Monday, November 24, 2014

Daily Crime Reports 24-11-2014

ದೈನಂದಿನ ಅಪರಾದ ವರದಿ.

ದಿನಾಂಕ 24.11.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

8

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-11-2014ರಂದು ಮಧ್ಯಾಹ್ನ 15:00 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ದಯಾನಂದ ರವರು ತನ್ನ ಬಾಬ್ತು ಬಸ್ಸು ನಂಬ್ರ ಕೆಎ-19 ಎಡಿ-2222ನ್ನು ಮಂಗಳೂರು ಕಡೆಯಿಂದ ಚಲಾಯಿಸಿಕೊಂಡು ತಡಂಬೈಲು ಸುಪ್ರಿಂ ಹಾಲ್ ಎದುರು ಎನ್.ಹೆಚ್-66ರಲ್ಲಿ ಬಂದು ಪ್ರಯಾಣಿಕರನ್ನು ಹತ್ತಿಸಿ ಇಳಿಸಲು ನಿಲ್ಲಿಸಿರುವಾಗ್ಗೆ ಹಿಂದಿನಿಂದ ಕಾರು ನಂಬ್ರ ಕೆಎ-19-ಎಮ್.ಡಿ-4899ನೇ ನಂಬ್ರದ ರಿಟ್ಜ್ ಕಾರನ್ನು ಅದರ ಚಾಲಕ ಮಹಮ್ಮದ್ ರಿಜ್ವಾನ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದರು. ಪರಿಣಾಮ ಕಾರಿನ ಮುಂಭಾಗದ ಎಡ ಬಾಗ ಸಿಟಿನಲ್ಲಿದ್ದ ಮಹಮ್ಮದ್ ಆಶಿಲ್ ರವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಚಾಲಕ ಮಹಮ್ಮದ್ ರಿಜ್ವಾನ್ ರವರಿಗೂ ಗಂಭೀರ ಸ್ವರೂಪದ ಗಾಯವಾಗಿದ್ದು, ಕಾರಿನ ಹಿಂಭಾಗದ ಸೀಟಿನಲ್ಲಿದ್ದ ಮುನಾಫ್, ನಿಹಾಲ್, ಸೈಯದ್ ಶಾ, ಆಫ್ರೀದಿ ಎಂಬವರಿಗೂ ಗಾಯವಾಗಿದ್ದು, ಗಾಯಾಳು ಮಹಮ್ಮದ್ ಆಶೆಲ್ ರವರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತ ಪಟ್ಟಿದ್ದಾಗಿ ಶ್ರೀನಿವಾಸ ಆಸ್ಪತ್ರೆಯ ಕರ್ತವ್ಯ ನಿರತ ವೈಧ್ಯರು ತಿಳಿಸಿದ್ದು, ಗಾಯಾಳುಗಳು ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 23.11.2014 ರಂದು ಬೆಳಿಗ್ಗೆ  ಪಿರ್ಯಾದಿದಾರರಾದ ಶ್ರೀ ಬಸವರಾಜ ರವರ ಜೊತೆಯಲ್ಲಿ ಗಾರೆ ಕೆಲಸ ಮಾಡುವ ಫಕೀರ್ಸಾಬ್ರವರು ಅವರ ಬಾಬ್ತು ಮೋಟಾರು ಸೈಕಲ್ನಂಬ್ರ ಕೆ.-19-.ಎಫ್‌-7298 ನೇದರಲ್ಲಿ ಹುಚ್ಚಪ್ಪ ಎಂಬವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಚಲಾಯಿಸುತ್ತಾ,  ಮಂಗಳೂರು ನಗರದ ಪಿ.ವಿ.ಎಸ್‌. ಕಡೆಗೆ ಹೋಗಿ ವಾಪಾಸು ಲಾಲ್ಬಾಗ್ಕಡೆಗೆ ಬರುತ್ತಾ ಸಮಯ ಬೆಳಿಗ್ಗೆ 06:30 ಗಂಟೆಗೆ ಮಹಾನಗರ ಪಾಲಿಕೆಯ ಕಛೇರಿಯ ಎದುರುಗಡೆ ತಲುಪಿದಾಗ, ಅವರ ಹಿಂದುಗಡೆಯಿಂದ ನೋಂದಣಿಯಾಗದ ಬಿಳಿ ಬಣ್ಣದ ವೋಕ್ಸ್‌‌ ವ್ಯಾಗನ್ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಫಕೀರ್ಸಾಬ್ರವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದಿದ್ದು,ಪರಿಣಾಮ ಮೋಟಾರು ಸೈಕಲ್  ಸುಮಾರು 15-20 ಅಡಿ ದೂರದವರೆಗೆ ದೂಡಿಕೊಂಡು ಹೋಗಿ ಪೊಲೀಸ್ಅಂಬ್ರೆಲ್ಲಾದ ಬಳಿ ಬಿದ್ದಿರುತ್ತದೆ. ಆರೋಪಿತ ಕಾರನ್ನು ಸ್ಥಳದಲ್ಲಿಯೇ ನಿಲ್ಲಿಸದೇ ಪರಾರಿಯಾಗಿರುತ್ತಾರೆ. ಘಟನೆಯನ್ನು ಪಿರ್ಯಾದಿದಾರರು ಕಾರಿನ ಹಿಂದುಗಡೆ ತನ್ನ ಬಾಬ್ತು ಮೋಟಾರು ಸೈಕಲಿನಲ್ಲಿ ಬರುತ್ತಿದ್ದುದರಿಂದ ನೋಡಿರುತ್ತಾರೆ. ಘಟನೆಯಿಂದ ತಲೆಗೆ ರಕ್ತ ಗಾಯವಾದ್ದ ಫಕೀರ್ಸಾಬ್ರವರನ್ನು ಮತ್ತು ಬಲ ಕಾಲಿಗೆ ತರಚಿದ ಗಾಯ ಉಂಟಾದ ಹುಚ್ಚಪ್ಪರನ್ನು ಚಿಕಿತ್ಸೆಯ ಬಗ್ಗೆ ಒಂದು ಆಟೋ ರಿಕ್ಷಾದಲ್ಲಿ ನಗರದ .ಜೆ  ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ.

