Tuesday, April 16, 2013

Daily Crime Incidents For April 16, 2013


ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ;

  • ದಿನಾಂಕ: 15-04-2013 ರಂದು ಸಮಯ ಬೆಳಿಗ್ಗೆ ಸುಮಾರು 08.35 ಗಂಟೆಗೆೆ ಪಿರ್ಯಾದುದಾರರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಏಂ-19-ಇಈ-6607 ರಲ್ಲಿ ಸವಾರರಾಗಿ, ವಿವೇಕ್ ಆಚಾರ್ಯ ಎಂಬವರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಮಲ್ಲಿಕಟ್ಟೆ ಕಡೆಯಿಂದ  ಪಂಪ್ವೆಲ್ ಕಡೆಗೆ ಶಿವಭಾಗ್ 1ನೇ ಕ್ರಾಸ್ ಮಾರ್ಗವಾಗಿ ಹೋಗುತ್ತಾ ಬಿಸ್ಲೇರಿ ಕಚೇರಿಯ ಬಳಿ ತಲುಪಿದಾಗ ಮುಂದಿನಿಂದ ಅಂದರೆ ಪಂಪ್ವೆಲ್ ಸರ್ಕಲ್ ಕಡೆಯಿಂದ ಶಿವಭಾಗ್ ಕಡೆಗೆ ಕಾರು ನಂಬ್ರ ಏಂ-19-ಒಅ-7464 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಪಿರ್ಯಾದುದಾರರ ಮೋಟಾರು ಸೈಕಲ್ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ವಿವೇಕ್ ಆಚಾರ್ಯ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಫಿರ್ಯಾದುದಾರರಿಗೆ ತುಟಿಗೆ ಮತ್ತು ಎಡಕಾಲಿಗೆ ತರಚಿದ ಗಾಯ, ಮುಂಭಾಗದ ಹಲ್ಲುಗಳು ತುಂಡಾಗಿ ಎದೆಗೆ ಗುದ್ದಿದ ಗಾಯವಾಗಿರುತ್ತದೆ ಹಾಗೂ ವಿವೇಕ್ ಆಚಾರ್ಯರವರ ಎಡ ಕೈಗೆ ಗಂಭೀರ ಸ್ವರೂಪದ ಗುದ್ದಿದ ಗಾಯ ಗೊಂಡವರು ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸುರೇಂದ್ರ ಆಚಾರ್ಯ (42) ತಂದೆ: ದಿ.ವಿಠ್ಠಲ ಆಚಾರ್ಯ  ವಾಸ: ಕೆ.ಆರ್.ನಾಯಕ್ ಕಂಪೌಚಿಡ್, ನಿಯರ್ ಸಾ ಮಿಲ್, ಅಳಪೆ, ಪಡೀಲ್ ಅಂಚೆ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 75/13  ಕಲಂ- 279,  338 ಐಪಿಸಿ  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:

