Wednesday, September 24, 2014

Daily Crime Reports 24-09-2014

ದೈನಂದಿನ ಅಪರಾದ ವರದಿ.

ದಿನಾಂಕ 24.09.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

0

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಕಿರಣ್ ಎಮ್ ನಾಯ್ಕ ಎಂಬವರು ಧರ್ಮಸ್ಥಳದ ಕೆ,ಎಸ್,ಆರ್.ಟಿ.ಸಿ. ಬಸ್ ಘಟಕದ ಚಾಲಕರಾಗಿದ್ದು,  ದಿನಾಂಕ 22-09-2014 ರಂದು ಮಧ್ಯಾಹ್ನ 2:00 ಗಂಟೆಗೆ ಮಂಗಳೂರಿನ  ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಿಂದ ಧರ್ಮಸ್ಥಳಕ್ಕೆ ಬಸ್ ನಂಬ್ರ ಕೆ. 19 ಎಫ್ 3003 ನ್ನು ಚಲಾಯಿಸಿಕೊಂಡು ಹೋಗುತ್ತಾ ಸಮಯ ಹಳದಪ್ಪ ಬಸಪ್ಪ ಚೆಳಗತ್ತಿ ಎಂಬವರು ಬಸ್ಸಿನ್ಲಲಿ ನಿರ್ವಾಹಕರಾಗಿದ್ದು, ಬಸ್ಸು ಕ್ಲಾಕ್ ಟವರ್ ಬಳಿ ತಲುಪಿದಾಗ ಬಸ್ಸಿನಲ್ಲಿ ಪ್ರಯಾಣಿಕನೋರ್ವನು ಟಿಕೇಟ್ ಹಣದ ವಿಚಾರದಲ್ಲಿ  ನಿರ್ವಾಹಕರಲ್ಲಿ ಗಲಾಟೆ ಮಾಡಲು ಶುರು ಮಾಡಿ ನಿರ್ವಾಹಕರನ್ನು ಕರ್ತವ್ಯ ಮಾಡದಂತೆ ತಡೆದು ನಿಲ್ಲಿಸಿ, ಬಸ್ಸಿನಿಂದ ಹೊರಗೆ ತಳ್ಳಿ ಅದನ್ನು ತಡೆಯಲು ಹೋದ ಪಿರ್ಯಾದಿದಾರರ ಮೇಲೆ ಹಲ್ಲೆ ನಡೆಸಿ ಬೆನ್ನಿನ ಮೇಲೆ ಕುಳಿತು ಕುತ್ತಿಗೆಗೆ ಮತ್ತು ಬೆನ್ನಿಗೆ ಬಾಯಿಯಿಂದ ಕಚ್ಚಿದ್ದು, ಅಲ್ಲದೇ ಬಿದ್ದ ಪರಿಣಾಮ ಮೂಗು ಕೈಕಾಲುಗಳಿಗೆ ಗಾಯವಾಯಿತು. ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿರ್ಯಾದಿದಾರರ ಹಲ್ಲೆ ನಡೆಸಿದ ಆರೋಪಿತನು ಮಂಗಳೂರು ನಗರದ ಎಲ್.