 

3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಎಂ. ಅಶ್ರಫ್ ರವರ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಜಾಮಿರುಲ್ಇಸ್ಲಾಂರವರ ತಮ್ಮನವರಾದ ಖಮರತ್ಹುಸೈನ್ರವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು, ದಿನಾಂಕ : 22-11-2014 ರಂದು ರಾತ್ರಿ ಸುಮಾರು 10:00 ಗಂಟೆಗೆ ಮಂಗಳೂರು ನಗರದ ಸ್ಟೇಟ್ಬ್ಯಾಂಕ್ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಯಾವುದೋ ಒಂದು ವಾಹನವನ್ನು ಅದರ ಚಾಲಕರು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಖಮರತ್ಹುಸೈನ್ರವರಿಗೆ ಡಿಕ್ಕಿ ಹೊಡೆದು ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿರುತ್ತಾರೆ. ಘಟನೆಯಿಂದ ತಲೆಗೆ ಮತ್ತು ಕುತ್ತಿಗೆಗೆ ಗಂಭೀರ ಗಾಯವಾದ್ದ ಖಮರತ್ಹುಸೈನ್ರವರನ್ನು ಚಿಕಿತ್ಸೆಯ ಬಗ್ಗೆ ಯಾರೋ ಜಿಲ್ಲಾ ವೆನ್ಲಾಕ್ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಸರಿಯಾದ ಚಿಕಿತ್ಸೆಯ ವ್ಯವಸ್ಥೆ ಇಲ್ಲವಾದ್ದರಿಂದ ದಿನಾಂಕ 23-11-2014 ರಂದು .ಜೆ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿರುತ್ತಾರೆ.. ಸದ್ರಿ ಗಾಯಾಳು ಕೋಮಾ ಸ್ಥಿತಿಯಲ್ಲಿರುತ್ತಾರೆ.

 

