Monday, March 16, 2015

Daily Crime Reports : 16-03-2015

ದೈನಂದಿನ ಅಪರಾದ ವರದಿ.
ದಿನಾಂಕ 16.03.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
4
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
2
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
1
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-03-2015ರಂದು 21-00 ಗಂಟೆಗೆ ಆರೋಪಿತರುಗಳಾದ ಅಶೋಕ ಶೆಟ್ಟಿ, ಸುಧಾಕರ, ಜನಾರ್ಧನ, ಯಾಕೂಬ್, ಮಾರ್ಕೊಲೋಬೋ ಎಂಬರುಗಳು ಬರ್ಕೆ ಠಾಣಾ ವ್ಯಾಪ್ತಿಯ ನೆಹರು ಅವೆನ್ಯೂ ರಸ್ತೆಯ ಬಳಿ ಇರುವ ಮೊಸಾಕೋ ಅಪಾರ್ಟಮೆಂಟ್ 6ನೇ ಮಹಡಿಯ 604ನೇ ಪ್ಲಾಟ್ನ ಬೆಡ್ರೂಮ್ನಲ್ಲಿ ಹಣವನ್ನು ಪಣವಾಗಿಟ್ಟು ಉಳಾಯಿ ಪಿದಾಯಿ ಎಂಬ ಜೂಜಾಟವನ್ನು ಆಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪಿರ್ಯಾದಿದಾರರಾದ ಪೊಲೀಸ್ ನಿರೀಕರಾದ ಶ್ರೀ ಚಲುವರಾಜು ಬಿ. ರವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಜೂಜಾಟಕ್ಕೆ ಬಳಸಿದ ರೂಪಾಯಿ 18300ನ್ನು ಹಾಗೂ ಇತರ ಸೊತ್ತುಗಳನ್ನು ಸ್ವಾಧಿನಪಡಿಸಿಕೊಂಡು ಆರೋಪಿತರುಗಳನ್ನು ದಸ್ತಗಿರಿ ಮಾಡಿರುವುದಾಗಿದೆ.
 
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಸಾವದ್ ರವರು ತನ್ನ ಬಾಬ್ತು ಆಟೋ ರಿಕ್ಷಾ ನಂಬ್ರ ಕೆಎ-19ಡಿ-3807 ನೇಯದರಲ್ಲಿ ತನ್ನ ಗೆಳೆಯರಾದ ಇಮ್ರಾನ್‌, ಮುನೀರ್ಹಾಗೂ ಅನ್ಸಾನ್ರವರೊಂದಿಗೆ ಮಲಾರ್ಉರುಸ್ಕಾರ್ಯಕ್ರಮದಿಂದ ವಾಪಾಸು ತನ್ನ ಮನೆಗೆ ಬರುತ್ತಿರುವಾಗ ದಿನಾಂಕ 15.03.2015 ರಂದು ರಾತ್ರಿ 00:15 ಗಂಟೆಗೆ ಬಂಟ್ವಾಳ ತಾಲೂಕು, ಕುರ್ನಾಡು ಗ್ರಾಮದ, ಮಿತ್ತಕೋಡಿ ಜಂಕ್ಷನ್ತಲುಪುತ್ತಿದ್ದಂತೆಯೇ ಮುಡಿಪು ಕಡೆಯಿಂದ ಬೋಳಿಯಾರು ಕಡೆಗೆ ಬರುತ್ತಿದ್ದ ಮಾರುತಿ 800 ಕಾರನ್ನು ಚಾಲಕನ್ನು ಆಟೋ ರಿಕ್ಷಾಕ್ಕೆ ಅಡ್ಡ ನಿಲ್ಲಿಸಿ ಅದರಲ್ಲಿದ್ದು 4 ಜನರು ಫಿರ್ಯಾದಿದಾರರಿಗೆ ಮತ್ತು ಇಮ್ರಾನ್ರವರಿಗೆ ಬಾಟ್ಲಿಯಿಂದ ಹಲ್ಲೆ ನಡೆಸಿದ ಪರಿಣಾಮ ಹಣೆಗೆ ಗಾಯವಾಗಿದ್ದುಅಲ್ಲದೇ ಆ ಸಮಯ 4 ಮೋಟಾರ್ಸೈಕಲ್ನಲ್ಲಿ ಬಂದು ಸುಮಾರು 8 ಜನರು ಫಿರ್ಯಾದಿದಾರರಿಗೆ ಮತ್ತು ಅವರ ಸ್ನೇಹಿತರಿಗೆ ಕೈಗಳಿಂದ ಹಲ್ಲೆ ನಡೆಸಿ ಕಾಲಿನಿಂದ ತುಳಿದು, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿದ್ದು, ಆ ಸಮಯ ಬೋಳಿಯಾರು ಕಡೆಯಿಂದ ಬಂದ ಕಾರನ್ನು ನೋಡಿ ಆರೋಪಿಗಳು ಅಲ್ಲಿಂದ ಹೋಗಿರುತ್ತಾರೆ. ಗಾಯಾಳು ಫಿರ್ಯಾದಿದಾರರು ಮತ್ತು ಇಮ್ರಾನ್ರವರು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಹೋಗಿರುತ್ತಾರೆ. ಬಳಿಕ ಮನೆಯವರಿಗೆ ವಿಷಯ ತಿಳಿಸಿ ದೂರು ನೀಡಿರುವುದಾಗಿದೆ.
 
