Tuesday, September 9, 2014

Daily Crime Reports 09-09-2014

ದೈನಂದಿನ ಅಪರಾದ ವರದಿ.

ದಿನಾಂಕ 09.09.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0.

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-09-2014 ರಂದು ಪಿರ್ಯಾದಿದಾರರಾದ ಶ್ರೀ ಡೆಲ್ವೆನ್ ಡಿ'ಸೋಜಾ ರವರು ಮದ್ಯಾಹ್ನ ಎಮ್.ಸಿ.ಎಫ್ ಗೇಟ್ ಬಳಿ ನಿಂತಿದ್ದಾಗ  ಆರೋಪಿ ಕೆ. 19.ಸಿ..3269 ನೇಬಸ್ ಚಾಲಕ ಫ್ಯಥ್ವಿಕಿರಣ್ ಎಂಬವರು ಅವರ ಬಾಬ್ತು ಸದ್ರಿ ಬಸ್ ನ್ನು  ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ರಾ.ಹೆ 66 ರಲ್ಲಿ ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮದ್ಯಾಹ್ನ  1-30 ಗಂಟೆ ಸಮಯಕ್ಕೆ ಎನ್.ಎಂ .ಪಿ.ಟಿ ಗೆಟ್ ಕಡೆಯಿಂಧ ಎಮ್.ಸಿ.ಎಪ್ ಕಡೆಗೆ ರಸ್ತೆ ದಾಟುತ್ತಿದ್ದ  ವ್ಯಕ್ತಿಯೋರ್ವರಿಗೆ ಡಿಕ್ಕಿ ಮಾಡಿ  ಹಣೆ ಹೊಟ್ಟೆಗೆ ತೀರ್ವ ತರಹದ ಗಾಯವುಂಟುಮಾಡಿದ್ದು ಗಾಯಗೊಂಡ ವ್ಯಕ್ತಿ ಪ್ರಜ್ಞೆ ತಪ್ಪುವ ಹಂತದಲ್ಲಿ ಆತನ ಹೆಸರು ಅಸ್ಪಷ್ಟವಾಗಿ ರಮೇಶ (26)ಎಂಬುದಾಗಿ ತಿಳಿಸಿದ್ದು,  ನಂತರ ಆತನನ್ನು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ  ದಾಖಲಿಸಿರುವುದಾಗಿ ಬೇರೆ ಯಾರೂ ಆತನ ವಾರೀಸುದಾರರು ಬಾರದೇ ಇರುವುದಾಗಿದೆ.

 

2.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-09-2014 ರಂದು 15-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ದೀರಜ್ @ ನಾಗರಾಜ್ ರವರು ಬೊಕ್ಕಪಟ್ಣದ ಬಳಿ ನದಿ ಕಿನಾರೆ ಬಳಿ ಇದ್ದ ಸಮಯ ಚರ್ಚ್ಗೇಟ್ನಿವಾಸಿ ವಿನಿಲ್ಎಂಬಾತನು ಹೊಳೆ ಮದ್ಯದಲ್ಲಿರುವ ಬೋಟ್ರಿಪೇರಿ ಮಾಡುವಲ್ಲಿಗೆ ಹೋಗುವ ಎಂದು ಪಿರ್ಯಾದಿದಾರರಲ್ಲಿ ತಿಳಿಸಿ ಒಮ್ಮೆಗೆ ನದಿಗೆ ಧುಮುಕಿದ್ದು ಆದರೆ ಅವರು ನದಿ ನೀರಿನಲ್ಲಿ ಮುಳುಗಿದ್ದು  ನೀರಿಗೆ ಇಳಿದು ಈವರೆಗೂ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07.09.2014 ರಂದು ಸಮಯ ಸುಮಾರು 17.30 ಗಂಟೆಗೆ ಫಿರ್ಯಾದುದಾರರಾದ ಶ್ರೀ ರಘುನಾಥ್ ಕೆ. ರವರು ತನ್ನ  ದ್ವಿ ಚಕ್ರ ವಾಹನ  ನಂಬ್ರ KA19-EB-5703 ರಲ್ಲಿ ಸವಾರರಾಗಿ  ಮಂಗಳೂರು ನಗರದ .ಜೆ ಆಸ್ಪತ್ರೆಯ ಎದುರುಗಡೆ ಇರುವ ಎನ್.ಹೆಚ್.ರಸ್ತೆಯ ಎಡ ಭಾಗದಲ್ಲಿ ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿರುವಾಗ, ಫಿರ್ಯಾದುದಾರರ ಹಿಂಬದಿಯಿಂದ ಮಾರುತಿ ಸ್ವಿಪ್ಟ್ ಕಾರು ನಂಬ್ರ KA19-MC-2643 ನ್ನು ಅದರ ಚಾಲಕನು   ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರ ಕೈಗೆ, ಹಣೆಗೆ, ಕಾಲಿಗೆ ಮತ್ತು ಭುಜಗಳಿಗೆ ಗಾಯಗಳಾಗಿರುತ್ತದೆ ಮತ್ತು ಎಡ ಕೈ ಜಖಂಗೊಂಡು .ಜೆ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುತ್ತಾರೆ.  ಸದ್ರಿ ಕಾರು ಚಾಲಕ ಕಾರನ್ನು ನಿಲ್ಲಿಸದೇ ತಕ್ಷಣ ಸ್ಥಳದಿಂದ ಪರಾರಿಯಾಗಿರುತ್ತಾನೆ.

