Wednesday, May 21, 2014

Daily Crime Reports 20-05-2014

ದೈನಂದಿನ ಅಪರಾದ ವರದಿ.

ದಿನಾಂಕ 20.05.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

5

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಲುಬ್ನಾ ಥಬ್ಸೀಮ್ ರವರು ಅವರ ಗಂಡ ಫುಹೈದ್ ನಝೀರ್, ಮಗುವಿನೊಂದಿಗೆ ದುಬೈನಲ್ಲಿ ವಾಸವಾಗಿದ್ದು, ಅವರ ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾಗಿ, ಪಿರ್ಯಾದಿದಾರರು ಬೆಂಗಳೂರಿಗೆ ವಾಪಾಸ್ ಬಂದು ಮಗುವಿನೊಂದಿಗೆ ವಾಸವಾಗಿರುತ್ತಾರೆ. ಪಿರ್ಯಾದಿದಾರರ ಗಂಡ ಎಪ್ರಿಲ್ 2014 ಮೊದಲು ವಾರ ಮಂಗಳೂರಿನ ಅತ್ತಾವರದ ವಾಸದ ಮನೆಗೆ ಬಂದಿದ್ದು,ಪಿರ್ಯಾದಿದಾರರ ಗಂಡ ಅತ್ತೆ ಮಾವನವರು  ಮಗುವನ್ನು ನೋಡಬೇಕೆಂದು  ಆಸೆ ಪಟ್ಟಿದ್ದರಿಂದ ಸಂಬಂಧಿಕರಾದ ಟಿ.ಸಿ.ಎಂ ಶರೀಫ್ ಮತ್ತು ಡಾ// ಅಕ್ತ್ತರ್ ರವರು ತಿಳಿಸಿದಂತೆ ತನ್ನ ತಮ್ಮ ಮಹಮ್ಮದ್ ಮುಸ್ತಕ್ ರವರ ಮುಖಾಂತರ 5 ವರ್ಷದ ಗಂಡು ಮಗುವನ್ನು ಗಂಡನ ಮನೆಗೆ ಕಳುಹಿಸಿರುತ್ತಾರೆ. ಪಿರ್ಯಾದಿದಾರರ ಗಂಡ ಅತ್ತೆ ಮಾವನವರು ಮಗುವನ್ನು ವಾಪಸ್ಸು ಕೊಡದೇ ಎಲ್ಲಿಯೋ ಅಕ್ರಮ ಬಂಧನದಲ್ಲಿರಿಸಿ  ದಿನಾಂಕ 21-04-2014 ರಂದು ಪಿರ್ಯಾದಿಯ ಗಂಡ ಹೇಳದೇ  ದುಬೈಗೆ ಹೋಗಿರುತ್ತಾರೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 14-05-2014 ರಂದು  ಮದ್ಯಾಹ್ನ ಸಮಯ ಸುಮಾರು 1:30 ಗಂಟೆಗೆ ಪ್ರಕರಣದ ಪಿರ್ಯಾದುದಾರರಾದ ಶ್ರೀ ಗೊವಿಂದ ರವರ ಮಗಳು ಕುಮಾರಿ ಶಿಲ್ಪಾಳು ಮಂಗಳೂರು ನಗರದ ಪಿ.ವಿ.ಎಸ್ ಬಳಿಯ ಬಿ.ಜೆ.ಪಿ ಕಛೇರಿ ಹತ್ತಿರದ ಖಾಲಿ ಸ್ಥಳದ ಬದಿಯಲ್ಲಿ ಆಯಾಸಗೊಂಡು ಮಲಗಿದ್ದವಳ ಎಡಕಾಲಿನ ಪಾದದ ಮೇಲೆ ಆರೋಪಿತ ಅಜಯ್ಎಂಬವನು ಪಾರ್ಕ್ಮಾಡಿದ್ದ ತನ್ನ ಬಾಬ್ತು ಕಾರು ನಂಬ್ರ ಕೆ.-01-ಪಿ-3524 ನೇದನ್ನು ಒಮ್ಮೆಲೆ ನಿರ್ಲಕ್ಷ್ಯತನದಿಂದ ಹಿಂದಕ್ಕೆ ಚಲಾಯಿಸಿದ್ದರಿಂದ ಕಾರಿನ ಹಿಂಬದಿಯ ಟೈರ್ಕುಮಾರಿ ಶಿಲ್ಪಾಳಾ ಎಡಕಾಲಿನ ಪಾದದ ಮೇಲೆ ಹರಿದು ಹೋಗಿ ಸಾದಾ ಸ್ವರೂಪದ ಗಾಯವುಂಟಾದವರನ್ನು ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ಆಸ್ಪತ್ರೆಗೆ ದಾಖಲು ಮಾಡಿದ್ದು,  ಬಗ್ಗೆ ಆರೋಪಿತನು ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದವನು, ಈಗ ನಿರಾಕರಿಸಿರುವುದಾಗಿದೆ.

