Friday, February 28, 2014

Daily Crime Reports 27-02-2014

ದೈನಂದಿನ ಅಪರಾದ ವರದಿ.
ದಿನಾಂಕ 27.02.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
2
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
1
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
2
ವಂಚನೆ ಪ್ರಕರಣ       
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
0

























1.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಅಬ್ದುಲ್ ರಹಿಮಾನ್ ರವರು, ಜುನೈಸ್  ಮತ್ತು ನಾಸೀರ್ಎಂಬವರು ಮೂಡಬಿದ್ರಿ ಮಾರ್ಕೆಟ್ನಲ್ಲಿ ನಸೀಬ್ಎಂಬವರ ನಡೆಸುತ್ತಿರುವ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು,  ಪಕ್ಕದ ಅಂಗಡಿಯ ಚೂರಿ @ ಇಸ್ಮಾಯಿಲ್ರವರಿಗೆ ಕೋಳಿ ಮಾರಾಟದ ಪೈಪೂಟಿಯಿಂದಾಗಿ ಫಿರ್ಯಾದಿದಾರರ ಅಂಗಡಿಯ ಮಾಲಿಕ ನಸೀಬ್ಮತ್ತು ಚೂರಿ @ ಇಸ್ಮಾಯಿಲ್ರೊಳಗೆ ವೈಮನಸ್ಸು ಉಂಟಾಗಿ ತಕರಾರು ನಡೆಯುತ್ತಿದ್ದು ದಿನಾಂಕ: 25-02-2014ರಂದು ಫಿರ್ಯಾದಿ, ಜುನೈಸ್ಹಾಗೂ ನಾಸೀರ್ಎಂಬವರು ಅಂಗಡಿಯಲ್ಲಿರುವಾಗ ರಾತ್ರಿ ಸುಮಾರು 09-30 ಗಂಟೆಗೆ ಆರೋಪಿಗಳಾದ ಚೂರಿ @ ಇಸ್ಮಾಯಿಲ್‌, ತೋಡಾರು ಶರೀಫ್‌, ಇಮ್ರಾನ್ಹಾಗೂ ಕಬೀರ್ಎಂಬವರು ಫಿರ್ಯಾಧಿದಾರರ ಅಂಗಡಿಯ ಬಳಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ನಿಮಗೆ ಒಂದೇ ರೀತಿ ವ್ಯಾಪಾರ ಮಾಡಲು ಆಗುವುದಿಲ್ಲವೇ ಎಂದು ಹೇಳಿ ಫಿರ್ಯಾದಿ, ಜುನೈಸ್ಹಾಗೂ ನಾಸೀರ್ಎಂಬವರಿಗೆ ಕೈಯಿಂದ ಹೊಡೆದು, ಅಲ್ಲದೇ ಶರೀಫ್ಎಂಬಾತನು ಆತನ ಕೈಯಲ್ಲಿದ್ದ ಚೂರಿಯಿಂದ ಫಿರ್ಯಾದಿದಾರರ ಎಡ ಕೋಲು ಕಾಲಿನ ಬಳಿ ಗೀರಿ ರಕ್ತ ಗಾಯಗೊಳಿಸಿದ್ದು, ಚೂರಿ @ ಇಸ್ಮಾಯಿಲ್ನು ಜುನೈಸ್ನನ್ನು ಉದ್ದೇಶಿಸಿ ನೀನು ಮಾರ್ಕೇಟ್ಗೆ ಬಂದರೆ ನಿನ್ನ ಕೈ ಕಾಲು ಹುಡಿ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದು ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಮೂಡಬಿದ್ರಿ ಆಳ್ವಾಸ್ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.

2.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19-02-14 ರಂದು ಪಿರ್ಯಾದಿದಾರರಾದ ಶ್ರೀ ಚೆನ್ನಯ್ಯಾ ರವರು ಎಪಿಎಂಸಿ ವೇ ಬ್ರಿಡ್ಜ್ ಬಳಿ, ಖಾಲಿ ಜಾಗದಲ್ಲಿ ಇರಿಸಿದ್ದ ಜೋಳದ ಮೂಟೆಗಳ ಬಾಬ್ತು 145 ಕ್ವಿಂಟಾಲ್ ಜೋಳವನ್ನು ದಿನಾಂಕ:  23-02-14  ರಂದು ರಾತ್ರಿ 1-00 ಗಂಟೆಯಿಂದ 3-00 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿದ್ದು, ಇದರ ಅಂದಾಜು ಮೌಲ್ಯ 2,00,000/- ರೂಪಾಯಿಗಳು ಆಗಬಹುದು.