3.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-03-2015 ರಂದು ಸಂಜೆ 06-30 ರಂದು ಪಿರ್ಯಾದುದಾರರಾದ ಶ್ರೀ ಎಂ. ಆಸೀಫ್ ರವರು ಮುಕ್ಕಚೇರಿ ಮಸೀದಿಯಲ್ಲಿ ನಡೆದ ಊರುಸ್ಬಗ್ಗೆ ನಡೆದ ಸಭೆ ಹಾಜರಾಗಿ ಸಭೆ ಮುಗಿಸಿಕೊಂಡು ಮಸೀದಿಯಿಂದ ಹೊರಡುವಾಗ ಮಸೀದಿಯ ಗೇಟಿನ ಬಳಿ ಆಸೀಫ್‌ @ ಮಂದ ಆಸೀಫ್‌, ಹರ್ಷದ್ಮೆಕ್ಯಾನಿಕಲ್‌, ತಂಝೀಲ್‌, ಮತ್ತು ಪಝಲ್ರವರು ತಡೆದು ನಿಲ್ಲಿಸಿ ಮಸೀದಿಯ ಅಧ್ಯಕ್ಷಕರನ್ನು ಬದಲಾಯಿಸುವುದು ಬೇಡ ಎಂದು ಹೇಳಲು ನೀನು ಯಾರು ಎಂದು ಪಿರ್ಯಾದುದಾರರನ್ನು ಅವಾಚ್ಯ ಶಬ್ದಗಳಿಂದ ಬೈದು, ನಾಲ್ಕು ಜನರು ಸೇರಿ ಪಿರ್ಯಾದುದಾರರನ್ನು ಹಿಡಿದು ಕೈಗಳಿಂದ ಮುಖಕ್ಕೆ, ಬೆನ್ನಿಗೆ, ತಲೆಗೆ, ಎದೆಗೆ ಹೊಡೆದು ನಿನ್ನನ್ನು ನೋಡಿಕೊಳ್ಳುತ್ತೆನೆ ಎಂದು ಬೆದರಿಕೆ  ಹಾಕಿರುತ್ತಾರೆ ಅಷ್ಟರಲ್ಲಿಯೇ ಅಲ್ಲಿಗೆ ಸಭೆಗೆ ಬಂದಿದ್ದ ಅಶ್ರಫ್‌, ಸಿದ್ದೀಖ್‌, ಸರ್ಪ್ರಾಜ್ಮತ್ತು ಇತರರು ಬಂದು ಬಿಡಿಸಿರುತ್ತಾರೆ.
 
