Saturday, September 20, 2014

Daily Crime Reports 20-09-2014

ದೈನಂದಿನ ಅಪರಾದ ವರದಿ.

ದಿನಾಂಕ 20.09.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

1

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾಧಿದಾರರಾದ ¸ÀĤïï ದಿನಾಂಕ 18-09-2014 ರಂದು ಸಂಜೆ 06-00 ಗಂಟೆ ಸಮಯ ಪಿರ್ಯಾಧಿದಾರರು ಹಾಗೂ ಅವರ ತಮ್ಮ ಅನಿಲ್ (22) ಎಂಬುವರು ಬಿಜೈ ಸೂಪರ್ ಸ್ಟೊರ್ ಬಳಿ ಇರುವ ಬಿಯಾಂಕಾ ಅಪಾರ್ಟಮೆಂಟ್ ನಲ್ಲಿ  ಕೆಲಸ ಮುಗಿಸಿ ಅವರು ಉಳಕೊಂಡಿದ್ದ ಮೀನಕಳಿ ಬೈಕಂಪಾಡಿಯ ಮನೆಗೆ ಹೊಗುವರೇ ರೂಟ್ ನಂಬ್ರ 15 ರ ಬಸ್ಸು ಹತ್ತಲು ಹೋದಾಗ ಅನಿಲ್ ನು  ಮೊದಲು  ಬಸ್ಸು  ಹತ್ತಿದಾಗ ಸ್ಕೂಟರ್ ಅಡ್ಡ ಬಂದಿದ್ದರಿಂದ ಪಿರ್ಯಾಧಿದಾರರಿಗೆ ಸದ್ರಿ ಬಸ್ನ್ನು ಹತ್ತಲು ಅಸಾದ್ಯವಾಗಿದ್ದು ಈ ರೀತಿ ಮೊದಲೇ ಬಸ್ಸಿನಲ್ಲಿ ಹೋಗಿದ್ದ ಅನಿಲ್ ನು ಈ ತನಕ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ.

 

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾಧಿದಾರರಾದ æ©AmÉÆÃ ದಿನಾಂಕ: 04-09-2014 ರಂದು ಸಮಯ ಸಂಜೆ ಸುಮಾರು 18-00 ಗಂಟೆಯಿಂದ ಸಮಯ ಸುಮಾರು 22-00 ಗಂಟೆಯ ಮಧ್ಯೆ ಪಿರ್ಯಾದಿದಾರರು ಸ್ಟಾಫ್ ನರ್ಸ್ ಆಗಿ ಕೆಲಸ ಮಾಡಿಕೊಂಡಿರುವ ಮಂಗಳೂರು ನಗರದ ಕುಂಟಿಕಾನದಲ್ಲಿರುವ ಎ.ಜೆ.ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರು ಭಾಗದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿಟ್ಟಿದ್ದ ತನ್ನ ಬಾಬ್ತು ಚಾಸೀಸ್ ನಂಬ್ರ: 99G19C12535, ಇಂಜಿನ್ ನಂಬ್ರ: 99G17M11539 KL 07X 1871ನೇ ನೋಂದಣಿ ಸಂಖ್ಯೆಯ 1999ನೇ ಮೊಡೆಲಿನ, ಕಪ್ಪು ಬಣ್ಣದ ಅಂದಾಜು ಮೌಲ್ಯ 15,000/- ರೂ ಬೆಲೆ ಬಾಳುವ ಹೀರೋ ಹೋಂಡಾ ಸ್ಪ್ಲೆಂಡರ್ ದ್ವಿ-ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಸದ್ರಿ ದ್ವಿ-ಚಕ್ರ ವಾಹನವನ್ನು ಇಲ್ಲಿಯ ತನಕ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ  

 

