Wednesday, March 18, 2015

Daily Crime Reports : 18-03-2015

ದೈನಂದಿನ ಅಪರಾದ ವರದಿ.
ದಿನಾಂಕ 18.03.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
3
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
0
ವಾಹನ ಕಳವು
:
2
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
3
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-03-2015 ರಂದು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ಕೊಟ್ಟಾರ ಚೌಕಿ ಎಂಬಲ್ಲಿ ಪಿರ್ಯಾದಿದಾರರಾದ ಉರ್ವಾ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಪೂವಪ್ಪ ಹೆಚ್.ಎಂ. ರವರು ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿರುವಾಗ ಆರೋಪಿ ಪ್ರದೀಪ್ ಕುಮಾರ್ (28) ವರ್ಷ ಎಂಬಾತನು ಮೋಟಾರ್ ಸೈಕಲ್ ನಂಬ್ರ ಕೆಏ-19-ಇಇ-3454 ನೇ ದರಲ್ಲಿ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದವನನ್ನು ನಿಲ್ಲಿಸಿದಾಗ, ನಿಲ್ಲಿಸದೇ ಇದ್ದವನನ್ನು ಇಲಾಖಾ ಜೀಪಿನಲ್ಲಿ ಬೆನ್ನತ್ತಿ ಅಡ್ಡ ಹಾಕಿ ನಿಲ್ಲಿಸಿ ತಪಾಸಣೆ ಮಾಡಿದಾಗ ಆರೋಪಿ ಚಲಾಯಿಸುತ್ತಿದ್ದ ಮೋಟಾರ್ ಸೈಕಲಿನ ಸೀಟಿನ ಬಲ ಬದಿಯಲ್ಲಿ ಒಂದು ಕಬ್ಬಿಣದ ತಲವಾರು ಹಾಗೂ ಒಂದು ಚೂರಿಯನ್ನು ಹಳೆಯ ಪೇಪರಿನಲ್ಲಿ ಸುತ್ತಿಕೊಂಡು ಹಗ್ಗದಿಂದ ಮೋಟಾರ್ ಸೈಕಲ್ ನ ಸೀಟಿನ ಕ್ಲಾಂಪ್ ಗೆ ಕಟ್ಟಿದ್ದು ಆರೋಪಿಯು ಸಮರ್ಪಕ ಉತ್ತರ ನೀಡದೇ ಇದ್ದು ಇತನು ಯಾವುದೋ ಬೇವಾರಂಟ್ ತಕ್ಷೀರು ಮಾಡುವ ದುರುದ್ದೇಶದಿಂದ ಇಟ್ಟಿರುವುದು ಮನದಟ್ಟಾಗಿರುವುದರಿಂದ ಆರೋಪಿಯನ್ನು ಸೊತ್ತುಗಳ ಸಮೇತ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮದ ಬಗ್ಗೆ ಠಾಣೆಗೆ ಒಪ್ಪಿಸಿರುವುದಾಗಿದೆ.
 