 

3.ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ವಿ.ಪಿ. ಬಾಬು ರವರು ಮಂಗಳೂರು ನಗರದ ಜೆ.ಬಿ ಲೋಬೋ ರಸ್ತೆ, ಕೊಟ್ಟಾರ ಚೌಕಿಯಲ್ಲಿರುವ ಸಂತ ಗ್ರೇಗೋರಿಯಸ್ಆರ್ಥೋಡಕ್ಸಸ್ಸಿರಿಯನ್ ಚರ್ಚ್ನ ಸೆಕ್ರಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 2007 ನೇ ಇಸವಿಯಲ್ಲಿ ಚರ್ಚ್ ಉಪಯೋಗಕ್ಕಾಗಿ ಕೆ. 19 ಕ್ಯು 1444 ಹಳೆ ಹಿರೋ ಹೊಂಡಾ ಸ್ಪ್ಲೆಂಡರ್ಮೋಟಾರು ಸೈಕಲ್ಒಂದನ್ನು ಚರ್ಚ್ಗೆ ಸಂಬಂಧಿಸಿದವರು ಖರೀದಿಸಿರುತ್ತಾರೆ. ದಿನಾಂಕ 12-04-2014 ರಂದು ಮೋಟಾರು ಸೈಕಲನ್ನು ಚರ್ಚ್ ಕೆಲಸಕ್ಕೆಂದು ತೆಗೆದುಕೊಂಡು ಹೋದವರು ಸಂಜೆ 7-00 ಗಂಟೆಗೆ ಚರ್ಚ್ಕೌಂಪೌಂಡ್ಒಳಗಡೆ ಹ್ಯಾಂಡ್ ಲಾಕ್ಹಾಕಿ ಪಾರ್ಕ್ಮಾಡಿ ಸ್ವಂತ ಊರಾದ ಕೇರಳ ರಾಜ್ಯದ ಪಟ್ಟಣತ್ತಿಟ್ಟುಗೆ ಹೋಗಿದ್ದು ದಿನಾಂಕ 19-05-2014 ರಂದು ಮಂಗಳೂರಿಗೆ ಬಂದು ಸಂಜೆ 4-00 ಗಂಟೆಗೆ ಚರ್ಚ್ಗೆ ಬಂದು ಮೋಟಾರು ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ಮೋಟಾರು ಸೈಕಲ್ನಿಲ್ಲಿಸಿದ ಸ್ಥಳದಲ್ಲಿ ಕಂಡು ಬಂದಿರುವುದಿಲ್ಲ. ಅಲ್ಲಿಯೇ ಸುತ್ತು ಮುತ್ತಲೂ ಹುಡುಕಾಡಿದ್ದು ಕಾಣಲಿಲ್ಲ. ಆದುದರಿಂದ ಮೋಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರಬಹುದೆಂದು ಬಾವಿಸಿ ಚರ್ಚ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.

 

4.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-05-2014 ರಂದು ಸಂಜೆ ಸುಮಾರು 6-00 ಗಂಟೆಗೆ  ಪಿರ್ಯಾದಿದಾರರಾದ ಶ್ರೀ ವೇದ ಪ್ರಕಾಶ್ ರವರು ಮನೆಯಲ್ಲಿರುವ ಸಮಯ ಆರೋಪಿ ಭರತ್ಜೈನ್ಎಂಬವನು ಪಿರ್ಯಾದಾರರ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ನಿನಗೆ ಬಾರೀ ಅಹಂಕಾರ ಇದೆ  ನೀನು ಬೇರೆ ಜಾತಿಯ ಹೆಣ್ಣನ್ನು ಮದುವೆಯಾಗಿ ಇಲ್ಲಿಯೇ ಇದ್ದಿಯಾ ಎಂದು ಹೇಳಿ ಪಿರ್ಯಾದಾರರನ್ನು ಎಳೆದುಕೊಂಡು ಜಗಲಿಗೆ ತಂದು ಮರದ ರೀಪಿನಿಂದ ಮುಖಕ್ಕೆ ಹೊಡೆದ ಪರಿಣಾಮ ಮೂಗಿಗೆ ಗಾಯವಾಗಿದ್ದು ಬಳಿಕ ಕೈಯಿಂದ ಹೊಟ್ಟೆಗೆ ಮೈಕೈಗೆ ಹೊಡೆದು ಹಲ್ಲೆ ನಡೆಸಿ ಅವಾಚ್ಯ ಶಬ್ದದಿಂದ ಬೈದು ಪರಾರಿಯಾಗಿರುವುದಾಗಿದೆ.

