Thursday, November 13, 2014

Daily Crime Reports 13-11-2014

ದೈನಂದಿನ ಅಪರಾದ ವರದಿ.

ದಿನಾಂಕ 13.11.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಸೌಮ್ಯ ರವರಿಗೆ 1 ನೇ ಆರೋಪಿ ವೇಕಂಟೇಶ್ ರಾವ್ ರವರೊದಿಗೆ ದಿನಾಂಕ 22-05-2013 ರಂದು ಗುರು ಹಿರಿಯರ ನಿಶ್ಚಯದಂತೆ ಶ್ರೀ ರಾಧಕೃಷ್ಣ ಸಭಾ ಭವನ ಕಾರ್ಕಳ ಉಡುಪಿ ಜಿಲ್ಲೆಯಲ್ಲಿ 15 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಹಾಗೂ 15 ಪವನ್ನು ಚಿನ್ನವನ್ನು, ಬೆಳ್ಳಿ, ಮಧುವರ್ಧಕಗಳನ್ನು ನೀಡಿ ಪಿರ್ಯಾಧಿಯ ಮನೆಯವರು ಮದುವೆ ಮಾಡಿರುತ್ತಾರೆ, ತದ ನಂತರ 1 ನೇ ಆರೋಪಿಯಾದ ವೆಂಕಟೇಶ್ ರಾವ್ ರೊಂದಿಗೆ ಪಿರ್ಯಾದೀಯವರು ವಾಸವಿದ್ದ ಸಮಯ 15 ಪವನ್ನು ಬಂಗಾರವನ್ನು ಬಲತ್ಕಾರವಾಗಿ ತೆಗೆದಿಟ್ಟು ಮದುವೆಯ 4 ನೇ ದಿನಕ್ಕೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಸ್ವಲ್ಪ ದಿನದಲ್ಲೆ ಹಿಂದಕ್ಕೆ ಕಳುಹಿಸಿ ಪೋನ್ ನಲ್ಲಿ ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈದು ಜಗಳವಾಡುತ್ತಿದ್ದರು, 2 ನೇಆರೋಪಿ ಶ್ರೀಮತಿ ಜೇಷ್ಠ ಎಂ ರಾವ್  ಮನೆಯಲ್ಲಿರುವ ಸಮಯ ನೀನು ನನ್ನ ಮಗನಿಗೆ ಸರಿಯಾದ ಜೋಡಿ ಅಲ್ಲ ನೀನು ಎಲ್ಲಾದರೂ ಹೋಗಿ ಸಾಯಬಾರದೆಂದು ನಿಂದಿಸುತ್ತ ದಿನಾಂಕ 12-02-2014ರಂದು ಪಿರ್ಯಾಧಿಯ ಮೇಲೆ ತಿಂಡಿ ತಿನ್ನುವಾಗ ನೀರನ್ನು ಎರಚಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. 1 ನೇ ಆರೋಪಿ ದೀಪಾವಳಿ ಸಂದರ್ಭದಲ್ಲಿ ಬೆಂಗಳೂರಿನಿಂದ ಊರಿಗೆ ಬಂದ ಸಮಯ ಪಿರ್ಯಾಧಿಗೆ ಕೈಯಿಂದ ಹಲ್ಲೆ ನಡೆಸಿ ದೈಹಿಕ ಹಿಂಸೆ ನೀಡಿರುತ್ತಾರೆ. ಅಲ್ಲದೆ ಆರೋಪಿಗಳು ದಿನಾಂಕ 25-06-2014 ರಂದು 2 ನೇ ಆರೋಪಿ ಪಿರ್ಯಾಧಿಗೆ ನೀನು ನಿನ್ನ ತಂದೆಗೆ ಕರೆ ಮಾಡಿ ವಿಚ್ಛೇದನಕ್ಕೆ ವ್ಯವಸ್ಥೆ ಮಾಡುವಂತೆ ತಿಳಿಸು ಇನ್ನು ನಮ್ಮಿಂದ ಕಾದು ಕೂರಲು ಸಾಧ್ಯವಿಲ್ಲ ನೀನು ಮನೆ ಬಿಟ್ಟು ತೊಲಗು ನಿನ್ನಿಂದ ಹೇಗೆ ನನ್ನ ಮಗನಿಗೆ ಬಿಡುಗಡೆ ಕೊಡಿಸಬೇಕೆಂದು ನನಗೆ ಗೊತ್ತಿದೆ ಎಂದು ಕೆನ್ನೆಗೆ ಹೊಡೆದಿರುತ್ತಾರೆ. ಇದರಿಂದ ಪಿರ್ಯಾಧಿಯು ಮನನೊಂದು ದಿನಾಂಕ 25-06-2014ರಂದು ತಾಯಿ ಮನೆಗೆ ಬಂದಿದ್ದು, 1ನೇ ಆರೋಪಿಗೆ ಪೋನ್ ಕರೆಮಾಡಲು ಪ್ರಯತ್ನಿಸಿದ್ದು 1 ನೇ ಆರೋಪಿಯು ನೀನು ವಿಚ್ಛೇದನ ಕೊಡು ಇಲ್ಲದಿದ್ದಲ್ಲಿ ನಿಮ್ಮನೆಲ್ಲ ಜೀವ ಸಹಿತ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ.

