Thursday, September 11, 2014

Daily Crime Reports 11-09-2014

ದೈನಂದಿನ ಅಪರಾದ ವರದಿ.

ದಿನಾಂಕ 11.09.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0.

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09.09.2014 ರಂದು ಸಂಜೆ 06.35 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಗಣೇಶ್ ಕೆ. ರವರು ತಮ್ಮ ಬಾಬ್ತು KA19-EA-6826 ನೇ ಬೈಕನ್ನು ಕದ್ರಿ ದ್ವಾರದಿಂದ KSRTC ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ KA19-MB-7381  ನೇ ಕಾರನ್ನು ಅದರ ಚಾಲಕರು ಸರ್ಕಾರಿ ಶಾಲೆಯ ಎದುರುಗಡೆಯ ರಸ್ತೆಯಿಂದ ಮಲ್ಲಿಕಟ್ಟೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಫಿರ್ಯಾದುದಾರರ ಬೈಕಿಗೆ ಡಿಕ್ಕಿ ಪಡಿಸಿ, ನಿಲ್ಲಿಸದೇ ಮುಂದಕ್ಕೆ ಹೋದಾಗ, ಫಿರ್ಯಾದುದಾರರು ಬಿದ್ದಲ್ಲಿಂದ ಎದ್ದು ವಾಪಾಸ್ಸು ಆರೋಪಿಯ ಕಾರನ್ನು ನಂಬ್ರ ಪ್ಲೇಟ್ ನೋಡುವರೇ ಮುಂದಕ್ಕೆ ಚಲಿಸಿಕೊಂಡು  ಹೋಗಿ  ಮಲ್ಲಿಕಟ್ಟೆ ಎಂಬಲ್ಲಿ  ಸಿಗ್ನಲ್ ಹಾಕಿ ನಿಲ್ಲಿಸಲು ಸೂಚನೇ ನೀಡಿದಾಗ ಕಾರನ್ನು ನಿಲ್ಲಿಸದೇ ಫಿರ್ಯಾದುದಾರರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದುದಾರರಿಗೆ ಮೊಣಕಾಲು, ಬಲಕಾಲಿನ ಹೆಬ್ಬರಳಿಗೆ ಸಾಮಾನ್ಯ ಸ್ವರೂಪದ ಗಾಯವಾಗಿರುತ್ತದೆ.

 

2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-09-2014 ರಂದು ಮಧ್ಯಾಹ್ನ ಸುಮಾರು 12:30 ಗಂಟೆಗೆ ಮಂಗಳೂರು ತಾಲೂಕು ಅಂಬ್ಲಮೊಗರು ಗ್ರಾಮದ ಗಟ್ಟಿಕುದ್ರು ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಕಿಶೋರ್ ಡಿ'ಸೋಜಾ ರವರ ತಂದೆ ಸಿರಿಲ್ ಜೋಕಿಂ ಡಿ'ಸೋಜಾ(60) ಮತ್ತು ಕೆಲಸದಾಳು ಹಾವೇರಿ ಮೂಲದ ಭೀಮ್ಜಿ(25) ಮತ್ತು ಗಣೇಶ(26) ರವರು ನೇತ್ರಾವತಿ ನದಿ ದಂಡೆಯಿಂದ ಮರಳು ಕಲ್ಲುಗಳನ್ನು ಗೋಣಿ ಚೀಲದಲ್ಲಿ ತುಂಬಿಸಿಕೊಂಡು, ದೋಣೆಯಲ್ಲಿ ಮನೆ ಕಡೆಗೆ ಬರುತ್ತಿದ್ದಾಗ ಹೊಳೆಯ ನೀರು ಹರಿಯುತ್ತಿದ್ದ ರಭಸಕ್ಕೆ ದೋಣಿ ಮಗುಚಿ ಬಿದ್ದ ಪರಿಣಾಮ, ದೋಣಿ ಸಮೇತ ನೀರಿಗೆ ಬಿದ್ದ ಸಿರಿಲ್ ಜೋಕಿಂ ಡಿ'ಸೋಜಾ ಮತ್ತು ಭೀಮ್ಜಿರವರು ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾರೆ. ಗಣೇಶರವರು ಈಜಿ ದಡ ಸೇರಿರುತ್ತಾರೆ.

