Friday, December 27, 2013

Daily Crime Reports : 27-12-2013

ದೈನಂದಿನ ಅಪರಾದ ವರದಿ.

ದಿನಾಂಕ 27..12.201316:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು  ಈ  ಕೆಳಗಿನಂತಿದೆ.

 

ಕೊಲೆ  ಪ್ರಕರಣ :                   0

ಕೊಲೆ  ಯತ್ನ    :                   0

ದರೋಡೆ ಪ್ರಕರಣ:                 0

ಸುಲಿಗೆ ಪ್ರಕರಣ :                   0

ಮನೆ ಕಳವು ಪ್ರಕರಣ:             2       

ಸಾಮಾನ್ಯ ಕಳವು :                0

ವಾಹನ ಕಳವು:                     0       

ಮಹಿಳೆಯ ಮೇಲಿನ ಪ್ರಕರಣ:    0                

ರಸ್ತೆ ಅಪಘಾತ  ಪ್ರಕರಣ:         2                 

ವಂಚನೆ ಪ್ರಕರಣ         :         0

ಮನುಷ್ಯ ಕಾಣೆ ಪ್ರಕರಣ :         0       

ಇತರ ಪ್ರಕರಣ :                   1

 

 1. ಉರ್ವ ಪೊಲೀಸ್‌  ಠಾಣೆಯಲ್ಲಿ ವರದಿಯಾದ ಪ್ರಕರಣ: ಸಿರಿಲ್‌ ಕ್ರಾಸ್ತ ಎಂಬವರು  ದಿನಾಂಕ 25-12-2013 ರಂದು ಕ್ರೀಸ್ಮಸ್ ಹಬ್ಬದ ಸಲುವಾಗಿ ಬೆಳಿಗ್ಗೆ 10:00 ಗಂಟೆಗೆ ಮನೆಗೆ ಬೀಗ ಹಾಕಿ ನನ್ನ ಸ್ವಂತ ಊರಾದ ಬೆಳ್ತಂಗಡಿ ಹೋಗಿ ವಾಪಾಸ್ಸು  ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲಿನ ಚಿಲಕ ತುಂಡಾಗಿ ಬಾಗಿಲು ತೆರೆದುಕೊಂಡಿರುತ್ತದೆ. ಮನೆಯ ಒಳಗಡೆ ಹೋಗಿ ನೋಡಿದಾಗ ಬೆಡ್ರೂಂನಲ್ಲಿದ್ದ ಗಾದ್ರೆಜ್ ಕಾಬಾಟ್ ತೆರೆದುಕೊಂಡಿದ್ದು, ಬಂಗಾರಗಳನ್ನಿಡುವ ಸೇಫ್ಲಾಕರ್ ಬೆಂಡಾಗಿ ಹೊರಗಡೆ ತೆರೆದುಕೊಂಡಿರುತ್ತದೆ. ಸೇಫ್ಲಾಕರ್  ಒಳಗಡೆ ಇಟ್ಟಿದ್ದ ಸುಮಾರು ರೂಪಾಯಿ  1,01000/-ಮೌಲ್ಯದ ಚಿನ್ನಾಭರಣಗಳನ್ನು  ಕಳವು  ಮಾಡಿಕೊಂಡು ಹೋಗಿರುತ್ತಾರೆ.

 

2.ಮೂಡಬಿದ್ರೆ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ: 26-12-2013 ರಂದು ಕೃಷ್ಣ ಎಂಬವರು  ಕೆಲಸ ಮುಗಿಸಿ ಮೂಡಬಿದ್ರೆಯಿಂದ ನಡೆದುಕೊಂಡು ಹೋಗಿ ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ಗಾಂಧಿನಗರದ ಬಳಿ ರಸ್ತೆ ಬದಿಯಲ್ಲಿ ದಾಟಲು ನಿಂತಿರುವ ಸಮಯ ಸುಮಾರು 23:30 ಗಂಟೆಗೆ  ವಿದ್ಯಾಗಿರಿ ಕಡೆಯಿಂದ ಮೂಡಬಿದ್ರೆ ಕಡೆಗೆ ಬರುತ್ತಿದ್ದ, ಕೆಎ -19-ಇಎ-838  ನೇ ನಂಬ್ರದ ಮೋಟಾರ್ ಸೈಕಲ್‌ ಸವಾರ ಪ್ರಭಾಕರ ಎಂಬವನು ಮೋಟಾರ್ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ, ಬಂದು ಕೃಷ್ಣ ರವರಿಗೆ ಢಿಕ್ಕಿಯಾಗಿದ್ದು, ಪರಿಣಾಮ ರಸ್ತೆಗೆ ಬಿದ್ದು, ಅವರ ಎಡತೊಡೆಗೆ ಗುದ್ದಿದ ಹಾಗೂ ಎಡಕಾಲಿನ ಪಾದದ ಮೇಲೆ ರಕ್ತಗಾಯವಾಗಿರುತ್ತದೆ.

