Wednesday, December 18, 2013

Daily Crime Reports 18-12-2013

ದೈನಂದಿನ ಅಪರಾದ ವರದಿ.

ದಿನಾಂಕ 18..12.2013  ರ 16:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗನಂತಿದೆ.

 

ಕೊಲೆ  ಪ್ರಕರಣ 

:

0

ದರೋಡೆ           ಪ್ರಕರಣ

:

0

ಸುಲಿಗೆ ಪ್ರಕರಣ

:

0

ಮನೆ ಕಳವು ಪ್ರಕರಣ

 

0

ಸಾಮಾನ್ಯ ಕಳವು

:

0

ವಾಹನ ಕಳವು  

:

0

ಮಹಿಳೆಯ ಮೇಲಿನ ಪ್ರಕರಣ      

:

2

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

1.                  ಉಳ್ಳಾಲ  ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಅತ್ಯಾಚಾರ ಪ್ರಕರಣ :  14 ವರ್ಷದ ಅಪ್ರಾಪ್ತ  ಬಾಲಕಿಯನ್ನು   ಪರಿಚಯವಾದ ಯುತೀಶ್‌ ಎಂಬವನು  ಆಕೆಯ ಮೊಬೈಲ್‌ ನಂಬ್ರವನ್ನು ಪಡೆದು ಆಕೆಗೆ ಪೋನ್ ಮಾಡುತ್ತಿದ್ದು, ಆಕೆಗೆ ಹೊಸ ಬಟ್ಟೆ ಮತ್ತು ಮೊಬೈಲ್ ಪೋನ್ ಕೊಡಿಸುವುದಾಗಿ ಅಮಿಷ ತನ್ನ ಮನೆಯಿಂದ ಸ್ಟೇಟ್ ಬ್ಯಾಂಕಿಗೆ ಹೋಗಿ, ಅಲ್ಲಿಂದ ಯತೀಶ್ ತಿಳಿಸಿದಂತೆ ಸುರತ್ಕಲ್‌ಗೆ ಹೋಗಿ, ಆತನ ಕಾರಿನಲ್ಲಿ ತಣ್ಣೀರು ಬಾವಿ ಬೀಚ್‌‌ಗೆ ಬಂದು ನಂತರ ಆತ ಆಕೆಯನ್ನು ಸುರತ್ಕಲ್ ಕೃಷ್ಣಾಪುರದಲ್ಲಿರುವ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯನ್ನು  ಅತ್ಯಾಚಾರ ಮಾಡಿದ್ದಾಗಿದೆ.

 

2.                  ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯೆಲ್ಲಿ ವರದಿಯಾದ ವರದಕ್ಷಿಣೆ ಸಾವು ಪ್ರಕರಣ: ಪಂಪುವೆಲ್‌ ಮನೆ ಭಜರಂಗದಳ, ದಿವ್ಯನಗರ ಕಂಕನಾಡಿ ಗ್ರಾಮದ ಶ್ರೀಮತಿ ಸುಮಿತ್ರ  ಎಂಬವರಿಗೆ ಸುನೀಲ್‌ ಕುಮಾರ್‌ ಎಂಬವರೊಂದಿಗೆ ದಿನಾಂಕ  25.05.2013 ರಂದು  ಅರ್ಕುಳದ ಯಶಸ್ವೀ ಹಾಲ್‌ನಲ್ಲಿ  ಮದುವೆ ಆಗಿದ್ದು ನಂತರದ ಮದುವೆಯ ನಂತರ   ಗಂಡ ಸುನೀಲ್‌, ಸುನೀಲ್‌ನ  ತಂಗಿ ದಿವ್ಯ,ತಾಯಿ ಲೀಲಾ ,ತಂದೆ ;  ಸುದಾಕರ್‌ ಎಂಬವರುಗಳು  ಸೇರಿ  , ಇವರೆಲ್ಲರೂ ಸೇರಿ  ತವರು ಮನೆಯಿಂದ ನಗದು ಹಣ ತೆಗೆದುಕೊಂಡು ಬರಬೇಕೆಂದು ಒತ್ತಡ ತರುತ್ತಿದ್ದು, ಶ್ರೀಮತಿ ಸುಮಿತ್ರ ತನ್ನ ತವರು ಮನೆಯಿಂದ ಹಣ ನೀಡಲು ಸಾಧ್ಯವಿಲ್ಲವೆಂದು ಮನವರಿಕೆ ಮಾಡಿದರೂ ಕೂಡಾ ಹಣ ತರುವಂತೆ ಒತ್ತಾಯಪಡಿಸುತ್ತಿದ್ದರು. ಹೀಗಿರುತ್ತಾ ಪಿರ್ಯಾದಿದಾರರು ಹಣ ಒಡವೆ ತರಲಿಲ್ಲವೆಂದು ಅತ್ತೆ,ಮಾವ ಸುಮಿತ್ರರಗಂಡನಲ್ಲಿ ಇಲ್ಲಸಲ್ಲದ ಮಾತುಗಳನ್ನು ಹೇಳಿ ಮಾನಸಿಕ ಹಿಂಸೆ ನೀಡುತ್ತಿದ್ದುಲ್ಲದೇ ಗಂಡನಿಗೆ ಚಾಡಿ ಹೇಳಿ ದೈಹಿಕ ಹಿಂಸೆ ನೀಡಿದ್ದರಿಂದ ಮನನೊಂದು, ತನ್ನ ತಾಯಿ  ಮನೆಗೆ ಬಂದ ಸಂದರ್ಭ ಮೆಡಿಕಲ್ ನಿಂದ ತಲೆನೋವಿಗೆಂದು ತೆಗೆದುಕೊಂಡು ಬಂದಿದ್ದ ಮಾತ್ರೆಗಳನ್ನು ಒಮ್ಮೆಲೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. 

