Tuesday, May 27, 2014

Daily Crime Reports 26-05-2014

ದೈನಂದಿನ ಅಪರಾದ ವರದಿ.

ದಿನಾಂಕ 26.05.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24.05.2014 ರಂದು ರಾತ್ರಿ 8:30 ಗಂಟೆಯಿಂದ ದಿನಾಂಕ 25.04.2014 ರಂದು 07:00 ಗಂಟೆಯ ಮಧ್ಯೆ ಮಂಗಳೂರು ತಾಲೂಕು, ಮಂಜನಾಡಿ ಗ್ರಾಮದ ನಾಟೆಕಲ್ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀ ಶೇಖ್ ಅಶ್ರಫ್ ರವರ ಬಾಬ್ತು 'ನಜ ಎಲೆಕ್ಟ್ರೋನಿಕ್ಸ್‌' ಎಂಬ ಅಂಗಡಿಯ ಶಟರ್ನ ಬಲ ಭಾಗದ ಬೀಗವನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ ಅಂಗಡಿಯ ಒಳಗಿದ್ದ ಸುಮಾರು 24,200/- ರೂ. ಮೌಲ್ಯದ ಎಲೆಕ್ಟ್ರೋನಿಕ್ಸ್ಐಟಮನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

 

2.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರದಯಾದಿದಾರರಾದ ಶ್ರೀಮತಿ ಕ್ಲೊಟ್ಲೈಡ್ ರವರ ಗಂಡ ಎಡ್ವರ್ಡ್ ಡಿಸೋಜಾರವರು ದಿನಾಂಕ 24-05-2014 ರಂದು  ಮಂಗಳೂರು ತಾಲೂಕು ಪಡುಕೋಡಿ ಗ್ರಾಮದ ಕೂಳೂರು ಚರ್ಚನ ಬಳಿ ಬಸ್ ನಿಂದ ಇಳಿದು ಮನೆಯ ಕಡೆ ನಡೆದುಕೊಂಡು ಹೋಗುವರೇ ರಾತ್ರಿ ಸುಮಾರು 19-45 ಗಂಟೆಗೆ ರಸ್ತೆ ದಾಟುವಾಗ ಯಾವುದೋ ಅಪರಿಚಿತ ವಾಹನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಹೊಡೆದ ಪರಿಣಾಮ ಹಣೆಯ ಮೇಲೆ, ಕಣ್ಣಿನ ಭಾಗಕ್ಕೆ, ಬಲ ಎದೆ ಭಾಗಕ್ಕೆ ರಕ್ತಗಾಯವಾಗಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

3.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ ; 24-05-2014 ರಂದು 16-30 ಗಂಟೆಗೆ ಮಂಗಳೂರು ತಾಲೂಕು ಕಲ್ಲಮುಂಡ್ಕೂರು ಗ್ರಾಮದ ಬರ್ಕೆಬೆಟ್ಟು ಎಂಬಲ್ಲಿ ಕಿನ್ನಿಗೋಳಿ ಕಡೆಯಿಂದ ಮೂಡಬಿದ್ರೆ ಕಡೆಗೆ ಟೆಂಪೋ ಟ್ರಾವೆರ್ಲ್ಕೆಎ 17 ಬಿ 9523 ನೇಯದನ್ನು ಅದರ ಚಾಲಕ ಅಜಯ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮೋಟಾರು ಸೈಕಲ್ನಂಬ್ರ ಕೆಎ 19 ಇಜೆ 1821 ನೇಯದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಪಿರ್ಯಾದಿದಾರರಾದ ಶ್ರೀ ಪಿ ಕೆ ಥಾಮಸ್ಮಥಾಯಿಸ್ ರವರಿಗೆ ಬಲಕಾಲಿನ ಪಾದಕ್ಕೆ ರಕ್ತ ಬರುವ ಗುದ್ದಿದ ಗಾಯವಾಗಿ ಎಡ ಭುಜಕ್ಕೆ, ಎದೆ ಹಾಗೂ ಮುಖಕ್ಕೆ ಗುದ್ದಿದ ಗಾಯವಾಗಿದ್ದು ಸಹಸವಾರ ಕೊಂಡ್ರೆಡ್ಮಥಾಯಿಸ್ರವರಿಗೆ ಬಲ ಕೈಯ ಮೊಣಗಂಟಿನ ಕೆಳಗೆ ರಕ್ತ ಬರುವ ಗುದ್ದಿದ ಗಾಯವಾಗಿ ಬಲಕಾಲಿ ಹೆಬ್ಬೆರಳು ಹಾಗೂ ಎಡ ಕೈಗೆ ಗುದ್ದಿದ ಗಾಯವಾಗಿದ್ದು ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ಮುಲ್ಲರ್ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ  ದಾಖಲಾಗಿರುವುದಾಗಿದೆ.

