Friday, March 27, 2015

Daily Crime Reports : 27-03-2015

ದೈನಂದಿನ ಅಪರಾದ ವರದಿ.
ದಿನಾಂಕ 27.03.201514:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
2
ಮನೆ ಕಳವು ಪ್ರಕರಣ
:
2
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
2






















  





1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-03-2014 ರಂದು ಸಂಜೆ ಪಿರ್ಯಾದಿದಾರರಾದ ಶ್ರೀ ದಿನೇಶ್ ರವರ ಹೆಂಡತಿ ಶ್ರೀಮತಿ ಭಾರತಿ ದಿನೇಶ್ರವರು ಸಾಮಾನು ಖರೀದಿಗೆಂದು ಮಂಗಳೂರು ನಗರದ  ಪೇಟೆಗೆ ಬಂದಿದ್ದು, ಸಮಯ ಸಂಜೆ ಸುಮಾರು 5:30 ಗಂಟೆಗೆ ಪಿರ್ಯಾದಿದಾರರ ಹೆಂಡತಿ ಭಾರತಿರವರು ಜಿ.ಎಚ್‌.ಎಸ್ರಸ್ತೆಯ ಮಾಯಾದರ್ಶಿನಿ ಹೋಟೆಲ್ಎದುರು ತಲುಪಿ ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದಾಗ, ಕೃಷ್ಣಭವನ ವೃತ್ತದ ಕಡೆಯಿಂದ ಕಾರ್ಸ್ಟ್ರೀಟ್ಕಡೆಗೆ ಕಾರೊಂದನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಹೆಂಡತಿಗೆ ಡಿಕ್ಕಿ ಹೊಡೆದು, ಕಾರನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿರುತ್ತಾರೆ. ಅಪಘಾತದ ಪರಿಣಾಮ  ರಸ್ತೆಗೆ ಬಿದ್ದು, ಸೊಂಟದ ಬಲಬದಿ ಮತ್ತು ಕುತ್ತಿಗೆಯಲ್ಲಿ ಗುದ್ದಿದ ನೋವಾದ ಭಾರತಿರವರನ್ನು ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ದಿನಾಂಕ 26-03-2015 ರಂದು ಮಂಗಳಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಅಪಘಾತದ ಎಸಗಿದ ಕಾರಿನ ನಂಬ್ರ ನೋಡಿರುವುದಿಲ್ಲ. ಅಪಘಾತದ ಬಳಿ ಗಾಯಾಳುವು ಮನೆಗೆ ತೆರಳಿದ್ದು, ದಿನಾಂಕ 26-03-2015 ರಂದು ಅಪಘಾತದಿಂದ ಉಂಟಾದ ನೋವು ಜಾಸ್ತಿಯಾದ್ದರಿಂದ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಾಗಿ ತಡವಾಗಿ ದೂರು ನೀಡಿರುವುದಾಗಿದೆ

2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26-03-15 ರಂದು ಸಂಜೆ ಸುಮಾರು 5-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಮಜೀದ್ ರವರು ಸೂರಿಂಜೆಯ ಬೊಳ್ಯಾರು ಶಾಲೆಯ ಮೈದಾನದಲ್ಲಿ ಕ್ರಿಕೆಟ್ ಆಡಲು ಹೋಗಿದ್ದು ಆ ಸಮಯ ಅಲ್ಲಿದ್ದ ನೌಜೀಶ್ ಎಂಬಾತನಲ್ಲಿ ಪಿರ್ಯಾದಿದಾರರು ಕ್ರಿಕೆಟ್ ಬ್ಯಾಟ್ ಕೇಳಿದಾಗ ನೌಜೀಶ್ ನು ಪಿರ್ಯಾದಿದಾರರ ಮನೆಯವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಈ ಬಗ್ಗೆ ಪಿರ್ಯಾದಿದಾರರು ಜೋರು ಮಾಡಿದಾಗ ಆತನು ತನ್ನ ಕೈಯಲ್ಲಿದ್ದ ಬ್ಯಾಟ್ ನಿಂದ ಹೊಡೆಯಲು ಬೀಸಿದ್ದು ಅದನ್ನು ಪಿರ್ಯಾದಿದಾರರು ಕೈಯಿಂದ ತಡೆದಾಗ ಬಲ ಕೈಯ ಕೋಲು ಕೈಗೆ ಮೂಳೆ ಮುರಿತದ ಗಾಯವಾಗಿದ್ದು ಜೋರಾಗಿ ಬೊಬ್ಬೆ ಹೊಡೆದಾಗ ನೌಜೀಶ್ ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಅಲ್ಲಿಂದ ಓಡಿ ಹೋಗಿರುತ್ತಾನೆ.

3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-03-2015 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದುದಾರರಾದ ಶ್ರೀ ವಿಶ್ವನಾಥ ಆಚಾರ್ಯ ರವರು ತನ್ನ ಜುವೆಲ್ಲರಿ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ದಿನಾಂಕ 26-03-2015 ರಂದು ಬೆಳಿಗ್ಗೆ 06-30 ಗಂಟೆಗೆ ಮನೆಯಲ್ಲಿರುವ ಸಮಯ ಪಕ್ಕದ ಅಂಗಡಿಯ ಶ್ರೀ ಮಹಾಬಲ ಎಂಬವರು ಪೋನ್ ಕರೆ ಮಾಡಿ ಸ್ವಲ್ಪ ಅಂಗಡಿ ಬಳಿ ಬನ್ನಿ ಎಂದು ತಿಳಿಸಿದಾಗ ಪಿರ್ಯಾದುದಾರರು ಬಂದು ತನ್ನ ಅಂಗಡಿಯ ಬೀಗ ತೆಗೆದು ನೋಡಿದಾಗ ಅಂಗಡಿಯ ಮೇಲ್ಚಾವಣಿಯ ಸಿಮೆಂಟ್ ತುಂಡಾಗಿ ಬಿದ್ದಿದ್ದು, ಹಂಚುಗಳನ್ನು ತೆಗೆದಿರುವುದು ಕಂಡು ಬಂತು ಅಲ್ಲದೇ ಮೇಜಿನ ಡ್ರಾವರ್ ತೆರದಿರುವುದು ಕಂಡು ಬಂತು, ನೋಡಲಾಗಿ ಅಂದಾಜು ಸುಮಾರು 100 ಗ್ರಾಂ ತೂಕ 2-3 ಬೆಳ್ಳಿಯ ಚೈನ್ ಮತ್ತು ಕಾಲು ಚೈನ್ ಗಳು, ಕಳವಾಗಿದ್ದು, ಕಳವಾದ ಸೊತ್ತಿನ ಅಂದಾಜು ಬೆಲೆ 4,000/- ಆಗಬಹುದು.

4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-03-2015 ರಂದು ಬಂಟ್ವಾಳ ತಾಲೂಕು ಪಜೀರು ಗ್ರಾಮದ ಪಾನೇಲ ಬಾಕೀಮಾರ್ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಅಬ್ದುಲ್ ರವೂಫ್ ರವರ ಮನೆಯ ಪಕ್ಕದಲ್ಲಿ ಇರುವ ಗೋಡೌನ್ನಲ್ಲಿ ಸುಲಿದ ಅಡಿಕೆಯನ್ನು ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದು, ರಾತ್ರಿ ಸುಮಾರು 02:00 ಗಂಟೆ ಸಮಯಕ್ಕೆ ಯಾರೋ ಕಳ್ಳರು ಗೋಡೌನ್ನ ಬಾಗಿಲಿನ ಬೀಗವನ್ನು ಮುರಿದು ಒಳಪ್ರವೇಶಿಸಿ ಗೋಡೌನ್ನಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿದ್ದ ಗೋಣಿಚೀಲಗಳ ಪೈಕಿ 8 ಗೋಣಿಚೀಲಗಳಲ್ಲಿ ತುಂಬಿಸಿಟ್ಟಿದ್ದ ಸುಲಿದ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಅಡಿಕೆ ಸುಮಾರು 4 ಕ್ವಿಂಟಾಲ್ಗಳಾಗಿದ್ದು, ಇದರ ಅಂದಾಜು ಮೌಲ್ಯ ಸುಮಾರು ರೂ 80,000/- ಆಗಬಹುದು.

5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-03-2015 ರಂದು ಸಂಜೆ 18.05 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್‌‌ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ರವರು ಠಾಣೆಯಲ್ಲಿದ್ದಂತೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯ ಕಾಡು ಬಿಜಾಪುರ ಕಾಲನಿ ನಾಗಬನದ ಬಳಿ ಇಬ್ಬರು ವ್ಯಕ್ತಿಗಳು ಮಟ್ಕಾ ಜೂಜಾಟ ಆಡಲು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದಾರೆಂದು ಖಚಿತ ಮಾಹಿತಿ ಬಂದಂತೆ ಸಿಬ್ಬಂದಿಗಳ ಜೊತೆಯಲ್ಲಿ  ಹಾಗೂ ಅಲ್ಲೇ ಇದ್ದ ಪಂಚರನ್ನು ಬರಮಾಡಿಸಿ ಸದ್ರಿ ಸ್ಥಳಕ್ಕೆ 18-15 ಗಂಟೆಗೆ ತಲುಪಿದಾಗ ಅಲ್ಲಿ ಕೆಲವು ಜನರು ಸುತ್ತುವರಿದು ಸೇರಿದ್ದು ಒಬ್ಬ ವ್ಯಕ್ತಿಯು ಚೀಟಿಯನ್ನು ಬರೆಯುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದನ್ನು ಕಂಡು ಜೀಪನ್ನು ಹತ್ತಿರ ಹೋಗಿ ನಿಲ್ಲಿಸಿದಾಗ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಸಿಬ್ಬಂದಿಗಳ ಸಹಾಯದಿಂದ ಚೀಟಿ ಬರೆಯುತ್ತಿದ್ದವನನ್ನು ಹಿಡಿದು ಅವನ ಹೆಸರು ವಿಳಾಸ ಕೇಳಲಾಗಿ ಬಾಲು, ಪ್ರಾಯ 26 ವರ್ಷ, ತಂದೆ: ದಿ| ಬೈಲಪ್ಪ, ವಾಸ: ಶಿವಯೋಗೀಶ್ವರ ಮಠದ ಬಳಿಲಿಂಗಪ್ಪಯ್ಯಕಾಡು, ಕಾರ್ನಾಡು ಗ್ರಾಮ ಮಂಗಳೂರು ತಾಲೂಕು ಎಂದು ತಿಳಿಸಿದ್ದು, ಮಟ್ಕಾ ಚೀಟಿ ಬರೆಯುತ್ತಿದ್ದು, ಓಡಿ ಹೋದವನ ಹೆಸರು ವಿಳಾಸ ಕೇಳಲಾಗಿ ನವೀನ್, ತಂದೆ: ರಾಜರಾಮ್ ಪೂಜಾರಿ  ಕಾರ್ನಾಡು ಗ್ರಾಮ ಮಂಗಳೂರು ತಾಲೂಕು ಎಂಬವನಿಗೆ ಕೊಡುತ್ತಿದ್ದು, ನವೀನನು ಸದ್ರಿ ಹಣವನ್ನು ರಮೇಶ್ ಎಂಬವರಿಗೆ ನೀಡುವುದಾಗಿಯೂ ರಮೇಶ್ ನ್ನು ಸಂಗ್ರಹಿಸಿದ ಹಣವನ್ನು ಎಲ್ಲಾ ಉಡುಪಿಯ ಲಿಯೋ ಎಂಬಾತನಿಗೆ ನೀಡುತ್ತಿರುವುದಾಗಿ ತಿಳಿಸಿರುತ್ತಾನೆ. ಆತನನ್ನು  ಸ್ಥಳದಲ್ಲಿ ದಸ್ತಗಿರಿ ಮಾಡಿ ಅರೋಪಿತನ ವಶದಲ್ಲಿದ್ದ ನಗದು ಹಣ ರೂ  3,210/-ರೂ , ಮಟ್ಕಾ ಚೀಟಿ ಬರೆದ ಒಂದು ಚೀಟಿ, ಮಟ್ಕಾ ಬರೆಯಲು ಉಪಯೋಗಿಸಿದ ಒಂದು ಪೆನ್ ಹಾಗೂ ಒಂದು ಸ್ಯಾಮ್ ಸಂಗ್ ಕಂಪೆನಿಯ ಮೊಬೈಲ್ ಪೋನ್ ಪಂಚರ ಸಮಕ್ಷಮ ಮಹಜರು ಮೂಲಕ ಸ್ವಾದೀನಪಡಿಸಿ ಠಾಣೆಗೆ ಬಂದು ಪ್ರಕರಣ ದಾಖಲಿಸಿರುವುದಾಗಿದೆ.

6.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25/03/2015 ರಂದು ಸಮಯ ಸುಮಾರು ಬೆಳಗ್ಗೆ 8:30 ಗಂಟೆಗೆ ಫಿರ್ಯಾದುದಾರರಾದ ಶ್ರೀ ರಾಧಾಕೃಷ್ಣ ಕೆ. ರವರು ತಮ್ಮ ಬಾಬ್ತು ಮೋಟರ್ ಸೈಕಲ್ ನಂಬ್ರ AP-09-BB-8481 ನೇ ದರಲ್ಲಿ ಸವಾರನಾಗಿದ್ದುಕೊಂಡು ಮಂಗಳೂರು ನಗರದ ಶಿವಭಾಗ ಕಡೆಯಿಂದ ಪಣಂಬೂರು ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹೋಗುವರೇ ಪದವು ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಪದವು ಶಾಲೆಯ ಕಡೆಯಿಂದ ಮಾರುತಿ ಓಮ್ನಿ ಕಾರು ನಂಬ್ರ KA-19-C-8505 ನೇ ದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ  ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಅಂಬ್ರೆಲ್ಲಾ ವೃತ್ತವನ್ನು ಬಳಸದೇ ಒಮ್ಮಲೆ ನಂತೂರು-ಕೆಪಿಟಿ NH ರಸ್ತೆಗೆ ಯಾವುದೇ ಸೂಚನೆ ನಿಡದೇ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರು ಸವಾರಿ ಮಾಡುತ್ತಿದ್ದ ಮೋಟರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ಡಾಮಾರು ರಸ್ತೆಗೆ ಬಿದ್ದು ಆ ಸಮಯ ಸದ್ರಿಯವರ ಮೋಟರ್ ಸೈಕಲ್ ಮೆಲೆ ನಂತೂರು ಕಡೆಯಿಂದ ಬರುತ್ತಿದ್ದ ಟವೆರಾ ಕಾರು ನಂಬ್ರ KA-19-Z-4397 ನೇ ಕಾರು ಫಿರ್ಯಾದುದಾರರ ಮೋಟರ್ ಸೈಕಲ್ ಮೇಲೆ ಹರಿದು ಮೋಟರ್ ಸೈಕಲ್ ಸಂಪೂರ್ಣ ಜಖಂಗೊಂಡಿರುತ್ತದೆ ಈ ಅಪಘಾತದಿಂದ ಫಿರ್ಯಾದುದಾರರ ಕಾಲಿನ ಮೊಣಗಂಟಿಗೆ ಚರ್ಮ ಕಿತ್ತು ಹೋದಂತಹ ಗಾಯವಾಗಿದ್ದು ಬಲಕೈಯ ಮೊಣಗಂಟಿನ ಬಳಿ ಚರ್ಮ ಕಿತ್ತು ಹೋದಂತಹ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ನೋವು ಉಂಟಾಗಿ ಎ.ಜೆ. ಆಸ್ಪತ್ರೆಯಲ್ಲಿ ಹೋರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.

7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26-03-2015 ರಂದು ಫಿರ್ಯಾದಿದಾರರಾದ ಶ್ರೀ ಪುನೀತ್ ರಾಜ್ ರವರು ತನ್ನ ಸ್ನೇಹಿತೆ ಯೊಂದಿಗೆ ತನ್ನ ಬಾಬ್ತು ಲ್ಯಾನ್ಸರ್ ಕಾರು ನಂ: ಕೆಎ  20  ಎಂಡಿ 588 ನೇದರಲ್ಲಿ ಮಂಗಳೂರಿನಿಂದ ಬಜಪೆ ಕಡೆಗೆ ಬರುತ್ತಾ 16-15 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ, ಬಜಪೆ ಗ್ರಾಮದ  ಅಂತೋನಿ ಕಟ್ಟೆ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಬಜಪೆ ಕಡೆಯಿಂದ ಮಂಗಳೂರು ಕಡೆಗೆ ಟಿಪ್ಪರ್ ಲಾರಿ ನಂ: ಕೆಎ 19 ಡಿ  1913 ನ್ನು ಅದರ ಚಾಲಕ ಮಂಜುನಾಥ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರಿಗೆ ಮತ್ತು ಪಿರ್ಯಾದಿದಾರರ ಸ್ನೇಹಿತೆಗೆ  ಗಾಯಗಳಾಗಿರುವುದಲ್ಲದೇ ಕಾರು ಜಖಂ ಆಗಿರುತ್ತದೆ.

8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 26-3-2015 ರಂದು ರಾತ್ರಿ 8-00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಉಳ್ಳಾಲ ಅಬ್ಬಕ್ಕಸರ್ಕಲ್ಬಳಿಯ ಸೀ ಸೈಡ್ ಹೊಟೇಲ್ನ ಸಮೀಪದ ಅಂಗಡಿಯಲ್ಲಿ ಫಿರ್ಯಾದಿದಾರರಾದ ಶ್ರೀ ಸಲೀಂ ಯು.ಎನ್. ರವರು ತನ್ನ ಮೊಬೈಲ್ಫೋನ್ಗೆ ಕರೆನ್ಸಿ ರೀಚಾರ್ಜ್ಮಾಡಲು ಹೋಗಿ ಅಲ್ಲಿ ಕರೆನ್ಸಿ ರೀಚಾರ್ಜ್ಮಾಡಿ ಅಂಗಡಿಯಿಂದ ಹೊರಗೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವ ಸಮಯ ಅಲ್ಲಿಯೇ ಇದ್ದ ಆರೋಪಿಗಳಾದ ಉಳ್ಳಾಲ ಅಲೇಕಳ ವಾಸಿಗಳಾದ ಸನಾ ರಜಾಕ್‌, ಸಫಿಕ್, ಬೀಪ್ ನಝೀರ್ರವರು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವರನ್ನು  ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನೀನು ಬಾರೀ ದೊಡ್ಡ ಜನನಾ, ಮುಂದಕ್ಕೆ ನಿನ್ನನ್ನು ಟಾರ್ಗೆಟ್ಮಾಡುತ್ತೇವೆ, ಜೀವ ಸಹಿತ ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ.

9.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-03-2015 ರಂದು ಸಂಜೆ ಸುಮಾರು 4:00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಆರ್.ವಿ. ಮಣಿಕಂಠ ವೈದ್ಯರ್ ರವರು ಮಂಗಳೂರು ನಗರದ ಹಂಪನಕಟ್ಟೆ ಬಳಿ ಇರುವ ಭೂಷಣ್ ಬಾರ್ ನಲ್ಲಿ ಊಟ ಮಾಡಿ ಮದ್ಯ ಸೇವಿಸಲು ಹೋಗಿದ್ದುಮದ್ಯ ಕುಡಿದ ಬಿಲ್ಲನ್ನು  ಸರಿಯಾಗಿ ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ದೇವರಾಜಶೆಟ್ಟಿ ಮತ್ತು ಸುನೀಲ್ ಡಿ'ಸೋಜಾ ಎಂಬವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ಧದಿಂದ ಬೈದು, ಕೈಯಿಂದ ಹಾಗೂ ಮುಷ್ಠಿ ಗಾತ್ರದ ಕಲ್ಲಿನಿಂದ ಮೈಗೆ ಹಾಗೂ ತಲೆಗೆ ಹಲ್ಲೆ ನಡೆಸಿ ರಕ್ತ ಗಾಯವುಂಟು ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ.

No comments:

Post a Comment