Tuesday, May 13, 2014

Daily Crime Reports 08-05-2014

ದೈನಂದಿನ ಅಪರಾದ ವರದಿ.

ದಿನಾಂಕ 08.05.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-04-2001 ರಂದು ಪಿರ್ಯಾದಿದಾರರಾದ ಶ್ರೀಮತಿ ಶ್ರೀಲತಾ ರವರು ಸದಾಶಿವ ಕೆ.ಎಸ್ ಎಂಬುವವರೊಂದಿಗೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದು, 6 ವರ್ಷದ ಗಂಡು ಮಗು ಇರುತ್ತದೆ. ಈ ಮೊದಲು ತನ್ನ ಗಂಡ ನ್ಯಾಯಾಲಯದಲ್ಲಿ ಡೈವೋರ್ಸ   ಕೇಸ್ ಹಾಕಿ ಮೋಸ ಮಾಡಿ ತನಗೆ ಡೈವೋರ್ಸ್ ಮಾಡಿದ್ದು, ಈ ಬಗ್ಗೆ ತಾನು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ, ಮರು ತನಿಖೆಯಲ್ಲಿ ವಿಚ್ಛೇದನ ರದ್ದಾಗಿರುತ್ತದೆ. ತನ್ನ ಗಂಡ ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡು ತನ್ನೊಂದಿಗೆ ಹಾಗೂ ಮಗನೊಂದಿಗೆ ಸರಿಯಾಗಿ ಜೀವನ ನಡೆಸುತ್ತೇನೆಂದು ಎಲ್ಲಾ ಖರ್ಚುಗಳನ್ನು ಭರಿಸುತ್ತೇನೆಂದು ಕೋರ್ಟ್ ನಲ್ಲಿ ಖುದ್ದಾಗಿ ಹೇಳಿ, ಈಗ ತನ್ನನ್ನು ಮಗನ್ನು ನೋಡದೇ ಯಾವುದೇ ಖರ್ಚು ಮಾಡದೇ ತುಂಬಾ ತೊಂದರೆ ಮಾಡುತ್ತಿದ್ದು, ತನ್ನ ಗಂಡ ಗಾಯತ್ರಿ ಎಂಬುವವರನ್ನು ಮದುವೆಯಾಗಿ ಸೇವಾ ಪುಸ್ತಕದಲ್ಲಿ ಅವಳ ಹೆಸರನ್ನು ದಾಖಲಿಸಿರುತ್ತಾರೆ. ದಿನಾಂಕ 26-03-2014 ರಂದು 9008867341 ರಿಂದ ಕರೆ ಮಾಡಿ ಮಗನ ಶಾಲಾ ಫೀಸ್ ಕಟ್ಟುವ ಬಗ್ಗೆ ವಿಚಾರಿಸಿದಾಗ ಮಗನನ್ನು ನೀನೇ ಸಾಕು. ನನ್ನಲ್ಲಿ ಹಣವಿಲ್ಲ. ಇನ್ನೊಮ್ಮೆ ಫೋನ್ ಮಾಡಿದರೆ ನಿನ್ನನ್ನು ಬಿಡುವುದಿಲ್ಲ. ಎಂದು ಬೈದು ಬೆದರಿಕೆ ಹಾಕಿ, ಮಾನಸಿಕ ಚಿತ್ರ ಹಿಂಸೆ ನೀಡಿರುತ್ತಾರೆ.

 

2.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-05-2014 ರಂದು ಸಂಜೆ 04:30 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ ವೇದಾವತಿ ಕೆ. ನಾಯ್ಕ್ ರವರು ತನ್ನ ಬಾಬ್ತು ಮನೆಯ ಸಾಮಗ್ರಿಗಳನ್ನು ಲಾಲಬಾಗನ ಪ್ರಾನ್ಸಿಸ್ ಕೋಟ್ ಎಪಾರ್ಟಮೆಂಟ್ ನಲ್ಲಿರುವ ತನ್ನ ಪ್ಲಾಟಗೆ ಸಾಗಿಸುವರೇ ಸದ್ರಿ ಎಪಾರ್ಟಮೆಂಟನ್ ಲಿಪ್ಟನ್ನು ಬಳಸಲು ಮುಂದಾದಾಗ ಸದ್ರಿ ಅಪಾರ್ಟಮೆಂಟನ್ ಓನರ್ಸ ಎಸೋಸಿಯೆಶನ ಅದ್ಯಕ್ಷರಾದ ಶ್ರೀಮತಿ ಸುದಾ ನಾರಾಯಣನ್ಖಜಾಂಚಿ ವೀಣಾ ರಮೇಶ ಪೂಜಾರಿ ರವರು ಸದಸ್ಯ ನಾರಾಯಣ ನ್ಹಾಗೂ ಕಾವಲುಗಾರ್ತಿ ಶಾರದಾ ಎಂಬುವರು ಸೇರಿ ಸಮಾನ ಉದ್ದೇಶದಿಂದ ಪಿರ್ಯಾಧಿದಾರರನ್ನು ತಡೆದು ಲಿಪ್ಟನಲ್ಲಿ ಸಾಮಾನುಗಳನ್ನು ಕೊಂಡು ಹೋಗಲು ಬಿಡದೆ, ಸುಧಾ ನಾರಾಯಣ್ ರವರು ಪಿರ್ಯಾದಿದಾರರನ್ನು ಉದ್ದೇಶಿಸಿ "ನೀನು ಕೀಳು ಜಾತಿಯವಳಾದ ಎಸ್ ಸಿ ಎಂಬುದಾಗಿ ಮಹಿಳೆಯಾದ ಪಿರ್ಯಾದಿದಾರಳ ಜಾತಿ ನಿಂದನೆ ಮಾಡಿರುವುದಾಗಿದೆ.

