Thursday, May 1, 2014

Daily Crime Reports 01-05-2014

ದೈನಂದಿನ ಅಪರಾದ ವರದಿ.

ದಿನಾಂಕ 01.05.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

4

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-04-2014 ರಂದು ಸಮಯ ಸುಮಾರು 16-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸುರೇಖಾ ಭಟ್ ರವರು ಮಂಗಳೂರು ನಗರದ ಪದುವಾ ಬಳಿಯ ಬೆಥನಿ ಕಾನ್ವೆಂಟ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಬೆಥನಿ ಕಾನ್ವೆಂಟ್ ಬಳಿ ತಲುಪಿದಾಗ  ಸುಮಾರು 20-25 ವರ್ಷ ಪ್ರಾಯದ ಯಾರೋ ಒಬ್ಬ ಅಪರಿಚಿತ ಯುವಕ ಪಿರ್ಯಾದಿದಾರರ ಹಿಂದಿನಿಂದ ಬಂದು ಪಿರ್ಯಾದಿದಾರರ ಕುತ್ತಿಗೆಗೆ ಏಕಾಏಕಿ ಕೈಹಾಕಿ ಪಿರ್ಯಾದಿದಾರರು ಕುತ್ತಿಗೆಗೆ ಧರಿಸಿದ್ದ ಸುಮಾರು 40 ಗ್ರಾಂ ತೂಕವಿರುವ ತಾಳಿ ಸಹಿತ ಚಿನ್ನದ ಕರಿಮಣಿ ಸರವನ್ನು ಬಲತ್ಕಾರವಾಗಿ ಕಿತ್ತು ಲೂಟಿ ಮಾಡಿಕೊಂಡು ಹೋಗಿದ್ದು, ಲೂಟಿಯಾಗಿರುವ ಕರಿಮಣಿ ಸರದ ಅಂದಾಜು ಮೌಲ್ಯ ರೂ. 1,00,000/- ಆಗಬಹುದು.

 

2.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 29-04-2014 ರಂದು 06-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಶ್ವಿನ್ ಪ್ರವಿಣ್ ತರಾವೋ ರವರು ಅವರ ಬಾಬ್ತು ಮೋಟಾರು ಸೈಕಲ್ನಂ ಕೆಎ 19 ಇಜೆ 2173 ನೇದರಲ್ಲಿ ಅನಿತಾ ಲೋಬೋ ಎಂಬವರನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಗುರುಪುರ ಕೈಕಂಬ ಕಡೆಯಿಂದ ಉಡುಪಿ ತಾಲೂಕು ಮೂಡುಬೆಳ್ಳಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಮಂಗಳೂರು ತಾಲೂಕು ತೋಡಾರು ಗ್ರಾಮದ ಕಲ್ಸಂಕ ಎಂಬಲ್ಲಿ ತಲುಪಿದಾಗ ಎದುರುಗಡೆಯಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಕೆಎ 19 ಡಿ4966 ನೇ ಟಿಪ್ಪರ್ಲಾರಿ ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮತ್ತು ಸಹಸವಾರರು ಮೋಟಾರು ಸೈಕಲ್ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕೈ ಮತ್ತು ಬಲಕಾಲಿಗೆ ತರಚಿದ ಗಾಯವಾಗಿದ್ದು ಹಾಗೂ ಸಹಸವಾರಳಾದ ಅನಿತಾ ಲೋಬೋ ರವರಿಗೆ ಎಡಕಾಲಿಗೆ ಮತ್ತು ತಲೆಗೆ ರಕ್ತಗಾಯ ಹಾಗೂ ಮೈಕೈ ಕಾಲುಗಳಿಗೆ ಗುದ್ದಿದ ನೋವುಂಟಾಗಿದ್ದು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ಮುಲ್ಲರ್ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪಿರ್ಯಾದಿದಾರರಿಗೆ ಪ್ರಥಮ ಚಿಕಿತ್ಸೆ ನೀಡಿ ಸಹಸವಾರಳಾದ ಅನಿತಾ ಲೋಬೋ ಎಂಬವರನ್ನು ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

