Friday, March 20, 2015

Daily Crime Reports : 20-03-2015

ದೈನಂದಿನ ಅಪರಾದ ವರದಿ.
ದಿನಾಂಕ 20.03.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
0
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
2
ವಾಹನ ಕಳವು
:
2
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
5
ವಂಚನೆ ಪ್ರಕರಣ        
:
2
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
1
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಮೊಹಮ್ಮದ್ ರಫೀಕ್ ರವರ 13 ವರ್ಷ ಪ್ರಾಯದ ಇಮ್ರಾನ್ ಎಂಬಾತನು ಲೇಡಿಹಿಲ್ ಪ್ರಾಥಮಿಕ ಶಾಲೆಯಿಂದ 7ನೇ ತರಗತಿಯಲ್ಲಿ ಓದುತ್ತಿದ್ದಾತ ದಿನಾಂಕ 18-03-2015ರಂದು ಸಂಜೆ 6-00 ಗಂಟೆಗೆ ಮಂಗಳೂರು ಬೋಳೂರು ಮಠದಕಣಿ 4 ನೇ ಕ್ರಾಸ್ ನ ಇಮ್ತೀಯಾಜ್ ಕಂಪೌಂಡ್ ಮನೆಯಿಂದ ಹೊರ ಹೋದಾತನು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾನೆ.
 
2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-03-2015 ರಂದು ಪಿರ್ಯಾದಿದಾರರಾದ ಶ್ರೀ ಅಬ್ದುಲ್ ರಹೀಮ್ ರವರು ಮನೆಗೆ ಬೇಕಾದ ಸಾಮಾನುಗಳನ್ನು ತರಲೆಂದು  ಯಾಕೂಬು ಎಂಬವರೊಂದಿಗೆ ಮಂಗಳೂರು ನಗರದ ಬಂದರ್ಗೆ ಬಂದಿದ್ದು, ಅಲ್ಲಿಯ ಅಜಿಜುದ್ದೀನ್ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಸಮಯ ಬೆಳಿಗ್ಗೆ ಸುಮಾರು 10:30 ಗಂಟೆಗೆ ಎಂ.ಎಸ್‌. ಪೈ ಅಂಗಡಿಯ ಸ್ವಲ್ಪ ಮುಂದಕ್ಕೆ ತಲುಪಿದಾಗ, ಲೋವರ್ಕಾರ್ಸ್ಟ್ರೀಟ್ಕಡೆಯಿಂದ ಟೆಂಪೋ ನಂಬ್ರ ಕೆ.-19-ಡಿ-0042 ನೇದನ್ನು ಅದರ ಚಾಲಕ ಅತೀವೇಗ ಮತ್ತು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಬಲಕಾಲಿನ ಪಾದ ಮತ್ತು ಮಣಿಗಂಟಿಗೆ ತೀವ್ರ ತರಹದ ರಕ್ತ ಗಾಯ ಹಾಗೂ ಬಲಕೈಯ ಭುಜಕ್ಕೆ ಗುದ್ದಿದ ನಮೂನೆಯ ನೋವು ಉಂಟಾದವರನ್ನು ಚಿಕಿತ್ಸೆಯ ಬಗ್ಗೆ ನಗರದ ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಒಳ-ರೋಗಿಯಾಗಿ ದಾಖಲು ಮಾಡಿರುವುದಾಗಿದೆ.
 