4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಖತೀಜಮ್ಮ ಎಂಬವರು ತನ್ನ ಮಗಳನ್ನು ಉಳ್ಳಾಲ ಹಳೇಕಲ ನಿವಾಸಿ ಮೊಹಮ್ಮದ್ ಅಶ್ರಫ್ ಎಂಬವರಿಗೆ ವಿವಾಹ ಮಾಡಿಕೊಟ್ಟಿದ್ದು, ಪಿರ್ಯಾದಿದಾರರ ಮಗಳ ಗಂಡನ ತಮ್ಮ ಸಮೀರ್ ಎಂಬಾತನು ವಿನಾಕಾರಣ ಕಿರುಕುಳ ನೀಡುತ್ತಿದ್ದ ಬಗ್ಗೆ ದಿನಾಂಕ 15-03-2015 ರಂದು ಸಂಜೆ ದೂರವಾಣಿ ಮುಖೇನ ತಿಳಿಸಿದಂತೆ ಪಿರ್ಯಾದಿದಾರರು ತನ್ನ ಮನೆಯಾದ ಕೃಷ್ಣಾಪುರದಿಂದ ತನ್ನ ಗಂಡ ಮೊಹಮ್ಮದ್ ಉಸ್ಮಾನ್ ರವರೊಂದಿಗೆ ತನ್ನ  ಮಗಳ ಮನೆಗೆ ಬಂದಾಗ ಸಮಯ ಸುಮಾರು ರಾತ್ರಿ 9:00 ಗಂಟೆಗೆ ಸಮೀರ್ ಎಂಬವನು ತನ್ನ ಮಗಳನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಯುತ್ತಿರುವಾಗ ಪಿರ್ಯಾದಿದಾರರು ಮತ್ತು ಅವರ ಗಂಡ ಮೊಹಮ್ಮದ್ ಉಸ್ಮಾನ್ ರವರು ಸೇರಿ ಮಗಳ ಗಂಡನ ತಮ್ಮ ಸಮೀರ್ ಎಂಬಾತನನ್ನು ವಿಚಾರಿಸಿದಾಗ ಆತನು ಪಿರ್ಯಾದಿದಾರರಿಗೂ ಅವಾಚ್ಯ ಶಬ್ದಗಳಿಂದ ಬೈದು ಚಾ ಕುಡಿಯುವ ಗಾಜಿನ ಗ್ಲಾಸನ್ನು ಬಿಸಾಡಲು ಪ್ರಯತ್ನಿಸಿದಾಗ ಪಿರ್ಯಾದಿದಾರರು ಹೆದರಿ ಓಡುವಾಗ ತಡೆದು ನಿಲ್ಲಿಸಿ ಕೈಯಲ್ಲಿದ್ದ ಗಾಜಿನ ಗ್ಲಾಸಿನಿಂದ ಪಿರ್ಯಾದಿದಾರರ ತಲೆಗೆ ಮತ್ತು ಬಲ ಕೈಯ ಮೊಣಗಂಟಿಗೆ ಹೊಡೆದು ರಕ್ತ ಗಾಯವುಂಟು ಮಾಡಿರುವುದಾಗಿದೆ.
 