4.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 23.11.2104 ರಂದು ಪಿರ್ಯಾದಿದಾರರಾದ ಶ್ರೀ ಫ್ರಾಂಕಲಿನ್ ಮೊಂತೆರೋ ರವರು ಮಳೆ ಬರುತ್ತಿರುವ ಕಾರಣ ಮಂಗಳೂರು ನಗರದ ಅಳಕೆ ರಸ್ತೆಯಲ್ಲಿರುವ ವಿಂಟೇಜ್ ಬಾರ್ ಕಟ್ಟಡ ಅಡಿಯಲ್ಲಿ ನಿಂತಿರುವ ಸಮಯ ರಾತ್ರಿ 20.15 ಗಂಟೆಗೆ  ಸ್ಕೂಟರ್ ನಂಬ್ರ ಕೆಎ.19.ಎಂ.ಎಫ್ 8006 ನೇದನ್ನು ಅದರ ಸವಾರ ರಮಾನಂದ ಪೈ ಎಂಬವರು ಹಿಂಬದಿ ಸೀಟಿನಲ್ಲಿ ಸಹಸವಾರಿಣಿಯಾಗಿ ತನ್ನ ಮಗಳಾದ  ರಚನಾ ಪೈ (8) ವರ್ಷ ಎಂಬವರನ್ನು ಕುಳ್ಳಿರಿಸಿಕೊಂಡು  ನ್ಯೂಚಿತ್ರಾಕುದ್ರೋಳಿ ಸಾರ್ವಜನಿಕ ಕಾಂಕ್ರೀಟು ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದ  ಕಾರಣ  ಅಳಕೆ ವಿಂಟೇಜ್  ಬಾರ್ ಎದುರುಗಡೆ ಸ್ಕೂಟರಿನ ಹತೋಟಿ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಸ್ಕೂಟರಿನ ಹಿಂಬದಿ ಕುಳಿತ್ತಿದ್ದ ರಚನಾ ಪೈ ರಸ್ತೆಗೆ ಎಸೆಯಲ್ಟರು ಅದೇ ಸಮಯ ಲಾರಿ ನಂಬ್ರ ಎಂ.ಹೆಚ್. 23.5832ನೇದನ್ನು ಅದರ ಚಾಲಕ ಮಣ್ಣಗುಡ್ಡೆ ಕಡೆಯಿಂದ -  ರಥಬೀದಿ  ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಲಾರಿಯನ್ನು ನಿಧಾನಿಸದೇ ಇದ್ದ ಕಾರಣ ರಚನಾ ಪೈ ರವರಿಗೆ ಲಾರಿಯ ಎದುರಿನ ಬಲ ಬದಿ ಚಕ್ರ ತಾಗಿ ಗಂಬೀರ ತರಹದ ಗಾಯಗೊಂಡು ಚಿಕಿತ್ಸೆ ಬಗ್ಗೆ ಯೆನೊಪೊಯ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.

 

5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-11-20104 ರಂದು ಸಮಯ ಸುಮಾರು 17-30 ಗಂಟೆಗೆ ಪಿರ್ಯಾದುದಾರರಾದ ಶ್ರೀ ಜೀವನ್ ರವರ ನೆರೆಮನೆವಾಸಿ ಕೃಷ್ಣಪ್ಪ ಪೊಜಾರಿಯವರ ಬಾಬ್ತು ಸ್ಕೂಟರ್ ನಂಬ್ರ ಕೆಎ-19-ಇಎಮ್-2011ರಲ್ಲಿ ಕೃಷ್ಣಪ್ಪ ಪೊಜಾರಿಯವರು ಸವಾರರಾಗಿದ್ದು ಪಿರ್ಯಾದುದಾರರು ಸಹ ಸವಾರರಾಗಿ ಕುಳಿತುಕೊಂಡು ನಂತೂರು ಕಡೆಯಿಂದ ಅಬ್ಬೆಟ್ಟು ಕಡೆ ಹೋಗುವರೇ ಬಿಕರ್ನಕಟ್ಟೆ ಮಸೀದಿ ಬಳಿ ತಲಪುವಾಗ ಎದರುಗಡೆ ಹೋಗುತ್ತಿದ್ದ ಇನೋವಾ ಕಾರು ನಂಬ್ರ ಕೆಎ-19-ಸಿ-6332 ನ್ನು ಅದರ ಚಾಲಕ ಯಾವುದೇ ಸೊಚನೆ ಕೊಡದೇ ರಸ್ತೆಯ ಡಿವೈಡರ್ ತೆರವು ಜಾಗದಲ್ಲಿ ಒಮ್ಮೇಲೆ ಬಲಕ್ಕೆ ತಿರುಗಿಸಿ ಚಲಾಯಿದ ಪರಿಣಾಮ ನಮ್ಮ ಸ್ಕೊಟರ್ ಗೆ ಡಿಕ್ಕಿಯಾಗಿ ಸವಾರರಿಬ್ಬರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸ್ಕೊಟರ್ ಸವಾರ ಕೃಷ್ಣಪ್ಪ ಪೊಜಾರಿಯವರ ಎಡಕಾಲಿನ ತೊಡೆಗೆ ಮೂಳೆಮುರಿತದ ಗಂಭೀರ ಗಾಯವಾಗಿ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