3.                   ಮಂಗಳೂರು  ಗ್ರಾಮಾಂತರ ಪೊಲೀಸ್‌  ಠಾಣೆಯಲ್ಲಿ ವರದಿ ಆದ ಅಪಘಾತ  ಪ್ರಕರಣ : ದಿನಾಂಕ: 16.12.2013 ರಂದು ಬೆಳಿಗ್ಗೆ 8.15 ಗಂಟೆಗೆ ಜಾನಕಿ ಎಂಬವರು  ಕೆಲಸಕ್ಕೆ ಹೋಗಲು  ಮೂಡುಶೆಡ್ಡೆಯಿಂದ  ಬಸ್ಸಿನಲ್ಲಿ ಬಂದು ವಾಮಂಜೂರು ಚರ್ಚ್‌ ಬಳಿ ಇಳಿದು ರಸ್ತೆ ದಾಟುವರೇ ರಸ್ತೆ ಬದಿಯಲ್ಲಿ ನಿಂತಿದ್ದ ಸಮಯ ವಾಮಂಜೂರು ಕಡೆಯಿಂದ ಕೆಎ-19-ಇಜಿ-3172 ನೇ ಮೋಟಾರ್‌ ಸೈಕಲನ್ನು ಅದರ ಚಾಲಕ ಅಜರುದ್ದೀನ್‌ ಎಂಬವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜಾನಕಿ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಕೆಳಗೆ ಬಿದ್ದು ಅವರ  ಬಲಕೈಯ ಮೂಳೆ ಮುರಿತ ಹಾಗೂ ತಲೆಗೆ ಮತ್ತು ಕೈ ಕಾಲುಗಳಿಗೆ ಗುದ್ದಿದ ಹಾಗೂ ತರಚಿದ ಗಾಯಗಳಾಗಿ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

4.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ: 17-12-2013 ರಂದು ಸಂಜೆ 6-00 ಗಂಟೆಯಿಂದ 8-00 ಗಂಟೆಯ ಮಧ್ಯೆ ಅವಧಿಯಲ್ಲಿ ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ಬಳಿ ಇರುವ ಎ.ಬಿ. ಶೆಟ್ಟಿ ಹಾಲ್ ನಲ್ಲಿ  ಬಿಜೆಪಿ ಕಾರ್ಯಕರ್ತರ ಹಾಗೂ ನಮೋ  ಬ್ರಿಗೆಡ್ ಕಾರ್ಯಕರ್ತರ ಶಿಬಿರ ಏರ್ಪಡಿಸಿದ್ದು ಈ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಇವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು ಆದ ಶ್ರೀ ರಾಹುಲ್ ಗಾಂಧಿ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದು ಅವಮಾನಿಸಿ ಭಾಷಣ ಮಾಡಿರುತ್ತಾರೆ  ಎಂಬುದಾಗಿದೆ. ಈ  ಬಗ್ಗೆ ಸೂಕ್ತ ಕಾನೂನು ಕ್ರಮ  ಕೈಗೊಳ್ಳುವಂತೆ  ಮಂಗಳೂರು ಯುವ ಕಾಂಗ್ರೇಸ್‌  ಸಮಿತಿ ಅದ್ಯಕ್ಷರು  ದೂರು  ನೀಡಿರುತ್ತಾರೆ

 

 

No comments:

Post a Comment