3.ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಫಿರ್ಯಾದಿದಾರರಾದ ಅಬ್ದುಲ್ ಮಜೀದ್ ತಾರೀಖು 18-09-2014 ರಂದು ತನ್ನ ಬಾಬ್ತು  KA - 19 EK -3578 ನೇಯ ಬೈಕಿನಲ್ಲಿ ತನ್ನ ಮಗಳು ಮಶೂದ್ ಜೊತೆಯಲ್ಲಿ ಮೂಡುಶೆಡ್ಡೆಯಿಂದ ತನ್ನ ಮನೆಯಿರುವ ಹೊಸಮಾರು ಕಡೆಗೆ ಚಲಾಯಿಸುತ್ತಾ ಮಧ್ಯಾಹ್ನ 02-30 ಗಂಟೆಗೆ ರಿತೇಶ್ ಜ್ಯುವಲೆರ್ಸ್ ಹತ್ತಿರ ಹೊಸಮಾರು ಕಡೆಗೆ  ಹೋಗುವ ಕ್ರಾಸ್ ರಸ್ತೆಗೆ ಬಲಕ್ಕೆ ತಿರುಗುವ ಸೂಚನೆ ನೀಡಿ ಇಂಡಿಕೇಟರ್ ಹಾಕಿ ತಲುಪಿದಾಗ ಹಿಂದಿನಿಂದ ಅಂದರೆ ಮೂಡುಶೆಡ್ಡೆ ಕಡೆಯಿಂದ ತೀರಾ ನಿರ್ಲಕ್ಷತನ ಮತ್ತು ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಬೈಕ್ ನಂಬ್ರ KA - 19 EF - 8773 ನೇಯದನ್ನು ಬೈಕ್ ಸವಾರ ರಂಜಿತ್ ರವರು ಸಹಸವಾರ ಪ್ರಶಾಂತ್ ಎಂಬವರೊಂದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬೈಕಿನ ಬಲಬದಿಗೆ ಕ್ರಾಸ್ ರಸ್ತೆಯಲ್ಲಿ ಡಿಕ್ಕಿಹೊಡೆದು ಫಿರ್ಯಾದಿದಾರರಿಗೆ ಬಲಗಾಲಿಗೆ ಮೂಳೆಮುರಿತದ ರಕ್ತಗಾಯ ಮತ್ತು ಜೊತೆಯಲ್ಲಿದ್ದ ಮಗಳು ಮಶೂದಳಿಗೆ ಎರಡು ಕೈ ಮತ್ತು ಕಾಲುಗಳಿಗೆ ,ತಲೆಗೆ ,ಎಡಕಣ್ಣಿನ ಅಂಚಿಗೆ ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಕೋಲಾಸೊ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

 

4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದಿದಾರರಾದ ದಿವಾಕರ ಅಕ್ಕ ಹಾಗೂ ಬಾವ ರವರು ಕುಳಾಯಿ ಗ್ರಾಮದ ಹೊನ್ನಕಟ್ಟೆ ಶಾಂತ ಟ್ರೇಡರ್ಸ್ ಬಳಿ ಸ್ವಂತ ಮನೆಯಲ್ಲಿ ವಾಸವಾಗಿದ್ದು ದಿನಾಂಕ 10-09-2014 ರಂದು ಪ್ರವಾಸದ ನಿಮಿತ್ತ ಅಂಡಮಾನ್ ನಿಕೋಬಾರ್ ಗೆ ತೆರಳಿದ್ದು ದಿನ ದಿನಾಂಕ 19-09-2014 ರಂದು ಪಿರ್ಯಾದಿದಾರರಿಗೆ ಅವರ ಅಕ್ಕನ ಮನೆಯ ಮೇಲಿನ ಮಹಡಿಯಲ್ಲಿ ಬಾಡಿಗೆಗೆ ವಾಸವಾಗಿರುವ ದಿಲೀಪ್ ಎಂಬವರು ಪೋನ್ ಮಾಡಿ ಅಕ್ಕನ ಮನೆಯ ಹಿಂಬದಿ ಬಾಗಿಲು ತೆರೆದಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಸದ್ರಿ ಮನೆಗೆ ಬಂದು ನೋಡಿದಾಗ ಮನೆಯ ಹಿಂಬದಿ ಬಾಗಿಲು ತೆರೆದಿದ್ದು ಒಳಗಡೆ ಹೋಗಿ ನೋಡಲಾಗಿ ಎರುಡು ಬೆಡ್ ರೂಮಿನಲ್ಲಿದ್ದ ಕಬ್ಬಿಣದ ಹಾಗೂ ಮರದ ಕಪಾಟಗಳು ತೆರೆದಿದ್ದು ಅದರೊಳಗಿದ್ದ ಬಟ್ಟೆ ಹಾಗೂ ಇತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ಪಿರ್ಯಾದಿದಾರರು ಅವರ ಅಕ್ಕನಿಗೆ ಪೋನ್ ಮಾಡಿ ಬಗ್ಗೆ ವಿಚಾರಿಸಿದಾಗ ಕಪಾಟಿನೊಳಗೆ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣ, ಹಿತ್ತಾಳೆ ಪಾತ್ರ ಮತ್ತು ನಗದು ಹಣ ಇಟ್ಟಿರುವುದಾಗಿ ತಿಳಿಸಿದ್ದು ಕಾಣೆಯಾದ ಸೊತ್ತುಗಳನ್ನು ಪಿರ್ಯಾದಿದಾರರ ಅಕ್ಕನವರು ಬಂದು ತಿಳಿಸಿವುದಾಗಿ ತಿಳಿಸಿದ್ದು,  ದಿನಾಂಕ 10-09-2014 ರಂದು ಮದ್ಯಾಹ್ನ 13-00 ಗಂಟೆಯಿಂದ ದಿನಾಂಕ 19-09-2014 ರಂದು ಬೆಳಿಗ್ಗೆ 07-00 ಗಂಟೆ ಮದ್ಯೆ ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶಿಸಿ ಕೃತ್ಯ ಎಸಗಿರುವುದಾಗಿದೆ.