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17.03.2015 ರಂದು  ಪಿರ್ಯಾದಿದಾರರಾದ ಶ್ರೀ ಮಂಜುನಾಥ ರವರು  ತನ್ನ  ಕುಟುಂಬಸ್ಥರೊಂದಿಗೆ  ಮಾರುತಿ  ಓಮಿನಿ ಕಾರು  ನಂಬ್ರ : ಕೆಎ 17 ಪಿ 08834  ನೇದರಲ್ಲಿ  ಸತೀಶ್‌  ಎಂಬವರನ್ನು  ಚಾಲಕನಾಗಿ  ಗೊತ್ತುಪಡಿಸಿ  ಪ್ರವಾಸಕ್ಕೆ ಹೋಗಿ  ಶೃಂಗೇರಿಗೆ ಹೊರಟು ನಂತರ ಶೃಂಗೇರಿಯಿಂದ ಮಂಗಳೂರಿಗೆ ಬರುತ್ತಾ ದಿನಾಂಕ 18.03.2015 ರಂದು  ಬೆಳಿಗ್ಗೆ ಸುಮಾರು 07:00  ಗಂಟೆ ಸಮಯಕ್ಕೆ  ಮಂಗಳೂರು  ತಾಲೂಕು  ಬೆಳುವಾಯಿ  ಗ್ರಾಮದ ಕಾಂತವರ ಕ್ರಾಸ್ಬಳಿ  ತಲುಪಿದಾದ  ಓಮಿನಿ  ಕಾರನ್ನು  ಚಾಲಕ  ಸತೀಶ್‌  ರವರು  ಅತೀ  ವೇಗ  ಹಾಗೂ  ಅಜಾಗರೂಕತೆಯಿಂಧ  ಚಲಾಯಿಸಿಕೊಂಡು ಹೋಗುವಾಗ  ದನವೊಂದು  ರಸ್ತೆಗೆ ಅಡ್ಡ ಬಂದಾಗ  ಚಾಲಕನು  ಒಮ್ಮೆಲೆ  ಬ್ರೇಕ್ಹಾಕಿದಾಗ  ಓಮಿನಿ  ಕಾರು  ರಸ್ತೆಗೆ  ಅಡ್ಡವಾಗಿ  ಮಗುಚಿಬಿದ್ದ ಕಾರಣ  ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ ಬೆನ್ನಿನ  ಹಿಂಬಾಗಕ್ಕ  ಮತ್ತು  ಬಲ ಕೈಯ  ಅಂಗೈಯಲ್ಲಿ  ತರಚಿದ ಗಾಯವಾಗಿದ್ದು, ಪಿರ್ಯಾಧಿದಾರರ ತಾಯಿ  ಕಮಲಮ್ಮನವರಿಗೆ, ತಲೆಗೆ ರಕ್ತಗಾಯವಾಗಿದ್ದು, ಕೈ ಮತ್ತು  ಕಾಲಿಗೆ ತರಚಿದ  ಗಾಯವಾಗಿದ್ದು, ಕಾರಿನಲ್ಲಿದ್ದ ಪ್ರಮೀಳಾಮ್ಮನಿಗೆ ಬಲ ಕಾಲಿನ ಪಾದಕ್ಕೆ ಗುದ್ದಿದ ಜಖಂ  ಉಂಟಾಗಿದ್ದು, ಎರಡೂ  ಕೈ ಕಾಲಿಗೆ ತರಚಿದ ಗಾಯವಾಗಿದ್ದು, ಗಿರೀಶ್ನಿಗೆ ಹೊಟ್ಟೆಯ ಬಲ ಬಾಗಕ್ಕೆ ಗುದ್ದಿದ ನೋವುಂಟಾಗಿರುವುದಲ್ಲದೆಆರೋಪಿ  ಚಾಲಕ  ಸತೀಶ್ನಿಗೆ ರಕ್ತ ಗಾಯಗಳು  ಉಂಟಾಗಿದ್ದು  ಚಿಕಿತ್ಸೆಯ  ಬಗ್ಗೆ ಮಂಗಳೂರು  ಎಜೆ  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದು  ಚಾಲಕ  ಸತೀಶ್‌  ಮತ್ತು  ಗಿರೀಶ್  ರವರು  ಒಳರೋಗಿಯಾಗಿ  ದಾಖಲಾಗಿರುತ್ತಾರೆ, ಮುಗುಚಿಬಿದ್ದ  ಓಮಿನಿ  ಕಾರು  ಸಂಪುರ್ಣ  ಜಖಂಗೊಂಡಿರುತ್ತದೆ.
 