2.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-03-2015ರಂದು ಬೆಳಿಗ್ಗೆ 9-30 ಗಂಟೆಯ ಸಮಯ ಪಿರ್ಯಾದಿದಾರರ ತಂದೆಯಾದ ಶ್ರೀ ವೆಂಕಟೇಶ್ಪ್ರಭು(70) ಎಂಬುವರು ಲೇಡಿಹಿಲ್‌‌‌ನಲ್ಲಿರುವ ಮೆಡ್‌‌‌ಪ್ಲಸ್ಎಂಬ ಮೆಡಿಕಲ್ಶಾಫ್‌‌‌ಗೆ ಔಷದಿ ಕೊಳ್ಳಲು ಮನೆಯಿಂದ ಹೊರಹೋದವರು ವಾಪಸ್ಸು ಬಾರದೇ ಕಾಣೆಯಾಗಿದ್ದು, ಮನೆಯಲ್ಲಿ ಅವರ ಪರ್ಸನಲ್ಲಿ ಒಂದು ಪತ್ರವೊಂದು ಇದ್ದು, ಈ ಪತ್ರದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಿರುವುದಾಗಿಯೂ ಬರೆದಿಟಿದ್ದು, ಅಲ್ಲದೇ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆಯು ಆಗಿದ್ದು, ಶಸ್ತ್ರ ಚಿಕಿತ್ಸೆಯ ಭಾಗದಲ್ಲಿ ಕಿವು ಬಂದಂತೆ ಈ ದಿನ ಸಂಜೆ ಕೆಎಮ್ಸಿ ಆಸ್ಪತ್ರೆಯಲ್ಲಿ ಮರು ಶಸ್ತ್ರಚಿಕಿತ್ಸೆಗೆ ದಿನ ನಿಗದಿಪಡಿಸಲಾಗಿತ್ತು ಅವರನ್ನು ಎಲ್ಲಾ ಕಡೆ ಹುಡುಕಾಡಿ ಸಿಗದಿದೇ ಇರುವುದಾಗಿದೆ.
 
3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್‌‌ ನಿರೀಕ್ಷಕ ಶ್ರೀ ರಾಮಚಂದ್ರ ನಾಯಕ್ ರವರು ಸಿಬ್ಬಂದಿಗಳ ಜೊತೆಯಲ್ಲಿ ಗಸ್ತಿನಲ್ಲಿರುವಾಗ ಲಿಂಗಪ್ಪಯ್ಯ ಕಾಡು  ಎಂಬಲ್ಲಿ ಮಟ್ಕಾ ಜೂಜಾಟದ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಅಲ್ಲಿಯೇ ಇದ್ದ ಪಂಚರನ್ನು ಬರಮಾಡಿಸಿ ಇಲಾಖಾ ಜೀಪಿನಲ್ಲಿ ಸಂಜೆ 18:30 ರ ವೇಳೆಗೆ ಲಿಂಗಪ್ಪಯ್ಯ ಕಾಡು ಭಾಗ್ಯವಂತಿ ದೇವಸ್ಥಾನ ಬಳಿ ಹೋದಾಗ ಅಲ್ಲಿ ಕೆಲವು ಜನರು ಸೇರಿದ್ದು ಒಬ್ಬ ವ್ಯಕ್ತಿಯು ಚೀಟಿಯಲ್ಲಿ ಬರೆಯುತ್ತಿದ್ದು ಇಬ್ಬರು ವ್ಯಕ್ತಿಗಳು ನಂಬ್ರವನ್ನು ಆತನಿಗೆ ಹೇಳುತ್ತಿದ್ದು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದನ್ನು ಕಂಡು ಜೀಪನ್ನು ಹತ್ತಿರ ಹೋಗಿ ನಿಲ್ಲಿಸಿದಾಗ ಅಲ್ಲಿದ್ದ ಸಾರ್ವಜನಿಕರು ಓಡಿಹೋಗಿದ್ದು ಸಿಬ್ಬಂದಿಗಳ ಸಹಾಯದಿಂದ ಚೀಟಿ ಬರೆಯುತ್ತಿದ್ದ ಆರೋಪಿ ಬಸವರಾಜ  ಎಂಬಾತನನ್ನು ಪ್ರಶ್ನಿಸಲಾಗಿ ಇವರು ಸಾರ್ವಜನಿಕರಿಂದ ಮಟ್ಕಾ ಜೂಜಾಟಕ್ಕೆ ಹಣವನ್ನು ಸಂಗ್ರಹಿಸುತ್ತಿರುವುದಾಗಿಯೂ ಸೊನ್ನೆ ಸಂಖ್ಯೆಯಿಂದ 99 ಸಂಖ್ಯೆ ಯವರೆಗೆ ಯಾವುದಾದರೂ ಒಂದು ರೂಪಾಯಿ ಹಾಕಿದಲ್ಲಿ ಸದ್ರಿ ನಂಬ್ರ ಡ್ರಾ ಆದಲ್ಲಿ ಒಂದು ರೂಪಾಯಿಗೆ 70/-ರೂ ನೀಡುವುದಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದಾಗಿ ತಿಳಿಸಿರುತ್ತಾರೆ. ಆತನನ್ನು  ದಸ್ತಗಿರಿ ಮಾಡಿ ಅರೋಪಿಯ ವಶದಲ್ಲಿದ್ದ ನಗದು ಹಣ ರೂ 1,340/- ಹಾಗೂ ಒಂದು ಪೆನ್ , ಮಟ್ಕಾ ನಂಬರ್ ನ ಚೀಟಿಯನ್ನು  ಪಂಚರ ಸಮಕ್ಷಮ ಮಹಜರು ಮೂಲಕ ಸ್ವಾದೀನಪಡಿಸಿಕೊಂಡು, ಅರೋಪಿತನು ಹಣವನ್ನು ಪಣವಾಗಿಟ್ಟು ಆಡುವ ಮಟ್ಕಾ ಜೂಜಾಟಕ್ಕೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದುದರಿಂದ ಅರೋಪಿತನ ವಿರುದ್ದ ಪ್ರಕರಣ ದಾಖಲಿಸಿರುವುದಾಗಿದೆ.
 
