Saturday, November 22, 2014

Daily Crime Reports 22-11-2014

ದೈನಂದಿನ ಅಪರಾದ ವರದಿ.

ದಿನಾಂಕ 22.11.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

7

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

5

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-11-2014 ರಂದು ಮುಂಜಾನೆ 02:00  ಗಂಟೆಗೆ ಪಣಂಬೂರು ದಯಾನಂದ ಎಂಬವರ ಲಕ್ಷ್ಮೀಟ್ರಾನ್ ಟ್ರಕ್ ಟರ್ಮಿನಲ್ ನಲ್ಲಿ ಪಿರ್ಯಾಧಿದಾರರಾದ ಶ್ರೀ ಕಮಲೇಶ್ ಕೌರವ್ ಸಿಂಗ ರವರ ಲಾರಿಯನ್ನು ಪಾರ್ಕಿಂಗ್ ಮಾಡಿದ್ದು, ಅದರ ಕಂಡಕ್ಟರ್ ಆಗಿರುವ ರಾಮ್ ಬಾಬು ಎಂಬವರು ಲಾರಿ ಮುಂದೆ ನೆಲದಲ್ಲಿ ಮಲಗಿದ್ದವರ ಮೇಲೆ ಲಾರಿ ನಂಬ್ರ RJ-23-GA-4243 ನೇ ಲಾರಿಯ ಆಪಾದಿತ ಚಾಲಕ ಅಸ್ಲಾಂ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ರಾಮ್ ಬಾಬುರವರ ಎರಡೂ ಕಾಲುಗಳ ಮೇಲೆ ಲಾರಿಯ ಚಕ್ರಗಳು ಹರಿದು ಹೋದ ಪರಿಣಾಮ 2 ಕಾಲುಗಳು ಗಂಭೀರವಾಗಿ ಮೂಳೆ ಮುರಿತದ ರಕ್ತ ಗಾಯಗೊಂಡು ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಿಸಿರುತ್ತಾರೆ ಮತ್ತು ಆಪಾದಿತ ಚಾಲಕ ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 20.11.2014 ರಂದು ಪಿರ್ಯಾದಿದಾರರಾದ ಶ್ರೀಮತಿ ಸರೀತಾ ರವರು ಸ್ಕೂಟರ್ ನಂಬ್ರ ಕೆಎ.19.ಈಕೆ.5416ನೇದನ್ನು ನಗರದ ಜಿ ಹೆಚ್ ಎಸ್  ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ  ಕಾಮತ್ ಆಂಡ್ ಕೋ ಅಂಗಡಿಯ ಎದುರು ತಲುಪಿದ ಸಮಯ ಬೆಳಿಗ್ಗೆ 10.00 ಗಂಟೆಗೆ ಆಟೋ ರಿಕ್ಷಾ ನಂಬ್ರ  ಕೆಎ.19.ಡಿ.1034ನೇದನ್ನು ಅದರ ಚಾಲಕ ಪಿರ್ಯಾದಿದಾರರ ಎದುರುಗಡೆಯಿಂದ ಅಂದರೆ ಕೃಷ್ಣ ಭವನ್ ವೃತ್ತದ ಕಡೆಯಿಂದ  ಜಿ ಹೆಚ್ ಎಸ್ ರಸ್ತೆಯ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ  ರಸ್ತೆಗೆ ಬಿದ್ದು  ಕುತ್ತಿಗೆಯ ಬಲ ಬದಿಗೆ ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ನಗರದ ತಾರ ಕ್ಲಿನಿಕ್ ನಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-11-2014 ರಂದು ಸುಮಾರು 19-00 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಸತೀಶ್ ಶೆಟ್ಟಿ ರವರು ತನ್ನ ಮೋಟಾರುಸೈಕಲ್ ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಕೆಎ-19-ಇಎಲ್-643 ನಂಬ್ರದ ಮೋಟಾರು ಸೈಕಲ್ ನ್ನು ಅದರ ಸವಾರ ರಿಜೇಶ್ ಎಂಬಾತನು ಸಹಸವಾರನಾಗಿ ಟುನುಪ್ರದಾನ್ ಎಂಬಾತನನ್ನು ಕುಳ್ಳಿರಿಸಿಕೊಂಡು ಬಂಟ್ಸ್ ಹಾಸ್ಟೇಲ್ ಕಡೆಯಿಂದ ಕದ್ರಿ ಪಾರ್ಕ್ ಕಡೆಗೆ ಸವಾರಿಮಾಡಿಕೊಂಡು ಹೋಗುತ್ತಿದ್ದು, ಮಂಗಳೂರು ನಗರ ಕದ್ರಿ ಕಂಬ್ಳ ಜಂಕ್ಷನ್ ಬಳಿ ಸರ್ವೀಸ್ ಸ್ಟೇಷನ್ ಎದುರು ತಲುಪಿದಾಗ ಎದುರಿನಿಂದ ಒಂದು ಅಟೋರಿಕ್ಷಾ ಬರುವುದನ್ನು ಕಂಡು  ರಿಜೇಶ್ ನು ನಿರ್ಲಕ್ಷತನದಿಂದ ಒಮ್ಮೆಲೇ ಬ್ರೇಕ್ ಹಾಕಿದ ಎಡಕ್ಕೆ ತಿರುಗಿಸಿದರ ಪರಿಣಾಮ ಮೋಟಾರು ಸೈಕಲ್ ಬಲಮಗ್ಗುಲಾಗಿ ರಸ್ತೆಗೆ ಬಿದ್ದು, ಸವಾರ ರಿಜೇಶ್ ಮತ್ತು ಮತ್ತು ಸಹಸವಾರರ ಟುನುಪ್ರದಾನ್ ರಸ್ತೆಗೆ ಬಿದ್ದು, ಸವಾರ ರಿಜೇಶ್ ಎರಡೂ  ಕೈಗಳ ಮೊಣಗಂಟಿಗೆ ತರಚಿದ ಗಾಯ ಮತ್ತು ಸಹಸವಾರ ಟುನ್ ಪ್ರದಾನ್ ಬಲಕಾಲಿನ ತೊಡೆಗೆ ಮೂಳೆ ಮುರಿತದ ಗಾಯ, ಬಲಕಾಲಿನ ಹೆಬ್ಬೆರಳಿಗೆ ಮೂಳೆ ಮುರಿತದ ಗಾಯ, ಎಡಕೈ ಮೊಣಗಂಟಿಗೆ ತರಚಿದ ಗಾಯ ಮತ್ತು ಎಡಕಾಲಿಗೆ ಗುದ್ದಿದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು .ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-11-2014 ರಂದು ಸುಮಾರು 13-25 ಗಂಟೆ ಸಮಯಕ್ಕೆ ಮಂಗಳೂರು ನಗರದ ಬಿಕರ್ನಕಟ್ಟೆ ಜಯಶ್ರೀ ಗೇಟ್ ನಲ್ಲಿ ಮಸೀದಿ ಎದುರು ಕೆಎ-45-ಯು-1376 ನಂಬ್ರದ ಮೋಟಾರು ಸೈಕಲ್ ನ್ನು ಅದರ ಸವಾರ ನಂತೂರು ಕಡೆಯಿಂದ ಪಡೀಲ್ ಕಡೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಮಾನವ ಜೀವಕ್ಕೆ  ಹಾನಿಯಾಗುವ ರೀತಿಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಬದಿಯಲ್ಲಿ ಡಿವೈಡರ್ ಬಳಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಾದ ಶ್ರೀ ಸೈಯದ್ ಮುಖಾರಾಮ್ ರವರ ಚಿಕ್ಕಪ್ಪ ಸಯ್ಯದ್ ಮಹಮ್ಮದ್ ಯಾಕೂಬ್ ಎಂಬವರಿಗೆ ಢಿಕ್ಕಿಪಡಿಸಿ ಮೋಟಾರು ಸೈಕಲ್ ನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಅಪಘಾತದಿಂದ ಸಯ್ಯದ್ ಮಹಮ್ಮದ್ ಯಾಕೂಬ್ ರವರ ತಲೆಯ ಹಿಂಬದಿಗೆ ಗುದ್ದಿದ ಗಾಯ ಹಾಗೂ ಮುಖಕ್ಕೆ ತರಚಿದ ಗಾಯ, ಎಡಕಾಲಿಗೆ ಮೂಳೆ ಮುರಿತದ ಗಾಯ ಮತ್ತು ಕೈಗಳಿಗೆ ತರಚಿದ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು .ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20/8/2014 ರಂದು ಸಮಯ ಸುಮಾರು 18:45 ಗಂಟೆಗೆ ಫಿರ್ಯಾದುದಾರರಾದ ಶ್ರೀ ವಿಶ್ನಾಥ್ ರೈ ರವರು ಕಾರು ನಂಬ್ರ KA-19-MB--5225 ನೇ ರಲ್ಲಿ ಹೋಗುತ್ತ  ಕೆ ಪಿ ಟಿ ಜಂಕ್ಷನ ತಲುಪಿ ಮುಂದಕ್ಕೆ ಹೋಗುವರೆ ಸೂಚನೆಗೆ ಕಾಯುತ್ತಿದ್ದ ವೆಳೆ ಫಿರ್ಯಾದುದಾರರ ಕಾರಿನ ಬಲ ಬದಿ ನಿಲ್ಲಿಸಿದ್ದ KA-19-D-4402 ನೇ ಪಿಕ್ ಅಪ್ ವಾಹನವನ್ನು ಅದರ ಚಾಲಕ ನಿರ್ಲಕ್ಷತನದಿಂದ ಓಮ್ಮಲೆ ಮುಂಧಕ್ಕೆ ಚಲಾಯಿಸಿ ಫಿರ್ಯಾದುದಾರ ಕಾರಿಗೆ ಡಿಕ್ಕಿ ಪಡಿಸಿ ಕಾರಿಗೆ ಜಖಂ ಪಡಿಸಿರುತ್ತಾರೆ.

