Tuesday, December 31, 2013

Daily Crime Reports 31.12.2013

ದೈನಂದಿನ ಅಪರಾದ ವರದಿ.

ದಿನಾಂಕ 31.12.201316:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

2

ರಸ್ತೆ ಅಪಘಾತ  ಪ್ರಕರಣ

:

10

ವಂಚನೆ ಪ್ರಕರಣ

:

1

ಮನುಷ್ಯ ಕಾಣೆ ಪ್ರಕರಣ

:

4

ಹಲ್ಲೆ ಪ್ರಕರಣ

:

0

ದನ ಕಳವು ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌  ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ:  ದಿನಾಂಕ: 30.12.2013 ರಂದು ಪಿರ್ಯಾದುದಾರರಾದ ದಾಮೋದರ ಎಂಬವರು ತಮ್ಮ ಬಾಬ್ತು ಆಟೋರಿಕ್ಷಾದೊಂದಿಗೆ ಮಂಗಳೂರು ನಗರದ ಕೊಟ್ಟಾರ ಕ್ರಾಸ್ ರಿಕ್ಷಾ ಪಾರ್ಕಿಂಗ್ ನಲ್ಲಿ ಬಾಡಿಗೆಗಾಗಿ ಕಾಯುತ್ತಿರುವ ಸಮಯ ಮಧ್ಯಾಹ್ನ 2:00 ಗಂಟೆ ಸಮಯಕ್ಕೆ ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಕೊಟ್ಟಾರ ಕ್ರಾಸ್ ಕಡೆಗೆ KA-19-EB-476 ನೇ ನಂಬ್ರದ ಆಕ್ಟೀವಾ ಹೋಂಡಾ ಸ್ಕೂಟರನ್ನು ಅದರ ಸವಾರ ಜಯಪಾಲ್ ಹೆಗ್ಡೆ ಎಂಬವರು ಚಲಾಯಿಸಿಕೊಂಡು ಕೊಟ್ಟಾರ ಕ್ರಾಸ್ ಜಂಕ್ಷನಿಗೆ ಬರುತ್ತಿದ್ದಂತೆ ಸದ್ರಿ ಸ್ಕೂಟರ್ ಸವಾರರ ಹಿಂದಿನಿಂದ ಅಂದರೆ ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಕುಂಟಿಕಾನ ಕಡೆಗೆ KA-19-AA-144 ನೇ ನಂಬ್ರದ ಬಸ್ಸನ್ನು ಅದರ ಚಾಲಕ ಪ್ರದೀಪ್ ಎಂಬವರು ಅತೀವೇಗ ಮತ್ತು ತೀರಾ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕೊಟ್ಟಾರ ಕ್ರಾಸ್ ಜಂಕ್ಷನ್ನಿನಲ್ಲಿ ರಸ್ತೆಯು ಬಹಳಷ್ಟು ಅಗಲವಿದ್ದರೂ ಸದ್ರಿ ಸ್ಕೂಟರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸದ್ರಿ ಸ್ಕೂಟರ್ ಸವಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ತಲೆಯು ಸದ್ರಿ ಬಸ್ಸಿನ ಎಡಬದಿಯ ಹಿಂಬದಿಯ ಚಕ್ರಕ್ಕೆ ಸಿಲುಕಿಕೊಂಡು ಗಂಭೀರ ಸ್ವರೂಪದ ಗಾಯಗೊಂಡವರನ್ನು ಬಸ್ಸಿನ ಚಾಲಕರು ಚಿಕಿತ್ಸೆಯ ಬಗ್ಗೆ ನಗರದ ಎ.ಜೆ ಆಸ್ಪತ್ರೆಗೆ ಸಾಗಿಸುವ ಸಮಯ ಮೃತಪಟ್ಟಿರುತ್ತಾರೆ.

 

2.ಉರ್ವಾ ಪೊಲೀಸ್‌  ಠಾಣೆಯಲ್ಲಿ ವರದಿಯಾದ ಹುಡುಗಿ ಕಾಣೆ ಪ್ರಕರಣ:  ದಿನಾಂಕ 22-12-2013 ರಂದು ಶ್ವೇತಾ ವಿ.ಜೆ. ಎಂಬವರು ಕಾರ್ಯ ನಿರ್ವಹಿಸುತ್ತಿರುವ ಮಂಗಳೂರು ನಗರದ ಬಿಜೈ ಕಾಪಿಕಾಡ್, ಚಿಣ್ಣರ ತಂಗುಧಾಮ ಕೇಂದ್ರದ ಸಂಸ್ಥೆಗೆ ಮಕ್ಕಳ ಕಲ್ಯಾಣ ಸಮಿತಿಯವರು ರೇಣುಕಾ ಪ್ರಾಯ 14 ವರ್ಷ, ತಂದೆ: ರಾಜು, ವಾಸ ಕಾಟಿಗುಡ್ಡೆ, ಹೈದ್ರಾಬಾದ್, ಆಂಧ್ರಪ್ರದೇಶ ಎಂಬಾಕೆಯನ್ನು ಸಂರಕ್ಷಣೆ ಹಾಗೂ ಸಂಸ್ಥೆಗೆ ಸೇರಿಸಲು ತಂದು ಕೊಟ್ಟಿದ್ದು, ಈ ದಿನ ದಿನಾಂಕ 30-12-2013 ರಂದು  ಬೆಳಿಗ್ಗೆ ಸುಮಾರು 10:00 ಗಂಟೆಗೆ ಬಟ್ಟೆ ತೊಳೆಯುತ್ತೇನೆ ಎಂದು ಹೋದವಳು ಈ ತನಕ ಬಾರದೆ ಕಾಣೆಯಾಗಿರುತ್ತಾರೆ.