ಮಂಗಳೂರು ಪೂರ್ವ ಠಾಣೆ;
  • ದಿನಾಂಕ: 15-04-2013 ರಂದು ಪಿರ್ಯಾದಿದಾರರು ಠಾಣೆಗೆ ಬಂದು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ಪಿರ್ಯಾದಿದಾರರು ಇಂದು ದಿನಾಂಕ 15-04-2013 ರಂದು ಬೆಳಿಗ್ಗೆ ಸುಮಾರು 9.00 ಗಂಟೆಗೆ ಪಿ.ವಿ.ಎಸ್ ನಲ್ಲಿರುವ ತಮ್ಮ ಕಂಪೆನಿಯ ನಿಮರ್ಾಣ ಹಂತದ ಕಟ್ಟಡವನ್ನು ನೋಡಿಕೊಳ್ಳುತ್ತಿದ್ದ ಸಮಯ ಬಿಕರ್ನಕಟ್ಟೆ ಕೈಕಂಬ ಬಳಿ ಸದ್ರಿಯವರ ಕಂಪೆನಿಯವರೇ ನಿಮರ್ಿಸುತ್ತಿರುವ ರಸ್ತೆ ಮೇಲ್ಪಂಕ್ತಿ ನಿಮರ್ಾಣ ಹಂತದಲ್ಲಿದ್ದು ಅಲ್ಲಿಂದ ನಿತಿನ್ ಎಂಬವರು ದೂರವಾಣಿಯ ಮೂಲಕ ಪಿರ್ಯಾದಿದಾರರಿಗೆ ಸದ್ರಿ ರಸ್ತೆಯ ಮೇಲ್ಪಂಕ್ತಿಯಲ್ಲಿ ಯಾರೋ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರು ಸುಮಾರು 10.00 ಗಂಟೆಗೆ ಸದ್ರಿ ಸ್ಥಳಕ್ಕೆ ಬಂದು ನೋಡಲಾಗಿ ಅದು ಯಾರೋ ಅಪರಿಚಿತ ಸುಮಾರು 30-35 ವರ್ಷ ಪ್ರಾಯದ ಗಂಡಸಿನ ಮೃತದೇಹವಾಗಿದ್ದು, ನೀಲಿ ಬಣ್ಣದ ಪ್ಯಾಂಟು ಹಾಗೂ ಉದ್ದ ತೋಳಿನ ಗೆರೆ-ಗೆರೆಯ ಅಂಗಿ ಧರಿಸಿರುವುದಾಗಿದೆ. ಸದ್ರಿ ಮೃತನು ರಾತ್ರಿ ಸಮಯದಲ್ಲಿ ಕುಡಿತದ ಅಮಲಿನಿಂದಲೋ ಅಥವಾ ಇನ್ಯಾವುದೋ ಕಾರಣದಿಂದ ಎಡವಿ ರಸ್ತೆಗೆ ಬಿದ್ದು ಮೃತಪಟ್ಟಂತೆ ಕಂಡು ಬರುತ್ತಿದ್ದು, ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸುವರೇ, ಎಂಬುದಾಗಿ ಯೋಗೇಶ್ ಪ್ರಾಯ (32)ತಂದೆ: ವಾಮನ ಪೂಜಾರಿ  ವಾಸ: ನಡುಪಟ್ಟಲ, ಕಮರ್ಾರ್ ಅಂಚೆ ಬಜ್ಪೆ, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಯುಡಿಆರ್ ನಂಬ್ರ: 11-2013, ಕಲಂ: 174(ಸಿ) ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  • ದಿನಾಂಕ: 15-04-2013 ರಂದು ಪಿರ್ಯಾದಿದಾರರು ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ಕದ್ರಿ ಸುವರ್ಣ ಲಾಡ್ಜ್ನ ಸ್ವಾಗತಕಾರರಾಗಿದ್ದು ದಿನಾಂಕ 13-04-2013 ರಂದು ರಾತ್ರಿ 9.45 ಗಂಟೆಗೆ ಉಮೇಶ್ ತಂದೆ: ಅಣ್ಣು, ಕದ್ರಿ ಶಿವಭಾಗ್ರವರು ಲಾಡ್ಜ್ಗೆ ಬಂದು ರೂಂ ನಂಬ್ರ 307ನ್ನು ಪಡೆದುಕೊಂಡಿದ್ದು ಈ ದಿನ ದಿನಾಂಕ:15-04-2013 ರಂದು ಸಂಜೆ ರೂಂನ ಬಾಗಿಲು ಹಾಕಿದ್ದನ್ನು ಗಮನಿಸಿದ್ದು ಸಂದೇಹಪಟ್ಟು ಬಾಗಿಲನ್ನು ಬಲಾತ್ಕಾರದಿಂದ ಓಪನ್ ಮಾಡಿದಾಗ ಸದ್ರಿ ಉಮೇಶನು ರೂಂನ ಫ್ಯಾನಿಗೆ ಹಗ್ಗದ ಸಹಾಯದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈತನು ವಿಪರೀತ ಕುಡಿತದ ಚಟದಿಂದಲೋ ಅಥವಾ ಯಾವದೋ ಖಾಯಿಲೆಯಿಂದ ಬಳಲುತ್ತಿದ್ದವನೋ ಜೀವನದಲ್ಲಿ ಜಿಗುಪ್ಸೆಗೊಂಡು ಮಾಡಿಕೊಂಡಿರುವುದಾಗಿದೆ, ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸುವರೇ, ಎಂಬುದಾಗಿ ರೋಹಿತ್ ಬಿ. ಪ್ರಾಯ (26) ತಂದೆ: ಮೋನಪ್ಪ ಗೌಡ ಬಿ ವಾಸ: ಪುತ್ತಿಲ ಮನೆ, ಸುಳ್ಯ (ತಾ) ಅ/ಔ ಸುವರ್ಣ ವಸತಿ ಗೃಹ, ಶಿವಬಾಗ್ ಕದ್ರಿ. ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಯುಡಿಆರ್ ನಂಬ್ರ: 12-2013, ಕಲಂ: 174(ಸಿ) ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಬಜಪೆ ಠಾಣೆ:

  • ದಿನಾಂಕ: 12-04-2013 ರಂದು ಸಂಜೆ 7-00 ಗಂಟೆಗೆ ಮಂಗಳೂರು ತಾಲೂಕಿನ, ಕುಳವೂರು ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಫಿರ್ಯಾದಿದಾರರ ಮಾವ ಸತೀಶ ಬಂಗೇರ, 40 ವರ್ಷ, ಎಂಬವರು ಅವರದೇ ಮನೆಯ ತೆಂಗನ ತಿಡಕ್ಕೆ ಸೊಪ್ಪು ಹಾಕುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಅವರ ತಲೆಗೆ ತೀವ್ರ ಜಖಂ ಆಗಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಫಾ: ಮುಲ್ಲರ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಮಕ: 14-04-2013 ರಂದು ರಾತ್ರಿ ಸುಮಾರು 10-30 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬುದಾಗಿ ರಾಜೇಂದ್ರ ಬಿ., 231 ವಸ, ತಮದೆ: ಬಿ. ಶೀನ ಪೂಜಾರಿ, ವಾಸ: ದೇವಿ ಕೃಪಾ ಮನೆ, ಕೋಡಂಗಲ್ಲು , ಪ್ರಾಂತ್ಯ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಯುಡಿಆರ್ ನಂ: 16/2013 ಕಲಂ: 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಸ್ಥಳೀಯ ಮತ್ತು ವಿಶೇಷ ಕಾನೂನು:

ಬಜಪೆ ಠಾಣೆ:

  • ದಿನಾಂಕ: 15-04-2013 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರಾದ ಪದ್ಮಶ್ರೀ ಆರ್. ಭೂ ವಿಜ್ಞಾನಿ, ಮಂಗಳೂರು ಇವರಗೆ ದೊರೆತ ಮಾಹಿತಿಯಂತೆ ಅವರು 14-15 ಗಂಟೆಗೆ ಮುತ್ತೂರು ಗ್ರಾಮದ ಫಲ್ಗುಣಿ ನದಿ ತೀರಕ್ಕೆ ಹೋಗಿ ನೋಡಿದಾಗ ಅಲ್ಲಿ ಎರಡು ಬೃಹತ್ ಯಂತ್ರೋಪಕರಣಗಳಾದ ಹಿಟಾಚಿಗಳು ಎದ್ದು, ಅದರಲ್ಲಿ ಮರಳು ತೆಗೆದ ಕುರುಹುಗಳು ಇದ್ದು ಅಲ್ಲಿ ಸೇರಿದ ಜನರು ಈ ಯಂತ್ರೋಪಕರಣದಿದಲೇ ಆರೋಪಿಗಳಾದ  ನದಿಯ ಮರಳನ್ನು ತೆಗೆದು ಕಳ್ಳತನದಿಂದ ಸಾಗಾಟ ಮಾಡಿರುವುದಾಗಿ ತಿಳಿಸಿದ್ದರಿಂದ ಸದ್ರಿ ಬೃಹತ್ ಯಂತ್ರೋಪಕರಣಗಳನ್ನು (ಹಿಟಾಚಿಗಳು) ಎತ್ತಲು ಯಾವುದೇ ಸಾಧನ ಹಾಗೂ ಅದರ ಅಪರೇಟರ್ಗಳು ಇಲ್ಲದಿದ್ದರಿಂದ ಅವುಗಳನ್ನು ಸ್ಥಳದಲ್ಲಿಯೇ ಬಿಟ್ಟು ಬಂದಿರುವುದಾಗಿಯೂ, ಆರೋಪಿಗಳು ಸರಕಾರಿ ಜಾಗದಿಂದ ಯಾವುದೇ ದಾಖಲಾಗಿ ಯಾ ಅನುಮತಿಯಿಲ್ಲದೇ ಅನಧಿಕೃತವಾಗಿ ಮರಳನ್ನು ತೆಗೆದು ಕದ್ದುಕೊಂಡು ಹೋಗಿರುವುದಾಗಿದೆ ಎಂಬುದಾಗಿ ಪದ್ಮಶ್ರೀ, 32 ವರ್ಷ, ಭೂ ವಿಜ್ಞಾನಿ, ಗಣಿ ಮ್ತು ಭೂ ವಿಜ್ಞಾನ ಇಲಾಖೆ, ಮಂಗಳೂರು ರವರು ನೀಡಿದ ದೂರಿನಂತೆ ಬಜಪೆ ಠಾಣೆ  ಅಪರಾದ ಕ್ರಮಾಂಕ 116/2013 ಕಲಂ: 379 ಐಪಿಸಿ ಮತ್ತು ಕಲಂ: 4(1), 4(1)(ಎ), 21 ಒಓಇಖ ಂಓಆ ಒಓಇಖಂಐ ಖಇಉಗಐಂಖಿಔಓ ಔಈ ಆಇಗಿಇಐಔಕಒಇಓಖಿ ಂಅಖಿ 1957 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment