Sunday, November 9, 2014

Daily Crimes Report 09-11-2014

ದಿನಾಂಕ 09.11.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

3

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-10-2014 ರಂದು ಬೆಳಿಗ್ಗೆ 10:30 ಗಂಟೆಗೆ ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ನಾಟೆಕಲ್ ಟಾರು ರಸ್ತೆಯಲ್ಲಿ ಆರೋಪಿ ಹೈದರಾಲಿಯವರ ಬಾಬ್ತು ಬೈಕ್ ನಂಬ್ರ ಕೆಎ-19-ಇಎ-5251 ನ್ನು ದೇರಳಕಟ್ಟೆ ಕಡೆಯಿಂದ ನಾಟೆಕಲ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ರಸ್ತೆಯ ದಿಬ್ಬದಲ್ಲಿ ಒಮ್ಮೆಲೇ ಬ್ರೇಕ್ ಹಾಕಿದಾಗ ಬೈಕ್ ಬಲ ಮಗ್ಗುಲಾಗಿ ಮಗುಚಿ ಬಿದ್ದು, ಹಿಂದುಗಡೆ ಕುಳಿತುಕೊಂಡ ಸಹಸವಾರ ಪಿರ್ಯಾದಿದಾರರಾದ ಶ್ರೀ ನಾಸೀರ್ ರವರು ರಸ್ತೆಗೆ ಬೈಕ್ ಸಮೇತ ಬಿದ್ದು, ಅವರ ಬಲಕಾಲಿನ ತೊಡೆಗೆ ತೀವ್ರ ಸ್ವರೂಪದ ಕೀಲು ಮುರಿತದ ಗಾಯವಾಗಿದ್ದು, ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದು, ಶಸ್ತ್ರ ಚಿಕಿತ್ಸೆಯ ಖರ್ಚು ನೋಡುವುದಾಗಿ ಹೇಳಿ ಹೋದವರು ಮತ್ತೆ ಬಂದಿರುವುದಿಲ್ಲ. ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವೈದ್ಯರಲ್ಲಿ ಇಂಟಿಮೇಶನ್ ಕಳುಹಿಸಿಕೊಡಲ ತಿಳಿಸಿ ಅವರು ತಡವಾಗಿ ಇಂಟಿಮೇಷನ್ ಕಳುಹಿಸಿರುವುದರಿಂದ  ವಿಳಂಬವಾಗಿರುತ್ತದೆ.

 