 

3.ಬರ್ಕೆ ಪೊಲೀಸ್‌  ಠಾಣೆಯಲ್ಲಿ ವರದಿಯಾದ ಅಕ್ರಮ ಗಾಂಜಾ ಪ್ರಕರಣ:  ದಿನಾಂಕ 30-12-2013ರಂದು ಸಂಜೆ 14-08 ಗಂಟೆಯಿಂದ 16-12 ಗಂಟೆಯ ಮದ್ಯೆ ಮಂಗಳೂರು ನಗರದ ಜಿಲ್ಲಾ ಕಾರಾಗೃಹದ ಪಶ್ಚಿಮ ಬದಿಯ ಕಂಪೌಂಡು ಗೋಡೆಯ ಹೊರಗಡೆಯಿಂದ ಅಂದರೆ ಕೆನರಾ ಕಾಲೇಜ್ಆವರಣದ ಬದಿಯಿಂದ ಸುಮಾರು 300ಗ್ರಾಂ ನಷ್ಟು ಗಾಂಜಾವನ್ನು ಪ್ಲಾಸ್ಟಿಕ ಲಕೋಟೆಯಲ್ಲಿ ತುಂಬಿ ಕಾರಾಗೃಹದ ಕಿಂಡಿಯ ಮುಖೇನ ಕೆಂಪು ಬಣ್ಣದ ಬಟ್ಟೆಯ ಚೂರಿನಿಂದ ಎಳೆಯುತ್ತಿದ್ದಾಗ ಹಗ್ಗ ತುಂಡಾಗಿ ಕಾರಾಗೃಹದ ಪಶ್ಚಿಮ ಬದಿಯ ಆವರಣದೊಳಗೆ ಬಿದ್ದಿದ್ದು ಇದನ್ನು ಕಾರಾಗೃಹದ ಸ್ವೀಪರ್ಸಿಬ್ಬಂದಿಯಾದ ಶ್ರೀಮತಿ ಜಮಲವ್ವ ಹಾಗೂ ಇತರ ಸಿಬ್ಬಂದಿಗಳು ನೋಡಿದ್ದು ಇದನ್ನು ಮುಂದಿನ ಕ್ರಮದ ಬಗ್ಗೆ ಬರ್ಕೆ ಠಾಣಾ ಪಿಸಿಆರ್ಸಿಬ್ಬಂದಿಯವರಿಗೆ ವರದಿಯೊಂದಿಗೆ ನೀಡಿರುವದಾಗಿದೆ. ಈ ಗಾಂಜಾದ ಕಟ್ಟನ್ನು ಯಾರೋ ಅಪರಿಚಿತ ವ್ಯಕ್ತಿಗಳು ಜೈಲಿನೊಳಗಿನ ಖೈದಿಗಳಿಗೆ ಅವರುಗಳ ನೀಡಿದ ಮಾಹಿತಿಯಂತೆ ಈ ರೀತಿ ಅನಧಿಕೃತವಾಗಿ ಜೈಲಿನೊಳಗೆ ಸಾಗಾಟ ಮಾಡಲು ಪ್ರಯತ್ನಿಸಿರುವುದಾಗಿದೆ.

 