3.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ ; 30-04-2014 ರಂದು 11-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಬಿಫಾತಿಮಾ ರವರು ಅವರ ಮನೆಯ ಅಡುಗೆ ಕೋಣೆಯ ಹೊರಗಡೆಯ ತೆರದ ಕೋಣೆಯಲ್ಲಿ ವಾಷಿಂಗ್ಮಿಷನ್ನಲ್ಲಿ ಬಟ್ಟೆಯನ್ನು ಹಾಕಿ ನೋಡುತ್ತಿದ್ದ ಸಮಯಕ್ಕೆ ಸುಮಾರು 25 ವರ್ಷದ ಸಾಧಾರಣ ಶರೀರವುಳ್ಳ ಕಪ್ಪು ಬಣ್ಣದ ಬನಿಯಾನ್‌‌ ಧರಿಸಿ, ತಿಳಿ ಕೆಂಪು ಬಣ್ಣದ ಟೇವಲ್ನ್ನು ಉಟ್ಟುಕೊಂಡು, ತಲೆಗೆ ಟೇವಲ್ನ್ನು ಸುತ್ತಿಕೊಂಡ ವ್ಯಕ್ತಿಯು ಬಂದು ಪಿರ್ಯಾದಿದಾರರ ತಲೆಯ ಹಿಂಬದಿಗೆ ಯಾವುದೋ ಕಾರಣದಿಂದ ಮರದ ಸೊಂಟೆಯಿಂದ ಹಲ್ಲೆ ನಡೆಸಿ ಪರಾರಿಯಾಗಿರುವುದಾಗಿದೆ

 

4.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 30-04-2014 ರಂದು ಬೆಳಿಗ್ಗೆ 09-30 ಗಂಟೆ ಸಮಯಕ್ಕೆ  ಪಿರ್ಯಾದಿದಾರರಾದ ಶ್ರೀ ಶೇಖರ ಪೂಜಾರಿ ರವರ ಹೆಂಡತಿಯ ತಂದೆ ಸಂಜೀವ ಪೂಜಾರಿ ಪ್ರಾಯ 73 ವರ್ಷ ಇವರು ಮನೆಯಿಂದ ದನ ಮೇಯಿಸಲು ಹೋದವರನ್ನು ಮಂಗಳೂರು ತಾಲೂಕು ಪಡುಕೊಣಾಜೆ ಗ್ರಾಮದ ನೂಯಿ ಪಾರೊಟ್ಟು ಎಂಬಲ್ಲಿ ಸುಂದರ ಪೂಜಾರಿ ಎಂಬವರ ಕಾಡು ಪ್ರದೇಶದಲ್ಲಿ ಬೆಳಿಗ್ಗೆ 09-30 ಗಂಟೆಯಿಂದ 15-00 ಗಂಟೆಯ ನಡುವೆ ಯಾರೋ ದುಷ್ಕರ್ಮಿಗಳು ಯಾವುದೋ ಕಾರಣದಿಂದ ಹರಿತವಾದ ಆಯುಧದಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾರೆ.

 

5.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-04-2014ರಂದು ಮಂಗಳೂರು ನಗರದ ದೇರೆಬೈಲು ಚರ್ಚ್ ಎದುರು ಬದಿಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿದ್ದ ಸ್ಥಳದ ಎತ್ತರದಲ್ಲಿದ್ದ ಮಣ್ಣಿನ ತಳ ಭಾಗವನ್ನು ಕಾಮಗಾರಿ ಕೆಲಸ ನಡೆಸುತ್ತಿದ್ದ ಡೆಂಜಿಲ್ ಫೆರ್ನಾಂಡೀಸ್ ಮತ್ತು ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಾನ್ ಎಂಬವರು ಯಾವುದೇ ರೀತಿಯ ಮುಂಜಾಗರೂಕತೆ ಹಾಗೂ ಭದ್ರತೆ ವಹಿಸದೇ ಸಮರ್ಪಕವಾದ ಮಾಹಿತಿ ನೀಡದೇ ನೆಲವನ್ನು ಸಮತಟ್ಟು ಮಾಡಿಸುತ್ತಿದ್ದ ಸಮಯ ಮಧ್ಯಾಹ್ನ ಸುಮಾರು 12-45 ಗಂಟೆ ಸಮಯಕ್ಕೆ ಎತ್ತರವಾದ ಸ್ಥಳದ ಮಣ್ಣು ಕೆಳಗೆ ಕುಸಿದು ಬಿದ್ದು ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ  ಸ್ವಾಮಿ ನಾಯ್ಕ್ ಹಾಗೂ ಶಿವ ನಾಯ್ಕ್ ಎಂಬವರಿಗೆ ಸದಾ ಗಾಯ ಹಾಗೂ ಕಾಶಪ್ಪ ಎಂಬವರು ಸ್ಥಳದಲ್ಲಿ ಮೃತಪಟ್ಟಿರುವುದಾಗಿದೆ.