 

2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-11-2014 ರಂದು ಮಧ್ಯಾಹ್ನ 12-15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಮೇಶ್ ಗೋಕುಲ್ ರವರು ಜೊತೆಯಲ್ಲಿ ಅವರ ತಾಯಿ ಶ್ರೀಮತಿ ಸರಸ್ವತಿಯವರೊಂದಿಗೆ ಶೆಟ್ಟಿ ಐಸ್ ಕ್ರೀಮ್ ಕಂಪನಿ ಎದುರುಗಡೆ ರಾ.ಹೆ 66 ರಲ್ಲಿ ರಸ್ತೆ ದಾಟಲು ನಿಂತಿದ್ದಾಗ ಕೆ 19 ಡಬ್ಲ್ಯೂ 0692 ನೇ ನಂಬ್ರದ ಬೈಕನ್ನು ಅದರ ಸವಾರ ಆಕಾಶ ಶೆಟ್ಟಿ ಎಂಬವರು ಬೈಕಂಪಾಡಿ ಕಡೆಯಿಂದ ಸುರತ್ಕಲ್ ಕಡೆಗೆ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ತಾಯಿಗೆ ಡಿಕ್ಕಿಪಡಿಸಿದ ಪರಿಣಾಮ ತಲೆಗೆ, ಹೊಟ್ಟೆಗೆ, ಕುತ್ತಿಗೆ, ಕೈಕಾಲುಗಳಿಗೆ ರಕ್ತ ಬರುವ ಗಂಭೀರ ಸ್ವರೂಪದ ಗಾಯಗೊಂಡವರನ್ನು,  ಚಿಕಿತ್ಸೆಗಾಗಿ ಜೆ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ.  

 