5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 14.03.2015 ರಂದು ಸಮಯ ಸುಮಾರು ಬೆಳಿಗ್ಗೆ 07.00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮೋದೀನ್ ಕುಂಞ ರವರು ಅವರ ಬಾಬ್ತು KL-14 L-3274 ಆ್ಯಪೆ ರಿಕ್ಷಾ ಟೆಂಪೊ ದಲ್ಲಿ ಅವರ ಸ್ನೇಹಿತ ಮಾಧವರನ್ನು ಕುಳ್ಳರಿಸಿಕೊಂಡು ಚಲಾಯಿಸುತ್ತಾ  ಮಂಗಳೂರು ದಕ್ಕೆಯ ಕಡೆಯಿಂದ  ಮಂಜೇಶ್ವರ ಕಡೆಗೆ ಹೋಗುವರೇ ಮಹಾಕಾಳಿ ಪಡ್ಪುವಿನ ಬಳಿಯ ಜೆಪ್ಪಿನಮೊಗರು ಜಂಕ್ಷನ್ಬಳಿ ತಲುಪುತ್ತಿದ್ದಂತೆ ತೊಕ್ಕಟ್ಟು ಕಡೆಯಿಂದ ಟಿಪ್ಪರ್ಲಾರಿಯೊಂದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಟೆಂಪೊಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಹಾಗೂ ಮಾಧವ ಟೆಂಪೊ ಸಹಿತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಫಿರ್ಯಾದಿದಾರರ ತಲೆಯ ಹಿಂಭಾಗಕ್ಕೆ ರಕ್ತ ಗಾಯ ಮುಖದ ಬಲಭಾಗ , ಬಲಕೈಗೆ, ಬಲಕಾಲಿನ ಪಾದದ ಅಡಿಯಲ್ಲಿ ರಕ್ತ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ಗಾಯ ಉಂಟಾಗಿದ್ದು, ಹಾಗೂ ಅವರ ಜೊತೆಯಿದ್ದ ಮಾಧವರಿಗೆ ಬಲಕೈ ಮೊಣಗಂಟಿಗೆ ಹಾಗೂ ಹಣೆಯ ಬಲಭಾಗಕ್ಕೆ ರಕ್ತಗಾಯ ಮತ್ತು ಸೊಂಟಕ್ಕೆ,ಬಲತೊಡೆಗೆ ಗುದ್ದಿದ ನೋವು ಉಂಟಾಗಿರುತ್ತದೆ. ಈ ಅಪಘಾತದಿಂದ ಫಿರ್ಯಾದಿದಾರರು ಚಲಾಯಿಸುತ್ತಿದ್ದ ಟೆಂಪೊ ಸಂಪೂರ್ಣ ಜಖಂಗೊಂಡಿರುತ್ತದೆ, ಫಿರ್ಯಾದಿದಾರರು ಇಂಡಿಯಾನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಮಾಧವರನ್ನು ಹೊರರೋಗಿಯಾಗಿ ಚಿಕಿತ್ಸೆ ನೀಡಿ ಕಳುಹಿಸಿರುತ್ತಾರೆ ಈ ಅಪಘಾತ ಮಾಡಿದ ಟಿಪ್ಪರ್ಲಾರಿ ಚಾಲಕನು ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ.
 
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13.03.2015 ರಂದು ರಾತ್ರಿ ಸುಮಾರು 8.15 ಗಂಟೆಗೆ ಫಿರ್ಯಾದಿದಾರರಾದ ಹುಸೈನ್ ಖಾನ್ ರವರು ಪಂಪವೆಲ್ ಸರ್ಕಲ್ ಬಳಿಯ ತೊಕ್ಕಟ್ಟು ಕಡೆಗೆ ಹೋಗುವ ಬಸ್ಸ್ ನಿಲ್ದಾಣದ ಬಳಿ ಅವರ ಗೆಳೆಯನನ್ನು ನೋಡಲು ನಿಂತುಕೊಂಡಿರುವ ಸಮಯ ಸ್ಟೇಟ್ಬ್ಯಾಂಕ್ಕಡೆಯಿಂದ KA-19 AD-6669 ನೇ ನಂಬ್ರದ ಸಿಟಿ ಬಸ್ಸೊಂದನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಬಸ್ಸ್ ನಿಲ್ದಾಣದ ಬದಿಯಲ್ಲಿ ನಿಂತಿದ್ದ ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ತಲೆಯ ಹಿಂಭಾಗಕ್ಕೆ ಗುದ್ದಿದ ನೋವು, ಹಾಗೂ ಕುತ್ತಿಗೆ, ಸೊಂಟ ಮತ್ತು ಕೈ ಕಾಲುಗಳಿಗೆ ಗುದ್ದಿದ ತರಹದ ಗಾಯಗೊಂಡವರು ಸರಕಾರಿ ವೆನ್ಲಾಕ್ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ಹೋದವರಿಗೆ ದಿನಾಂಕ: 14.03.2015 ರಂದು ಫಿರ್ಯಾದಿದಾರರ ತಲೆಗಾದ ಗಾಯವು ಉಲ್ಬಣಗೊಂಡ ಕಾರಣ ಅದೇ ದಿನ ರಾತ್ರಿ ಚಿಕಿತ್ಸೆ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಗೆ ಹೋದಲ್ಲಿ ಪರೀಕ್ಷಿಸಿದ ವೈಧ್ಯರು ಫಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡಿರುವುದಾಗಿದೆ.
 