 

5.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 18-05-2014 ರಂದು ಸಂಜೆ ಸುಮಾರು 6-30 ಗಂಟೆಗೆ  ಪಿರ್ಯಾದಿದಾರರಾದ ಶ್ರೀ ಭರತ್ ರಾಜ್ ಜೈನ್ ರವರು ಕುಟುಂಬದ ಸಂಬಂಧಿ ವಜ್ರನಾಭರವರ ಮನೆಗೆ ಹೋಗಿ ಅವರ ಆರೈಕೆ ವಿಚಾರಿಸಿ ವಾಪಾಸ್ಮನೆಯ ಕಡೆಗೆ ಹೋಗುತ್ತಿರುವ ಸಮಯ ರಸ್ತೆಯಲ್ಲಿ ವಜ್ರನಾಭರವರ ಮಗ ವೇದ ಪ್ರಕಾಶ್ಜೈನ್ಎಂಬವನು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನನ್ನ ತಂದೆಯ ಯೋಗ ಕ್ಷೇಮವನ್ನು ನೋಡಿಕೊಂಡು ಬರಲು ನೀನು ಯಾರು ? ಎಂದು ಹೇಳಿದಲ್ಲದೇ ಆತನ ಕೈಯಲ್ಲಿದ್ದ ಕಬ್ಬಿಣದ ರಾಡ್ನಿಂದ ಪಿರ್ಯಾದಿದಾರರಿಗೆ ಹೊಡೆಯಲು ಬಂದಾಗ ಪಿರ್ಯಾದಿದಾರರು ರಾಡ್ನ್ನು ಹಿಡಿದ ಪರಿಣಾಮ ರಾಡಿನ ತುದಿ ಪಿರ್ಯಾದಿದಾರರ ಎಡ ಕಣ್ಣಿನ ಕೆಳಗೆ ತಾಗಿ ರಕ್ತ ಗಾಯವಾಗಿರುವುದಲ್ಲದೇ ಪಿರ್ಯಾದಿದಾರರು ಹಿಡಿದಿರುವ ರಾಡ್ನ್ನು ಎಳೆದು ಪುನಃ ಪಿರ್ಯಾದಿದಾರರ ಕಾಲಿಗೆ ರಾಡ್ನಿಂದ ಹಲ್ಲೆ ನಡೆಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿದೆ.

 

6.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  18.5.2014 ರಂದು ರಾತ್ರಿ 12.00 ಗಂಟೆಯಿಂದ ಬೆಳಿಗ್ಗೆ 5.00 ಗಂಟೆಯ ಮಧ್ಯಾವಧಿಯಲ್ಲಿ  ಮಂಗಳೂರು ತಾಲೂಕು ಬಪ್ಪನಾಡು ಗ್ರಾಮದ  ಶ್ರೀ ಬಪ್ಪನಾಡು ದುರ್ಗಾ  ಪರಮೇಶ್ವರಿ ದೇವಸ್ಥಾನದ ದ್ವಾರದ ಬಳಿ  ರಾ ಹೆ 66   ಬಳಿ ವ್ಯವಸ್ಥಿತವಾಗಿ ಜೋಡಣೆ  ಮಾಡಿದ  ಕಾಣಿಕೆ  ಡಬ್ಬಿಯನ್ನು  ಕದಿಯುವ  ಉದ್ದೇಶದಿಂದ  ಯಾರೋ ಕಳ್ಳರು  ಕಳವು ಮಾಡಲು  ಪ್ರಯತ್ನಿಸಿರುವುದಾಗಿದೆ.   

