Friday, May 30, 2014

Daily Crime Reports 30-05-2014

ದೈನಂದಿನ ಅಪರಾದ ವರದಿ.

ದಿನಾಂಕ 30.05.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

2

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

2

ಇತರ ಪ್ರಕರಣ

:

4

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-05-2014ರಂದು ಬೆಳಿಗ್ಗೆ 08-30 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ ಮೀನಾಕ್ಷಿ ರವರ ಗಂಡ ಅನಿಲ್ರವರನ್ನು ಆರೋಪಿತ ಜಯರಾಮನು ಮಂಗಳೂರು ನಗರದ ಭಗವತಿ ನಗರ ಎಂಬಲ್ಲಿರುವ ಕುಶ ಅಪಾರ್ಟ್ಮೆಂಟ್ Flat No.  001ಕ್ಕೆ ಬಣ್ಣ ಬಳಿಯುವರೇ ಕೆಲಸದಲ್ಲಿ ತೊಡಗಿಸಿದ್ದು, ಬಣ್ಣ ಬಳಿಯುತ್ತಿದ್ದ ಸಮಯ ಪಿರ್ಯಾದಿದಾರರ ಗಂಡನು ಆಯ ತಪ್ಪಿ ಸುಮಾರು 12 ಅಡಿ ಆಳಕ್ಕೆ ಬಿದ್ದು, ತೀವ್ರ ಸ್ವರೂಪದ ಗಾಯಗೊಂಡಿರುವುದಾಗಿದೆ. ಘಟನೆಗೆ ಆರೋಪಿ ಜಯರಾಮನು ತುರ್ತು ಸಮಯದಲ್ಲಿ ಅಗತ್ಯವೆನಿಸುವ ರಕ್ಷಣಾ ಸಲಕರಣೆಗಳನ್ನು ಅಳವಡಿಸಿದೇ ಬೇಜವಾಬ್ದಾರಿ ಹಾಗೂ ನಿರ್ಲಕ್ಷತೆ ವಹಿಸಿದ್ದರಿಂದಲೇ ಘಟನೆ ಸಂಭವಿಸಿದ್ದಾಗಿರುತ್ತದೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26/05/2014 ರಂದು ಬೆಳಗ್ಗೆ ಸುಮಾರು 11:30 ಗಂಟೆಗೆ ಪಿಕಪ್ ವಾಹನ ನಂಬ್ರ KA-19-C-7854 ನ್ನು ಅದರ ಚಾಲಕ ನಂದಿಗುಡ್ಡೆ ಕಡೆಯಿಂದ ಅತ್ತಾವರ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಬಂದು ಅತ್ತಾವರ KMC ಅಸ್ಪತ್ರೆಯ ಎದುರು ಇರುವ ಸೂಪರ್ ಬಜಾರ್ ಎದುರು ತಲುಪುವಾಗ ಅತ್ತಾವರ ಕಟ್ಟೆ ಕಡೆಯಿಂದ ನಂದಿಗುಡ್ಡೆ ಕಡೆಗೆ ಬರುತ್ತಿದ್ದ ಸ್ಕೂಟರ್ ನಂಬ್ರ KA-19-EF-4322 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸ್ಕೂಟರ್ ಸವಾರ ರಸ್ತೆಗೆ ಬಿದ್ದು ಮುಖಕ್ಕೆ ಮತ್ತು  ಕೈ ಕಾಲುಗಳಿಗೆ ಸಾದಾ ಸ್ವರೂಪದ ಗಾಯಗೊಂಡು KMC ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

