Wednesday, May 21, 2014

Daily Crime Reports 21-05-2014

ದೈನಂದಿನ ಅಪರಾದ ವರದಿ.
ದಿನಾಂಕ 21.05.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
1
ಮನೆ ಕಳವು ಪ್ರಕರಣ
:
2
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
1
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
1

























1.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ತೇಜ್ ಪಾಲ್ ಸುವರ್ಣ ರವರು ಸುಮಾರು 7 ವರ್ಷದಿಂದ ಮಂಗಳೂರು ನಗರದ ಬಿಜೈ ವಿಜಯಾ ಬ್ಯಾಂಕ ಕಟ್ಟಡದ 2ನೇ ಮಹಡಿಯಲ್ಲಿ ನಿರ್ಮಾಣಂ ಆರ್ಕಿಟೆಕ್ಚರ್ಆಂಡ್ಇಂಜಿನಿಯರರಿಂಗ ಸಂಸ್ಥೆಯನ್ನು ನಡೆಸುತ್ತಿದ್ದು ದಿನಾಂಕ 19-05-2014ರಂದು ರಾತ್ರಿ 8-30ಗಂಟೆಗೆ ಆಫೀಸ್ಗೆ ಬೀಗ ಹಾಕಿ ಮನೆಗೆ ಹೋಗಿದ್ದು ದಿನಾಂಕ 20-05-2014 ರಂದು ಬೆಳಿಗ್ಗೆ 9-00 ಗಂಟೆಗೆ ಬಂದು ನೋಡುವಾಗ ಆಫೀಸ್ನ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಒಡೆದು ಒಳ ಪ್ರವೇಶಿಸಿ ಆಫೀಸ್ನ ಒಳಗಡೆ ಇದ್ದ 2 ಲ್ಯಾಪ್ಟಾಪ್‌ 2 ಕಂಪ್ಯೂಟರ್ ಹಾಗೂ ಗಾಡ್ರೇಜನ ಲಾಕರ್ನಲ್ಲಿಟ್ಟ ನಗದು 67000/-ರೂ ವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ನಗದು ಸೇರಿ 1,90,000/-ರೂ ಆಗಬಹುದು.

2.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ ಬೆಸೆಂಟ್ ಕಾಂಪೆಕ್ಸ್ನ ಶಾಪ್ ನಂಬ್ರ 11 ರಲ್ಲಿ ಮನಿ ಪೋಲ್ಡ್ ಎಸೋಸಿಯೇಟ್ ಎಂಬ ಕಛೇರಿಯನ್ನು ಆರೋಪಿತರುಗಳಾದ 1. ವಿಜಯ್ ಕುಮಾರ್ ಶೆಟ್ಟಿ, 2. ಅಜಿತ್ ಕುಮಾರ್ 3. ಕಿಶೋರ್ 4. ಉದಯ್ ಬಲ್ಲಾಲ್ ಬಾಗ್ ನೇಯವರು ಹೊಂದಿದ್ದು ಈ ಕಛೇರಿಯಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಬಗ್ಗೆ ಸೋಲು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಗಿಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಟದ ಜೂಜಾಟವನ್ನು ಆಡುತ್ತಿದ್ದಾರೆ ಎಂಬ ಬಗ್ಗೆ ಪಿರ್ಯಾದಿದಾರರಾದ ಶ್ರೀ ವೆಲೆಟಿನ್ ಡಿ'ಸೋಜಾ, ಪೊಲೀಸ್ ನಿರೀಕ್ಷಕರು, ನಗರ ಅಪರಾಧ ಪತ್ತೆ ವಿಭಾಗ ಮಂಗಳೂರು ನಗರ ರವರಿಗೆ ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಡನೆ ಮೇಲಾಧಿಕಾರಿಗಳಿಂದ ಅನುಮತಿ ಪಡೆದು ಧಾಳಿ ನಡೆಸಿದ್ದಲ್ಲಿ ಕಛೇರಿಯಲ್ಲಿ ಹಾಜರಿದ್ದ 1ನೇ ಆರೋಪಿತರು ತನ್ನ ಮೊಬೈಲ್ಗೆ ಐಪಿಎಲ್ ಬೆಟ್ಟಿಂಗ್ ಬಗ್ಗೆ ಆಲ್ಲೈನ್ನಲ್ಲಿ ಬೆಟ್ಟಿಂಗನ್ನು ಕಟ್ಟುತ್ತಿದ್ದುದಾಗಿ 2ನೇ ಆರೋಪಿತರು ಬೆಟ್ಟಿಂಗ್ ಹಣವನ್ನು ಕಲೆಕ್ಷನ್ ಮಾಡುತ್ತಿದ್ದುದ್ದಾಗಿ ಮತ್ತು 3 ಮತ್ತು 4ನೇ ಆರೋಪಿತರು ಬೆಟ್ಟಿಂಗ್ ದಂಧೆಯನ್ನು ನಡೆಸುತ್ತಿದ್ದಾಗಿ ತಿಳಿದು ಬಂದಂತೆ ಹಾಜರಿದ್ದ ಆರೋಪಿತರುಗಳನ್ನು ದಸ್ತಗಿರಿ ಮಾಡಿ ಬೆಟ್ಟಿಂಗ್ ದಂಧೆಗೆ ಉಪಯೋಗಿಸಿದ ರಿಜಿಸ್ಟರ್ಗಳನ್ನು ಹಾಗೂ ನಗದು ರೂಪಾಯಿ 6,52,250.00 ಮತ್ತು ಸ್ಯಾಮ್ಸಂಗ್ ಕಂಪನಿಯ ಮೊಬೈಲನ್ನು ಸ್ವಾಧೀನ ಪಡಿಸಿ ಮಹಜರು ಹಾಗೂ ವರದಿ ಸಮೇತ 1ನೇ ಮತ್ತು 2ನೇ ಆರೋಪಿತರುಗಳನ್ನು ಹಾಜರುಪಡಿಸಿರುವುದಾಗಿದೆ.

