Tuesday, September 30, 2014

Daily Crime Reports 29-09-2014

ದೈನಂದಿನ ಅಪರಾದ ವರದಿ.

ದಿನಾಂಕ 29.09.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26-09-2014ರಂದು ಸಂಜೆ ಸಮಯ ಸುಮಾರು 16-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಅಹಮ್ಮದ್ ಇಂಮ್ತಿಯಾಜ್ ರವರು ತನ್ನ ಬಾಬ್ತು ಚಾಸೀಸ್ ನಂಬ್ರ: ST91IN998689, ಇಂಜಿನ್ ನಂಬ್ರ: 1087466ನೇ KA 19 P 6831ನೇ ನೋಂದಣಿ ಸಂಖ್ಯೆಯ 1994ನೇ ಮೊಡೆಲಿನ ನೀಲಿ ಬಣ್ಣದ  ಅಂದಾಜು ಮೌಲ್ಯ ರೂ. 45,000/- ಬೆಲೆ ಬಾಳುವ ಮಾರುತಿ ಕಂಪನಿಯ ಓಮ್ನಿ ಕಾರನ್ನು ಮಂಗಳೂರು ನಗರದ ಫಳ್ನೀರಿನಲ್ಲಿರುವ ಯುನಿಟಿ ಆಸ್ಪತ್ರೆಯ ಕಂಪೌಂಡ್ ಪಕ್ಕದಲ್ಲಿ ಪಾರ್ಕ್ ಮಾಡಿಟ್ಟು ತನ್ನ ತಂದೆಯನ್ನು ಡಿಸ್ಚಾರ್ಜ್ ಮಾಡಿಸಲು ಹೋಗಿದ್ದು, ವಾಪಾಸು ಸಮಯ ಸುಮಾರು 20-00 ಗಂಟೆಗೆ ಸದ್ರಿ ಕಾರನ್ನು ಪಾರ್ಕ್ ಮಾಡಿದ ಸ್ಥಳಕ್ಕೆ ಬಂದು ನೋಡಲಾಗಿ ಸದ್ರಿ ಕಾರು ಪಾರ್ಕ್ ಮಾಡಿಟ್ಟ ಸ್ಥಳದಲ್ಲಿ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಸದ್ರಿ ಕಾರನ್ನು ಸುತ್ತಮುತ್ತ ಹಾಗೂ ನಗರದ ಇತರ ಕಡೆಗಳಲ್ಲಿ ಇಲ್ಲಿಯ ತನಕ ಹುಡುಕಾಡಿದಲ್ಲಿ ಪತ್ತೆಯಾಗದೇ ಇರುವುದರಿಂದ ತಡವಾಗಿ ದೂರು ನೀಡಿರುವುದಾಗಿದೆ.

 

2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27-09-14 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ: 28-09-14 ರಂದು ಬೆಳಿಗ್ಗೆ 5-00 ಗಂಟೆಯ ಮಧ್ಯದ ಅವಧಿಯಲ್ಲಿ ಸುರತ್ಕಲ್ ಗ್ರಾಮದ ತಡಂಬೈಲ್ ಕುಲಾಲ ಭವನದ ಎದುರುಗಡೆ ಇರುವ ಪಿರ್ಯಾದಿದಾರರಾದ ಡಾ. ಕೆ.ವಾಯ್. ಸತ್ಯಶಂಕರ್ ರವರ ಮನೆಗೆ ಯಾರೋ ಕಳ್ಳರು ಹಿಂಬದಿ ಬಾಗಿಲನ್ನು ತೆರೆದು ಒಳ ಪ್ರವೇಶಿಸಿ ಮನೆಯ ಕೋಣೆಯೊಳಗಿದ್ದ ಡ್ರಾವರ್ ನಲ್ಲಿ ಇರಿಸಿದ್ದ 1) 32 ಗ್ರಾಂ ತೂಕದ ಚಿನ್ನದ ಹಾರ, 2) 9 ಗ್ರಾಂ ತೂಕದ ನವರತ್ನ ಉಂಗುರ ( ವಜ್ರ ಖಚಿತ), 3) 8 ಗ್ರಾಂ ತೂಕದ ಹಸಿರು ಕಲ್ಲಿನ ಚಿನ್ನದ ಉಂಗುರ, 4) 4 ಗ್ರಾಂ ತೂಕದ ಕರಿಮಣಿ ಉಂಗುರ, 5) 4 ಗ್ರಾಂ ತೂಕದ ಡೈಮಂಡ್ ಉಂಗುರ, ಹಾಗೂ ನಗದು ಹಣ 58, 000 ರೂಪಾಯಿ ಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನವಾದ ಸೊತ್ತಿನ ಅಂದಾಜು ಮೌಲ್ಯ ರೂ. 180,000/- ಆಗಬಹುದು.