3.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29/05/2014 ರಂದು ಸಂಜೆ 14-40 ಗಂಟೆ ಸಮಯಕ್ಕೆ ಪಣಂಬೂರು ಗ್ರಾಮದ ಪಣಂಬೂರು ರಾ-ಹೆ 66 ಉಡುಪಿ ಮಂಗಳೂರು ಎಕಮುಖ ರಸ್ತೆಯಲ್ಲಿ ಕಸ್ಟಂಸ್ ಕಛೇರಿಯ ಎದುರು ಪಿರ್ಯಾದಿದಾರರಾದ ಶ್ರೀ ರಂಗನಾಥ್ ರವರು ಕೆ, 19 ಬಿ/9287 ನೇ ರೋಟ್ ನಂಬ್ರ 45(ಸಿ) ಸಿಟಿ ಬಸ್ಸನ್ನು ಚಲಾಯಿಸಿಕೊಂಡು ಬರುತ್ತಿದಾಗ ಎದುರಿನಿಂದ ಅಂದರೆ ವಿರುದ್ದ ದಿಕ್ಕಿನಿಂದ ವಾಹನ ಚಾಲಕನೆಯನ್ನು ಉಲ್ಲಂಘಿಸಿ ಅತೀ ವೇಗ ಹಾಗೂ ಅಜಾಗರು ಕತೆಯಿಂದ ಕೆ, 37/7295 ನೇ ಟಾಟಾ ಎಸಿ ಟೆಂಪೋವನ್ನು ಅದರ ಚಾಲಕ ವಿಜಯ ಕುಮಾರ ಇನ್ನೂರ್ವ ಮೌಲಾ ಹುಸೈನ್ ಎಂಬವರನ್ನು ಕುಳ್ಳೀರಿಸಿಕೊಂಡು ಬಂದು ಪಿರ್ಯಾದಿಯ ಬಸ್ಸಿಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ 2 ವಾಹನಗಳು ಜಖಂವಾಗಿದ್ದಲ್ಲದೆ. ಆಪಾಧಿತನ ಮತ್ತು ಇನ್ನೂರ್ವ ಪ್ರಯಾಣಿಕ ಮೌಲಾ ಹುಸೈನ್ ಗಾಯಗೊಂಡು .ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

4.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-05-2014 ರಂದು ರಾತ್ರಿ 22.45 ಗಂಟೆಯ ಸಮಯಕ್ಕೆ ಏಳಿಂಜೆ ಗ್ರಾಮದ ರಿವರ್ ಹೌಸ್ ಎಂಬಲ್ಲಿರುವ ಪಿರ್ಯಾಧಿದಾರರಾದ ಶ್ರೀಮತಿ ರೆಜಿನಾ ಸಾಂಕ್ತಿಸ್ ರವರ ಮನೆಯ ಹತ್ತಿರದಲ್ಲಿರುವ ಬೈ ಹುಲ್ಲು ಮೂಟೆಗೆ ಆರೋಪಿ ಅಜೀತ್ ಡಿ'ಸೋಜಾ ಸೀಮೆ ಎಣ್ಣೆ ಎರಚಿ ಬೆಂಕಿ ಕೊಟ್ಟಿರುತ್ತಾನೆ. ಇದರಿಂದಾಗಿ ಪಿರ್ಯಾಧಿದಾರರಿಗೆ ಸುಮಾರು 35,000/- ರೂ ನಷ್ಟ ಉಂಟಾಗಿರುತ್ತದೆ. ಅಲ್ಲದೇ ಅರೊಪಿಯು ಜೀವ ಬೆದರಿಕೆ ಕೂಡಾ ಒಡ್ಡಿರುತ್ತಾರೆ.

 

5.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-05-2014 ರಂದು 15-15 ಗಂಟೆ ಸಮಯಕ್ಕೆ  ಕೆಎ-05-ಎಂ.-4434ನೇ ನಂಬ್ರದ ಎಲ್-ಬೋರ್ಡ್ಚಿಹ್ನೆ ಇರುವ ಆಲ್ಟೋ ಕಾರಿನ ಚಾಲಕಿಯು ರಾಷ್ಟ್ರೀಯ ಹೆದ್ದಾರಿಯಲ್ಲಿ  ಕಾರ್ನಾಡು ಗ್ರಾಮದ ಕಾರ್ನಾಡು ಜಂಕ್ಷನ್ ಬಳಿ ಅಜಾಗರೂಕತೆಯಿಂದ ತನ್ನ ಕಾರನ್ನು ಮಧ್ಯಂತರ ಮಾರ್ಗವಾಗಿ ಒಳನುಗ್ಗಲು ಯತ್ನಿಸುವಾಗ , ರಾಷ್ಟ್ರೀಯ ಹೆದ್ದಾರಿಯಲ್ಲಿ ನೇರವಾಗಿ ಹೊಗುತ್ತಿದ್ದ ಪಿರ್ಯಾದಿದಾರರಾದ ಶ್ರೀ ಅನಿಲ್ ಆರ್. ಶೆಟ್ಟಿ ರವರ ಬಾಬ್ತು ಜಿಎ-06-ಡಿ-9520ನೇ ನಂಬ್ರದ ಕಾರಿಗೆ ಡಿಕ್ಕಿಯಾದ ಪರಿಣಾಮ ಪಿರ್ಯಾದಿದಾರರ ಕಾರು ಜಖಂ ಆಗಿದ್ದು, ಅಪಘಾತದಲ್ಲಿ  ಯಾರಿಗೂ ಗಾಯ ಉಂಟಾಗಿರುವುದಿಲ್ಲ.