3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಚಂದ್ರಶೇಖರ ರವರು ಪುಚ್ಚೆಮೊಗರು ಗ್ರಾಮದ ಅಂಛೇಕಚೇರಿಯಲ್ಲಿ ಪೋಸ್ಟಮ್ಯಾನ್ ಕೆಲಸ ಮಾಡುತ್ತಿದ್ದವರು ದಿನಾಂಕ 12-11-2014 ರಂದು ಮಾದ್ಯಾಹ್ನ 3.30 ಗಂಟೆಗೆ ರಾಮ್ ಬೈಲ್ ರಸ್ತೆಯಿಂದ ಟೆಲ್ಲಿಸ್ ನಗರ ಕಡೆಗೆ ಮಣ್ಣು ರಸ್ತೆಯಲ್ಲಿ ಕೆಲಸದ ನಿಮಿತ್ತ ಹೋಗುತ್ತಿರುವ ಸಮಯ ಟೆಲ್ಲಿಸ್ ನಗರ ರಸ್ತೆಯಲ್ಲಿ ಕೆ 19 ಸಿ 466 ನೇ ಅಟೋ ರಿಕ್ಷಾ ಮಗುಚಿ ಬಿದ್ದಿದ್ದು ರಿಕ್ಷಾಚಾಲಕ ಕೃಷ್ಣ ಎಂಬವರಿಗೆ ತಲೆಗೆ ಗಂಬೀರ ಗಾಯವಾಗಿ ಮೃತ ಪಟ್ಟಿದ್ದು ರಿಕ್ಷಾ ಚಾಲಕ ರಿಕ್ಷಾವನ್ನು ರಾಮ್ ಬೈಲು ಕಡೆಯಿಂದ ಟೆಲಿಸ್ಸ ನಗರ ರಸ್ತೆ ಕಡೆಗೆ ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ರಿಕ್ಷಾ ಸ್ಕಿಡ್ ಆಗಿ ಮೃತ ಪಟ್ಟಿರುವುದು ಆಗಿದೆ.  

 

4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀಮತಿ  ಶಿಲ್ಪಾರವರು ತನ್ನ ಗಂಡನ  ಮನೆಯಾದ ಕಲ್ಲಬೆಟ್ಟು  ಗ್ರಾಮದ ಕೋಂಕೆ ಮನೆ ಎಂಬಲ್ಲಿ ಗಂಡ ಮತ್ತು  ತನ್ನ  ಇಬ್ಬರು  ಮಕ್ಕಳೊಂದಿಗೆ  ಬೇರೆಯಾಗಿಯೇ ವಾಸವಾಗಿದ್ದು, 2013  ನೇ ಡಿಸೆಂಬರ್ತಿಂಗಳಿನಿಂದ  ತನ್ನ  ಮಾವ  ವಾಸು  ಪೂಜಾರಿ , ಅತ್ತೆ ರೇವತಿ,  ಮತ್ತು ನಾದಿನಿ ಶ್ರೀಮತಿ ಭಾರತಿ  ಎಂಬವರು  ಪಿರ್ಯಾದಿದಾರರು  ತನ್ನ  ಗಂಡನ ಜೊತೆಯಲ್ಲಿ  ವಾಸವಾಗಿರ ಬಾರದು  ಮನೆ ಬಿಟ್ಟು  ಹೋಗಬೇಕು, ಗಂಡನಿಗೆ ಬೇರೆ ಮದುವೆ ಮಾಡುತ್ತೇವೆ.  ಗಂಡನ  ಎಷ್ಟು  ಗಂಟು  ತಿಂದಿದ್ದಿ, ?  ಎಂಬಿತ್ಯಾದಿಯಾಗಿ  ಪದೇ  ಪದೇ  ಯಾಗಿ  ಹೇಳಿ  ಮಾನಸಿಕ  ಹಿಂಸೆಯನ್ನು   ನೀಡುತ್ತಾ ಬಂದಿದ್ದರೆಂದು  ಹೀಗಿರುತ್ತಾ  ದಿನಾಂಕ  12.11.2014  ರಂದು ಮದ್ಯಾಹ್ನ  12:45  ಗಂಟೆ ಸಮಯಕ್ಕೆ ಪಿರ್ಯಾದಿದಾರರು ಮನೆಯ ಒಳಗೆ ಇದ್ದ  ಸಂದರ್ಭ  ಆರೋಪಿಗಳಾದ ಪಿರ್ಯಾದಿಯ  ಅತ್ತೆ ಶ್ರೀಮತಿ ರೇವತಿ  ನಾದಿನಿ  ಭಾರತಿ, ಎಂಬವರು  ಮನೆಗೆ ಅಕ್ರಮ  ಪ್ರವೇಶ  ಮಾಡಿ  "ನಿನಗೆ ಬೇರೆ  ಎಲ್ಲಿಗಾದರೂ  ಹೋಗಲು  ಆಗುವುದಿಲ್ವಾ"  ಎಂಬುದಾಗಿ ಅವಾಚ್ಯ  ಶಬ್ದದಿಂದ ಬೈದು ಅವಮಾನ  ಪಡಿಸಿದ್ದಲ್ಲದೆ,  ರೇವತಿಯವರು  ಪಿರ್ಯಾದಿದಾರರ  ಕೆನ್ನೆಗೆ ಮತ್ತು  ತುಟಿಗೆ ಕೈಯಿಂದ ಹೊಡೆದು  ಸೊಂಟಕ್ಕೆ ತುಳಿದಾಗ ನೆಲಕ್ಕೆ ಬಿದ್ದ  ಪಿರ್ಯಾದಿದಾರರ ಎರಡೂ  ಕೈಯನ್ನು  ರೇವರಿಯವರು  ಅದುಮಿ  ಹಿಡಿದು ಅಪರಾದವನ್ನು  ಮಾಡುವ  ಉದ್ದೇಶದಿಂದಲೇ  ಭಾರತಿಯು  ತಂದಿದ್ದ ಅನಾರೋಗ್ಯಕರವಾದ  ಪದಾರ್ಥವಾದ  ಪಿನಾಯಿಲ್ನ್ನು   ಬಲವಂತದಿಂದ  ಕುಡಿಸಿ  ನೀನು  ಸಾಯಿ  ಎಂದು  ಹೇಳಿ  ಅವಾಚ್ಯ ಶಬ್ದಗಳಿಂದ ಜೀವ  ಬೆದರಿಕೆ  ಹಾಕಿ  ಹೋಗಿರುತ್ತಾರೆ.  