4.ಮುಲ್ಕಿ ಪೊಲೀಸ್‌  ಠಾಣೆಯಲ್ಲಿ ವರದಿಯಾದ ವಂಚನೆ ಪ್ರಕರಣ:  ಪಿರ್ಯಾದಿದಾರರು ಶ್ರೀಮತಿ ಲೊರೆಟ್ಟಾ ಸೀಮಾ ಮಸ್ಕರೇನಸ್ ಎಂಬವರು ಮದುವೆಗಾಗಿ ಸಂಬಂಧ ಹುಡುಕುತ್ತಿರುವಾಗ ಆರೋಪಿಯವರ ಕಡೆಯಿಂದ ಸಂಬಂಧ ಬಂದ ಮೇರೆಗೆ 1 ನೇ ಆರೋಪಿ ಪೆಟ್ರಿಕ್ ರೋಹನ್ ದಾಂತೀಸ್ ರವರ ತಂದೆ 2 ನೇ ಆರೋಪಿ ಪಾಸ್ಕಲ್ ದಾಂತೀಸ್ 3 ನೇ ಆರೋಪಿ ತಾಯಿ ರೆನ್ನಿ ದಾಂತೀಸ್  ಹಾಗೂ ತಮ್ಮ 4 ನೇ ಆರೋಪಿ ಪ್ರಾಸ್ಟನ್ ದಾಂತೀಸ್ ರವರು ಕೂಡಾ ಸೇರಿ ನಿಶ್ಚಿತಾರ್ಥ ದಿನ ನಿಗದಿಪಡಿಸಿರುತ್ತಾರೆ. ಈ ಸಮಯದಲ್ಲಿ 1 ನೇ ಆರೋಪಿಗೆ ಬೇರೊಂದು ಮದುವೆಯಾಗಿ ಮಗುವಿದೆ ಎಂಬ ವಿಷಯವನ್ನು ಇತರ ಆರೋಪಿಯವರು ಕೂಡಾ ಸೇರಿ ಮುಚ್ಚಿಟ್ಟು ವಂಚಿಸಿರುತ್ತಾರೆ. ಅಲ್ಲದೇ ದಿನಾಂಕ 20-03-2013 ರಂದು ಆರೋಪಿ 1 ನೇ ಯವರು ಪಿರ್ಯಾದಿದಾರರನ್ನು ವಿದೇಶಕ್ಕೆ ಕರೆದುಕೊಂಡು ಹೋಗುವೆನೆಂದು ನಂಬಿಸಿ ವಿವಾಹ ನೊಂದಾಣಿ ಸಹ ಮಾಡಿರುತ್ತಾನೆ. ನಿಶ್ಚಿತಾರ್ಥಕ್ಕೆ ರೂ 1,00,000/- ಮಿಕ್ಕಿ ವೆಚ್ಚವಾಗಿರುವುದಾಗಿಯೂ ಅಲ್ಲದೇ ಇದೇ ವೇಳೆ ರೂ 50,000/- ನ್ನು ನಗದಾಗಿ ಆರೋಪಿಗಳು ಪಡೆದುಕೊಂಡು ಪಿರ್ಯಾದಿಗೆ ವಂಚಿಸಿರುತ್ತಾರೆ.

 

5. ಪಣಂಬೂರು ಪೊಲೀಸ್‌  ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ:  ದಿನಾಂಕ. 30-12-2013 ರಂದು ಪಿರ್ಯಾದಿದಾರರಾದ ಪ್ರಭಾತ್ ರಾಜ್ ರವರು ತನ್ನ ಮಾರುತಿ ಕಾರು  ಕೆ.. 20 ಪಿ. 8163 (ಎಸ್ಎಕ್ಸ್4 ಝೆಡ್ ಡಿ.)ನೇದ್ದರಲ್ಲಿ ಮಂಗಳೂರು ಉರ್ವಾದಿಂದ ಉಡುಪಿ ಮನೆ ಕಡೆಗೆ ರಾ.ಹೆ. 66ರಲ್ಲಿ ಹೋಗುತ್ತಿದ್ದು ಪಣಂಬೂರು ವಿಷ್ಣು ಸರ್ವೀಸ್ ಸ್ಟೇಷನ್ ಎದುರು ತಲುಪುತ್ತಿದ್ದಂತೆ ಎದುರುನಿಂದ ಲಾರಿಯೊಂದು ಪೆಟ್ರೋಲ ಬಂಕ್ ನಿಂದ ರಸ್ತೆ ಪ್ರವೇಶಿಸುವುದನ್ನು ಕಂಡು ಕಾರನ್ನು ರಸ್ತೆಯ ಎಡ ಬದಿ ನಿಲ್ಲಿಸಿದ್ದು ಈ ವೇಳೆಗೆ ವಿಶಾಲ್ ಬಸ್ಸುಕೆ ಎ 19 ಸಿ-6851 ನೇದರ ಚಾಲಕ ಅಬ್ದುಲ್ ಅಜೀಜ್ ನು ಅತೀ ವೇಗ ಹಾಗೂ ಅಜಾರುಕತೆಯಿಂದ ಚಲಾಯಿಸಿ ಕಾರಿನ ಹಿಂಬದಿಗೆ ಬಲವಾಗಿ ಡಿಕ್ಕಿ ನಡೆಸಿ ಜಖಂಗೊಳಿಸಿದಲ್ಲದೇ ಮುಂದುಗಡೆಯಿದ್ದ ಲಾರಿಗೂ ಕೂಡಾ ಜಖಂಗೊಳಿಸಿದ್ದು ಲಾರಿ ನಂಬ್ರ - ಕೆ ಎ 19 ಎ ಡಿ 9958 ಆಗಿರುತ್ತದೆ.  ಅಪಘಾತ ನಡೆಸಿದ ಬಸ್ಸು ಕೆ ಎ19 ಸಿ 6851 ನೇದ್ದರ ಚಾಲಕ ಅಬ್ದುಲ್ ಅಜೀಜ್ ನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದಿ.