4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-03-2015 ರಂದು ಸಮಯ 12-30 ಗಂಟೆಗೆ ಮಂಗಳೂರು ನಗರದ ಕರ್ನಾಟಕ ಬ್ಯಾಂಕ್ ಹಿಂಬದಿಯಲ್ಲಿರುವ ಶಿವಬಾಗ್ 5 ನೇ ಕ್ರಾಸ್ ನ ಸುಂದರ ಹೋಂಮ್ಸ್ ನ 303 ನೇ ಪ್ಲಾಟ್ ನಲ್ಲಿ ಬೆಟ್ಟಿಂಗ್ ಜುಗಾರಿ ಆಟ ಆಡುತ್ತಿದ್ದ ಸೋಹನ್ ಲೋಬೋ ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಟಿ.ಡಿ. ನಾಗರಾಜ್ ರವರು ಸಿಬ್ಬಂದಿಗಳ ಸಹಾಯದಿಂದ ವಶಕ್ಕೆ ಪಡೆದುಕೊಂಡು ಬೆಟ್ಟಿಂಗ್ ರೂಪದಲ್ಲಿ ಶರತ್ ಎಕ್ಕೂರು ಹಾಗೂ ಧೀರಜ್ ಮಾಲೇಮಾರ್ ಎಂಬವರಿಂದ ಪಡೆದುಕೊಂಡ ಹಾಗೂ ಆತನ ಬಳಿ ಇದ್ದ ಒಟ್ಟು ರೂ 57,000/- ನಗದು ಹಣ ಹಾಗೂ ಬೆಟ್ಟಿಂಗ್ ಗಾಗಿ ಉಪಯೋಗಿಸಿದ ಸ್ಯಾಮ್ ಸಂಗ್ ಕಂಪೆನಿಯ ಮೊಬೈಲ್ ಫೋನ್ ಒಂದನ್ನು ಪಂಚರ ಸಮಕ್ಷಮದಲ್ಲಿ ,ಮಹಜರು ಮೂಲಕ ಸ್ವಾಧೀನ ಪಡಿಸಿಕೊಂಡು ಠಾಣೆಗೆ ಬಂದು ಠಾಣೆಯಲ್ಲಿ ಆರೋಪಿಗಳ ವಿರುದ್ದ ಕ್ರಮ ದಾಖಲಿಸಿರುವುದಾಗಿದೆ.
 
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18.03.2015 ರಂದು ಸಮಯ ಸುಮಾರು ಮದ್ಯಾಹ್ಣ 2.00 ಗಂಟೆಗೆ ಫಿರ್ಯಾದುದಾರರಾದ ಶ್ರೀ ಅಬ್ದುಲ್ ರೆಹಮಾನ್ ಜಾಸಿಮ್ ರವರು ತಮ್ಮ ಮೋಟರ್ ಸೈಕಲ್ ನಂಬ್ರ KA19-EL-2988 ಸವಾರರಾಗಿದ್ದುಕೊಂಡು  ಪಂಪವೆಲ್ ಕಡೆಯಿಂದ ನಂತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಾ ತಾರೇತೊಟದ ಸಂದೇಶ ಬಳಿ ತಲುಪುತ್ತಿದ್ದಂತೆ, ಸ್ಕೂಟರ್ ನಂಬ್ರ KA04-EY-8939 ನ್ನು ಅದರ ಸವಾರರು  ನಂತೂರು ಕಡೆಯಿಂದ  ಪಂಪವೆಲ್ ಕಡೆಗೆ ಹೋಗುವ ರಸ್ತೆ ಡಿವೈಡರ್ ತೆರವು ಜಾಗದಲ್ಲಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು  ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಬೈಕು ಸಮೇತ ರಸ್ತೆಗೆ ಬಿದ್ದು  ಬಲಕೈಗೆ ಚರ್ಮ ಕಿತ್ತುಹೋದ ಗಾಯ,ಭಲಭುಜಕ್ಕೆ ರಕ್ತಗಾಯ ,ಬಲಕಾಲಿನ ಮೊಣಗಂಟಿಗೆ  ರಕ್ತ ಗಾಯ, ಎಡಕೈ ಕಿರುಬೆರಳಿಗೆ ರಕ್ತ ಗಾಯ, ಎಡಕಾಲಿನ ಮೊಣಗಂಟಿಗೆ ತರಚಿದ ಗಾಯ ಉಂಟಾಗಿ ಇಂಡಿಯಾನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಮತ್ತು ಸ್ಕೂಟರ್ ಸವಾರ ಠಾಣೆಗೆ ಮಾಹಿತಿ ನೀಡದೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸದೇ  ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾರೆ.
 