 

3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಲೀಲಾವತಿ ರವರ ಮಗ ಸುಜಿತ್ ಕುಮಾರ್ (40) ಎಂಬವರಿಗೆ ಸುಮಾರು 12 ವರ್ಷಗಳ ಹಿಂದೆ ಮದುವೆಯಾಗಿ 1 ಮಗು ಇದ್ದು ದಾಂಪತ್ಯ ವಿರಸದಿಂದ ಗಂಡ ಹೆಂಡತಿ ಬೇರೆ ಬೇರೆಯಾಗಿದ್ದು ದಿನಾಂಕ 26-09-2014 ರಂದು ಬೆಳಿಗ್ಗೆ 06-15 ಗಂಟೆಗೆ ಪಿರ್ಯಾದಿದಾರರ ಮಗ ಎಂದಿನಂತೆ ಮನೆಯಿಂದ ಮಂಗಳೂರಿನ ಎಚ್ ಡಿ ಎಪ್ ಸಿ ಬ್ಯಾಂಕಿನಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಹೋದವರು ಕೆಲಸಕ್ಕೂ ಹೋಗದೇ, ವಾಪಾಸು ಮನೆಗೂ ಬಾರದೇ ಕಾಣೆಯಾಗಿರುತ್ತಾರೆ. ಕಾಣೆಯಾದ ಸುಜಿತ್ ಕುಮಾರ್ (40) ರವರ ಚಹರೆ ಗುರುತು: ಎತ್ತರ: 5'7 ಇಂಚು, ಸಪೂರ ಶರೀರ, ಬಿಳಿ ಮೈ ಬಣ್ಣ, ಕ್ರೀಂ ಕಲರ್ ಪ್ಯಾಂಟ್ ಮತ್ತು ಬೂದು ಬಣ್ಣದ ಗೆರೆಯ ಶರ್ಟ್ಧರಿಸಿದ್ದು ಕನ್ನಡ ತುಳು ಭಾಷೆ ಬಲ್ಲವರಾಗಿರುತ್ತಾರೆ.

 

4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27.09.2014 ರಂದು ಫಿರ್ಯಾದಿದಾರರಾದ ಶ್ರೀ ದಿನಕರ ರವರು ದೇರಳಕಟ್ಟೆಯಿಂದ ಸಂಜೆ ಕೆಲಸ ಮುಗಿಸಿ ತೊಕ್ಕೊಟ್ಟುವರೆಗೆ ರಿಕ್ಷಾದಲ್ಲಿ ಬಂದು ನಂತರ ತೊಕ್ಕೊಟ್ಟುನಿಂದ ಓವರ್ ಬ್ರಿಡ್ಜ್ ಕಡೆಗೆ ರಸ್ತೆ ಬದಿಯಲ್ಲಿ ಮನೆ ಕಡೆಗೆ ನಡೆದುಕೊಂಡು ಹೋಗುವಾಗ ರಾತ್ರಿ ಸುಮಾರು 08.45 ಗಂಟೆಗೆ ನೇತಾಜಿ ಆಸ್ಪತ್ರೆಯ ಬಳಿ ತಲುಪುತ್ತಿದ್ದಂತೆ ನೇತಾಜಿ ಆಸ್ಪತ್ರೆಯ ಒಳಗಡೆಯಿಂದ ಬಂದ ಒಂದು ರಿಕ್ಷಾ ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುತ್ತಾನೆ. ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟು ಅವರ ಎಡಬದಿಯ ತಲೆಗೆ, ಕೆನ್ನೆಗೆ, ಹಣೆಗೆ, ಕೈಗೆ ಗಾಯವಾಗಿದ್ದು, ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಬರುತ್ತಿದ್ದು, ಚಿಕಿತ್ಸೆಗಾಗಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ಬಗಂಬಿಲ ಎಂಬಲ್ಲಿ ಹೌಸಿಂಗ್ಬೋರ್ಡ್ ಬಾಬ್ತು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ರಾಮಕೃಷಿ ಎಂಬ ಸಂಸ್ಥೆ ವಹಿಸಿಕೊಂಡಿದ್ದು, ಸಂಸ್ಥೆಯಲ್ಲಿ ಪಿರ್ಯಾದುದಾರರಾದ ಶ್ರೀ ಗ್ಯಾನೇಶ್ ರವರು ಇಂಜಿನಿಯರ್ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 28-09-2014 ರಂದು 17-00 ಗಂಟೆ ಸಮಯಕ್ಕೆ ಸುಮಾರು 5 ರಿಂದ 7 ಮಂದಿಯಿದ್ದ ಗುಂಪು ಕೈಯಲ್ಲಿ ಚೂರಿ ಮತ್ತು ಕಬ್ಬಿಣದ ರಾಡ್ಹಿಡಿದುಕೊಂಡು ಅಲ್ಲಿಗೆ ಬಂದು ಪಿರ್ಯಾದುದಾರರು ಮತ್ತು ಇತರರು ಕೆಲಸ ಬಿಟ್ಟು ಸೈಟ್ಖಾಲಿ ಮಾಡುವಂತೆ ತಿಳಿಸಿ, ಹಲ್ಲೆಗೆ ಮುಂದಾಗಿ, ರಾಹುಬಹದ್ದೂರ್‌, ಹೆಮಂತ್‌, ವಿರಾರೆಡ್ಡಿ, ಯನಿಸ್‌‌ಖಾನ್ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ. ಆರೋಪಿತರ ಕೈಯಲ್ಲಿದ್ದ ರಾಡ್ಮತ್ತು ಚೂರಿಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ ಅವುಗಳು ತುಂಡಾಗಿ ಬಿದ್ದಿರುತ್ತದೆ. ಅಲ್ಲದೇ ಆರೋಪಿತರು ಎರಡು ಪ್ಲಾಸ್ಟಿಕ್ಚೇರುಗಳನ್ನು ಹುಡಿ ಮಾಡಿ ಸುಮಾರು 2000/- ರೂಪಾಯಿ ನಷ್ಟವನ್ನುಂಟು ಮಾಡಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಇತರು ಸೇರುವುದನ್ನು ಕಂಡ ಆರೋಪಿತರು ಪಿರ್ಯಾದಿಗೆ ಮತ್ತು ಇತರರಿಗೆ ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ.

