Monday, September 15, 2014

Daily Crime Reports 15-09-2014

ದೈನಂದಿನ ಅಪರಾದ ವರದಿ.

ದಿನಾಂಕ 15.09.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-09-2014 ರಂದು ಫಿರ್ಯಾದಿದಾರರಾದ ಮಹಮ್ಮದ್ ಅಜರುದ್ದೀನ್ ರವರು ತನ್ನ ಬಾಬ್ತು ಮೋಟಾರ ಸೈಕಲಿನಲ್ಲಿ ಬೆಳಿಗ್ಗೆ 09-15 ಗಂಟೆಗೆ ತನ್ನ ಪಣಂಬೂರಿನಲ್ಲಿರುವ ಕಛೇರಿಗೆ ಸುರತ್ಕಲ್ ಮುನ್ಸಿಪಾಲಿಟಿ ಕಛೇರಿ ಬಳಿಯಿಂದಾಗಿ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಾ ಬೆಳಿಗ್ಗೆ 09-15 ಗಂಟೆಗೆ ಮುನ್ಸಿಪಾಲಿಟಿ ಕಛೇರಿ ಬಳಿಗೆ ತಲುಪಿದಾಗ ರಾ.ಹೆ 66 ರಲ್ಲಿ ಅಂದರೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಏಕಮುಖ ರಸ್ತೆಯಲ್ಲಿ ಕೆ 20 ಎಮ್ 6076 ನೇಯ ಕಾರೊಂದನ್ನು ಅದರ ಚಾಲಕ ಪ್ರಶಾಂತ ವೇಗಾಸ್ ರವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಆಸೀಬ್ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆ 19 ಕೆ 6668 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾರೆ. ಅಪಘಾತದ ಪರಿಣಾಮ ದ್ವಿಚಕ್ರ ವಾಹನ ಸಮೇತ ಸವಾರ  ರಸ್ತೆಗೆ ಬಿದ್ದು ಅವರ ಕಾಲುಗಳ ಮೇಲೆ ವಾಹನದ ಚಕ್ರವು ಹರಿದು ಬಲಗಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಸಮಯ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅಪರಿಚಿತ ಲಾರಿಯೊಂದನ್ನು ಅದರ ಚಾಲಕ ಕೂಡ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ರಸ್ತೆಯಲ್ಲಿ ಬಿದ್ದಿದ ಮೇಲ್ಕಾಣಿಸಿದ ದ್ವಿಚಕ್ರ ವಾಹನಕ್ಕೆ  ಡಿಕ್ಕಿಪಡಿಸಿ ಪರಾರಿಯಾಗಿದ್ದು ಗಾಯಾಳು ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ.

 

2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ -12/09/2014 ರಂದು ಪಿರ್ಯಾದಿರರಾದ ಶ್ರೀ ವಿಶ್ವ ಪ್ರಸಾದ್ ರವರು ಎಂದಿನಂತೆ ಕಾರ್ಪೆಂಟರ್ ಕೆಲಸ ಮುಗಿಸಿ ಸಂಜೆ ತನ್ನ ಮನೆಯಾದ ಎಳಿಂಜೆಗೆ ಹೋಗುವರೇ ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ KA-19-ED-0896 ನೇಯದ್ದನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಡದಂಲೆ ಗ್ರಾಮದ ಜೋಡುರಸ್ತೆಯ ಬಳಿ ಒಮ್ಮಲೇ ಜೋಡುರಸ್ತೆ ಕಡೆಯಿಂದ ಮುಖ್ಯ ರಸ್ತೆಗೆ  ಆಟೋರಿಕ್ಷಾವೋಂದು ನಂಬ್ರ KA-19-D-587ನೇಯ ಚಾಲಕನು ಆಟೋವನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ಬಲಕಾಲಿಗೆ ರಕ್ತ ಗಾಯವಾಗಿರುವುದು ನಂತರ ಕಾರ್ಕಳ ನರ್ಸಿಂಗ್ ಹೋಮ್ ಗೆ ಸಾರ್ವಜನಿಕರು ವಾಹನವೋಂದರಲ್ಲಿ ಚಿಕಿತ್ಸೆ ಬಗ್ಗೆ ದಾಖಲಿಸಿರುವುದಾಗಿದೆ.