 

3.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಬಂಟ್ವಾಳ ತಾಲೂಕು, ಕುರ್ನಾಡು ಗ್ರಾಮದ, ಮುಡಿಪು ಎಂಬಲ್ಲಿ ದಿನಾಂಕ 05.05.2014 ರಂದು ಮದ್ಯಾಹ್ನ 1:30 ಗಂಟೆಗೆ ಬಸ್ಸಿಗಾಗಿ ಕಾಯುತ್ತಿರುವ ಫಿರ್ಯಾದಿದಾರರಾದ ಶ್ರೀ ಮನೊರಂಜಿತ್ ರವರ ತಾಯಿ ಶ್ರೀಮತಿ ಸೀತಾ (50) ಎಂಬಾಕೆಗೆ ಮುಡಿಪು ಚರ್ಚ್ಕಡೆಯಿಂದ ಬೋಳಿಯಾರ್ಕಡೆಗೆ ಸ್ಕೂಟರ್ನಂಬ್ರ ಕೆಎ-19ಜೆ-9119 ರ ಸವಾರ ಅಬ್ದುಲ್ಖಾದರ್ರವರು ಸ್ಕೂಟರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಶ್ರೀಮತಿ ಸೀತಾರವರಿಗೆ ಢಿಕ್ಕಿ ಹೊಡೆದು ಅವರು ತೀವ್ರ ತಲೆಯ ಗಾಯದಿಂದ ಮಂಗಳೂರು ಜಿಲ್ಲಾ ವೆನ್ಲಾಕ್‌‌ ಸರಕಾರಿ ಆಸ್ಪತ್ರೆಯಲ್ಲಿ ಪ್ರಜ್ಞಾಹೀನರಾಗಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