 

5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾಧಿದಾರರಾದ ರಾಜೇಶ್ ಆಚಾರ್ಯ ಎಂಬವರಿಗೆ ಈ ದಿನ ದಿನಾಂಕ 19.09.2014ರಂದು ರಾತ್ರಿ ಸುಮಾರು 7.45 ಗಂಟೆಗೆ ಸಮಯಕ್ಕೆ ಬಟ್ಟಕೋಡಿ ಪ್ರಭಾಕರ ಶೆಟ್ಟಿಗಾರ್ ಎಂಬವರ ಅಂಗಡಿಯ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಸದಾಶಿವ ಶೆಟ್ಟಿ, ದಿನೇಶ, ಪ್ರೇಮ್ ಮತ್ತು  ಶ್ಯಾಮ್ ಸಾಲ್ಯಾನ್ ಎಂಬವರುಗಳು ಪಿರ್ಯಾಧಿದಾರರನ್ನು ತಡೆದು ನಿಲ್ಲಿಸಿ ತುಳು ಭಾಷೆಯಲ್ಲಿ ಅವ್ಯಾಚ ಶಬ್ದಗಳಿಂದ ಬೈದು,  ಅವರುಗಳಲ್ಲಿ ಶ್ಯಾಮ ಸಾಲಿಯಾನ್, ಪ್ರೇಮ ಮತ್ತು  ದಿನೇಶ್ ಎಂಬವರುಗಳು ಪಿರ್ಯಾಧಿಯನ್ನು ಹಿಡಿದು ಸದಾಶಿವ ಶೆಟ್ಟಿ ಎಂಬಾತನು ಕೈಯಿಂದ ಪಿರ್ಯಾಧಿಯ ಮುಖಕ್ಕೆ ಗುದ್ದಿ ಕಾಲಿನಿಂದ ಒದ್ದಿರುವುದಾಗಿದೆ. ಅಲ್ಲದೆ ಪಿರ್ಯಾಧಿದಾರರನ್ನು ನಿನ್ನನ್ನು ಇನ್ನು ಮುಂದಕ್ಕೆ ನನ್ನ ವಿಷಯಕ್ಕೆ ಬಂದರೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ.

 