 

6.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-04-2014 ರಂದು ಪಿರ್ಯಾದುದಾರರಾದ ಶ್ರಿ ಸುರೇಂದ್ರರವರು ತನ್ನ ಸ್ನೇಹಿತ ಲಿಂಗಪ್ಪ ಎಂಬವರ ಜೊತೆ ಕೆಎ-19-ವೈ-1375 ನಂಬ್ರದ ಮೋಟಾರ್ ಸೈಕಲಿನಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು ಪಂಜಿಮೊಗರು ಕಡೆಯಿಂದ ಕೂಳೂರು ಕಡೆಗೆ ಹೋಗುತ್ತಾ ಸಂಜೆ 06-15 ಗಂಟೆಗೆ ಕೂಳೂರು ಬಳಿಯ ಅರವಿಂದ ಗ್ಯಾರೇಜ್ ಬಳಿ ತಲುಪಿದಾಗ ಎದುರುಗಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಹೋಗುತ್ತಿದ್ದ ಕೆಎ-19-ಡಿ-8067 ನಂಬ್ರದ ಟಿಪ್ಪರ್ ಚಾಲಕನು ತನ್ನ ವಾಹನವನ್ನು ಯಾವುದೇ ಸಂಜ್ಞೆ ಸೂಚನೆ ನೀಡದೇ ಒಮ್ಮೆಲೇ ಬಲ ಬದಿಯ ರಸ್ತೆಗೆ ತಿರುಗಿಸಿದ ಪರಿಣಾಮ ಮೋಟಾರ್ ಸೈಕಲ್ ಟಿಪ್ಪರ್ ಲಾರಿಗೆ ಗುದ್ದಿ ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ಲಿಂಗಪ್ಪನಿಗೆ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, .ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

7.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಇಂತಿಯಾಜ್ ಶೇಖ್ ರವರ ತಮ್ಮನಾದ ಜುನೈದ್ ಶೇಖ್ ಎಂಬವರು ದಿನಾಂಕ 29-04-2014 ರಂದು ಬೆಳಿಗ್ಗೆ 9-30 ಗಂಟೆಗೆ ಮನೆಯಿಂದ ಹೊರಟು ಅವರು ಕೆಲಸ ಮಾಡುವ ಮಂಗಳೂರು ಸಿಟಿ ಸೆಂಟರ್ ನಲ್ಲಿರುವ ಲೈಫ್ ಸ್ಟೈಲ್ ಎಂಬ ಬಟ್ಟೆ ಅಂಗಡಿಗೆ ಹೋಗಿ, ರಾತ್ರಿ ಸುಮಾರು 7-00 ಗಂಟೆಗೆ ಫಿರ್ಯಾದುದಾರರ ಮಾವನವರಾದ ಮಹಮ್ಮದ್ ಸುಹೈಲ್ ರವರಿಗೆ ಫೋನ್ ಮಾಡಿ" ತನ್ನ ಎಟಿಎಂ ಕಾರ್ಡನ್ನು ಮಾರ್ಗನ್ ಗೇಟ್ ನಲ್ಲಿರುವ ಸಂಜಯ್ ರವರ ಬೇಕರಿಯಲ್ಲಿ ಕೊಟ್ಟಿರುತ್ತೇನೆ. ಸಂಬಳ ಆದ ಮೇಲೆ ಅದರಿಂದ 1500/- ರೂ ಹಣ ವನ್ನು ತನ್ನ ಕಂಪೆನಿಗೆ ಕೊಡಿ ಎಂದು ಹೇಳಿ ಎಟಿಎಂ ಕಾರ್ಡ್ ನ್ನು ಅಂಗಡಿಯಲ್ಲಿ ಕೊಟ್ಟು ಹೋದವರು, ಫೋನ್ ಸಂಪರ್ಕಕ್ಕೂ ಸಿಗದೇ, ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.