4.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07/04/2014 ರಂದು ಪಿರ್ಯಾದಿದಾರರಾದ ಶ್ರೀ ಬಾಲಕೃಷ್ಣ ಶೆಟ್ಟಿ ಎಂಬವರು ತನ್ನ ಬಾಬ್ತು ಕಾರು ನಂಬ್ರ ಕೆ ಎ 02 ಎಮ್ ಬಿ 2432ನೇದರಲ್ಲಿ ಬಜಪೆ ಕಡೆಯಿಂದ ಕಿನ್ನಿಗೋಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಕಟೀಲು ಕಡೆಯಿಂದ ಬಜಪೆ ಕಡೆಗೆ ಬಸ್ಸು ನಂಬ್ರ ಕೆಎ 19 ಎಎ 285 ನೆದನ್ನು ಅದರ ಚಾಲಕ ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆ ಬಲಬದಿಗೆ ಬರುತ್ತಾ ಮದ್ಯಾಹ್ನ ಸುಮಾರು 13-10 ಗಂಟೆಗೆ ಮಂಗಳೂರು ತಾಲೂಕು ತೆಂಕಎಕ್ಕಾರು  ಗ್ರಾಮದ ದುರ್ಗಾನಗರ ತಿರುವು ಡಾಮಾರು ರಸ್ತೆಯಲ್ಲಿ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದುಸ್ವಲ್ಪ ಮುಂದಕ್ಕೆ ಚಲಿಸಿ ಚರಂಡಿ ಬಳಿ ಗುಡ್ಡೆಗೆ ಡಿಕ್ಕಿ ಹೊಡೆದು ನಿಂತಿತು. ಅಪಘಾತದಿಂದ ಕಾರು ಜಖಂಗೊಂಡಿದ್ದು ಕಾರಿನಲ್ಲಿದ್ದ ಪಿರ್ಯಾದಿ ಬಾಲಕೃಷ್ಣ ಶೆಟ್ಟಿಗೆ ಮತ್ತು ಅವರ ಪತ್ನಿ ಶ್ರೀಮತಿ ನಮ್ರತಾರವರಿಗೆ ಯಾವುದೆ ರೀತಿಯ ಗಾಯಗಳಾಗಿರುವುದಿಲ್ಲ. ಅಪಘಾತದಿಂದ ಬಸ್ಸನಲ್ಲಿದ್ದ ಒಟ್ಟು 16 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಗಾಯಗಳ ಪೈಕಿ ಶಿವರಾಮ ಸಪಲಿಗ ಎಂಬವರಿಗೆ ತೀವ್ರ ರೀತಿಯ ತಲೆಗೆ ಗಾಯವಾಗಿದ್ದು ಮಂಗಳೂರು ಇಂಡಿಯನ್ ಆಸ್ಪತ್ರೆಗೂ, ಗಾಯಾಳು ಗೋಪಾಲಕೃಷ್ಣಗೌಡ ಎಂಬವರ ಎಡೆಎದೆಗೆ, ತುಟಿಗೆ ಗಾಯವಾಗಿದ್ದು ಮಂಗಳೂರು ಎಜೆ ಆಸ್ಪತ್ರಗೆ ದಾಖಲಾಗಿದ್ದು ಗಾಯಾಳುಗಳಾದ ಸತೀಶ, ಬಿ ಆರ್ ನಟರಾಜ್, ಕೇಶವ ಮೂಲ್ಯ, ಸುಂದರ, ಸತೀಶ, ನಿರ್ವಾಹಕ ರವಿ ಜೋಗಿ, ವೆಂಕಪ್ಪ ಗೌಡ, ಶ್ರೀಮತಿ ಯಶೋಧಾ, ಶ್ರೀಮತಿ ದ್ಯಾಮವ್ವ, ಮಕ್ಕಳಾದ ಬಸವರಾಜ್,(11 ವರ್ಷ), ಮಾರಪ್ಪ(11 ವರ್ಷ), ಸವಿತಾ(8 ವರ್ಷ), ಅಶ್ವಿನಿ(14 ವರ್ಷ), ಎಂಬವರುಗಳಿಗೆ ಸಾಮಾನ್ಯ ಸ್ವರೂಪ ಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ಕಿನ್ನಿಗೋಳಿ ಕಾನ್ಸೆಂಟಾ ಆಸ್ಪತ್ರಗೆ ದಾಖಲಾಗಿರುತ್ತಾರೆ.

 

5.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07/05/2014 ರಂದು 16-05 ಗಂಟೆಗೆ  ಪಿರ್ಯಾದಿದಾರರಾದ ಶ್ರೀ ನಾಗರಾಜ ಎಂಬವರು ತನ್ನ ಬಾಬ್ತು ಇನ್ನೊವಾ ಕಾರು ನಂಬ್ರ ಕೆಎ 02 ಎಬಿ 1704ನೇದರಲ್ಲಿ ಪ್ರಯಾಣಿಕರನ್ನು ಕರೆದುಕೊಂಡು  ಕಟೀಲು  ಕಡೆಯಿಂದ ಕಿನ್ನಿಗೋಳಿ ಕಡೆಗೆ  ಹೋಗುತ್ತಿರುವಾಗ ಕಿನ್ನಿಗೊಳಿ  ಕಡೆಯಿಂದ ಕಟೀಲು ಕಡೆಗೆ 407 ಟೆಂಪೊ ನಂಬ್ರ  ಕೆಎ 21 468 ನೇದನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ರಸ್ತೆ  ಬಲಬದಿಗೆ ಚಲಾಯಿಸಿ ಎದುರಿನಿಂದ ಇನ್ನಾವಾ ಕಾರಿಗೆ ಡಿಕ್ಕಿ ಹೊಡೆದು ಜಖಂ ಗೊಂಡಿದ್ದು ಅಂದಾಜು ಸುಮಾರು 1,50,000 ರೂ ಗಳಷ್ಷು ನಷ್ಟ ಉಂಟಾಗಿದ್ದು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ.

