Thursday, October 30, 2014

Daily Crime Reports 30-10-2014

ದೈನಂದಿನ ಅಪರಾದ ವರದಿ.

ದಿನಾಂಕ 30.10.201409:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ       

:

2

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-10-2014 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಆಶಿಕ್ ಕುಮಾರ್ ರವರೊಂದಿಗೆ ಬೈಕಂಪಾಡಿ ಬಳಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಪಿರ್ಯಾದಿದಾರರ ಅಳಿಯ ಮಿಥುನ್ ಎಂಬಾತನಿಗೆ ಕೆ 19 ಡಿ 2485 ನೇ ನಂಬ್ರದ ಟಿಪ್ಪರನ್ನು ಅದರ ಚಾಲಕ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿ ಡಿಕ್ಕಿ ಪಡಿಸಿ ಬಾಲಕ ಮಿಥುನ್ 2 ಕಾಲುಗಳಿಗೆ ಹಾಗೂ ಸೊಂಟಕ್ಕೆ ಮೂಳೆ ಮುರಿತದ ಗಾಯಗೊಂಡು ಮಂಗಳೂರು ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ.

 

2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29.10.2014 ರಂದು ಬೆಳಿಗ್ಗೆ ಸುಮಾರು 11:00 ಗಂಟೆಗೆ ಮಂಗಳೂರು ತಾಲೂಕು, ಪಾವೂರು ಗ್ರಾಮದ, ಮಂಚಾವುದಡಿ ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀ ರಾಜ್ ಕುಮಾರ್ ಶೆಟ್ಟಿ ಎಂ. ರವರ ಬಾಬ್ತು ಗದ್ದೆಗೆ ಫಿರ್ಯಾದಿದಾರರ ತಂಗಿ ಲತಾ ರೈ (44) ಎಂಬವರು ಹಸುವನ್ನು ಕರೆದುಕೊಂಡು ಹೋಗಿ ವಾಪಾಸು ಬರುತ್ತಿರುವಾಗ ಗದ್ದೆಯಲ್ಲಿ ವಿದ್ಯುತ್ತಂತಿ ಪಿನ್ಸಮೇತ ಬಿದ್ದಿದ್ದು ಹಾಗೂ ಅದರಲ್ಲಿ ವಿದ್ಯುತ್ಹರಿಯುತ್ತಿದ್ದು, ಸದ್ರಿ ವಿದ್ಯುತ್ತಂತಿಯನ್ನು ಲತಾ ರೈರವರು ಆಕಸ್ಮಿಕವಾಗಿ ಸ್ಪರ್ಶಿಸಿ ಅವರ ಮೈಯಲ್ಲಿ ವಿದ್ಯುತ್ಪ್ರಹರಿಸಿ ಅವರು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ. ಘಟನೆಗೆ ವಿದ್ಯುತ್ಇಲಾಖೆಯವರ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿತನ ಕಾರಣವಾಗಿರುತ್ತದೆ.

 