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14.03.2015 ರಂದು ಫಿರ್ಯಾದಿದಾರರಾದ ಶ್ರೀ ರಾಮು ರವರು ಮುಡಿಪು ಸರಕಾರಿ ಕಾಲೇಜಿನ ವತಿಯಿಂದ ಏರ್ಪಡಿಸಿದ ಪ್ರವಾಸದ ಬಗ್ಗೆ ಬಸ್ಸು ನಂಬ್ರ ಕೆಎ-19ಡಿ-9269 ನೇ ಬಸ್ಸನ್ನು ಚಲಾಯಿಸಿಕೊಂಡು ಹೋಗಿದ್ದು, ಅಲ್ಲಿ ಸುಮಾರು 100-150 ಜನರು ಪ್ರವಾಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು ಅದರಂತೆ ಪ್ರವಾಸವನ್ನು ರದ್ದು ಪಡಿಸಿದ್ದು, ಬಳಿಕ ಫಿರ್ಯಾದಿದಾರರು ಬಸ್ಸನ್ನು ವಾಪಾಸು ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬಂದು ರಾತ್ರಿ ಸುಮಾರು 9:30 ಗಂಟೆಗೆ ಬಂಟ್ವಾಳ ತಾಲೂಕು, ಕುರ್ನಾಡು ಗ್ರಾಮದ, ಮುಡಿಪು ಕಾಲೇಜಿನ ಮೈನ್ಗೇಟ್ಬಳಿ ತಲುಪುತ್ತಿದ್ದಂತೆಯೇ ಅಲ್ಲಿ ಸೇರಿದ್ದ ಯುವಕರು ಬಸ್ಸನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಒಬ್ಬ ವ್ಯಕ್ತಿಯು ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೆನ್ನೆಗೆ ಕೈಯಿಂದ ಹೊಡೆದು, ಜೀವ ಬೆದರಿಕೆ ಒಡ್ಡಿರುತ್ತಾನೆ. ಅಲ್ಲದೇ ಗುಂಪಿನಲ್ಲಿದ್ದ ಸುಮಾರು 10-15 ಮಂದಿ ಯುವಕರು ಬಸ್ಸಿನ ಗಾಜುಗಳಿಗೆ ಕಲ್ಲು ಬಿಸಾಡಿ ಹಾನಿ ಉಂಟು ಮಾಡಿರುತ್ತಾರೆ. ಫಿರ್ಯಾದಿದಾರರು ಇನ್ನೊಂದು ಬಸ್ಸಿನಲ್ಲಿ ಬದಲಿ ಚಾಲಕನಾಗಿ ಬೆಂಗಳೂರಿಗೆ ಹೋಗಿದ್ದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.
 
5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16-03-2015ರ ಸಂಜೆ 18-00 ಗಂಟೆಯಿಂದ ದಿನಾಂಕ: 17-03-2015ರ ಬೆಳಿಗ್ಗೆ 09-30 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶ್ರೀ ಹೆಚ್. ಮಧೂಸೂದನ್ ರಾವ್ ರವರ ಬಾಬ್ತು ಮಂಗಳೂರು ನಗರದ ಬೆಂದೂರುವೆಲ್ ನ ಕುಮಾರ್ಸ್  ಹೊಟೇಲ್ ಕಟ್ಟಡದ ತಳ ಅಂತಸ್ತಿನಲ್ಲಿರುವ  "ವಾಸಿತಂ" ಎಂಜಿನಿಯರ್ಸ್ ಮತ್ತು ಏರ್ ಕಂಡಿಷನರ್ಸ್ ಎಂಬ ಸರ್ವೀಸ್ ಸೆಂಟರ್ ನ ಶಟರ್ ಡೋರಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ಮುರಿದು ತೆರೆದು ಆ ಮೂಲಕ ಒಳಪ್ರವೇಶಿಸಿ ಸದ್ರಿ ಸರ್ವೀಸ್ ಸೆಂಟರ್ ನ ಒಳಗಿರಿಸಿದ್ದ Copper pipes- 3 ಬಂಡಲ್ ಗಳು, Copper pipe- 1/2 ಬಂಡಲ್, Copper pipe pieces ಸುಮಾರು 20kg, Brazing set box ಹಾಗೂ Peetal Flair Nutts ಹೀಗೆ ಅಂದಾಜು ರೂ. 22,129/- ರೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
 
6.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-03-2015 ರಂದು ಸಮಯ ಸುಮಾರು ಮದ್ಯಾಹ್ನ 3.50 ಗಂಟೆಗೆ ಪಿರ್ಯಾದುದಾರರಾದ ಜಯಾ ರವರು ಬಲ್ಮಠ ಹೆಣ್ಣು ಮಕ್ಕಳ ಶಾಲೆಯ ಹಿಂಬದಿ ಗೇಟಿನ ಬಳಿ ಅಂದರೆ ಜ್ಯೋತಿ ಟಾಕೀಸ್ ಎದರುಗಡೆ ರಸ್ತೆಯಲ್ಲಿ ರಸ್ತೆ ದಾಟುತ್ತಿರುವಾಗ ಬಂಟ್ಸ್ ಹಾಸ್ಟೆಲ್ ಕಡೆಯಿಂದ ಬಸ್ಸು ನಂಬ್ರ ಕೆಎ-19-ಬಿ-7341 ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ  ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರ ಎಡಕಾಲಿಗೆ ಮೂಳೆಮುರಿತದ ಗಾಯ,ಎಡಮೊಣಗಂಟಿಗೆ ತರಚಿದ ಗಾಯ,ಬಲಕಾಲಿನ ಪಾದಕ್ಕೆ ಚರ್ಮಕಿತ್ತು ಹೊದತಂಹ ಗಾಯ, ಸೊಂಟಕ್ಕೆ ಹಾಗೂ ಮರ್ಮಾಂಗಕ್ಕೆ ಗುದ್ದಿದತಂಹ ಗಾಯವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
 
7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17-03+2015 ರಂದು 12-45 ಗಂಟೆ ಸಮಯಕ್ಕೆ ಬಜಪೆ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ರಮೇಶ್ ಹೆಚ್. ಹಾನಾಪುರ ರವರುಸಿಬ್ಬಂದಿಯವರ ಜೊತೆ ಠಾಣಾ ಸರಹದ್ದಾದ ಮಳವೂರು ಗ್ರಾಮದ, ಕಲ್ಲಗದ್ದೆ ಎಂಬಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಸಮಯ ಮಹಾದೇವ ದೇವಸ್ಥಾನದ ಬಸ್ಸು ತಂಗುದಾಣದ ಬಳಿ, ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮಹಮ್ಮದ್ ಶರೀಪ್ ಎಂಬಾತನನ್ನು ವಿಚಾರಣೆ ಮಾಡಿದಾಗ, ಯಾವುದೇ ಅಧಿಕೃತ  ಪರವಾನಿಗೆ ಇಲ್ಲದೇ ಗಾಂಜಾ ಎಂಬ ಮಾದಕ ದ್ರವ್ಯವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದನ್ನು ಪತ್ತೆ ಮಾಡಿ ಮುಂದಿನ ಕ್ರಮಕ್ಕಾಗಿ ಠಾಣೆಗೆ ವರದಿಯೊಂದಿಗೆ ಕಳುಹಿಸಿ ಕೊಟ್ಟಿರುವುದಾಗಿದೆ.
 
8.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-02-2015ರಂದು ಈ ಪ್ರಕರಣದ ಪಿರ್ಯಾಧಿದಾರರಾದ ಶ್ರೀಕಾಂತ್ ಎಂಬವರು ಮಂಗಳೂರು ತಾಲೂಕು ಬೈಕಂಪಾಡಿ ಬ್ರಿಡ್ಜ್ ಬಳಿ ಪಣಂಬೂರು ಕಡೆಯಿಂದ ನಡೆದುಕೊಂಡು ಬರುತ್ತಿರುವಾಗ ಸಂಜೆ ಸುಮಾರು 7:45 ಗಂಟೆಗೆ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ಕೆಎ-20-ಸಿ-2568 ನಂಬ್ರದ ಮೀನಿನ ಲಾರಿಯನ್ನು ಅದರ ಚಾಲಕನು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಸದ್ರಿಯವರು ಮಾರ್ಗಕ್ಕೆ ಬಿದ್ದು ತಲೆಗೆ ರಕ್ತ ಗಾಯವಾಗಿ ಮಂಗಳೂರು ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
 
9.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-02-2015 ರಂದು 21-30 ಗಂಟೆಯಿಂದ ದಿನಾಂಕ 03-02-2015ರಂದು ಬೆಳಿಗ್ಗೆ 07-00 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಉಪ್ಪು ದಕ್ಕೆಯಲ್ಲಿ ವಿಜೇಶ್  ಕ್ಯಾಂಟಿನ್ ಬಳಿ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿದಾರರಾದ ಉಳ್ಳಾಲ ಪ್ರಭು ರವರ ಆರ್. ಸಿ. ಮಾಲಕತ್ವದ 2014ನೇ ಮೊಡಲ್ ನ ಕಪ್ಪು ಬಣ್ಣದ ಅಂದಾಜು ರೂಪಾಯಿ 49000/- ಬೆಲೆ ಬಾಳುವ KA 19 EM 3750  ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು  ಕಳವಾದ ದ್ಚಿಚಕ್ರ ವಾಹನದ ಸೀಟ್ ಕೆಳಭಾಗದಲ್ಲಿರುವ ಟೂಲ್ಸ್ ಬಾಕ್ಸ್ ನಲ್ಲಿ ದ್ಚಿಚಕ್ರ ವಾಹನಕ್ಕೆ ಸಂಬಂಧಿಸಿದ R.C., ಹಾಗೂ INSURANCE  ಇವುಗಳ ಜೆರಾಕ್ಸ್ ಪ್ರತಿಗಳು ಕೂಡ ಇರುತ್ತದೆ. ಕಳವಾದ ವಾಹನವನ್ನು ಹುಡುಕಾಡಿದಲ್ಲಿ  ಪತ್ತೆಯಾಗಿರುವುದಿಲ್ಲ.
 
10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-03-2015 ರಂದು ರಾತ್ರಿ 09-45 ಗಂಟೆಯಿಂದ ದಿನಾಂಕ 17-03-2015 ರಂದು ಬೆಳಿಗ್ಗೆ  06-30 ಗಂಟೆ ಮಧ್ಯೆ ಪ್ರೀತಂ ಬೆನಕ ಕಾಂಪ್ಲೆಕ್ಸ್ಹಿಂದುಗಡೆ, ಶಾರದಾ ಸಭಾಭವನದ ಬಳಿ, ದುರ್ಗಾಂಭ ಗ್ಯಾರೇಜ್ಮುಂಭಾಗ, 1 ನೇ ಕೊಲ್ಯ, ಮಂಗಳೂರು ತಾಲೂಕು ಇಲ್ಲಿ ನಿಲ್ಲಿಸಿದ ಪಿರ್ಯಾದಿದಾರರಾದ ಶ್ರೀ ಅಶ್ವಿತ್ ಉಳ್ಳಾಲ ರವರ ಬಾಬ್ತು KA-19-S-1222 ನೇ ನಂಬ್ರದ ಯಮಹಾ ಮೋಟಾರ್ಬೈಕ್ಕಳ್ಳತನವಾಗಿರುತ್ತದೆಕಳವಾದ ಯಮಹಾ ಬೈಕ್ನ ಅಂದಾಜು ಮೌಲ್ಯ ರೂ. 15,000/- ರೂಪಾಯಿ ಆಗಬಹುದು. ಯಮಹಾ ಬೈಕ್ನ ಚಾಸಿಸ್ ನಂ. 02B4TL523144, ಇಂಜಿನ್ನಂ. 4TL523144 ಬೈಕಿನ ಮಾದರಿ; YAMAHA RX 135  ಆಗಿರುತ್ತದೆ. ಕಳವಾದ ಯಮಹಾ ಬೈಕ್ಕಪ್ಪು ಬಣ್ಣದಾಗಿತ್ತದೆ.
 
11.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-03-2015 ರಂದು ಫಿರ್ಯಾಧಿದಾರರಾದ ಶ್ರೀ ಬಾಲಾದೀಯ ಭವೇಶ್ ಎಂಬವರು ಕೆಲಸಮಾಡುತ್ತಿದ್ದ ಮಾಲಾಕರ ಜೋತೆ ಸಂಜೆ ಸುಮಾರು 7:30 ಗಂಟೆಗೆ ತನ್ನ ಅಂಗಡಿಯನ್ನು ಬಂದು ಮಾಡಿ ತನ್ನ ಬಾಪ್ತು ಮೋಟಾರ್ ಸೈಕಲ್ ಕೆಎ. 19 ಇಮ್ 5543 ನೇ ದನ್ನು ಚಲಾಯಿಸುತ್ತಾ ಬರುವಾಗ ಅಳಕೆ ಮೀನು ಮಾರ್ಕೇಟ್ ಬಳಿ ತಲುಪಿದಾಗ ಗುರುತು ಪರಿಚಯವಿಲ್ಲದ 3 ಜನ ರಸ್ತೆಯ ಎಡಬದಿಯಲ್ಲಿ ನಿಂತು ಫಿರ್ಯಾಧಿದಾರರ ಮೋಟರ್ ಸೈಕಲ್ ನ್ನು ತಡೆದು ನಿಲ್ಲಿಸಿ ಮೋಟಾರ್ ಸೈಕಲ್ ನ್ನು ದೂಡಿಹಾಕಿ ಫಿರ್ಯಾಧಿದಾರರ ಹೆಲ್ಮೇಟ್ ನ್ನು ಒಬ್ಬ ವ್ಯಕ್ತಿ ಬಲವಂತವಾಗಿ ತಗೆದು ಇವನೇ ಎಂಬುದಾಗಿ ಹೇಳಿದಾಗ ಇನ್ನೊಬ್ಬ ವ್ಯಕ್ತಿಯು ಫಿರ್ಯಾಧಿದಾರರ ತಲೆಗೆ ಕಬ್ಬಿಣದ ಸರಳನಿಂದ ಹೋಡೆಯಲು ಪ್ರಯತ್ನಿಸಿದಾಗ ಫಿರ್ಯಾಧಿದಾರರು ತನ್ನ ಎಡಕೈನ್ನು ಮೇಲಕ್ಕೆ ಎತ್ತಿದ ಪರಿಣಾಮ ಅವರು ಕೈಗೆ ತೀವ್ರ ಸ್ವರೂಪದ ರಕ್ತ ಗಾಯ ಉಂಟಾಗಿರುತ್ತದೆ. ಉಳಿದ ಎರಡು ಜನ ಆರೋಪಿಗಳು ಮುಷ್ಠಿಗಾತ್ರದ ಕಲ್ಲಿನಿಂದ ಫಿರ್ಯಾಧಿದಾರರ  ತಲೆಗೆ ಹೋಡೆದು ಇವನನ್ನು ಕೊಲ್ಲು ಎಂಬುದಾಗಿ ಹೇಳುತ್ತಾ ಜೀವ ಸಹಿತ ಬಿಡಬಾರದು ಎಂಬುದಾಗಿ ಹೇಳಿ ನಂತರ ಸಾರ್ವಜನಿಕರನ್ನು ನೋಡಿದ ಆರೋಪಿಗಳು ಅವರ ಎಡೆಯಿಂದ ಪರಾರಿಯಾಗಿರುತ್ತಾರೆ. ಗಾಯಳುವನ್ನು ಸಾರ್ವಜನಿಕರು ಚಿಕಿತ್ಸೆಯ  ಬಗ್ಗೆ  ಹತ್ತಿರದ   ಉಳ್ಳಾಲ ನರ್ಸಿಂಗ್ ಹೋಂ ಗೆ ದಾಖಲು ಮಾಡಿರುತ್ತಾರೆ.
 