 

4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07.09.2014 ರಂದು ಫಿರ್ಯಾದಿದಾರರಾದ ಶ್ರೀ ಜೊರ್ಜ್ ರವರು ಮಂಗಳೂರು ತಾಲೂಕು, ಕೊಣಾಜೆ ಗ್ರಾಮದ, ಎಲಿಯಾರ್ಪದವು ಎಂಬಲ್ಲಿರುವ ತನ್ನ ಅಂಗಡಿಯಲ್ಲಿ ವ್ಯವಹಾರ ಮಾಡಿಕೊಂಡಿರುವಾಗ ಆರೋಪಿಗಳಾದ ಶೇಖರ ಮತ್ತು ಮುನೀರ್ಎಂಬವರು ಬೀಡಿ ಖರೀದಿಸುವ ವಿಚಾರದಲ್ಲಿ ಗಲಾಟೆ ತೆಗೆದು ಆರೋಪಿ ಶೇಖರನು ಫಿರ್ಯಾದಿದಾರರ ಅಂಗಡಿಯ ಒಳೆಗೆ ಅಕ್ರಮ ಪ್ರವೇಶ ಮಾಡಿ, ಫಿರ್ಯಾದಿದಾರರ ಅಂಗಿಯ ಕಾಲರರ್ಹಿಡಿದು ಅಂಗಡಿಯಿಂದ ಹೊರಗೆ ಎಳೆದು ಹಾಕಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದುದಲ್ಲದೇ. ಮರದ ದೊಣ್ಣೆಯಿಂದ ಕೂಡಾ ಫಿರ್ಯಾದಿದಾರರ ತಲೆಗೆ ಹೊಡೆದು, ಇದನ್ನು ತಡೆಯಲು ಬಂದ ಫಿರ್ಯಾದಿದಾರರ ತಮ್ಮ ಸಾಂತ್ರಾಜ ಎಂಬವರಿಗೆ ಕೂಡಾ ತಲೆಗೆ ಮತ್ತು ಎಡಕಾಲಿಗೆ ಹೋಡೆದುದಲ್ಲದೇ 2ನೇ ಆರೋಪಿ ಮುನೀರ್ಕೂಡಾ ದೊಣ್ಣೆಯಿಂದ ಇಬ್ಬರ ಮೈ, ಕೈಗೆ ಹೋಡೆದಾಗ, ಬೊಬ್ಬೆ ಹೊಡೆದುದನ್ನು ಕೇಳಿ ಜನರು ಅಲ್ಲಿಗೆ ಬಂದು ಜಗಳವನ್ನು ಬಿಡಿಸಿದ್ದು, ಆರೋಪಿಗಳು ಅಲ್ಲಿಂದ ಹೋಗುವಾಗ "ನಿಮ್ಮನ್ನು ಮುಂದೆ ಬದುಕಲು ಬಿಡುವುದಿಲ್ಲ ಎಂದು ಜೇವ ಬೆದರಿಕೆ ಹಾಕಿ ಹೋಗಿರುತ್ತಾರೆ. ಗಾಯಾಳು ಫಿರ್ಯಾದಿದಾರರನ್ನು ಮತ್ತು ಸಾಂತ್ರಾಜ್ನನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08.09.2014ರಂದು