3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-10-2014 ರಂದು ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ವರ್ತಮಾನದಂತೆ ಸಿಬ್ಬಂದಿಗಳೊಂದಿಗೆ ತಾಳಿಪ್ಪಾಡಿ ಗ್ರಾಮದ ಕಿನ್ನಿಗೋಳಿ ಕಾನ್ಸೆಪ್ಟಾ ಆಸ್ಪತ್ರೆಯ ವಾಹನ ತಪಾಸಣೆ ಮಾಡುತ್ತಿದ್ದಾಗ ಸಂಜೆ ಸುಮಾರು 3-00 ಗಂಟೆಯ ವೇಳೆಗೆ ಮುರು ಕಾವೇರಿ ಕಡೆಯಿಂದ ಬಂದ ಮೋಟಾರ್ ಸೈಕಲ್  ಕೆಎ- 19-ಡಬ್ಲ್ಯೂ-9941  ನೇದನ್ನು ನಿಲ್ಲಿಸಿ  ಸವಾರನನ್ನು ವಿಚಾರಿಸಿ ಹೆಸರು, ವಿಳಾಸ ಕೇಳಲಾಗಿ  ಮಹಮ್ಮದ್  ಯಾಸಿನ್ ಸುಲ್ತಾನ್, ಪ್ರಾಯ 25 ವರ್ಷ, ತಂದೆ: ಅಬ್ದುಲ್ ಲತೀಪ್, ವಾಸ: ನೀತಿ ಸದನ, ಕಮ್ಮಾಜೆ, ಐಕಳ ಗ್ರಾಮ ಮತ್ತು ಅಂಚೆ, ಮಂಗಳೂರು ತಾಲೂಕು ಎಂದು  ತಿಳಿಸಿದ್ದು, ಆತನು ಗಾಂಜಾ ಮಾರಾಟದ ಬಗ್ಗೆ ಮಾಹಿತಿ ಬಂದಿರುವುದರಿಂದ ಆತನ ಹಾಗೂ ಆತನು ಹೊಂದಿದ್ದ ಮೋಟಾರ್ ಸೈಕಲನ್ನು ತಪಾಸಣೆ ಮಾಡಿದಾಗ ಮೋಟಾರ್ ಸೈಕಲಿನ ಹೆಡ್  ಲೈಟಿನ ಡೂಮಿನ ಒಳ ಭಾಗದಲ್ಲಿದ್ದ ಸುಮಾರು 50 ಗ್ರಾಂ ತೂಕ 750 ರೂಪಾಯಿ ಬೆಲೆಯ ಗಾಂಜಾವನ್ನು ಹಾಗೂ  ನಗದು ಹಣ, ಮೊಬೈಲ್ ಪೋನ್ ಮೋಟಾರು ಸೈಕಲ್ ಇವುಗಳನ್ನು ಸ್ವಾಧೀನ ಪಡಿಸಿ ಆರೋಪಿತನು ಯಾವುದೇ ಪರವಾನಿಗೆ ಇಲ್ಲದೇ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೃಢಪಟ್ಟಿರುವುದರಿಂದ ಆರೋಪಿತನ್ನು ಸ್ಥಳದಲ್ಲಿಯೇ ದಸ್ತಗಿರಿ ಕ್ರಮ ಜರುಗಿಸಿ ಸೊತ್ತುಗಳನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.

 

4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮಾಧವ ನಾರಾಯಣ ರವರು ತಾನು ನಡೆಸಿಕೊಂಡಿರುವ ಮಂಗಳೂರು ನಗರದ ಬಿಕರ್ನಕಟ್ಟೆಯಲ್ಲಿರುವ ಉಸ್ಮಾನ್ ಕಾಂಪ್ಲೇಕ್ಸ್ 2ನೇ ಮಹಡಿಯಲ್ಲಿರುವ ವಿವೇಕ್ ಕನ್ಸಲ್ಟೆನ್ಸಿ ಎಂಬ ಸಂಸ್ಥೆಗೆ ದಿನಾಂಕ: 27-10-2014 ರಂದು ರಾತ್ರಿ ಸಮಯ ಸುಮಾರು 20-30 ಗಂಟೆಗೆ ಶಟರ್ ಡೋರಿಗೆ ಸೆಂಟರ್ ಲಾಕ್ ಹಾಗೂ ಇನ್ನೊಂದು ಬೀಗವನ್ನು ಹಾಕಿ ಹೋಗಿದ್ದು, ದಿನಾಂಕ: 28-10-2014ರಂದು ಬೆಳಿಗ್ಗೆ ಸಮಯ ಸುಮಾರು 10-00 ಗಂಟೆಗೆ ಪಿರ್ಯಾದಿದಾರರ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿರುವ ವೈಶಾಲಿಯವರು ಬಾಗಿಲು ತೆರೆಯಲು ಬಂದಾಗ ಸದ್ರಿ ಬಾಗಿಲಿಗೆ ಹಾಕಿದ ಬೀಗ ತೆರೆದಿದ್ದು,  ಸೆಂಟರ್ ಲಾಕ್ ಜಖಂಗೊಂಡಿದ್ದು ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ಮೀಟಿ ತೆರೆದು ಮೂಲಕ ಒಳಪ್ರವೇಶಿಸಿ ಆಫೀಸಿನೊಳಗಿದ್ದ Processor Dual Core 2.9GHz Intel, Sl.No.N8345182A0093, Mother Board DH61WW Intel, Sl.No.402H8PS123136ನೇ CPU ವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 20,000/- ಆಗಬಹುದು. ಸದ್ರಿ ಕಳ್ಳತನವಾದ ಸಮಯ ಪಿರ್ಯಾದಿದಾರರು ಕೆಲಸದ ನಿಮಿತ್ತ ನಗರದಿಂದ ಹೊರ ಹೋಗಿದ್ದು, ದಿನಾಂಕ 29-10-2014 ರಂದು ಠಾಣೆಗೆ ಬಂದು ಲಿಖಿತ ದೂರು ನೀಡಿರುವುದಾಗಿದೆ.