 

5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12.11.2014 ರಂದು  ಪಿರ್ಯಾದಿದಾರರಾದ ಶ್ರೀ ಅರೀಫ್ ರವರ ತಂದೆಯ ಬಾಬ್ತು ನೊಂದಣಿಯಾಗದ ಹೊಸ ಬೈಕ್‌‌ನಲ್ಲಿ  ಅವರ ತಾಯಿಯ ತಮ್ಮನ ಮಗ ಶಾರುಖ್‌‌ ಮತ್ತು ಪಿರ್ಯಾದಿದಾರರ ತಮ್ಮ ಸಿನಾನ್‌‌ ಸಹಸವಾರನಾಗಿ ಕುಳಿತುಕೊಂಡು ಚಪಾತಿ ಸೇಲ್‌‌ ಮಾಡುವರೇ ವಳಚ್ಚಿಲ್‌‌ ಕಡೆಯಿಂದ ಫರಂಗಿಪೇಟೆ ಕಡೆಗೆ ಹೋಗುತ್ತಿರುವ ಸಮಯ ಸಂಜೆ ಸುಮಾರು 17.15 ಗಂಟೆಗೆ ಅರ್ಕುಳ ಮಸೀದಿಯ ಎದುರು ಹೈವೆಯಲ್ಲಿ ಬೈಕ್‌‌‌ ಸ್ಕಿಡ್‌‌‌ ಆಗಿ ಬಿದ್ದು ಪಿರ್ಯಾದಿದಾರರ ತಮ್ಮ ಸಿನಾನ್‌‌ ಹಣೆಯ ಭಾಗಕ್ಕೆ, ತಲೆಗೆ, ಕೆನ್ನೆಗೆ ತೀವ್ರಸ್ವರೂಪದ  ರಕ್ತಗಾಯವಾಗಿರುತ್ತದೆ. ಈ ಅಪಘಾತವು ಶಾರುಖ ನು ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್‌‌‌ ಹಾಕಿದ್ದರಿಂದ  ಸಂಭವಿಸಿರುವುದಾಗಿದೆ.

No comments:

Post a Comment