Sunday, December 22, 2013

Daily Crime Report 22-12-2013

ದೈನಂದಿನ ಅಪರಾದ ವರದಿ.
ದಿನಾಂಕ 22..12.201316:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗನಂತಿದೆ.
 
ಕೊಲೆ  ಪ್ರಕರಣ                     0
ಕೊಲೆ  ಯತ್ನ    :                   1
ದರೋಡೆ ಪ್ರಕರಣ        :         0
ಸುಲಿಗೆ ಪ್ರಕರಣ :                   0
ಮನೆ ಕಳವು ಪ್ರಕರಣ              0       
ಸಾಮಾನ್ಯ ಕಳವು        :     0
ವಾಹನ ಕಳವು                      0       
ಮಹಿಳೆಯ ಮೇಲಿನ ಪ್ರಕರಣ     0                
ರಸ್ತೆ ಅಪಘಾತ  ಪ್ರಕರಣ           1                 
ವಂಚನೆ ಪ್ರಕರಣ         :         0
ಮನುಷ್ಯ ಕಾಣೆ ಪ್ರಕರಣ           0       
ಇತರ ಪ್ರಕರಣ :                   0
 
 
1.ಮಂಗಳೂರು ಸುರತ್ಕಲ್‌ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ:   ಕೋಣಾಜೆ ಪೊಲೀಸ್  ಠಾಣೆಯ  ಅಪಹರಣ ಪ್ರಕರಣದ ಆರೋಪಿಗಳನ್ನು  ದಸ್ತಗಿರಿಯ ಬಗ್ಗೆ  ಮೇಲಾಧಿಕಾರಿಗಳ  ಸೂಚನೆಯಂತೆ ಪೊಲೀಸ್ ನಿರೀಕ್ಷಕರು  ಉಳ್ಳಾಲ ಪೋಲೀಸು ಠಾಣೆ ಇವರ ನೇತೃತ್ವದಲ್ಲಿ, ಪಿಎಸ್ಐ ಉಳ್ಳಾಲ( ಕಾ ಮತ್ತು ಸು), ಪಿಎಸ್ಐ ಉಳ್ಳಾಲ (ಕ್ರೈಮ್), ಪಿಎಸ್ಐ, ಕೋಣಾಜೆ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಗಳು  ಕಾಟಿಪಳ್ಳ ಗ್ರಾಮದ 2ನೇ ಬ್ಲಾಕಿನ ಸಮೀಪ ಇರುವ ಒಂದು ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂಬ ಮಾಹಿತಿಯ ಮೇರೆಗೆ, ತಾರೀಕು 21-12-2013 ರಂದು ಬೆಳಗಿನ ಜಾವದಲ್ಲಿ ಸುಮಾರು 4-30 ಗಂಟೆಯ ಸಮಯಕ್ಕೆ, ಮಂಗಳೂರು ತಾಲೂಕು, ಕಾಟಿಪಳ್ಳ ಗ್ರಾಮದ 2ನೇ ಬ್ಲಾಕ್ ಶಂಶುದ್ದಿನ್ ಸರ್ಕಲ್ನ  ಸಮೀಪ ಇರುವ  ಈದ್ಗಾ ದ ಬಳಿ ಇರುವ  ಪಾತಿಮ ಮಂಜಿಲ್ ಮನೆಗೆ ಧಾಳಿ ನಡೆಸಿದಾಗ ಒಳಗಿದ್ದ 8 ಯುವಕರ ಪೈಕಿ ಒಬ್ಬನು, ಅವನ ಕೈಯಲ್ಲಿದ್ದ ಉದ್ದನೆಯ ತಲವಾರುನಿಂದ , ಪಿಎಸ್ಐ ಸುಧಾಕರ ರವರ ಕಡೆ ಅವರನ್ನು ಕೊಲ್ಲುವ ಉದ್ದೇಶದಿಂದ, ಅವರ ಕಡೆಗೆ ಬೀಸಿದಾಗ, ಪಿಎಸ್ಐ ಸುಧಾಕರ ತಪ್ಪಿಸಿ ದಾಗ ತಲಾರಿನ ಪೆಟ್ಟು ಬೆರಳಿಗೆ ತಾಗಿ ಗಾಯವಾಗಿರುತ್ತದೆ. ಆ ಸಮಯ ಸಿಬ್ಬಂದಿಗಳು ಒಳಗೆ ದಾವಿಸಿ ಪ್ರಕರಣದ 8 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.
2. ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ 21-12-2013 ರಂದು ಸಂಜೆ ಸುಮಾರು 06.30 ಗಂಟೆಗೆ  ಕಾರು ನಂಬ್ರ KA19-M-9109 ನ್ನು ಅದರ ಚಾಲಕ ಬಲ್ಮಠ ಸರ್ಕಲ್ ಕಡೆಯಿಂದ ಕಂಕಾನಾಡಿ  ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ  ಅತಿ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ   ಚಾಲಾಯಿಸಿಕೊಂಡು ಬಂದು ಮಂಗಳೂರು ನರ್ಸಿಂಗ್ ಹೋಮ್ ಬಳಿ ಇರುವ ಪೆಟ್ರೊಲ್ ಬಂಕ್ ಕಡೆಯಿಂದ ರಸ್ತೆಯ ಇನ್ನೊಂದು ಬದಿಗೆ ರಸ್ತೆ ದಾಟುತ್ತಿದ್ದ ಆನಂದಿ ಎಂಬವರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು  ರಸ್ತೆಗೆ ಬಿದ್ದು ಎರಡೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗೊಂಡು ಮಂಗಳೂರು  ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

No comments:

Post a Comment