 

3.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಬಾಲು ಶಂಕರ್ ಜಾದವ್ ರವರು ಮಂಗಳೂರಿನ ಭವಂತಿ ರಸ್ತೆಯ ನ್ಯೂ ಮಹಾಲಕ್ಷ್ಮೀ ಜ್ಯುವೆಲ್ಲರಿಯಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 07-09-2014 ರಂದು ಆದಿತ್ಯವಾರ ಬೆಳಿಗ್ಗೆ ಸುಮಾರು 10-43 ಗಂಟೆಗೆ ಒರ್ವ ಗಂಡಸು ರೈನ್ಕೋಟ್ಧರಿಸಿ ಅಂಗಡಿಯೊಳಗೆ ಬಂದು ಸೇಲ್ಸ್ಗರ್ಲ್ಕುಮಾರಿ ಶೃತಿ ರವರಲ್ಲಿ ಚಿನ್ನದ ಸರ ಖರೀದಿಸುವ ಬಗ್ಗೆ ಕೇಳಿಕೊಂಡ ಮೇರೆಗೆ  ಗಂಡಸಿಗೆ ಚಿನ್ನದ ಸರಗಳಿರುವ ಟ್ರೇ ತೆಗೆದು ಚಿನ್ನದ ಸರಗಳನ್ನು ತೋರಿಸಿದ್ದು, ಸುಮಾರು 3-4 ನಿಮಿಷಗಳ ಕಾಲ ಚಿನ್ನದ ಸರಗಳನ್ನು ಪರಿಶೀಲಿಸಿ ಯಾವುದೇ ಡಿಸೈನ್ಇಷ್ಟ ಆಗಿರುವುದಿಲ್ಲ. ನಾಳೆ ತನ್ನ ಸ್ನೇಹಿತನನ್ನು ಕರೆದುಕೊಂಡು ಬರುವುದಾಗಿ ಹೇಳಿ ಸುಮಾರು 10-50 ಗಂಟೆಗೆ ಅಂಗಡಿಯಿಂದ ಹೊರಗಡೆ ಹೋಗಿದ್ದು, ಸದ್ರಿ  ವ್ಯಕ್ತಿ  ಚಿನ್ನದ ಸರ ಪರಿಶೀಲಿಸಿ ಹೋದ ಸುಮಾರು 30 ನಿಮಿಷಗಳ ಬಳಿಕ ಇನ್ನೊರ್ವ ಗಿರಾಕಿ ಚಿನ್ನದ ಸರ ಖರೀದಿಸಲು ಬಂದಾಗ ಸರ ಇದ್ದ ಟ್ರೇ ನಲ್ಲಿ ಸುಮಾರು 16.400 ಗ್ರಾಂ ತೂಕದ S (ಎಸ್‌) ಕೇರಳ ಡಿಸೈನ್   ಒಂದು ಚಿನ್ನದ ಸರ ಕಡಿಮೆ ಇರುವ ಬಗ್ಗೆ ಸೇಲ್ಸ್ಗರ್ಲ್ಕುಮಾರಿ ಶೃತಿ ರವರು ಫಿರ್ಯಾದಿದಾರರಲ್ಲಿ ತಿಳಿಸಿರುತ್ತಾರೆ. ಇತರ ಸೇಲ್ಸ್ ಮ್ಯಾನ್ಗಳಲ್ಲಿ ವಿಚಾರಿಸಿ ಬಳಿಕ ಸಿ.