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಇಸಾಕ್ ಎಂಬವರಿಗೂ ಆರೋಪಿ ಫಾರೂಕ್ ಎಂಬವರಿಗೂ ಹಣದ ವಿಚಾರದಲ್ಲಿ ತಕರಾರು ಇದ್ದು, ಅದಕ್ಕೆ ಸಂಬಂಧಪಟ್ಟಂತೆ ದಿನಾಂಕ: 15.03.2015 ರಂದು ಪಿರ್ಯಾದುದಾರರು ತನ್ನ ಅಂಗಡಿಯನ್ನು ಬಂದ್ಮಾಡಿ ಬಸ್ಸಿನಲ್ಲಿ ಉಳಾಯಿಬೆಟ್ಟಿಗೆ ಬಂದು ಅಲ್ಲಿಂದ ನಡೆದುಕೊಂಡು ಬರುತ್ತಾ ಅವರ ಮನೆಯ ಅಂಗಳಕ್ಕೆ ತಲುಪಿದಾಗ ರಾತ್ರಿ ಸುಮಾರು 8:30 ಗಂಟೆ ಸಮಯಕ್ಕೆ ಆರೋಪಿಯು ಪಿರ್ಯಾದುದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶಮಾಡಿ ಅವರನ್ನು ತಡೆದು ನಿಲ್ಲಿಸಿ 'ನನ್ನ ಹಣ ಕೊಡುದಿಲ್ಲವಾ?' ಎಂದು ಅವಾಚ್ಯ ಶಬ್ದಗಳಿಂದ ಬೈದು ಆತನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದುದಾರರನ್ನು ಕೊಲೆ ಮಾಡುವ ಉದ್ಧೇಶದಿಂದ ತಲೆಗೆ ಕಡಿದಿದ್ದು, ಇದರಿಂದ ತಲೆಗೆ ರಕ್ತ ಗಾಯಗೊಂಡ ಪಿರ್ಯಾದಿದಾರರು ಅಲ್ಲಿಂದ ಓಡಿ ತನ್ನ ಮನೆಯೊಳಗೆ ಹೋದಾಗ ಪಿರ್ಯಾದಿದಾರರ ಹೆಂಡತಿ ಮನೆಯ ಬಾಗಿಲನ್ನು ಹಾಕಿ ಪಿರ್ಯಾದಿದಾರರನ್ನು ರಕ್ಷಿಸಿದ್ದು, ಆ ವೇಳೆ  ಪಿರ್ಯಾದುದಾರರನ್ನು ಬೆನ್ನಟ್ಟಿಕೊಂಡು ಬಂದ ಆರೋಪಿಯು ಮನೆಯ ಹೊರಗೆ ನಿಂತುಕೊಂಡು ಪಿರ್ಯಾದುದಾರರಿಗೆ 'ಇವತ್ತು ನೀನು ಬಚಾವಾಗಿದ್ದು, ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆಯೊಡ್ಡಿದ್ದು, ಆರೋಪಿಯು ಪಿರ್ಯಾದುದಾರರಿಗೆ ಕತ್ತಿಯಿಂದ ಕಡಿದಾಗ ಪಿರ್ಯಾದಿದಾರರು ಅಲ್ಲಿಂದ ಮನೆಯ ಒಳಗಡೆ ಓಡಿ ರಕ್ಷಣೆ ಪಡೆಯದಿದ್ದಲ್ಲಿ ಆರೋಪಿಯು ಅದೇ ಕತ್ತಿಯಿಂದ ಪಿರ್ಯಾದಿದಾರರನ್ನು ಕೊಲೆ ಮಾಡುತ್ತಿದ್ದನು ಎಂಬುದಾಗಿ ದೂರು ನೀಡಿರುವುದಾಗಿದೆ.
 
