Tuesday, November 4, 2014

Daily Crime Reports 04-11-2014

ದೈನಂದಿನ ಅಪರಾದ ವರದಿ.

ದಿನಾಂಕ 04.11.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-11-2014 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಧವರಪ್ಪ ರವರು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಮಲ್ಲಿಕಾರ್ಜುನ ಮಠದ ಬಳಿ ಇರುವಾಗ, ಅಲ್ಲಿಗೆ ಪಿರ್ಯಾದಿದಾರರ ತಮ್ಮ ಬಸವರಾಜ, ಮತ್ತು ತಮ್ಮನ ಮಕ್ಕಳಾದ ಸಂತೋಷ್, ಸಂಜು, ಅಶೋಕ,  ಎಂಬವರು ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ . ಅವಾಚ್ಯ ಶಬ್ದಗಳಿಂದ ಬೈದು, ಸಂಜು ಎಂಬಾತನು ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದಾಗ ಇತರ ಆರೋಪಿಗಳು ಅಲ್ಲೆ ಬಿದ್ದಿದ್ದ ಮರದ ಸೋಂಟೆಯಿಂದ ಮತ್ತು ಕೈಯಿಂದ  ಕೈ-ಕಾಲಿಗೆ ಹೊಡೆದಿರುತ್ತಾರೆ. ಹಲ್ಲೆಯಿಂದಾಗಿ ದವರಪ್ಪ ರವರ ತಲೆಗೆ ರಕ್ತಗಾಯ ಆಗಿ ಕೈ ಮತ್ತು ಕಾಲುಗಳಿಗೆ ತರಚಿದ ಮತ್ತು ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ  ಮಂಗಳೂರು .ಜೆ. ಆಸ್ಪತ್ರೆಗೆ ದಾಖಲಾಗಿರುತ್ತಾರೆ.

 

2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 01-11-2014 ರಂದು ರಾತ್ರಿ ವೇಳೆ ರಜನಿ ಮತ್ತು ಕವಿತ ಎಂಬವರು ಕೆಎ 19ಸಿ 8949 ನೇ ನಂಬ್ರದ  ರಿಕ್ಷಾದಲ್ಲಿ ಎಡಪದವು ಕಡೆಯಿಂದ ಮೂಡಬಿದ್ರೆ ಕಡೆಗೆ ಪ್ರಯಾಣಿಸುತ್ತ ತೆಂಕಮಿಜಾರ್ ಗ್ರಾಮದ ತೋಡಾರ್ ಎಂಬಲಿಗೆ ರಾತ್ರಿ ಸುಮಾರು 9.00 ಗಂಟೆಗೆ ತಲುಪುವಾಗ ಸದ್ರಿ ರಿಕ್ಷಾಚಾಲಕ ದನಂಜಯ ಎಂಬವರು ತನ್ನ ಬಾಬ್ತು ರಿಕ್ಷಾವನ್ನು  ಅತೀವೇಗ ಹಾಗೂ ನಿರ್ಲಕ್ಷತನ ದಿಂದ ಚಲಾಯಿಸಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ  ಪಿರ್ಯಾದಿದಾರರ ತಂಗಿ ರಜನಿ  ಎಂಬವರು ಡಾಮಾರ್ ರಸ್ತೆಗೆ ಬಿದ್ದು ತಲೆಯ ಎಡಬಿದಿಗೆ ರಕ್ತಬರುವ ಗಾಯ ಎಡಕೈಯ ತೋಳಿಗೆ ಮೊಣಗಂಟಿಗೆ ಎಡಕಾಲಿನ ಹೆಬ್ಬರಳಿಗೆ ತರಚಿದ,  ಗಾಯ ಹಾಗೊ ದೇಹಕ್ಕೆ  ಗುದ್ದಿದ ನೋವುಂಟಾಗಿರುವುದಾಗಿ   ಗಾಯಳು  ಮಂಗಳೂರು ಜೆ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ.