3.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-02-2014 ಬೆಳಿಗ್ಗೆ  07-30 ಗಂಟೆಯಿಂದ ದಿನಾಂಕ 24-02-2014 ರಂದು 18-00 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶ್ರೀ ಆಂಟನಿ ಡಿ'ಮೆಲ್ಲೋ ರವರು ವಿದೇಶಕ್ಕೆ ತೆರಳಿದ್ದ ಸಮಯ ಮಂಗಳೂರು ನಗರದ ಆಳ್ವಾರೀಸ್ ರಸ್ತೆಯ ಸ್ಟೂಡೆಂಟ್ ಲೇನ್ ನಲ್ಲಿರುವ ಅಡಾಲಿಯಾ ಎಂಬ ಹೆಸರಿನ ಪಿರ್ಯಾದಿದಾರರ ಬಾಬ್ತು ವಾಸದ ಮನೆಗೆ ಯಾರೋ ಕಳ್ಳರು ಮನೆಯ ಎದುರಿನ ಕಿಟಕಿಯ ಕಬ್ಬಿಣದ ಗ್ರಿಲ್ ನ್ನು ಯಾವುದೋ ಹರಿತವಾದ ಆಯುಧವನ್ನು ಉಪಯೋಗಿಸಿ ಮುರಿದು ಮೂಲಕ ಒಳಪ್ರವೇಶಿಸಿ ಮಾಸ್ಟರ್ ಬೆಡ್ ರೂಮಿನಲ್ಲಿದ್ದ ಮರದ ಕಪಾಟು ಹಾಗೂ ಲಾಕರನ್ನು ಯಾವುದೋ ಆಯುಧದಿಂದ ಬಲತ್ಕಾರವಾಗಿ ಮೀಟಿ ತೆರೆದು ಅದರೊಳಗಿದ್ದ ಸುಮಾರು 25,000/- ರೂ. ಬೆಲೆ ಬಾಳುವ Acer ಕಂಪನಿಯ ಲ್ಯಾಪ್ ಟಾಪ್-1, ಸುಮಾರು ಒಟ್ಟು 30 ಗ್ರಾಂ ತೂಕದ  ವಿವಿಧ ನಮೂನೆಯ ಚಿನ್ನಾಭರಣಗಳು, ಸುಮಾರು 2,000/- ರೂ. ಬೆಲೆ ಬಾಳುವ ಬೆಳ್ಳಿಯ ನೆಕ್ಲೇಸ್-1 ಸೆಟ್, ಸುಮಾರು ಒಟ್ಟು 30,000/- ರೂ ಬೆಲೆ ಬಾಳುವ Gents Watch-4, ಸುಮಾರು 3,500/- ವಿದೇಶಿ ನಗದು ಇದರ ಭಾರತೀಯ ಬೆಲೆ ಸುಮಾರು 59,500/-, ನಗದು ಹಣ ರೂ.1,20,000/- ಹೀಗೆ ಒಟ್ಟು ಅಂದಾಜು 2,96,500/- ರೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

4.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25.02.2014 ರಂದು ಸಂಜೆ 4.30 ಗಂಟೆಗೆ ಬಜಾಲ್ಬೊಳ್ಳ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಹಿಲ್ಡಾ ಡಿ'ಸೋಜಾ ರವರು ಹೊಸತಾಗಿ ನಿರ್ಮಿಸಿದ ಮನಗೆ ಹೋಗುವ ದಾರಿಯಲ್ಲಿ ಕೆಂಪುಕಲ್ಲು ಮತ್ತು  ತೆಂಗಿನ ಕೊತ್ತಲಿಗೆಗಳನ್ನು ಹಾಕಿದ್ದು ಬಗ್ಗೆ ಕೇಳಿದ್ದಕ್ಕೆ  ಆರೋಪಿಗಲಾದ ರವಿ ಡೇವಿಡ್ ಡಿ'ಸೋಜಾ, ವಿಕ್ಟರ್ ಡಿಸೋಜಾ, ಶ್ರೀಮತಿ ಹಿಲ್ಡಾ ಡಿ'ಸೋಜಾ, ಶ್ರೀಮತಿ ಫಿಲೋಮಿನಾ ಡಿ'ಸೋಜಾ ರವರೆಲ್ಲರೂ ಪಿರ್ಯಧಿದಾರರನ್ನು ತಡೆದು ನಿಲ್ಲಿಸಿ  ಕಲ್ಲಿನಿಂದ ಹಾಗೂ ಕೊತ್ತಲಿಗೆಯಿಂದ ಕೈಗೆ ಮತ್ತು ಸೊಂಟಕ್ಕೆ ಹಲ್ಲೆ ಮಾಡಿದ ಪರಿಣಾಮ ಅವರ ಸೊಂಟಕ್ಕೆ ಕಾಲಿಗೆ ಹಾಗೂ ಎಡಕೈಗೆ ಜಖಂ ಆಗಿ ಚಿಕಿತ್ಸೆ ಬಗ್ಗೆ SCS ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ.