 

5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28/10/2014 ರಂದು ಪಿರ್ಯಾದಿದಾರರಾದ ಕು. ಯೂನೈಝಾ ಹಾಗೂ ಅತಳ ಅಕ್ಕ ನೂರ್ ಉಮೈರಾ ಮತ್ತು ನೆರೆಮನೆಯ ಫೌಝಿಯಾ ಎಂಬವರೊಂದಿಗೆ ಲಾಡಿ ಮಸೀದಿಗೆ ಪ್ರಾರ್ಥನೆ ಬಗ್ಗೆ ಹೋಗಿ ವಾಪಾಸು ವಿಶಾಲ್ ನಗರದ ರಸ್ತೆಯ ತಿರುವಿನಲ್ಲಿ ನಡೆದುಕೊಂಡು ಬರುವಾಗ ಸಮಯ ಸುಮಾರು ಬೆಳಿಗ್ಗೆ 08.00 ಗಂಟೆಗೆ ವಿಶಾಲ್ ನಗರ ಕಡೆಯಿಂದ ಕೆಎ-19-ಎಂ.ಸಿ-0524 ನೇ ಕಾರನ್ನು ಅದರ ಚಾಲಕ ಇಮ್ರಾನ್ ಎಂಬಾತನು ಕಾರನ್ನು ಅತೀವೇಗ  ಹಾಗೂ ನಿರ್ಲಕ್ಷತೆಯಿಂದ ಚಲಾಯಿಸಿ ಒಮ್ಮಲೇ ಪಿರ್ಯಾದಿ, ನೂರ್ ಉಮೈರಾ ಮತ್ತು ಪೌಝಿಯಾ ಳಿಗೆ ಡಿಕ್ಕಿ ಮಾಡಿದ ಪರಿಣಾಮ ಮೂವರು ರಸ್ತೆಗೆ ಬಿದ್ದು, ಪಿರ್ಯಾದಿಯ ತಲೆಯ ಹಿಂಬದಿಗೆ ರಕ್ತ ಗಾಯ  ಎಡಕೈ ಬೆರಳಿಗೆ ತರಚಿದ ಗಾಯವಾಗಿದ್ದು, ನೂರ್ ಉಮೈರಾ ಳಿಗೆ ಎಡಕಾಲಿಗೆ ಗುದ್ದಿದ ಗಾಯವಾಗಿದ್ದು, ಪೌಝಿಯಾಳಿಗೆ  ಕೂಡಾ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು ಜ್ಯೋತಿ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28.10.2014 ರಂದು ಪಿರ್ಯಾದಿದಾರರಾದ ಶ್ರೀ ಶರೀಫ್ ಅಹಮ್ಮದ್ ರವರು ಆತನ ಬಾಬ್ತು ಕೆಎ-21-ಕೆ-2885 ನೇ ಮೋಟಾರು ಸೈಕಲನ್ನು ಕೈಕಂಬ ಕಡೆಯಿಂದ ಮೂಡಬಿದ್ರೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಬೆಳಿಗ್ಗೆ 08.30 ಗಂಟೆಗೆ ಹಂಡೇಲು ಮೈಟ್ ಕಾಲೇಜಿನ ರಸ್ತೆಯ ಕ್ರಾಸ್ ಬಳಿ ತಲುಪಿದಾಗ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಕೆಎ-20ಎಂ-9068 ನೇ ಕಾರನ್ನು ಅದರ ಚಾಲಕ ವಿವೇಕಾನಂದ ಎಂಬಾತನು ಕಾರನ್ನು ಅತೀವೇಗ ಹಾಗೂ ನಿರ್ಲಕ್ಷತನ ದಿಂದ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲಿಗೆ  ಡಿಕ್ಕಿ ಮಾಡಿದ  ಪರಿಣಾಮ ಪಿರ್ಯಾದಿದಾರರು ಮೋಟರು ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕಾಲಿಗೆ , ಎಡಕೋಲು ಕಾಲಿಗೆ ಎಡತಲೆಯ ಹಿಂಬದಿ ರಕ್ತಗಾಯಗೊಂಡು ಬಲಕೈಗೆ  ತರಚಿದ ಗಾಯವಾಗಿದ್ದು,  ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-10-2014 ರಂದು ರಾತ್ರಿ 22-30 ಗಂಟೆಯಿಂದ ದಿನಾಂಕ 28-10-2014 ದು ಬೆಳಿಗ್ಗೆ 10-30 ಗಂಟೆಯ ಮಧ್ಯೆ ಯಾರೋ ಕಳ್ಳರು ಮಂಗಳೂರು ನಗರದ ದಕ್ಕೆಯಲ್ಲಿರುವ ಫಿರ್ಯಾದುದಾರರಾದ ಶ್ರೀ ಅಬ್ದುಲ್ ಖಾದರ್ ರವರ ಬಾಬ್ತು CELL POINT 2 ಎಂಬ ಹೆಸರಿನ ಅಂಗಡಿಯ ಶಟರ್ ಬಾಗಿಲಿನ ಬೀಗ ಮುರಿದು ಒಳಗಡೆ ಪ್ರವೇಶಿಸಿ ವಿವಿಧ ನಮೂನೆಯ ಹಳೆಯ 25 ಮೊಬೈಲ್ ಸೆಟ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಮೌಲ್ಯ ಅಂದಾಜು ರೂ 15,000/- ಆಗಬಹುದು.

