Wednesday, May 7, 2014

Daily Crime Reports 06-05-2014

ದೈನಂದಿನ ಅಪರಾದ ವರದಿ.

ದಿನಾಂಕ 06.05.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

2

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-05-2014 ರಂದು ಸಂಜೆ ಸುಮಾರು 7-00 ಗಂಟೆಗೆ ಪಿರ್ಯಾದುದಾರರಾದ ಶ್ರೀ ಎಂ. ಹಸನಬ್ಬಾ ರವರು ತನ್ನ ಮಗನಾದ ಮಹಮ್ಮದ್ ಆಸೀಫ್ (30) ಎಂಬಾತನಿಗೆ ಜ್ವರ ಬರುತ್ತಿರುವುದರಿಂದ ಮಂಗಳೂರು ನಗರದ ಕುಂಟಿಕಾನ ಬಳಿ ಇರುವ ಎ.ಜೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಇನ್ನೊಬ್ಬ ಮಗನಾದ ಇಮ್ತಿಯಾಸ್ ನೊಂದಿಗೆ ಕರೆದುಕೊಂಡು ಹೋಗಿ ವೈದ್ಯರು ಪರೀಕ್ಷಿಸಿದ ನಂತರ ಆಸ್ಪತ್ರೆಯ ಹೊರಗಡೆ ಕುಳ್ಳಿರಿಸಿದ್ದು, ನಂತರ ಆಸ್ಪತ್ತೆಯ ಬಿಲ್ಲು ಕೌಂಟರ್ ಬಳಿ ಬಿಲ್ಲು ಪಾವತಿಸಿ ವಾಪಾಸು ಬಂದು ನೋಡಿದಾಗ ತನ್ನ ಮಗ ಮಹಮ್ಮದ್ ಆಸೀಫ್ ನು ಅಲ್ಲಿ ಇರದೇ ಕಾಣೆಯಾಗಿರುತ್ತಾನೆ. ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿದ್ದು, ಈ ವರೆಗೆ ಪತ್ತೆಯಾಗಿರುವುದಿಲ್ಲ. ಈತನು ಚಿಕ್ಕಂದಿನಿಂದಲೇ ಮಾನಸಿಕ ಅಸ್ವಸ್ಥನಾಗಿರುತ್ತಾನೆ.

 

2.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-05-2014 ರಂದು ಪಿರ್ಯಾದಿದಾರರಾದ ದೀಪಿಕಾ ಜಿ. ದೇವಾಡಿಗಾ ರವರು ಕೆಎ-19-ಇಎಚ್-1314ನೇ ನಂಬ್ರದ ಮೋಟಾರ್ ಸೈಕಲಿನಲ್ಲಿ  ತನ್ನ ಅಕ್ಕ ರೇಶ್ಮಾರನ್ನು ಸಹ ಸವಾರನ್ನಾಗಿ ಕುಳ್ಳಿರಿಸಿಕೊಂಡು ಹಳೆಯಂಗಡಿಯಿಂದ ಮುಲ್ಕಿಕಡೆಗೆ ರಾಹೆ-66 ರಲ್ಲಿ ಬರುತ್ತಾ ರಾತ್ರಿ ಸುಮಾರು 10-15 ಗಂಟೆ ಸಮಯಕ್ಕೆ ಕಾರ್ನಾಡು ಬೈಪಾಸ್ ಬಳಿ ಇಂಡಿಕೇಟರನ್ನು ಹಾಕಿ ಬಲಗಡೆಗೆ ತಿರುಗಿಸಿ , ಬಲಗಡೆ ರಸ್ತೆಯ ಅಂಚಿಗೆ ತಲುಪುವಷ್ಟರಲ್ಲಿ ಮುಲ್ಕಿ ಕಡೆಯಿಂದ ಎಂಎಚ್-03-ಬಿಎಲ್-6447ನೇ ನಂಬ್ರದ ಮೋಟಾರ್ ಸೈಕಲ್ ಸವಾರನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿಯಾದ ಪರಿಣಾಮ ಪಿರ್ಯಾದಿ ಹಾಗು ರೇಶ್ಮಾ ರವರು ಬೈಕ್ ಸಮೇತ ರಸ್ತೆಗೆ ಬಿದ್ದು , ಇಬ್ಬರಿಗೂ ರಕ್ತಗಾಯ ಮತ್ತು ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಅಪಘಾತಪಡಿಸಿದ ಮೊಟಾರ್ ಸೈಕಲ್ ಸವಾರ ವಾಹನ ನಿಲ್ಲಿಸಿದೆ ಪರಾರಿಯಾಗಿರುತ್ತಾನೆ.