 

6. ಕಾವೂರು ಪೊಲೀಸ್‌  ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ:  ಪಿರ್ಯಾದುದಾರರಾದ ಕಸ್ತೂರಿ ಎಂಬವರು ತನ್ನ ಗಂಡ ನಾಗೇಶ್.ಕೆ  ಎಂಬವರ ಜೊತೆಯಲ್ಲಿ ಬೈಕ್ ನಂಬ್ರ ಕೆಎ-19-ವೈ-7372 ನೇಯದರಲ್ಲಿ ಸಹಸವಾರಳಾಗಿ ಬೆಳಿಗ್ಗೆ ಮನೆಯಿಂದ ಮದುವೆಯ ಪ್ರಯುಕ್ತ ಕಾವೂರಿಗೆ ಹೊರಟು ಅತೀ ವೇಗ ಮತ್ತು ಅಜಾಗರೂಕತೆಯಿಂದ  ಸಂಚಾರಿಸಿಕೊಂಡು ಬರುತ್ತಾ ಕಾವೂರು ಠಾಣಾ ಸರಹದ್ದಿನ  ಬಂಗ್ರಕೂಳೂರು ಗ್ರಾಮದ ಕೂಳೂರು ಸೇತುವೆಯ ತುದಿಗೆ ತಲುಪುವಾಗ ಮಧ್ಯಾಹ್ನ 1-15 ಗಂಟೆಗೆ ಸೇತುವೆಯ ರಸ್ತೆಯಲ್ಲಿನ ಗುಂಡಿಗೆ ಬೈಕ್ ಬಿದ್ದು ಆರೋಪಿತ  ಪಿರ್ಯಾದಿಯ ಗಂಡ ನಾಗೇಶ್.ಕೆ ರವರ ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಪಿರ್ಯಾದಿದಾರರ ಸೊಂಟಕ್ಕೆ ಗುದ್ದಿದ ನಮೂನೆಯ ಬಾರಿ ನೋವು ಒಂಟಾಗಿರುವುದಾಗಿ ತನ್ನ ಪತಿಗೆ ಸಾಮಾನ್ಯ ಸ್ವರೂಪದ ಗಾಯವಾಗಿರುವುದಾಗಿದೆ.

 

7. ಕಾವೂರು ಪೊಲೀಸ್‌  ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ:  ದಿನಾಂಕ 30-12-2013 ರಂದು ಬೆಳ್ಳಿಗೆ ಸುಮಾರು 11-30 ಗಂಟೆ ಸಮಯಕ್ಕೆ ಪಿರ್ಯಾಧುದಾರರಾದ ಕುಮಾರಿ ಸಿಂತಿಯಾ ತನ್ನ ಅಣ್ಣನ ಮಗಳಾದ ಫ್ಲೇವಿಯಾ ಸ್ವಾರಿಸ್ ಎಂಬವರ ಜೊತೆ ಹೊವಿನ ಮಾರಾಟಕ್ಕೆಂದು ದೇರೆಬೈಲು ಗ್ರಾಮದ ಕೊಟ್ಟಾರಚೌಕಿ ಸಮೀಪ ಕಾವೇರಿ ಪೋರ್ಡ್  ಕಂಪೆನಿಯ ಮುಂಬಾಗ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ನಡೆದುಕೊಂಡು ಕೂಳೂರು ಕಡೆ ಹೋಗುತ್ತಿರುವಾಗ ತನ್ನ ಮುಂದಿನಿಂದ ಅಂದರೆ ಕೂಳೂರು ಕಡೆಯಿಂದ  ಬೈಕ್ ನಂಬ್ರ ಕೆಎ-19-ಇಎಚ್-3649 ನೇ ಯದನ್ನು ಅದರ ಸವಾರ ಹಿತೇಶ್ ಎಂಬವರು ಸಹಸವಾರ ಅಭಿನಂದನ್ ಜೊತೆ ಅತೀ  ವೇಗ ಮತ್ತು ಅಜಾರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿ ಮತ್ತು ಅವರ ಜೊತೆಗೆ ಇದ್ದ ಫ್ಲೇವಿಯಾ ಸ್ವಾರಿಸ್ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಸೊಂಟಕ್ಕೆ , ಬಲಕಾಲಿನ ಹಿಂಬದಿಗೆ ಗುದ್ದಿದ ನೋವು ಆಗಿದ್ದು, ಫ್ಲೇವಿಯಾ ಸ್ವಾರಿಸ್ವರಿಗೆ  ಎಡಕಾಲಿನ ಮೊಣಗಂಟಿಗೆ ಗುದ್ದಿದ ರಕ್ತಗಾಯ ವಾಗಿರುವುದಲ್ಲದೆ, ಅಪಾದಿತ ಸವಾರ ಮತ್ತು ಸಹಸವಾರನಿಗೆ ಗಾಯವಾಗಿರುತ್ತದೆ.

