Thursday, April 25, 2013

Daily Crime Incidents For April 25, 2013


ದನ ಕಳವು ಪ್ರಕರಣ:


ಮೂಡಬಿದ್ರೆ ಠಾಣೆ;

  • ದಿನಾಂಕ : 23/04/2013 ರಂದು 9.30 ಗಂಟೆಯ ಸಮಯಕ್ಕೆ KA 19 Z 2154  ಇಬ್ಬರು ಆರೋಫಿಗಳು ಪಿರ್ಯಾದಿದಾರರ ಮನೆಯ ಹಟ್ಟಿಯ ಬಳಿ ಮರಕ್ಕೆ ಕಟ್ಟಿ ಹಾಕಿದ್ದ  7-8 ವರ್ಷ ಪ್ರಾಯದ ಕಪ್ಪುಬಣ್ಣದ ದನವನ್ನು   ಮತ್ತು 3 ½ ವರ್ಷ ಪ್ರಾಯದ ಕಪ್ಪು ಬಿಳಿ ಬಣ್ಣದ ಕರುವನ್ನು ಸದ್ರಿ KA 19 Z 2154  ಕಾರಿನಲ್ಲಿ  ಹಾಕಿಕೊಂಡು  ಕಳವು ಮಾಡಿಕೊಂಡು ಹೋಗಿರುತ್ತಾರೆ ಸದ್ರಿ ದನ ಕರುಗಳ ಒಟ್ಟು ಮೌಲ್ಯ  ಸುಮಾರು 10.000/- ರೂಪಾಯಿ ಆಗಬಹುದು  ಎಂಬುದಾಗಿ ಜಯಂತಿ (48) , ಗಂಡ : ದಿ/ ಭೋಜ ಪೂಜಾರಿ, ವಾಸ : ಅಮೀನ್‌ ನಿವಾಸ, ತಿಬಾರ್‌ಬೆಟ್ಟು, ಬೆಳುವಾಯಿ ಗ್ರಾಮ, ಮಂಗಳೂರು ತಾಲೂಕು ರವರು ನೀಡದ ದೂರಿನಂತೆ  ಮೂಡಬಿದ್ರೆ ಠಾಣೆ ಅಪರಾದ ಕ್ರಮಾಂಕ 83/2013 ಕಲಂ : 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  • ದಿನಾಂಕ : 24/04/2013 ರಂದು 11.00 ಗಂಟೆಗೆ KA 19 Z 2154  ಬಂದ  ಆರೋಪಿಗಳಾದ ಇಬ್ರಾಹಿಂ, ಖಾದರ್ ಮತ್ತು ಇನ್ನೋಬ್ಬ ವ್ಯಕ್ತಿ , ಪಿರ್ಯಾದಿದಾರರ ಮನೆಯ  ಬಳಿ ಮೇಯಲು ಬಿಟ್ಟಿದ್ದ 2 ವರ್ಷ ಪ್ರಾಯದ ಕಪ್ಪು ಮಿಶ್ರಿತ  ಕಂದು ಬಣ್ಣದ ದನವನ್ನು  ಸದ್ರಿ KA 19 Z 2154  ಕಾರಿನಲ್ಲಿ  ಹಾಕಿಕೊಂಡು  ಕಳವು ಮಾಡಿಕೊಂಡು ಹೋಗಿರುತ್ತಾರೆ ಸದ್ರಿ ದನದ  ಮೌಲ್ಯ  ಸುಮಾರು 3.000/- ರೂಪಾಯಿ ಆಗಬಹುದು  ಎಂಬುದಾಗಿ ಪೂವಪ್ಪ ಪೂಜಾರಿ(69), ತಂದೆ : ದಿ/ ಸೋಮಪ್ಪ ಪೂಜಾರಿ, ವಾಸ : ಕಾಯಿದೆ ಮನೆ, ಬೆಳುವಾಯಿ ಗ್ರಾಮ, ಮಂಗಳೂರು ತಾಲೂಕು. ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ ಅಪರಾದ ಕ್ರಮಾಂಕ 84/2013 ಕಲಂ : 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ:


ಮೂಡಬಿದ್ರೆ ಠಾಣೆ;