3.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-03-2014 ರಂದು ಸಂಜೆ 3-50 ಗಂಟೆಯಿಂದ ದಿನಾಂಕ: 17-05-2014ರಂದು ಮಧ್ಯಾಹ್ನ 13-00 ಗಂಟೆಯ ಮಧ್ಯೆ   ಪಿರ್ಯಾದಿದಾರರಾದ ಶ್ರೀ ಹ್ಯಾರಿ ಡಿ'ಸೋಜಾ ರವರು ಮುಂಬೈಯಲ್ಲಿ ತಮ್ಮ ಮಗಳ ಮನೆಯಲ್ಲಿ ಇದ್ದ ಸಮಯ ಯಾರೋ ಕಳ್ಳರು ಸದ್ರಿಯವರ ಮನೆಯ ಹಿಂದಿನ ಬಾಗಿಲನ್ನು ಯಾವುದೋ ಹರಿತವಾದ ಆಯುಧವನ್ನು ಉಪಯೋಗಿಸಿ ಮುರಿದು ತೆರೆದು ಒಳ ಪ್ರವೇಶಿಸಿ ಮನೆಯಲ್ಲಿ ಬೆಲೆ ಬಾಳುವ ಸೊತ್ತುಗಳಿಗಾಗಿ ಜಾಲಾಡಿ, ಮನೆಯ ಒಂದನೇ ಮಹಡಿಯ ಕಪಾಟಿನಲ್ಲಿರಿಸಿದ್ದ ಸುಮಾರು 5,000/- ರೂ. ಬೆಲೆ ಬಾಳುವ HP ಕಂಪನಿಯ ಲ್ಯಾಪ್ ಟಾಪ್-1 ನ್ನು ಕಳವು ಮಾಡಿಕೊಂಡಿ ಹೋಗಿರುವುದಾಗಿದೆ.

