Saturday, December 21, 2013

Daily Crime Reports 21-12-2013

ದೈನಂದಿನ ಅಪರಾದ ವರದಿ.

ದಿನಾಂಕ 21..12.2013 ರ 16:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಮನೆ ಕಳವು ಪ್ರಕರಣ

0

ಸಾಮಾನ್ಯ ಕಳವು

:

0

ವಾಹನ ಕಳವು 

:

0

ಮಹಿಳೆಯ ಮೇಲಿನ ಪ್ರಕರಣ    

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ

:

0

ಮನುಷ್ಯ ಕಾಣೆ ಪ್ರಕರಣ

:

0

 

 

 

  1.ಮಂಗಳೂರು ಗ್ರಾಮಾಂತರ ಪೊಲೀಸ್‌  ಠಾಣೆಯಲ್ಲಿ ವರದಿಯಾದ ಪ್ರಕರಣ:  ಧನರಾಜ್‌ ಎಂಬವರು  ದಿನಾಂಕ: 20.12.2013 ರಂದು ಕಂಕನಾಡಿ ಗ್ರಾಮದ ಗರೋಡಿ ಜಾತ್ರೆಗೆ ಹೋಗಿ  ಕೆಎ-19-ಇಜಿ-6019 ನೇ ಮೋಟಾರ್‌ ಸೈಕಲ್‌ನಲ್ಲಿ ಮನೆಗೆ ಹೊರಟು ರಾತ್ರಿ ಸುಮಾರು 9.45 ಗಂಟೆಗೆ ನಾಗೂರಿ ಪಟೇಲ್‌‌ ಹೌಸ್‌ ಬಳಿ ತಲುಪಿದಾದ ಧನ್‌ರಾಜ್‌ ರವರಿಗೆ  ಪರಿಚಯವಿರುವ ಸಾಗರ್‌‌, ಮಿಥುನ್‌ ಮತ್ತು ಅವರ ಜೊತೆ ಇದ್ದ 4-5 ಜನರು ಅಡ್ಡಗಟ್ಟಿ ನಿಲ್ಲಿಸಿ  ಏಕಾಏಕಿ ಮಾರಕಾಸ್ತ್ರಗಳಿಂದ ಕಡಿದು ಅವಾಚ್ಯ ಶಬ್ದಗಳಿಂದ ಬೈದು ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿದೆ.

 

2.ಕೊಣಾಜೆ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ 19.12.2013 ರಂದು ಸಂಜೆ ಅಬ್ದುಲ್‌ ಮುತಾಲೀಫ್‌ ಎಂಬವರು ತನ್ನ ಸ್ನೇಹಿತ ಅಸ್ಗರ್‌ ಎಂಬವರ ಮೋಟಾರ್‌ ಸೈಕಲ್‌ ನಂಬ್ರ ಕೆಎ-19ಇಜೆ-8607 ನೇಯದರಲ್ಲಿ ಸಹಸವಾರನಾಗಿ ಕಳಿತುಕೊಂಡು ದೇರಳಕಟ್ಟೆ ಕಡೆಯಿಂದ ಮುಡಿಪು ಕಡೆಗೆ ಹೋಗುತ್ತಿರುವಾಗ ಮುಡಿಪು ಬಸ್‌ಸ್ಟಾಂಡ್‌ ತಲುಪಿದಾಗ ಎದುರಿನಿಂದ ದೇರಳಕಟ್ಟೆ ಕಡೆಗೆ ಆಟೋ ರಿಕ್ಷಾ ನಂಬ್ರ ಕೆಎ-19ಡಿ-8346 ನೇಯದನ್ನು ಅದರ ಚಾಲಕ ರಫೀಕ್‌ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಅಬ್ದುಲ್‌ ಮುತಾಲೀಫ್‌ ರವರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಮುತಾಲೀಪ್‌ರವರು ಗಂಬೀರ ಗಾಯಗೊಂಡಿದ್ದು  ತೇಜಸ್ವೀನಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

 

3.ಬಜಪೆ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ಮೊಹಮ್ಮದ್‌  ಇರ್ಪಾನ್‌ ಎಂಬವರು  ತನ್ನ  ಅಣ್ಣ ಮೊಹಮ್ಮದ್ ಇಮ್ರಾನ್ನೊಂದಿಗೆ ಮೋಟಾರು ಸೈಕಲ್ ನಂ: ಕೆಎ 19 ಇಸಿ 2154 ನೇದರಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಕೈಕಂಬದಿಂದ  ಬಜಪೆಗೆ ಬರುತ್ತಾ ಮೋಟಾರು ಸೈಕಲನ್ನು ಮೊಹಮ್ಮದ್‌  ಮೊಹಮ್ಮದ್‌  ಇಮ್ರಾನ್‌ ರವರು ಅತೀವೇಗ ಮತ್ತು ಅಜಾಗರೂಕತೆಯಿಂಧ ಚಲಾಯಿಸಿಕೊಂಡು ಬಂದು, ಪಡುಪೆರಾರ ಗ್ರಾಮದ , ಬಲವಂಡಿ ದ್ವಾರದ ಬಳಿ ತಲುಪುತ್ತಿದ್ದಂತೇ, ನಾಯಿಯೊಂದು ಅಡ್ಡ ಬಂಧ ಪರಿಣಾಮ ಮೋಟಾರು ಸೈಕಲ್ ಸವಾರರ ಹತೋಟಿ ತಪ್ಪಿ, ರಸ್ತೆಗೆ ಬಿದ್ದು, ಸಹ ಸವಾರರು ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ಮಂಗಳಾ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

4.ಮಂಗಳೂರು  ಗ್ರಾಮಾಂತರ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  ಈ ದಿನ ತಾರೀಖು: 20.12.2013 ರಂದು ಎ.ಶ್ರೀನಿವಾಸ (69) ರವರು ಹಂಪನಕಟ್ಟೆಯಿಂದ KA-19-C-6333 ನೇ ನಂಬ್ರದ ಪಿರೆರಾ ಹೆಸರಿನ 42 ನಂಬ್ರದ ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಾ ಸಂಜೆ 16.15 ಗಂಟೆಗೆ ಬಸ್ಸು ಜಪ್ಪಿನಮೊಗೆರು ಮಹಾಕಾಳಿ ಪಡ್ಪು ಜಂಕ್ಷನ್  ಬಸಸ್ಟಾಪಿನಲ್ಲಿ ನಿಂತಾಗ ಶರೀನಿವಾಸರವರು  ಹಿಂಬದಿ ಬಾಗಿಲಿನ ಪುಟ್ ಬೋರ್ಡ್ ನಲ್ಲಿ ಇಳಿಯುತ್ತಿರುವಾಗ ಚಾಲಕ ಫಯಾಜ್ ಎಂಬವರು ಬಸ್ಸನ್ನು ಅಜಾಗರೂಕತೆಯಿಂದ ಒಮ್ಮೆಲೆ ಚಲಾಯಿಸಿದ್ದರಿಂದ ಫಿರ್ಯಾದಿದಾರರು ನಿಯಂತ್ರಣ ತಪ್ಪಿ  ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದು, ಆ ಪರಿಣಾಮ ಅವರ ಬಲ ಕೈಗೆ, ಹಣೆಗೆ, ಮುಖಕ್ಕೆ ಹಾಗೂ ಬಲಕಾಲಿಗೆ ಗಂಬೀರ ಗಾಯಗಳಾಗಿದ್ದು ನಂತರ ಅವರನ್ನು ಯಾರೋ ಪಾಧರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ

 

 

 

No comments:

Post a Comment