6.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-11-2014 ರಂದು ಸಮಯ ಸುಮಾರು 10.00 ಗಂಟೆಗೆ ಫಿರ್ಯಾದುದಾರರಾದ ಶ್ರೀ ಸುರೇಶ್ ರವರು ಕೆ.ಎಸ್ಆರ್.ಟಿ.ಸಿ ವಿಭಾಗೀಯ ಕಾರ್ಯಗಾರ ಗೇಟಿನ ಹೊರಗಿನ ಸರ್ವೀಸ್ ರಸ್ತೆಯನ್ನು ದಾಟುವರೇ ರಸ್ತೆ ಬದಿಯಲ್ಲಿ ನಿಂತು ಕೊಂಡಿರುವಾಗ ಕೆ.ಪಿ.ಟಿ ಕಡೆಯಿಂದ ಕುಂಟಿಕಾನ ಕಡೆಗೆ ಕಾರು ನಂಬ್ರ KA19-MC-3175 ನೇದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂ  ರಾಷ್ತ್ರೀಯ ಹೆದ್ದಾರಿ ರಸ್ತೆಯಿಂದ  ಸರ್ವೀಸ್ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ರಸ್ತೆಗೆ  ಬಿದ್ದು ಎಡ ಕೈ, ಎಡಕಾಲಿಗೆ, ಮೂಳೆ ಮುರಿತದ ಗಂಭೀರ ಗಾಯವಾಗಿದ್ದು, ಬಲಕಣ್ಣಿನ ಮೇಲ್ಬಾಗ, ಹಣೆಯಲ್ಲಿ ಹಾಗೂ ಬಲಕಾಲಿನ ಮೊಣಗಂಟಿಗೆ ಮತ್ತು ಪಾದಕ್ಕೆ ತರಚಿದ ಗಾಯವಾಗಿ ತೇಜಸ್ವಿನಿ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

7.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23/11/2014 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಅನುಷೂಯಾ ರವರು ತನ್ನ ಮಗನೊಂದಿಗೆ ಮನೆಯಲ್ಲಿರುವಾಗ ಆರೋಪಿ ಸ್ಕಾರ್ಪಿಯೋ ಮಂಜು @ ಮಂಜು ಎಂಬಾತನು ಪಿರ್ಯಾದಿದಾರರ  ಮನೆಯ ಕಂಪೌಂಡ್ ಒಳಗಡೆ ಅಕ್ರಮವಾಗಿ ಪ್ರವೇಶಿಸಿ, ಮನೆಯ ಬಾಗಿಲ ಮುಂದೆ ನಿಂತು ಮನೆಯಿಂದ ಹೊರಗಡೆ ಬರುವಂತೆ ಬೆದರಿಕೆ ಒಡ್ಡಿದ್ದು, ಪಿರ್ಯಾದಿದಾರರು ಬಾಗಿಲು ತೆರೆಯದೆ ಇದ್ದಾಗ ಅವಾಚ್ಯ ಶಬ್ದಗಳಿಂದ ಬೈದು, ಮನೆಯ ಎದುರು ಕಟ್ಟಿಹಾಕಿದ ಸಾಕು ನಾಯಿಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದಾಗ, ಪಿರ್ಯಾದಿದಾರರು ಮನೆಯಿಂದ ಹೊರಗಡೆ ಬಿಡಿಸಲು ಬರುವಾಗ ತಡೆದು ನಿಲ್ಲಿಸಿ ಪುನಃ ಸಾಕುನಾಯಿಗೆ ಹೊಡೆದು ಕುತ್ತಿಗೆಗೆ ತೀವ್ರ ಗಾಯವುಂಟುಮಾಡಿದ್ದಲ್ಲದೆ,  ಪಿರ್ಯಾದಿದಾರರಿಗೆ ಜೀವ ಬೆದರಿಕೆ ಕೂಡಾ ಒಡ್ಡಿರುವುದಾಗಿದೆ.

 

8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22/11/2014 ರಂದು 12.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವಾಲ್ಟಿ ಪಿಂಟೋ ರವರು ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಕೈಕಂಬ ಎಂಬಲ್ಲಿರುವ ಶ್ರೀದೇವಿ ಹೊಟೇಲಿಗೆ ಊಟ ಮಾಡಲೆಂದು ಹೋಗಿದ್ದು, ಊಟ ಮಾಡಿ ಹೊರಟಾಗ ಬಿಲ್ಲಿನ ವಿಷಯದಲ್ಲಿ ಪಿರ್ಯಾದಿದಾರರಿಗೆ ಹಾಗೂ ಕೌಟರ್ ನಲ್ಲಿದ್ದ ಹೊಟೇಲಿನ ಮಾಲಕ ರವೀಂದ್ರ ಎಂಬಾತನಿಗೆ ಮಾತಿಗೆ ಮಾತಾಗಿ ಆರೋಪಿ ರವೀಂದ್ರನು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ದೂಡಿ ಹಾಕಿ ಅಲ್ಲೇ ಇದ್ದ ಕಟ್ಟಿಗೆ ತುಂಡೊಂದನ್ನು ತೆಗೆದು ಪಿರ್ಯಾದಿದಾರರ ಬೆನ್ನಿಗೆ, ಹೊಟ್ಟೆಗೆ, ಎಡ ಭುಜಕ್ಕೆ ಹಾಗೂ ಬಲ ಕಾಲಿಗೆ ಹೊಡೆದುದ್ದಲ್ಲದೇ, ಇನ್ನೊಮ್ಮೆ ಇಲ್ಲಿಗೆ ಬಂದರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ.

