Tuesday, March 17, 2015

THEFT CASE DETECTED PROPETY RECOVERED : ONE HELD BY MANGALORE SOUTH PS

ಪಾಂಡೇಶ್ವರ ಠಾಣಾ ಪೊಲೀಸರಿಂದ ಬ್ಯಾಟರಿ ಕಳ್ಳನ ಬಂಧನ
~~~~*****~~~
    ದಿನಾಂಕಃ 10-03-2015 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ 11-03-2015ರಂದು ಬೆಳಿಗ್ಗೆ 08-00 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರದ ಕ್ರಾಸಾಗಾಂಡಾ ಎದುರುಗಡೆ ಯಾರ್ಡ್ ನಲ್ಲಿ ಪಾರ್ಕ್ ಮಾಡಲಾಗಿದ್ದ 2 JCB ಹಾಗೂ 10 ಟಪ್ಪರ್ ಗಳಿಗೆ ಅಳವಡಿಸಲಾಗಿದ್ದ ಬ್ಯಾಟರಿಗಳು ಕಳವು ಆಗಿದ್ದು ಕಳವಾದ ಬ್ಯಾಟರಿಗಳ ಒಟ್ಟು ಅಂದಾಜು ಮೌಲ್ಯ 1,10,000/- ರೂಪಾಯಿ ಆಗಬಹುದು ಎಂಬುದಾಗಿ  ರಿಯಲ್ ಲ್ಯಾಂಡ್ ಮೂವರ್ಸ್ ನ ಮಾಲಕರಾದ  ಶ್ರೀ ರಕ್ಷಿತ್ ಪ್ರಾಯ 26 ವರ್ಷ, ತಂದೆಃ ದಿ. ವಿಜಯಕುಮಾರ್, ವಾಸಃ ರಶ್ಮೀ, ಚಕ್ರಪಾಣಿ ದೇವಸ್ಥಾನದ ಹತ್ತಿರ, ಅತ್ತಾವರ, ಮಂಗಳೂರು. ಇವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಮೊ. ನಂಬ್ರ 47/2015 ಕಲಂ 379 ಭಾ.ದಂ.ಸಂ.ಯಂತೆ ಕೇಸ್ ದಾಖಲಾಗಿರುತ್ತದೆ.
 
       ದಿನಾಂಕ 16-03-2015 ರಂದು ಮಂಗಳೂರು ದಕ್ಷಿಣ ಪೊಲೀಸು ಠಾಣೆಯ ಪೊಲೀಸ್ ನಿರೀಕ್ಷಕರಾದ ದಿನಕರ ಶೆಟ್ಟಿಯವರು ತಮ್ಮ ಸಿಬ್ಬಂದಿಗಳೊಂದಿಗೆ ಪೊಲೀಸ್ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಸಂಚರಿಸುತ್ತಾ 13-00 ಗಂಟೆಗೆ ಮಂಗಳೂರು ನಗರದ ಜೆಪ್ಪು ಮಾರ್ಕೆಟ್ ಕಡೆಯಿಂದ ಗುಜ್ಜರಕೆರೆ ರಸ್ತೆಲ್ಲಿ ಹೋಗುತ್ತಾ ಮಂಗಳೂರು ಕ್ಲಬ್ ಬಳಿ ತಲುಪಿದಾಗ ಓರ್ವ ವ್ಯಕ್ತಿ ಪೊಲೀಸ್ ವಾಹನವನ್ನು ನೋಡಿ ಮರೆಯಲ್ಲಿ ಅವಿತುಕುಳಿತುಕೊಂಡಿರುವುದನ್ನು ನೋಡಿ ಆತನ ಹತ್ತಿರ ತಲುಪಿದಾಗ ಆತನು ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸಿದವನ್ನು ಬೆನ್ನಟ್ಟಿ ಹಿಡಿದು, ಓಡಿ ಹೋಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಬಗ್ಗೆ ತೀವ್ರವಾಗಿ ವಿಚಾರಿಸಿದಾಗ, ಆತನು ಅತ್ತಾವರ ಕಾಸಾಗ್ರಾಂಡದ ಹತ್ತಿರದಲ್ಲಿ ನಿಲ್ಲಿಸಲಾಗಿದ್ದ ಜೆ.ಸಿ.ಬಿ. ಮತ್ತು ಲಾರಿಗಳಿಂದ ಬ್ಯಾಟರಿಗಳನ್ನು ಕಳವು ಮಾಡಿ ಆ ಬ್ಯಾಟರಿಗಳನ್ನು ಅಡಗಿಸಿ ಇಟ್ಟಿದ್ದು, ಅವುಗಳ ಪೈಕಿ ಈಗ ಕೆಲವು ಬ್ಯಾಟರಿಗಳನ್ನು ತೆಗೆದು ಗುಜರಿ ಅಂಗಡಿಗೆ ಮಾರಾಟಕ್ಕೆ ತೆಗೆದುಕೊಂಡು ಹೋಗಲು ಅಟೋ ಟೆಂಪೋಕ್ಕಾಗಿ ಕಾದು ನಿಂತುಕೊಂಡಿರುವುದು ಎಂದು ಹೇಳಿ ಅಲ್ಲೆ ಪಕ್ಕದಲ್ಲಿ ಮರೆಯಲ್ಲಿ ಇದ್ದ ಮುಚ್ಚಿದ ಗೋಣಿಯನ್ನು ತೆಗೆದು ಈ ಬ್ಯಾಟರಿಗಳನ್ನು ತೋರಿಸಿಕೊಟ್ಟಿದ್ದು ಸದ್ರಿ ಬ್ಯಾಟರಿಗಳನ್ನು ಪರಿಶೀಲಿಸಿ ನೋಡಿದಾಗ ಅವುಗಳು ಕಾಸಾಗ್ರಾಂಡಾ ಬಳಿಯಲ್ಲಿ ಯಾರ್ಡ್ ನಲ್ಲಿ ಪಾರ್ಕ್ ಮಾಡಲಾಗಿದ್ದ ಜೆ.ಸಿ.ಬಿ. ಹಾಗೂ ಟಿಪ್ಪರ್ ಲಾರಿಗಳಿಂದ ಕಳವು ಮಾಡಿರುವ ಬ್ಯಾಟರಿಗಳಾಗಿರಿವುದಾಗಿ ದೃಡಪಟ್ಟ ಮೇರೆಗೆ ಆತನನ್ನು ದಸ್ತಗಿರಿ ಮಾಡಿ ಕೂಲಂಕುಷವಾಗಿ ವಿಚಾರಿಸಿದಾಗ ಆತನು ಇತರ ಕಡೆಗಳಾದ ಮಂಗಳೂರು ನಗರದ ಅತ್ತಾವರ, ಕಾಪ್ರಿಗುಡ್ಡೆ, ಗೂಡು ಶೆಡ್ಡೆ, ನೀರೇಶ್ವಾಲ್ಯ ರಸ್ತೆ, ದಕ್ಷಿಣ ಧಕ್ಕೆ ಇತ್ಯಾದಿ ಕಡೆಗಳಲ್ಲಿ ರಾತ್ರಿ ಸಮಯಕ್ಕೆ ನಿಂತಿದ್ದ ಲಾರಿಗಳಿಂದ ಬ್ಯಾಟರಿಗಳನ್ನು ಕಳವು ಮಾಡಿ ಅದನ್ನು ಗುಜರಿ ಅಂಗಡಿಗಳಿಗೆ ಮಾರಾಟ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾನೆ
DgÉÆæ ºÉ¸ÀgÀÄ «¼Á¸À ºÁUÀÆ ¥sÉÆÃmÉÆ
ಜಯಂತ ಪೂಜಾರಿ, ಪ್ರಾಯ 43 ವರ್ಷ 
ತಂದೆಃ ದಿವಂಗತ ನಾರಾಯಣ ಪೂಜಾರಿ
ರವಿಕಲಾ ಕಂಪೌಂಡು, ಚೆಂಬುಗುಡ್ಡೆ ಮನೆ,     
ಪೆರ್ಮನ್ನೂರು ಗ್ರಾಮ, ಮಂಗಳೂರು
 
ಸ್ವಾಧೀನಪಡಿಸಲಾದ ಸೊತ್ತುಗಳು.
ಒಟ್ಟು 22 ಡೊಡ್ಡ ಲಾರಿ ಬ್ಯಾಟರಿಗಳು
ಒಟ್ಟು ಅಂದಾಜು ಮೌಲ್ಯ 2,00,000/-
ಪತ್ತೆ ಕಾರ್ಯಾಚಾರಣೆ :-
ಮಾನ್ಯ ಎಸ್. ಮುರುಗನ್ IPS ಪೊಲೀಸ್ ಆಯುಕ್ತರು, ಮಂಗಳೂರು ನಗರ, ಮಾನ್ಯ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಕೆ. ಸಂತೋಷ್ ಬಾಬು IPS, ಮಾನ್ಯ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ವಿಷ್ಣುವರ್ಧನ್, ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಕಲ್ಯಾಣ್ ಕುಮಾರ್ ಶೆಟ್ಟಿ, ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ ಇವರು ಆರೋಪಿಗಳನ್ನು ದಸ್ತಗಿರಿ ಮಾಡಿ ಸೊತ್ತುಗಳನ್ನು ಸ್ವಾಧೀನಪಡಿಸಿದ್ದು ಪಾಂಡೇಶ್ವರ ಠಾಣಾ ಪೊಲೀಸ್ ಉಪನಿರೀಕ್ಷಕರುಗಳಾದ ಅನಂತ ಮುರ್ಡೇಶ್ವರ್ ಹಾಗೂ. ಶರೀಪ್ ಕೆ., ಹಾಗೂ ಸಿಬ್ಬಂದಿಗಳಾದ ವಿಶ್ವನಾಥ, ಕೇಶವ ಪರಿವಾರ, ಜನಾರ್ಥನ ಗೌಡ, ಯೋಗಿಶ್, ಗಂಗಾಧರ, ದಾಮೋದರ್, ಮಣಿಕಂಠ, ಶರತ್ ಕುಮಾರ್, ಸಾಜು ಕೆ. ನಾಯರ್, ಪ್ರದೀಪ್ ಕುಮಾರ್ ರೈ, ಪ್ರಕಾಶ್ ಇವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು.

No comments:

Post a Comment