6.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-03-2015 ರಂದು ಸಂಜೆ 07-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅಜೀಜ್ ರವರು ಕೆಲಸ ಮುಗಿಸಿ ಮನೆಯ ಕಡೆಗೆ ಹೋಗುವರೇ ತನ್ನ ಬಾಬ್ತು ಕೆಎ- 19 ಈಡಿ- 0793 ನೇ ಬೈಕಿನಲ್ಲಿ ಪ್ರಶಾಂತರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕುಂಜತ್ ಬೈಲ್ ಕಡೆಯಿಂದ ಹೊರಟು ಮರಕಡ ಎಂಬಲ್ಲಿ ತಲುಪಿದಾಗ ಎದುರಿನಿಂದ ಕೆಎ- 19 ಈಈ- 4604 ನೇ ಬೈಕ್ ನ್ನು ಅದರ ಸವಾರನು ಅತೀ ವೇಗ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ್ದು, ಪರಿಣಾಮ ಪಿರ್ಯಾದಿದಾರರು ಮತ್ತು ಸಹಸವಾರರಾದ ಪ್ರಶಾಂತ ರವರು ಬೈಕ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಸಾಮಾನ್ಯ ಸ್ವರೂಪದ ಗಾಯವಾಗಿದ್ದು, ಸಹಸವಾರರಾದ ಪ್ರಶಾಂತರವರಿಗೆ ಎಡಗಾಲಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆಗಾಗಿ ಎ ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.
 
7.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-03-2015ರಂದು ರಾತ್ರಿ 8 ಗಂಟೆ ಸಮಯಕ್ಕೆ ಪಿರ್ಯಾಧಿದಾರರಾದ ಶ್ರೀ ಚಂದ್ರಶೇಖರ ಬಿ. ರವರು ಬೆಂಗ್ರೆ ಗ್ರಾಮದ ಭಾರತಿ ಶಿಪ್ ಯಾರ್ಡಿನ ಗೇಟಿನ ಎದುರಿನಲ್ಲಿರುವ ಕುದ್ರೋಳಿ-ಬೆಂಗರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರ ಹಿಂದುಗಡೆಯಿಂದ ಅಂದರೆ ಬೆಂಗರೆಯಿಂದ ತಣ್ಣಿರು ಬಾವಿ ಕಡೆಗೆ ಕೆಎ-19 ಯು-6121 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ವಿಕಿತ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಕೊಂಡು ಬಂದು ಪಿರ್ಯಾಧಿದಾರರರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಸದ್ರಿಯವರು ಮಾರ್ಗಕ್ಕೆ ಬಿದ್ದು, ಎಡ ಕಾಲಿನ ಮೂಳೆ ಮುರಿತವಾಗಿ ಬಲ ಕೈಗೆ ಮತ್ತು ಮುಖಕ್ಕೆ ಗಂಭೀರವಾದ ರಕ್ತ ಗಾಯವಾಗಿದ್ದು, ಮೋಟಾರು ಸೈಕಲು ಸವಾರ ವಿಕಿತ್ ಗೆ ತರಚಿದ ಗಾಯವಾಗಿದ್ದು, ಮತ್ತು ಸಹ ಸವಾರ ಪ್ರೀತಮ್ ಅಮೀನ್ ರವರಿಗೆ ಮುಖಕ್ಕೆ ಕೈ ಕಾಲಿಗೆ ಗಾಯವಾಗಿರುತ್ತದೆ.
 
8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-03-2015 ರಂದು ಮದ್ಯಾಹ್ನ 12-00 ಗಂಟೆಯಿಂದ ರಾತ್ರಿ 10-00  ಗಂಟೆಯ ಮಧ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಪಾಂಡೇಶ್ವರದ ಪೋಸ್ಟ್ ಆಫೀಸ್ ನ ಎದುರಿನ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ನೌಸೀರ್ ರವರ ತಂದೆಯವರ ಬಾಬ್ತು  ಆರ್. ಸಿ. ಮಾಲಕತ್ವದ 2013ನೇ ಮೊಡಲ್ ನ ಬಿಳಿ ಬಣ್ಣದ ಅಂದಾಜು ರೂಪಾಯಿ 30000/- ಬೆಲೆ ಬಾಳುವ    KA 19 EJ 6751 ನೊಂದಣಿ ಸಂಖ್ಯೆಯ, ಹೀರೋ ಮಾಸ್ಟ್ರೋ ಡಿಲಕ್ಸ್  ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ವಾಹನವನ್ನು  ಈವರೇಗೆ ಹುಡುಕಾಡಿದಲ್ಲಿ  ಪತ್ತೆಯಾಗಿರುವುದಿಲ್ಲ.
 
9.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-03-2015 ರಂದು 13-15 ಗಂಟೆಯಿಂದ 13-45 ಗಂಟೆಯ ಅವಧಿಯಲ್ಲಿ, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತದ ಬಾಬ್ತು, ಗ್ರಾಹಕರಿಂದ ಬಂದ ರೂಪಾಯಿ 6,96,800 ರ ಚೆಕ್ ನ್ನು ನೆಲ್ಲಿಕಾಯಿ ರಸ್ತೆಯಲ್ಲಿರುವ  ಕೆನರಾ ಬ್ಯಾಂಕ್ ನಲ್ಲಿ ನಗದೀಕರಣ ಮಾಡಿಪಿರ್ಯಾದುದಾರರಾದ ಶ್ರೀ ಅಶ್ವಿನ್ ಎಂ. ರವರು ತಾನು ಚಲಾಯಿಸಿಕೊಂಡು ಬಂದಿದ್ದ, ಮೋಟಾರ್ ಸೈಕಲ್ ನಂಬ್ರ  KA 19 EA 6174 ನೇ ಹೋಂಡಾ ಎವಿಯೇಟರ್ ಸ್ಕೂಟರ್ ನ ಡ್ಯಾಶ್ ಬೋರ್ಡ್ ನಲ್ಲಿ ಇಟ್ಟು  ಬೀಗ ಹಾಕಿ, ಬಳಿಕ ಅಲ್ಲಿಂದ ಅದೇ ರಸ್ತೆಯಲ್ಲಿರುವ  ಹರ್ಷ ಬಾರ್ ನ ಎದುರುಗಡೆ ಸ್ಕೂಟರ್ ನ್ನು ತಂದು  ನಿಲ್ಲಿಸಿ, ಬಳಿಕ ಒಳಗಡೆ ಹೋಗಿ ಪಾನೀಯ ಕುಡಿದು ಹೊರಗೆ ಬರುವಷ್ಟರಲ್ಲಿ, ಯಾರೋ ಕಳ್ಳರು ಸ್ಕೂಟರ್ ನ ಡ್ಯಾಶ್ ಬೋರ್ಡ್ ನ್ನು ಬಲತ್ಕಾರದಿಂದ ತೆರೆದು, ಡ್ಯಾಶ್ ಬೋರ್ಡ್ ನಲ್ಲಿಟ್ಟಿದ್ದ  ನಗದು ರೂಪಾಯಿ 6,96,800 ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
 
10.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:12-02-2015 ರಂದು 15-30 ಗಂಟೆ ಯಿಂದ  ದಿನಾಂಕ:13-02-2013 ರಂದು ಬೆಳಿಗ್ಗೆ 05-30 ಗಂಟೆಯ ಮಧ್ಯೆ ಅವಧಿಯ ಸಮಯಕ್ಕೆ ಮಂಗಳೂರು ನಗರದ ನಿರೇಶ್ವಾಲ್ಯ ರಸ್ತೆಯ ಬೇಬಿ ಮಿಲ್ ಹತ್ತಿರದಲ್ಲಿ ನಿಲ್ಲಿಸಿದ್ದ ಪಿರ್ಯಾದಿದಾರರಾದ ಶ್ರೀ ಎಂ. ಪ್ರಸಾದ್ ರವರ ಬಾಬ್ತು ಕೆಎ-19-ಸಿ-7879,  ಸಿಟಿವಿ-9595, ಸಿಟಿಎಕ್ಸ್ 8835, ಸಿಎನ್ ಜಿ-6794, ಸಿಎನ್ ಜಿ-8632, ಸಿಆರ್ ಕ್ಯೂ-7129, ಕೆಎ-19-1703, ಕೆಎ-19-8234, ಕೆಎ-16-5725, ಎಮ್..ಕೆ-8032, ಕೆಎ-19-2211 ನೇ ಲಾರಿಗಳ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ, ಕಳವು ಮಾಡಿದ ಬ್ಯಾಟರಿಗಳ  ಅಂದಾಜು ಮೌಲ್ಯ ಸುಮಾರು 90,000/- ರೂ ಆಗಬಹುದು.   ಕಳವು ಮಾಡಿದ  ಆರೋಪಿ ಜಯಂತ ಎಂಬವನನ್ನು ದಸ್ತಗಿರಿ ಮಾಡಿ, ಅವನಿಂದ ಕಳವು ಮಾಡಿದ ಬ್ಯಾಟರಿಗಳನ್ನು ಸ್ವಾಧೀನಪಡಿಸಿಕೊಂಡ ಬಗ್ಗೆ ಮಾಹಿತಿ ತಿಳಿದುಬ್ಯಾಟರಿಗಳನ್ನು ನೋಡಿ ಗುರುತಿಸಿರುವುದಾಗಿ ಮತ್ತು ಅಸೌಖ್ಯದ ಕಾರಣದಿಂದ  ತಡವಾಗಿ ದೂರು ನೀಡಿರುವುದಾಗಿದೆ.
 
11.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-03-2015 ರಂದು ಸಂಜೆ 06-30 ಗಂಟೆಯಿಂದ 07-00 ಗಂಟೆಯ ಮಧ್ಯೆ ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಜಂಕ್ಷನ್ಬಳಿ ಫಿರ್ಯದಿದಾರರಾದ ಶ್ರೀ ಎಂ. ಅನಿಲ್ ಕುಮಾರ್ ರವರು ನಿಲ್ಲಿಸಿದ್ದ ಕೆಎ-19-ಇಡಿ-9436 ನೇ ನಂಬ್ರದ ಟಿವಿಎಸ್ಸ್ಟಾರ್ಸಿಟಿ ಮೋಟಾರ್ಸೈಕಲ್ನ್ನು ಹಾಗೂ ಅದರಲ್ಲಿದ್ದ ದಾಖಲಾತಿಯನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಮೋಟಾರ್ಸೈಕಲ್ನ ಪತ್ತೆಗೆ ಪ್ರಯತ್ನಿಸಿ ಪತ್ತೆಯಾಗದೇ ಇದ್ದು, ಕಳವಾದ ಮೋಟಾರ್ಸೈಕಲ್ನ ಮೌಲ್ಯ ರೂ. 20,000/- ಆಗಿರುವುದಾಗಿದೆ.
 
12.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಹಿರೇರಾಲ್ಎಸ್ಬಿ ಎಂಬವರು ಮಂಗಳೂರು ಕಾರ್ಸ್ಟ್ರೀಟ್ನ ಪೂಜಾ ಪ್ಯಾಲೇಸ್ನಲ್ಲಿ ಎಸ್‌.ಕೆ ಜ್ಯುವೆಲ್ಲರ್ಸ್ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದು ದಿನಾಂಕ: 12-12-2014 ರಂದು ಕಾಸರಗೋಡು ಉಪ್ಪಳದ ಕ್ವೀನ್ಗೋಲ್ಡ್ಜ್ಯುವೆಲ್ಲರ್ನ ರಫೀಕ್‌, ಸಲಾಂ, ನಿಯಾಜ್‌, ಸವಾದ್‌, ಸಾಲಿಹ್ಎಂಬವರು 26,97,388.87 ರೂ. ಮೌಲ್ಯದ ಚಿನ್ನಾಭರಣವನ್ನು ಅಂಗಡಿಯಿಂದ ಖರೀದಿ ಮಾಡಿದ್ದು ನಂತರ ಹಣವನ್ನು ಕೇಳಿದಾಗ ಈಗ ಕೊಡುತ್ತೇನೆ ಮತ್ತು ಮತ್ತೆ ಕೊಡುತ್ತೇನೆ ಎಂದು ನಂಬಿಸಿ ಈವರೆಗೆ ಹಣವನ್ನು ವಾಪಾಸು ಕೊಡದೇ ಸಮಾನ ಉದ್ದೇಶದಿಂದ ಮೋಸ  ಮಾಡಿರುತ್ತಾರೆ.
 