 

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-09-2014 ರಂದು 16-00 ಗಂಟೆಗೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಉಳ್ಳಿಯ ಎಂಬಲ್ಲಿ ಕಳೆದು ಸುಮಾರು ದಿನಗಳಿಂದ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬದ ಮಾಹಿತಿಯಂತೆ ಉಳ್ಳಾಲ ಪೊಲೀಸು ಠಾಣಾ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸು ಉಪ ನಿರೀಕ್ಷಕಿ ಭಾರತಿ ಜಿ. ರವರು ಸದ್ರಿ ಸ್ಥಳಕ್ಕೆ ದಾಳಿ ನಡೆಸುವರೇ ಮಾನ್ಯ ಸಹಾಯಕ ಪೊಲೀಸು ಆಯುಕ್ತರು, ಮಂಗಳೂರು ದಕ್ಷಿಣ ಉಪವಿಭಾಗರವರವರಿಂದ ವಾರಂಟು ಪಡೆದುಕೊಂಡು, ಪಂಚರೊಂದಿಗೆ ಮತ್ತು ಠಾಣಾ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ 18-15 ಗಂಟೆಗೆ ದಾಳಿ ನಡೆಸಿದ್ದು, ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಉಳಿಯದಲ್ಲಿರುವ ಮನೆ ನಂಬ್ರ 117 ನೇಯದ್ದಕ್ಕೆ ದಾಳಿ ನಡೆಸಿದ ವೇಶ್ಯಾವಾಟಿಕೆಗೆ ಗಿರಾಕಿಗಳಿಂದ ಹಣ ಪಡೆಯುತ್ತಿದ್ದ 2 , (3) ಮೊಹಮ್ಮದ್ರಫೀಕ್‌, ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದ (4) ಉಮ್ಮರ್ಫಾರೂಕ್‌, (5) ಅಬ್ದುಲ್ರವೂಫ್ಮತ್ತು ನೊಂದವರು 2 ಇದ್ದು, ಅವರುಗಳನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾಗ ಅವರುಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದರಿಂದ ವೇಶ್ಯಾವಾಟಿಕೆಗೆ ಬಳಸಿದ ಕಾಂಡೋಮ್‌-10, ಖಾಲಿ ಬಿಯರ್ ಬಾಟ್ಲಿಗಳು-7, ದಂಧೆಯಿಂದ ಗಳಿಸಿದ ನಗದು ಹಣ ರೂಪಾಯಿ. 10200/- ಚಾಪೆ-1, ತಲೆದಿಂಬು-1, ಮೊಬೈಲ್ಫೋನ್‌-4 ಇವುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಿಡಿಕೊಂಡಿರುವುದಾಗಿದೆ. ಠಾಣೆಗೆ ಬಂದು ಆರೋಪಿತರನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದಲ್ಲಿ ಸುದರ್ಶನ್ಮತ್ತು ಮನೆ ಮಾಲಿಕ ಶಾಂತರಾಮರವರು ಕೂಡ ದಂಧೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ.

 

No comments:

Post a Comment