ಹೆಚ್.ಹೆಚ್ ಬಳಿ ಬಸ್ಸಿನಿಂದ ಇಳಿದು ಹೋಗಿದ್ದು, ನಂತರ ಬಸ್ಸಿನಲ್ಲಿ ತುಂಬಾ ಪ್ರಯಾಣಿಕರಿದ್ದ ಕಾರಣ ಅವರನ್ನು ಸುರಕ್ಷಿತವಾಗಿ ಧರ್ಮಸ್ಥಳಕ್ಕೆ ಸಂಬಂಧಿಸಿದ ಸ್ಥಳಕ್ಕೆ ಮುಟ್ಟಿಸಿ. ಪ್ರಕರಣದ ಪಿರ್ಯಾದುದಾರರಾದ ಬಸ್ಸಿನ ಚಾಲಕನು ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-09-2014 ರಂದು 23.00  ಗಂಟೆಗೆ ದರೆಗುಡ್ಡೆ ಗ್ರಾಮ ವಿಠಲ ಮನೆ ಎಂಬಲ್ಲಿದ್ದ ಪಿರ್ಯಾದಿದಾರರಾದ ಶ್ರೀ ವಿಶ್ವನಾಥ್ ಭಂಡಾರಿ ರವರ ಅಣ್ಣ ರಾಘು ಭಂಡಾರಿಯನ್ನು ನೆರೆಕರೆಯವರಾದ ಮೌರೀಸ್ಡಿಕೋಸ್ತಾ ಮತ್ತು ಆತನ ಹೆಂಡತಿ ಕರ್ಮಿನ ಇವರು ಜೋರಾಗಿ "ಬಲಂಬೆ ರಾಘು ಇತ್ತೆ ಪಿದಾಯಿ ಬಲ ನಿಕ್ಒಂಜಿ ಗತಿ ಮಲ್ಪುವೆ" ಎಂದು ಜೋರಾಗಿ ಬೊಬ್ಬೆ ಹೊಡೆದಾಗ ಹೊರಗೆ ಹೋದ ರಾಘು ಭಂಡಾರಿ ತೋಟದ ಕಡೆಗೆ ಹೋದ ಸ್ವಲ್ಪ ಸಮಯದಲ್ಲಿ "ಈ ಪೋರ್ಬು ಎನನ್ಕೆರಿಯೆ" ಎಂದು ಜೋರಾಗಿ ಬೊಬ್ಬೆ ಹೊಡೆದಿದ್ದು, ದಿನಾಂಕ 13-09-14 ರಂದು ಬೆಳಿಗ್ಗೆ 07.00 ಗಂಟೆಗೆ ಅಣ್ಣ ರಾಘು ಭಂಡಾರಿಯ ಮೃತ ದೇಹ  ತೋಡಿನ ಹತ್ತಿರ ಪತ್ತೆಯಾಗಿದ್ದು, ನೆತ್ತಿಯಲ್ಲಿ ರಕ್ತಹೆಪ್ಪು  ಗಟ್ಟಿದ ಗಾಯ ಹಾಗೂ ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿದ್ದು, ಮೇಲಿನ ಮೌರಿಸ್ಡಿಕೋಸ್ತಾ ಮತ್ತು ಕರ್ಮಿನ  ರವರು ರಾಘು ಭಂಡಾರಿಯನ್ನು ಮಾರಣಾಂತಿಕ ಹೊಡೆದು ಕೊಲೆ ಮಾಡಿರುತ್ತಾರೆ.