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15.03.2015 ರಂದು ರಾತ್ರಿ 11:30 ಗಂಟೆಗೆ ವಾಮಂಜೂರು ಜುಮ್ಮಾ ಮಸೀದಿಯಲ್ಲಿ ಸಲಾತ್ ಎಂಬ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಆರೋಪಿಗಳಾದ ಚೆರಿಯ ಮೋನು @ ಸಮೀರ್, ನೌಫಾಲ್, ಫೈಸಲ್, ಸಾಧಿಕ್, ಫೈಸಲ್, ನಿಜಾಮ್, ಅಝರ್ ಮತ್ತು ಅಸ್ಫಾನ್ ಎಂಬವರು ಅಕ್ರಮ ಕೂಟ ಸೇರಿಕೊಂಡು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಎದುರಿನಲ್ಲಿರುವ ರಾ.ಹೆ ರಸ್ತೆಯಲ್ಲಿ ನಿಂತುಕೊಂಡು ಅದರಲ್ಲಿ ಹೋಗಿ ಬರುವ ವಾಹನಗಳಿಗೆ ತೊಂದರೆಯಾಗುವ ರೀತಿಯಲ್ಲಿ ಗುಂಪು ಸೇರಿ ಬೊಬ್ಬೆ ಹಾಕಿ ಮಾತನಾಡುತ್ತಿದ್ದ ವೇಳೆ ಕಾರ್ಯಕ್ರಮದ ಸ್ವಯಂ ಸೇವಕ ಪಿರ್ಯಾದಿದಾರರಾದ ಇಮ್ತಿಯಾಜ್ ಮತ್ತು ಅವರ ಜೊತೆಯಲ್ಲಿ ಸ್ವಯಂ ಸೇವಕರಾಗಿದ್ದ ಅಜರುದ್ದೀನ್ ಹಾಗೂ ನವಾಜ್ ರವರು ಆರೋಪಿಗಳ ಬಳಿ ಹೋಗಿ ರಸ್ತೆಯಿಂದ ಕೆಳಗೆ ಬರುವಂತೆ ಹೇಳಿದಾಗ ಆರೋಪಿಗಳು ಸಮಾನ ಉದ್ಧೇಶದಿಂದ ಪಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೇ ಆರೋಪಿಗಳ ಪೈಕಿ ಚೆರಿಯ ಮೋನು @ ಸಮೀರ್ ಎಂಬಾತನು ಹತ್ತಿರದಲ್ಲಿದ್ದ ಕಟ್ಟಿಗೆ ಡಿಪ್ಪೋದ ಎದುರಿನಿಂದ ಮರದ ಸೋಂಟೆಯನ್ನು ತೆಗೆದುಕೊಂಡು ಬಂದು ಪಿರ್ಯಾದಿಯ ತಲೆಗೆ ಹೊಡೆದು ಗಂಭೀರ ರೀತಿಯ ರಕ್ತ ಗಾಯಗೊಳಿಸಿದ್ದಲ್ಲದೇ ಉಳಿದ ಆರೋಪಿಗಳು ಅಜರುದ್ದೀನ್ ಮತ್ತು ನೌಫಲ್ ಎಂಬವರಿಗೆ ಕಾರ್ಯಕ್ರಮ ಸ್ಥಳದಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಗಳಿಂದ, ಕೈಯಿಂದ ಹಲ್ಲೆ ಮಾಡಿ ನಂತರ 'ನಮ್ಮ ವಿಷಯಕ್ಕೆ ಬಂದರೆ ನೀವು ಉಳಿಯುವುದಿಲ್ಲ, ನಿಮ್ಮನ್ನು ಕಡಿದು ಬಿಸಾಡುತ್ತೇವೆ' ಎಂದು ಜೀವ ಬೆದರಿಕೆ ಹಾಕಿರುತ್ತಾರೆ.
 

No comments:

Post a Comment