5.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25.02.2014 ರಂದು ಪಿರ್ಯಾಧಿದಾರರಾದ ಶ್ರೀ ಸುದೀರ್ ಕೆ.ಎ. ರವರು ಕೆಎ-19-ಇಎ-6392 ನೇ ಮೋಟಾರ್‌‌ ಸೈಕಲ್ನಲ್ಲಿ  ಪಡೀಲ್ನಿಂದ ಪಂಪ್ವೆಲ್‌‌ ಕಡೆಗೆ ಬರುತ್ತಾ ಸಂಜೆ ಸುಮಾರು 5.30 ಗಂಟೆಗೆ ಬೋರ್ಡ್ಶಾಲೆ ಬಳಿ ತಲುಪಿದಾಗ  ಪಂಪ್‌‌ವೆಲ್‌‌  ಕಡೆಯಿಂದ ಕೆಎ-19-ಎಎ-2477 ನೇ ಆಟೋರಿಕ್ಷಾವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌‌ ಸೈಕಲ್ಗೆ ಡಿಕ್ಕಿಹೊಡೆದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಎಡಕಾಲಿಗೆ, ತೊಡೆಗೆ, ಎಡಭುಜ ಸೊಂಟಕ್ಕೆ ಗುದ್ದಿದ ಜಖಂ ಆಗಿ ಮೂಳೆಮುರಿತದ ಗಾಯ ಹಾಗೂ ಬಲಕೈಗೆ  ತರಚಿದ ಗಾಯವಾಗಿರುವುದಾಗಿದೆ.

6.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-02-2014 ರಂದು ಮದ್ಯಾಹ್ನ ಸುಮಾರು 12-30 ಗಂಟೆಗೆ ಮಂಗಳೂರು ತಾಲೂಕು  ಅರ್ಕುಳ ಗ್ರಾಮದ ಅರ್ಕುಳ ದ್ವಾರದ ಬಳಿ, ಮಂಗಳೂರಿನಿಂದ ಬಿಸಿ ರೋಡ್ಕಡೆಗೆ ರಾ.ಹೆ 73 ರಲ್ಲಿ ಪ್ರಕಾಶ್ಗಾಂಭೀರ್ಎಂಬವರು ಮಾರುತಿ ಓಮ್ನಿ KA 19 MA 4402 ನ್ನು ಚಲಾಯಿಸಿಕೊಂಡು ಹೋಗುತ್ತಿದ್ದಂತೆ, ಅರ್ಕುಳ ದ್ವಾರದ ಬಳಿ KA 19 D 3139 ನೇ ಬಸ್ಸನ್ನು ಅದರ ಚಾಲಕ ಕುಮಾರ ಸ್ವಾಮಿ ಎಂಬವರು ನಿರ್ಲಕ್ಷ್ಯತನದಿಂದ ಒಮ್ಮೆಲೇ ಹಿಂದಕ್ಕೆ ಚಲಾಯಿಸಿ ಮಾರುತಿ ಓಮ್ನಿ ಕಾರು KA 19 MA 4402 ಮುಂಭಾಗಕ್ಕೆ ಡಿಕ್ಕಿ  ಹೊಡೆದುದರ ಪರಿಣಾಮ ಮಾರುತಿ ಓಮ್ನಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸಂತೋಷ್ಎಂಬವರ ಹಣೆಗೆ ರಕ್ತ ಬರುವ ಗಾಯ ಉಂಟಾಗಿರುವುದಲ್ಲದೆ ಕಾರಿನ ಮುಂಭಾಗ ಜಖಂ ಉಂಟಾಗಿರುತ್ತದೆ.

No comments:

Post a Comment