 

6.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20/11/2014 ರಂದು ಸಮಯ ಸುಮಾರು 17:20 ಗಂಟೆಗೆ ಫಿರ್ಯಾದುದಾರರಾದ ರೀಯಾ ಆಶೇಲ್ ಪಿಂಟೋ ರವರು ತನ್ನ ತಾಯಿ ಎಮಿಲ್ಡಾ ಪಿಂಟೋ ಅವರೊಂದಿಗೆ ಕಾರು ನಂಬ್ರ KA-19-MB-6767 ನೇ ದರಲ್ಲಿ ಮಲ್ಲಕಟ್ಟೆ ಕಡೆಯಿಂದ ಬಂದು ಸೆಂಟರ್ ಆಗ್ನೆಸ್ ಸರ್ಕಲ್ ನಲ್ಲಿ ತಿರುಗಿಸಿ ಹಾರ್ಟಿಕಲ್ಚರ್ ಕಡೆಗೆ ಹೋಗುತ್ತಿದ್ದಾಗ KA-20-A-1853  ನೆ ನಂಬ್ರದ ಸಿಟಿ ಬಸ್ಸನ್ನು ಅದರ ಚಾಲಕ ಶಿವಬಾಗ ಕಡೆಯಿಂದ ಆಗ್ನೆಸ್ ಕಡೆಗೆ ಮಾನವ ಜಿವಕ್ಕೆ ಹಾನಿಯಾಗುವ ರಿತಿಯಲ್ಲಿ ಅತೀ ವೇಗ ಮತ್ತು ಅಕಾಗರೂಕತೆಯಿಂದ ಚಲಾಯಿಸಿಕೊಂಡು ಬಂಧು ಫಿರ್ಯಾದುದಾರರ ಕಾರಿನ ಹಿಂಬದಿಗೆ ಡಿಕ್ಕಿ ಮಾಡಿದ ಪರಿಣಾಮ ಕಾರಿನ ಹಿಂಬದಿಗೆ ಜಖಂ ಆಗಿರುತ್ತದೆ.

 

7.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಪ್ರವೀಣ್ಕುಮಾರ್ರವರು ಠಾಣೆಗೆ ಬಂದು ತಾನು ಸುಮಾರು 4 ವರ್ಷಗಳಿಂದ ಮಂಗಳೂರಿನ ಮಠದ ಕಣಿಯಲ್ಲಿರುವ ಫೈನಾನ್ಸ್ಬಡ್ಡಿ ವ್ಯವಹಾರ ಮಾಡುತ್ತಿದ್ದ ರಾಜೇಶ್ಮಾರ್ಟಿಸ್ಎಂಬವರೊಂದಿಗೆ ಬಡ್ಡಿ ವ್ಯವಹಾರ ಮಾಡುತ್ತಿದ್ದು, ತನ್ನ ಸ್ನೇಹಿತರಿಗೆ ಆತನಿಂದ ಹಣ ತೆಗೆಸಿಕೊಡುತ್ತಿದ್ದರು. ದಿನಾಂಕ 21-11-2014 ರಂದು 9-30 ಗಂಟೆಗೆ ರಾಜೇಶ್ಮಾರ್ಟಿಸನು ತನ್ನನ್ನು ಕೆಎಸ್ಆರ್ಟಿಸಿ ಬಳಿಗೆ ಬರುವಂತೆ ಫೋನ್ಮಾಡಿದಂತೆ ಪಿರ್ಯಾದಿದಾರರು ಅಲ್ಲಿಗೆ ತೆರಳಿದಾಗ ಲೋಕೇಶ್ಗಟ್ಟಿಯು ತನ್ನನ್ನು ಕೊಡಿಯಾಲ್ಬೈಲ್ ಯೆನೆಪೋಯ ಆಸ್ಪತ್ರೆಯ ರೂಮ್ನಂಬ್ರ 101ಕ್ಕೆ ಕರೆದುಕೊಂಡು ಹೋಗಿ ಅಲ್ಲಿದ್ದ ರಾಜೇಶ್ಮಾರ್ಟಿಸನು ತನ್ನಿಂದ ಹಣವನ್ನು ತೆಗೆಸಿಕೊಟ್ಟಿದ್ದ 15,00,000/- ರೂ. ಹಣವನ್ನು ಅವರುಗಳಿಂದ ತೆಗೆಸಿಕೊಡುವಂತೆ ಇಲ್ಲದಿದ್ದರೆ ನಿನ್ನ ಮಗನಿಂದ ಹಣ ವಸೂಲು ಮಾಡುತ್ತೇನೆ ಎಂದು ಆರೋಪಿತರುಗಳಾದ ರಾಜೇಶ್ಮಾರ್ಟಿಸ್ಮತ್ತು ಲೋಕೇಶ್ಗಟ್ಟಿ ರವರು ಸಮಾನ ಉದ್ದೇಶದಿಂದ ತಪ್ಪಿದಲ್ಲಿ ನಿನ್ನಿಂದ ವಸೂಲು ಮಾಡುತ್ತೇನೆ ಇಲ್ಲದಿದ್ದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂಬುದಾಗಿ ಫಿರ್ಯಾದಿಯನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದು ವಿಷಯವನ್ನು ತನ್ನ ಪತ್ನಿಯೊಂದಿಗೆ ಚರ್ಚಿಸಿ ತಡವಾಗಿ ಫಿರ್ಯಾದಿ ನೀಡಿರುವುದಾಗಿದೆ.