 

8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾಧಿದಾರರಾದ ಶ್ರೀ ಶಾಂಬು ಮಂಡಲ್ ರವರು ತಮ್ಮ ರೂಮಿನ ಸಹವರ್ತಿಗಳಾದ ತಮ್ಮಯ ಮತ್ತು ಗೋವಿಂದು ಎಂಬವರ ಜೊತೆಯಲ್ಲಿ ಬಿಗ್ ಬ್ಯಾಗ್ ಕಂಪೆನಿಯ ಬಾಬ್ತು ಬಸ್ಸು ನಂಬ್ರ: ಕೆಎ-19-ಡಿ-8698 ನೇದರಲ್ಲಿ ರಾತ್ರಿ ಪಾಳಿಯ ಕರ್ತವ್ಯ ನಿರ್ವಹಿಸಿ ಗಂಜಿಮಠದಿಂದ ಸೂರಲ್ಪಾಡಿ ಕಡೆಗೆ ಬರುತ್ತಿರುವಾಗ್ಗೆ ಸೂರಲ್ಪಾಡಿ ಮಸೀದಿಯ ಹತ್ತಿರ ತಲುಪಿದಾಗ ಬಸ್ಸಿನಿಂದ ಇಳಿಯುವರೇ ಬಸ್ಸನ್ನು ನಿಲ್ಲಿಸಲು ಚಾಲಕರಿಗೆ ಸೂಚನೆ ನೀಡಿದ್ದು ಅದರಂತೆ ಫಿರ್ಯಾಧಿದಾರರು ಮತ್ತು ಗೋವಿಂದು ಎಂಬವರು ಬಸ್ಸಿನಿಂದ ಇಳಿದು ಬಳಿಕ ತನ್ಮಯ ಎಂಬವರು ಬಸ್ಸಿನಿಂದ ಇಳಿಯುತ್ತಿರುವಾಗ್ಗೆ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ತನ್ಮಯ ಎಂಬಾತನು ರಸ್ತೆಗೆ ಬಿದ್ದು ತಲೆಯ ಎಡ ಭಾಗ, ಎಡಭುಜಕ್ಕೆ, ಮತ್ತು ಎಡ ಕೈಯ ಮೂಳೆ ಮುರಿತವಾಗಿ ತೀವ್ರ ತರಹದ ರಕ್ತಗಾಯವಾಗಿದ್ದು ಅಲ್ಲಿದ್ದ ಸೇರಿದ ಜನರು ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ .ಜೆ ಅಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುದಾಗಿ, ಅಪಘಾತಕ್ಕೆ ಬಿಗ್ ಬ್ಯಾಗ್ ಕಂಪೆನಿಯ ಬಸ್ಸು ನಂಬ್ರ: ಕೆಎ-19-ಡಿ-8698 ನೇದರ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆ ಚಾಲನೆಯೇ ಕಾರಣವಾಗಿರುವುದಾಗಿದೆ.