 

4.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-05-2014 ರಂದು ಬೆಳಿಗ್ಗೆ 10-15 ಗಂಟೆಗೆ ಸಮಯಕ್ಕೆ ಮಂಗಳೂರು ತಾಲೂಕು, ಕುತ್ತಾರು ಸಭಾಷ್ನಗರ ಎಂಬಲ್ಲಿ ಪಿರ್ಯಾದುದಾರರಾದ ಶ್ರೀ ಪ್ರವೀಣ್ ಪೂಜಾರಿ ರವರು ತನ್ನ ಮನೆಯ ಎದುರುಗಡೆ ಗೇಟಿನ ಬಳಿ ರಸ್ತೆ ಬದಿಯಲ್ಲಿ ತನ್ನ ಮಗಳು ರಕ್ಷಿತಾಳೊಂದಿಗೆ ಮತ್ತು ನೆರೆಮನೆಯ ಪ್ರಭಾಕರ ಮತ್ತು ಅವರ ಮಗಳು ನಿಹಾಳ ರವರು ನಿಂತುಕೊಂಡಿದ್ದ ಸಮಯ ಸುಭಾಷ್ನಗರ ಕಡೆಯಿಂದ ಸೈಟ್ಕಡೆಗೆ ಅನಿಷಾಳು ಕೆಎ 19 ಇಕೆ 2036 ನೇ ಆಕ್ಟಿವ್ಹೊಂಡಾದಲ್ಲಿ ಇರ್ಷಾದ್‌‌ನನ್ನು ಸಹಸವಾಹನ್ನಾಗಿ ಕುಳ್ಳಿರಿಸಿಕೊಂಡು ಅತೀವೇಗ ಹಾಗು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಕ್ಷಿತಾಳಿಗೆ ಮತ್ತು ಕುಮಾರಿ ನಿಹಾಳ್ಗೆ ಡಿಕ್ಕಿ ಹೊಡೆದಿರುತ್ತಾಳೆ. ಈ ಅಪಘಾತದಿಂದ ರಕ್ಷಿತಾಳ ಬಲ ಕಾಲಿನ ಮೊಣಗಂಟಿಗೆ ಗುದ್ದಿಗಾಯ ಮತ್ತು ನಿಹಾಳಳ ತಲೆಯ ಬಲಬದಿಗೆ ಗುದ್ದಿದ ಗಾಯ, ಮೊಣಗಂಟಿಗೆ ಮತ್ತು ಬಲಕೈ ಕಿರುಬೆರಳಿಗೆ ಗಾಯವಾಗಿರುತ್ತದೆ. ಗಾಯಾಳಿಬ್ಬರು ಕೆ.ಎಸ್ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ.

 