12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16.03.2015 ರಂದು ರಾತ್ರಿ 20.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಜಮ್ಸೀರ್ ರವರು ತನ್ನ ಸ್ನೇಹಿತರಾದ ನಝೀರ್‌‌, ಹಬೀಬುಲ್ಲಾ ಮತ್ತು ಸುಹೈಲ್‌‌‌ ಎಂಬವರ ಜೊತೆ ವಾಮಂಜೂರು ಬಸ್‌‌ ಸ್ಟಾಂಡ್‌‌ ಬಳಿಯ ಮೈದಾನದಲ್ಲಿ ನಿಂತುಕೊಂಡು ಮಾತನಾಡುತ್ತಿದ್ದ  ಸಮಯ ಪಿರ್ಯಾದಿದಾರರು  ಮತ್ತು ಅವರ ಸ್ನೇಹಿತರು ನಿಂತಲ್ಲಿಂದ ಸ್ವಲ್ಪ ದೂರದಲ್ಲಿ ಒಂದು ಮೋಟಾರ್‌‌ ಸೈಕಲ್‌‌ ಮತ್ತು ಆಟೋ ರಿಕ್ಷಾದಲ್ಲಿ  ಪಿರ್ಯಾದಿದಾರರಿಗೆ ಪರಿಚಯವಿರುವ ಉಲಾಯಿಬೆಟ್ಟುವಿನ  ರಿಜ್ವಾನ್‌, ಆಸ್ಪಕ್ಮತ್ತು ಅನ್ಸಾರ್‌‌ ಹಾಗೂ  ಪಿರ್ಯಾದಿದಾರರಿಗೆ ಪರಿಚಯವಿಲ್ಲದ  ಮೂರು ಜನ  ಬಂದು ಇಳಿದು ಅವರ ಕೈಯಲ್ಲಿ ಮರದ ಸೋಂಟೆ, ಕಬ್ಬಿಣದ ರಾಡ್‌‌ ಹಾಗೂ ತಲವಾರುಗಳನ್ನು ಬೀಸುತ್ತಾ ನಿನ್ನೆ ಮಸೀದಿಯಲ್ಲಿ ಉಲಾಯಿಬೆಟ್ಟುವಿನವರಿಗೆ ಹೊಡೆದವರು ಯಾರು ಎಂದು  ಬೊಬ್ಬೆ ಹೊಡೆಯುತ್ತಾ ಪಿರ್ಯಾದರರ ಬಳಿಗೆ ಬಂದು ಅವರಲ್ಲಿ ರಿಜ್ವಾನ್‌‌ ಎಂಬಾತನು ಪಿರ್ಯಾದಿದಾರರನ್ನು ಉದ್ದೇಶಿಸಿ  ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡ್‌‌ನಿಂದ  ಪಿರ್ಯಾದಿದಾರರಿಗೆ ಹೊಡೆದ ಪರಿಣಾಮ  ಪಿರ್ಯಾದಿದಾರರ ಎಡಕೈಯ ಮಣಿಗಂಟಿಗೆ  ಬಿದ್ದು  ಗಂಭೀರ ಗುದ್ದಿದ ರೀತಿಯ ನೋವಾಗಿರುತ್ತದೆ, ಹಾಗೂ ಆಸ್ಪಕ್‌‌ ಎಂಬಾತನು ಮರದ ಸೋಂಟೆಯಿಂದ  ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿಗೆ ಹೊಡೆದಿದ್ದು ಇದರ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿನ ಬಳಿ ರಕ್ತಗಾಯವಾಗಿರುತ್ತದೆ. ದಿನಾಂಕ: 15.03.2014 ರಂದು ರಾತ್ರಿ ವೇಳೆ ವಾಮಂಜೂರು ಮಸೀದಿಯಲ್ಲಿ ಉಲಾಯಿಬೆಟ್ಟುವಿನ ಯುವಕರಿಗೂ ವಾಮಂಜೂರಿನ ಯುವಕರಿಗೂ ಜಗಳವಾಗಿದ್ದು ಇದೇ ಕಾರಣದಿಂದ ಆರೋಪಿಗಳು ಈ ಕೃತ್ಯವನ್ನು  ಮಾಡಿದ್ದಾಗಿರುತ್ತದೆ.
 
13.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17.03.2015 ರಂದು  ಸಮಯ ಸುಮಾರು ಬೆಳಿಗ್ಗೆ 09.30 ಗಂಟೆಗೆ ಫಿರ್ಯಾದಿದಾರರಾದ ಹರಿನಿ ರವರು ಜೆಪ್ಪಿನಮೊಗರು ಗ್ರಾಮದ ನೆಡುಮೊಗರುವಿನ ಬಳಿಯ ಚಿಂತನೆ ಎಂಬ ದೇವರ ನಾಮಫಲಕದ ಬಳಿಯಲ್ಲಿ ರಸ್ತೆ ದಾಟಲು ರಸ್ತೆ ಬದಿಯಲ್ಲಿ ಫಿರ್ಯಾದುದಾರರು ಅವರ ಅತ್ತೆ ಕಲ್ಯಾಣಿಯವರೊಂದಿಗೆ ನಿಂತುಕೊಂಡಿರುವಾಗ ತೊಕ್ಕಟ್ಟು ಕಡೆಯಿಂದ KA-19 EB-9855 ನೇ ನಂಬ್ರದ ಮೋಟಾರ್ಸೈಕಲ್ಲೊಂದನ್ನು ಅದರ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿದ್ದು  ಅವರು ಡಾಮಾರು  ರಸ್ತೆಗೆ ಬಿದ್ದ ಪರಿಣಾಮ ಫಿರ್ಯಾದುದಾರರ  ಬಲಕಾಲಿಗೆ ಮೂಳೆ ಮುರಿತದ ಗುದ್ದಿದ ನೋವು ಹಾಗೂ ಎಡ ಮತ್ತು ಬಲ ಕೈಗಳಿಗೆ ತೆರಚಿದ ಗಾಯ ಉಂಟಾಗಿದ್ದು ಅವರನ್ನು ಕಂಕನಾಡಿಯ ಫಾದರ್ಮುಲ್ಲರ್ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಫಿರ್ಯಾದುದಾರರನ್ನು ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲುಮಾಡಿಕೊಂಡಿದ್ದಾಗಿದೆ
 

No comments:

Post a Comment