 

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಬಿ. ಜಯಕುಮಾರ್ ರವರು ಮಂಗಳೂರು ಸಬ್ಡಿವಿಜನ್ಅಂಚೆ ಇಲಾಖೆಯಲ್ಲಿ ಅಂಚೆ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಉಪೇಂದ್ರ.ಪಿ. ತಂದೆ. ಕುಂಞ ನಾಯ್ಕ್ಎಂಬವರು ಮಂಗಳೂರು ತಾಲೂಕು ಕೋಟೆಕಾರು ಅಂಚೆ ಕಛೇರಿಯಲ್ಲಿ ಗ್ರಾಮೀಣ ಅಂಚೆ ಸೇವಕರಾಗಿ ನೇಮಕಗೊಂಡಿರುತ್ತಾರೆ. ಅದರಂತೆ ಇವರಿಗೆ ಕೋಟೆಕಾರು-ಸೋಮೇಶ್ವರ ಪ್ರದೇಶಕ್ಕೆ ಸಂಬಂಧಪಟ್ಟ ಒಂದು ಭಾಗದ ಅಂಚೆಯನ್ನು ರವಾನೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿರುತ್ತದೆ. ಶ್ರೀ ಉಪೇಂದ್ರ ಪಿ. ರವರು ಕೋಟೆಕಾರು ಅಂಚೆ ಕಛೇರಿಯಲ್ಲಿ ಗ್ರಾಮೀಣ ಅಂಚೆ ಸೇವಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಅಂದರೆ ದಿನಾಂಕ. 31-12-2011 ರಿಂದ ದಿನಾಂಕ. 29-8-2012 ಅವಧಿಯಲ್ಲಿ ಸರಕಾರದಿಂದ ಸಂಬಂಧಪಟ್ಟ 1. ಶ್ರೀ ಅಪ್ಪೋಜಿ ರಾವ್ತಂದೆ. ದುರ್ಗೋಜಿ ರಾವ್ ವಾಸ. ಆಶ್ರಯಕಾಲೋನಿ, ಕುಂಪಲ, ಸೋಮೇಶ್ವರ ಗ್ರಾಮ, ಮಂಗಳೂರು, 2. ಶ್ರೀಮತಿ. ಕಮಲಶೆಟ್ಟಿ ಗಂಡ. ದಿ.ಕಾಮಣ್ಣ ಶೆಟ್ಟಿ ವಾಸ. ಮಿತ್ರನಗರ, ಕುಂಪಲ ಸೋಮೇಶ್ವರ, 3. ಶ್ರೀಮತಿ. ಲಕ್ಷ್ಮೀ ಗಂಡ. ದಿ. ರಾಮು ಮೂಲ್ಯ ವಾಸ. ಕ್ಯಾರ್ಆಫ್ಸೀತ, ಲಕ್ಷ್ಮೀ ನಿಲಯ, ಲಕ್ಷ್ಮೀಗುಡ್ಡೆ, ಕೋಟೆಕಾರು, 4. ಶ್ರೀಮತಿ. ಲೀಲಾ ಶೆಡ್ತಿ ಗಂಡ. ಕಿಟ್ಟಶೆಟ್ಟಿ ವಾಸ. ಮೂರುಕಟ್ಟೆ, ಕುಂಪಲ ಕೋಟೆಕಾರು, 5. ಇಲ್ಯಾಸ್ಬಾವ ತಂದೆ. ಎಸ್.ಇದ್ದಿನಬ್ಬ ವಾಸ. ತೊಕ್ಕೊಟು, ದಾರಂದಬಾಗಿಲು, ಕೋಟೆಕಾರು ಎಂಬವರಿಗೆ ಮಂಜೂರು ಆಗಿರುವ ಮನಿ ಆರ್ಡರ್ಒಟ್ಟು ರೂಪಾಯಿ 2,000-00 ಹಣವನ್ನು ಪೋರ್ಜರಿ ಸಹಿ ಮಾಡಿ ತಾನೇ ಬಳಸಿಕೊಂಡು ದುರಪಯೋಗಪಡಿಸಿ ಸರಕಾರಕ್ಕೆ ಮೋಸ ಮಾಡಿರುವುದಾಗಿದೆ.