6.ಬಜಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ:ದಿನಾಂಕ: 17/09/2014 ರಂದು ಪಿರ್ಯಾದಿದಾರರಾದ ಇಬ್ರಾಹಿಂ ತನ್ನ ತಾಯಿ ಖತೀಜಮ್ಮ, ಅಕ್ಕನ ಗಂಡ ಎಂ.ಎ. ಮೊಹಮ್ಮದ್ ರವರುಗಳನ್ನು ಪಿರ್ಯಾದಿದಾರರ ತಂಗಿಯ ಗಂಡ ಇಮ್ರಾನ್ ರವರ ಹೊಸ ಅಟೋರಿಕ್ಷಾ ತಾತ್ಕಾಲಿಕ ನಂ. KA 19 TA 1033 ನೇದರಲ್ಲಿ ಕುಳಿತುಕೊಂಡು ಮನೆಯಿಂದ ಹೊರಟು ಸಮಯ ಸುಮಾರು 12.30 ಗಂಟೆಗೆ ಮಂಗಳೂರು ತಾಲೂಕು ಮುಳೂರು ಗ್ರಾಮದ ಗುರುಪುರ ಸೇತುವೆಯ ಮೇಲೆ ಹೋಗುತ್ತಿದ್ದಾಗ ರಿಕ್ಷಾದ ಹಿಂದಿನಿಂದ ಬಂದ ಅಶೋಕ್ ಲೇ ಲ್ಯಾಂಡ್ ಕಂಪೆನಿಯ ದೋಸ್ತ್ ವಾಹನವು ರಿಕ್ಷಾವನ್ನು ಬಲಬದಿಯಿಂದ ಓವರ್ ಟೇಕ್ ಮಾಡುತ್ತಿದ್ದಾಗ ಸದ್ರಿ ದೋಸ್ತ್ ವಾಹನದ ಮೇಲ್ಛಾವಣಿಯ ಶೀಟ್ ಕಳಚಿ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ರಿಕ್ಷಾದ ಮೇಲೆ ರಭಸದಿಂದ ಬಿದ್ದ ಪರಿಣಾಮ ಇಮ್ರಾನ್ ಚಲಾಯಿಸುತ್ತಿದ್ದ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರಿಗೆ ಹಾಗೂ ಅವರ ತಾಯಿ ಖತೀಜಮ್ಮ ರವರಿಗೆ ಸಾದಾ ತರಹದ ಗಾಯವಾಗಿರುವುದಲ್ಲದೇ, ಪಿರ್ಯಾದಿದಾರರ ಭಾವ ಎಂ.ಎ. ಮೊಹಮ್ಮದ್ ರವರಿಗೆ ದೇಹದ ಅಲ್ಲಲ್ಲಿ ತರಚಿದ ಹಾಗೂ ಬಲಕೈಗೆ ಮೂಳೆ ಮುರಿತದ ಗಾಯವಾಗಿದ್ದು, ಗಾಯಾಳುಗಳು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ

7.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ ಶ್ರೀ ರವಿಕುಮಾರ್‌ ಎಸ್‌ ರವರು ಇಲಾಖಾ ಟಾಟಾ ಸುಮೋ ನೋಂದಣಿ ಸಂಖ್ಯೆ:ಕೆಎ-19-ಜಿ-656 ನೇಯದರಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿ ಸಿಬ್ಬಂದಿಯವರ ಜೊತೆಯಲ್ಲಿ  ಸರಹದ್ದು ಗಸ್ತು ಸಂಚಾರದಲ್ಲಿದ್ದ ಸಂದರ್ಭ  ದೊರೆತ ಖಚಿತ ವರ್ತಮಾನದಂತೆ  ಮಾನ್ಯ ನ್ಯಾಯಾಲಯದ ಅಧಿಕಾರವ್ಯಾಪ್ತಿಗೊಳಪಟ್ಟ ಕಾವೂರು ಪೊಲೀಸ್‌ ಠಾಣಾ ಸರಹದ್ದಿಗೊಳಪಟ್ಟ ದೆರೇಬೈಲು ಗ್ರಾಮದ ಜಲ್ಲಿಗುಡ್ಡೆ ಎಂಬಲ್ಲಿ ಬಯಲು ಪ್ರದೇಶದಲ್ಲಿ ಕೆಲವು ಜನರು ಸೇರಿಕೊಂಡು ಕೋಳಿಗಳ ಕಾಲಿಗೆ ಬಾಲನ್ನು ಕಟ್ಟಿಕೊಂಡು ಹಣವನ್ನು ಪಣವಾಗಿಟ್ಟು ಅದೃಷ್ಟದ ಜೂಜಾಟದ ಕೋಳಿ ಅಂಕವೆಂಬ ಕೋಳಿಗಳ ಕಾದಾಟವನ್ನು ನಡೆಸುತ್ತಿದ್ದ ಸ್ಥಳಕ್ಕೆ ಸಿಬ್ಬಂದಿಗಳು ಹಾಗೂ ಪಂಚರುಗಳ ಸಮಕ್ಷಮದಲ್ಲಿ 14-15 ಗಂಟೆಗೆ ಧಾಳಿ ನಡೆಸಿ  ಆರೋಪಿಗಳಾದ  ಶ್ರೀ ಮಿಥುನ್‌ ಶ್ರೀ ಸಂದೀಪ್‌ ಶ್ರೀ ಜಯ  ದೇವಾಡಿಗ ಮತ್ತು ರಿತೇಶ್‌ ಎಂಬವರುಗಳನ್ನು ವಶಕ್ಕೆ ಪಡೆದುಕೊಂಡು ಸುಮಾರು 10,000=00 ರೂಪಾಯಿಯಷ್ಟು ಬೆಳೆಬಾಳುವ ಒಟ್ಟು 19 ಕೋಳಿಗಳನ್ನು ಮತ್ತು ಎರಡು ಹರಿತವಾದ ಕೋಳಿ ಬಾಲನ್ನು  ಪಂಚರುಗಳ ಸಮಕ್ಷಮ ಪಂಚನಾಮೆಯ ಮುಖಾಂತರ ಸ್ವಾದೀನಪಡಿಸಿ. ಮುಂದಿನ ಕಾನೂನು ಕ್ರಮಕ್ಕಾಗಿ ಸರಹದ್ದಿನ ಆಧಾರದ ಮೇಲೆ ಕಾವೂರು ಠಾಣಾ ಪೊಲೀಸ್‌ ಠಾಣೆಗೆ ಹಾಜರುಪಡಿಸಿರುವುದಾಗಿ ಧಾಳಿ ಸಂದರ್ಭ ಕೆಲವು ಜನ ಆರೋಪಿಗಳು ಓಡಿ ಹೋಗಿರುತ್ತಾರೆ