4.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-05-2014 ರಂದು ಮದ್ಯಾಹ್ನ ಪಿರ್ಯಾದಿದಾರರಾದ ಶ್ರೀ ಇರ್ಷಾದ್ ರವರು ಹಾಗೂ ಆತನ ಸ್ನೇಹಿತ ರಿಜ್ವಾನ್ ಎಂಬವರು ಮಂಗಳೂರಿನ ಬಾರೊಂದರಲ್ಲಿ  ಊಟ ಮಾಡುತ್ತಿದ್ದಾಗ ಅಲ್ಲಿಗೆ ರಿಜ್ವಾನ್ ನ ಸ್ನೇಹಿತ ಶರೀಪ್ ಎಂಬವರು ಬಂದು ಮೂವರೂ ಊಟ ಮಾಡುತ್ತಿರುವ ಸಮಯ ಕಾಟಿಪಳ್ಳದ 5 ಮಂದಿ ಯುವಕರಾದ 1) ಜಾಕಿರ್ ಯಾನೆ ಜಾಕ್, 2) ಸಮದ್ ಮಾಸ್ತರ್, 3) ಜಮಾಲ್ @ ಮಟನ್ ಜಮಾಲ್, 4) ಖಾದರ್ ಯಾನೆ ಅಜ್ಮಿರ್ ಖಾದರ್ ಮತ್ತು 5) ಕಿಶೋರ್ @ ತುಷಾರ್ ಎಂಬವರು ಬಂದು ಶರೀಪ್ ನಿಗೆ ಹೊಡೆದಿದ್ದು ಇದರಿಂದ ಶರೀಪ್ ಹಾಗೂ ರಿಜ್ವಾನ್ ರವರು ಓಡಿ ಹೋಗಿದ್ದುದರಿಂದ ಪಿರ್ಯಾದಿಯನ್ನು ಮೇಲಿನ ಆಪಾದಿತರು ಹಿಡಿದುಕೊಂಡು ಶರೀಪ್ ಎಲ್ಲಿ ಹೇಳು ಅವನ ಮನೆ ಎಲ್ಲಿ ಎಂತ ಹೇಳುತ್ತಾ ಆರೋಪಿಗಳು ಬಂದ ವೇಗನಾರ್ ಕಾರಿನಲ್ಲಿ ಪಿರ್ಯಾದಿಯನ್ನು ಬಲತ್ಕಾರವಾಗಿ ಗಣೇಶಪುರದ ಲಾಡ್ಜ್ ಗೆ ಕರೆತಂದು ಶರೀಪ್ ಎಲ್ಲಿದ್ದಾನೆ ಎಂದು ಕೇಳುತ್ತಾ ಆರೋಪಿಗಳೆಲ್ಲರೂ ರಾತ್ರೆಯಿಂದ ಕೇಬಲ್ ವಯರ್, ಮರದ ತುಂಡು, ಹಾಗೂ ರಾಡ್ ನಿಂದ ಬೆನ್ನಿಗೆ, ಕೈಗೆ, ಕಾಲಿಗೆ ಹಲ್ಲೆ ನಡೆಸಿರುತ್ತಾರೆ. ಈ ಘಟನೆಗೆ ಕಾರಣ ಆರೋಪಿ ಜಾಕೀರ್ ಯಾನೆ ಜಾಕ್ ನಿಗೂ ಶರೀಪ್ ರವರಿಗೂ ಇರುವ ಹಣದ ತಕರಾರು ಆಗಿರುತ್ತದೆ.

5.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19.05.2014 ರಂದು ಪಿರ್ಯಾದಿದಾರರಾದ ಫೆಲ್ಸಿ ಡಿ'ಸೋಜಾ ರವರು ಕೆಲಸಕ್ಕೆ ಹೋಗುವರೇ ಕೆಎ-19-ಬಿ-8996 ನೇ ಸಿಟಿ ಬಸ್ಸ್‌‌ನಲ್ಲಿ ಕುಲಶೇಖರ ಕಡೆಯಿಂದ ವಾಮಂಜೂರು ಕಡೆಗೆ ಹೋಗುತ್ತಾ ಮಧ್ಯಾಹ್ನ ಸುಮಾರು 13.45 ಗಂಟೆಗೆ ಕುಡುಪು ಕಿರು ಸೇತುವೆ ಬಳಿ ತಲುಪಿದಾಗ ಸದ್ರಿ ಬಸ್ಸನ್ನು ಅದರ ಚಾಲಕ ಪ್ರವೀಣ್‌‌ ಎಡಕ್ಕೆ ಮತ್ತು ಬಲಕ್ಕೆ ಅತೀವೇಗವಾಗಿ ತಿರುಗಿಸಿದ ಪರಿಣಾಮ ಬಸ್ಸಿನಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರು ನಿಯಂತ್ರಣ ತಪ್ಪಿ ಎದುರು ಬಾಗಿಲಿನಿಂದ ಹೊರಗಡೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದ ಪರಿಣಾಮ ಅವರ ತಲೆಗೆ ರಕ್ತಗಾಯ, ಬಲಕೈಯ ಮಣಿಗಂಟಿಗೆ  ಮೂಳೆಮುರಿತದ ಗಾಯ ಮತ್ತು ಬೆನ್ನಿಗೆ, ಎಡಕಾಲಿಗೆ, ಬಲಕಾಲಿಗೆ ಹಾಗೂ ಬಲಕೈ ಬೆರಳುಗಳಿಗೆ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

No comments:

Post a Comment