 

10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 29-10-2014 ರಂದು ರಾತ್ರಿ 8-30 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಹುಸೈನ್ ರವರು ತನ್ನ ಬಾಬ್ತು ಮುಕ್ಕಚೇರಿಯಲ್ಲಿದ್ದ ಜನರೇಟರನ್ನು ಬಾಡಿಗೆ ಟೆಂಪೋದಲ್ಲಿ ತುಂಬಿಸಿ ತನ್ನ ಮನೆಯ ಕಡೆಗೆ ತೆಗೆದುಕೊಂಡು ಹೋಗುತ್ತಾ ಪಿರ್ಯಾದಿದಾರರು ಮತ್ತು ಅವರ ಮಗ ಫರ್ವಿಜ್ನು ಕೆಎ-19-ಇಕೆ-6199 ನೇ ನಂಬ್ರದ ಆ್ಯಕ್ಟಿವ್ಹೋಂಡಾದಲ್ಲಿ ಮುಂದಿನಿಂದ ಹೋಗುತ್ತಾ ಟೆಂಪೋ ನಮ್ಮ ಹಿಂದಿನಿಂದ ಬರುತ್ತಾ ರಾತ್ರಿ ಸುಮಾರು 9-00 ಗಂಟೆಯ ಸಮಯಕ್ಕೆ ಉಳ್ಳಾಲ ಗ್ರಾಮದ ಅಲೇಕಳ ಪಾಂಡೇಲ್ಪಕ್ಕ ಜಾರಾ ಹೌಸ್ಎಂಬಲ್ಲಿ ರಸ್ತೆಯಲ್ಲಿ ತಲುಪುತ್ತಿರುವಾಗ ಅಲ್ಲಿ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಪಿರ್ಯಾದಿದಾರರ ಪರಿಚಯದ ಉಳ್ಳಾಲ ಅಲೇಕಳ ಪಾಂಡೇಲ್ಪಕ್ಕ ವಾಸಿ ಸೌಕತ್ಎಂಬಾತನು ಒಮ್ಮೆಲೇ ಪಿರ್ಯಾದಿದಾರರನ್ನು ಮತ್ತು ಅವರ ಮಗನನ್ನು ತಡೆದು ನಿಲ್ಲಿಸಿ ಬೇಡದ ಮಾತುಗಳಿಂದ ಅವಾಚ್ಯ ಶಬ್ದಗಳಿಂದ ಬೈದು ಆತನ ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ ಹೊಡೆದಾಗ ಯಾಕೆ ನನಗೆ ಹೊಡೆಯುತ್ತೀ ಎಂದು ಕೇಳಿದಾಗ ಆತನು ಮತ್ತೆ ಪಿರ್ಯಾದಿದಾರರ ಕುತ್ತಿಗೆಗೆ, ಬೆನ್ನಿಗೆ, ಮೈಕೈಗೆ ಹೊಡೆದು, ತುಳಿದು ನೋವುಂಟು ಮಾಡಿದಾಗ ಪಿರ್ಯಾದಿದಾರರ ಮಗ ಫರ್ವಿಜ್ನು ಆತನಿಗೆ ಸಮಾಧಾನ ಮಾಡಿ ಗಲಾಟೆ ಬಿಡಿಸಲು ಪ್ರಯತ್ನಿಸಿದಾಗ ಸೌಕತ್ನು ಫರ್ವಿಜ್ನಿಗೆ ಕೂಡಾ ಕೈಯಿಂದ ಕೆನ್ನೆಗೆ, ಮೈಕೈಗೆ ಹೊಡೆದು  ನೋವುಂಟು