 

9.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22.11.2014 ರಂದು ಫಿರ್ಯಾದಿದಾರರಾದ ಶ್ರೀ ಮಹಮ್ಮದ್ ಸಫ್ವಾನ್ ರವರು ತನ್ನ ಸ್ನೇಹಿತ ಮಹಮ್ಮದ್ಹನೀಪ್ಎಂಬವರ ರಿಕ್ಷಾ ನಂಬ್ರ ಕೆಎ-19ಬಿ-7435 ನೇಯದರಲ್ಲಿ ತನ್ನ ಸಂಬಂಧಿಕರಾದ ರುಕಿಯಾ, ಫಾತಿಮತ್ಜೊಹರಾ ಮತ್ತು ರುಕಿಯಾ ಎಂಬವರನ್ನು ಕುಳ್ಳಿರಿಸಿಕೊಂಡು ಮಂಜನಾಡಿ ದರ್ಗಾದ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಬೆಳಿಗ್ಗೆ 11:30 ಗಂಟೆಗೆ ಮಂಗಳೂರು ತಾಲೂಕು, ಮಂಜನಾಡಿ ಗ್ರಾಮದ, ಮಂಜನಾಡಿ ದೇವಸ್ಥಾನದ ಬಳಿ ತಲುಪುತ್ತಿದ್ದಂತಯೇ ಎದುರಿನಂದ ಅಂದರೆ ಮಂಜನಾಡಿ ಕಡೆಯಿಂದ ಜೀಪ್ನಂಬ್ರ ಸಿಆರ್ಎಕ್ಸ್‌-2392 ನೇಯದನ್ನು ಅದರ ಚಾಲಕ ಅನಿಲ್ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಬಿದ್ದು, ಫಿರ್ಯಾದಿದಾರರ ಬಲಕಿವಿಯ ಹಾಳೆಗೆ, ಬಲ ಕೆನ್ನೆಗೆ, ಹಣೆಗೆ ರಕ್ತಗಾಯ, ರುಕಿಯಾರವರ ಎಡಕಾಲಿನ ತೊಡೆಗೆ, ತುಟಿಗೆ ಗುದ್ದಿದ ಗಾಯ, ಫಾತಿಮತ್ಜೊಹರಾರವರ ತಲೆಗೆ, ಬಲಕೈಗೆ, ಬಲಕಾಲಿನ ತೊಡೆಗೆ ರಕ್ತಗಾಯ ಮತ್ತು ರುಕಿಯಾರವರ ತಲೆಗೆ, ಬಲಕೈ ಕೋಲುಕೈಗೆ, ಬಲಕಾಲಿನ ತೊಡೆಗೆ ರಕ್ತಗಾಯವಾಗಿದ್ದು, ಗಾಯಾಳುಗಳ ಪೈಕಿ ಫಿರ್ಯಾದಿ ಮತ್ತು ರುಕಿಯಾರವರು ಹೊರರೋಗಿಯಾಗಿ ಮತ್ತು ಫಾತಿಮತ್ಜೊಹರಾ, ರುಕಿಯಾರವರು ಒಳರೋಗಿಯಾಗಿ ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ.

 

10.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22.11.2014 ರಂದು ಫಿರ್ಯಾದಿದಾರರಾದ ಶ್ರೀ ಅಬ್ದುಲ್ ರಜಾಕ್ ರವರ ತಾಯಿ ಬೀಫಾತುಮ್ಮರವರು, ಫಿರ್ಯಾದಿದಾರರ ಬಾವ ಆರೋಪಿ ಮಹಮ್ಮದ್ಹನೀಫ್ರವರು ಚಲಾಯಿಸುತ್ತಿದ್ದ ಆಕ್ಸೆಸ್ಸ್ಕೂಟರ್ನಂಬ್ರ ಕೆಎ-19ಇಜಿ-5627 ನೇಯದರಲ್ಲಿ ಸಹಸವಾರಳಾಗಿ ನಡುಪದವು ಕಡೆಯಿಂದ ಮುಡಿಪು ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ 11:15 ಗಂಟೆಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ, ನಡುಪದವು ಕ್ರಾಸ್ಎಂಬಲ್ಲಿಗೆ ತಲುಪುತ್ತಿದ್ದಂತಯೇ ಆರೋಪಿಯು ಸ್ಕೂಟರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದ ಪರಿಣಾಮ ಸ್ಕೂಟರ್ನಿಯಂತ್ರಣ ತಪ್ಪಿ ಮಗುಚಿ ಬಿದ್ದು  ಬೀಫಾತುಮ್ಮರವರ ಬಲಕಾಲಿನ ಪಾದಕ್ಕೆ ಗುದ್ದಿದ ರಕ್ತ ಗಾಯ ಹಾಗೂ ತಲೆಗೆ ಗುದ್ದಿದ ಗಾಯವಾಗಿ ಪ್ರಜ್ಞಾಹೀನರಾಗಿದ್ದು, ಸದ್ರಿಯವರನ್ನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ.