 

8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾಧಿದಾರರಾದ ಕೆ ಎಮ್ ಅಬ್ದುಲ್ ಖಾದರ್ ರವರು ಮಂಗಳೂರು ಪೆರ್ಮನ್ನೂರು ಗ್ರಾಮದ ತೊಕ್ಕಟ್ಟು ನಾಗ ಬನದ ಬಳಿ ಹಸನಬ್ಬ ಎಂಬವರ ಬಾಬ್ತು ರುಕ್ಸಾನ ಕಾಂಪ್ಲೇಕ್ಸ್ ನಲ್ಲಿ "ಸ್ಪಾರ್ಕ್‌ ಎಲೆಕ್ಟ್ರೀಕಲ್ ಮತ್ತು ಲೈಟ್‌‌" ಎಂಬ ಸ್ವಂತ ಅಂಗಡಿಯನ್ನು ಹೊಂದಿ ವ್ಯವಹಾರ ನಡೆಸಿಕೊಂಡಿರುವುದಾಗಿದೆ. ಅಲ್ಲದೆ ಸದ್ರಿ ಕಾಂಪ್ಲೇಕ್ಸ್‌‌ನಲ್ಲಿ ಸುಮಾರು 5-6 ಅಂಗಡಿಗಳಿದ್ದು, ಪಿರ್ಯಾದಿದಾರರು ದಿನಾಂಕ 17-09-2014 ರಂದು ಎಂದಿನಂತೆ ಬೆಳಿಗ್ಗೆ 08:30 ಗಂಟೆಗೆ ವ್ಯಾಪಾರ ಶುರಮಾಡಿ ರಾತ್ರಿ 8:30 ಗಂಟೆಗೆ ಬಂದ್ ಮಾಡಿ ನಂತರ ಮನೆಗೆ ಹೋಗುವುದಾಗಿದೆ. ದಿನಾಂಕ 18-09-2014 ರಂದು ಬೆಳಿಗ್ಗೆ ಸದ್ರಿ ಕಾಂಪ್ಲೇಕ್ಸ್ ನ ಮಾಲಿಕರಾದ ಹಸನಬ್ಬ ರವರು ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ ನಿಮ್ಮ ಅಂಗಡಿಯ ಶೆಟರ್‌ಗಳು ತೆರೆದಂತೆ ಕಾಣುತ್ತಿದ್ದು ಹಾಗೂ ಸ್ವಲ್ಪ ಡೇಮ್ಯಾಜ್ ಕೂಡಾ ಆಗಿದ್ದು, ಕಳ್ಳರು ಬಂದಿರುವ ಸಾಧ್ಯತೆ ಇದೆ ಎಂದು ತಿಳಿಸಿದಂತೆ ಪಿರ್ಯಾಧಿದಾರರು ಬೆಳಿಗ್ಗೆ 07:15 ಗಂಟೆಗೆ ಬಂದು ನೋಡಿದಾಗ ಅಂಗಡಿ ಶೆಟರ್ ಎಳೆದು ತೆರೆದಂತೆ ಕಂಡು ಬಂತು. ಅಲ್ಲದೆ ಸುತ್ತಮುತ್ತಲಿನ ಅಂಗಡಿಗಳ ಶೆಟರುಗಳು ಎಳೆದು ತೆರೆದಂತೆ ಕಂಡು ಬಂತು. ಅಂಗಡಿಯ ಒಳಗೆ ಹೋಗಿ ನೋಡಿದಾಗ ಕ್ಯಾಶ್ ಡ್ರಾಯರ್ ತೆರೆದಿದ್ದು, ಅದರಲ್ಲಿಟ್ಟಿದ್ದ ರೂ. 