 

3.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರ ಪಾಂಡೇಶ್ವರದಲ್ಲಿರುವ ಪರ್ಲ್ ಅಪಾರ್ಟ್ ಮೆಂಟ್ ನಲ್ಲಿರುವ 403 ನೇ ಪ್ಲಾಟ್ ಮತ್ತು 24 ನೆ ನಂಬರಿನ ಕಾರ್ ಪಾರ್ಕಿಂಗ್ ನ್ನು ದಿನಾಂಕ 24-11-2006 ರಂದು ಕ್ರಯ ಸಾಧನ ದಸ್ತಾವೇಜು ನಂಬ್ರ M.G.T.1-05480-2006-07 ರಂತೆ ನೊಂದಾಯಿಸಿ ಸಂಪೂರ್ಣ ಪಿರ್ಯಾದಿದಾರರಾದ ಶ್ರೀ ಕೆ.ಕೆ. ಈಶ್ವರ ಪೂಜಾರಿ ರವರು ಸ್ವಾಧೀನ ಹೊಂದಿದ್ದು, 2006 ಅಧಿಕೃತ ದಸ್ತಾವೇಜಿನಂತೆ ಪಿರ್ಯಾದಿಯ ಮಾಲಕತ್ವದಲ್ಲಿರುವಾಗ ಪಾರ್ಕಿಂಗ್ ನ್ನು ಸದ್ರಿ ಶಹನಾಝ ಮುಸ್ತಾಕ್ ಅಹಮ್ಮದ್ ರವರು 2012 ಕ್ರಯ ಪತ್ರದಲ್ಲಿ ತನ್ನದೆಂದು ಉದ್ದೇಶ ಪೂರ್ವಕ ಕಾನೂನು ಬಾಹಿರವಾಗಿ ಸೇರಿಸಿಕೊಂಡಿದ್ದು, ಅಪಾರ್ಟ್ ಮೆಂಟ್ ನಲ್ಲಿ ಆಕೆ ಕಾರ್ ಪಾರ್ಕ್ ನ್ನು ಪಿರ್ಯಾದಿಯವರು ಅಕ್ರಮ ಸ್ವಾಧೀನ ಹೊಂದಿರುವುದಾಗಿ ಅಪಪ್ರಚಾರ ಮಾಡುವ ಮೂಲಕ ಪಿರ್ಯಾದಿಯ ಗೌರವಕ್ಕೆ ಹಾನಿ ಮಾಡಿದ್ದಲ್ಲದೇ, ನಕಲಿ  ದಾಖಲಾತಿಯನ್ನು ಸೃಷ್ಟಿಸಿ ಅಸಲಿ ದಾಖಲಾತಿಯೆಂದು ನಂಬಿಸಿ ಮೋಸ ಮಾಡಿದ್ದಾಗಿದೆ. ಅಲ್ಲದೇ ಸದ್ರಿ ಕ್ರಯ ಪತ್ರದ ತಪಶೀಲು ವಿಭಾಗದಲ್ಲಿ ಕಾರ್ ಪಾರ್ಕಿಂಗ್ ಸೇರಿಸುವರೇ ಆರೋಪಿ ಶಹನಾಝ್ ಮುಸ್ತಾಕ್ ಅಹಮ್ಮದ್ ರವರು ಸಂಚು ಹೂಡಿರುವುದಾಗಿದೆ.

 

4.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-09-2014 ರಂದು ಮದ್ಯಾಹ್ನ 02.00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಉಮಾಶಂಕರ್ ರವರು ಜೆಪ್ಪು ಮಾರ್ಕೆಟ್ ಬಳಿ ಇರುವ ವಾಟಿಸ್ ವೈನ್ ಶಾಪ್ ಗೆ ಮದ್ಯ ಸೇವಿಸುವರೆ ಹೋಗಿ ಒಂದು ಬೀಯರ್ ಸೇವಿಸಿ ಹೊರಗಡೆ ಬರುತ್ತಿದ್ದಂತೆ ಪಿರ್ಯಾದಿದಾರರ ಪರಿಚಯದ  ನವೀನ್ ಹಾಗೂ ವಿಶ್ವನಾಥ ಎಂಬುವರಗಳು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ "ನೀನು ನಮಗೆ ಯಾಕೆ ಡ್ರಿಂಕ್ಸ ಕುಡಿಸಿಲ್ಲ" ಎಂದು ತಗಾದೆ ತೆಗೆದು ನವೀನ್ ನು ಆತನ ಕೈಯಲ್ಲಿದ್ದ ಬಾಟಲಿಯಿಂದ ಪಿರ್ಯಾದಿದಾರರ ಹಣೆಗೆ ಬಲವಾಗಿ ಹೊಡೆದು ರಕ್ತ ಗಾಯಗೊಳಿಸಿದಾಗ ಪಿರ್ಯಾದಿದಾರರ ಕೆಳಗೆ ಬಿದ್ದಾಗ ವಿಶ್ವನಾಥನು ಕೈಯಿಂದ ಹೊಡೆದು ಕಾಲಿನಿಂದ ತುಳಿದು "ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ" ಎಂಬುದಾಗಿ ಅವಾಚ್ಯ ಶಬ್ದಗಳಿಂದ ಜೀವ ಬೆದರಿಕೆ ಹಾಕಿರುತ್ತಾನೆ ಅಷ್ಟರಲ್ಲೆ ವೈನ್ ಶಾಪ್ ನವರು ಬರುವುದನ್ನು ಕಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿರುತ್ತಾರೆ. ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಅಲ್ಲಿ ಸೇರಿದವರು ಕೆ.ಎಂ. ಸಿ ಅತ್ತಾವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ.

No comments:

Post a Comment