 

8.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-04-2014 ರಂದು ಮದ್ಯಾಹ್ನ 12-30 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ಪ್ರಭಾಕರ ಸೋನ್ಸ್ ರವರು ಅತ್ತಾವರ ಮೆಸ್ಕಾಂ ಕಚೇರಿಯ ಒಳಗಿರುವ ವಿಧ್ಯುತ್ ಮಾಪಕ ವಿಭಾಗದಲ್ಲಿ ಕುಳಿತ್ತಿದ್ದ ಸಮಯ ಅಲ್ಲಿಗೆ ಬಂದ ಆರೋಪಿ ಲಕ್ಷ್ಮೀ ನಾರಾಯಣ ಎಂಬವರು ಫಿರ್ಯಾದಿದಾರರನ್ನು ಉದ್ದೇಶಿಸಿ "ನಿನಗೆ ಇಲ್ಲಿ ಏನು ಕೆಲಸ?" ಎಂದು ಅವಾಚ್ಯ ಶಬ್ದಗಳಿಂದ ಬೈದು ಕಾಲಿನಿಂದ ಶೂ ವನ್ನು ತೆಗೆದು ಅದರಿಂದ ಫಿರ್ಯಾದಿದಾರರ ತಲೆಗೆ ಎರಡು ಮೂರು ಬಾರಿ ಹೊಡೆದಾಗ ಅಲ್ಲಿದ್ದ ಸಾರ್ವಜನಿಕರು  ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದಾಗ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಅಲ್ಲಿದ್ದ ಫಿರ್ಯಾದುದಾರರ ಸ್ನೇಹಿತ ವಿಶ್ವನಾಥ ಶೆಟ್ಟಿ ಹಾಗೂ ಸತೀಶ್ ಕಾಮತ್ ಎಂಬವರಿಗೂ ಕೂಡಾ ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿರುತ್ತಾನೆ. ಬಳಿಕ ಅಲ್ಲಿ ಸೇರಿದ್ದ ಸಾರ್ವಜನಿಕರು ಫಿರ್ಯಾದುದಾರರನ್ನು ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.

 

9.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-04-2014 ರಂದು ಮದ್ಯಾಹ್ನ ಸುಮಾರು 12-30 ಗಂಟೆಯ ವೇಳೆಗೆ ಪ್ರಕರಣದ ಪಿರ್ಯಾದಿದಾರರಾದ ಶ್ರೀ ಇಬ್ರಾಹಿಂ ಪಿ.ಎಸ್. ರವರು ಅತ್ತಾವರದ ಕಾಸಾಗ್ರಾಂಡ  ದ ಹಿಂಬದಿಯಲ್ಲಿರುವ ಐವರಿ ಅಪಾರ್ಟ್ ಮೆಂಟ್ ನ ಕಚೇರಿಯಲ್ಲಿರುವ ವೇಳೆ, ಪಿರ್ಯಾದಿದಾರರ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ  ಅಶ್ವತ್ ಎಂಬವರು ಕೆಲಸದ ವಿಷಯದಲ್ಲಿ ವಿನಾ: ಕಾರಣ  ತಗಾದೆ ತೆಗೆದು ಅವಾಚ್ಯ ಶಬ್ದಗಳಿಂದ ಬೈದು "ನೀನು ಇವತ್ತು ಕೆಲಸವನ್ನು ಪೂರ್ತಿ ಮಾಡದೇ ಹೋದರೆ, ನಿನ್ನನ್ನು ಬಿಡುವುದಿಲ್ಲ" ಎಂಬುದಾಗಿ ಕಾಲರ್ ಪಟ್ಟಿ ಹಿಡಿದು ಪಿರ್ಯಾದುದಾರರ ಮುಖಕ್ಕೆ ಕೈಗಳಿಂದ ಹೊಡೆದನು. ಈ ವಿಷಯವನ್ನು ಪಿರ್ಯಾದಿದಾರರು ಅವರ ಮನೆಯವರಿಗೆ ತಿಳಿಸಿದಂತೆ, ಅವರುಗಳು ಬಂದು ಆರೋಪಿ ಅಶ್ವತ್ ರವರಲ್ಲಿ ವಿಚಾರಿಸಿದಾಗ, ಅಶ್ವತ್ ಮತ್ತು ಆತನ 6 ಮಂದಿ ಬೆಂಬಲಿಗರು ಕಬ್ಬಿಣದ ರಾಡ್, ಕಲ್ಲು, ಹೆಲ್ಮೆಟ್, ಮರದ ಸಲಾಕೆಯಿಂದ ಪಿರ್ಯಾದಿದಾರರಿಗೆ ಹಾಗೂ ಅವರ ಸಂಬಂಧಿಕರಿಗೆ ಹೊಡೆದಿರುತ್ತಾರೆ. ಅಲ್ಲದೇ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬದಾಗಿ ಜೀವ ಬೆದರಿಕೆ ನೀಡಿರುವುದು  ಅಲ್ಲದೇ  ಈ ಸಮಯ ಪಿರ್ಯಾದಿದಾರರ ಕಿಸೆಯಲ್ಲಿದ್ದ ರೂಪಾಯಿ 3,000/- ಹಣವು ಎಲ್ಲೋ ಬಿದ್ದು ಹೋಗಿರುತ್ತದೆ.

