Saturday, March 7, 2015

Daily Crime Reports : 07-03-2015

ದೈನಂದಿನ ಅಪರಾದ ವರದಿ.
ದಿನಾಂಕ 07.03.201518:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
2
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
1
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
2
ರಸ್ತೆ ಅಪಘಾತ  ಪ್ರಕರಣ
:
4
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
4
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಂತೂರಿನ ಆದರ್ಶ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ದಿನಾಂಕ 06-03-2015 ರಂದು ಮದ್ಯಾಹ್ನ 12.30 ಗಂಟೆಗೆ ಕಾಲೇಜ್ ಮುಗಿಸಿ, ಸಿಟಿ ಬಸ್ಸಿನಲ್ಲಿ ಕೋಡಿಕಲ್ ಕ್ರಾಸ್ ನಲ್ಲಿ ಇಳಿದು ತನ್ನ ಮನೆಯಾದ ಕೋಡಿಕಲ್ ಗುರುನಗರಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಸುಮಾರು 1.00 ಗಂಟೆಗೆ ಒರ್ವ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರ ಹಿಂದಿನಿಂದ ನಡೆದುಕೊಂಡು ಬರುತ್ತಾ ಪಿರ್ಯಾದಿದಾರರನ್ನು ನೋಡಿ ಕೈಸನ್ನೆ ಮಾಡಿ ನಿಲ್ಲುವಂತೆ ಸೂಚಿಸಿ, ನನ್ನ ಹೆಸರು ಮಹಮ್ಮದ್ ಶಾಫಿ ನೀನು ನನ್ನ ಜೊತೆ ಬರುತ್ತೀಯಾ, ಇಲ್ಲವಾದರೆ ನಾನು ನಿಮ್ಮ ಮನೆಗೆ ಬರಬೇಕಾ ಎಂಬುದಾಗಿ ಹೇಳಿ, ಕಿರುಕುಳ ನೀಡಿ, ಹತ್ತಿರ ಬಂದು ಮೈಮೇಲೆ ಬೀಳುವ ಹಾಗೆ ಅಸಭ್ಯ ರೀತಿಯಲ್ಲಿ ವರ್ತಿಸಿ ಮಾನಭಂಗಕ್ಕೆ ಪ್ರಯತ್ನಿಸಿರುವುದಾಗಿದೆ. 
 
2.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಹುಡುಗಿಯು ಸಿಟಿ ಸೆಂಟರ್ ನಲ್ಲಿ ಸೇಲ್ಸ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡಿಕೊಂಡು ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ  ವಿದ್ಯಾಬ್ಯಾಸ ಮಾಡುತ್ತಿದ್ದು  ಈಗ್ಗೆ 3 ತಿಂಗಳಿಂದ ಪರಿಚಯವಿರುವ  ಎಲ್.ಎನ್.ಟಿ ಕಾನದಲ್ಲಿ ಅಕೌಂಟೆಂಟ್ ಉದ್ಯೋಗದಲ್ಲಿರುವ ಆರೋಪಿ ವಿನಯ್ ಕೆ ಲೇಡಿಹಿಲ್ ಎಂಬುವನಿಗೆ ಪಿರ್ಯಾದಿದಾರರು ತಾನು ವಿದ್ಯಾಬ್ಯಾಸ ಮಾಡಿದ ನಂತರ ಒಳ್ಳೆಯ ಕೆಲಸ ಹುಡುಕುತ್ತಿರುವುದಾಗಿ ತಿಳಿಸಿದಾಗ, ಆತನು ಪಿರ್ಯಾದಿದಾರರಿಗೆ ಕರೆ ಮಾಡಿ ಎಂ.ಆರ್.ಪಿ.ಎಲ್ ನಲ್ಲಿ ಒಳ್ಳೆಯ ಕೆಲಸ ಖಾಲಿ ಇದೆ ನಿನ್ನ ಬಾಯೋಡೆಟಾ ಹಿಡಿದುಕೊಂಡು ಸಾಯಿಬಾಬಾ ಮಂದಿರದ ಹತ್ತಿರವಿರುವ  ಬೆನ್ಪೋ ಅಪಾಟರ್ಮೆಂಟಿನ 2ನೇ ಮಹಡಿಯಲ್ಲಿರುವ  ನನ್ನ ಮನೆಗೆ ಬಾ ಎಂದು ಕರೆದಿದ್ದು ಅದೇ ದಿನ ಪಿರ್ಯಾದಿದಾರರು ಆತನ ಮನೆಗೆ ಹೋದಾಗ ಕುಡಿಯಲು ಜ್ಯೂಸ್ ಕೊಟ್ಟಿದ್ದುಜ್ಯೂಸ್ ಕುಡಿದ ಸ್ವಲ್ಪ ಸಮಯದಲ್ಲಿ ಸ್ವಲ್ಪ  ಅಮಲು ಆದ ಹಾಗೆ ಆಗಿ ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದ ಸಮಯ ಬಲವಂತವಾಗಿ ಲೈಗಿಂಕ ಕ್ರಿಯೆ ನಡೆಸಿದ್ದು, ಮರುದಿನ ಆರೋಪಿ ಪೋನ್ ಮಾಡಿ ನೀನು ಯಾರಲ್ಲಿಯೂ ಹೇಳಿದರೆ ನಿನ್ನ ಬೆತ್ತಲೆಯ  ಪೋಟೋಗಳನ್ನು ಪೇಸ್ ಬುಕ್ ನಲ್ಲಿ ಹಾಕುತ್ತೇನೆಂದು ಬೆದರಿಸಿರುವುದಾಗಿದೆ.
 
