Thursday, September 4, 2014

Daily Crime Reports 04-09-2014

ದೈನಂದಿನ ಅಪರಾದ ವರದಿ.

ದಿನಾಂಕ 04.09.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0.

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-09-2014 ರಂದು ಫಿರ್ಯಾದಿದಾರರಾದ ಶ್ರೀ ಜೆಟ್ಟಪ್ಪಾ ತಮ್ಮನ್ನಾ ಬಿರದಾರ್ ರವರು ತನ್ನ ಪತ್ನಿ ಮಂಜವ್ವ ಎಂಬಾಕೆಯೊಂದಿಗೆ ಬೆಳಿಗ್ಗೆ ಸುಮಾರು 10-15 ಗಂಟೆಗೆ ತಣ್ಣೀರು ಬಾವಿ ಬೀಚು ಬಳಿ ಬಾಯಮ್ಮ ಎಂಬವರ ಅಂಗಡಿಗೆ ಹೋಗುತ್ತಿದ್ದಾಗ ಬೆಂಗ್ರೆ ಕಡೆಯಿಂದ ಕುದುರೆಮುಖ ಜಂಕ್ಷನ್ ಕಡೆಗೆ ಕೆ 19 5928 ನೇ ನಂಬ್ರದ ಆಟೋ ರಿಕ್ಷಾವನ್ನು ಅದರ ಚಾಲಕ ನಿಜಾಮ್ ರವರ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಆಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಫಿರ್ಯಾದಿದಾರರ ಪತ್ನಿಯ ಬಲಗಾಲಿಗೆ ಡಿಕ್ಕಿಪಡಿಸಿದ್ದು ಅಪಘಾತದಿಂದ ಫಿರ್ಯಾದಿದಾರರ ಪತ್ನಿಗೆ ಗಂಭೀರ ತರದ ಮೂಳೆ ಮುರಿತದ ಗಾಯವಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-08-2014 ರಂದು ಪಿರ್ಯಾದಿದಾರರಾದ ಶ್ರೀ ನಾಗಶಿವ ಚಂದ್ರಮ್ ರವರು ಅವರ ಮೋಟಾರು ಸೈಕಲ್ನಂಬ್ರ ಕೆ.-51-.ಜಿ-8376ನೇದರಲ್ಲಿ ಹೆಂಡತಿ ಶ್ರೀಮತಿ ಸ್ವರ್ಣಲತಾರವರನ್ನು ಹಿಂದುಗಡೆ ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರಿನಿಂದ ಕುಳಾಯಿ ಕಡೆಗೆ ಹೋಗುತ್ತಾ, ಸಮಯ ರಾತ್ರಿ 8:30 ಗಂಟೆಗೆ ಉರ್ವಾಸ್ಟೋರ್ನಲ್ಲಿರುವ ಮಹೀಂದ್ರ ಶೋ ರೂಂ ಬಳಿಗೆ ತಲುಪಿದಾಗ, ಅವರ ಹಿಂದುಗಡೆಯಿಂದ ಅಂದರೆ ಲೇಡಿಹಿಲ್ನಿಂದ ಕೊಟ್ಟಾರ ಕಡೆಗೆ ಮೋಟಾರು ಸೈಕಲ್ ನಂಬ್ರ ಕೆ.-19-.ಜೆ-6375 ನೇದನ್ನು  ಅದರ ಸವಾರ ಅತೀವೇಗ ಮತ್ತು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಮೋಟಾರು ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಹೆಂಡತಿ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಹೆಂಡತಿಯ ಕೈಗೆ  ಗಾಯ ಉಂಟಾಗಿ ಚಿಕಿತ್ಸೆ ಬಗ್ಗೆ  ನಗರದ ಯುನಿಟಿ ಆಸ್ಪತ್ರೆಗೆ  ದಾಖಲಾಗಿ ಹೊರ-ರೋಗಿಯಾಗಿ ಚಿಕಿತ್ಸೆ, ಪಡೆದಿರುವುದಾಗಿದೆ. ಅಪಘಾತದಿಂದ ಪಿರ್ಯಾದಿದಾರರ ಮೋಟಾರು ಸೈಕಲ್ಸಂಪೂರ್ಣ ಜಖಂಗೊಂಡಿರುತ್ತದೆ. ಅಪಘಾತದ ಬಳಿಕ ಅಪಘಾತ ಉಂಟು ಮಾಡಿದ ಅರೋಪಿಗಳ ಕಡೆಯವರಿಂದ ಮೊಬೈಲ್ದೂರವಾಣಿಯಲ್ಲಿ ಪ್ರಕರಣದ ಬಗ್ಗೆ ತಮ್ಮೊಳಗೆ ಮಾತುಕತೆಯ ಮೂಲಕ ಸರಿ ಮಾಡಿಕೊಳ್ಳುವ ಬಗ್ಗೆ ಒಪ್ಪಿಕೊಂಡಿದ್ದು, ಆದರೆ ಬಳಿಕ ನಿರಾಕರಿಸಿದ್ದರಿಂದ ತಡವಾಗಿ ಪಿರ್ಯಾದಿ ನೀಡಿರುವುದಾಗಿದೆ.