5.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-05-2014 ರಂದು 10-30 ಗಂಟೆಗೆ ಪಿರ್ಯಾದುದಾರರಾದ ಕು. ಅನಿಷಾ ರವರು ತನ್ನ ಮಾವನ ಮಗನಾದ ಇರ್ಷಾದ್ಎಂಬವರಲ್ಲಿ ಆಕ್ಟಿವ್ಹೊಂಡಾ ದ್ವಿಚಕ್ರ ವಾಹನವನ್ನು ಸವಾರಿ ಮಾಡುವರೇ, ಮಂಗಳೂರು ತಾಲೂಕು, ಮುನ್ನೂರು ಗ್ರಾಮದ ಸುಭಾಷ್ನಗರ ಎಂಬಲ್ಲಿ  ಕಲಿಯುತ್ತಿದ್ದು. ಪಿರ್ಯಾದುದಾರರು ಸವಾರಿ ಮಾಡುತ್ತಿದ್ದ ಅಕ್ಟಿವ್ಹೊಂಡಾವು  ರಸ್ತೆ ದಾಟುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆದು ಆ ಮಗು ಗಾಯಗೊಂಡಿರುತ್ತದೆ. ಪಿರ್ಯಾದುದಾರರು ಕೂಡ ಗಾಯಗೊಂಡಿದ್ದು, ಆ ಸಮಯ ಪ್ರಭಾಕರ ಎಂಬವರು ಅಲ್ಲಿಗೆ ಬಂದು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿಯನ್ನು ದೂಡಿ ಹಾಕಿ ಜೀವ ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಆರೋಪಿಗಳಾದ ಪ್ರಭಾಕರ ಪ್ರವೀಣ್‌, ಅನಿಲ್ಎಂಬವರು ಇರ್ಷಾದ್ನನ್ನು ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಹಲ್ಲೆ ನಡೆಸಿರುತ್ತಾರೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22.05.2014 ರಂದು ಬೆಳಿಗ್ಗೆ 05.30 ಗಂಟೆಗೆ ಕಸ್ಟಂಮ್ಸ್‌‌‌ ಕಾಲೋನಿ  ಅಮೃತನಗರ ವಾಮಂಜೂರು ಮಂಗಳೂರು ಎಂಬಲ್ಲಿ ತನ್ನ ಮನೆಯಿಂದ ಪಿರ್ಯಾಧಿದಾರರಾದ ಶ್ರೀ ವಿಲಿಯಂ ಡಿ'ಸೋಜಾ ರವರು ಹೊರಡುವ ವೇಳೆ ಅವರ ಹೆಂಡತಿ ಮನೆಯ ಕೀಯನ್ನು ಪಿರ್ಯಾಧಿದಾರರಲ್ಲಿ ಕೊಟ್ಟು  ನಾನು ಒಂದು ಹೆಂಗಸಿನ ಜೊತೆ ಪ್ರಾರ್ಥನೆಗೆ ಹೋಗುತ್ತೇನೆ  ಎಂದು ಹೇಳಿ ಮನೆಯಿಂದ ಹೋದವರು ರಾತ್ರಿ 8.00 ಗಂಟೆಗೆ ಪಿರ್ಯಾಧಿದಾರರು ಮನೆಗೆ ಮರಳಿದಾಗಲು ವಾಪಾಸು ಬಂದಿಲ್ಲವಾಗಿದ್ದು ಅವರು ಎಲ್ಲಿಗೆ ಪ್ರಾರ್ಥನೆಗೆ ಹೋಗಿರುವುದಾಗಿ ತಿಳಿದಿಲ್ಲವಾಗಿದ್ದರಿಂದ ಸದ್ರಿಯವರ ಬಗ್ಗೆ ಆಸುಪಾಸಿನಲ್ಲಿ ವಿಚಾರಿಸಿದಲ್ಲಿ ಯಾವುದೇ ಮಾಹಿತಿ ತಿಳಿದು ಬಂದಿಲ್ಲವಾಗಿದ್ದು ಆಕೆಯ ಮೊಬೈಲ್‌‌ ಫೋನ್‌‌ ಕೂಡಾ ನೋಟ್ರೀಚಬಲ್‌‌ ಇರುವುದಾಗಿದೆ. ಕಾಣೆಯಾದ ಮಹಿಳೆಯ ವಿವರ : ಹೆಸರು: ನ್ಯಾನ್ಸಿ ಡಿ'ಸೋಜಾ, ಪ್ರಾಯ: 54 ವಯಸ್ಸು, ಮೈ ಬಣ್ಣ: ಎಣ್ಣೆ ಕೆಂಪು ಎತ್ತರ: 5.3, ಗುರುತು: ಹೊಟ್ಟೆಯಲ್ಲಿ ಆಪರೇಶನ್‌‌ ಆದ ಗುರುತು ಇದೆ, ತಲೆಗೂದಲು, ಮುಂಬದಿಯಲ್ಲಿ ಸ್ವಲ್ಪ ಕಂದು ಬಣ್ಣ ಇರುತ್ತದೆ. ಭಾಷೆ: ಕನ್ನಡ, ಕೊಂಕಣಿ, ಹಿಂದಿ ಮಾತಾಡುತ್ತಾರೆ.

No comments:

Post a Comment