3.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-03-2014 ರಂದು ಸಂಜೆ ಸುಮಾರು 6-00 ಗಂಟೆಗೆ ಬಿಜೈ ಬಟ್ಟೆಗುಡ್ಡೆಯಲ್ಲಿರುವ ಸಂದೀಪ್ಶೆಟ್ಟಿ ಎಂಬಾತನು ತನ್ನ ಮನೆಯಲ್ಲಿ ಭಾರತ ವೆಸ್ಟ್‌‌ ಇಂಡೀಸ್ಕ್ರಿಕೆಟ್ಪಂದ್ಯಾಟದ ಬೆಟ್ಟಿಂಗ್ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ವರ್ತಮಾನದಂತೆ ಪಂಚರೊಂದಿಗೆಠಾಣಾ ಸಿಬ್ಬಂದಿಗಳ ಜೊತೆ ಸ್ಥಳಕ್ಕೆ ತೆರಳಿ ನೋಡಿದಾಗ ಸಂದೀಪ್ ಶೆಟ್ಟಿ ಎಂಬಾತನು ತನ್ನ ಮನೆಯಲ್ಲಿ ಪ್ರಕಾಶ್ಎಂಬಾತನ ಜೊತೆ ಸೇರಿ ತಮ್ಮ ಲಾಭಗೋಸ್ಕರ  ಜನರಿಂದ ಹಣವನ್ನು ಪಡೆದು ಕ್ರಿಕೆಟ್ಬೆಟ್ಟಿಂಗ್ ನಡೆಸುತ್ತಿದ್ದುದಲ್ಲದೇ ವಿಜೇತರಾದ ಜನರಿಗೆ ಕೂಡ ಹಣವನ್ನು ಕೊಡದೇ ಮೋಸ ಮಾಡಿರುವುದಾಗಿದೆ.
 