ಸಿ ಕ್ಯಾಮರಾದ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ರೈನ್ ಕೋಟ್ಧರಿಸಿ ಚಿನ್ನದ ಸರ ಖರೀದಿಸಲು ಬಂದ ವ್ಯಕ್ತಿ ಚಿನ್ನದ ಸರಗಳನ್ನು ಬಲಕೈಯಲ್ಲಿ ಪರಿಶೀಲಿಸಿಕೊಂಡು ಚೈನ್ಗಳನ್ನು ಉಂಡೆಯಂತೆ ಮಾಡಿ ಟ್ರೇಯಲ್ಲಿ  ಅಲ್ಲಲ್ಲಿ ಇಟ್ಟು ಸೇಲ್ಸ್ಗರ್ಲ್ಕುಮಾರಿ ಶೃತಿ ರವರಲ್ಲಿ ಮಾತನಾಡುತ್ತಿರುವ ಸಮಯ ಸೇಲ್ಸ್ಗರ್ಲ್  ರವರ ಗಮನಕ್ಕೆ ಬಾರದಂತೆ ಸುಮಾರು 16.400 ಗ್ರಾಂ ತೂಕದ S ಕೇರಳ ಡಿಸೈನ್ ಚಿನ್ನದ ಸರವನ್ನು ಕಳವು ಮಾಡಿ ಹೋಗಿದ್ದು, ಕಳವಾದ ಚಿನ್ನದ ಸರದ ಮೌಲ್ಯ ರೂ. 42,250/- ಆಗಬಹುದು. ಕಳವು ನಡೆಸಿದ ವ್ಯಕ್ತಿ ಪರಿಚಿತರಂತೆ ಮಾತನಾಡಿರುವುದರಿಂದ ಈತನ ಬಗ್ಗೆ ಮಾಲಕರಲ್ಲಿ ಹಾಗೂ ಇತರ ಚಿನ್ನದ ಕೆಲಸಗಾರರಲ್ಲಿ ವಿಚಾರಿಸಿಕೊಂಡು ವ್ಯಕ್ತಿಯ ಗುರುತು ಪತ್ತೆಗೆ ಪ್ರಯತ್ನಿಸಿ ಪತ್ತೆಯಾಗದೇ ಇದ್ದ ಕಾರಣದಿಂದ ತಡವಾಗಿ ದಿನಾಂಕ 11-09-2014 ರಂದು ದೂರು ನೀಡಿದ್ದು, ಗಿರಾಕಿಗಳ ಸೋಗಿನಲ್ಲಿ ಬಂದು ಸೇಲ್ಸ್ಗರ್ಲ್ ಗಮನಕ್ಕೆ ಬಾರದ ರೀತಿಯಲ್ಲಿ ಚಿನ್ನದ ಸರ  ಕಳವು ಮಾಡಿದ ವ್ಯಕ್ತಿ ದೃಡಕಾಯವಾಗಿದ್ದು, ಸುಮಾರು 35-40 ವರ್ಷ ಪ್ರಾಯದವನಾಗಿದ್ದು, ತುಳು ಬಾಷೆಯಲ್ಲಿ ಮಾತನಾಡುತ್ತಿದ್ದನು.