 

7.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-05-2014 ರಂದು ಬೆಳಿಗ್ಗೆ 11-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ವಿಠಲ ಸಾಲಿಯಾನ್ ರವರು ಬೈಕಂಪಾಡಿ ಜಂಕ್ಷನ್ ನಲ್ಲಿ  ಮಂಗಳೂರು -  ಉಡುಪಿ ಎನ್ ಹೆಚ್, 66 ರಾ.ಹೆ ರಸ್ತೆಯ ಪಶ್ಚಿಮ ಬದಿಯಲ್ಲಿ ರಸ್ತೆ ದಾಟುವರೇ ನಿಂತುಕೊಂಡಿದ್ದ ಸಮಯ ಮಂಗಳುರು ಕಡೆಯಿಂದ ಸುರತ್ಕಲ್ ಕಡೆಗೆ ಕೆಎ-20/ಸಿ-4648ನೇ ನಂಬ್ರದ ಟಾಟಾ ಎಸಿ ವಾಹನವನ್ನು ಅದರ ಚಾಲಕ ಪ್ರಕಾಶ್ ಪೂಜಾರಿ ಎಂಬವರು  ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸುಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಯ ಬದಿಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ  ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿರುವುದಲ್ಲದೆ ಮುಖಕ್ಕೆ ರಕ್ತ ಗಾಯಗೊಂಡು ,.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

8.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19-05-2014 ರಂದು  ಫಿರ್ಯಾದಿದಾರರಾದ ಶ್ರೀ ದಿವಾಕರ ಪೂಜಾರಿಯವರು ತನ್ನ ಕೆಲಸದ ನಿಮಿತ್ತ ಕಾರ್ಕಳದ ಕುಕ್ಕುಂದೂರಿಗೆ ಹೋಗಲೆಂದು ಮಂಗಳೂರಿನಿಂದ ಕಾರ್ಕಳಕ್ಕೆ ಹೋಗಲು ಮೂಡುಬಿದ್ರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನ ಬಾಬ್ತು ವೇಗನರ್ ಕಾರು ನಂ: ಕೆಎ  20 ಎನ್  8380 ನ್ನು ಚಲಾಯಿಸಿಕೊಂಡು ಹೋಗುತ್ತಾ ಮಂಗಳೂರು ತಾಲೂಕಿನ, ಬಡಗುಳಿಪಾಡಿ ಗ್ರಾಮದ ಕೈಕಂಬ ರಾಜ್ ಟೈಲ್ ಪ್ಯಾಕ್ಟರಿಯ ಬಳಿ ತಲುಪುತ್ತಿದ್ದಂತೆ ಮಧ್ಯಾಹ್ನ ಸುಮಾರು 1-15 ಗಂಟೆ ಸಮಯಕ್ಕೆ ಮೂಡಬಿದ್ರಿ ಕಡೆಯಿಂದ ಟಿಪ್ಪರ್ ಲಾರಿ ನಂ: ಕೆಎ  19 ಸಿ 8584 ನ್ನು ಅದರ ಚಾಲಕ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂ ಆದುದಲ್ಲದೇ ಫಿರ್ಯಾದಿದಾರರ ಬಲಕಾಲಿನ ಮೂಳೆ ಮುರಿತವಾಗಿದ್ದು, ಕೈ ಕಾಲಿಗೆ ಮತ್ತು ಶರೀರಕ್ಕೆ ಅಲ್ಲಲ್ಲಿ ಗಾಯವಾಗಿರುತ್ತದೆ.  ಚಿಕಿತ್ಸೆಯ ಬಗ್ಗೆ ಮಂಗಳೂರು ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ.

 

9.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-05-2014 ರಂದು ಪಿರ್ಯಾದುದಾರರಾದ ಶ್ರೀ ಪೂರ್ಣಚಂದ್ರ ರವರು ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಆರೋಪಿತರು ಪಿರ್ಯಾದುದಾರರನ್ನು ನೋಡಿ ಬೆದರಿಸಿದ್ದು, ಸಂಜೆ 4-00 ಗಂಟೆಗೆ ಆರೋಪಿತರಾದ ಕಿರಣ್, ಅಜೀತ್, ಸುನೀಲ್, ದೇವಾನಂದ, ಸಂಧ್ಯಾ, ರೂಪಾ, ಮೀನಾಕ್ಷೀ, ಪ್ರೇಮಾ, ಜಯಾ, ವಿಶಾಲಾಕ್ಷಿ ಮತ್ತು ಇತರರು ಅಕ್ರಮ ಕೂಟ ಸೇರಿಕೊಂಡು ಕೈಯಲ್ಲಿ ಸೊಂಟೆ ಕತ್ತಿಯನ್ನು ಹಿಡಿದುಕೊಂಡು, ಮಂಗಳೂರು ತಾಲೂಕು, ಸೊಮೇಶ್ವರ ಗ್ರಾಮದ ಕುಂಪಳ, ಮೂರುಕಟ್ಟೆ ಆಶ್ರಯ ಕಾಲೋನಿಯಲ್ಲಿರುವ ಪಿರ್ಯಾದುದಾರರ ಮನೆಗೆ ಬಂದು ಪಿರ್ಯಾದುದಾರರಿಗೆ ಬೈದು ಹೊಡೆದು ನೋವುಂಟು ಮಾಡಿರುವುದಲ್ಲದೇ ಪಿರ್ಯಾದುದಾರರ ಅಕ್ಕನಿಗೆ ಆರೋಪಿತರು ಬೈದಿರುತ್ತಾರೆ ಗಾಯಗೊಂಡು ಪಿರ್ಯಾದುದಾರರು ದೇರಳಕಟ್ಟೆ ಯೆನೆಪೋಯ ಮೆಡಿಕಲ್ಕಾಲೇಜು ಆಸ್ಪತ್ರೆಯಲ್ಲಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ.