 

10.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-04-2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀ ವಿಶ್ವನಾಥ್ ದೇವಾಡಿಗ ರವರು ಕುತ್ತೆತ್ತೂರು ಗ್ರಾಮದ ಬಾಜಾವು ಹಾಲಿನ ಡೈರಿಗೆ ತೆರಳಿ ಹಾಲು ಖರೀದಿ ಮಾಡಿಕೊಂಡು ವಾಪಾಸು ಅವರ ಮನೆಗೆ ಬರುತ್ತಿರುವ ಸಮಯ ಬೆಳಿಗ್ಗೆ 07-00 ಗಂಟೆಗೆ ಅವರ ಹಿಂದಿನಿಂದ ಉಮೇಶ್ ಪೂಜಾರಿಯವರು ಕೆ ಎ 19-ಇಕೆ-4713 ನೇ ಆಕ್ಟಿವಾ ಹೋಂಡಾ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಳನ್ನಾಗಿ ರೇಷ್ಮಾ ಪರ್ನಾಂಡಿಸ್ ಎಂಬವರನ್ನು ಕುಳ್ಳಿರಿಸಿಕೊಂಡು ಅತೀವೇಗವಾಗಿ ಚಲಾಯಿಸಿಕೊಂಡು ಬರುತ್ತಾ ಪಿರ್ಯಾದಿದಾರರ ಮನೆಯ ಬಳಿಯ ಮಣ್ಣು ರಸ್ತೆಯ ಬಲ ಬದಿಯಲ್ಲಿ ದ್ವಿಚಕ್ರ ವಾಹನದೊಂದಿಗೆ ಸ್ಕಿಡ್ಡಾಗಿ ಮಗುಚಿ ಬಿದ್ದಿದ್ದು ಪರಿಣಾಮ ಹಿಂಬದಿ ಸವಾರಳಾಗಿ ಕುಳಿತಿದ್ದ ರೇಷ್ಮಾ ಪರ್ನಾಂಡಿಸ್ ರವರು ಹಿಮ್ಮುಖವಾಗಿ ಬಿದ್ದು ಅವರ ತಲೆಯ ಬಲ ಭಾಗಕ್ಕೆ ರಕ್ತಗಾಯವಾಗಿದ್ದು ಕೂಡಲೇ ಪಿರ್ಯಾದಿದಾರರು ಕೆಳಗೆ ಬಿದ್ದವರನ್ನು ಉಪಚರಿಸಿ ಅದೇ ದಾರಿಯಲ್ಲಿ ಬರುತ್ತಿದ್ದ ಬೊಲೆರೊ ವಾಹನದಲ್ಲಿ ಮಿಸ್ಕಿತ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೊಳಪಡಿಸಿ ಬಳಿಕ ರೇಷ್ಮಾ ಪರ್ನಾಂಡಿಸ್ ರವರನ್ನು ಅವರ ತಂದೆ ಮತ್ತು ಉಮೇಶ್ ಪೂಜಾರಿಯವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