ಪಿರ್ಯಾಧಿದಾರರಾದ ಶ್ರೀ ಗಿರೀಶ್ ಕಾಮತ್ ರವರು ತನ್ನ ಸ್ವಂತ ಕೆಲಸದ ಬಗ್ಗೆ ತನ್ನ ಬಾಬ್ತು ಕಾರು ಕೆಎ 19 ಎಂ ಬಿ 807ರಲ್ಲಿ ಮಂಗಳೂರಿಗೆ ಹೋಗಿದ್ದು, ಕೆಲಸ ಮುಗಿಸಿ ವಾಪಾಸು ಬರುತ್ತಾ ರಾತ್ರಿ 20.30 ಗಂಟೆಗೆ ಪಾವಂಜೆ ಸೇತುವೆಯಲ್ಲಿ ಮಹಿಳೆಯೊಬ್ಬಳು ಸುಮಾರು 3 ವರ್ಷ ಪ್ರಾಯದ ಚಿಕ್ಕ ಮಗುವೊಂದನ್ನು ಕೈ ಹಿಡಿದು ನಡೆದುಕೊಂಡು ಹೋಗುತ್ತಾ ಮಗುವನ್ನು ಎತ್ತಿ ಸೇತುವೆ ಮೇಲಿನಿಂದ ನದಿ ನೀರಿಗೆ ಎಸೆದು ತಾನು ಕೂಡ ಸೇತುವೆಯಿಂದ ನದಿ ನೀರಿಗೆ ಹಾರಿದು ಅದೇ ಸಮಯಕ್ಕೆ ಸೇತುವೆಯಲ್ಲಿ ನಡೆದುಕೊಂಡು ಬರುತ್ತಿದ್ದ ಕೆಲವರು ನೀರಿಗೆ ಹಾರಿ ಮಹಿಳೆಯನ್ನು ರಕ್ಷಿಸಿ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಸೇರಿಸಿದ್ದು, ಸುಮಾರು 21.30 ಗಂಟೆಗೆ ಮಗುವಿನ ಮೃತ ಶರೀರವನ್ನು ನೀರಿನಿಂದ ಮೇಲಕ್ಕೆ ಎತ್ತಿ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕೊಂಡು ಹೋದಾಗ ಮಗು ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ಮಹಿಳೆಯು ಚಿಕಿತ್ಸೆಯಲ್ಲಿರುತ್ತಾಳೆ.  ಮಹಿಳೆ ಶ್ರೀಮತಿ ದಿವ್ಯ ಜೋಯಿಸಿ ತನ್ನ 3 ವರ್ಷದ ಮಗು ದೀರಾಜ್ ನನ್ನು ಪಾವಂಜೆ ಸೇತುವೆಯಿಂದ ನಂದಿನಿ ನದಿ ನೀರಿಗೆ ಎಸೆದು ಕೊಲೆ ಮಾಡಿ ತಾನು ನದಿ ನೀರಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿರುವುದಾಗಿದೆ.

 

6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07.09.2014 ರಂದು 15.30 ಗಂಟೆಯ ವೇಳೆಗೆ ಮಂಗಳೂರು ತಾಲೂಕು ಪುಚ್ಚಮೊಗ್ರು ಗ್ರಾಮದ ಬಿರಾವು ಎಂಬಲ್ಲಿ ಮೂಡಬಿದ್ರೆ - ಬಂಟ್ವಾಳ ರಸ್ತೆಯಲ್ಲಿ ಪಿರ್ಯಾದಿದಾರರಾದ ಶ್ರೀ ನಾಗರಾಜ್ ರವರು ತನ್ನ ಸ್ನೇಹಿತ ಲಿಂಗರಾಜ ಎಂಬವನ ಬಾಬ್ತು ಮೋಟಾರು ಸೈಕಲ್ ನಂಬ್ರ: ಕೆಎ- 27-ಕ್ಯೂ 5824 ನೇಯದರಲ್ಲಿ ಅರುಣ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬಂಟ್ವಾಳ ಕಡೆಯಿಂದ ಮೂಡಬಿದ್ರೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಮಂಗಳೂರು ತಾಲೂಕು ಪುಚ್ಚಮೊಗರು ಗ್ರಾಮದ ಬಿರಾವು ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಬಂಟ್ವಾಳ ಕಡೆಗೆ ಮ್ಯಾಕ್ಸಿಕ್ಯಾಬ್ ಟೆಂಪೋ ನಂಬ್ರ: ಕೆಎ-46-0665 ನೇಯದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾಬಲಬದಿಗೆ ತಿರುವುರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಎಡ ಕೆನ್ನೆಗೆ ರಕ್ತಗಾಯವಾಗಿ ಬಲಕಾಲಿಗೆ ಗುದ್ದಿದ ನೋವುಂಟಾಗಿದ್ದು, ಸಹಸವಾರ ಅರುಣ್ ನಿಗೆ ಎಡಕೈಯ ಮೂರೂ ಬೆರಳುಗಳಿಗೆ ರಕ್ತಗಾಯವಾಗಿ ಎಡಸೊಂಟಕ್ಕೆ ಗುದ್ದಿದ ನೋವು ಮತ್ತು ಮುಖದ ಗದ್ದಕ್ಕೆ ತರಚಿದ ಗಾಯಗಳುಂಟಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:08-09-2014 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಮಂಗಳೂರು ನಗರದ  ಜೆಪ್ಪಿನ ಮೊಗರು ಗ್ರಾಮದ ಜೆಪ್ಪು ಪಟ್ಣ  ಎಂಬಲ್ಲಿ ಮೊಹಮ್ಮದ್ ಆಯೂಬ್ ಖಾಸಿಮ್ ಎಂಬವರ ಮನೆಯ ಒಂದನೇ ಮಹಡಿಯ ನಿರ್ಮಾಣ ಹಂತದ ಮಹಡಿಯ ಮೇಲೆ ಪೆರೇಜ್ ನಲ್ಲಿ ನಿಂತು ಸಾರಣೆ ಕೆಲಸ ಮಾಡುತ್ತಿದ್ದ ಹೈದರಾಲಿಯವರ ಕೆಲಸದವರಾದ ಜಬ್ಬರ್ ಶೇಖ್ ಮತ್ತು ಸಾಯಿಬ್ ಶೇಖ್ ರವರು ಆಯ ತಪ್ಪಿ ಕೆಳಗೆ ಬಿದ್ದಿರುವುದಾಗಿದೆ. ಪರಿಣಾಮ ಸಾಹೇಬ್ ಶೇಖ್ ರವರ ಎಡಬದಿಯ ಕಿವಿಯ ಮೇಲ್ಭಾಗ ತಲೆಗೆ ಗಾಯವಾಗಿ ರಕ್ತ ಸೋರುತ್ತಿದ್ದು, ಹಾಲಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲ.   ಜಬ್ಬಾರ್ ಶೇಖ್ ರವರ ಕುತ್ತಿಗೆಗೆ ಗುದ್ದಿದ ನಮೂನೆಯ ನೋವುಂಟಾಗಿರುತ್ತದೆ. ಕೆಲಸದ ಗುತ್ತಿಗೆ ಪಡೆದುಕೊಂಡ ಹೈದರಾಲಿಯವರು ಎತ್ತರದಲ್ಲಿ ಪೆರೇಜ್ ನಲ್ಲಿ ನಿಂತುಕೊಂಡು ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ತಲೆಗೆ ಹೆಲ್ಮೆಟ್, ಸೊಂಟಕ್ಕೆ ಸುರಕ್ಷತಾ ಬೆಲ್ಟ್ ಇತ್ಯಾದಿ ಸಲಕರಣೆಗಳನ್ನು ನೀಡದೇ, ಹಾಗೂ ಕೆಲಸ ಮಾಡುವ ಸ್ಥಳದ ಅಡಿ ಭಾಗಕ್ಕೆ ಸುರಕ್ಷತಾ ನೆಟ್ ನ್ನು ಕಟ್ಟದೇ, ಯಾವುದೇ ಸುರಕ್ಷತಾ ಕ್ರಮವನ್ನು ಕೈಗೊಳ್ಳದೇ ಬೇಜವಬ್ದಾರಿ ತೋರಿಸಿ, ಕೆಲಸ ಮಾಡಿಸಿರುವುದರಿಂದ ಘಟನೆ ಸಂಭವಿಸಿರುತ್ತದೆ.