8. ಕಾವೂರು ಪೊಲೀಸ್‌  ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ:  ದಿನಾಂಕ 30-12-2013 ರಂದು ಫಿರ್ಯಾಧುದಾರರಾದ ಶ್ರೀ ವೇಣುಗೋಪಾಲ್ ರವರು ತನ್ನ ಬಾಬ್ತು ಕೆಎ-19-ಕ್ಯೂ-4670ನೇ ಮೋಟಾರು ಸೈಕಲ್ ನಲ್ಲಿ ಕೂಳೂರಿನಿಂದ ತನ್ನ ಮನೆಯ ಕಡೆ ಬರುತ್ತಿರುವಾಗ ಶಾಂತಿನಗರ ಬಸ್ಸು ನಿಲ್ದಾಣದ ಬಳಿ ತನ್ನ ಪರಿಚಯದ ಚೇತನ್ ರವರು ಕಾಣಸಿಕ್ಕಿ ಅವರನ್ನು ತನ್ನ ಮೋಟಾರು ಸೈಕಲ್ ನಲ್ಲಿ ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ರಾತ್ರಿ 20-00 ಗಂಟೆಗೆ ಶಾಂತಿನಗರದ ಕಾವೂರು ಪೊಲೀಸ್ ಠಾಣೆಯ ಬಳಿ ತಲುಪಿದಾಗ ಎದುರಿನಿಂದ ಕೂಳೂರು ಕಡೆಗೆ ಕೆಎ-19-ಬಿ-8373ನೇ ಕಾರಿನ ಚಾಲಕನು ತನ್ನ ಬಾಬ್ತು ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧುದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾಧುದಾರರು ಮತ್ತು ಸಹ ಸವಾರ ಚೇತನ್ ರವರು ಮೋಟಾರು ಸೈಕಲ್ ಸಮೇತಾ ರಸ್ತೆಗೆ ಬಿದ್ದು, ಫಿರ್ಯಾಧುದಾರರ ಮುಂದಲೆಯ ಬಳಿ, ತಲೆಯ ನೆತ್ತಿಯ ಮೇಲೆ, ಬಲಕಾಲಿನ ಮೊಣಗಂಟಿನ ಬಳಿ, ಪಾದದ ಬಳಿ ರಕ್ತಗಾಯವಾಗಿದ್ದು, ಚೇತನ್ ರವರಿಗೆ ಎಡಕಾಲಿನ ಮೊಣಗಂಟಿನ ಬಳಿ ಗುದ್ದಿದ ಗಾಯವಾಗಿದ್ದು, ಮತ್ತು ಮೈಗೆ ತರಚಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಎ.ಜೆ.ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ..

 

9. ಮಂಗಳೂರು ದಕ್ಷಿಣ ಠಾಣೆಯಲ್ಲಿ ವರದಿಯಾದ ಮನುಷ್ಯ ಕಾಣೆ ಪ್ರಕರಣ: ದಿನಾಂಕ 30-12-2013 ರಂದು ರಾತ್ರಿ ಸಮಯ ಜೊಸೆಫ್ ಫೆರ್ನಾಂಡಿಸ್ ರವರ ಬಾಬ್ತು ಜಗವ ಕೃಷ್ಣ ಎಂಬ ಹಾಯಿ ಹಡಗಿನಲ್ಲಿ ಕೆಲಸ ಮಾಡುತ್ತಿರುವ ಮದನ್ ಪ್ರಾಯ 27 ವರ್ಷ ಎಂಬವರು ಕೆಲಸ ಮಾಡಿ ಮಂಜಿಯ ಮೇಲೆ ನಿದ್ರಿಸುತ್ತಿದ್ದವರು, ಇದ್ದಕಿದಂತೆ ಕಾಣೆಯಾಗಿರುತ್ತಾರೆ. ಅವರ ಚಪ್ಪಲಿ ಹಾಗೂ ಮೊಬೈಲ್ ಸ್ಥಳದಲ್ಲಿ ದೊರಕಿದ್ದು, ಮದನ್ ರವರು ನಾಪತ್ತೆಯಾಗಿರುತ್ತಾರೆ.

 

10. ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಮನುಷ್ಯ ಕಾಣೆ ಪ್ರಕರಣ: ಫಿರ್ಯಾದಿದಾರರಾದ ಶ್ರೀಮತಿ ಕವಿತಾ ಶೆಣೈ ರವರ ಗಂಡನವರು ಸುಮಾರು 2 ವರ್ಷಗಳಿಂದ ಮಾಯಾ ದರ್ಶಿನಿ ಹೋಟೇಲಿನಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 02.11.2013  ರಂದು ಎಂದಿನಂತೆ ಬೆಳಿಗ್ಗೆ 11.30 ಗಂಟೆಗೆ ಮನೆಯಿಂದ ಮಾಯಾ ದರ್ಶಿನಿ ಹೊಟೇಲಿಗೆ ಹೋದವರು ವಾಪಾಸು ರಾತ್ರಿ 23.30 ಗಂಟೆಗೆ ನಂತರ ಮನೆ ಬಿಟ್ಟು ಹೋದವರು ಕೆಲಸಕ್ಕೂ ಹೋಗದೇ ನೆಂಟರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.