 

3.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-09-2014 ರಂದು ಸಂಜೆ ಸುಮಾರು 3-00  ಗಂಟೆಗೆ ಆರೋಪಿಗಳಾದ ಹರಿಪ್ರಸಾದ @ ಹರೀಶ ಭಂಡಾರಿ, ತಾರಾನಾಥ ಶೆಟ್ಟಿ, ನಿತಿನ್ ಶೆಟ್ಟಿ, ಎಂಬವರುಗಳು ತಾರಿಕಂಬ್ಳದ ಬಳಿ ಇರುವ ಪಿರ್ಯಾದಿದಾರರಾದ ಶ್ರೀ ಹರೀಶ್ ಶೆಟ್ಟಿ ರವರ ಅಣ್ಣ ಶ್ರೀನಿವಾಸ ಎಂಬವರ ಮನೆಯ ಗೇಟಿನ ಬೀಗ ಮುರಿದು ಒಳಹೊಕ್ಕಿ ಮನೆಯ ಮುಖ್ಯ ಬಾಗಿಲಿನ ಬೀಗ ಮುರಿಯಲು ಪ್ರಯತ್ನಿಸುತ್ತಿದ್ದು, ಪಿರ್ಯಾದಿದಾರರನ್ನು ನೋಡಿ ಫೋನಿನಲ್ಲಿ ಮಾತನಾಡುವಂತೆ ನಟಿಸಿ ಹೊರಟು ಹೋಗಿರುತ್ತಾರೆ.

 

4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಆರ್ಶಿಯಾ ರವರು ತನ್ನ ತಾಯಿ ಮತ್ತು 5 ವರ್ಷ ಪ್ರಾಯದ ಮಗಳು ಆಯಿಷಾ ನೂರುಜಹಾನ್ ಎಂಬವರೊಂದಿಗೆ ಕೋಟೆಕಾರು ಗ್ರಾಮದ ಕುಂಪಲ ಎಂಬಲ್ಲಿ ವಾಸವಾಗಿದ್ದು, ದಿನಾಂಕ 15.05.2014 ರಂದು ಮಧ್ಯಾಹ್ನ 02.00 ಗಂಟೆ ಸಮಯಕ್ಕೆ ಹಸನ್ ಖಾನ್  ಮತ್ತು ಇತರ ಮೂರು ಮಂದಿ  ಫಿರ್ಯಾದಿದಾರರು ಮನೆಯಲ್ಲಿ ಇಲ್ಲದೇ ಇದ್ದ ಸಮಯ ಮನೆಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದುದಾರರ ತಾಯಿಗೆ ಅವಾಚ್ಯಶಬ್ದಗಳಿಂದ  ಬೈದು ಜೀವ ಬೆದರಿಕೆ ಒಡ್ಡಿ ಅವರಿಗೆ ಕೈಯಿಂದ ಹೊಡೆದು ಮಗಳಾದ ಆಯಿಷಾ ನೂರು ಜಹಾನಳನ್ನು ಕರೆದುಕೊಂಡು ಗೋವಾಕ್ಕೆ ಹೋಗಿರುತ್ತಾರೆ. ಇದೀಗ 1ನೇ ಆರೋಪಿತ ಇಸ್ಮಾಯಿಲ್ ಖಾನ್ ಎಂಬವರ ಗೋವಾದಲ್ಲಿರುವ ಮನೆಯಲ್ಲಿ ಫಿರ್ಯಾದುದಾರರ 5 ವರ್ಷ ಪ್ರಾಯದ ಮಗಳು ಆಯಿಷಾ ನೂರುಜಹಾನ್ ಮಗಳು ಇರುವುದಾಗಿದೆ.

No comments:

Post a Comment