1,400/- ನಗದು ಹಣ ಹಾಗೂ 150/- ಬೆಲೆಯ ನಾಣ್ಯಗಳು ಕಳವಾಗಿತ್ತು. ಹಾಗೂ ಟೇಬಲ್ ಮೇಲೆ ಇಟ್ಟಿದ್ದ ಕೆಲವು ಸಾಮಾನುಗಳು ಕೆಳಗೆ ಬಿದ್ದಿತ್ತು. ಅಲ್ಲದೆ ಪಾರ್ಟ್ಸ್‌ ಸೆಂಟರಿನ ಮಹಮ್ಮದ್ ಇಕ್ಬಾಲ್ ರವರ ಬಾಬ್ತು ಅಂಗಡಿಯಿಂದ ರೂ. 300/- ನಗದು ಹಣ, ತಾಜುದ್ದೀನ್ ರವರ ಅಂಗಡಿಯಿಂದ ಸ್ವಲ್ಪ ಚಿಲ್ಲರೆ ಹಣ ಕಳವಾಗಿರುತ್ತದೆ. ದಿನಾಂಕ 17-09-2014 ರಂದು ರಾತ್ರಿ 8:30 ಗಂಟೆಯಿಂದ ದಿನಾಂಕ 18-09-2014 ರಂದು ಬೆಳಿಗ್ಗೆ 06:30 ಗಂಟೆಯ ಮದ್ಯೆ ಯಾರೋ ಕಳ್ಳರು ಅಂಗಡಿಗೆ ಒಳಪ್ರವೇಶಿಸಿ ನಗದು ಹಾಗೂ ಚಿಲ್ಲರೆ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಕಳವಾದ ನಗದು ಮೌಲ್ಯ ರೂ. 1850/-ಆಗಿರುತ್ತದೆ.

 

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದಿದಾರರಾದ ಇಂತಿಯಾಜ್ ದಿನಾಂಕ 18-9-2014 ರಂದು ಸಂಜೆ 4-00 ಗಂಟೆ ವೇಳೆಗೆ ತೊಕ್ಕೋಟು ಬಸ್ಸ್ ನಿಲ್ದಾಣದಿಂದ ಉಳ್ಳಾಲದ ತನ್ನ ಮನೆ ಕಡೆಗೆ ಹೋಗಲು ಬಸ್ಸ್ ನಂಬ್ರ ಕೆಎ 19 C.4428 (ರೂಟ್‌ ನಂ 44 D- MAROLI) ಎಂಬ ಬಸ್ಸ್‌ಗೆ ಹತ್ತಿ ಅದರಲ್ಲಿ ಹೋಗುವಾಗ ಅದರ ಚಾಲಕ ಬಸ್ಸನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ತೊಕ್ಕೋಟ್ಟು ವಿನಮ್ರ ಬಾರ್ ಬಳಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ತಲೆಯ ಹಿಂಬದಿಗೆ ಗುದ್ದಿದ ರಕ್ತ ಗಾಯ ವಾಗಿದ್ದು ಹಾಗೂ ಬೆನ್ನಿನ ಬದಿಗೆ ಗುದ್ದಿದ ನೋವುಂಟಾಗಿದೆ. ಚಿಕಿತ್ಸೆಗಾಗಿ ಮಂಗಳೂರಿನ ಯುನಿಟಿ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

No comments:

Post a Comment