 

10.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-05-2014 ರಂದು 16-30 ಗಂಟೆಗೆ ಸಮಯಕ್ಕೆ ಆರೋಪಿಗಳಾದ ಪೂರ್ಣಚಂದ್ರ, ಭರತ್‌, ದೀಪಿಕಾ ಮತ್ತು ಸೀತಲ್ರವರು ಮಂಗಳೂರು ತಾಲೂಕು, ಸೋಮೇಶ್ವರ ಗ್ರಾಮದ ಕುಂಪಲ ಆಶ್ರಯ ಕಾಲೋನಿಯಲ್ಲಿರುವ ಪಿರ್ಯಾದುದಾರರಾದ ಶ್ರೀಮತಿ ರೂಪಾ ರವರ ಮನೆ ಬಳಿಗೆ ಬಂದು, ಪಿರ್ಯಾದುದಾರರಿಗೆ ಕೈಯಿಂದ ಹೊಡೆದು ಹಲ್ಲೆ ನಡೆಸಿರುವುದಲ್ಲದೇ, ಸಂದ್ಯಾ ಎಂಬವರಿಗೆ ಕೂಡ ಹೊಡೆದಿರುತ್ತಾರೆ. ಗಾಯಗೊಂಡು ಪಿರ್ಯಾದುದಾರರು ಮತ್ತು ಸಂದ್ಯಾರವರು ದೇರಳಕಟ್ಟೆ ಯೆನೆಪೋಯ ಮೆಡಿಕಲ್ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

11.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-05-2014 ರಂದು 20-00 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಜಯಪ್ರಕಾಶ್ ರವರು ಸೋಮೇಶ್ವರ ಗ್ರಾಮದ ಕುಂಪಳ ಬಸ್ಸು ನಿಲ್ದಾಣದ ಬಳಿ ತನ್ನ ಬಾಬ್ತು ಕೆಎ 19 ಇಜೆ 7235 ಬೈಕಿನಲ್ಲಿ ಬಂದಾಗ ಆರೋಪಿಗಳಾದ ರೋಶನ್‌, ಮನೋಜ್ಮತ್ತು ದುರ್ಗೇಶ್ಎಂಬವರು ಬೈಕ್ನ್ನು ತಡೆದು ನಿಲ್ಲಿಸಿ ಪಿರ್ಯಾದಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಕರೆದಿದ್ದು, ಇದನ್ನು ನಿರಾಕರಿಸಿದ ಪಿರ್ಯಾದಿಗೆ ಕೋಪಗೊಂಡ ಮೂರು ಜನ ಆರೋಪಿಗಳು ಕೈಯಿಂದ ಹೊಡೆದು ಗಾಯಗೊಳಿಸುತ್ತಿದ್ದಾಗ ಅಲ್ಲಿಗೆ ಚಂದ್ರ ಮತ್ತು ಇತರರು ಬಂದು ಆರೋಪಿಗಳಿಂದ ಪಿರ್ಯಾದುದಾರರನ್ನು ಬಿಡಿಸಿರುತ್ತಾರೆ. ನಂತರ ಆರೋಪಿಗಳು ಹೊರಟು ಹೋಗಿರುತ್ತಾರೆ. ಗಾಯಗೊಂಡ ಪಿರ್ಯಾದುದಾರರು ತೊಕ್ಕೊಟ್ಟು ಸಹಾರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ.

No comments:

Post a Comment