 

11.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ತಿಮೋತಿ ಅರ್ನೆಸ್ಟ್ ರೋಯ್ ರವರು ಪೂಂಜಾ ಇಂಟರ್ ನ್ಯಾಷನಲ್ ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿದ್ದು, ಸಂಸ್ಥೆಯಲ್ಲಿ ಅಸಿಸ್ಟೆಂಟ್ ಮ್ಯಾನೆಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಧುಸೂದನ್ ಎಂಬುವವರು ಮಂಗಳೂರಿನಲ್ಲಿ ನಡೆಯುವ ಡಾಕ್ಟರ್ಸ್ ಮೆಡಿಕಲ್ ಕಾನ್ಫರೆನ್ಸಿಗೆ 40 ರೂಂ ಗಳನ್ನು ಸಂಸ್ಥೆಯಲ್ಲಿ ಬುಕ್ ಮಾಡಲು ಕೇಳಿಕೊಂಡಾಗ ಮಧುಸೂಧನನು ರೂಮುಗಳು ಲಭ್ಯವಿರುವುದಾಗಿ ಒಪ್ಪಿಕೊಂಡಿದ್ದು, ಅದಾದ ನಂತರ 5 ದಿನಗಳಲ್ಲಿ ರಶ್ಮಿಯವರು ರೂಮುಗಳ ಬಗ್ಗೆ ವಿಚಾರಿಸಿದಾಗ ಮಧುಸೂದನನು ನಮ್ಮಲ್ಲಿ ಕೇವಲ 20 ರೂಮುಗಳು ಮಾತ್ರಾ ಖಾಲಿ ಇರುವುದಾಗಿ ಅದನ್ನು ನೀಡಬೇಕಾದರೆ ರೂ. 50,000/- ಪಾವತಿಸಬೇಕೆಂದು ಹೇಳಿದಂತೆ ದಿನಾಂಕ 08-10-2014 ರಂದು ಸಚಿನ್ ಅಕೌಂಟಿಗೆ ಹಣ ಪಾವತಿಸಿದ್ದು, ನಂತರ ರೂಮು ಬೇಕಾದಲ್ಲಿ ಪೂರ್ತಿ ಹಣ ಸಂದಾಯ ಮಾಡಬೇಕೆಂದು ಕೇಳಿಕೊಂಡಂತೆ ದಿನಾಂಕ 14-10-2014 ರಂದು ರೂ 1,20,000/- ಗಳನ್ನು ಸಚಿನ್ ರವರ ಅಕೌಂಟಿಗೆ ಕಳುಹಿಸಿರುತ್ತಾರೆ. ನಂತರ 22-10-2014 ರಂದು ಮತ್ತೆ ರೂ10,000/- ಗಳನ್ನು ಸಚಿನ್ ರವರ ಅಕೌಂಟಿಗೆ ಪಾವತಿಸಿರುತ್ತಾರೆ ಅದಕ್ಕಾಗಿ ಪೂಂಜಾ ಇಂಟರ್ ನ್ಯಾಷನಲ್ ಹೊಟೇಲಿನ ನಕಲಿ ಮುದ್ರೆ ಯನ್ನು ರಶ್ಮಿ ಗೆ ನೀಡಿರುತ್ತಾರೆ. ನಂತರ ರಶ್ಮಿಯು ನಮ್ಮ ಸಂಸ್ಥೆಯು ಕರೆ ಮಾಡಿದಾಗ ರಶ್ಮಿಯ ಹೆಸರಿನಲ್ಲಿ ಯಾವುದೇ ರೂಮುಗಳು ಬುಕ್ ಆಗಿರುವ ಬಗ್ಗೆ ಯಾವುದೇ ದಾಖಲೆಗಳು ಕಂಡುಬಂದಿರುವುದಿಲ್ಲ. ಆರೋಪಿತನು ಸಚಿನ್ ರವರೊಂದಿಗೆ ಸೇರಿಕೊಂಡು ಸಂಸ್ಥೆಯ ನಕಲಿ ಮುದ್ರೆ ಹಾಗೂ ನಕಲಿ ಲೆಟರ್ ಹೆಡ್ ಉಪಯೋಗಿಸಿ ರಶ್ಮಿಯವರಿಂದ ರೂ 180,000/- ಹಣವನ್ನು ಪಡೆದು ರಶ್ಮಿಗೆ ಹಾಗೂ ಪಿರ್ಯಾದಿದಾರರ ಸಂಸ್ಥೆಗೆ ಮೋಸ ಮಾಡಿರುವುದಾಗಿದೆ.