 

6.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-05-2014 ರಂದು ಪಿರ್ಯಾದಿದಾರರಾದ ಶ್ರೀ ಶರತ್ ರವರು ತಮ್ಮ ಬಾಬ್ತು ಪಲ್ಸರ್ಬೈಕ್ನಂಬ್ರ KL 24 G 6234 ನೇ ಬೈಕನ್ನು ತಾನು ವಾಸಿಸುತ್ತಿರುವ ಬಾಡಿಗೆ ಮನೆಯಾದ ಉಜ್ಜೋಡಿ ಪಂಪುವೆಲ್ಎಂಬಲ್ಲಿ ಮನೆಯ ಅಂಗಳದಲ್ಲಿ ನಿಲ್ಲಿಸಿ, ಬೀಗ ಹಾಕಿ, ಮನೆಯ ಗೇಟ್ನ ಚಿಲಕ ಹಾಕಿ ರಾತ್ರಿ 11-00 ಗಂಟೆಗೆ ಮಲಗಿಕೊಂಡಿದ್ದು, ಬೆಳಿಗ್ಗೆ 5-00 ಗಂಟೆಗೆ ಎದ್ದು ನೋಡುವಾಗ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ಕಾಣೆಯಾಗಿದ್ದು, ಅಕ್ಕಪಕ್ಕದಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ಸದ್ರಿ KL 24 G 6234 ನೇ ಬೈಕನ್ನು ದಿನಾಂಕ 06-05-2014 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ 07-05-2014 ರಂದು ಬೆಳಿಗ್ಗೆ 5-00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಸದ್ರಿ ಬೈಕಿನ ಅಂದಾಜು ಮೌಲ್ಯ ಸುಮಾರು ರೂಪಾಯಿ 46,000/- ಆಗಬಹುದು.

 

7.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-05-2014 ರಂದು ಸಂಜೆ 5.30 ಗಂಟೆ ವೇಳೆಗೆ ಫಿರ್ಯಾದಿದಾರರಾದ ಶ್ರೀ ಭಾನುಪ್ರಕಾಶ್ ರವರ ತಂದೆ  ಬಾಸ್ಕರ ಆಚಾರ್ಯರರವರು ಯೆಯ್ಯಾಡಿ ಬಸ್ಸು ನಿಲ್ದಾನದ ಸಮೀಪ ನಡೆದುಕೊಂಡು ಬರುತ್ತಿದ್ದಾಗ ಪದವಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ದ್ವಿಚಕ್ರ ವಾಹನ ನಂಬ್ರ: ಕೆಎ-19-ಇಕೆ-3419 ನ್ನು ಅದರ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ತಂದೆಗೆ ಗುದ್ದಿದ ಪರಿಣಾಮ ಸದ್ರಿಯವರಿಗೆ ಬಲ ಮೊಣಕೈಗೆ ಗಾಯವಾಗಿದ್ದು, ತಲೆಗೆ ಒಳ ಜಖಂ ಉಂಟಾಗಿದ್ದು. ಸದ್ರಿಯವರ ನೋವು ಕಡಿಮೆಯಾಗದ್ದರಿಂದ ಸದ್ರಿ ಗಾಯಾಳುವನ್ನು ದಿನಾಂಕ:06-05-2014 ರಂದು ಪಾಧರ್ ಮುಲ್ಲರ್ಸ್ ಆಸ್ಪತ್ರೆ ಕಂಕನಾಡಿ ಇಲ್ಲಿಗೆ ಫಿರ್ಯಾದಿದಾರರು ಕರೆದುಕೊಂಡು ಹೋದಾಗ ವೈದ್ಯರು ಗಾಯಾಳುವನ್ನು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿದ್ದು ಈ ಅಪಘಾತವನ್ನು ಉಂಟುಮಾಡಿದ ಬೈಕ ಸವಾರನು ಅವಶ್ಯವಿದ್ದಲ್ಲಿ ಆತನನ್ನು ಸಂಪರ್ಕಿಸುವಂತೆ ನೀಡಿದ ಮೂಬೈಲ್ ನಂಬ್ರ: 9945666547 ನೇದಕ್ಕೆ ಫಿರ್ಯಾದಿದಾರರು ಕರೆ ಮಾಡಿದರು ಆತನು ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲವಾದ್ದರಿಂಧ ಮತ್ತು ಫಿರ್ಯಾದಿದಾರರ ತಂದೆ:ಗಾಯಾಳು ಬಾಸ್ಕರ ಆಚಾರ್ಯ ರವರು ICU ನಲ್ಲಿ ಒಳರೋಗಿಯಾಗಿದ್ದು ಅವರ ಆರೈಕೆಯನ್ನು ಫಿರ್ಯಾದಿದಾರರೆ ನೋಡಿಕೋಳ್ಳುತ್ತಿದ್ದರಿಂದ ಫಿರ್ಯಾದಿ ನೀಡಲು ವಿಳಂಬವಾಗಿರುತ್ತದೆ.

No comments:

Post a Comment