2.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮುಖೇಶಚಂದ್ರ ಭಟ್ ರವರು  ಯುನಿವರ್ಸಲ್ ಕಾಫಿರೈಟ್ ಪ್ರೊಟಕ್ಷನ್ ಮುಂಬಯಿ ಕಂಪೆನಿಯ ಎಕ್ಸಿಕ್ಯೂಟಿವ್ ಆಫೀಸರ್ ಆಗಿದ್ದು, ಸಂಸ್ಥೆಗೆ ಒಳಪಟ್ಟ ಕಾಪಿರೈಟ್ ಮಾಲಕತ್ವದ ಚಲನಚಿತ್ರಗಳ ಕಾಪಿರೈಟ್ ಉಲ್ಲಂಘನೆಯಾಗುತ್ತಿರುವ  ಬಗ್ಗೆ ಪಿರ್ಯಾದಿದಾರರಿಗೆ ಬಂದ  ಖಚಿತ ವರ್ತಮಾನದಂತೆ  ದಿನಾಂಕ 08-11-2014 ರಂದು ಬೆಳಿಗ್ಗೆ  11-30 ಗಂಟೆಗೆ ಸುಶಿತ್ ಕುಮಾರ್ ಎಂಬವರ ಜೊತೆ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿ ಇರುವ ಮೀನು ಮಾರ್ಕೇಟ್ ಪಕ್ಕದ ಮಹಾನಗರಪಾಲಿಕೆಗೆ ಒಳಪಟ್ಟ ಮಳಿಗೆಗಳ ಪೈಕಿ A-1 ಮೊಬೈಲ್ ಪಾಯಿಂಟ್ ಅಂಗಡಿಗೆ ಹೋಗಿ ಪಿರ್ಯಾದಿದಾರರ ಕಂಪೆನಿಯ ಮಾಲಕತ್ವದಲ್ಲಿರುವ " ಕಿಕ್ " ಚಲನಚಿತ್ರವನ್ನು ಪಿರ್ಯಾದಿದಾರರಲ್ಲಿದ್ದ  ಮೆಮೊರಿ ಕಾರ್ಡಿಗೆ  ಹಾಕಿಸಿಕೊಂಡಿದ್ದು, ಇದಕ್ಕೆ ಅಂಗಡಿಯವನಿಗೆ ಪಿರ್ಯಾದಿದಾರರು ಸೀರಿಯಲ್ ನಂಬ್ರ 64G 471097 ನೇ  ರೂಪಾಯಿ 20 ನೋಟನ್ನು ನೀಡಿದ್ದು, ಬಳಿಕ ಬೆಳಿಗ್ಗೆ 11-45 ಗಂಟೆಗೆ A-R ಮೊಬೈಲ್ ಅಂಗಡಿಗೆ ಹೋಗಿ " ಕಿಕ್ " ಚಲನಚಿತ್ರವನ್ನು ಪಿರ್ಯಾದಿದಾರರಲ್ಲಿದ್ದ  ಮೆಮೊರಿ ಕಾರ್ಡಿಗೆ  ಹಾಕಿಸಿಕೊಂಡಿದ್ದು, ಇದಕ್ಕೆ ಅಂಗಡಿಯವನಿಗೆ ಪಿರ್ಯಾದಿದಾರರು ಸೀರಿಯಲ್ ನಂಬ್ರ 39H 242796 ನೇ  ರೂಪಾಯಿ 20 ನೋಟನ್ನು ನೀಡಿದ್ದು,ನಂತರ ಬೆಳಿಗ್ಗೆ 12-00 ಗಂಟೆಯ ಸಮಯಕ್ಕೆ ಹೌಸ್ ಪುಲ್-2 ಚಲನಚಿತ್ರವನ್ನು ಮೊಬೈಲ್ ಸೆಂಟರ್ ಅಂಗಡಿಯಲ್ಲಿ ಪಿರ್ಯಾದಿದಾರರ ಮೆಮೊರಿ ಕಾರ್ಡ್ ಗೆ ಹಾಕಿಸಿಕೊಂಡಿದ್ದು, ಸೀರಿಯಲ್ ನಂಬ್ರ 74D 377553 ನೇ  ರೂಪಾಯಿ 10 ನೋಟನ್ನು ನೀಡಿರುತ್ತಾರೆ. ಸದ್ರಿ  ಅಂಗಡಿಯವರು ಪಿರ್ಯಾದಿದಾರರ ಕಾಪಿರೈಟ್ ಗೆ ಒಳಪಟ್ಟ ಚಲನಚಿತ್ರವನ್ನು ಅನಧೀಕೃತವಾಗಿ ತಮ್ಮ ಕಂಪ್ಯೂಟರ್ ನಲ್ಲಿ ಅಳವಡಿಸಿಕೊಂಡು ಗ್ರಾಹಕರುಗಳಿಗೆ ಅತೀ ಕಡಿಮೆ ದರದಲ್ಲಿ ಡೌನ್ ಲೋಡ್ ಮಾಡಿಕೊಟ್ಟು ಹಣವನ್ನು ಗಳಿಸುತ್ತಿದ್ದು, ಪಿರ್ಯಾದಿದಾರರ ಸಂಸ್ಥೆಗೆ ನಷ್ಟವನ್ನುಂಟು ಮಾಡಿ ಕಾಪಿರೈಟ್ ಕಾಯಿದೆಯನ್ನು ಉಲ್ಲಂಘನೆ ಮಾಡಿರುವ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ, 3 ಮೆಮೋರಿ ಕಾರ್ಡ್ ಗಳೊಂದಿಗೆ ಪಿರ್ಯಾದಿ ನೀಡಿರುವುದಾಗಿದೆ.