4.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-03-2015 ರಂದು ರಾತ್ರಿ ಪಿರ್ಯಾದಿದಾರರಾದ ಶ್ರೀ ವಿಶ್ವನಾಥ್ ವಿ. ಮಲ್ಯ ರವರ ಹೆಂಡತಿ ಶ್ರೀಮತಿ ಸೀಮಾ ಮಲ್ಯರವರು ಅವರ ಮಗ ಅಂಬರ್ಮಲ್ಯರವರನ್ನು ದ್ವಿಚಕ್ರ ವಾಹನ ನಂಬ್ರ ಕೆ.-19-.ಎಚ್‌-195 ನೇದರಲ್ಲಿ ಹಿಂದುಗಡೆ ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಮಂಗಳೂರು ನಗರದ ಉರ್ವಾಮಾರ್ಕೇಟ್ಕಡೆಯಿಂದ ಮಣ್ಣಗುಡ್ಡ ಗುರ್ಜಿ ಜಂಕ್ಷನ್ಕಡೆಗೆ ಚಲಾಯಿಸುತ್ತಾ ಬರುತ್ತಾ ಸಮಯ ಸುಮಾರು ರಾತ್ರಿ 8:15 ಗಂಟೆಗೆ ಮಣ್ಣಗುಡ್ಡ ಜಂಕ್ಷನ್ನಾಗೇಶ್ಟ್ರೇಡರ್ಸ್ಅಂಗಡಿಯ ಎದುರು ತಲುಪಿದಾಗ, ಅವರ ವಿರುದ್ದ ದಿಕ್ಕಿನಿಂದ ಅಂದರೆ ಮಂಗಳಾ ಸ್ಟೇಡಿಯಂ ರಸ್ತೆಯಿಂದ ಉರ್ವಾ ಮಾರ್ಕೇಟ್ರಸ್ತೆ ಕಡೆಗೆ ದ್ವಿಚಕ್ರ ವಾಹನ ನಂಬ್ರ ಕೆ.-19ಎಸ್‌-7823 ನೇದನ್ನು ಅದರ ಸವಾರನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಹೆಂಡತಿಯು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಹೆಂಡತಿ ಹಾಗೂ ಸಹಸವಾರ ಅವರ ಮಗನು ವಾಹನ ಸಮೇತ ರಸ್ತೆಗೆ ಬಿದ್ದು, ಶ್ರೀಮತಿ ಸೀಮಾ ಮಲ್ಯರವರ ಮುಖದ ಬಲಭಾಗಕ್ಕೆ ತರಚಿದ ರಕ್ತ ಬರುವ ಗಾಯ, ಮುಖದ ಎಡಭಾಗಕ್ಕೆ ಗುದ್ದಿದ ನಮೂನೆಯ ಗಾಯ, ಎರಡೂ ಕೈಗಳಿಗೆ ಜಜ್ಜಿದ ಗಾಯ ಹಾಗೂ ಅಂಬರ್ಮಲ್ಯರವರ ಮೂಗಿಗೆ ಮತ್ತು ತುಟಿಗೆ  ರಕ್ತ ಬರುವ ಗಾಯ ಉಂಟಾದವರನ್ನು ಪಿ.ಸಿ.ಆರ್‌-3 ನೇ ವಾಹನದಲ್ಲಿ ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ನಗರದ ಯೆನೆಪೋಯಾ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ.
 