ಮಾಡಿದಾಗ ಇಬ್ಬರೂ ಜೋರಾಗಿ ಬೊಬ್ಬೆ ಹಾಕಿದಾಗ ಆಸುಪಾಸಿನಲ್ಲಿದ್ದ ಪಿರ್ಯಾದಿದಾರರ ಪರಿಚಯದ ರಹಮನ್‌, ರಹಮತ್ಮತ್ತಿತರರು ಓಡಿಕೊಂಡು ಬರುವುದನ್ನು ಕಂಡು ಸೌಕತ್ನ್ನು ಇಬ್ಬರನ್ನು  ಉದ್ದೇಶಿಸಿ ಮುಂದಕ್ಕೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಸಿ ಅಲ್ಲಿಂದ ಓಡಿ ಹೋಗಿರುತ್ತಾನೆ. ಪಿರ್ಯಾದಿದಾರರು ಮತ್ತು ಅವರ ಮಗ  ಜನರೇಟರನ್ನು ಅವರ ಮನೆಗೆ ತೆಗೆದುಕೊಂಡು ಹೋಗಿ ಟೆಂಪೋದಿಂದ ಜನರೇಟರನ್ನು ಇಳಿಸಿ ಮನೆಗೆ ಹೋದಾಗ ಪಿರ್ಯಾದಿದಾರರ ಹೆಂಡತಿ ಶ್ರೀಮತಿ. ಮಮ್ತಾಜ್ಳು ಸೌಕತ್ನು ಪಿರ್ಯಾದಿದಾರರ ಮನೆಯ ಬಳಿಗೆ ಬಂದು ಪಿರ್ಯಾದಿದಾರನ್ನು ಕೇಳಿ ಬೈದು ಹೋಗಿರುತ್ತಾನೆ.

 

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಯೂಸೂಫ್ ಎ. ಕುಂಬ್ಳೆ ರವರು ಹೃದಯ ರೋಗ ತಜ್ಞರಾಗಿದ್ದು ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯ ಆಡಳಿತ ನಿರ್ದೇಶಕರಾಗಿರುತ್ತಾರೆ. ದಿನಾಂಕ: 11.09.2011 ರಂದು  ಯಾರೋ ಅಪರಿಚಿತರು ಅಂತರ್ಜಾಲದಲ್ಲಿ ಬ್ಲಾಗ್‌‌‌‌ ಒಂದನ್ನು ತೆರೆದು ಅದರಲ್ಲಿ ಪಿರ್ಯಾದಿದಾರರ ಹೆಸರು ಹಾಗೂ ವೃತ್ತಿಗೆ ದಕ್ಕೆ ಉಂಟುಮಾಡುವ ಸಲುವಾಗಿ Dr Yusuf Kumble is a fraud and dishonest medical practitioner who cheats his patients by giving false diagnoses in cardiac conditions ಎಂಬಿತ್ಯಾದಿಯಾಗಿ ಸುಳ್ಳು ಪ್ರಚಾರ ಮಾಡಿ ಪಿರ್ಯಾದಿದಾರರ ಮಾನಹಾನಿ ಮಾಡಿದ್ದಲ್ಲದೆ ಆರ್ಥಿಕ ನಷ್ಟವನ್ನು ಉಂಟುಮಾಡಿರುತ್ತಾರೆ.

