೋಟಾದಿಂದ ಫಿಶ್ ಆಯಿಲ್ ಕಂಟೇನರ್ ನ್ನು ಲೋಡ್ ಮಾಡಿ ಕೊಂಡು ದಿನಾಂಕ 16-10-14 ರಂದು ಬೆಳಿಗ್ಗೆ 09.00 ಗಂಟೆಗೆ ನವ ಮಂಗಳೂರು ಬಂದರಿಗೆ ಬಂದಿದ್ದು, ಲಾರಿಯಲ್ಲಿಯ ಲೋಡ್ ನ್ನು ಅನ್ ಲೋಡ್ ಮಾಡುವ ಬಗ್ಗೆ ಬಂದರಿನ ಒಳಗಡೆ ಇರುವ ಕಂಟೇನರ್ ಯಾರ್ಡ್ ಗೆ ತಂದು ನಿಲ್ಲಿಸಿದ್ದು , ಅನ್ ಲೋಡ್ ಮಾಡುವ ಬಗ್ಗೆ ನವ ಮಂಗಳೂರು ಬಂದರಿಗೆ ಸಂಬಂಧಿಸಿದ ಕ್ರೇನ್ ಲಾರಿ ಬಳಿ ಬಂದಿದ್ದು ಪಿರ್ಯಾದಿಯು ಲಾರಿಯ ನಾಲ್ಕು ಮೂಲೆಗಳಲ್ಲಿರುವ ಕಂಟೇನರ್ ಲಾಕ್ ತೆಗೆಯಬೇಕಾಗಿದ್ದು ಮೊರನ್ನು ತೆಗೆದು ನಾಲ್ಕನೇಯದಕ್ಕೆ ಅದರ ಒಳಗಡೆ ಕೈ ಹಾಕಿ ಅದನ್ನು ಒಪನ್ ಮಾಡುತ್ತಿರುವಾಗ ಕ್ರೇನ್ ಚಾಲಕ ಯಾವುದೇ ಸಿಗ್ನಲ್ ಪಡೆಯದೇ ಮತ್ತು ನಾಲ್ಕನೇ ಲಾಕ್ ತೆಗೆದಿರುವುದಿಲ್ಲವೆಂದು ಪಿರ್ಯಾದಿ ಬೊಬ್ಬೆ ಹಾಕುತ್ತಿರುವಾಗಲೇ ಒಮ್ಮಲೇ ಕ್ರೇನ್   ಚಾಲಕ ಕಂಟೇನರ್ ನ್ನು ಲಿಫ್ಟ್ ಮಾಡಿರುವುದರಿಂದ ಪಿರ್ಯಾದಿಯ ಬಲ ಕೈ ಅದರೊಳಗೆ ಸಿಲುಕಿಕೊಂಡಿದ್ದು ನೋವಿನಿಂದ ಕಿರುಚಿಕೊಂಡಾಗ ಒಮ್ಮಲೇ ಕಂಟೇನರ್ ನ್ನು ಲಾರಿಯ ಮೇಲೆ ಬಿಟ್ಟಿರುವುದರಿಂದ ಪಿರ್ಯಾದಿಯ ಬಲಕೈ ಹಬ್ಬೆರೆಳು ಮತ್ತು ತೋರು ಬೆರಳು ಸಂಪೂರ್ಣ ಜಜ್ಜಿ ಹೋಗಿ ತುಂಡಾಗಿದ್ದು, ಅಪಘಾತಕ್ಕೆ ಆರ್. ಎಸ್. 3 ಕ್ರೇನ್ ಚಾಲಕ ಸಂದೀಪ್ ನಿರ್ಲಕ್ಷ್ಯತನವೇ ಕಾರಣವಾಗಿರುತ್ತದೆ. ಘಟನೆ ಬೆಳಿಗ್ಗೆ 9.30 ಗಂಟೆಗೆ ಆಗಿರುತ್ತದೆ. 