 

3.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ನಿಶಾ ಎಸ್. ಕುಮಾರ್ ರವರು 2008-2009 ರಲ್ಲಿ ಯುಎಸ್ಡಿ $ 50,000 ಮೊತ್ತವನ್ನು ಗಿಲ್ರಾಜ್ಮುನಿ ಮತ್ತು ಸರಿತ.ಕೆ.ಮುನಿ ಯವರ ಖಾತೆ ನಂ. 060225027172500 ANZ National Bank Ltd, 251-229 Jambton Quay, Wellington, New Zealand ಕ್ಕೆ ಕಳುಹಿಸಿಕೊಟ್ಟಿದ್ದು, ಬಗ್ಗೆ ಶೈಲೇಶ್ಕುಮಾರ್ರವರು ಹಣವನ್ನು ವಾಪಾಸು ಕೊಡುವ ಬಗ್ಗೆ ಭರವಸೆಯನ್ನು ನೀಡಿದ್ದರು. ಆದರೆ ಸದರಿಯವರು ಹಣವನ್ನು ಫಿರ್ಯಾದಿದಾರರಿಗೆ ವಾಪಾಸು ಕೊಡದೇ ಗಿಲ್ರಾಜ್ವಿ ಮುನಿ ಮತ್ತು ಶ್ರೀಮತಿ ಸರಿತಾ ಕೆ ಮುನಿ ರವರಿಗೆ ನೀಡಿ ಭಾರತ ದೇಶದೊಳಗೆ ರಾಜೇಶ್ಭಟ್ರವರು ತಂದಿರುತ್ತಾರೆ. ಸದ್ರಿಯವರಿಗೆ ಫೋನ್ಮೂಲಕ ಹಾಗೂ ಪೋಸ್ಟ್ಮೂಲಕ ಪತ್ರ ವ್ಯವಹರಿಸಿದ್ದರೂ. ಸದ್ರಿಯವರುಗಳು ಬಗ್ಗೆ ಯಾವುದೇ ರೀತಿಯಲ್ಲಿ ಉತ್ತರಿಸದೇ ಇದ್ದುದಲ್ಲದೆ ಫಿರ್ಯಾದಿದಾರರ ಹಣವನ್ನು ವಾಪಾಸು ಕೊಡದೇ ಮೋಸ ಮಾಡಿರುವುದಾಗಿದೆ.

 

4.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ದತ್ತಾ ನಾಯಕ್ ರವರು KSRTC ಬಸ್ಸು ಚಾಲಕರಾಗಿದ್ದು  ದಿನಾಂಕ: 02.11.2014 ರಂದು ರಾತ್ರಿ 8.42 ಗಂಟೆಗೆ ಪಿರ್ಯಾದಿದಾರರು ಕೆಎ-19-ಎಫ್‌‌-3038 ನೇ ಬಸ್ಸಿನಲ್ಲಿ  ಚಾಲಕರಾಗಿ ಹಾಗು ನಾಗೇಶ್ಎಂಬವರು ನಿರ್ವಾಹಕರಾಗಿ ಬೆಂಗಳೂರಿನಿಂದ ಕುಂದಾಪುರಕ್ಕೆ ಹೋಗುವರೇ ಬಸ್ಸನ್ನು ಚಲಾಯಿಸಿಕೊಂಡು ಬರುತ್ತಾ ದಿನಾಂಕ: 03.11.2014 ರಂದು ಮುಂಜಾನೆ 4.45 ಗಂಟೆಗೆ ಅಡ್ಯಾರುಕಟ್ಟೆ ಎಂಬಲ್ಲಿ ತಲುಪಿದಾಗ ರಸ್ತೆಯಲ್ಲಿ  ಬೆಂಕಿ ಇರುವುದನ್ನು ಕಂಡು ಪಿರ್ಯಾದಿದಾರರು ಬಸ್ಸನ್ನು ನಿಧಾನಗತಿಯಲ್ಲಿ ಚಲಾಯಿಸಿದಾಗ ಬೆಂಕಿಯ ಹತ್ತಿರ 3-4 ಜನರು ನಿಂತಿದ್ದರು, ಪಿರ್ಯಾದಿದಾರರು ಬಸ್ಸನ್ನು ಬೆಂಕಿಯಿಂದ ತಪ್ಪಿಸಲು ರಸ್ತೆಯ ಎಡಬದಿಯಿಂದಾಗಿ ಚಲಾಯಿಸಿದಾಗ ಅಲ್ಲಿದ್ದ 3-4 ಜನ ದುಷ್ಕರ್ಮಿಗಳು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕೆಎ19ಎಫ್‌‌3038 ನೇ ಬಸ್ಸಿಗೆ ಕಲ್ಲುಬಿಸಾಡಿದ್ದು ಇದರ ಪರಿಣಾಮ ಬಸ್ಸಿನ  ಎದುರಿನ ಗಾಜು ಮತ್ತು ಪಿರ್ಯಾದಿದಾರರ ಬಲಭಾಗದ ಬದಿಯ ಎರಡು ಗಾಜುಗಳು ಜಖಂಗೊಂಡು ಸುಮಾರು ರೂ 15000 ನಷ್ಟ ಉಂಟಾಗಿರುತ್ತದೆ.