 

12.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸೋಮನಾಥ್ ನಾಯಕ್ ರವರ  ಮನೆಗೆ ತಾಗಿಕೊಂಡು ನವೀನ್ಚಂದ್ರ ರವರ ಹೆಂಡತಿ  ಜ್ಯೋತಿ  ( 32 ) , ಮಕ್ಕಳಾದ ದಕ್ಷನ್  (8),  ದಕ್ಷಿತ್‌ ( 6)  ರವರು ವಾಸವಾಗಿದ್ದು,  ನವೀನ್ಚಂದ್ರರವರು  ಮುಂಬಯಿಯಲ್ಲಿ  ಹೊಟೇಲ್ನಲ್ಲಿ  ಉದ್ಯೋಗದಲ್ಲಿದ್ದು, ಆಗಾಗ ಮನೆಗೆ ಬಂದು ಹೋಗಿರುತ್ತಾರೆ. ದಿನಾಂಕ 22.11.2014 ರಂದು ಪಿರ್ಯಾದಿದಾರರು ಬೆಳಿಗ್ಗೆ 6:00 ಗಂಟೆಗೆ ಎದ್ದವರು ಪಿರ್ಯಾದಿಯ ಹೆಂಡತಿ ಶೋಭಾ ರವರೊಂದಿಗೆ ಮನೆಯಿಂದ ಹೊರಗೆ ಬಂದಾಗ  ಮನೆಯ  ಎದುರು  ಇರುವ  ಬಾವಿಯ  ಒಳಗಿಂದ ಪಿರ್ಯಾದಿಯನ್ನು ಒಂದು  ಹೆಂಗಸಿನ  ಸ್ವರದಲ್ಲಿ  ಕರೆಯುತ್ತಿರುವುದನ್ನು  ಕೇಳಿದ ಪಿರ್ಯಾದಿದಾರರು  ಬಾವಿಯ  ಹತ್ತಿರ ಹೋಗಿ  ಇಣುಕಿ ನೋಡಿದಾಗ  ನೆರೆ-ಮನೆಯ  ಜ್ಯೋತಿರವರು  ಬಾವಿಯ  ಒಳಗೆ ಪಂಪಿಗೆ ಅಳವಡಿಸಿದ್ದ ನೈಲಾನ್‌‌ ಹಗ್ಗವನ್ನು  ಹಿಡಿದುಕೊಂಡು   ನೇತಾಡುತ್ತಿದ್ದು,  ಜ್ಯೋತಿ ರವರ  ದೊಡ್ಡ ಮಗ ದಕ್ಷನ್ ಕೂಡಾ ಹಗ್ಗವನ್ನು ಹಿಡಿದು  ಕೊಂಡಿದ್ದು, ಪಿರ್ಯಾಧಿದಾರರು ಅಕ್ಕ ಪಕ್ಕದವರನ್ನು ಬೊಬ್ಬೆ ಹಾಕಿ  ಕರೆದು ದೊಡ್ಡ ಪ್ಲಾಸ್ಟಿಕ್ಡ್ರಮ್ನ್ನು ಹಗ್ಗದ ಸಹಾಯದಿಂದ ಬಾವಿಗೆ ಇಳಿಸಿ ಅದರ ಮೂಲಕ ಜ್ಯೋತಿ ಮತ್ತು ದಕ್ಷನ್ನ್ನು ಮೇಲಕ್ಕೆ ಎತ್ತಿ ಅಗ್ನಿ ಶಾಮಕ ದಳದವರ ಸಹಾಯದಿಂದ ದಕ್ಷಿತ್ನನ್ನು ಮೇಲಕ್ಕೆ ಎತ್ತಿದ್ದು, ದಕ್ಷಿತ್ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ.  ಆರೋಪಿತ  ಜ್ಯೋತಿರವರು  ಹಣದ ಮುಗ್ಗಟ್ಟಿಗೆ ಒಳಗಾದವರಂತೆ ಅವರ ನಡವಳಿಕೆಯಿಂದ ಕಂಡು ಬಂದು ಬಂದಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮಕ್ಕಳಾದ ದಕ್ಷನ್ಮತ್ತು  ದಕ್ಷಿತ್ನನ್ನು  ಬಾವಿಯ  ನೀರಿನಲ್ಲಿ ಮುಳುಗಿಸಿ ಕೊಲೆ ಮಾಡುವ ಉದ್ದೇಶದಿಂದ ತಡ ರಾತ್ರಿಯಲ್ಲಿ ಮಕ್ಕಳನ್ನು ಬಲವಂತದಿಂದ ಬಾವಿಗೆ ಎತ್ತಿ  ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬಾವಿಗೆ ಹಾರಿದ್ದು ಕೃತ್ಯದಿಂದ ದಕ್ಷಿತ್  ಮೃತಪಟ್ಟಿದ್ದು, ದಕ್ಷನ್ಮತ್ತು ಆರೋಪಿ  ಜ್ಯೋತಿ  ಬದುಕಿ  ಉಳಿದಿರುವುದಾಗಿದೆ.  