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15/10/2014 ರಂದು ಫಿರ್ಯಾದುದಾರರಾದ ಶ್ರೀ ಹರ್ಷಿತ್ ಪಿ.ಕೆ. ರವರು ತನ್ನ ಗೆಳೆಯೆ ಕಾರ್ತಿಕ N ಎಂಬುವರ ಮೋಟಾರ್ ಸೈಕಲನಲ್ಲಿ ಹಿಂಬದಿ ಸವಾರರಾಗಿ ಕಾರ್ತಿಕನು ಸವಾರನಾಗಿ ಲಾಲಬಾಗ ಕಡೆಯಿಂದ ಅತ್ತಾವರ ಕಡೆಗೆ ಹೋಗುವರೇ ಬಿಜೈ ನ್ಯೂ ರೋಡ್ ವೆಸ್ಫ್ ಶೋ ರೂಂ ಎದುರು ತಲುಪಿದಾಗ ಎದುರಿನಿಂದ ಅಂದರೆ ಅಭಿಮಾನ ಪ್ಲಾಜಾ ಕಡೆಯಿಂದ ಕಾರು ನಂಬ್ರ KA-19-MC-1400 ನ್ನು ಅದರ ಚಾಲಕಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರ್ತಿಕನು ಸವಾರಿ ಮಾಡುತ್ತಿದ್ದ ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಸವಾರರಿಬ್ಬರು ರಸ್ತೆಗೆ ಬಿದ್ದು ಪೀರ್ಯಾದುದಾರ ಕೈ ಕಾಲುಗಳಿಗೆ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಬಂಟ್ವಾಳ ತಾಲೂಕು, ಕುರ್ನಾಡು ಗ್ರಾಮದ, ಮುಡಿಪು ನ್ಯೂ ಶೇಣವ ಬಿಲ್ಡಿಂಗ್ ರೂಂ ನಂಬ್ರ 301 ನೇ ಫಿರ್ಯಾದಿದಾರರಾದ ಶ್ರೀ ಜಗದೀಶ್ ರವರು ವಾಸವಾಗಿರುವ ಮನೆಯ ಬೀಗದ ಕೀಯನ್ನು ಫಿರ್ಯಾದಿದಾರರ ಮಗ ಬೆಳಿಗ್ಗೆ 11:25 ಗಂಟೆಗೆ ಮನೆಯ ಹೊರಗಡೆ ಇದ್ದ ಶೂನಲ್ಲಿ ಇಟ್ಟು ಹೋಗಿದ್ದು ಫಿರ್ಯಾದಿದಾರರು ಮದ್ಯಾಹ್ನ 1:30 ಗಂಟೆಗೆ ಮನೆಗೆ ಬಂದು ಬಾಗಿಲು ತೆಗೆದು ನೋಡಿದಲ್ಲಿ ಮನೆಯಲ್ಲಿದ್ದ ಗೋದ್ರೇಜ್ಗಳು ಚೆಲ್ಲಾಪಿಲ್ಲಿಯಾಗಿದ್ದು ಗೋದ್ರೇಜ್ನಲ್ಲಿದ್ದ  ರೂ. 20,000/- ಕಳವಾಗಿರುತ್ತದೆ. ಕೃತ್ಯವನ್ನು ದಿನಾಂಕ 16.10.2014 ರಂದು ಬೆಳಿಗ್ಗೆ 11:25 ಗಂಟೆಯಿಂದ ಮದ್ಯಾಹ್ನ 13:30 ಗಂಟೆಯ ಮಧ್ಯೆ ಯಾರೋ ಕಳ್ಳರು ಮಾಡಿರುವುದಾಗಿದೆ.

 

4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ದೀಪಾ ರಾವ್ ರವರ ಸಂಸ್ಧೆಯ ಲಾರಿ ನಂಬ್ರ KA 19 AA 3662 ರಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಆರೋಪಿ ಎಸ್,ಎಂ ಯೂಸಫ್ ಎಂಬಾತನು ದಿನಾಂಕ 27-05-2014 ರಂದು ರಾತ್ರಿ ಬೆಂಗಳೂರಿನಿಂದ ಹೊರಟು ದಿನಾಂಕ 28-05-2014 ಬೆಳಿಗ್ಗೆ ಮಂಗಳೂರಿಗೆ ಪಿವಿಎಸ್ ಸರ್ಕಲ್ ಆಫೀಸ್ ಗೆ ಬರಬೇಕಾಗಿದ್ದು, ಫಿರ್ಯಾದಿದಾರರ ಲಾರಿಯಲ್ಲಿ ಮಂಗಳೂರು ಆಫೀಸ್ ಗೆ ಬೆಂಗಳೂರು ಆಫಿಸ್  ನಿಂದ ಕಳುಹಿಸಿದ 50,000 ರೂ ಮತ್ತು 2 ಮೊಬೈಲ್ ಪೋನ್ ಗಳನ್ನು ಪಾರ್ಸಲ್ ಸಮೇತ ಮಂಗಳೂರು ಆಫಿಸ್ ಗೆ ಕೋಡದೇ ಪರಾರಿಯಾಗಿ ನಂಬಿಕೆ ದ್ರೋಹ ಎಸಗಿರುತ್ತಾನೆ.