 

11. ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ: 29-12-2013 ರಂದು ಸಿಐಎಸ್ಎಫ್ ಇನ್ಸ್ ಪೆಕ್ಟರ್ ರವರಾದ ಶ್ರೀ ಬಿ.ಜಿ. ಅಪ್ಪಚ್ಚು ರವರು ರಾತ್ರಿ ಸಮಯ 03-00 ಗಂಟೆಗೆ ರೌಂಡ್ಸ್ ನಲ್ಲಿರುವಾಗ ಬಜ್ಪೆ-ಸುರತ್ಕಲ್ ರಸ್ತೆಯಲ್ಲಿರುವ ವಿಕೆಟ್ ಗೇಟ್ ಬಳಿ ಕೆಎ-04-ಎಂ-6205ನೇ ಕೆಂಪು ಬಣ್ಣದ ಮಾರುತಿ 800 ಕಾರೊಂದು ಸಂಶಯಾಸ್ಪದ ರೀತಿಯಲ್ಲಿ ನಿಂತಿದ್ದು ಸದ್ರಿ ಇನ್ಸ್ ಪೆಕ್ಟರ್ ರವರು ಕಾರಿನ ಬಳಿ ವಿಚಾರಣೆಗೆ ತೆರಳಿದಾಗ ಕಾರಿನಲ್ಲಿದ್ದ 3 ಜನ ಅಪರಿಚಿತರು ಹತ್ತಿರದ ಕಾಡು ಪ್ರದೇಶದಲ್ಲಿ ಓಡಿ ಹೋಗಿದ್ದು, ಸದ್ರಿ ವ್ಯಕ್ತಿಗಳು ಈ ಹಿಂದೆ ಎಂಆರ್ ಪಿಎಲ್ ಸೈಟ್ ನಿಂದ ಇದೇ ಕಾರಿನಲ್ಲಿ ಕಳವು ಮಾಡಿದ ಬಗ್ಗೆ ಮಾಹಿತಿ ಇದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕಾಗಿ ನೀಡಿದ ಪಿರ್ಯಾದಿ.

 

12. ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ: 29-12-13 ರಂದು ಪಿರ್ಯಾದಿದಾರರಾದ ಗಣೇಶ್ ದೇವಾಡಿಗ ರವರು ಅವರ ಬಾಬ್ತು ಕೆಎ-19-ಜೆ-9260 ನೇ ನೋಂದಾಣಿ ಸಂಖ್ಯೆಯ ಮೋಟಾರ್ ಸೈಕಲ್ ನ ಹಿಂಬದಿ ಸೀಟಿನಲ್ಲಿ ಅವರ ಮಗ ತಿಲಕ್ ಅಲಿಯಾಸ್ ತಿಲಕ್ ರಾಜ್ ರವರನ್ನು ಕುಳ್ಳಿರಿಸಿಕೊಂಡು ಅವರ ಮನೆಯಿಂದ ಅವರ ತಮ್ಮನ ಮನೆಯಾದ ಕೃಷ್ಣಾಪುರ 5ನೇ ಬ್ಲಾಕ್ ನ ಪ್ರಸಾದ್ ನಿವಾಸದ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಮಧ್ಯಾಹ್ನ ಸಮಯ ಸುಮಾರು 1-00 ಗಂಟೆಗೆ ಕೈ ಸನ್ನೆ ಮಾಡುತ್ತಾ ರಸ್ತೆಯ ಬಲ ಬದಿಯ ಪ್ರಸಾದ ನಿವಾಸದ ಕಡೆಗೆ ರಸ್ತೆ ಅಡ್ಡ ದಾಟುತ್ತಿರುವಾಗ ಅವರ ಹಿಂದಿನಿಂದ ಅಂದರೆ ಕೃಷ್ಣಾಪುರ ದ್ವಾರದ ಕಡೆಯಿಂದ ಮದ್ಯ ಕಡೆಗೆ ಕೆಎ-19-ಇಜಿ-4426 ನೇ ನೋಂದಾಣಿ ಸಂಖ್ಯೆಯ ಮೋಟಾರ್ ಸೈಕಲನ್ನು ಅದರ ಸವಾರನಾದ ರೋಹಿತಾಶ್ವ ರವರು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಮೋಟಾರ್ ಸೈಕಲ್ ಸಮೇತ ಬಿದ್ದ ಪಿರ್ಯಾದಿದಾರರ ಬಲ ಕಾಲಿನ ಮೊಣ ಗಂಟಿಗೆ ಒಳ ನೋವಾಗಿದ್ದು ತಿಲಕ್ ರಾಜ್ ರವರ ಬಲ ಕಾಲಿನ ಪಾದದ ಗಂಟಿಗೆ ರಕ್ತ ಗಾಯವಾಗಿರುತ್ತದೆ, ಅಲ್ಲಿಗೆ ಬಂದ ಜೀಪಿನಲ್ಲಿ ಗಾಯಾಳು ತಿಲಕ್ ರಾಜ್ ರವರನ್ನು ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ.