5.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-03-2015 ರಂದು ಬೆಳಿಗ್ಗೆ 10.00 ಗಂಟೆಗೆ ಮಂಗಳೂರು ತಾಲೂಕು ಸ್ಯಾಂಡ್ ಫಿಟ್ ತೋಟಾ ಬೆಂಗ್ರೆ ಎಂಬಲ್ಲಿ ಮಹಾವಿಷ್ಣು ಶೇಷ ಶಯನ ಭಜನಾ ಮಂದಿರದ ಬಳಿ ಮೊಗವೀರ ಗ್ರಾಮ ಸಭಾ ಭವನ ಕಟ್ಟಡದ ಕೆಲಸವನ್ನು ಕಾಂಟ್ರೇಕ್ಟರ್ ಮನೋಹರ್ ರವರು ವಹಿಸಿಕೊಂಡಿದ್ದು, ಇವರ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಮೇಸ್ತ್ರಿ ಪದ್ಮನಾಭ, ಸಹಾಯಕ ಸುಂದರ ಪೂಜಾರಿ ಮತ್ತು ಭೀಮರಾಯ್ ಭಜಂತ್ರಿ ಹಾಗೂ ಬಸವರಾಜ್ ಭಜಂತ್ರಿಯವರಿಂದ ಮನೋಹರ್ ರವರು ಈ ಕಟ್ಟಡದ ಕೆಲಸವನ್ನು ಮಾಡಿಸುತ್ತಿದ್ದುಆ ಸಮಯ ಮೇಸ್ತ್ರಿ ಪದ್ಮನಾಭನವರು ಕಟ್ಟಡದ ಎದುರಿಗೆ ಹಾಕಿರುವ ಕಾಂಕ್ರೀಟ್ ಶೆಡ್ ನ ಮೇಲೆ ಕುಳಿತು ಕೆಲಸ ಮಾಡುತ್ತಿರುವಾಗ ಶೆಡ್ ನ ಬೀಮ್ ಸಮೇತ  ಉರುಳಿ ನೆಲಕ್ಕೆ ಬಿದ್ದಾಗ ಅದರ ಮೇಲ್ಗಡೆ ಕುಳಿತು ಕೆಲಸ ಮಾಡುತ್ತಿದ್ದ ಪದ್ಮನಾಭನವರು ಕಾಂಕ್ರೀಟ್ ಶೆಡ್ ನ ಅಡಿ ಭಾಗಕ್ಕೆ ಸಿಲುಕಿ ಎದೆಯ ಕೆಳಗೆ ತೀವ್ರ ಸ್ವರೂಪದ ಗುದ್ದಿದಂತಹ ಚರ್ಮ ಸುಲಿದ ಗಾಯ ಮತ್ತು ಬಲಕಾಲಿನ ಕೋಲು ಕಾಲಿನ ಮತ್ತು ಬಲ ಕಾಲಿನ ತೊಡೆಯ ಮೂಳೆ ಮುರಿತದಂತಹ ತೀವ್ರ ಸ್ವರೂಪದ ಗಾಯಗೊಂಡಿರುವುದಲ್ಲದೆ ಪಿರ್ಯಾದಿದಾರರಿಗೂ ಕೂಡಾ ಬಲ ಕಾಲಿನ ತೊಡೆಯ ಹಿಂಬದಿಗೆ ಗುದ್ದಿದಂತಹ ನೋವು ಉಂಟು ಆಗಿದ್ದವರನ್ನು ಆರೈಕೆ ಮಾಡಿ ಚಿಕಿತ್ಸೆ ಬಗ್ಗೆ ಕೆ ಎಮ್ ಸಿ ಆಸ್ಪತ್ರೆ ಮಂಗಳೂರಿಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಪದ್ಮನಾಭನವರು ಮೃತ ಪಟ್ಟಿರುವುದಾಗಿಯೂ ತಿಳಿಸಿ ಪಿರ್ಯಾದಿದಾರರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಘಟನೆಗೆ ಕಂಟ್ರಾಕ್ಟರ್ ಮನೋಹರ್ ರವರು ಸರಿಯಾದ ರಕ್ಷಣಾ ಸಾಮಾಗ್ರಿಗಳನ್ನು ಒದಗಿಸದೆ ಮತ್ತು ಸೂಪರ್ ವೈಸರ್ ಜನಾರ್ಧನ್ ರವರು ಸಲಹೆ, ಮುನ್ನೆಚ್ಚರಿಕೆ ವಹಿಸದೆ ನಿರ್ಲಕ್ಷ್ಯತನದಿಂದ ಕೆಲಸ ಮಾಡಿಸಿರುವುದೆ ಕಾರಣವಾಗಿರುತ್ತದೆ.
 
6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸೂರಜ್ ಶೆಟ್ಟಿ ರವರು ರಿಯಲ್ ಎಸ್ಟೇಟ್ ಉದ್ದಿಮೆ ಮಾಡಿಕೊಂಡಿರುವುದಾಗಿದೆ. ದಿನಾಂಕ 05-03-2015 ರಂದು ರಾತ್ರಿ ಸಮಯ ಸುಮಾರು 11-00 ಗಂಟೆಗೆ ಪ್ರೇಮ್ ಡಿ ಸೋಜ ಮತ್ತು ಆತನ ಸಹಚರರು ಬಿಜೈ ಚರ್ಚ್ ರೋಡ್ ನಲ್ಲಿ ಪಿರ್ಯಾದಿಯವರಿಗೆ ಕಾಣಲು ಸಿಕ್ಕಿದ್ದು ಸದ್ರಿಯವರುಗಳು ವಿಪರೀತ ಅಮಲು ಪದಾರ್ಥ ಸೇವಿಸಿ ರಸ್ತೆಯಲ್ಲಿ ಹೋಗುತ್ತಿದ್ದ ಪಿರ್ಯಾದಿಯವರ ಟಾಟಾ ಸಫಾರಿ ಕಾರು ನಂಬರ್ KA-19 Z 6242  ಕಾರನ್ನು ನಿಲ್ಲಿಸಿ ವಿನಾಃ ಕಾರಣ ಗಲಾಟೆ ಮಾಡಿದಾಗ ಅವರುಗಳನ್ನು ಸಮಾಧಾನಪಡಿಸಿ ಅಲ್ಲಿಂದ ಹೊರಟು ಹೋದ ಬಳಿಕ ಇದೇ ದ್ವೇಷದಿಂದ ಪ್ರೇಮ್ ಡಿ ಸೋಜ ಮತ್ತು ಇತರರು ಬೈಕಿನಲ್ಲಿ  ಬಂದು ಸಮಯ ರಾತ್ರಿ 11-30 ಗಂಟೆಗೆ ಕದ್ರಿ ಕಂಬಳದಲ್ಲಿರುವ  ಪಿರ್ಯಾದಿದಾರರ ಮನೆಯ ಹೊರಗಡೆ ಪಾರ್ಕ್ ಮಾಡಿದ್ದ ಪಿರ್ಯಾದಿಯವರ ಬಾಬ್ತು ಟಾಟಾ ಸಫಾರಿ ಕಾರು ನಂಬರ್ KA-19 Z 6242 ನೇದಕ್ಕೆ ಕಲ್ಲು ಬಿಸಾಡಿದ ಶಬ್ದ ಕೇಳಿ ಪಿರ್ಯಾದಿಯವರು ಹೊರಗಡೆ ಬಂದು ನೋಡಿದಾಗ ಕಾರಿಗೆ ಕಲ್ಲು ಬಿಸಾಡುತ್ತಿದ್ದ ಪ್ರೇಮ್ ಡಿ ಸೋಜ ಪಿರ್ಯಾದಿಯವರನ್ನು ಉದ್ದೇಶಿಸಿ ನಿನ್ನನ್ನು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಲ್ಲದೆ ಆತನ ಜೊತೆಯಲ್ಲಿದ್ದವರು ಪಿರ್ಯಾದಿಯವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬಕ್ಕ ತೂಪಾ ಎಂದು ಜೀವ ಬೆದರಿಕೆ ಹಾಕಿರುತ್ತಾರೆ, ಕಾರಿಗೆ ಕಲ್ಲು ಬಿಸಾಡಿದ ಪರಿಣಾಮ ಸುಮಾರು 70,000/-ರೂಪಾಯಿನಷ್ಟು ನಷ್ಟ ಉಂಟಾಗಿರುತ್ತದೆ.
 
7.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 04-03-2015 ರಂದು ರಾತ್ರಿ 21-30 ಗಂಟೆಯಿಂದ ದಿನಾಂಕ; 05-03-2015ರ ಬೆಳಿಗ್ಗೆ 08-30 ಗಂಟೆಯ ಮಧ್ಯೆ ಯಾರೋ ಕಳ್ಳರು ಪಿರ್ಯಾದಿದಾರರಾದ ಶ್ರೀ ಪ್ರೀತಮ್ ಎಂ.ಎಸ್. ರವರ ಬಾಬ್ತು ಮಂಗಳೂರು ನಗರದ ಕುಲಶೇಖರದಲ್ಲಿರುವ Sys Care Technologies, Mobile and Computer Sales and Service ಎಂಬ ಹೆಸರಿನ ಅಂಗಡಿಯ ಶಟರ್ ಡೋರಿನ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದೋ ಆಯುಧವನ್ನು ಉಪಯೋಗಿಸಿ ಮುರಿದು ತೆರೆದು ಆ ಮೂಲಕ ಒಳಪ್ರವೇಶಿಸಿ ಅಂಗಡಿಯೊಳಗಿದ್ದ ಸುಮಾರು 61,600/- ರೂ. ಬೆಲೆಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಪಿರ್ಯಾದಿದಾರರು ಅದೇ ದಿನ ತುರ್ತು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದು ದಿನಾಂಕ 06-03-2015 ರಂದು ಠಾಣೆಗೆ ಬಂದು ಲಿಖಿತ ದೂರು ನೀಡಿರುವುದಾಗಿದೆ.
 
8.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06/03/2015 ರಂದು ಸಮಯ ಸುಮಾರು 14:45 ಗಂಟೆಗೆ ಫಿರ್ಯಾದುದಾರರಾದ ಶ್ರೀ ವಿಲ್ಫ್ರೇಡ್ ಡೆಂಜಿಲ್ ಲೋಬೋ ರವರು ತಮ್ಮ ಗೆಳೆಯನ  ಬಾಬ್ತು ಬೈಕ್  ನಂಬ್ರ KA-19-Q-6002 ನೇ ದರಲ್ಲಿ ಸವಾರನಾಗಿದ್ದುಕೊಂಡು ಯೆಯ್ಯಾಡಿ ಕಡೆಯಿಂದ ಕುಂಟಿಕಾನ ಕಡೆಗೆ ಬರುವರೇ ಬಾರೆಬೈಲ್ ಫೈಯರ್ ಸರ್ವಿಸ್ ಒಳರಸ್ತೆ ತಲುಪುತ್ತಿದ್ದಂತೆ ಫಿರ್ಯಾದುದಾರರ ಎದುರುಗಡೆಯಿಂದ ಅಂದರೆ ಫೈಯರ್ ಸ್ಟೇಷನ್ ಕಡೆಯಿಂದ ಮೋಟಾರ್ ಸೈಕಲ್ ನಂಬ್ರ KA-19-EC-6569 ನೇ ದನ್ನು ಅದರ ಸವಾರನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರು ಸವಾರಿ ಮಾಡುತ್ತಿದ್ದ ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ಬೈಕು ಸಮೇತ ಡಾಮಾರು ರಸ್ತೆಗೆ ಬಿದ್ದು ಬಲಕೈನ ಮದ್ಯಬೆರಳು,ಹಾಗೂ ಉಂಗುರ ಬೆರಳಿಗೆ ಗುದ್ದಿದ ಗಾಯಉಂಟಾಗಿರುತ್ತದೆ ಹಾಗೂ ಹೊಟ್ಟೆಗೆ ತರಚಿದ ಗಾಯವಾಗಿ ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.
 
9.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:05-03-2014 ರಂದು ಬೆಳಿಗ್ಗೆ 07-54 ಗಂಟೆ ಸಮಯಕ್ಕೆ ನಿತ್ಯಾನಂದ ನಾಯ್ಕ್, ಕುಂದಾಪುರ, ಉಡುಪಿ ಎಂಬ ಯುವಕನು ತನ್ನ ಫೇಸ್ ಬುಕ್ ಖಾತೆಯಿಂದ ಪಿರ್ಯಾದುದಾರರಾದ ಶ್ರೀ ಸಂಗ್ವನ್ ರವರ ಫೇಸ್ ಬುಕ್ ಖಾತೆಗೆ ಇಸ್ಲಾಂ ಧರ್ಮದ ಬಗ್ಗೆ ಮತ್ತು ಅಲ್ಲಾಹು ನ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆಯನ್ನು ಅಪ್ ಲೋಡ್ ಮಾಡಿ ಮುಸ್ಲಿಂ ಧರ್ಮದ ಜನರಿಗೆ ತೀವ್ರ ನೋವುಂಟಾಗುವಂತೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪ್ರಕಟಿಸಿರುವುದರಿಂದ, ಹಿಂದೂ ಮತ್ತು ಮುಸ್ಲಿಂ ಧರ್ಮದ ನಡುವೆ ಮತೀಯ ವೈಷ್ಯಮ್ಯ ಉಂಟಾಗಿ ಸಮಾಜದ ಶಾಂತಿ ಸುವ್ಯವಸ್ಥೆ ಗೆ ಅಪಾರ ಹಾನಿ ಉಂಟಾಗುವ  ಸಾಧ್ಯತೆ ಇರುತ್ತದೆ ಎಂಬುದಾಗಿ ದೂರು ನೀಡಿರುವುದಾಗಿದೆ.   
 
10.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-03-2015 ರಂದು ಬೆಳಿಗ್ಗೆ 10-20 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಕೆ. ಜಗನ್ನಾಥ್ ರವರು ತನ್ನ ಬಾಬ್ತು ಸ್ಕೂಟರ್ ನಂಬ್ರ ಕೆಎ- 16 ಎಸ್- 7848 ನೇಯದರಲ್ಲಿ ಕೆಲಸದ ನಿಮಿತ್ತ ಕೂಳೂರಿಗೆ ಬಂದು ವಾಪಾಸು ಕೊಂಚಾಡಿಗೆ ಹೋಗುತ್ತಿರುವಾಗ ಪಂಜಿಮೊಗರು ಎಂಬಲ್ಲಿ ಪಿರ್ಯಾದಿದಾರರು ಸ್ಕೂಟರ್ ನಲ್ಲಿ ನಿಧಾನವಾಗಿ ಹೋಗುತ್ತಿರುವಾಗ ಎದುರುಗಡೆಯಿಂದ ಅಂದರೆ ಕಾವೂರು ಕಡೆಯಿಂದ ಕಾರು ಕೆಎ- 19 ಪಿ- 2117 ನೇಯದರ ಚಾಲಕ ಜನಾರ್ಧನನ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಸ್ಕೂಟರ್ ಗೆ ಎದುರಿನಿಂದ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಎಡಗಾಲಿಗೆ, ಕೋಲುಕಾಲಿಗೆ ಮೂಳೆಮುರಿತದ ಗಂಭೀರ ಗಾಯವಾಗಿ ಎ ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.
 
11.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-03-2015 ರಂದು ಬೆಳಿಗ್ಗೆ ಸುಮಾರು 08-05 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಯೋಗೀತಾ ಪಿ. ಶೆಟ್ಟಿ ರವರು ಮಂಗಳೂರು ನಗರದ ಬಲ್ಮಠ ರಸ್ತೆಯಲ್ಲಿರುವ ಹಂಪನಕಟ್ಟೆ ಯ ಡೋರ್ ನಂಬ್ರ 14-4-471/11 ರ ಅಂಗಡಿಯನ್ನು ತೆರೆದು ವ್ಯಾಪಾರ ನಡೆಸುತ್ತಿರುವಾಗ ಶಂಭುಶರ್ಮ ರವರ ಹೆಂಡತಿ ಹಾಗೂ ಅವರ  ಜೊತೆ ಬಂದ ಹೆಂಗಸು ಮತ್ತು ಒಂದು ಗಂಡಸು ಸಮಾನ ಉದ್ದೇಶದಿಂದ ಪಿರ್ಯಾದಿದಾರರ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರನ್ನು ಅಂಗಡಿಯ ಕೌಂಟರ್ನಿಂದ ಹೊರಗೆ ದೂಡಿ ಹಾಕಿದಲ್ಲದೇ, ಅಲ್ಲಿಂದ ಹೋಗುತ್ತಾ ಬೆದರಿಕೆ ಯೊಡ್ಡಿರುತ್ತಾರೆ.
 
12.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-03-2015 ರಂದು ಬೆಳಿಗ್ಗೆ 8-15 ಗಂಟೆಗೆ ಮಂಗಳೂರು ನಗರದ ಬಲ್ಮಠ ರಸ್ತೆಯಲ್ಲಿರು ಫೆರ್ನಾಂಡಿಸ್ ಬಿಲ್ಡಿಂಗ್ ನಲ್ಲಿರುವ ಪಿರ್ಯಾದಿದಾರರಾದ ಶ್ರೀ ರಾಮ ಶರ್ಮ ರವರು ಗುಡ್ಡ್ ಟೈಮ್ ಬೇಕರಿ ಅಂಗಡಿಯನ್ನು ತೆರೆದು ಸ್ವಚ್ಚಗೊಳಿಸುತ್ತಿರುವ ಸಂದರ್ಭದಲ್ಲಿ ಸಮಾನ ಉದ್ದೇಶದಿಂದ ಆರೋಪಿಗಳಾದ ಜಯರಾಜ ಶೆಟ್ಟಿ ಹಾಗೂ ಅವರ ಮಗ ಪ್ರಸಾದ ಶೆಟ್ಟಿ ರವರು ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಕೈಯನ್ನು ಏಳೆದು ಬೇಕರಿಯಿಂದ ಹೊರದಬ್ಬಲು ಪ್ರಯತ್ನಿಸಿದ್ದು, ಪಿರ್ಯಾದಿದಾರರು ನೆಲಕ್ಕೆ ಬಿದ್ದ ಪರಿಣಾಮ ಅವರ ಕೈಯಿಗೆ ಗಾಯ ಹಾಗೂ ತಲೆಗೆ ಏಟು ಬಿದ್ದುದಲ್ಲದೇ ಪಿರ್ಯಾದಿದಾರರನ್ನು ಉದ್ದೇಶಿಸಿ ಇನ್ನೂ 2 ತಿಂಗಳಿನಲ್ಲಿ ಕೈಕಾಲನ್ನು ಕತ್ತರಿಸಿ ಹಾಕುತ್ತೇನೆ ಎಂದು ಬೆದರಿಕೆ ಒಡ್ಡಿರುವುದಾಗಿಯೂ ಪಿರ್ಯಾದಿದಾರರು ತನಗಾದ ಗಾಯದ ಬಗ್ಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚೆಕಿತ್ಸೆ ಪಡೆದು ಠಾಣೆಗೆ ಬಂದು ಹೇಳಿಕೆ ನೀಡಿರುತ್ತಾರೆ.
 
13.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಡಾ. ಅಂಜಲಿ ಗಣೇಶ್ ರವರು ಸೈಂಟ್‌‌ ಜಾಸೆಫ್‌‌‌ ಕಾಲೇಜು ವಾಮಂಜೂರಿನಲ್ಲಿ ರಿಸರ್ಚ್ಕೆಲಸಕ್ಕಾಗಿ ಬಳಸುತ್ತಿದ್ದ ಪಿರ್ಯಾದಿದಾರರ ಬಾಬ್ತು HP PEVILLION PC15EO24TU ಹೆಸರಿನ ಲ್ಯಾಪ್ಟಾಪ್‌‌‌ ಸೈಂಟ್‌‌ ಜಾಸೆಫ್‌‌‌ ಇಂಜಿನಿಯರಿಂಗ್‌‌ ಕಾಲೇಜಿನ 3 ನೇ ಅಕಾಡೆಮಿಕ್‌‌‌ ಬ್ಲಾಕ್‌‌‌ನ ಎರಡನೇ ಅಂತಸ್ತಿನಲ್ಲಿರುವ MBA ವಿಭಾಗದ ಮುಖ್ಯ ಕಛೇರಿಯಲ್ಲಿಟ್ಟಿದ್ದು ದಿನಾಂಕ: 20.02.2015 ರಿಂದ ದಿನಾಂಕ: 02.03.2015 ರ ನಡುವೆ ಕಳವಾಗಿರುತ್ತದೆ.
 
14.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06.03.2015 ರಂದು ಪಿರ್ಯಾದುದಾರರಾದ ಶ್ರೀ ವಸಂತ್ ಪೂಜಾರಿ ರವರು ಜೀವನ್ ಎಂಬವರ ಬಾಬ್ತು KA-01-D-3051ನೇ ನಂಬ್ರದ ಟಾಟಾ ಸುಮೋ ವಾಹನದಲ್ಲಿ ಸಂಸಾರ ಸಮೇತ ಪೊಳಲಿ ಕಡೆಯಿಂದ ಕಾವೂರು ಕಡೆಗೆ ಹೋಗುತ್ತಾ ಕುಡುಪು ಕಟ್ಟೆ ಬಳಿ ತಲುಪುತ್ತಿದ್ದಂತೆ ಪಿರ್ಯಾದುದಾರರ ಎದುರುಗಡೆಯಿಂದ KA-19-C-5940ನೇ ನಂಬ್ರದ ಲಾರಿಯನ್ನು ಅದರ ಚಾಲಕ ವಿಶ್ವನಾಥ ಗೌಡ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸದ್ರಿ ಟಾಟಾ ಸುಮೋ ವಾಹನ ಮುಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಟಾಟಾ ಸುಮೋ ವಾಹನದ ಎದುರಿನ ಭಾಗ ಜಖಂಗೊಂಡಿರುವುದಲ್ಲದೇ, ಈ ಅಪಘಾತದಿಂದ ಟಾಟಾ ಸುಮೋ ವಾಹನದಲ್ಲಿದ್ದ ಪಿರ್ಯಾದುದಾರರ ಪತ್ನಿ ಸುಮಿತ್ರ ರವರ ಮುಖಕ್ಕೆ ಚರ್ಮ ಕಿತ್ತು ಹೋದ ಗಾಯ, ಬಲಕಣ್ಣಿಗೆ ರಕ್ತಗಾಯ ಹಾಗೂ ಪಿರ್ಯಾದುದಾರರ ಎದೆಗೆ, ಬಾಯಿಗೆ ಗುದ್ದಿದ ನೋವು, ಹಲ್ಲಿಗೆ ಗುದ್ದಿದ ನೋವುಂಟಾಗಿರುವುದಾಗಿದೆ.
 

No comments:

Post a Comment