Monday, September 8, 2014

Daily Crime Reports 08-09-2014

ದೈನಂದಿನ ಅಪರಾದ ವರದಿ.

ದಿನಾಂಕ 08.09.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0.

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 06.09.2014 ರಂದು  ಪಿರ್ಯಾದಿದಾರರಾದ ಶ್ರೀ ಪ್ರವೀಣ್ ಶೆಟ್ಟಿ ರವರೊಂದಿಗೆ ಕೆಲಸ ಮಾಡುವ ಜಾಬಿನ್ ರವರು ತನ್ನ ಬಾಬ್ತು  ಮೋಟಾರು ಸೈಕಲ್ ನಂಬ್ರ  ಕೆಎ.01.ಈಎ.2655 ನೇದನ್ನು ನಗರದ  ಕೊಟ್ಟಾರ ಕಡೆಯಿಂದ ಕೊಟ್ಟಾರ ಕ್ರಾಸ್ ಕಡೆಗೆ  ಚಲಾಯಿಸಿಕೊಂಡು ಬರುತ್ತಾ ದಡ್ಡಲ್ ಕಾಡ್ ಎಂಬಲ್ಲಿಗೆ ತಲುಪಿದಾಗ ಸಮಯ ರಾತ್ರಿ 10.15 ಗಂಟೆಗೆ ಆರೋಪಿ ಆಟೋ ರಿಕ್ಷಾ ನಂಬ್ರ ಕೆಎ.19.ಡಿ.5413ನೇದನ್ನು ಅದರ ಚಾಲಕರ ಕೊಟ್ಟಾರ ಕ್ರಾಸ್ ಕಡೆಯಿಂದ ಕೊಟ್ಟಾರ ಕಡೆಗೆ ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು  ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ  ಜಾಬಿನ್ ರವರು ರಸ್ತೆಗೆ ಬಿದ್ದು  ಮುಖಕ್ಕೆ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ನಗರದ  ಜೆ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಬಾಲಕೃಷ್ಣ ರವರು ಕೂಲಿ ಕೆಲಸ ಮಾಡುವವರಾಗಿದ್ದು, ಅವರು ದಿನಾಂಕ 07.09.2014 ರಂದು ಮಂಗಳೂರು ನಗರದ ಲೇಡಿಗೋಶನ್ಆಸ್ಪತ್ರೆಯ ಎದುರಭಾಗದ ರಸ್ತೆಯ ತೀರಾ ಎಡಭಾಗದಲ್ಲಿ ಕೂಲಿ ಕೆಲಸಕ್ಕೆ ಯಾರಾದರು ಕರೆದುಕೊಂಡು ಹೋಗುತ್ತಾರೋ ಎಂದು ನಿಂತುಕೊಂಡಿದ್ದು, ಸಮಯ ಬೆಳಿಗ್ಗೆ 09:45 ಗಂಟೆಗೆ ಸೆಂಟ್ರಲ್ಮಾರ್ಕೇಟ್ಕಡೆಯಿಂದ ಪುರಭವನದ ಕಡೆಗೆ  ಕಾರು ನಂಬ್ರ ಕೆಎ-19-ಎಂ.ಡಿ-6923 ನೇದನ್ನು ಅದರ ಚಾಲಕಿಯು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರು ಕಾಂಕ್ರೀಟ್ರಸ್ತೆಗೆ ಬಿದ್ದು, ಬಲಕಾಲು ಮತ್ತು ಎಡಕಾಲಿನ ಮೊಣಗಂಟಿಗೆ ಹಾಗೂ ಪಾದಕ್ಕೆ, ಎಡಕೈಗೆ ರಕ್ತ ಬರುವ ಗಾಯವಾಗಿದ್ದು, ಅಲ್ಲದೇ ಎಡಬದಿಯ ಸೊಂಟಕ್ಕೆ ಮೂಳೆ ಮುರಿತದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್‌‌ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07-09-2014 ರಂದು ರವಿವಾರ ಬೆಳಿಗ್ಗೆ 10:45  ಗಂಟೆಗೆ ಮಂಗಳೂರು ನಗರದ ಪದುವಾ ಇಂಡಿಯಾನ್ಓವರ್ಸೀಸ್‌‌ ಬ್ಯಾಂಕಿನ ಎದುರುಗಡೆ ರಸ್ತೆಯಲ್ಲಿ ಕೆಎ-19-ಎಂಇ-3569  ನಂಬ್ರದ ಕಾರನ್ನು ಅದರ ಚಾಲಕ ಆರೋಪಿ ವಿಕ್ಟರ್ವಿಜಯ ಲೋಬೋ ಎಂಬಾತನು ನಂತೂರು  ಕಡೆಯಿಂದ ಶರ್ಬತ್‌‌ ಕಟ್ಟೆ  ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಅಂದರೆ ಶರ್ಬತ್ಕಟ್ಟೆ ಕಡೆಯಿಂದ ಪಿರ್ಯಾದುದಾರರಾದ ಶ್ರೀ ದಿನೇಶ್ ಕುಮಾರ್ ರವರು ಚಲಾಯಿಸಿಕೊಂಡು ಬರುತ್ತಿದ್ದ ಕೆಎ-19-ಇಹೆಚ್‌‌‌‌-3206 ನಂಬ್ರದ ಸ್ಕೂಟರ್‌‌‌ಗೆ  ಢಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ಸಹಸವಾರೆ ಹೇಮಾವತಿ ಬಿ ಶೆಟ್ಟಿ ಎಂಬವರಿಗೆ ಬಲಕೋಲು ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಗಾಯಾಳು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ದಿನೇಶ್ ಕುಮಾರ್ ರವರು 2 ವರ್ಷಗಳಿಂದ ತನ್ವೀರ್ ಎಂಬವರ ಬಾಬ್ತು ಲಾರಿ ನಂಬ್ರ ಕೆಎಲ್ 11 ಹೆಚ್ 5850 ನೇ ದರ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು ದಿನಾಂಕ 07-09-2014 ರಂದು ಬೆಳಗ್ಗೆ 10.30 ಗಂಟೆಗೆ ಹಳೇ ಬಂದರು ಪೋರ್ಟ್ ರಸ್ತೆಯ ರಾಮ್ ದೇವ್ ರೈಸ್ ಕಂಪನಿಯ ಡೀಲರ್ ಗೋಡಾನಿನ ಎದುರು  ಲಾರಿಯನ್ನು ರಸ್ತೆಯ ತೀರಾ ಎಡಭಾಗಕ್ಕೆ ನಿಲ್ಲಿಸುವರೇ ಲಾರಿಯ ಹಿಂಬದಿಯ ವಾಹನಗಳನ್ನು ತೆರವುಗೊಳಿಸುವ ಬಗ್ಗೆ ನೋಡುತ್ತಿರುವಾಗ ಕೆ. 19 ಇಕೆ 4383ನೇ ಮೋಟಾರ್ ಸೈಕಲಿನ ಸವಾರನು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಆತನ ಕೈಯಲ್ಲಿದ್ದ ಬಿಳಿ ಹೆಲ್ಮೆಟ್ ನಿಂದ ಪಿರ್ಯಾದಿದಾರರ ಮುಖಕ್ಕೆ ಹೊಡೆದು ಸಾಮಾನ್ಯ ಸ್ವರೂಪ ರಕ್ತಗಾಯ ಉಂಟು ಮಾಡಿರುವುದಾಗಿದೆ.