 

12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.10.2014 ರಂದು ಪಿರ್ಯಾಧಿದಾರರಾದ ಶ್ರೀ ಜೀವನ್ ಕಾರ್ನೆಲಿಯೋ ರವರು ತನ್ನ ಬಾಬ್ತು ಕೆಎ-19-ಇಜೆ-6821 ನೇ ಮೋಟಾರ್‌‌ ಸೈಕಲ್ನಲ್ಲಿ  ವಾಮಂಜೂರಿನಿಂದ  ಮಂಗಳೂರು ಕಡೆಗೆ  ತನ್ನ ಸ್ನೇಹಿತ  ಜೋಯೆಲ್‌‌ ಕ್ರಾಸ್ತಾ ರವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಬರುತ್ತಾ ಕುಡುಪು ದೇವಸ್ಥಾನದ ಬಳಿ ತಲುಪುತ್ತಿದ್ದಂತೆ  ಪಿರ್ಯಾದಿದಾರರ  ಮೋಟಾರ್‌‌ ಸೈಕಲ್‌‌ ಮುಂದುಗಡೆ  ರಸ್ತೆ ಬದಿಯಲ್ಲಿ ಕೆಎ-19-ಎಂಸಿ-2463 ನೇ ರಿಟ್ಜ್‌‌ ಕಾರನ್ನು  ರಸ್ತೆ ಬದಿಯಲ್ಲಿ ನಿಲ್ಲಿಸಿ ಅದರಿಂದ ಜರನ್ನು  ಇಳಿಸಿ  ನಂತರ ಒಮ್ಮೆಲೇ  ಯಾವುದೇ ಸೂಚನೆಯನ್ನು  ನೀಡದೇ ಬಲಗಡೆಗೆ ರಸ್ತೆಗೆ ತಿರುಗಿಸಿದ್ದರಿಂದ ನೇರವಾಗಿ ಕುಲಶೇಖರ ಕಡೆಗೆ ರಾಹೆ-169 ರಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರ ಮೋಟಾರ್‌‌ ಸೈಕಲ್ಗೆ  ಡಿಕ್ಕಿಹೊಡೆದ ಪರಿಣಾಮ  ಪಿರ್ಯಾದಿದಾರರು ಮತ್ತು ಹಿಂಬದಿ ಸವಾನಾದ ಜೋಯೆಲ್‌‌ ಕ್ರಾಸ್ತಾ  ಬೈಕ್‌‌ ಸಮೇತ ರಸ್ತೆಗೆ ಎಸೆಯಲ್ಪಟ್ಟಿದ್ದರಿಂದ ಪಿರ್ಯಾದಿದಾರರ ಎಡ ಮತ್ತು ಬಲಕಾಲಿನ ಮೊಣಗಂಟಿನ ಭಾಗಕ್ಕೆ ಎಡಕಾಲಿನ ಮಣಿಗಂಟಿನ ಬಳಿ ರಕ್ತಗಾಯ ಮತ್ತು ಗುದ್ದಿದ ಗಾಯವಾಗಿರುತ್ತದೆ ಮತ್ತು ಹಿಂಬದಿ ಸವಾರನಾದ ಜೋಯೆಲ್‌‌ ಕ್ರಾಸ್ತಾ ರವರ ಎಡಭುಜದ ಬಳಿ ಮತ್ತು ತಲೆಯ ಭಾಗಕ್ಕೆ ಗುದ್ದಿದ ಗಾಯವಾಗಿರುತ್ತದೆ.

No comments:

Post a Comment