 

5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03.11.2014 ರಂದು ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಲತೀಫ್ ರವರು ಮತ್ತು ಹ್ಯಾರಿಸ್‌‌ ರಹಮಾನ್‌‌ ಎಂಬವರು ಅಹಮ್ಮದ್‌‌ ಎಂಬವರ ಬಾಭ್ತು ಕೆಎ-21ಎಂ5132 ನೇ ಮಾರುತಿ ಓಮ್ನಿ ಕಾರಿನಲ್ಲಿ ಬೆಳಿಗ್ಗೆ 9.15 ಗಂಟೆಗೆ ಬೆಳ್ತಂಗಡಿಯಿಂದ  ಮಂಗಳೂರು ಕಡೆಗೆ ಬರುತ್ತಾ ಬೆಳಿಗ್ಗೆ ಸುಮಾರು 11.30 ಗಂಟೆಗೆ ಅಳಪೆ ಕಾಂಚನ ಹ್ಯುಂಡೈ ಕಾರ್‌‌ ಶೋರೂಮ್‌‌ ಬಳಿ  ತಲುಪಿದಾಗ  ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಕಾರಿನ ಎದುರಿನಿಂದ ಅಂದರೆ ಪಂಪ್ವೆಲ್‌‌ ಕಡೆಯಿಮದ ಬಿ.ಸಿ ರೋಡ್‌‌ ಕಡೆಗೆ ಕೆಎ-19-ಡಿ-1282 ನೇ ಟೆಂಪೋ ಟ್ರಾವೆಲ್ಲರ್‌‌ ನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ  ಮಾರುತಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಸೊಂಟದ ಭಾಗಕ್ಕೆ ಮತ್ತು ಎಡಕಾಲಿನ ಪಾದದ ಬಳಿ ಗುದ್ದಿದ ಗಾಯ, ಮತ್ತು ಹ್ಯಾರೀಸ್‌‌ ರಹಮಾನ್‌‌ ರವರ ಕೈಗೆ ಹಾಗೂ ಮಾರುತಿ ಕಾರನ್ನು ಚಲಾಯಿಸುತ್ತಿದ್ದ ಅಹಮ್ಮದ್‌‌ ರವರ ತಲೆಯ ಭಾಗಕ್ಕೆ, ಹೊಟ್ಟೆಯ ಬಾಗಕ್ಕೆ, ಎದೆಗೆ ತೀವ್ರ ಸ್ವರೂಪದ ರಕ್ತಗಾಯ ಮತ್ತು ಜಜ್ಜಿದ ಗಾಯವಾಗಿರುತ್ತದೆ.

No comments:

Post a Comment