 

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಸೀಮಾ ಫೆರ್ನಾಂಡಿಂಸ್ ರವರ ತಮ್ಮ ಪ್ರೀತಮ್ ಫೆರ್ನಾಂಡಿಸ್ ರವರು ವಿದೇಶದಲ್ಲಿದ್ದು, ಅವರ ಮನೆಯಾದ ಮಂಗಳೂರು ತಾಲೂಕು ಮುಚ್ಚೂರು ಗ್ರಾಮದ ಹಮ್ಲಾ ಮನೆಯಲ್ಲಿ ಯಾರೂ ಇಲ್ಲದೇ ಇದ್ದು, ದಿನಾಂಕ: 05/09/2014 ರಂದು 18.00 ಗಂಟೆಯಿಂದ 21.00 ಗಂಟೆಯ ಮಧ್ಯೆ ಯಾರೋ ಕಳ್ಳರು ಮನೆಯ ಹಿಂಬದಿಯ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಮನೆಯಯಲ್ಲಿದ್ದಂತಹ ಫ್ಯಾನಸೋನಿಕ್ ಟಿವಿ, ಮಿಕ್ಸಿ, ಹೋಂ ಥಿಯೇಟರ್, ಇಂಡಕ್ಷನ್ ಎಲೆಕ್ಟ್ರಿಕ್ ಸ್ಟೌವ್, CFL ಲೈಟ್ ಗಳನ್ನು ಹಾಗೂ ಮನೆಯಲ್ಲಿದ್ದಂತಹ ಚೂರಿಗಳು, ಅಡುಗೆ ಸಾಮಾಗ್ರಿಗಳು, ಪಾತ್ರೆಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಒಟ್ಟು ಮೌಲ್ಯ ಸುಮಾರು 70,000/- ರೂಪಾಯಿ ಆಗಬಹುದು.

 

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-09-2014  ರಂದು 11-45 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು, ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರು ಮಂದಿ ಆರೋಪಿಗಳು ಇಸ್ಪೀಟ್ಎಲೆಗಳನ್ನು ಉಪಯೋಗಿಸಿಕೊಂಡು ಉಲಾಯಿ-ಪಿದಾಯಿ ಎಂಬ ನಸೀಬಿನ ಜುಗಾರಿ ಆಟವಾಡುತ್ತಿದ್ದು, ಪೈಕಿ (1) ಆದರ್ಶ್‌, (2) ವಿನೋದ್‌, (3) ಧನಂಜಯ, (4) ಶಿವಾಜಿ ಎಂಬವರನ್ನು ಉಳ್ಳಾಲ ಪೊಲೀಸ್ ಠಾಣಾ ಪಿಎಸ್ಐ(ಅಪರಾಧ) ಶ್ರೀ ರಾಜೇಂದ್ರ ಬಿ. ರವರು ಮತ್ತು ಸಿಬ್ಬಂದಿಯವರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳಾದ (1) ವಿಶ್ವನಾಥ, ಮತ್ತು (2) ಅಮರ್ಎಂಬವರು ಸ್ಥಳದಿಂದ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ. ಆರೋಪಿಗಳು ಆಟಕ್ಕೆ ಬಳಸಿದ ನಗದು ಹಣ ರೂಪಾಯಿ 1,900/-, ಆಟಕ್ಕೆ ಉಪಯೋಗಿಸಿದ ಪೇಪರ್ಮತ್ತು 52 ಇಸ್ಪೀಟ್ಎಲೆ ಮತ್ತು ಕೆಎ 19 ಯು 3350 ನೇ ನಂಬ್ರದ ಮೋಟಾರು ಸೈಕಲ್ನ್ನು ಪಂಚರ ಸಮಕ್ಷಮದಲ್ಲಿ ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

No comments:

Post a Comment