 

13. ಮಂಗಳೂರು ಗ್ರಾಮಾಂತರ  ಪೊಲೀಸ್‌ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ: 24.12.2013 ರಂದು 19.45 ಗಂಟೆಗೆ ಅಡ್ಯಾರ್‌‌ ಗ್ರಾಮದ ಅಡ್ಯಾರ್‌‌ ಆರ್ಕೆ ಗ್ಯಾರೇಜ್ಬಳಿ ಪಿರ್ಯಾದಿದಾರರಾದ ದೀಪಕ್ ಮಲ್ಯ ಎಂಬವರು ಬಿ.ಸಿ ರೋಡ್‌‌ ಮಂಗಳೂರು ಚಥುಷ್ಪತ ರಸ್ತೆಯನ್ನು ದಾಟುತಿದ್ದ ವೇಳೆ  ಮಂಗಳೂರು ಕಡೆಯಿಂದ ಬಿ.ಸಿ ರೋಡ್‌‌ ಕಡೆಗೆ  ಕೆಎ-19-ಎಂಡಿ-9191 ನೇ ಬೊಲೆರೋ ವಾಹನವನ್ನು ಅದರ ಚಾಲಕ ಸಂತೋಷ್‌‌ ಗಂಭೀರ್‌‌ ಎಂಬಾತನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಸೊಂಟಕ್ಕೆ ಮತ್ತು  ಎಡತೊಡೆಗೆ ಗುದ್ದಿದ ಜಖಂ ಆಗಿದ್ದು , ಪಿರ್ಯಾಧಿದಾರರು ಗುದ್ದಿದ ಜಖಂ ಆದ ಕಾರಣ ನೋವಿನ ಮಾತ್ರೆ ತೆದುಕೊಳ್ಳುವುದಾಗಿ  ತಿಳಿಸಿ ಮನೆಗೆ ಹೋಗಿದ್ದು ದಿ: 28.12.2013 ರಂದು  ನೋವು ಜಾಸ್ತಿಯಾಗಿದ್ದರಿಂದ  ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿ ವೈದ್ಯರು ಪರೀಕ್ಷಿಸಿ  ಸೊಂಟದಲ್ಲಿ ಮೂಳೆ ಮುರಿತ ಗಂಭೀರ ಗಾಯವಾಗಿರುವುದಾಗಿ  ತಿಳಿಸಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

14. ಮಂಗಳೂರು ಗ್ರಾಮಾಂತರ  ಪೊಲೀಸ್‌ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ: 30.12.2013 ರಂದು 14..45 ಗಂಟೆ ಸಮಯಕ್ಕೆ ಪಿರ್ಯಾಧಿದಾರರಾದ ಶ್ರೀ ಎಡ್ವಿನ್ ಸಲ್ದಾನಾ ಎಂಬವರು ತನ್ನ ಬಾಬ್ತು ಕಾರಿನಲ್ಲಿ ಮೇರಮಜಲಿನಿಂದ ಫರಂಗಿಪೇಟೆ ಕಡೆಗೆ ಬರುತ್ತಾ ಮೇರಮಜಲು ಕಂಪ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಕಾರಿನ ಮುಂದಿನಿಂದ ಅರ್ಕುಳ ಹೋಗುತ್ತಿದ್ದ KA-19-W-5880 ನೇ ಮೋಟಾರ್‌‌ ಸೈಕಲ್ಗೆ, ಅರ್ಕುಳ ಕಡೆಯಿಂದ KA-19-7847 ನೇ ಟಿಪ್ಪರ್‌‌ ಲಾರಿಯನ್ನು ಅದರ ಚಾಲಕ ದಾಸಪ್ಪ ಎಂಬವರು ಅತೀವೇಗ ಯಾ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಹೊಡೆದ ಪರಿಣಾಮ  ಮೋಟಾರ್‌‌ ಸೈಕಲ್ಸವಾರ  ರೋಶನ್ರೈಮಂಡ್‌‌ ಲೋಬೋ  ಎಂಬವರು ರಸ್ತೆಗೆ ಬಿದ್ದು  ಅವರ ತಲೆಯ ಹಿಂಭಾಗದಲ್ಲಿ ಜಜ್ಜಿದ ರಕ್ತ ಬರುವ ಗಾಯ ಮತ್ತು ಬಲಕೈ ಮೊಣಗಂಟಿನಿಂದ ಭುಜದ ತನಕ  ಜಜ್ಜಿದ ರಕ್ತ ಬರುವ ಗಾಯವಾಗಿ  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

 

15. ಮಂಗಳೂರು ಗ್ರಾಮಾಂತರ  ಪೊಲೀಸ್‌ ಠಾಣೆಯಲ್ಲಿ ವರದಿಯಾದ ಮೋ.ಸೈಕಲ್ ಕಳವು ಪ್ರಕರಣ: ದಿನಾಂಕ: 29.12.2013 ರಂದು  ರಾತ್ರಿ 08.00 ಗಂಟೆಗೆ  ಪಿರ್ಯಾದಿದಾರರಾದ ಶ್ರೀ ಗೊಪಾಲಕೃಷ್ಣ ಶೆಟ್ಟಿ ಎಂಬವರು ತನ್ನ ಬಾಬ್ತು ಕೆಎ-19-ಇಜಿ-1428 ನೇ ಹೋಂಡಾ  ಮೋಟಾರ್‌‌ ಸೈಕಲಿನಲ್ಲಿ  ಮರೋಳಿ ಕನಪತಗ್ಗು ಎಂಬಲ್ಲಿರುವ  ಅಯ್ಯಪ್ಪ  ವೃತಧಾರಿಗಳು ಮಲಗುವ ಬೀಡಿಗೆ  ಹೋಗಿ ಕಂಫೌಂಡ್‌‌ ಒಳಗಡೆ ಮೋಟಾರ್ಸೈಕಲನ್ನು ನಿಲ್ಲಿಸಿ  ಸ್ವಾಮಿಗಳೊಂದಿಗೆ ಮಾತಾಡಿ  ರಾತ್ರಿ ಸುಮಾರು 09.30 ಗಂಟೆಗೆ  ಹೊರಗೆ ಬಂದು ನೋಡಿದಾಗ ಮೋಟಾರ್‌‌ ಸೈಕಲ್ಇಲ್ಲದೇ ಇದ್ದು  ನೆರೆಕರೆಯಲ್ಲಿ ಮತ್ತು ಇತರ ಕಡೆಗಳಲ್ಲಿ ಹುಡುಕಾಡಿದಲ್ಲಿ  ಪತ್ತೆಯಾಗದೇ ಇದ್ದು  ಸದ್ರಿ ಮೋಟಾರ್ಸೈಕಲನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುವುದಾಗಿಯೂ ಸದ್ರಿ ಮೋಟಾರ್ಸೈಕಲ್ನ ಅಂದಾಜು ಮೌಲ್ಯ ಸುಮಾರು 40000/-.

 

16. ಮಂಗಳೂರು ಗ್ರಾಮಾಂತರ  ಪೊಲೀಸ್‌ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ: 31.12.2013 ರಂದು ಬೆಳಿಗ್ಗೆ 09.15 ಗಂಟೆಗೆ ಪಿರ್ಯಾದಿದಾರರು ತನ್ನ ಬಾಬ್ತು ಕೆಎ-19-ಯು-7827 ನೇ ಹೋಂಡಾ ಎಟೆರ್ನಾ ಮೋಟಾರ್‌‌ ಸೈಕಲ್ನಲ್ಲಿ  ತನ್ನ ಪತ್ನಿ ಜ್ಯೋತಿ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕುಡುಪು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಾ ಕುಲಶೇಖರ ಡೈರಿ ಬಳಿ ತಲುಪುತ್ತಿದ್ದಂತೆ ಮಂಗಳೂರು ಕಡೆಯಿಂದ  ಟಿಪ್ಪರ್‌‌ ಲಾರಿ ಕೆಎ-19-ಬಿ-4527 ನೇ ದನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌‌ ಸೈಕಲ್ಗೆ ಡಿಕ್ಕಿಹೊಡೆದು ಮೋಟಾರ್ಸೈಕಲ್ಸಮೇತ ಪಿರ್ಯಾದಿದಾರರು ಮತ್ತು ಅವರ ಪತ್ನಿ ಜ್ಯೋತಿ ರವರು ಕೆಳಕ್ಕೆ ಬಿದ್ದ ಪರಿಣಾಮ  ಪಿರ್ಯಾದಿದಾರರ ಹೆಂಡತಿ ಜ್ಯೋತಿ ರವರಿಗೆ  ತೀವ್ರ ಸ್ವರೂಪದ ಜಖಂ ಆಗಿ ಮೃತಪಟ್ಟಿರುವುದಾಗಿಯೂ ಅಪಘಾತ ಉಂಟುಮಾಡಿದ ಕೆಎ-19-ಬಿ-4527 ನೇ ಟಿಪ್ಪರ್ಲಾರಿಯ ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿರುವುದು ಎಂಬಿತ್ಯಾದಿ.

 

17. ಮಂಗಳೂರು ಗ್ರಾಮಾಂತರ  ಪೊಲೀಸ್‌ ಠಾಣೆಯಲ್ಲಿ ವರದಿಯಾದ ಮನುಷ್ಯ ಕಾಣೆ ಪ್ರಕರಣ: ದಿನಾಂಕ: 29.12.2013 ರಂದು ಬೆ: 06.00 ಗಂಟೆಗೆ  ಶ್ರೀ ರವಿಂದ್ರ ಕೆ. ಎಂಬವರು ಅವರ ಬಾವ ವಿಶ್ವನಾಥ್‌‌ ಎಂಬವರು ಅವರ ಮನೆಯಾದ  ಮೇಲಿನ ಕೋಟಿಮುರ ಸರಿಪಲ್ಲ ಎಂಬಲ್ಲಿಂದ ಕೆಸಕ್ಕೆಂದು  ಹೋದವರು  ವಾಪಾಸ್ಸು ಮನೆಗೆ ಬರದೇ ಇದ್ದು ಸದ್ರಿಯವರ ಪತ್ತೆಯ ಬಗ್ಗೆ ಆಸುಪಾಸಿನಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಈ ವರೆಗೆ ಪತ್ತೆಯಾಗದೇ ಇರುವುದರಿಂದ ಸದ್ರಿಯವರನ್ನು ಪತ್ತೆಮಾಡಿಕೊಡಬೇಕಾಗಿ ನೀಡಿದ ಪಿರ್ಯಾದಿ ಎಂಬಿತ್ಯಾದಿ.

No comments:

Post a Comment