 

13.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ರಾಜಲಕ್ಷ್ಮೀ ರವರ ಮಾವನವರಾದ ಸುಬ್ರಮಣ್ಯ ವಿ. ಅಸೌಖ್ಯದ ನಿಮಿತ್ತ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಫತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಅವರನ್ನು ಮೂತ್ರ ಕೋಶ ಕಲ್ಲಿನ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಪಿರ್ಯಾದಿದಾರರು ವೈದ್ಯರು ನೀಡಿದ ಸಲಹೆಯಂತೆ ಔಷದಿ ತರಲು ಕೆಳಗಡೆ ಹೋಗಿದ್ದು, ಸಮಯದಲ್ಲಿ ಪಿರ್ಯಾದಿದಾರರ ಮಾವ ಸುಬ್ರಮಣ್ಯ ವಿ ರವರು ಮದ್ಯಾಹ್ನ 1:30 ಗಂಟೆಗೆ ಯಾರಲ್ಲಿಯೂ ಹೇಳದೆ ಆಸ್ಪತ್ರೆಯಿಂದ ಎದ್ದು ಹೊರಗೆ ಹೋದವರು ಕಾಣೆಯಾಗಿದ್ದು ಅವರನ್ನು ಹುಡುಕಾಡಿದರೂ ತನಕ ಪತ್ತೆಯಾಗಿರುವುದಿಲ್ಲ.

 

14.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಗಣೇಶ್ ರವರು ರಿಲಾಯನ್ಸ್‌‌ ಕಮ್ಯುನಿಕೇಷನ್ನಲ್ಲಿ ಕ್ಲಸ್ಟರ್‌‌ ಲೀಡಾಗಿ ಕೆಲಸ ಮಾಡುತ್ತಿದ್ದು ಸದ್ರಿ ಕಂಪೆನಿಯು ಅಳವಡಿಸಿರುವ  ಮೊಬೈಲ್‌‌ ಟವರ್‌‌ ಮತ್ತು ಅದಕ್ಕೆ ಸಂಬಂಧಪಟ್ಟ ಉಪಕರಣಗಳನ್ನು ಮೈಂಟೇನೆನ್ಸ್‌‌ ಮಾಡುವ ಕರ್ತವ್ಯವಾಗಿರುತ್ತದೆ. ದಿನಾಂಕ: 15.11.2014 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿದಾರರು ರಿಲಾಯನ್ಸ್‌‌ ಕಂಪೆನಿಗೆ ಸೇರಿದ ಕುಡುಪಿನಲ್ಲಿರುವ ಟವರ್‌‌ಗೆ ಹೋಗಿ ಅಲ್ಲಿ ಕೆಲಸ ನಿರ್ವಹಿಸಿ ಹೋಗಿದ್ದು ದಿನಾಂಕ: 18.11.2014 ರಂದು ಸಂಜೆ ಕುಡುಪು ಟವರ್‌‌ ಸಿಗ್ನಲ್‌‌ ಆಫ್‌‌ ಆಗಿರುವುದು ತಿಳಿದು ಬಂದ ಮೇರೆಗೆ  ಅದೇ ದಿನ ಸಂಜೆ ಪಿರ್ಯಾದಿದಾರರು  ಹೋಗಿ ಪರಿಶೀಲಿಸಿದಾಗ ಟವರ್‌‌ ಬಳಿ ಇರುವ ಅಲ್ಯೂಮಿನಿಯಂ ಶೆಡ್‌‌ ಒಳಗಡೆ ಇದ್ದ ಬ್ಯಾಟರಿ ಸೆಲ್ಫ್‌‌ನಲ್ಲಿ ಇರಿಸಿದ್ದ 24 ಬ್ಯಾಟರಿಗಳ ಪೈಕಿ 21 ಬ್ಯಾಟರಿಗಳು ಕಳವಾಗಿದ್ದು ತಿಳಿದು ಬಂತು. ಸದ್ರಿ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು  ಮಾಡಿಕೊಂಡು ಹೋಗಿದ್ದು ಕಳವಾದ ಬ್ಯಾಟರಿಗಳ ಅಂದಾಜು ಮೌಲ್ಯ ರೂಪಾಯಿ 21,000/- ಆಗಬಹುದು.

No comments:

Post a Comment