11.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-04-2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀ ಮೈಕಲ್ ಆಂಟೋನಿ ರವರು ಹಾಲು ತರಲು ಕುಲಶೇಖರಕ್ಕೆ ಬಂದು ವಾಪಾಸು ರಾ.ಹೆ 169 ರಲ್ಲಿ ನೀರುಮಾರ್ಗ ಕಡೆಗೆ ಹೋಗುತ್ತಾ ಬೆಳಿಗ್ಗೆ ಸುಮಾರು 7-15 ಗಂಟೆಗೆ ಬೈತುರ್ಲಿ ಜಂಕ್ಷನ್ಗೆ ತಲುಪಿದಾಗ ಅವರ ಕಾರಿನ ಮುಂದುಗಡೆಯಿಂದ ಅತೀವೇಗವಾಗಿ ಹೋಗುತ್ತಿದ್ದ ಕೆಎ 19 ಎನ್‌ 7528 ಟ್ರಾಕ್ಸ್ಜೀಪನ್ನು ಅದರ ಚಾಲಕನು ಯಾವುದೇ ಮುನ್ಸೂಚನೆ ನೀಡದೆ ನೀರುಮಾರ್ಗ ಕಡೆಗೆ ಒಮ್ಮೆಲೇ ತಿರುಗಿಸಿದಾಗ ಕುಡುಪು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬೈಕ್ಸವಾರನು ತನ್ನ ಬೈಕನ್ನು ನಿಯಂತ್ರಿಸಲಾಗದೆ ಟ್ರಾಕ್ಸ್ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ಸವಾರನು ಬೈಕ್ಸಮೇತ ರಸ್ತೆಗೆ ಬಿದ್ದು ಆತನ ತಲೆಗೆ ಗಂಭೀರಗಾಯಗೊಂಡಿದ್ದರಿಂದ ಪಿರ್ಯಾದಿದಾರರು ಮತ್ತು ಇತರರು ಸೇರಿ ಯಾವುದೋ ಒಂದು ಅಟೋರಿಕ್ಷಾದಲ್ಲಿ ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

12.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-04-2014 ರಂದು ಪಿರ್ಯಾದಿದಾರರಾದ ಶ್ರೀ ಪರುಶುರಾಮ ಗೌಡ ಪಾಟೀಲಾ ರವರು, ಸುಭಾಶ್ಮತ್ತು ಇತರರು ಬೋಂದೇಲ್ನ ವುಡ್ವಿಲ್ಲಾ ಎಂಬ ಬಹುಮಹಡಿ ಕಟ್ಟಡದ 5ನೇ ಮಹಡಿಯಲ್ಲಿ ಕೆಲಸಮಾಡುತ್ತಿದ್ದಾಗ ಬೆಳಿಗ್ಗೆ ಸುಮಾರು 11-30 ಗಂಟೆ ವೇಳೆಗೆ ಸುಭಾಶ್ನು ಲಿಪ್ಟ್ಡಕ್ಬಳಿ ಆಯತಪ್ಪಿ ಬೆಸ್ಮೆಂಟ್ಪ್ಲೋರಿಗೆ ಬಿದ್ದ ಪರಿಣಾಮ ಅವನ ತಲೆಗೆ ರಕ್ತ ಗಾಯವಾಗಿದ್ದು ಆತನನ್ನು ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕೂಡಲೇ ಎ.ಜೆ ಆಸ್ಪತ್ರೆಗೆ ಕೊಂಡೋಯ್ದು ದಾಖಲಿಸಿದರೂ ಪ್ರಯೋಜನವಾಗದೇ ಮದ್ಯಾಹ್ನ 1-10 ಗಂಟೆಗೆ ಸುಭಾಶನು ಮೃತಪಟ್ಟಿರುವುದಾಗಿದೆ. ಮೃತರು ಕೆಲಸ ಮಾಡುತ್ತಿದ್ದ ಬಹುಮಹಡಿ ಕಟ್ಟಡದ ಗುತ್ತಿಗೆದಾರರಾದ ಮಹಾಬಲ ಎಂ ಎಂಬವರು ಕೆಲಸಮಾಡುವ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮವನ್ನು ಅಳವಡಿಸದೇ ಇದ್ದ ಕಾರಣ ಸುಭಾಶನು 5ನೇ ಮಹಡಿಯಿಂದ ಕೆಳಗಡೆ ಬಿದ್ದು ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ಉಂಟಾದ ತೀವ್ರ ಗಾಯಗಳಿಂದ ಮೃತಪಟ್ಟಿರುವುದಾಗಿರುತ್ತದೆ.

 

No comments:

Post a Comment