Monday, November 17, 2014

Daily Crime Reports 17-11-2014

ದೈನಂದಿನ ಅಪರಾದ ವರದಿ.

ದಿನಾಂಕ 17.11.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-11-2014 ರಂದು ಬೆಳಿಗ್ಗೆ 08-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ವಿರೇಶ್ ರವರು ಮುಕ್ಕ ಜಂಕ್ಷನ್ ಬಳಿ ತನ್ನ ಬಾಬ್ತು ಕೆ 37 ಡಬ್ಲೂ 5596 ನೇಯದರಲ್ಲಿ ಸವಾರನಾಗಿಯೂ ಸಂಗಪ್ಪ ಎಂಬವರನ್ನು ಸಹಸವಾರನಾಗಿಯೂ ತಡಂಬೈಲ್ ದಿಂದ ಮುಕ್ಕಾ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಸುರತ್ಕಲ್ ದಿಂದ ಮುಲ್ಕಿ ಕಡೆಗೆ ಕೆ ಎಲ್ 07 ಬಿಆರ್ 9501 ನೇ ನಂಬ್ರದ ಮೀನಿನ ಲಾರಿಯೊಂದನ್ನು ಅದರ ಚಾಲಕ ಅನೀಶ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಫಿರ್ಯಾದಿದಾರರು ರಸ್ತೆಯ ಎಡಬದಿಗೆ ಎಸೆಯಲ್ಪಟ್ಟು ತರಚಿದ ಗಾಯವಾಗಿದ್ದು, ಹಿಂದುಗಡೆ ಕುಳಿತಿದ್ದ ಸಹಸವಾರ ಸಂಗಪ್ಪ ರಸ್ತೆಗೆ ಎಸೆಯಲ್ಪಟ್ಟು ಆತನ ಎದೆಯ ಮೇಲೆ ಲಾರಿಯ ಮುಂದಿನ ಟೈಯರ್ ಹರಿದು ಗಂಭೀರ ರೀತಿಯಲ್ಲಿ ಗಾಯಗೊಂಡ ಸಂಗಪ್ಪನು ಶ್ರೀನಿವಾಸ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆದಲ್ಲಿ  ಮೃತಪಟ್ಟಿರುತ್ತಾರೆ.

 

2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-09-2014 ರಂದು ಬೆನ್ನಿನ್ ದೇಶದಿಂದ ಏಜೆಂಟ್ ಗಿರೀಶ್ ಎಂಬವರು ಮಂಗಳೂರು ಡಿಕ್ಸಿ ಲೂಂಬರ್ಸ್ ರವರ ಹೆಸರಲ್ಲಿ ಸುಮಾರು 16 ಲಕ್ಷ ರೂ. ಮೌಲ್ಯದ ಸಾಗುವಾನಿ ಮರದ ದಿಮ್ಮಿಗಳನ್ನು ಮಂಗಳೂರಿನ ಪಣಂಬೂರು ಬಂದರಿನಲ್ಲಿ ಕ್ಲಿಯರೆನ್ಸ್ ಮಾಡಲು ಕಳುಹಿಸಿಕೊಟ್ಟಿದ್ದು, ಬಗ್ಗೆ ಗಿರೀಶ್ ರವರು ಮರಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಡಿಕ್ಸಿ ಕಂಪೆನಿಗೆ ಮೇಲ್ ಮಾಡಿದ್ದು, ಅದರಂತೆ ಡಿಕ್ಸಿ ಕಂಪೆನಿಗೆ ಸಂಬಂಧಿಸಿದ ಕಂಪೆನಿ ಮೆನೇಜರ್ ರಾದ ಫಿರ್ಯಾದಿದಾರರಾದ ಶ್ರೀ ಮಹೇಶ್ ಸೇಥಿ ರವರು ಮರದ ದಿಮ್ಮಿಗಳ ಬಗ್ಗೆ  ಪಣಂಬೂರಿನಲ್ಲಿ ವಿಚಾರಿಸಿದಲ್ಲಿ, ಇಲ್ಲಿಗೆ ಹಡಗಿನ ಮೂಲಕ ಬಂದಿರುವ ಮರವು ಅನ್ ಲೋಡ್ ಆದ ನಂತರ ಫಿರ್ಯಾದಿದಾರರ ಬಾಬ್ತು ಡಿಕ್ಸಿ ಕಂಪೆನಿಗೆ ತಲುಪದೇ ಬೇರೆ ಯಾವುದೋ ಕಡೆಗೆ ಸಾಗಾಟ ಮಾಡಿ, ಏಜೆಂಟ್ ಗಿರೀಶ್ ರವರು ಫಿರ್ಯಾದುದಾರರ ಕಂಪೆನಿಗೆ ವಿಶ್ವಾಸ ಘಾತಕ ಮಾಡಿರುತ್ತಾರೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15-11-2014 ರಂದು ಮದ್ಯಾಹ್ನ ಸುಮಾರು 2-00 ಗಂಟೆ ಸಮಯಕ್ಕೆ ಮಂಗಳೂರು ನಗರದ ಕದ್ರಿ ಕಂಬ್ಳ ಜಂಕ್ಷನ್ ನಲ್ಲಿ ಕೆಎ-19-.ಎಲ್-8286 ನಂಬ್ರದ ಮೋಟಾರು ಸೈಕಲ್ ನ್ನು ಅದರ ಸವಾರ ಆರೋಪಿ ಮೊಹಮ್ಮದ್ ಫೈಜಲ್ ಎಂಬಾತನು ಕೆ.ಪಿ.ಟಿ ಕಡೆಯಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಿವಭಾಗ್ ಕಡೆಯಿಂದ ಉರ್ವಾ ಕಡೆಗೆ ಹೋಗುತ್ತಿದ್ದ ಪಿರ್ಯಾದುದಾರರಾದ ಶ್ರೀ ಧೀರಜ್ ರವರ ಬಾಬ್ತು ಕೆಎ-19-ಎಸ್-9684 ನಂಬ್ರದ ಮೋಟಾರು ಸೈಕಲ್ ಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ ಮತ್ತು ಬಲಕಾಲಿನ ಮೊಣಗಂಟಿಗೆ ಮತ್ತು ಹೆಬ್ಬೆರಳಿಗೆ ರಕ್ತ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-11-2014 ರಂದು ಸಂಜೆ 5:15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹಸೈನಾರ್ ಬಾವಾ ರವರು ಮಂಗಳೂರು ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆ ರಿಕ್ಷಾ ಪಾರ್ಕ್ನಿಂದ ಬಸ್ ಸ್ಟ್ಯಾಂಡ್ ಕಡೆಗೆ ರಸ್ತೆ ದಾಟುವರೇ ಮುನೀರ್ರವರೊಂದಿಗೆ ರಸ್ತೆ ಬದಿಯಲ್ಲಿ ನಿಂತಿದ್ದಾಗ ಕುತ್ತಾರ್ ಕಡೆಯಿಂದ ನಾಟೆಕಲ್ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ-19-ಇಬಿ-6105 ನೇದನ್ನು ಅದರ ಸವಾರ ಇರ್ಫಾನ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರ ಬಲ ಕಾಲಿನ ಬಳಿ ಮೂಳೆ ಮುರಿತದ ಗಾಯ, ಎಡಕಾಲಿನ ಪಾದದ ಬಳಿ, ಮೊಣಗಂಟಿನ ಬಳಿ ತರಚಿದ ಗಾಯವಾಗಿರುತ್ತದೆ.

 

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-11-2014 ರಂದು ಸಂಜೆ 6-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ನಾರಾಯಣ ಪೂಜಾರಿ ರವರು ಪಡುಪೆರಾರರ ಗ್ರಾಮದ ಪಡುಪೆರಾರ ದ್ವಾರದ ಬಳಿ ಕುಳಿತುಕೊಂಡಿದ್ದಾಗ ಆರೋಪಿ ಉಮೇಶ್ ಆಚಾರ್ಯ ಎಂಬವರು ಕ್ರಿಕೆಟ್ ಆಟ ಆಡುತ್ತಿದ್ದು, ಆತನು ಆಟವಾಡುತ್ತಿದ್ದ ತಂಡ ಕ್ರಿಕೆಟ್ ಆಟದಲ್ಲಿ ಸೋತಿದ್ದು, ಪಿರ್ಯಾದಿದಾರರು ಆರೋಪಿಯು ಆಟವಾಡುತ್ತಿದ್ದ ವಿರುದ್ದ ತಂಡಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಅವ್ಯಾಚ್ಯ ಶಬ್ದಗಳಿಂದ ಬೈದು ಬ್ಯಾಟಿನಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ.

 

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-11-2014 ರಂದು ಫಿರ್ಯಾದಿದಾರರಾದ ಶ್ರೀ ಮನೋಜ್ ರವರು ಕುತ್ತಾರ್ ನಲ್ಲಿರುವ ಡಿ.ಕೆ. ಜಿಮ್ ಗೆ ಹೋಗಿದ್ದು, ಜಿಮ್ ಮುಗಿದ ಬಳಿಕ ತನ್ನ ಚಿಕ್ಕಪ್ಪನ ಮಗನಾದ ಪ್ರಶಾಂತ್ ರವರು ಮೋಟಾರ್ ಬೈಕ್ ನಂ. ಸಿಟಿಎ 5794 ನೇದರಲ್ಲಿ ಬೈಕ್ ಸವಾರನಾಗಿಯೂ, ಪಿರ್ಯಾದಿದಾರರು ಸಹ ಸವಾರನಾಗಿಯೂ ಕುಳಿತ್ತಿದ್ದು, ಪಿರ್ಯಾದಿದಾರರ ಮನೆಯಾದ ಹಳೇಕೋಟೆ ಕಡೆಗೆ ಹೋಗುವರೇ ದಿನಾಂಕ 16-11-2014 ರಂದು ರಾತ್ರಿ ಸಮಯ ಸುಮಾರು 00.30 ಗಂಟೆಗೆ ಮಂಚಿಲ ಇಬ್ರಾಹಿಂ ಕ್ಲೀನಿಕ್ ಎದುರುಗಡೆ ಮೋಟಾರ್ ಬೈಕ್ ಸವಾರ ಪ್ರಶಾಂತ್ ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿರುವ ವಿದ್ಯುತ್ ಲೈಟ್ ಕಂಬಕ್ಕೆ ಒಮ್ಮೆಲೇ ಡಿಕ್ಕಿ ಮಾಡಿದ ಪರಿಣಾಮ ಸವಾರನ ಮುಖಕ್ಕೆ , ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ಸ್ಥಳದಲ್ಲಿಯೇ ಮೂರ್ಛೆ ಹೋಗಿರುತ್ತಾನೆ ಮತ್ತು ಪಿರ್ಯಾದಿದಾರರಿಗೆ ಬಲ ಕೈಯ ಮೊಣಗಂಟಿಗೆ, ಎಡಕಾಲಿನ ಕೋಲು ಕಾಲಿಗೆ ಸಾಮಾನ್ಯ ಸ್ವರೂಪದ ಗಾಯವಾಗಿರುತ್ತದೆ.  ನಂತರ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ 108 ಅಬ್ಯುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ.

No comments:

Post a Comment