 

6.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-05-2014 ರಂದು 15-15 ಗಂಟೆ ಸಮಯಕ್ಕೆ  ಕೆಎ-05-ಎಂ.-4434ನೇ ಮಾರುತಿ ಕಾರನ್ನು ಪಿರ್ಯಾದಿದಾರರಾದ ಶ್ರೀ ಅಲ್ವಿನ್ ಸಂಪತ್ ಕುಮಾರ್ ರವರ ಪತ್ನಿ ಶ್ರೀಮತಿ ಉರೆಲಿಯಾ ಡ್ಯಾಫ್ನಿರವರು ಕೋಲ್ನಾಡು ಕಡೆಯಿಂದ ಚಲಾಯಿಸಿಕೊಂಡು ಬಂದು ಕಾರ್ನಾಡು ಬೈಪಾಸ್ ಬಳಿ, ರಾಷ್ಟ್ರೀಯ ಹೆದ್ದಾರಿಯಲ್ಲಿ  ಬಲಗಡೆಗೆ ಸೂಚನೆ ನೀಡಿ ಕಾರ್ನಾಡು ಕಡೆಗೆ ತಿರುಗಿಸುವಾಗ, ಬಲಬದಿಯಿಂದ ಜಿಎ-06-ಡಿ-9520ನೇ ನಂಬ್ರದ ಕಾರನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕಾರಿಗೆ ಡಿಕ್ಕಿಯಾದ ಪರಿಣಾಮ ಕೆಎ-05-ಎಂ.-4434ನೇ ಕಾರು ಜಖಂ ಆಗಿದ್ದು, ಅಪಘಾತದಲ್ಲಿ ಯಾರಿಗೂ ಗಾಯ ಉಂಟಾಗಿರುವುದಿಲ್ಲ.

 

7.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಗಂಗಾಧರರವರ ಅಣ್ಣನಾದ ರಾಜೇಶ್ (31) ಎಂಬವರು ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದು, ದಿನಾಂಕ 23-05-2014 ರಂದು ಬೆಳಿಗ್ಗೆ 10-00 ಗಂಟೆಗೆ ಮನೆಯಿಂದ ಹೊರಗಡೆ ಹೋದವರು ಈವರೆಗೆ ವಾಪಾಸು ಬಾರದೆ ಕಾಣೆಯಾಗಿರುತ್ತಾರೆ.

 

8.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28.05.2014 ರಂದು 10:00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎಂ.ಕೆ. ಅಬೂಬಕ್ಕರ್ ರವರು ಕುಟುಂಬ ಸಮೇತ ಮಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವರೇ ಮನೆಗೆ ಬೀಗ ಹಾಕಿ ತೆರಳಿದ್ದು, ದಿನಾಂಕ 28.05.2014 ರಂದು 22:00 ಗಂಟೆಗೆ ಮನೆಗೆ ಬಂದು ನೋಡಿದಾಗ ಪಿರ್ಯಾದಿದಾರರ ಬಾಬ್ತು ಬಾವಿಯಲ್ಲಿ ನೀರು ಸೇದಲು ಅಳವಡಿಸಿದ್ದ ಜೆಟ್ ಪಂಪನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿದಾರರ ಮನೆಯ ಹತ್ತಿರದ ನಿವಾಸಿಗಳಾದ ಅಶೋಕ, ಸಂತೋಷ, ಮತ್ತು ದಿನೇಶ ಎಂಬವರೇ ಕಳವು ಮಾಡಿರುವರೆಂಬ ಸಂಶಯವಿದ್ದು, ಕಳುವಾದ ಸೊತ್ತಿನ ಮೌಲ್ಯ ರೂ 12,000/ ಆಗಬಹುದು.