 

3.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05-05-2014 ರಂದು ಸಂಜೆ ಸುಮಾರು 19-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಜೈಸನ್ ರೊಡ್ರಿಗಸ್ ರವರು ಅವರ ಬಾಬ್ತು  ಕೆಎ 20 ಬಿ 9695 ನೇ ಓಮ್ನಿ ಕಾರನ್ನು ಅದರ ಚಾಲಕ ಪ್ರಶಾಂತ್ ಅಂಚನ್ ಎಂಬವರು ಮಂಗಳೂರಿನಿಂದ ಮೂಡಬಿದ್ರೆ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಮಂಗಳೂರು ತಾಲೂಕು ಪುತ್ತಿಗೆ ಗ್ರಾಮದ ಹಂಡೇಲು ಸುತ್ತು ಎಂಬಲ್ಲಿ ತಲುಪಿದಾಗ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಕೆಎ-19-ಡಿ-8410 ನೇ ಲಾರಿಯನ್ನು ಅದರ ಚಾಲಕ ಅತೀ ವೇಗ ಹಾಗೂ ನಿರ್ಲಕ್ಷದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಕಾರಿನ ಬಲಭಾಗ ಜಖಂ ಗೊಂಡಿರುತ್ತದೆ.

 

4.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-05-2014 ರಂದು ಬೆಳಿಗ್ಗೆ 11-10 ಗಂಟೆಗೆ ಪಿರ್ಯಾದಿದಾರರಾದ ಶ್ರೀ ದಯಾನಂದ ಶೆಟ್ಟಿ ರವರು ಬೈಕಂಪಾಡಿ ಕೈಗಾರಿಕ ಪ್ರದೇಶದ ಬೈಕಂಪಾಡಿ ಕಡೆಗೆ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿರುವಾಗ ಕರ್ಕೇರ ಮೊಲಸ್ಥಾನ ಬಳಿಗೆ ತಲಪುವಾಗ ಎದುರಿಗೆ ನಿಂತಿದ್ದ ಕೆಎ 19 ಝಡ್ 1823 ನೇ ಮಾರುತಿ 800 ನೇ ಚಾಲಕ ಒಮ್ಮೆಲೇ ಬಲಗಡೆಗೆ ಕಾರನ್ನು ತಿರುಗಿಸಿದ ಕಾರಣ ಪಿರ್ಯಾದಿದಾರರ ಅಟೋರಿಕ್ಷಾ ಕೆಎ 19 ಡಿ 5770 ನೇ ದ್ದಕ್ಕೆ ಡಿಕ್ಕಿ ಹೊಡೆದುದರ ಪರಿಣಾಮ ಪಿರ್ಯಾದಿದಾರರು ಅಟೋರಿಕ್ಷಾ ಸಮೇತ ಡಾಮಾರು ರಸ್ತೆಗೆ ಬಿದ್ದು ಅಟೋರಿಕ್ಷಾದ ಎಡಗಡೆಗೆ ಮತ್ತು ಪಿರ್ಯಾದಿದಾರರ ಎಡಕಾಲಿಗೆ ತರಚಿದ ಗಾಯವಾಗಿ ಅಟೋರಿಕ್ಷಾ ಸಂಪೊರ್ಣ ಜಖಂಗೊಂಡಿರುತ್ತದೆ.

 