 

3.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-11-2014 ರಂದು ಮಧ್ಯಾಹ್ನ ಬಜ್ಪೆ ಪೊಲೀಸ್ ಠಾಣಾ ಪಿಎಸ್ಐ ಶ್ರೀ ರಮೇಶ್ ಹೆಚ್. ಹಾನಾಪುರ ರವರು ಠಾಣೆಯಲ್ಲಿದ್ದ ಸಮಯ ಬಜಪೆಯ ಮುರ ಎಂಬಲ್ಲಿ ಒಂದು ಹಸುವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟಾಟಾ ಎಸ್ ವಾಹನವನ್ನು ಸಾರ್ವಜನಿಕರು ತಡೆದು ನಿಲ್ಲಿಸಿದ್ದಾರೆಂದು ಬಂದ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ಮುರ ಎಂಬಲ್ಲಿಗೆ ಹೋಗಿ ಅಲ್ಲಿದ್ದ ಆರೋಪಿ ಉಸ್ಮಾನ್ ನನ್ನು   ವಿಚಾರಿಸಿದಾಗ  ಆತನು ಯಾವುದೇ ಪರವಾನಿಗೆ ಇಲ್ಲದೆ ಕಡಿದು ಮಾಂಸ ಮಾಡುವ ಉದ್ದೇಶದಿಂದ ಅಕ್ರಮವಾಗಿ ಹಸುವೊಂದನ್ನು ಸಾಗಿಸುತ್ತಿದ್ದಾನೆಂದು ತಿಳಿದು ಬಂದಿದ್ದರಿಂದ  ಆತನನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ ಹಸುವನ್ನು ಮತ್ತು ಕೆಎ 19 ಡಿ 6945 ನಂಬ್ರದ ಟಾಟಾ ಎಸ್ ವಾಹನವನ್ನು  ಮಹಜರಿನ ಮುಖೇನಾ  ಸ್ವಾಧೀನಪಡಿಸಿಕೊಂಡು  ಠಾಣೆಗೆ ಬಂದು  ಆತನ ವಿರುದ್ದ  ಕ್ರಮ ಜರುಗಿಸಿದ್ದಾಗಿದೆ.

 

4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-2-2014 ರಂದು ರಾತ್ರಿ 7-00 ಗಂಟೆಯಿಂದ 15-2-2014 ರಂದು ಬೆಳಿಗ್ಗೆ 05-00 ಗಂಟೆಯ ಮದ್ಯಾವಧಿಯಲ್ಲಿ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಉಳ್ಳಾಲ ದರ್ಗಾ ಎದುರುಗಡೆ ಮೈದಾನದಲ್ಲಿ ಎಂದಿನಂತೆ ಫಿರ್ಯಾದಿದಾರರಾದ ಶ್ರೀ ಸಾದಕಾ ರವರ ಬಾಬ್ತು ನಿಲ್ಲಿಸಿದ್ದ ಕೆಎ-19-ಬಿ-6280 ನೇ ನಂಬ್ರದ ಲಾರಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಲಾರಿಯನ್ನು ಹುಡುಕಾಡಿ ಪತ್ತೆಯಾಗದೇ ಇದ್ದು, ಸದರಿ ಲಾರಿಯನ್ನು ಯಾರಾದರೂ ಕೊಂಡು ಹೋಗಿ ದುರುದ್ಧೇಶಕ್ಕಾಗಿ ಉಪಯೋಗಿಸುವ ಇರಾದೆಯಿಂದ ಮತ್ತು ಇನ್ಸುರೆನ್ಸ್ ಕಂಪೆನಿಯವರಿಗೆ ಮಾಹಿತಿ ನೀಡುವ ಉದ್ದೇಶದಿಂದ ಫಿರ್ಯಾದಿದಾರರು ದಿನಾಂಕ. 8-11-2014 ರಂದು ಠಾಣೆಗೆ ಬಂದು ಲಿಖಿತ ದೂರು ನೀಡಿದ್ದು, ಕಳವಾದ ಲಾರಿಯ ಅಂದಾಜು ಮೌಲ್ಯ ರೂ. 3,00,000-00 ಆಗಬಹುದು.