 

5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ; 11-10-2014ರಂದು ರಾತ್ರಿ 22-00 ಗಂಟೆಗೆ  ಮಂಗಳೂರು ನಗರದ ಕುಲಶೇಖರ ಚರ್ಚ್ ಗೇಟ್ ಬಳಿಯಿರುವ ಪಿರ್ಯಾದಿದಾರರಾದ ಶ್ರೀ ವಿನ್ಸೆಂಟ್ ಫ್ರಾಂಕ್ ರವರ ಬಾಬ್ತು 'ಆಶೀರ್ವಾದ' ಎಂಬ ಹೆಸರಿನ ವಾಸ್ತವ್ಯದ ಮನೆಯ ಎದುರುಗಡೆ  ತನ್ನ ಬಾಬ್ತು ಚಾಸೀಸ್ ನಂಬ್ರ: MB8CF4CAGD8162929, ಇಂಜಿನ್ ನಂಬ್ರ: F4862361733, KA 19EJ 4492 ನೇ ನೋಂದಣಿ ಸಂಖ್ಯೆಯ ಕಪ್ಪು ಬಣ್ಣದ, 2013ನೇ ಮೊಡೆಲಿನ, ಅಂದಾಜು ಮೌಲ್ಯ ರೂ. 41,000/- ಬೆಲೆ ಬಾಳುವ  ಸುಜುಕಿ ಆಕ್ಸೆಸ್ ದ್ವಿ-ಚಕ್ರ ವಾಹನವನ್ನು ಪಾರ್ಕ್ ಮಾಡಿಟ್ಟಿದ್ದು, ವಾಪಾಸು ದಿನಾಂಕ: 12-10-2014ರಂದು ಬೆಳಿಗ್ಗೆ ಸಮಯ ಸುಮಾರು 05-00 ಗಂಟೆಗೆ ಚರ್ಚ್ ಗೆ ತೆರಳುವರೇ ಸದ್ರಿ ದ್ವಿ-ಚಕ್ರ ವಾಹನ ಪಾರ್ಕ್ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ ಸದ್ರಿ ದ್ವಿ-ಚಕ್ರ ವಾಹನ ಪಾರ್ಕ್ ಮಾಡಿದ ಸ್ಥಳದಲ್ಲಿ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಸದ್ರಿ ದ್ವಿ-ಚಕ್ರ ವಾಹನವನ್ನು ಕಳವಾದ ದಿನದಿಂದ ಇಲ್ಲಿಯ ತನಕ ಸುತ್ತಮುತ್ತ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು ದಿನಾಂಕ 16-10-2014 ರಂದು ಠಾಣೆಗೆ ಬಂದು ದೂರು ನೀಡಿರುವುದಾಗಿದೆ.

 

6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-10-2014 ರಂದು 20-00 ಗಂಟೆ ಸಮಯಕ್ಕೆ ಮಂಗಳೂರು ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದ  ರೈಲ್ವೆ ಕ್ವಾಟ್ರರ್ಸ್ ನಂಬ್ರ MAQ/162B ಎದುರುಗಡೆ ಫಿರ್ಯಾದುದಾರರಾದ ಶ್ರೀ ಕಿಶನ್ ಮೀನಾ ರವರ ಬಾಬ್ತು KA 19 X 3240 ಪಲ್ಸರ್ ಮೋಟಾರು ಸೈಕಲನ್ನು ನಿಲ್ಲಿಸಿದ್ದು, ಮರು ದಿನ ದಿನಾಂಕ 14-10-2014 ರಂದು 10-00 ಗಂಟೆಗೆ ಫಿರ್ಯಾದುದಾರರು ಮೋಟಾರು ಸೈಕಲ್ ನಿಲ್ಲಿಸಿದ್ದ ಜಾಗಕ್ಕೆ ಬಂದು ನೋಡಿದಾಗ,  ಯಾರೋ ಕಳ್ಳರು ಮೋಟಾರು ಸೈಕಲನ್ನು ಕಳವು ಮಾಡಿಕೊಂಡು ಹೋಗಿರುತ್ಥಾರೆ. ನಂತರ ವರೆಗೆ ಹುಡುಕಾಡಿದಲ್ಲಿ ವರೆಗೆ ಪತ್ತೆಯಾಗಿರುವುದಿಲ್ಲ.