  • ದಿನಾಂಕ :24/04/2013 ರಂದು ಬೆಳಿಗ್ಗೆ ಪಿರ್ಯದಿದಾರರು ತಮ್ಮ ಮನೆ ಬಳಿ ಅಂದರೆ ಮಂಗಳೂರು ತಾಲೂಕು ಕಡಂದಲೆ ಗ್ರಾಮದ ಗೋಳಿದಡಿ ಎಂಬಲ್ಲಿಯ ಸಾರ್ವಜನಿಕ ಡಾಮಾರು ರಸ್ತೆಯ ಬಳಿ ನಿಂತಿದ್ದಾಗ, ಸುಮಾರು 11:30 ಗಂಟೆಗೆ ಸಚ್ಚರಿಪೇಟೆ ಕಡೆಯಿಂದ ಮೂಡಬಿದ್ರೆ ಕಡೆಗೆ ಬರುತ್ತಿದ್ದ ಕೆಎ 20 ವಿ 9673 ನೇ ಬಜಾಜ್ ಪಲ್ಸರ್ ಮೋಟಾರು ಸೈಕಲ್  ಸವಾರನಿಗೆ,   ಮೂಡಬಿದ್ರೆ ಕಡೆಯಿಂದ ಸಚ್ಚರಿಪೇಟೆ ಕಡೆಗೆ ಕೆಎ 20 ಬಿ 0932 ನೇ ನಂಬ್ರದ ಮಹೀಂದ್ರ ಪಿಕ್ ಅಪ್ ವಾಹನವನ್ನು ಚಲಾಯಿಸುತ್ತಿದ್ದ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸುತ್ತಾ ಬಂದು ರಸ್ತೆಯ ತೀರ ಬಲಬದಿಗೆ ಬಂದು ಮೋಟಾರು ಸೈಕಲ್ ಸವಾರನಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಪೂರ್ತಿ ಜಖಂಗೊಂಡು ಅದರ ಸವಾರನಿಗೆ ಎರಡೂ ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಕೈಗೆ ಹಾಗೂ ಎದೆಗೆ ಗುದ್ದಿದ ಗಾಯವಾಗಿ ಬಾಯಲ್ಲಿ ರಕ್ತ ಬಂದಿರುತ್ತದೆ. ಗಾಯಾಳುವನ್ನು ಚಿಕಿತ್ಸೆ ಬಗ್ಗೆ  ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಸೇರಿಸಲಾಗಿರುತ್ತದೆ.ಎಂಬುದಾಗಿ ಸುಜಾತ(28), ಗಂಡ ; ಶರಣ್‌ ಪುಜಾರಿ, ವಾಸ : ಗೋಳಿದಡಿ ಭಂಡಸಾಲೆ ಮನೆ, ಕಡಂದಲೆ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ ಅಪರಾದ ಕ್ರಮಾಂಕ 85/2013 ಕಲಂ : 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕೋಣಾಜೆ ಠಾಣೆ ;