 

8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-09-2014 ರಂದು ಬೆಳಗ್ಗಿನ ಜಾವ 02-00 ಗಂಟೆಗೆ ಆರೋಪಿತರಾದ ಶಮೀನಾ ಫಾತಿಮಾ ಪ್ರಾಯ ಸುಮಾರು 35 ವರ್ಷ ಎಂಬವರು ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ನಜೀಬ್ ರವರ ಮನೆಯಲ್ಲಿದ್ದವರು ಶಮೀನಾಳ ಮಗಳ ಅನೈತಿಕ ವಿಷಯದ ಬಗ್ಗೆ ತನ್ನ ಗಂಡನ ಜೊತೆ ದೂರವಾಣಿ ಮೂಲಕ ಮಾತನಾಡುತ್ತಿದ್ದ ಸಮಯ, ಶಮೀನಾಳ ಮಗಳ ಅನೈತಿಕ ವ್ಯವಹಾರದ ಬಗ್ಗೆ ಫಿರ್ಯಾದಿದಾರರ ಜೊತೆ ಮಾತು ಬೆಳೆದು, ಶಮೀನಾಳು ಫಿರ್ಯಾದಿದಾರರಲ್ಲಿ 25 ಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಾಗ ಇದನ್ನು ಫಿರ್ಯಾದಿದಾರರು ನಿರಾಕರಿಸಿದ್ದು, ಆರೋಪಿ ಶಮೀನಾಳು ಕೋಪಗೊಂಡು ಕಿಚನ್ ನೈಪ್ ನಿಂದ ನಿನ್ನನ್ನು ಕೊಂದು ಬಿಡುತ್ತೇನೆಂದು ಚೀರಾಡುತ್ತಾ ಹೊಡೆಯಲು ಬಂದಾಗ ಫಿರ್ಯಾದಿದಾರರು ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಫಿರ್ಯಾದಿದಾರರ ಹೊಟ್ಟೆಯ ಎಡ ಭಾಗ, ಕೈ ಮತ್ತು ಮುಖಕ್ಕೆ ಗೀರಿದ ಗಾಯಗಳಾಗಿರುತ್ತದೆ. ಫಿರ್ಯಾದಿದಾರರು ಚಿಕಿತ್ಸೆ ಬಗ್ಗೆ 06-09-2014 ರಂದು ಹೊರ ರೋಗಿಯಾಗಿ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.

 