 

8.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-11-2014 ರಂದು ಬೆಳಿಗ್ಗೆ ಸುಮರು 10:00 ಗಂಟೆಗೆ ವಾಸುದೇವ ಎಂಬವರು ಎಲ್.ಹೆಚ್.ಹೆಚ್. ರಸ್ತೆಯ ಬಳಿ ಇರುವ ನಿರ್ಮಾಣ ಹಂತದ ಕಟ್ಟಡವಾದ ಅಭಿಮಾನ ಹಿಲ್ಸ್ ಕಟ್ಟಡದ ಮುಂಭಾಗದ ಅಂಗಣದಲ್ಲಿ ಕಬ್ಬಿಣದ ಸರಳುಗಳನ್ನು ಬೆಂಡ್ ಮಾಡುತ್ತಿರುವಾಗ ಸುಮಾರು 20 ಮಹಡಿಗಳಷ್ಟು ಎತ್ತರದಿಂದ 3 ಸಿಮೆಂಟಿನ ಬ್ಲಾಕ್ ಗಳು ನೇರವಾಗಿ ವಾಸುದೇವ ರವರ ಎಡ ಭುಜದ ಮೇಲೆ ಮತ್ತು ದೇಹದ ಎಡಭಾಗದ ಮೇಲೆ ಬಿದ್ದ ಪರಿಣಾಮ ವಾಸುದೇವ್ ರವರು ನೆಲಕ್ಕೆ ಕುಸಿದು ಬಿದ್ದು, ಎಡತೋಳಿನ ಬಳಿ, ಸೊಂಟದ ಮೇಲೆ ಗಾಯವಾಗಿ ಸ್ಥಳದಲ್ಲಿ ಪಿರ್ಯಾದಿದಾರರಾದ ಶ್ರೀ ಲಾಲಚಂದ್ ರವರು ಮತ್ತು ಕೆಲಸಗಾರರು ವಾಹನವೊಂದರಲ್ಲಿ ಕುಳ್ಳರಿಸಿ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರಿಕ್ಷೀಸಿದ ವೈದ್ಯರು ಗಾಯಾಳುವಿಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂಬುದಾಗಿ ತಿಳಿಸಿ, ಐಸಿಯು ನಲ್ಲಿ ದಾಖಲಿಸಿದ್ದು, ಗಾಯಾಳು ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಘಟನೆಗೆ ಕಟ್ಟಡದ ಮಾಲಕರು, ಕಟ್ಟಡದ ನಿರ್ಮಾಣದ ಉಸ್ತುವಾರಿ, ಸುಪ್ರವೈಸರ್ ರವರು ನಿರ್ಮಾಣ ಹಂತದ ಕಟ್ಟಡ ಸುತ್ತಲು ಸೆಫ್ಟಿ ನೆಟ್ ಅಳವಡಿಸದೇ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸೂಕ್ತ ವ್ಯವಸ್ಥೆ ಮಾಡದೇ ಇದ್ದ ಪರಿಣಾಮವೇ ಕಾರಣವಾಗಿರುತ್ತದೆ.

 