5.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05/05/2014 14-30 ಗಂಟೆ ಸಮಯಕ್ಕೆ ಪಿರ್ಯಾದಾರಾದ ಶ್ರೀ ಸೂರಜ್ ಕುಮಾರ್ ಎಂಬವರು ತನ್ನ ಗೆಳತಿ ನಿಶ್ಮೀತಾ ಎಂಬವಳೊಂದಿಗೆ ತಣ್ಣೀರುಬಾವಿಯ ಐ,,ಸಿ ಹಿಂಬದಿಯ ಬೀಚಿನಲ್ಲಿ ಕುಳ್ಳಿತ್ತಿದಾಗ ಕೆ, 19 .ಜೆ 3979 ನಂಬ್ರದ ಮೋಟಾರು ಸೈಕಲಿನಲ್ಲಿ ಬಂದಿದ್ದ ಬಿಳಿ ಬಣ್ಣದ ದಡೂತಿ ಯವಕ ಮತ್ತು ಸಪೂರ ಶರೀರದ ಕಪ್ಪು ಮೈಬಣ್ಣದ ಕುತ್ತಿಗೆಯ ಮೇಲೆ "BOB" ಎಂದು ದೊಡ್ಡ ಅಕ್ಷರದಲ್ಲಿ ಹಸಿರು ಬಣ್ಣದಲ್ಲಿ ಎದ್ದುಕಾಣುವಂತೆ ಬರೆದಿದ್ದ ಇಬ್ಬರೂ ಯುವಕರು ಪಿರ್ಯಾದಿದಾರರ ಬಳಿಗೆ ಬಂದು ಅವರು ಧರಿಸಿದ ಪ್ಯಾಂಟಿನ ಬಲಭಾಗದ ಪ್ಯಾಂಟಿನಲ್ಲಿ ಇರಿಸಿದ 1000/- ರೂಪಾಯಿ ನಗದು ಹಣ ಮತ್ತು ಚುನಾವಣ ಗುರುತಿನ ಚಿಟಿ ಇರುವ ಪರ್ಸ್ ನ್ನು ಬಲ್ಕಾರವಾಗಿ ಕಿತ್ತು ತೆಗೆದು ನಂತರ ಪ್ಯಾಂಟಿನ ಎದುರುಗಡೆ ಎಡ ಭಾಗದ ಪ್ಯಾಕೆಟಿನಲ್ಲಿ ಇದ್ದ ಮೊಬೈಲ್ ಪೋನನ್ನು ಬಲ್ಕಾರವಾಗಿ ಎಳೆದು ತೆಗೆದು ಅದರಲ್ಲಿ ಇದ್ದ ಮೆಮರಿ ಕಾರ್ಡನ್ನು ಕಿತ್ತು ತೆಗೆದು ಮೊಬೈಲ್ ಪೋನ್ ನ್ನು ಅಲ್ಲೆ ಬಿಸಾಡಿ ಪಿರ್ಯಾದಿದಾರರನ್ನು ಕೈಯಿಂದ ದೂಡಿ ಆರೋಪಿಗಳು ಇಬ್ಬರೂ ಬಂದಿದ್ದ ಮೋಟಾರು ಸೈಕಲಿನಲ್ಲಿ ಪರಾರಿಯಾಗಿರುತ್ತಾರೆ.

 

6.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಬಾಬುಲಾಲ್ ರವರು ಸುಮಾರು 1 ತಿಂಗಳ ಮೊದಲು ತನ್ನ ಹೆಂಡತಿ ರಾಜ್ ಬಾಯಿ, ಗಂಡು ಮಕ್ಕಳಾದ ರಾಕೇಶ್, ಬಾದಲ್ ಮತ್ತು 8 ತಿಂಗಳ ಮಗು ಈಸ್ಟರ್, ಸಂಬಂದಿ ರೇವತ್ ಎಂಬವರೊಂದಿಗೆ ಮಂಗಳೂರಿಗೆ ಬಂದು ಪೇಟೆಯಲ್ಲಿ ಬೆಲೂನು ವ್ಯಾಪಾರ ಕೆಲಸ ಮಾಡಿಕೊಂಡಿದ್ದು, ಹಂಪನಕಟ್ಟೆಯ ಹಳೇ ಬಸ್ಸು ನಿಲ್ದಾಣದ ಬಳಿ ರಾತ್ರಿ ಉಳಕೊಳ್ಳುವುದಾಗಿದೆ. ಅದೇ ರೀತಿ ದಿನಾಂಕ 04-05-2014 ರಂದು ರಾತ್ರಿ ಸುಮಾರು 11:00 ಗಂಟೆಯ ಸಯಕ್ಕೆ ತಾವೆಲ್ಲರೂ ಒಟ್ಟಿಗೆ ಮುಲಗಿ ಕೊಂಡಿದ್ದು, ದಿನಾಂಕ 05-05-2014 ರಂದು ಮುಂಜಾನೆ ಸುಮಾರು 03 ಗಂಟೆಯ ಸಮಯಕ್ಕೆ ಎದ್ದು ನೋಡಿದಾಗ ತನ್ನ 8 ತಿಂಗಳ ಮಗು ಕಾಣೆಯಾಗಿರುತ್ತದೆ. ಚಹರೆ ಗೋಧಿ ಮೈ ಬಣ್ಣ ,ಒಂದೂವರೆ ಅಡಿ ಉದ್ದ, ಸಪೂರ ಶರೀರ, ಸೊಂಟದಲ್ಲಿ ಕಪ್ಪು ನೂಲು ಧರಿಸಿದ್ದು, ಅದರಲ್ಲಿ ಕೇಸರಿ ಬಣ್ಣದ ಮಣಿ ಇರುತ್ತದೆ.