 

3.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-09-2014 ರಂದು 17-00 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ರಾಕೇಶ್ ಜಿ. ಉಳ್ಳಾಲ ರವರು ಮಂಗಳೂರು ತಾಲೂಕು, ಉಳ್ಳಾಲ ಗ್ರಾಮದ ಗಣೇಶನಗರದ ಗಣೇಶ ಮಂದಿರದ ಬಳಿಯಿಂದ ಸೋಮೇಶ್ವರ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯ ಅವರ ಹಿಂದಿನಿಂದ ಕೆಎ 19 ಇಎಲ್‌ 7364 ನೇ ನಂಬ್ರದ ಮೋಟಾರು ಸೈಕಲ್ನ್ನು ಅದರ ಸವಾರ ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ ಪಿರ್ಯಾದುದಾರರು ರಸ್ತೆಗೆ ಬಿದ್ದು, ಅವರ ಬಲದವಡೆಗೆ ಗುದ್ದಿದ ಗಾಯ, ಮೂಗಿಗೆ, ತುಟಿಗೆ, ಕಣ್ಣಿನ ಬಳಿ ಗಾಯವಾಗಿರುತ್ತದೆ. ಗಾಯಾಳು ಪಿರ್ಯಾದುದಾರರು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ.

 

4.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13.09.2014 ರಂದು ಪಿರ್ಯಾದುದಾರರಾದ ಶ್ರೀಮತಿ ಸುಮತಿ ಜಿ.ಡಿ. ರವರು ತಮ್ಮ ಬಾಬ್ತು KA-19-Y-2819ನೇ ನಂಬ್ರದ ಸ್ಕೂಟರನ್ನು ಪದವಿನಂಗಡಿ ಕಡೆಯಿಂದ ಯೆಯ್ಯಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ 12:50 ಗಂಟೆ ಸಮಯಕ್ಕೆ ವಿಕಾಸ್ ಕಾಲೇಜಿನ ಎದುರು ತಲುಪುತ್ತಿದ್ದಂತೆ ಪಿರ್ಯಾದುದಾರರ ಸ್ಕೂಟರಿನ ಹಿಂದಿನಿಂದ ಅಂದರೆ ಪದವಿನಂಗಡಿ ಕಡೆಯಿಂದ ಯೆಯ್ಯಾಡಿ ಕಡೆಗೆ KA-16-M-9654ನೇ ನಂಬ್ರದ ಮಾರುತಿ ಓಮ್ನಿ ಕಾರನ್ನು ಅದರ ಚಾಲಕರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಬಲಭಾಗದ ಭುಜಕ್ಕೆ ಮೂಳೆ ಮುರಿತದ ಗಾಯ ಹಾಗೂ ಬಲ ಕೈಯ ಮೊಣಕೈ ಬಳಿ, ಎಡಕೈ ತಟ್ಟಿಗೆ, ಬಲಕಾಲಿನ ಮೇಲ್ಭಾಗಕ್ಕೆ ಗುದ್ದಿದ ರಕ್ತ ಬರುವ ಗಾಯಗೊಂಡವರು ಚಿಕಿತ್ಸೆ ಬಗ್ಗೆ ನಗರದ ಇಂದಿರಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಲ್ಲದೇ ಸದ್ರಿ ಅಪಘಾತದಿಂದ ಪಿರ್ಯಾದುದಾರರ ಸ್ಕೂಟರಿನ ಹಿಂಭಾಗಕ್ಕೆ ಮತ್ತು ಎದುರು ಭಾಗಕ್ಕೆ ಜಖಂಗೊಂಡಿರುವುದಾಗಿದೆ.

No comments:

Post a Comment