9.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ  ಶ್ರೀ ದೇವದಾಸ್ಪೂಜಾರಿ ಇವರು, ಇವರ ತಮ್ಮ ನವೀನ್ಎಂಬವರ ಮಾಲಕತ್ವದ ಬಜಾಜ್ಪಲ್ಸರ್‌ 220 ಮೋಟಾರು ಬೈಕು ನಂಬ್ರ ಕೆಎ-19 ಇಹೆಚ್‌-7659 ಇದನ್ನು ದಿನಾಂಕ 07-09-2014 ರಂದು ಮಧ್ಯಾಹ್ನ ಸುಮಾರು 1-30 ಗಂಟೆಗೆ ಸುರತ್ಕಲ್ ತಾರಾ ಟವರ್ಸ್ ಜೀವನ್ತಾರಾ ವೈನ್ಸ್ಶಾಪ್ ಎದುರು ನಿಲ್ಲಿಸಿ ಇವರ ಸ್ನೇಹಿತ ರವಿಯವರ ಮದುವೆ ಕಾರ್ಯಕ್ರಮಕ್ಕೆ ಹೋಗಿ, ಪುನ: ಮಧ್ಯಾಹ್ನ ಸುಮಾರು 2-15 ಗಂಟೆಗೆ ಮೋಟಾರು ಬೈಕಿನ ಬಳಿ ಬಂದಾಗ ಸದ್ರಿ ಮೋಟಾರು ಬೈಕು ಸ್ಥಳದಲ್ಲಿ ಇಲ್ಲದೇ ಇದ್ದು, ಮೋಟಾರು ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದ್ರಿ ಮೋಟಾರು ಬೈಕಿನ ಅಂದಾಜು ಮೌಲ್ಯ 48,000/- ರೂಪಾಯಿ ಆಗಬಹುದು.

 

10.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07/09/2014 ರಂದು 18.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ದುರ್ಗೇಶ್ ರವರು ತನ್ನ ಮಗ ಬೇಬಿ ರಾಹುಲ್ ಹಾಗೂ ಪತ್ನಿ ಸರಿತಾ ರವರೊಂದಿಗೆ ಎಕ್ಕಾರು ದುರ್ಗಾನಗರದಿಂದ ಬಜಪೆಗೆ ಬರುವರೇ KA 19 B 9834 ನೇದಲ್ಲಿ ಹತ್ತಿ ಬಸ್ಸು ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಬಸ್ ನಿಲ್ದಾಣಕ್ಕೆ ತಲುಪಿದಾಗ ಪಿರ್ಯಾದಿದಾರರು ತನ್ನ ಮಗನೊಂದಿಗೆ ಬಸ್ಸಿನಿಂದ ಇಳಿಯುತ್ತಿದ್ದಂತೆ ಬಸ್ಸಿನ ಚಾಲಕ ನಿರ್ಲಕ್ಷ್ಯತನದಿಂದ ಒಮ್ಮೆಲೇ ಬ್ರೇಕ್ ಹಾಕಿ ಬಸ್ಸನ್ನು ತಿರುಗಿಸಿದ ಪರಿಣಾಮ ಪಿರ್ಯಾದಿದಾರರ ಮಗ ಬೇಬಿ ರಾಹುಲ್ ಎಂಬವನು ಆಯ ತಪ್ಪಿ ಕೆಳಗೆ ಬಿದ್ದು ಬಸ್ಸಿನ ರಾಡ್ ಅವನ ತಲೆಯ ಹಿಂಬಾಗಕ್ಕೆ ತಾಗಿ ಸಾದಾ ಸ್ವರೂಪದ ಗಾಯವಾಗಿರುತ್ತದೆ.

 