 

7.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 04/05/2014 ರಂದು ಪಿರ್ಯಾದಿದಾರರಾದ ಶ್ರೀ ದೀರಜ್ ಎನ್. ರಾವ್ ರವರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ KA 19 EF 3289 ನ್ನು ಬಜಪೆ ಕಡೆಯಿಂದ ಕೈಕಂಬ ಕಡೆಗೆ ಚಲಾಯಿಸುತ್ತಾ ಹೋಗುತ್ತಿರುವಾಗ ರಾತ್ರಿ ಸುಮಾರು 9.50 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಮೂಡುಪೆರಾರ ಗ್ರಾಮದ ಅಂಬಿಕಾ ನಗರ ಎಂಬಲ್ಲಿಗೆ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಕೈಕಂಬ ಕಡೆಯಿಂದ ಬಜಪೆ ಕಡೆಗೆ ಸ್ಕಾರ್ಪಿಯೋ ಕಾರು ನಂಬ್ರ KA 19 Z 5537 ನ್ನು ಅದರ ಚಾಲಕ ಯಾವುದೇ ಸೂಚನೆಯನ್ನು ನೀಡದೇ ನಿರ್ಲಕ್ಷ್ಯತನದಿಂದ ಒಮ್ಮೆಲೇ ತನ್ನ ಬಲ ಬದಿಗೆ ಅಂದರೆ ಅಂಬಿಕಾ ನಗರ ಕಡೆಗೆ ತಿರುಗಿಸಿದಾಗ ಸ್ಕಾರ್ಪಿಯೋ ವಾಹನವು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ನೆಲಕ್ಕೆ ಬಿದ್ದುಪಿರ್ಯಾದಿದಾರರ ತಲೆಯ ಹಿಂಭಾಗಕ್ಕೆ ರಕ್ತ ಗಾಯ, ಸೊಂಟಕ್ಕೆ, ಬಲ ಕಾಲಿಗೆ ಗುದ್ದಿದ ಗಾಯವಾಗಿದ್ದು, ಮಂಗಳೂರು ಎ.ಜೆ. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ.

 

8.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 5-2-2014 ರಂದು ಪ್ರಕರಣದ ಫಿರ್ಯಾದಿದಾರರಾದ ಶ್ರೀಮತಿ ಆಶಾ ರವರು ಗುರುಹಿರಿಯರ ಸಮ್ಮುಖದಲ್ಲಿ ಕುಂಪಳ ವಾಸಿ ಸಂದೇಶ ರವರನ್ನು ಸುರತ್ಕಲ್ ಶಾರದಾ ಹೊಟೇಲಿನ ಹಾಲ್ನಲ್ಲಿ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಗಂಡನ ಮನೆಯವರ ಬೇಡಿಕೆಯಂತೆ ಫಿರ್ಯಾದಿದಾರರಿಗೆ ಅವರ ಮನೆಯವರು 30 ಪವನ್ ಚಿನ್ನಾಭರಣ ಕೊಟ್ಟಿದ್ದು, ಮದುವೆಯಾದ ನಂತರದ ದಿನಗಳಲ್ಲಿ ಫಿರ್ಯಾದಿದಾರರ ಗಂಡ ಸಂದೇಶ್‌, ತಾಯಿ ಶ್ರೀಮತಿ ಆಶಾ ರವರೊಂದಿಗೆ ಸೇರಿಕೊಂಡು ವಿನಾಃ ಕಾರಣ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ದುದಲ್ಲದೆ ಫಿರ್ಯಾದಿದಾರರಿಗೆ ಅವರ ತವರು ಮನೆಯಿಂದ 2 ಲಕ್ಷ ರೂಪಾಯಿ ವರದಕ್ಷಿಣೆಯನ್ನು ತರುವಂತೆ ಒತ್ತಾಯ ಮಾಡಿದ್ದು, ಅಲ್ಲದೆ ಹಣವನ್ನು ತಾರದಿದ್ದರೆ ಕೊಲ್ಲುವುದಾಗಿ ಬೆದರಿಕೆಯನ್ನು ಹಾಕಿರುತ್ತಾರೆ. ಅಲ್ಲದೆ ಫಿರ್ಯಾದಿದಾರರ ಗಂಡನ ಮನೆಯಲ್ಲಿ ಕೆಲಸಕ್ಕೆ ಇರುವ ದೀಪ, ಇನ್ನೋರ್ವ ಮಹಿಳೆ ಹಾಗೂ ಗಣೇಶ ಎಂಬವರು ಫಿರ್ಯಾದಿದಾರರ ಗಂಡನೊಂದಿಗೆ ಸೇರಿಕೊಂಡು ವಿನಾಃ ಕಾರಣ ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ತೊಂದರೆ ಕೊಟ್ಟಿರುತ್ತಾರೆ.

No comments:

Post a Comment