 

  3 .ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ವರದಿಯಾದ  ಪ್ರಕರಣ: ರಾಜೇಶ್‌  ಎಂಬವರು ಅವರ  ಬಾಬ್ತು ಕೆ ಎ 19-ಎಲ್-1456 ನೇ ಮೋಟಾರು ಸೈಕಲ್ ನಲ್ಲಿ ದಿನಾಂಕ 25-12-2013 ರಂದು ರಾತ್ರಿ ಮನೆಗೆ ತೆರಳುವರೇ ಕಾಟಿಪಳ್ಳ ಕಡೆಯಿಂದ ಚೊಕ್ಕಬೆಟ್ಟು ಕಡೆಗೆ ತಾರು ರಸ್ತೆಯಲ್ಲಿ ಬರುತ್ತಿರುವಾಗ ಸಮಯ ಸುಮಾರು ರಾತ್ರಿ 22-15 ಗಂಟೆಗೆ ಕಾಟಿಪಳ್ಳ ಗ್ರಾಮದ 7ನೇ ಬ್ಲಾಕಿನ ಮೆಸ್ಕಾಂ ಕಛೇರಿ ಬಳಿ ತಲುಪುತ್ತಿದ್ದಂತೆ  ಕೆ ಎ 19 ಇಎಫ್ 8426 ನೇ ಮೋಟಾರು ಸೈಕಲ್ ನ್ನು ಚೊಕ್ಕಬೆಟ್ಟು ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ರಾಜೇಶ್‌ ರವರ ಮೋಟಾರು ಸೈಕಲ್ ಗೆ ಡಿಕ್ಕಿ ಪಡಿಸಿದ್ದು ಅದರ ಪರಿಣಾಮ ರಾಜೇಶ್‌ ರವರಿಗೆ ರಕ್ತ ಬರುವ  ಗಾಯವಾಗಿರುತ್ತದೆ

 

 4..ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ: ಮಂಗಳೂರಿನ ಜಿ.ಹೆಚ್.ಎಸ್. ರಸ್ತೆಯ ಬಳಿ ಇರುವ ಆಶೀರ್ವಾದ ಬಿಲ್ಡಿಂಗ್ ನಲ್ಲಿ ಚೇತನ ಎಂಬ ಸ್ಟುಡಿಯೋವನ್ನು, ದಿನಾಂಕ 25-12-2013 ರಂದು ಎಂದಿನಂತೆ ಸಂಜೆ 6:00 ಗಂಟೆಗೆ ಸ್ಟುಡಿಯೋಗೆ ಬೀಗ ಹಾಕಿ ಹೋಗಿದ್ದು, ಮರುದಿನ ದಿನಾಂ 26-12-2013 ರಂದು ಬೆಳಿಗ್ಗೆ 9:00 ಗಂಟೆಗೆ ಬಂದು ನೋಡಿದಾಗ ಎದುರಿನ ಬಾಗಿಲಿನ ಬೀಗ ಮುರಿದು 3000/- ಹಣವನ್ನು  ಕಳವು ಮಾಡಿಕೊಂಡು ಹೋಗಿದ್ದಾಗಿದೆ.

 

5.ಮಂಗಳೂರು ದಕ್ಷಿಣ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ:  ದಿನಾಂಕ 23-12-13 ರಂದು ಸಂಜೆ 16-10 ಗಂಟೆಗೆ  ಅತುಲ್ ಅರವಿಂದ್ ರವರು  ತನ್ನ ಸ್ನೇಹಿತ ಅವಿನಾಶ್ ಎಂಬವರೊಂದಿಗೆ  ನಗರದ ಪ್ಲಾಟಿನಮ್ ಥಿಯೇಟರ್ ನಲ್ಲಿ  ಚಲನ ಚಿತ್ರ ನೋಡಿ ಹೊರ ಬರುತ್ತಾ ತನ್ನ ಸ್ನೇಹಿತೆಯನ್ನು  ಭೇಟಿಯಾಗಿದ್ದು, ಅವರ ಜೊತೆ ಅವಳ ಸ್ನೇಹಿತೆ ಇದ್ದು, ಅವರಿಬ್ಬರನ್ನು ಅವರ ಹಾಸ್ಟೇಲ್ ಗೆ ಬಿಡಲು ಕಾರಿನಲ್ಲಿ ಹತ್ತಿಸಿಕೊಂಡು ಹೊರಡುವ ಸಮಯ ಸುಮಾರು 10-15 ಜನರ ತಂಡವೊಂದು ಕಾರನ್ನು ತಡೆದು ಅತುಲ್ ಅರವಿಂದ್ ರನ್ನು ಕಾರಿನಿಂದ ಹೊರಗೆ ಎಳೆದು ಅದರಲ್ಲಿ ಸುಮಾರು 4-5 ಜನರು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಹೆಲ್ಮೆಟ್ ನಿಂದ ಹೊಡೆದು ನೋವುಂಟು ಮಾಡಿದ್ದು, ಹಣೆಗೆ ತರಚಿದ ಗಾಯ ಮಾಡಿದ್ದು, ನಿನ್ನ ಕಾಲು ಮುರಿದು ನಿನ್ನನ್ನು ಮುಗಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ.

No comments:

Post a Comment