Wednesday, April 17, 2013

Daily Crime Incidents For April 17, 2013


ಮಹಿಳೆ ವಿರುದ್ದ ಪ್ರಕರಣ:

ಮೂಡಬಿದ್ರೆ ಠಾಣೆ;

  • ದಿನಾಂಕ : 11-04-2013 ರಂದು ಸಂಜೆ ಸುಮಾರು 4-00 ಗಂಟೆಗೆ ಪಿರ್ಯಾದಿದಾರರ ಮಗಳಿಗೆ ಆರೋಪಿ ಸಿರಾಜುದ್ದೀನ್‌ ಎಂಬವನು ಸುಮಾರು 4-5 ತಿಂಗಳಿನಿಂದ ವಿನಾಃ ಕಾರಣ ತೊಂದರೆ ಕೊಡುತ್ತಿದ್ದು, ಪಿರ್ಯಾದಿಯ ಮಗಳು (ಪ್ರಾಯ 16 ವರ್ಷ) ಅಂಗಡಿಗೆ ಸಾಮಾನು ತರಲು ತನ್ನ  ಮನೆಯ ಹಿಂಬದಿಯಿಂದ ಹೋಗುವಾಗ ಆರೋಪಿಯು ರಸ್ತೆಗೆ ಅಡ್ಡವಾಗಿ ಬಂದು ನಿನ್ನ ಜೊತೆ ಸ್ವಲ್ಪ ಮಾತನಾಡಲು ಇದೆ ನನಗೆ ಸಿಗು ಎಂದು ಹೇಳಿದಕ್ಕೆ ಪಿರ್ಯಾದಿದಾರರ ಮಗಳು ಹೆದರಿ ಮನೆ ಕಡೆ ಓಡಲು ಯತ್ನಿಸಿದಾಗ ಆರೋಪಿಯು ಆಕೆಯ ಕೈಯನ್ನು ಹಿಡಿದು ಮಾನಭಂಗಕ್ಕೆ ಪ್ರಯತ್ನಿಸಿದಾಗ ಪಿರ್ಯಾದಿಯ ಮಗಳು ಹೆದರಿ ಬೊಬ್ಬೆ ಹಾಕಿದಾಗ ಹತ್ತಿರದಲ್ಲಿದ್ದ ಪಿರ್ಯಾದಿಯ ದೊಡ್ಡ ಮಗಳು ಓಡಿ ಬರುವುದನ್ನು ನೋಡಿ ಆರೋಪಿಯು ಕೈಯನ್ನು ಬಿಟ್ಟು ಓಡಿ ಹೋಗಿರುತ್ತಾನೆ, ಅಲ್ಲದೇ ಊರಿನ ಅನೇಕ ಮುಗ್ದ ಹುಡುಗಿಯರಿಗೆ ಚುಡಾಯಿಸುವುದು ಹಾಗೂ ಕಿರುಕುಳ ಕೊಡುತ್ತಾ ಬರುತ್ತಿದ್ದಾನೆ ಎಂಬುದಾಗಿ ಇಸ್ಮಾಯಿಲ್‌ (44), ತಂದೆ : ಮಹಮ್ಮದ್‌ ಶರೀಫ್‌, ವಾಸ : ಹಾಜರ ಮಂಜಿಲ್‌ ಪುತ್ತಿಗೆ ಪದವು, ಪುತ್ತಿಗೆ ಗ್ರಾಮ, ಮಂಗಳೂರು ತಾಲೂಕು ರವರು ನೀಡದ ದೂರಿನಂತೆ  ಮೂಡಬಿದ್ರೆ  ಠಾಣೆ ಅಪರಾದ ಕ್ರಮಾಂಕ 79/2013 ಕಲಂ : 341, 354 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ  ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ:

ಕಾವೂರು ಠಾಣೆ; 

  • ಫಿರ್ಯಾದಿದಾರರಾದ ಶ್ರೀಮತಿ ಪ್ರಭಾ ಯು. ಶೆಟ್ಟಿ ಎಂಬವರು ತಾರೀಕು 15-04-2013 ರಂದು ಬಸ್ಸು KA 19 D 5955 ನೇಯದರಲ್ಲಿ ಕೂಳೂರು ಕಡೆಯಿಂದ ಕಾವೂರು ಕಡೆಗೆ ಪ್ರಯಾಣಿಸುತ್ತಿದ್ದು ಬೆಳಿಗ್ಗೆ 11-00 ಗಂಟೆಗೆ ಅಂಬಿಕಾ ನಗರ ಬಸ್ ಸ್ಟಾಪ್ ನಲ್ಲಿ ಪ್ರಯಾಣಿಕರನ್ನು ಇಳಿಸಲು ಚಾಲಕರು ಬಸ್ಸನ್ನು ನಿಲ್ಲಿಸಿದಾಗ ಫಿರ್ಯಾದಿದಾರರು ಬಸ್ಸಿನ ಹಿಂಬಾಗಿಲಿನ ಮೂಲಕ ಬಸ್ಸಿನಿಂದ ಇಳಿಯುತ್ತಿದ್ದಾಗ ಚಾಲಕರು ಬಸ್ಸನ್ನು ಒಮ್ಮಲೆ ನಿರ್ಲಕ್ಷ್ಯತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಬಸ್ಸಿನಿಂದ ಇಳಿಯುತ್ತಿದ್ದ ಫಿರ್ಯಾದಿದಾರರು ಹಿಡಿತ ತಪ್ಪಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಬಗ್ಗೆ ಎ.ಜೆ. ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಎಂಬುದಾಗಿ ಶ್ರೀಮತಿ ಪ್ರಭ ಯು ಶೆಟ್ಟಿ (48 ವರ್ಷ)  ಉದಯ ಶೆಟ್ಟಿ, ವಾಸ: ಬಂಡಶಾಲೆ ಹೌಸ್, ಪವಂಜೆ, ಮಂಗಳೂರು ರವರು ನೀಡಿದ ದೂರಿನಂತೆ ಕಾವೂರು ಠಾಣೆ  ಅಪರಾದ ಕ್ರಮಾಂಕ 91/2013 ಕಲಂ 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ  ಕೈಗೊಳ್ಳಲಾಗಿದೆ.

No comments:

Post a Comment