 

7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ  ಶ್ರೀ ಕುಮಾರ ಎಂಬುವರು ಮಂಗಳೂರು ತಾಲೂಕು ಮೂಡುಪೆರಾರ ಗ್ರಾಮದ ಸಾಸ್ತಾವು ಮನೆ ನಿವಾಸಿಯಾಗಿದ್ದು ಅವರು ತನ್ನ ಬಾಬ್ತು ಮೋಟಾರು ಸೈಕಲ್ ನಂ-ಕೆ. 19 .ಎಲ್ 9804 ನೇ ಬಜಾಜ್ ಡಿಸ್ಕವರಿ ಮೋಟಾರು ಸೈಕಲಿನಲ್ಲಿ ದಿನಾಂಕ 16/10/2014 ರಂದು ಮನೆಯಲ್ಲಿ ನಡೆಯುವ ಸೀಮಂತಕ್ಕೆ ಬಾಳೆ ಎಲೆ ತರಲು ನೆಲ್ಲಿ ತೀರ್ಥಕ್ಕೆ ಹೋಗಿ ವಾಪಾಸ್ಸು ಈಶ್ವರಕಟ್ಟೆ ಕಡೆಗೆ ಬರುತ್ತಿರುವಾಗ ಆತನ ಎದುರಿನಿಂದ ಅಂದರೆ ಈಶ್ವರಕಟ್ಟೆ ಕಡೆಯಿಂದ ಒಂದು ಆಟೋ ರಿಕ್ಷಾವೊಂದು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಐತಪ್ಪ ಅಂಗಡಿಯ ಎದುರು ಪಿರ್ಯಾದಿಯ ಮೋಟಾರು ಸೈಕಲಿಗೆ ಡಿಕ್ಕಿ ಮಾಡಿ ಪಿರ್ಯಾದಿದಾರರ ಬಲಕೈಗೆ ರಕ್ತದ ಗಾಯ ಮಾಡಿರುತ್ತಾರೆ.

 

8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ನಯನಾ ಎಂಬಾಕೆಯು ತನ್ನ ಮಗಳು ರಕ್ಷನ್ನಾ ಎಂಬುವಳನ್ನು ಚಿಕಿತ್ಸೆಯ ಬಗ್ಗೆ ಪೆರ್ಮುದೆಯಿಂದ ಕಿನ್ನಿಗೋಳಿಗೆ ಹೋಗಿ ವಾಪಾಸ್ಸುತನ್ನ ತಾಯಿ ಮನೆಯಾದ ಪೆರ್ಮುದೆಗೆ ಬರುವರೇ ಬಸ್ಸಿನಲ್ಲಿ ಬಂದು ಮಂಗಳೂರು ತಾಲೂಕು ಪೆರ್ಮುದೆ ಗ್ರಾಮದ ಪೆರ್ಮುದೆ ಬಸ್ಸು ನಿಲ್ದಾಣದಲ್ಲಿ ಇಳಿದು ರಸ್ತೆ ದಾಟಿ ಮಗಳೊಂದಿಗೆ ರಿಕ್ಷಾ ಪಾರ್ಕ ಬಳಿ ನಿಂತಿದ್ದಾಗ ಕಟೀಲು ಕಡೆಯಿಂದ ಮಂಗಳೂರು ಕಡೆಗೆ ಒಂದು ವ್ಯಾಗನರ್ ಕಾರು ನಂಬರ ಕೆ. 20 ಎನ್-0533 ನೇ ದನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬಲಬಾಗಕ್ಕೆ ಚಲಾಯಿಸಿ ರಿಕ್ಷಾ ನಿಲ್ದಾಣದಲ್ಲಿ ನಿಲ್ಲಸಿದ್ದ ರಿಕ್ಷಾ ನಂಬರ ಕೆ. 19 ಡಿ 7792 ನೇ ದಕ್ಕೆ ಮತ್ತು ಇನ್ನೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾಗಳು ಮುಗಿಚಿ ಬಿದ್ದು ರಿಕ್ಷಾ ಪಾರ್ಕ ಬಳಿ ನಿಂತಿದ್ದ ಪಿರ್ಯಾದಿದಾರರ ಬಲಕೈಯ ಮೊಣಕೈಗೆ, ಹಣೆಯ ಬಲಬಾಗಕ್ಕೆ, ಕಿವಿಯ ಮೇಲ್ಬಾಗ, ತಲೆಯ ಬಲಬದಿಗೆ, ರಕ್ತ ಗಾಯ ಮಾಡಿದ್ದು ಅವರ ಮಗಳ ಹಣೆಯ ಬಲಭಾಗ, ಬಲದವಡೆಗೆ, ಮೂಗಿಗೆ, ಬಲ ಮತ್ತು ಎಡತೊಡೆಗೆ ರಕ್ತಗಾಯ ಮಾಡಿ ಬಲದವಡೆಯ 2 ಹಲ್ಲು ಕಳಚಿರುತ್ತದೆ.