 

5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17.02.2010 ರಂದು ಪಿರ್ಯಾದಿದಾರರಾದ ಶ್ರೀಮತಿ ಅಶ್ವಿನಿ ಎ.ಎಸ್. ರವರು ಒಂದನೇ ಆರೋಪಿ ರಾಮಚಂದ್ರ ಎಂಬವರನ್ನು ಮದುವೆಯಾಗಿದ್ದು, ಮದುವೆಯ ಸಮಯ ಆರೋಪಿಗಳು ಪಿರ್ಯಾದಿದಾರರ ತಂದೆಯವರಿಂದ 5 ಲಕ್ಷ ರೂಪಾಯಿಯನ್ನು ವರದಕ್ಷಿಣೆಯಾಗಿ ಪಡೆದುಕೊಂಡಿರುತ್ತಾರೆ. ಮದುವೆಯಾದ ಸ್ವಲ್ಪ ದಿನದಲ್ಲೇ  ಆರೋಪಿ 1 ನೇ ರಾಮಚಂದ್ರ ಇವರು ಇತರ ಆರೋಪಿಗಳಾದ ಆನಂದ ಶೆರಿಗಾರ್, ಶ್ರೀಮತಿ ರತ್ನಮ್ಮ, ಸೀತಾರಾಮ, ರಾಘವೇಂದ್ರ ರವರೊಂದಿಗೆ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿರುತ್ತಾರೆ, ನಂತರ ಆರೋಪಿ ಒಂದನೇಯವರು ಪಿರ್ಯಾದಿದಾರರಿಂದ ವ್ಯಾಪಾರ ನಡೆಸಲೆಂದು ಅವರ ಚಿನ್ನಾಭರಣಗಳನ್ನು ಪಡೆದುಕೊಂಡ್ಡಿದ್ದು ಸದ್ರಿ ಒಡವೆಗಳನ್ನು ಮರಳಿ ಕೊಡುವಂತೆ ಕೇಳಿದಾಗ  ಆರೋಪಿ ಒಂದನೇಯವರು ಪುನಃ 2 ಲಕ್ಷ ರೂಪಾಯಿ ತವರು ಮನೆಯಿಂದ ಕೊಡಿಸು ಇಲ್ಲದಿದ್ದಲ್ಲಿ ಪಿರ್ಯಾಧಿದಾರರಿಗೆ ವಿಚ್ಚೇಧನ ನೀಡುವುದಾಗಿ ಪಿರ್ಯಾಧಿದಾರರಿಗೆ ಹೊಡೆದು ಜೀವ ಬೆದರಿಕೆ ಒಡ್ಡಿರುವುದಲ್ಲದೆ ದಿನಾಂಕ: 07.11.2014 ರಂದು ಆರೋಪಿ ಒಂದನೇಯವರು ಮಧ್ಯಪಾನ ಸೇವಿಸಿ ಬಂದು ಪಿರ್ಯಾದಿದಾರರಿಗೆ ಮತ್ತು ಅವರ ಮಗುವಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಎಲ್ಲಾ ಕೃತ್ಯಗಳಿ ಆರೋಪಿ 1 ನೇಯವರಿಗೆ ಇತರ ಆರೋಪಿಗಳು ಪ್ರಚೋದನೆ ನೀಡಿರುತ್ತಾರೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06.11.2014 ರಂದು ಪಿರ್ಯಾದಿದಾರರಾದ ಶ್ರೀ ಅಚ್ಚಬ್ಬ ಅಹಮ್ಮದ್ ರವರು ಬೆಳಿಗ್ಗೆ ಕಣ್ಣೂರು ಚೆಕ್‌‌ಪೋಸ್ಟ್ ಕಡೆಯಿಂದ ಕಣ್ಣೂರು ಬಡಿಲ ಕಡೆ ನಡೆದುಕೊಂಡು ರಾ,ಹೆ 75 ನ್ನು ದಾಟುತ್ತಾ ಮಧ್ಯದಲ್ಲಿರುವ ಡಿವೈಡರನ್ನು ದಾಟಿ ರಸ್ತೆಯ ಇನ್ನೊಂದು ಬದಿಗೆ ರಸ್ತೆ  ದಾಟಲು ಆಂಧ್ರ ರೋಡಲೈನ್ಸ್ ಎದುರುಗಡೆ ರಾ.ಹೆ 75 ಮಧ್ಯದಲ್ಲಿರುವ ಡಿವೈಡರ್ ಹತ್ತಿರ ನಿಂತಾಗ ಬೆಳಿಗ್ಗೆ ಸುಮಾರು 09.30 ಗಂಟೆಗೆ ಅಡ್ಯಾರ ಕಡೆಯಿಂದ ಕೆಎ-19-ಇಎ-9654 ನೇ ಬೈಕ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ತಲೆಗೆ ರಕ್ತಗಾಯ, ಕುತ್ತಿಗೆಯ ಮೂಳೆ ಮುರಿತ, ಸೊಂಟಕ್ಕೆ ಮತ್ತು ಬೆನ್ನಿಗೆ ಹಾಗೂ ಹೊಟ್ಟೆಗೆ ಗುದ್ದಿದ ನೋವು ಮತ್ತು  ಎರಡು ಕಾಲುಗಳಿಗೂ ರಕ್ತಗಾಯವಾಗಿರುತ್ತದೆ ಚಿಕಿತ್ಸೆಯ ಬಗ್ಗೆ ಫಾಧರ್ ಮುಲ್ಲರ್ಸ್ ಆಸ್ಪತ್ರೆಗೆ ಯಾರೋ ಒಂದು ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದು ವೈಧ್ಯಾಧಿಕಾರಿಯವರು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಆಸ್ಪತ್ರೆಗೆ ದಾಖಲಾದ ಸಂದರ್ಬದಲ್ಲಿ ನೋವಿನಿಂದ ಮತ್ತು ಆಘಾತದಿಂದ ಆಸ್ಪತ್ರೆಯವರು ಪಿರ್ಯಾದಿದಾರರಲ್ಲಿ ವಿಳಾಸದ ಬಗ್ಗೆ ಕೇಳಿದಾಗ ಹೆಸರು ವಿಳಾಸ ಸರಿಯಾಗಿ ತಿಳಿಸದೆ ಇದ್ದರಿಂದ ಆಸ್ಪತ್ರೆಯವರು ತಪ್ಪಾಗಿ ನಮೂದಿಸಿರುತ್ತಾರೆ. ನಂತರ ಪಿರ್ಯಾದಿದಾರರು ತನ್ನ ದಾಖಲಾತಿಗಳನ್ನು ಮನೆಯಿಂದ ತರಿಸಿ ಆಸ್ಪತ್ರೆ ವೈಧ್ಯರಿಗೆ ತೋರಿಸಿ ಸರಿಯಾದ ಹೆಸರು ವಿಳಾಸವನ್ನು ನೀಡಿ ಆಸ್ಪತ್ರೆಯ ದಾಖಲಾತಿಯಲ್ಲಿ ತಿದ್ದುಪಡಿ ಮಾಡಿದ ಕಾರಣ, ಹೇಳಿಕೆಯನ್ನು ನೀಡಲು ತಡವಾಗಿರುತ್ತದೆ.

No comments:

Post a Comment