 

9.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಆರೋಪಿ ವೇದಪ್ರಕಾಶನು ಅಂತರ್ಜಾತಿಯ ವಿವಾಹವಾದ ಕಾರಣ ಆಕ್ಷೇಪ ಮಾಡಿದ ಪಿರ್ಯಾದಿದಾರರಾದ ಶ್ರೀ ಎಂ. ಪ್ರಕಾಶ್ ಶೆಟ್ಟಿ ರವರಲ್ಲಿ ಮನಸ್ತಾಪ ಹೊಂದಿದ್ದು, ಪಿರ್ಯಾದಿದಾರರು ಆರೋಪಿ ವಾಸವಾಗಿರುವ ಪಿರ್ಯಾದಿದಾರರ ಕುಟುಂಬದ ಮನೆಗೆ ಮತ್ತು ಭೂಮಿಗೆ ಪಿರ್ಯಾದಿದಾರರು ಹೋಗಿ ಬರುವಾಗ ಆರೋಪಿ ಜಗಳ ಮಾಡಿದ್ದು, ದಿನಾಂಕ 29-05-14 ರಂದು ಬೆಳಿಗ್ಗೆ ಪಿರ್ಯದಿದಾರರು ಮಂಗಳೂರು ತಾಲೂಕು ವಾಲ್ಪಾಡಿ ಗ್ರಾಮದ ಅಳಿಯೂರು ಪಾಪಲಾಡಿ ಎಂಬಲ್ಲಿ ಇರುವ ರಬ್ಬರ್ ತೋಟಕ್ಕೆ ಹೋಗಿ ಬರುತ್ತಿದ್ದಾಗ ಬೆಳಿಗ್ಗೆ ಸುಮಾರು 08.30 ಗಂಟೆ ಸಮಯಕ್ಕೆ ಪಾಪಲಾಡಿ ಎಂಬಲ್ಲಿ ಆರೋಪಿಯು ಕಬ್ಬಿಣದ ಸರಳಿನೊಂದಿಗೆ ಓಡಿ ಬಂದು ಪಿರ್ಯಾದಿದಾರರ ಕಾರನ್ನು ಮುಂದಕ್ಕೆ ಚಲಿಸದಂತೆ ರಸ್ತೆಯಲ್ಲಿ ಅಡ್ಡ ನಿಂತು ತಡೆದು ಪಿರ್ಯದಿದಾರರನ್ನುದ್ದೇಶಿಸಿ,  ಅವಾಚ್ಯ ಶಬ್ದದಿಂದ "ಇವತ್ತು ಸಿಕ್ಕಿದ್ದಿ, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ" ಎಂದು ಆತನ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ಪಿರ್ಯದಿದಾರರ ಕಡೆಗೆ ಬಲವಾಗಿ ಬೀಸಿದ್ದು, ಸದ್ರಿ ಹೊಡೆತವು ಪಿರ್ಯಾದಿದಾರರ ಕಾರಿನ ಎದುರಿನ ಗ್ಲಾಸಿಗೆ ಬಿದ್ದು, ಗ್ಲಾಸು ಹುಡಿ ಮಾಡಿ ಇದರಿಂದ ಪಿರ್ಯಾದಿದಾರರಿಗೆ ಸುಮಾರು 10,000/ ರೂ ನಷ್ಟ ಉಂಟಾಗಿರುತ್ತದೆ.

 

10.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-05-2014 ರಂದು ಮಧ್ಯಾಹ್ನ 1-50 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ರಾಮಚಂದ್ರರವರು ಮಂಗಳೂರು  ಸರಕಾರಿ ಕಾಲೇಜಿನ ಎದುರುಗಡೆ ಇರುವ ಸಾಯಿ ಸಾಗರ್ಹೋಟೇಲಿನಲ್ಲಿ ಊಟ ಮಾಡುತ್ತಿರುವಾಗ ತನ್ನ ಬ್ಯಾಗ್ನ್ನು ತಾನು ಕುಳಿತುಕೊಂಡ ಸೀಟಿನ ಪಕ್ಕದಲ್ಲಿ ಇರಿಸಿದ್ದು, ಊಟ ಮಾಡಿ ಕೈ ತೊಳೆದು ಬರುವಷ್ಟರಲ್ಲಿ ಬ್ಯಾಗ್‌‌ನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ. ಬ್ಯಾಗ್‌‌ನೊಳಗೆ 1 ಲಕ್ಷ ನಗದು, ಐಡಿ ಕಾರ್ಡ್‌, ಜೆರಾಕ್ಸ್‌‌ ಸರ್ಟಿಫಿಕೆಟ್, ಡ್ರೆಸ್‌‌ ಇರುತ್ತದೆ.  

