Monday, November 17, 2014

Daily Crime Reports 16-11-2014

ದೈನಂದಿನ ಅಪರಾದ ವರದಿ.

ದಿನಾಂಕ 16.11.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

3

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-11-2014 ರಂದು 14-15 ಗಂಟೆಗೆ ಪಿರ್ಯಾದಿದಾರರಾದ ಬರ್ಕೆ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಶಿವರುದ್ರಪ್ಪ ಎಸ್. ಮೇಟಿ ರವರಿಗೆ ಬಂದ ಖಚಿತ ಮಾಹಿತಿಯಂತೆ ಆರೋಪಿತ ಅಬ್ದುಲ್ ಕುಂಞಯು ತನ್ನ ಸ್ವಾಧೀನದಲ್ಲಿ ರೂ. 5 ಲಕ್ಷ ನಗದನ್ನು ಯಾವುದೇ ದಾಖಲಾತಿ, ತೆರಿಗೆ ರಶೀದಿ ಇಲ್ಲದೇ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದಾತನನ್ನು ಪಿರ್ಯಾದಿದಾರರು ಪಂಚರು ಹಾಗೂ ಸಿಬ್ಬಂದಿಯವರೊಡನೆ ವಶಕ್ಕೆ ಪಡೆದು, ನಗದು ಹಾಗೂ ಮೊಬೈಲ್ ಹ್ಯಾಂಡ್ ಸೆಟ್‌‌ನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ.

 

2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-11-2014 ರಂದು ಮಧ್ಯಾಹ್ನ ಸುಮಾರು 1:54 ಗಂಟೆ ವೇಳೆಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಜೋಡುಕಟ್ಟೆಯಿಂದ ಸ್ವಲ್ಪ ಕೆಳಗೆ, ಪಿರ್ಯಾದಿದಾರರಾದ ಶ್ರೀ ಸರ್ಫರಾಜ್ ಎಂ.ಐ. ರವರು ತನ್ನ ಮೋಟಾರ್ ಸೈಕಲ್ನಲ್ಲಿ ಹೋಗುತ್ತಿರುವಾಗ, ಪಿರ್ಯಾದಿದಾರರ ಎದುರಿನಿಂದ ಹೋಗುತ್ತಿದ್ದ ಪರಿಚಯದ ಝಕಾರಿಯಾ ಮಲಾರ್ರವರ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19-ಇಎಲ್- 3551 ನೇದಕ್ಕೆ ಗ್ರಾಮಚಾವಡಿ ಕಡೆಯಿಂದ ಕೊಣಾಜೆ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ-19-ಇಇ-4885ನೇದರ ಸವಾರ ಸಫ್ದಾರ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದ ಪರಿಣಾಮ ಝಕಾರಿಯಾ ಮಲಾರ್ರವರಿಗೆ ಎದೆಯ ಬಲಭಾಗಕ್ಕೆ ಗುದ್ದಿದ ನೋವು, ತಲೆಯ ಬಲಬದಿ ಬಲಕಿವಿಯ ಮೇಲ್ಗಡೆ ರಕ್ತಗಾಯವಾಗಿರುತ್ತದೆ.

 

3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15-11-2014 ರಂದು ಪಿರ್ಯಾದಿದಾರರಾದ ಶ್ರೀಮತಿ ಮೈಮುನಾ ರವರು ತನ್ನ ಮಗ ಮುಝಂಬಿಲ್, ಅವರ ಅಕ್ಕ ನಸೀಮ ಹಾಗೂ ನೆರೆ ಮನೆಯ ಐಸಮ್ಮರೊಂದಿಗೆ ನಾಟೆಕಲ್ಎಂಬಲ್ಲಿಗೆ ಸಂಬಂಧಿಕರ ಮದುವೆಗೆ ಹೋಗಿದ್ದು, ನಂತರ ಮದುವೆ ಕಾರ್ಯಕ್ರಮ ಮುಗಿಸಿ ವಾಪಾಸು ನಾಟೆಕಲ್ ಕಡೆಯಿಂದ ದೇರಳಕಟ್ಟೆ ಕಡೆಗೆ ರಸ್ತೆಯ ಎಡ ಬದಿಯಲ್ಲಿರುವ ಕಚ್ಚಾ ರಸ್ತೆಯಲ್ಲಿ ನಾಲ್ಕು ಜನರು ನಡೆದುಕೊಂಡು ಬರುತ್ತಿರುವ ಸಮಯ ಮಂಗಳೂರು ತಾಲೂಕು ಬೆಳ್ಮ ಗ್ರಾಮದ ಗ್ರೀನ್ ವ್ಯೂ ಸೂಪರ್ ಬಜಾರ್ ಮುಂಭಾಗ ರಾತ್ರಿ ಸುಮಾರು 8-20 ಗಂಟೆ ಸಮಯಕ್ಕೆ ತಲಪುವಾಗ ನಾಟೆಕಲ್- ಕಡೆಯಿಂದ ದೇರಳಕಟ್ಟೆ ಕಡೆಗೆ ಕೆಎ-19 ಡಿ 1155 ನೇ ಬಸ್ನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿ ಹಾಗೂ ಇತರ ಮೂವರಿಗೆ ಹಿಂದಿನಿಂದ  ಢಿಕ್ಕಿ ಹೊಡೆದು ನಾಲ್ಕು ಜನರು ರಸ್ತೆಗೆ ಬದ್ದ ಪರಿಣಾಮ, ಪಿರ್ಯಾದಿದಾರರ ಬಲ ಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯ, ಅವರ ಮಗ ಮುಝಂಬಿಲ್ ಗೆ ತಲೆ ಹಿಂಬದಿ ಗುದ್ದಿ ಗಾಯ, ಎಡಕಾಲಿನ ಪಾದದ ಬಳಿ, ಕೋಲು ಕಾಲಿಗೆ ತರಚಿದ ಗಾಯ, ಪಿರ್ಯಾದಿದಾರರ ಅಕ್ಕ ನಸೀಮಳಿಗೆ ಮುಖಕ್ಕೆ, ತುಟಿಗೆ ಗುದ್ದಿದ ಹಾಗೂ ತರಚಿದ ಗಾಯ ಮತ್ತು ನೆರಮನೆಯ ಐಸಮ್ಮಳಿಗೆ ತಲೆಯ ಎಡಬದಿಗೆ ರಕ್ತ ಬರುವ ಗಾಯವಾಗಿರುವುದಾಗಿದೆ.

 

4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:15-11-2014 ರಂದು ಮಧ್ಯಾಹ್ನ ಸುಮಾರು 1.10 ಗಂಟೆ ಸಮಯಕ್ಕೆ ಬಪ್ಪನಾಡು ಗ್ರಾಮದ ಬಪ್ಪನಾಡು ದೇವಸ್ಥಾನದ ಬಳಿ ನಿರ್ಮಾಣವಾಗುತ್ತಿರುವ ನೇಚರ್ಸ್ ಟೆಂಪಲ್ ಕಟ್ಟಡದ 4ನೇ ಮಹಡಿಯಿಂದ ಬಾರ್ ಬೆಂಡಿಗ್ ಕೆಲಸ ಮಾಡುತ್ತಿದ್ದ, ಮಹಮ್ಮದ್ ಸಹಬುಲ್(22), ಎಂಬಾತನು ಕಟ್ಟಡದಿಂದ ನೆಲಕ್ಕೆ ಬಿದ್ದ ಪರಿಣಾಮ ತಲೆಗೆ ಹಾಗೂ ಶರೀರದ ಇತರ ಕಡೆಗಳಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕಟ್ಟಡದ ಮಾಲಕರಾದ ಕಿಶೋರ್ ಶೆಟ್ಟಿ ಹಾಗೂ ಬಿಪಿನ್ ಸಾಂಗ್ವಿ ಕಟ್ಟಡದ ಕಾಮಗಾರಿ ಗುತ್ತಿಗೆಯನ್ನು ಪಡೆದ ಅಶ್ವಿನ್ ಸುಂಡಿಗೆರೆ, ಸೈಟ್ ಇಂಚಾರ್ಚ್ ನಿತಿನ್ ಕುಮಾರ್, ಸೈಟ್ ಸೂಪರ್ ವೈಸರ್ ಬಲವಂತ್ ಸಿಂಗ್ ಹಾಗೂ ಬಾರ್ ಬೆಂಡಿಗ್ ಮೇಸ್ರ್ತಿಎಂ.ಡಿ ಸಾಧಿಕ್ ಹಾಗೂ ಸೈಟ್ ಇಂಜಿನಿಯರ್ ಸುಜಿತ್ ಸಾಲಿಯಾನ್ ಇವರು ಬಾರ್ ಬೆಂಡಿಗ್  ಕೆಲಸ ಮಾಡುತ್ತಿದ್ದ ಮಹಮ್ಮದ್ ಸಾಹಬುಲ್ ಇವನಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡದೇ ನಿರ್ಲಕ್ಷತನ ತೋರಿರುವುದರಿಂದ ಘಟನೆ ಸಂಭವಿಸಿರುವುದಾಗಿದೆ.

 

5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀಮತಿ ಪ್ರಪುಲ್ಲಾ ರವರು ದಿನಾಂಕ: 04.04.2014 ರಂದು ಚೇತನ್ ಎಂಬವರನ್ನು ಕಾರ್ಸ್ಟ್ರೀಟ್ ಸುಬ್ರಮಣ್ಯ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಎರಡನೇ ಮದುವೆಯಾಗಿದ್ದು, ಮದುವೆಯಾದ ವಿಷಯವು ಚೇತನ್ ರವರ ಮನೆಯವರಿಗೆ ತಿಳಿದು ಚೇತನ್ ಮನೆಯವರು ಚೇತನ್ ರವರನ್ನು ಮನೆಯಿಂದ ಹೊರಗೆ ಹಾಕಿದ ಮೇಲೆ ಪಿರ್ಯಾದುದಾರರು ಮತ್ತು ಅವರ ಗಂಡ ಚೇತನ್ ಹಾಗೂ ಪಿರ್ಯಾದುದಾರರ ಮೊದಲನೇ ಗಂಡನ ಮಗನೊಂದಿಗೆ ಬೇರೆ ಮನೆಯಲ್ಲಿ ವಾಸವಾಗಿದ್ದಂತೆ ಸ್ವಲ್ಪ ಸಮಯದ ನಂತರ ಚೇತನ್ ರವರು ಪಿರ್ಯಾದುದಾರರಿಗೆ ಯಾವಾಗಲು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಕೈಯಿಂದ ಹೊಡೆಯುತ್ತಾ "ನಿನ್ನಿಂದಾಗಿ ನಮ್ಮ ಮನೆಯವರು ನನ್ನನ್ನು ದೂರ ಮಾಡಿದರು, ನಿನ್ನಿಂದಾಗಿ ನನಗೆ ಸಮಾಧಾನವಿಲ್ಲ" ಎಂದು ಹೇಳುತ್ತಾ ಪಿರ್ಯಾದುದಾರರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಜೀವ ಬೆದರಿಕೆ ಹಾಕಿರುವುದಾಗಿದೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15.11.2014 ರಂದು ಪಿರ್ಯಾದುದಾರರಾದ ಶ್ರೀ ಅಬೂಬಕ್ಕರ್ ರವರ ಮಗ ಮಹಮ್ಮದ್ ಅಲ್ತಾಫ್ ಮತ್ತು ಆತನ ಸಹೋದರ ಸಂಬಂಧಿ ಮಹಮ್ಮದ್ ಆಶಿಕ್ ಎಂಬವರು ಪಿರ್ಯಾದುದಾರರ ಅಳಿಯನ ಬಾಬ್ತು KA-19-EM-4803ನೇ ನಂಬ್ರದ ಮೋಟಾರ್ ಸೈಕಲ್ಲಿನಲ್ಲಿ ಮಹಮ್ಮದ್ ಅಲ್ತಾಫ್ನು ಸಹಸವಾರನಾಗಿಯೂ ಮಹಮ್ಮದ್ ಆಶಿಕ್ನು ಸವಾರನಾಗಿಯೂ ಮಂಗಳೂರು ಕಡೆಗೆ ಹೋಗುತ್ತಾ ಜೆಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ಸೇತುವೆ ದಾಟಿ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ಮಧ್ಯಾಹ್ನ ಸುಮಾರು 01:10 ಗಂಟೆ ಸಮಯಕ್ಕೆ ಮಂಗಳೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ KL-13-E-9193ನೇ ನಂಬ್ರದ ಮಿನಿ ಲಾರಿಯನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಯಾವುದೋ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರಾ ಬಲಬದಿಗೆ ಬಂದು ಸದ್ರಿ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮತ್ತು ಸಹಸವಾರರಿಬ್ಬರೂ ಬೈಕ್ ಸಮೇತ ರಸ್ತೆಗೆ ಬಿದ್ದು, ಮಹಮ್ಮದ್ ಆಶಿಕ್ಮತ್ತು ಮಹಮ್ಮದ್ ಅಲ್ತಾಫ್ ರವರಿಗೆ ತೀವ್ರ ತರಹದ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ಇಂಡಿಯಾನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಾಗಿದೆ.

No comments:

Post a Comment