  • ದಿನಾಂಕ 23.04.2013 ರಂದು ಫಿರ್ಯಾದಿದಾರರು ಮೋಟಾರ್‌ ಸೈಕಲ್‌ ನಂಬ್ರ ಕೆಎ-19ಡ್ಲ್ಯೂ-2591 ನೇದರಲ್ಲಿ ನಿಯಾಜ್‌ ಯಾನೆ ಇಬ್ರಾಹಿಂ ಖಲೀಲ್‌ ಎಂಬವರೊಂದಿಗೆ ಸಹಸವಾರನಾಗಿ ಮುಡಿಪು ಕಡೆಯಿಂದ ಬರುತ್ತಿರುವಾಗ ಸಂಜೆ ಸುಮಾರು 6:45 ಗಂಟೆಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಅಸೈಗೋಳಿ ಬಸ್‌ ನಿಲ್ದಾಣದ ಬಳಿ ತಲುಪುತ್ತಿದ್ದಂತೆಯೇ ಎದರಿನಿಂದ ಜೀಪ್‌ ನಂಬ್ರ ಕೆಎ-19-ಎ-8934 ನೇಯದನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಬಲಕ್ಕೆ ತಿರುಗುವ ಬಗ್ಗೆ ಸೂಚನೆ ನೀಡ ಒಮ್ಮೆಲೇ ಅಜಾಗರೂಕತೆಯಿಂದ ಎಡಕ್ಕೆ ತಿರುಗಿಸಿ ಫಿರ್ಯಾದಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್‌ ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ  ಫಿರ್ಯಾದಿದಾರರು ಮತ್ತು ಸವಾರ ನಿಯಾಜ್‌ ಯಾನೆ ಇಬ್ರಾಹಿಂ ಖಲೀಲ್‌ರವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಫಿರ್ಯಾದಿದಾರರ ಎಡಕಾಲಿನ ಪಾದದ ಗಂಟಿಗೆ ಗುದ್ದಿದ ರೀತಿಯ ಪೆಟ್ಟಾಗಿರುತ್ತದೆ. ಗಾಯಾಳು ಫಿರ್ಯಾದಿದಾರರು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯನ್ನಾಗಿ ದಾಖಲಾಗಿರುತ್ತಾರೆ ಎಂಬುದಾಗಿ  ಎಂ.ಕೆ.ನವಾಜ್‌ (27) ತಂದೆ: ಮಹಮ್ಮದ್‌ ತಾಹ ವಾಸ; ಎಂ.ಕೆ. ಮಂಝಿಲ್‌ ಕಸಬ ಬೆಂಗ್ರೆ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಕೋಣಾಜೆ ಠಾಣೆ ಅಪರಾದ ಕ್ರಮಾಂಕ 97/2013 ಕಲಂ: 279, 337 ಐ.ಪಿ.ಸಿ.  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ:


ಮೂಡಬಿದ್ರೆ ಠಾಣೆ;

  • ದಿನಾಂಕ : 24-04-2013 ರಂದು 12:30 ಗಂಟೆಗೆ ಪಿರ್ಯಾದಿ ಶ್ರೀಮತಿ sಸುಶೀಲರವರು, ಮನೆಯಲ್ಲಿದ್ದ ವೇಳೆ ಹೊರಗಿನಿಂದ ಬಂದ ಪಿರ್ಯಾದಿದಾರರ ಗಂಡ, ಆರೋಪಿ ಆನಂದ ಕೋಟ್ಯಾನನು, ಚಾಳಿಯಂತೆ ಈ ದಿನವೂ ಅವಾಚ್ಯವಾಗಿ ಬೈಯುತ್ತಾ,  ನೀನು ಹಣವಂತರ ಸಂಗ ಮಾಡುತ್ತಿದ್ದೀಯ, ಊರವರೆಲ್ಲಾ ನಿನ್ನ ಮಿಂಡರು, ಬೇವರ್ಸಿ ಎಂದು ಬೈದು, ನಿನ್ನನ್ನು ಕೊಲ್ಲುತ್ತೇನೆ ಎಂದು ಜೀವಬೆದರಿಕೆ ಹಾಕಿ, ಪಿರ್ಯಾದಿದಾರರ ಕೈಯಲ್ಲಿದ್ದ ಕತ್ತಿಯನ್ನು ಎಳೆದು ತೆಗೆದು, ಪಿರ್ಯಾದಿದಾರರ ತಲೆಯ ಬಲಭಾಗಕ್ಕೆ ಹೊಡೆದ ಪರಿಣಾಮವಾಗಿ  ತಲೆಗೆ ರಕ್ತಗಾಯವಾಗಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ಆಳ್ವಾಸ್ ಆಸ್ಪತ್ರೆಗೆ ತಂದು  ಒಳರೋಗಿಯಾಗಿ ದಾಖಲಿಸಿರುವುದು ಎಂಬುದಾಗಿ  ಸುಶೀಲ (48), ಗಂಡ : ಅನಂದ ಕೋಟ್ಯಾನ್‌, ವಾಸ : ವರ್ಣಬೆಟ್ಟು ಹೌಸ್‌, ಪಾಲಡ್ಕ ಗ್ರಾಮ, ಮಂಗಳೂರು ತಾಲೂಕು  ರವರು ನೀಡಿದ ದೂರಿನಂತೆ  ಮೂಡಬಿದ್ರೆ ಠಾಣೆ ಅಪರಾದ ಕ್ರಮಾಂಕ 86/2013 ಕಲಂ : 324, 504, 506 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment