Monday, March 9, 2015

CRICKET BETTING : 4 HELD

ಪತ್ರಿಕಾ ಪ್ರಕಟಣೆ

ದಿನಾಂಕ:07-03-2015  ರಂದು ಸಂಜೆ 4-30 ಗಂಟೆಗೆ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ದಿನಕರ ಶೆಟ್ಟಿ  ಹಾಗೂ ಸಿಬ್ಬಂಧಿಗಳು ಮತ್ತು ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶ್ರೀ ವೆಲೆಂಟೈನ್ ಡಿ ಸೋಜಾ ಹಾಗೂ ಸಿಬ್ಬಂಧಿಗಳು  ಜಂಟಿ ಕಾರ್ಯಾಚರಣೆ ನಡೆಸಿ ಮಂಗಳೂರು ನಗರದ  ಪಾಂಡೇಶ್ವರ ಶಿವ ನಗರದ  ವಿಶ್ವಾಸ್  ಜ್ಯುಪಿಟರ್ ಅಪಾರ್ಟ್ ಮೆಂಟ್ ನ 3 ನೇ ಮಹಡಿಯಲ್ಲಿರುವ 302 ಫ್ಲಾಟ್ ನಲ್ಲಿ   ಅನಧಿಕೃತವಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿರುವ ಹಾಗೂ  ಭಾಗವಹಿಸುವ ಬೆಟ್ಟಿಂಗ್ ಗಿರಾಕಿಗಳಿಗೆ ಸರಿಯಾಗಿ ಹಣವನ್ನು ಕೊಡದೇ ಮೋಸ ಮಾಡುತ್ತಿರುವ  1) ವಿಶಾಲ್ ಲೋಬೋ ಪ್ರಾಯ: 33 ವರ್ಷ, ತಂದೆ: ಗೋಪಿನಾಥ್ ರಾವ್, ವಾಸ: ಹೌಸ್ ನಂಬ್ರ 45, ಎಕ್ಕೂರು ಗುಡ್ಡೆ, ಸುನಿತಾ ಜನರಲ್ ಸ್ಟೋರ್ ನ ಮುಂಭಾಗ, ಕಂಕನಾಡಿ ಅಂಚೆ ಮಂಗಳೂರು. 2) ಸೋಹನ್ ಪ್ರಾಯ: 27 ವರ್ಷ, ತಂದೆ: ಜೆಫ್ರಿ, ವಾಸ: ಸುಂದರ್ ಹೌಸ್, ಕದ್ರಿ ಶಿವ ಭಾಗ್, ಕರ್ನಾಟಕ ಬ್ಯಾಂಕ್ ನ ಹತ್ತಿರ, ಶಿವ ಭಾಗ್ ಮಂಗಳೂರು.  3) ಯತಿನ್ ರಾವ್ ಪ್ರಾಯ: 32 ವರ್ಷ, ತಂದೆ: ರೇಕೋಜಿ ರಾವ್, ವಾಸ: ಮನೆ ನಂಬ್ರ 17-16-1245, ಜೈನ್ ಕಂಪೌಂಡ್ ಅತ್ತಾವರ ಮಂಗಳೂರು.  4) ಅಮಿತ್ ಕುಮಾರ್ ಪ್ರಾಯ: 27 ವರ್ಷ, ತಂದೆ: ನಾರಾಯಣ ಕೆ, ವಾಸ: ಡೇಸಾ ಕಂಪೌಂಡ್, ವಾಸ: ಆನೆಗುಂಡಿ 1 ನೇ ಕ್ರಾಸ್, ಬಿಜೈ ಕಾಪಿಕಾಡ್ ಮಂಗಳೂರು  ಎಂಬವರನ್ನು ಬಂಧಿಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಉಪಯೋಗಿಸಿದ ಮೂರು ಲ್ಯಾಪ್ ಟಾಪ್ ಗಳು, ಹದಿನೇಳು ಮೊಬೈಲ್ ಹ್ಯಾಂಡ್ ಸೆಟ್ಟುಗಳು, ನೋಟು ಪುಸ್ತಕಗಳು, ಪೆನ್ನು, ಕ್ಯಾಲುಕುಲೇಟರ್, ಹಾಗೂ ನಗದು ಹಣ 38,340/- ರೂ ವನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿರುತ್ತಾರೆ.   

 ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಎಸ್. ಮುರುಗನ್ ಐಪಿಎಸ್,  ಮಾನ್ಯ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಕೆ. ಸಂತೋಷ್ ಬಾಬು ಐ.ಪಿ.ಎಸ್.   ಮಾನ್ಯ ಉಪ ಪೊಲೀಸ್ ಆಯುಕ್ತರು  (ಅಪರಾಧ ಮತ್ತು ಸಂಚಾರ)  ಶ್ರೀ  ವಿಷ್ಣು ವರ್ಧನ ಎನ್ ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಆರ್. ಆರ್. ಕಲ್ಯಾಣ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ದಿನಕರ ಶೆಟ್ಟಿ ಮತ್ತು ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶ್ರೀ ವೆಲೆಂಟೈನ್ ಡಿ ಸೋಜಾರವರು ಆರೋಪಿಗಳನ್ನು ಬಂಧಿಸಿ, ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.   ಆರೋಪಿ ಹಾಗೂ ಸೊತ್ತು ಪತ್ತೆಗೆ ಮಂಗಳೂರು ಸಿಸಿಬಿ ಯ ಪಿಎಸ್ ಐ ಶ್ಯಾಮ್ ಸುಂದರ್, ಸಿಬ್ಬಂಧಿಗಳಾದ ಗಣೇಶ್ ಪಿ, ಶಶಿಧರ ಶೆಟ್ಟಿ,  ಗಣೇಶ್ ಕಲ್ಲಡ್ಕ,    ಚಂದ್ರಶೇಖರ,   ಮಣಿ ಎನ್,  ಮಂಗಳೂರು ದಕ್ಷಿಣ ಠಾಣೆಯ ಪಿಎಸ್ ಐ ಮಹಮ್ಮದ್ ಶರೀಫ್ ಮತ್ತು ಸಿಬ್ಬಂಧಿಗಳಾದ ಕೇಶವ,   ಸಂತೋಷ್ ಕುಮಾರ್,    ಶಾಜು ನಾಯರ್,   ಪ್ರದೀಪ್ ಕುಮಾರ್ ರವರು ಸಹಕರಿಸಿರುತ್ತಾರೆ.

 

No comments:

Post a Comment