 

9.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16/10/2014 ರಂದು ರಾತ್ರಿ ಸುಮಾರು 8-50 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಗೌತಮ್ ರವರು ತಮ್ಮ ಕಂಪನಿ ಬಾಬ್ತು ಕೆ. 19 ಎಮ್.ಸಿ 7465 ನೇ ಬೊಲೇರೋ ವಾಹನದಲ್ಲಿ ಕಂಪನಿ ಕೆಲಸಗಾರರಾದ ಸುಮಿತ ಎಂಬುವರನ್ನು ಪೊಳಲಿಯಲ್ಲಿರುವ ಮನೆಗೆ ಬಿಡುವರೇ ಹೋಗಿದ್ದು ಮನೆಗೆ ಬಿಟ್ಟು ವಾಪಾಸ್ಸು ಬರುತ್ತಿರುವ ಸಮಯ ಅಡ್ಡೂರು ಗ್ರಾಮದ ಪುಣಿಕೋಡಿ ಎಂಬಲ್ಲಿಗೆ ತಲುಪುವಾಗ ಪೊಳಲಿದ್ವಾರ ಕಡೆಯಿಂದ ಅಡ್ಡೂರು ಕಡೆಗೆ ಒಂದು ಸ್ಕಾರ್ಪಿಯೋ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಬೊಲೇರೋ ವಾಹನಕ್ಕೆ ಡಿಕ್ಕಿ ಮಾಡಿ ನಂತರ ಮುಂದಕ್ಕೆ ಹೋಗಿ ರಸ್ತೆಯ ಬದಿಯಲ್ಲಿದ್ದ ವಿದ್ಯುತ ಕಂಬಕ್ಕೆ ಢಿಕ್ಕಿಯಾಗಿ ನಿಂತಿರುತ್ತದೆ. ಡಿಕ್ಕಿ ಮಾಡಿದ ಪರಿಣಾಮ ನಮ್ಮ ಬೊಲೇರೋ ವಾಹನದ ಎದುರು ಬಲಭಾಗ ಸಂಪೂರ್ಣ ಜಖಂಗೊಂಡಿರುತ್ತದೆ ಹಾಗೂ ವಿದ್ಯುತ ಕಂಬ ಕೂಡಾ ಜಖಂಗೊಂಡಿರುತ್ತದೆ ಹಾಗೂ ಡಿಕ್ಕಿ ಮಾಡಿದ ಸ್ಕಾರ್ಪಿಯೋ ವಾಹನ ಕೂಡಾ ಜಖಂಗೊಂಡಿರುತ್ತದೆ. ಪಿರ್ಯಾದಿದಾರರ ಬೊಲೇರೋ ವಾಹನಕ್ಕೆ ಡಿಕ್ಕಿ ಮಾಡಿದ ಸ್ಕಾರ್ಪಿಯೋ ವಾಹನದ ನಂ-ಕೆ. 19 ಎಮ್.ಬಿ 1007 ಆಗಿದ್ದು, ಅದರ ಚಾಲಕ ಉಮೇಶ ಆಚಾರ್ಯ ಎಂದು ನಂತರ ತಿಳಿದಿರುವುದಾಗಿದೆ.