 

4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಂದೀಪ್ ಆರ್. ರವರು ವೈಲ್ಡ್ ಕ್ರಾಪ್ಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನೇದರ ಟೆರಿಟೊರಿ (ಪ್ರಾದೇಶಿಕ) ಮ್ಯಾನೇಜರ್ ಆಗಿದ್ದು, ಸದ್ರಿ ಕಂಪೆನಿಯ ಬಾಬ್ತು ಭಾರತದಾದ್ಯಂತ ಸ್ಟೋರ್ಸ್ ಗಳನ್ನು ಹೊಂದಿದ್ದು, ಅದರಂತೆ ಕಂಪೆನಿಯ ಮಂಗಳೂರು ಕೆ.ಎಸ್. ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್ #ಎಫ್.ಎಫ್.-3 ಮಂಗಳೂರು ಶೋ ರೂಮ್ ಸ್ಟೋರ್ಸ್ ಇರುತ್ತದೆ. ಸ್ಟೋರ್ಸ್ ನಲ್ಲಿ  ಸ್ಟೋರ್ಸ್ ಮ್ಯಾನೇಜರ್ ಅನಿತಾ ಡಿ'ಸೋಜಾ ಮತ್ತು ರಿಟೈಲ್ ಮ್ಯಾನೇಜರ್ ಅಭಿಜಿತ್ ಕುಮಾರ್ ಇರುತ್ತಾರೆ. ದಿನಾಂಕ 27-02-2014 ರಂದು ಕಂಪೆನಿಯ ವತಿಯಿಂದ ಆಡಿಟ್ ಸಮಯ ಸುಮಾರು ರೂ. 365425/- ವ್ಯತ್ಯಾಸ ಕಂಡು ಬಂದಿದ್ದು, ಬಗ್ಗೆ ಸ್ಟೋರ್ಸ್ ಮ್ಯಾನೇಜರ್ ಅನಿತಾ ಡಿ'ಸೋಜಾ ಮತ್ತು ರಿಟೈಲ್ ಮ್ಯಾನೇಜರ್ ಅಭಿಜಿತ್ ಕುಮಾರ್ ರವರಲ್ಲಿ ವಿಚಾರಿಸಿದ್ದಲ್ಲಿ ಅವರು ಒಪ್ಪಿಕೊಂಡಿರುತ್ತಾರೆ. ನಂತರದ ದಿನಗಳಲ್ಲಿ ಕೆಲಸಕ್ಕೆ ಬಾರದೇ ತಲೆಮರೆಸಿಕೊಂಡಿರುತ್ತಾರೆ. ಆರೋಪಿಗಳಾದ ಸ್ಟೋರ್ಸ್ ಮ್ಯಾನೇಜರ್ ಅನಿತಾ ಡಿ'ಸೋಜಾ ಮತ್ತು ರಿಟೈಲ್ ಮ್ಯಾನೇಜರ್ ಅಭಿಜಿತ್ ಕುಮಾರ್ ರವರು ವೈಲ್ಡ್ ಕ್ರಾಪ್ಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನೇದಕ್ಕೆ ವಂಚಿಸಿ ಮೋಸ ಮಾಡಿರುವುದಾಗಿದೆ.

 

5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-09-2014 ರಂದು ಪಿರ್ಯಾದುದಾರರಾದ ಶ್ರೀ ಶೇಖ್ ಮೊಹಮ್ಮದ್ ರವರು ಮಾಡೂರಿನ ಜುಮ್ಮಾ ಮಸೀದಿಗೆ ತೆರಳಿ ಪ್ರಾಥನೆ ಮಾಡಿ ವಾಪಾಸು ಮನೆಗೆ ತೆರಳುತ್ತಿದ್ದಾಗ ರಾತ್ರಿ ಸುಮಾರು ಸಮಯ 08-30 ಗಂಟೆಗೆ ಮನೆಯ ಸಮೀಪ ರಸ್ತೆ ದಾಟುತ್ತಿದಾಗ ಕೋಟೆಕಾರ್ಬೀರಿ ಕಡೆಯಿಂದ ಮಾಡೂರು ಕಡೆಗೆ ಮೋಟಾರ್ಸೈಕಲ್ನಂಬ್ರ ಕೆಎ-19-ಇಸಿ-8584 ನೇಯ ಸವಾರನು ಮೋಟಾರ್ಸೈಕಲ್ನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ವಾಹನ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದಿರುವುದಾಗಿದೆ. ಇದರಿಂದ ಪಿರ್ಯಾದುದಾರರಿಗೆ ಎಡಕೋಲುಕಾಲಿಗೆ ಗುದ್ದಿದ ಗಾಯ, ಎಡಹೊಟ್ಟೆಯ ಬದಿಗೆ ಗಿದ್ದಿದ ಗಾಯ ಹಾಗೂ ಮೂಗಿಗೆ ತೀವೃ ಸ್ವರೂಪದ ಗಾಯವಾಗಿರುವುದಾಗಿದೆ. ನಂತರ ಪಿರ್ಯಾದುದರರನ್ನು ಗಪೂರ್ಎಂಬುವರು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ.

No comments:

Post a Comment