 

11.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮಂಜಪ್ಪ ರವರು ತನ್ನ ಮಾವ ಅಂದರೆ ಹೆಂಡತಿಯ ತಂದೆ ರಂಗಪ್ಪ 60 ವರ್ಷ ಎಂಬವರನ್ನು ತನ್ನ ಊರಾದ ದಾವಣಗೆರೆಯಿಂದ ದಿನಾಂಕ: 18/05/2014 ರಂದು ಕರೆದುಕೊಂಡು ಬಂದಿದ್ದರು. ದಿನಾಂಕ: 19/05/2014 ರಂದು ಪಿರ್ಯಾದಿದಾರರು ತನ್ನ ಹೆಂಡತಿಯೊಂದಿಗೆ ಮಂಗಳೂರು ತಾಲೂಕು ಕೆಂಜಾರು ಗ್ರಾಮದ ಕರಂಬಾರು ಎಂಬಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಬೆಳಿಗ್ಗೆ ಸುಮಾರು 10.00 ಗಂಟೆಗೆ ಟೀ ಕುಡಿಯಲೆಂದು ಹೋದಾಗ ಪಿರ್ಯಾದಿದಾರರ ಮಾವ ರಂಗಪ್ಪ ಎಂಬವರು ಅಲ್ಲಿ ಇಲ್ಲದೇ ಕಾಣೆಯಾಗಿದ್ದುದರಿಂದ ಅವರನ್ನು ಎಲ್ಲಾ ಕಡೆ ಹುಡುಕಾಡಿ ನಂತರ ಪಿರ್ಯಾದಿದಾರರ ಊರಾದ ದಾವಣಗೆರೆಯಲ್ಲಿ ಕೂಡಾ ಹುಡುಕಾಡಿ ಪತ್ತೆಯಾಗದೇ ಇರುವುದಾಗಿದೆ. ಕಾಣೆಯಾದವರ ವಿವರ: ಹೆಸರು : ರಂಗಪ್ಪ, ಪ್ರಾಯ : 60 ವರ್ಷ, ಎತ್ತರ : 6 ಅಡಿ 2 ಇಂಚು, ಭಾಷೆ : ಕನ್ನಡ, ಬಣ್ಣ : ಗೋಧಿ ಮೈ ಬಣ್ಣ, ಬಟ್ಟೆ: ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಹಸಿರು ಬಣ್ಣದ ಪಟ್ಟೆಗಳಿರುವ ಪಂಚೆ, ಹಸಿರು ಬಣ್ಣದ ಟವೆಲ್ ಧರಿಸಿರುವುದಾಗಿದೆ.

 

12.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಎ.ಹೆಚ್. ಫಾರೂಕ್ ರವರು ಉಳ್ಳಾಲ ಅಲೆಕಳ ಮಸ್ಜಿದ್ ಅಲ್-ಫುರ್ಖಾನ್ ಮಸೀದಿಯ ಸಂಸ್ಥೆಯಲ್ಲಿ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ದಿನಾಂಕ 28-05-2014 ರಂದು ರಾತ್ರಿ 9:00 ಗಂಟೆಯಿಂದ 10:30 ಗಂಟೆಯ ಮದ್ಯೆ ಸುಮಾರು 18 ಜನ ಆರೋಪಿಗಳು ಸಮಾನ ಉದ್ದೇಶದಿಂದ ಪಿರ್ಯಾದಿದಾರರು ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಕಟ್ಟಡಕ್ಕೆ ಅಕ್ರಮ ಪ್ರವೇಶ ಮಾಡಿ ಕಟ್ಟಡಕ್ಕೆ ಹಾನಿಯುಂಟು ಮಾಡಿ ಸುಮಾರು 26,000/- ರೂಪಾಯಿ ಮೌಲ್ಯದ 3 ಕ್ಯಾಮರಾಗಳು ಮತ್ತು ಅಲ್ಲಿಯ ಸಲಕರಣೆಗಳನ್ನು ಕಳ್ಳತನ ಮಾಡಿರುವುದಾಗಿದೆ.

No comments:

Post a Comment