 

10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಆದ್ವೇತ ಸಮೀತಿ ಸೌತ್ಕೆನರ ಮಂಗಳೂರು (ರಿ) ಸಂಸ್ಥೆಯು ತನಗೆ ಸೇರಿದ ಕೋಟೆಕಾರ್ಗ್ರಾಮದಲ್ಲಿ  ಸರ್ವೆ ನಂ 25/7 ಯಲ್ಲಿರುವ 1.32 ಎಕ್ರೆ ಜಾಗವನ್ನು ದಿನಾಂಕ 20-02-1986 ರಂದು ಶ್ರೀ ಶ್ರೀ ಜಗದ್ಗುರು ಶಂಕರಚಾರ್ಯ ಮಹಾ ಸಂಸ್ಥಾನ, ದಕ್ಷಿಣಾಮ್ನಾಯ ಶ್ರೀ  ಶೃಂಗೇರಿ ಶಾರಾದಾ ಪೀಠಾಧೀಶ್ವರಾದ ಜಗದ್ಗುರು ಶ್ರೀ ಶ್ರೀ  ಭಾರತಿ ತೀರ್ಥ ರವರಿಗೆ ದಾನವಾಗಿ ನೀಡಿದ್ದು ಜಮೀನಿನಲ್ಲಿ ರಾಷ್ಟ್ರೀಯ ಹೆದ್ದಾರಿ 66   ಅಗಲೀಕರಣದ ವೇಳೆ 10.5 ಸೆಂಟ್ಸ್ ಜಾಗವನ್ನು ಸರಕಾರವು ಸ್ವಾಧೀನಪಡಿಸಿಕೊಳ್ಳುತ್ತಿದ್ದು , ಸದ್ರಿ ಸಂಸ್ಥೆಯ ಹೆಸರಿನಲ್ಲಿ ಪರಿಹಾರದ ಬಗ್ಗೆ ಸಂಸ್ಥೆಗೆ ಸಂಬಂಧವಿಲ್ಲದ ವ್ಯಕ್ತಿಗಳು ದುರುದ್ದೆಶಕಪೂರ್ವಕವಾಗಿ ನಕಲಿ ಕ್ಲೇಮ್ಅರ್ಜಿಯನ್ನು ತಯಾರಿಸಿ ಸಂಸ್ಥೆಯ ಅಧ್ಯಕ್ಷರ ಹೆಸರಿನಲ್ಲಿ ಅವರ ಸಹಿಯನ್ನು ಪೊರ್ಜರಿ ಸಹಿ ಮಾಡಿ ಸುಳ್ಳು ಅರ್ಜಿ ಮತ್ತು ದಾಖಲೆಯನ್ನು ಸಲ್ಲಿಸಿ ಸರಕಾರದಿಂದ ಸಿಗುವ ಪರಿಹಾರ ಧನವನ್ನು ಲಪಾಟಾಯಿಸುವ ಉದ್ದೇಶದಿಂದ ಸದ್ರಿ ಸಂಸ್ಥೆಗೆ ಕೆಟ್ಟ ಹೆಸರನ್ನು ತರಲು ಮತ್ತು ವೈಯಕ್ತಿಕವಾಗಿ ಸದ್ರಿ ಸಂಸ್ಥೆಯವರು ಮೋಸಗಾರರೆಂದು ತೋರಿಸಲು ಪೊರ್ಜರಿ ಮಾಡಿರುವುದಾಗಿದೆ.

 

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16.10.2014 ರಂದು ಮಧ್ಯಾಹ್ನ 12:45 ಗಂಟೆ ಸಮಯಕ್ಕೆ ಮಂಗಳೂರು ನಗರದ ವಾಮಂಜೂರು ಸಿಂಧೂರು ವೈನ್ ಶಾಫ್ ಬಳಿ ಯಾರೋ 4 ಜನ ದುಷ್ಕರ್ಮಿಗಳು ಎರಡು ಮೋಟಾರ್ ಸೈಕಲ್ಲಿನಲ್ಲಿ ಬಂದು ಪಿರ್ಯಾದುದಾರರಾದ ಶ್ರೀ ಅರುಣ್ ಕಾರ್ಲೋ ರವರ ಅಣ್ಣ ಪ್ರವೀಣ್ ಕಾರ್ಲೋ ಎಂಬವರ ಮೇಲೆ ಯಾವುದೋ ಪೂರ್ವದ್ವೇಷದಲ್ಲಿ ಮರದ ಸೋಂಟೆಗಳಿಂದ ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ಕೊಲೆ ಮಾಡುವ ಸಮಾನ ಉದ್ಧೇಶದಿಂದಲೇ ತೀವ್ರ ತರಹದ ಹಲ್ಲೆ ಮಾಡಿ ಕೊಲೆಗೆ ಪ್ರಯತ್ನಿಸಿರುವುದಾಗಿದೆ.

No comments:

Post a Comment