11.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-09-2014 ರಂದು ಮಧ್ಯಾಹ್ನ ಸುಮಾರು 2-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರೆನ್ನಾ ಮಸ್ಕರೇನ್ಸ್ ರವರು ತನ್ನ ತಾಯಿಯ ಮನೆಯಾದ ಪೆರ್ಮುದೆ ಕ್ರಾಸ್ ಎಂಬಲ್ಲಿಗೆ ಹೋಗಿದ್ದು , ಅವರ ಗಂಡ ಮತ್ತು ಮಗ ಅಶ್ವಿನ್ ವರು ಬಜಪೆ ಸಂತ ಜೋಸೇಫ್ ಚರ್ಚ್ ಗೆ ಮೋಂತಿ ಹಬ್ಬದ ವಿಶೇಷ ಕಾರ್ಯಕ್ರಮಕ್ಕೆ ಸಂಜೆ ಸುಮಾರು 5-15 ಗಂಟೆಗೆ ಮನೆಯ ಹಿಂಬದಿ ಬಾಗಿಲಿಗೆ ಬೀಗ ಹಾಕಿ ಹೋಗಿದ್ದು, ರಾತ್ರಿ ಸುಮಾರು 08-30 ಗಂಟೆಗೆ ಪಿರ್ಯಾದಿದಾರರು ಮತ್ತು ಅವರ ಗಂಡ ವಾಪಾಸ್ಸು ಮನೆಗೆ ಬಂದು ನೋಡಿದಾಗ ಮನೆಯ ಹಿಂಬದಿ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಪಿಕ್ಕಾಸಿನಿಂದ ಒಡೆದು ಮನೆಯ ಒಳ ಪ್ರವೇಶಿಸಿ ಮನೆಯ ಪಶ್ಚಿಮಕ್ಕೆ ಇರುವ ಬೆಡ್ ರೂಂನಲ್ಲಿರುವ ಗೋದ್ರೇಜ್ ಕಪಾಟಿನ ಲಾಕರಿನಲ್ಲಿ ಇಟ್ಟಿದ್ದ ಅಂದಾಜು 28 ಪವನು ತೂಕಗಳ ಚಿನ್ನಾಭರಣಗಳನ್ನು ಮತ್ತು ನಗದು 20,000/- ರೂಪಾಯಿ ಹಣವನ್ನು ಕಳವು  ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ ರೂ 8 ಲಕ್ಷ ಆಗಬಹುದು.

 

12.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-09-2014 ರಂದು ಪಿರ್ಯಾದುದಾರರಾದ ಶ್ರೀ ಕೈಲಾಸ್ ಬಾಬು ರವರು ಮತ್ತು ಅವರ ಮನೆ ಮಂದಿ ಮಂಗಳೂರು ತಾಲೂಕು, ಸೋಮೇಶ್ವರ ಗ್ರಾಮದ ನೆಹರು ನಗರದಲ್ಲಿರುವ ಮನೆ ನಂಬ್ರ 11-114ಜೆ(5) ನೇಯದರಲ್ಲಿ ರಾತ್ರಿ 2-00 ಗಂಟೆಗೆ ಮಲಗಿದ್ದು, ದಿನಾಂಕ 08-09-2014 ರಂದು ಬೆಳಿಗ್ಗೆ 5-00 ಗಂಟೆಗೆ ನೋಡಿದಾಗ, ಯಾರೋ ಕಳ್ಳರು ಮನೆಯ ಕೆಳ ಅಂತಸ್ಥಿನ ಅಡುಗೆ ಕೋಣೆಯ ಹೊರ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಒಳಪ್ರೇಶಿಸಿ ಮಹಡಿಯಲ್ಲಿರುವ ಪಿರ್ಯಾದುದಾರರ ತಾಯಿ ಮಲಗುವ ಕೋಣೆಯ ಗಾಡ್ರೇಜ್ತೆರೆದು, ನಂತರ ಪಿರ್ಯಾದುದಾರರ ತಂದೆ ಮಲಗುವ ಕೋಣೆಯ ಗಾಡ್ರೇಜ್ತೆರೆದು ಅದರಲ್ಲಿ ಇದ್ದ 2 ಪವನ್ತೂಕದ ಚಿನ್ನದ ಕರಿಮಣಿಸರ, ಚಿಕ್ಕ ಮಣಿಗಳಿಂದ ಫೋನಿಸಿದ ಹವಳ ಮತ್ತು ಚಿನ್ನದ ತಾಳಿ ಇರುವ ಸುಮಾರು ಒಂದುವರೆ ಪವನ್ತೂಕದ ಮಾಲೆ, ಸುಮಾರು ಒಂದು ಪವನ್ತೂಕದ ಬೆರಳುಂಗುರ -1, ಬೆಳ್ಳಿಯ ಕಾಲುಂಗುರ-1, ನಗದು ಹಣ 2500/- ರೂಪಾಯಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸ್ವತ್ತಿನ ಅಂದಾಜು ಮೌಲ್ಯ ರೂಪಾಯಿ ಒಂದು ಲಕ್ಷ ಆಗಬಹುದು.

No comments:

Post a Comment