9.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-11-2014 ರಂದು ಬೆಳಿಗ್ಗೆ ಪ್ರಕರಣದ ಪಿರ್ಯಾದಿದಾರರಾದ ಶ್ರೀ ವೇದಪ್ರಕಾಶ್ ಪಡಿವಾಳ್ ಎಂಬುವರು ತನ್ನ ವಾಸದ ಮನೆಯಾದ ಮಾನ್ಯ ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೊಳಪಟ್ಟ ಮೂಡಬಿದರೆ ಪೊಲೀಸ್ ಠಾಣಾ ಸರಹದ್ದಿನ ವಾಲ್ಪಾಡಿ ಗ್ರಾಮದ ಮಜಲೋಡಿ ಗುತ್ತು ಎಂಬ ಮನೆಯ ಒಳಗೆ ಚಾವಡಿ ಕೊಣೆಯಲ್ಲಿ ತನ್ನ ಪತ್ನಿ ಶ್ರೀಮತಿ ವೈಶಾಲಿ ಎಂಬುವರ ಜೊತೆಯಲ್ಲಿರುವಾಗ್ಯೆ ಆರೋಪಿ ನಿರ್ಮಲ್ ಕುಮಾರ್ ಜೈನ್ ಎಂಬಾತನು ಕೃತ್ಯವನ್ನು ನಡೆಸಬೇಕೆನ್ನುವ ಉದ್ದೇಶದಿಂದಲೇ ಬೆಳಿಗ್ಗೆ ಸುಮಾರು 08:30 ಗಂಟೆಯ ಸಮಯ ಮನೆಯೊಳಗೆ ಗೃಹಾತಿಕ್ರಮಣವನ್ನುವನ್ನು ಮಾಡಿ ಪಿರ್ಯಾದಿದಾರನ್ನು ಉದ್ದೇಶಿಸಿ "ನೀನು ದೊಡ್ಡ ಜನವಾ"ಎಂದು ಅವಾಚ್ಯ ಶಬ್ದದಿಂದ ಬೈದು ಅವಮಾನಪಡಿಸಿದ್ದಲ್ಲದೇ ಕೆನ್ನೆಗೆ ಕೈಯಿಂದ ಥಳಿಸಿ, ತಳ್ಳಿ, ಸೋಂಟೆಯನ್ನು ತೊರಿಸಿ ಕೊಲೆಬೆದರಿಕೆಯನ್ನು ಒಡ್ಡಿ ಹೋಗಿರುತ್ತಾನೆಂದು ಪಿರ್ಯಾದಿದಾರರು ಅಂತರ್ಜಾತಿಯ ವಿವಾಹವನ್ನು ಆಗಿರುವುದೇ ಆರೋಪಿಯು ಕೃತ್ಯವನ್ನು ಮಾಡಿರುವುದಾಗಿದೆ.

 

10.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರೋಹಿಮ್ ರವರು ಕುಳಾಯಿ ಗ್ರಾಮದ ಚಿತ್ರಾಪುರದ ರೆಹೆಜಾ ಯೂನಿವರ್ಸಲ್ ಬಿಲ್ಡರ್ಸ್ ಗೆ ಸಂಬಂಧಿಸಿದ ನಿರ್ಮಾಣ ಹಂತದ ಫ್ಲಾಟ್ ನಲ್ಲಿ ಜೆ ಜೆ ಕನ್ಸ್ಟ್ರ್ ಕ್ಷನ್ ಗೆ ಸಂಬಂಧಿಸಿದ ಕಾಮಗಾರಿಕೆಯಲ್ಲಿ ಮೇಸ್ತ್ರಿಯಾಗಿ ಹಾಗೂ ಅವರಿಗೆ ಸಹಾಯಕನಾಗಿ ಹಮೀಮ್ ರವರು ಕೆಲಸ ಮಾಡುತ್ತಿದ್ದು ದಿನಾಂಕ: 20-11-14 ರಂದು ರಾತ್ರಿ 10-30 ಗಂಟೆಗೆ ಕಟ್ಟಡದ ಹೊರಗಡೆ ಮಾಸ್ ಕ್ಲೈಮಿಂಗ್ ವರ್ಕಿಂಗ್ ಫ್ಲಾಟ್ ಫಾರಂ ಎಂಬ ಲಿಫ್ಟ್ಗೆ ಹತ್ತಿ ಅದರಲ್ಲಿಯೇ ಸಿಮೆಂಟ್, ಮರಳು, ನೀರಿನ ಡ್ರಮ್ ಗಳನ್ನು ಹಾಗೂ ಗಾರೆಗೆ ಸಂಬಂಧಿಸಿದ ಸಾಮಾಗ್ರಿಗಳನ್ನು ಹಾಕಿ ಲಿಫ್ಟ್ ಆಪರೇಟರ್ ರಾಜೇಶ್ ಕುಮಾರ್ ರವರೊಂದಿಗೆ 11ನೇ ಮಹಡಿಗೆ ಹೋಗಿ ಜೆ ಜೆ ಕನ್ಸ್ಟ್ರ ಕ್ಷನ್ ಮಾಲಕರಾದ ಜಾಯ್ ಜಾನ್ ಹಾಗೂ ಸೇಫ್ಟಿ ಆಫೀಸರ್ ಆದ ಆದರ್ಶ ಎಂಬವರು ನೀಡಿದ ಸೂಚನೆಯಂತೆ ಹೊರಗಡೆ ಗಾರೆ ಮಾಡಿ 3ನೇ ಮಹಡಿಗೆ ಬಂದು ಅಲ್ಲಿನ ಪೈಪಿನ ಮೇಲಿದ್ದ ವೇಸ್ಟ್ ಸಿಮೆಂಟ್ ಹುಡಿಗಳನ್ನು ಹಮೀಮ್ ರವರು ಲಿಫ್ಟ್ ಪೂರ್ವ ಬದಿಯಲ್ಲಿ ತೆಗೆಯುತ್ತಿರುವಾಗ ಸದ್ರಿ ಲಿಫ್ಟ್ ಪೂರ್ವ ಬದಿಯಲ್ಲಿ ಗಾರ್ಡ್ ಹಾಗೂ ಸೇಫ್ಟಿ ಬೆಲ್ಟ್ ಧರಿಸದೇ ಇದ್ದ ಕಾರಣ ಹಮೀಮ್ ರವರು ಸುಮಾರು 40 ಅಡಿ ಆಳದ ನೆಲಕ್ಕೆ ಬಿದ್ದು ದೇಹಕ್ಕೆ ಒಳ ಗಾಯವಾಗಿದ್ದವರನ್ನು ಕನ್ಸ್ಟ್ರಕ್ಷನ್ ಮಾಲಕರಾದ ಜಾಯ್ ಜಾನ್ ರವರು ಚಿಕಿತ್ಸೆ ಬಗ್ಗೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿಂದ ಮಂಗಳೂರಿನ ಜೆ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ದಿನಾಂಕ; 21-11-14 ರಂದು 01-05 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಹಮೀಮ್ ರವರು ಮೃತಪಟ್ಟಿದ್ದು  ಕನ್ಸ್ಟ್ರಕ್ಷನ್ ಮಾಲಕರಾದ ಜಾಯ್ ಜಾನ್ ರವರು, ಸೇಫ್ಟಿ ಆಫೀಸರ್ ಆದ ಆದರ್ಶ, ಲಿಫ್ಟ್ ಆಪರೇಟರ್ ರಾಜೇಶ್ ರವರಿಗೆ ತಿಳುವಳಿಕೆ ಇದ್ದು ಅವರು ಸೇಫ್ಟಿ ಬೆಲ್ಟ್ ಹಾಗೂ ಲಿಫ್ಟ್ ಪೂರ್ವ ಬದಿಗೆ ಗಾರ್ಡ್ ಹಾಕದೇ ಮುಂಜಾಗ್ರತೆಯಾಗಿ ಯಾವುದೇ ಕ್ರಮ ಕೈಗೊಳ್ಳದೇ ತೀವ್ರ ತರಹದ ನಿರ್ಲಕ್ಷ್ಯ ವಹಿಸಿದ ಪರಿಣಾಮ ಹಮೀಮ್ ರವರ ಮರಣಕ್ಕೆ ಕಾರಣವಾಗಿರುತ್ತಾರೆ.

 

11.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಶ್ರೀ ಸುರೇಶ್ ಭಟ್ ಬಾಕ್ರಬೈಲು ಜಿಲ್ಲಾಧ್ಯಕ್ಷರು, ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮಂಗಳೂರು ರವರು ದಿನಾಂಕ 19-11-2014 ವಾರ್ತಾ ಭಾರತಿ ಪತ್ರಿಕೆಯ ಪುಟ 2 ರಲ್ಲಿ "ಕರಾವಳಿಯಲ್ಲಿ ಮತ್ತೆ ಕೋಮು ಗಲಭೆಗೆ ಹುನ್ನಾರ" ಎಂಬ ತಲೆಬರಹದಡಿಯಲ್ಲಿ ಪ್ರಕಟವಾದ ಆತಂಕಕಾರಿ ವರದಿ ಹಾಗೂ "ಶ್ರೀರಾಮಸೇನೆ ದಕ್ಷಿಣ ಕನ್ನಡ ಜಿಲ್ಲೆ" ಎಂಬ ತಲೆಬರಹದಡಿಯಲ್ಲಿ ಒಂದು ಚಿತ್ರ ಹಾಗೂ ಕೆಲವು ಮಾಹಿತಿಗಳೊಂದಿಗೆ "ಗೋ ಕಳ್ಳರ ಕೈ ಕಡಿಯಿರಿ" ಎಂದೂ ಹಾಗೂ ಕೆಳಗಡೆ ಎಸ್.ಜೆ.ಶಶಾಂಕ್ ಆಚಾರ್ಯ ಎಂಬವರ ಹೆಸರಿರುವ  ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿರುವ ಒಂದು ಚಿತ್ರವನ್ನೂ ಪ್ರಕಟಿಸಲಾಗಿದ್ದು, ಸದ್ರಿ ಪ್ರಕಟಣೆಯಲ್ಲಿ ಗೋ ಕಳ್ಳರ ಕೈ ಕಡಿಯಿರಿ ಎಂದು ಸಾರ್ವಜನಿಕವಾಗಿ ಅಥವಾ ವಾಟ್ಸ್ ಅಫ್ ಮತ್ತು ಇತರ ಸಾಮಾಜಿಕ ಜಾಲ ತಾಣದ ಮೂಲಕ ಯಾರೋ ಕರೆ ನೀಡುವುದು ಕಾನೂನಿಗೆ ವಿರುದ್ಧವಾಗಿದೆಯಲ್ಲದೇ, ಜನರು ಕಾನೂನುನನ್ನು ಕೈಗೆತ್ತಿಗೊಳ್ಳಲು ಪ್ರಚೋದನಕಾರಿ ಸಂದೇಶವನ್ನು ತಯಾರಿಸಿ ಪ್ರಚೋದನೆಯನ್ನು ನೀಡಿ, ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಕಾರಣಕರ್ತರಾಗಿರುತ್ತಾರೆ ಎಂಬುದಾಗಿ ಪಿರ್ಯಾದಿ ನೀಡಿರುವುದಾಗಿದೆ.

 

12.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ರಾಘವೇಂದ್ರ ರವರು ಬಜಪೆಯಲ್ಲಿ ಅಟೋರಿಕ್ಷಾ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 14-11-2014 ರಂದು ತನ್ನ ಬಾಬ್ತು KA  19 D  4951 ನೇದರಲ್ಲಿ ಬಾಡಿಗೆಗೆಂದು ಬಜಪೆಯಿಂದ ಕರಂಬಾರು ಕಡೆಗೆ ಹೋಗುತ್ತಾ  ಬಜಪೆ ಗ್ರಾಮದ , ಅಂತೋನಿ ಕಟ್ಟೆಯ ಬಳಿಗೆ ತಲುಪುವಾಗ  ಸಂಜೆ ಸುಮಾರು 4-30 ಗಂಟೆ ಸಮಯಕ್ಕೆ ಅವರ ಎದುರಿನಿಂದ ಅಂದರೆ ಕರಂಬಾರು ಕಡೆಯಿಂದ KA 19 ME  5258  ನೇದ್ದನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ತಲೆಗೆ, ಬಲಕಾಲಿಗೆ ಗಾಯವಾದುದಲ್ಲದೇ , ಅಟೋರಿಕ್ಷಾ ಜಖಂ ಗೊಂಡಿರುತ್ತದೆ.

 

13.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-11-2014 ರಂದು ಬೆಳಿಗ್ಗೆ 09-00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಪವನ್ ನೆಜ್ಜೂರು ರವರು ಉಳ್ಳಾಲ ಪೊಲೀಸ್ಠಾಣಾ ವ್ಯಾಪ್ತಿಯ ತಲಪಾಡಿ ಪೆಟ್ರೋಲ್ಪಂಪ್ಬಳಿ ಒಬ್ಬ ವ್ಯಕ್ತಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಆದಾರಿಸಿ ಅಲ್ಲಿಗೆ ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಜೊತೆಯಲ್ಲಿ ಕರೆದುಕೊಂಡು ಇಲಾಖಾ ಜೀಪಿನಲ್ಲಿ ಹೋಗಿ ದಾಳಿ ನಡೆಸಿದಾಗ ಸಮಯ 10.00 ಗಂಟೆಗೆ ತಲಾಪಾಡಿ ಪೆಟ್ರೋಲ್‌‌ ಪಂಪ್ಬಳಿಯಿಂದ ಒಬ್ಬ ವ್ಯಕ್ತಿ ಕೈಯಲ್ಲಿ ಪ್ಲಾಸ್ಟಿಕ್ಲಕೋಟೆ ಹಿಡಿದುಕೊಂಡು ನಿಂತಿದ್ದು ಆತನನ್ನು ಹಿಡಿದು, ವಿಚಾರಿಸಲಾಗಿ  ನಿಯಾಝ್ಅಹಮ್ಮದ್‌‌ @ ನಿಯಾಝ್‌ @ ರಫೀಕ್ಪ್ರಾಯ 32/2014, ವರ್ಷ ತಂದೆ ನೂರ್ಮಹಮ್ಮದ್‌, ವಾಸ ಕ್ಯಾರಾಫ್ಅಬ್ದುಲ್ಕಾದರ್‌, ಬಂಗ್ಲ ಪ್ಲಾಟ್‌, 1ನೇ ಮಹಡಿ, ಕೈಕಂಬ, ಉಪ್ಪಳ, ಮಂಜೇಶ್ವರ ವಯಾ, ಕಾಸರಗೋಡು ತಾಲೂಕು ಮತ್ತು ಜಿಲ್ಲೆ. ಕೇರಳ ರಾಜ್ಯ ಎಂಬುವುದಾಗಿ ತಿಳಿಸಿದ್ದು. ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ಲಕೋಟೆಯ ಬಗ್ಗೆ ವಿಚಾರಿಸಿದಾಗ ಆತನು  ಗಾಂಜಾ ತುಂಬಿಸಿದ ಪ್ಯಾಕೇಟ್ಇರುವುದಾಗಿ ತಿಳಿಸಿದ ಮೇರೆಗೆ ಆತನ ಅಂಗಜಪ್ತಿ ಮಾಡಲಾಗಿ 4 ಗ್ರಾಂ ತೂಕದ ಸಣ್ಣ ಪಾಕೇಟ್ಗಳು ಒಟ್ಟು 10 ಪ್ಯಾಕೇಟ್ಗಳು ಇನ್ನೊಂದು ಪ್ಲಾಸ್ಟಿಕ್ಲಕೋಟೆಯಲ್ಲಿ ಸುಮಾರು 245 ಗ್ರಾಂ ತೂಕದ ಗಾಂಜವು ಇರುತ್ತದೆ. ಗಾಂಜಾವನ್ನು  ಮಾರಾಟ ಮಾಡಿ ಸಂಪದಿಸಿದ 300 ರೂಪಾಯಿ ಹಾಗೂ ಗಿರಾಕಿಗಳಿಗೆ ಪೊನ್ ಕರೆ ಮಾಡಲು ಉಪಯೋಗಿಸಿದ 2 ಮೊಬೈಲ್ ಗಳು, ಯಾರಾದರೂ ಅಪರಿಚಿತರು ಹಿಡಿಯಲು ಬಂದರೆ ಅವರ ಮೇಲೆ ಹಲ್ಲೆ ಮಾಡಲು ಉಪಯೋಗಕ್ಕಾಗಿ ಇಟ್ಟ ಚೂರಿಯನ್ನು ಸ್ವಾದೀನಪಡಿಸಲಾಗಿದೆ.

 

14.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20.10.2014 ರಂದು ರಾತ್ರಿ ದೆಮ್ಮಲೆ ಬೊಟ್ಟು ಮನೆ ಮಲ್ಲೂರು ಎಂಬಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಶಾಂಭವಿ ಕೆ. ಆಳ್ವ ರವರು ಮತ್ತು ತನ್ನ ತಾಯಿ ಶ್ರೀಮತಿ ಶಾಂತ ರೈ ರವರು ಎಂದಿನಂತೆ ರಾತ್ರಿ ಊಟ ಮಾಡಿ, ಟಿವಿ ನೋಡಿ ಮಲಗಿದ್ದು ಮಧ್ಯರಾತ್ರಿ ಸುಮಾರು 02.00 ಗಂಟೆಗೆ ಪಿರ್ಯಾದಿದಾರರು ಹಾಸಿಗೆಯಿಂದ ಎದ್ದಾಗ ಪಿರ್ಯಾದಿದಾರರ ತಾಯಿ ಮಲಗಿರುವ ಕೋಣೆಯಲ್ಲಿ  ಯಾರೋ ಜನರು ಮಾತನಾಡುವ ಶಬ್ದ ಕೇಳಿಬಂದಿದ್ದು ಕೂಡಲೇ ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಸದ್ರಿ ಕೋಣೆಯಲ್ಲಿದ್ದ  ಮೂರು ಜನ ಗಂಡಸರು ಕೋಣೆಯಿಂದ ಹೊರಗಡೆ ಓಡಿ ಹೋಗಿರುತ್ತಾರೆ, ಅವರುಗಳು ಓಡಿ ಹೋದ ನಂತರ ಪಿರ್ಯಾದಿದಾರರು ಮನೆಯೊಳಗೆ ನೋಡಿದಾಗ ಮನೆಯೊಳಗಿನ ಒಂದು ಬೆಡ್‌‌ ರೂಮ್ನಲ್ಲಿದ್ದ  ಕಪಾಟಿನ ಬಟ್ಟೆ ಚೆಲ್ಲಾಪಿಲ್ಲಿಯಾಗಿದ್ದು  ನೋಡಲಾಗಿ ಕಪಾಡಿನಲ್ಲಿ ಇಟ್ಟಿದ್ದ ಪಿರ್ಯಾದಿದಾರರ ಬಾಬ್ತು 4 ಪವನಿನ ಚಿನ್ನದ ಸರ, 3 ಪವನಿನ 2 ಚಿನ್ನದ ಬಳೆಗಳು, ಒಂದು ಸ್ಯಾಮ್‌‌ಸಂಗ್‌‌ ಮೊಬೈಲ್‌‌ ಸೆಟ್‌‌, ಸಿಮ್‌‌ ನಂಬ್ರ: 8197806718 ಮತ್ತು 18000 ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರ ಹಾಗೂ ಕಪಾಟಿನ ಒಳಗಡೆ ಕೈಚೀಲದಲ್ಲಿದ್ದ 25000/- ರೂ ನಗದು ಹಣ ಕಾಣೆಯಾಗಿದ್ದು ಇವುಗಳನ್ನು  ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ,  ಕಳವಾದ ಚಿನ್ನದ ಸರ ಮತ್ತು ಬಳೆಗಳ ಬೆಲೆ ಸುಮಾರು 1,40,000/- ಆಗಬಹುದು, ಕಳ್ಳರು  ಮನೆಯ ಹಂಚು ತೆಗೆದು ಒಳಗೆ ಬಂದು ಕಳವು ಮಾಡಿರುತ್ತಾರೆ.

No comments:

Post a Comment