13.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-03-2015 ರಂದು ಫಿರ್ಯಾಧಿದಾರರಾದ ಶ್ರೀಮತಿ ಕಮಲ್ ರವರು ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ರಾವ್ & ರಾವ್ ಸರ್ಕಲ್ ಬಳಿನಡೆದುಕೊಂಡು ಹೋಗುತ್ತಿರುವಾಗ ಒಬ್ಬ ಅಪರಿಚಿತ ವ್ಯಕ್ತಿ ಬಂದು ಫಿರ್ಯಧಿದಾರರಲ್ಲಿ ನಿಮ್ಮ ಮಗಳ ಪರಿಚಯ ವಿದೆ ಎಂಬುದಾಗಿ ತಿಳಿಸಿ ನಂತರ ಚಾ ಕುಡಿಯುವ ಬನ್ನಿ ಎಂದು ಹೇಳಿ ಆರಾಧನ ಹೋಟೆಲ್ ಗೆ ಕರೆದುಕೊಂಡು ಹೋಗಿ ಚಾ ಕುಡಿಸಿ ನಂತರ ಇಬ್ಬರು ಹೋಟೆಲ್ ನಿಂದ ಹೊರಗಡೆ ಬಂದು ಲೇಡಿಗೋಷನ್ ಬಳಿ ನಡೆದುಕೊಂಡು ಬರುವಾಗ ಪಿರ್ಯಧಿದಾರರ ಬಳಿ ನಿಮ್ಮ ಕುತ್ತಿಗೆ ಸರ ಎಲ್ಲಿ ಮಾಡಿಸಿದ್ದು ನನ್ನ ತಾಯಿಗೆ ಇದೇ ರೀತಿಯಲ್ಲಿ ಮಾಡಿಸಬೇಕು ಎಂದು ಫಿರ್ಯಾಧಿರವರಲ್ಲಿ  ಹೇಳಿ ಲೇಡಿಗೋಷನ್ ಆಸ್ಪತ್ರೆಯ ಎದುರಿನ ಕಟ್ಟಡದ ಮೆಟ್ಟಲ ಬಳಿಗೆ ಬಂದು ನಿಮಗೆ ಆಯಾಸವಾಗಿದೆ ಸ್ವಲ್ಪ ಕುಳ್ಳಿರಿ ಎಂದು ಅಪರಿಚಿತನು ಹೇಳಿದನು ನಂತರ ಅಪರಿಚಿತನು ನಿಮ್ಮ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಒಮ್ಮೆ ಕೊಡಿ ನಾನು ಅಂಗಡಿಯವನ ಬಳಿ ತೋರಿಸಿ ಇದೇ ಮಾದರಿಯಲ್ಲಿ ನನ್ನ ತಾಯಿಗೆ ಮಾಡುವಂತೆ ಹೇಳಿ ವಾಪಸು ತಂದುಕೊಡುತ್ತೇನೆ. ಎಂದು ಹೇಳಿದನು ಪಿರ್ಯಾಧಿಯು ಅಪರಿಚಿತನ ಮಾತನ್ನು ನಂಬಿ ಚಿನ್ನದ ಚೈನನ್ನು ಕೊಟ್ಟರು ಅಪರಿಚಿತ ಚಿನ್ನದ ಸರವನ್ನು ಕೊಂಡು ಹೋಗಿ ವಾಪಸು ಬಾರದೇ ಇದ್ಧು ಫಿರ್ಯಾಧಿ ತುಂಬ ಕಾದು ನಂತರ ರೂಪಾಯಿ 50,000 / - ಚಿನ್ನದ ಸರವನ್ನು ಮೊಸಮಾಡಿ ಕೊಂಡು ಹೋಗಿರುತ್ತಾನೆ ಎಂದು ತಿಳಿದು ಸಂಜೆ 4 ಗಂಟೆಗೆ ಮನೆಗೆ ಹೋಗಿ ಮಗನ ಹತ್ತಿರ ವಿಷಯ ತಿಳಿಸಿ ಮಗನ ಜೊತೆಯಲ್ಲಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.
 

No comments:

Post a Comment